ಸುಲಭವಾಗಿ ಶ್ರೀಮಂತರಾಗಲು 10 ಉಪಾಯಗಳು : 10 Tips to become rich in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸುಲಭವಾಗಿ ಶ್ರೀಮಂತರಾಗಲು 10 ಉಪಾಯಗಳು : 10 Tips to become rich in kannada

ಸುಲಭವಾಗಿ ಶ್ರೀಮಂತರಾಗಲು 10 ಉಪಾಯಗಳು :

                         ದುಡ್ಡನ್ನು ದ್ವೇಷಿಸುವ ವ್ಯಕ್ತಿಯನ್ನು ನಾನು ಇದುವರೆಗೂ ಎಲ್ಲಿಯೂ ನೋಡಿಲ್ಲ. ಎಲ್ಲರೂ ದುಡ್ಡಿರುವವನನ್ನು ಗುಪ್ತವಾಗಿ ದ್ವೇಷಿಸುತ್ತಾರೆ. ಆದರೆ ಬಹಿರಂಗವಾಗಿ ದುಡ್ಡನ್ನು ಪ್ರೀತಿಸುತ್ತಾರೆ. ಈಗ ಗುಣ ನೋಡಿ ಯಾರು ಗೆಳೆತನ ಮಾಡಲ್ಲ. ಎಲ್ಲರೂ ಹಣ ನೋಡಿಯೇ ಗೆಳೆತನ ಮಾಡುತ್ತಾರೆ. ಸ್ವಭಾವಕ್ಕಿಂತ ಸಂಪತ್ತಿಗೆ ಬೆಲೆ ಜಾಸ್ತಿ. ನಮ್ಮ ಬಳಿ ದುಡ್ಡಿದ್ದರೆ ವಿಶ್ವಸುಂದರಿಯೂ ನಮ್ಮ ಸ್ವತ್ತಾಗಬಹುದು. ದುಡ್ಡಿನಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ದುಡ್ಡಿನಿಂದ ನಮಗೆ ಬೇಕಾಗಿರುವುದನ್ನೆಲ್ಲ  ಕೊಂಡುಕೊಂಡು ಸಂತೋಷವಾಗಿರಬಹುದು. ನಮ್ಮ ಎಲ್ಲ ಸಂತೋಷ ವ್ಯಕ್ತಿಗಳಿಗಿಂತ ವಸ್ತುಗಳಲ್ಲೇ ಅಧಿಕವಾಗಿದೆ.


                      ನನಗೆ ವಯಸ್ಕನಾಗಲು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ವಯಸ್ಸು ನನ್ನ ಮಾತು ಕೇಳಬೇಕಲ್ಲ? ನನಗೆ ಹಾಗೆಯೇ ಮಗುವಾಗಿಯೇ ಇರಬೇಕು ಎಂಬಾಸೆಯಿತ್ತು. ಆದರೆ ನನಗೂ 21 ವರ್ಷವಾಯ್ತು. ಆವಾಗ ಇಲ್ಲದ ಖರ್ಚು ಶುರುವಾಯ್ತು. ಅಪ್ಪ ಕಷ್ಟಪಟ್ಟು ದುಡಿದ ದುಡ್ಡನ್ನು ನನ್ನ ಇಷ್ಟಗಳಿಗೆ ಮಜಾ ಉಡಾಯಿಸಲು ನನ್ನ ಮನಸಾಕ್ಷಿ ಒಪ್ಪಲಿಲ್ಲ. 21 ವರ್ಷವಾದ ಮೇಲೆ ಅಪ್ಪನತ್ರ ಪಾಕೆಟ್ ಮನಿಗಾಗಿ ಕೈಚಾಚಲು ನಾಚಿಕೆಯಾಗತೊಡಗಿತು. ಆವಾಗಲೇ ನಾನು ದುಡ್ಡು ಮಾಡಲು ಮನಸ್ಸು ಮಾಡಿ ದುಡಿಯಲು ಶುರು ಮಾಡಿದ್ದು. ಮೊದಲು ಸಾವಿರ ರೂಪಾಯಿಗಳನ್ನು ಸಂಪಾದಿಸುವಷ್ಟರಲ್ಲಿ ಸುಸ್ತಾಗುತ್ತಿದ್ದ ನಾನೀಗ ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ನಿಯತ್ತಾಗಿ ನನ್ನ ಬರವಣಿಗೆಯಿಂದ  ಸಂಪಾದಿಸುತ್ತಿದ್ದೇನೆ. ಜೊತೆಗೆ ಯಾವುದೇ ತೊಂದರೆಯಿಲ್ಲದೆ ನನ್ನ ಓದನ್ನು ಸಹ ಮುಂದುವರೆಸಿದ್ದೇನೆ. ಹೀಗೆಯೇ ನಿಯತ್ತಾಗಿ ಬರೆಯುತ್ತಾ ಸಾಗಿದರೆ ಮುಂದೊಂದು ದಿನ ನಾನು ಕೋಟಿಗಳನ್ನು ಸಂಪಾದಿಸುವುದರಲ್ಲಿ ಅನುಮಾನವೇ ಇಲ್ಲ.


ಶ್ರೀಮಂತರಾಗಲು ಇರುವ ಸುಲಭ ಉಪಾಯಗಳು ಇಲ್ಲಿವೆ.

೧) ದುಡ್ಡು ಮಾಡಲು ಒಂದಲ್ಲ, ಎರಡಲ್ಲ, ನೂರಲ್ಲ, ಸಾವಿರಲ್ಲ, ಲಕ್ಷಾಂತರ ದಾರಿಗಳಿವೆ. ನಾವು ಯಾವ ದಾರಿಯಿಂದ ದುಡ್ಡನ್ನು ಮಾಡಬೇಕು?  ಹೇಗೆ ಮಾಡಬೇಕು? ಎಷ್ಟು ಮಾಡಬೇಕು? ಎಂಬುದನ್ನು ಮೊದಲು ನಿರ್ಧರಿಸಬೇಕು. ಅಕ್ರಮವಾಗಿ ದುಡ್ಡನ್ನು ಸಂಪಾದಿಸಲು ಬಹಳ ಹೆಣಗಬೇಕು. ಆದರೆ ನಿಯತ್ತಾಗಿ ದುಡ್ಡನ್ನು ಸಂಪಾದಿಸಲು ಅಷ್ಟೊಂದು ಹೆಣಗುವ ಮತ್ತು ಹೆದರುವ ಅವಶ್ಯಕತೆ ಇಲ್ಲ. ಕೆಲಸವನ್ನು ಪ್ರಾರಂಭಿಸುವ ಮೊದಲೇ ನಿಮ್ಮ ಅವಶ್ಯಕತೆಯನ್ನು ಅಂದಾಜಿಸಬೇಕು.   


೨) ದುಡ್ಡಿಲ್ಲ ಅಂತಾ ಕೊರಗುತ್ತಾ ಕೂಡಬಾರದು. ಈ ಕ್ಷಣದಿಂದಲೇ ಕೆಲಸ ಮಾಡಲು ಶುರುಮಾಡಬೇಕು. ವರ್ಕಹೋಲಿಕ್ ಮೆಂಟ್ಯಾಲಿಟಿಯನ್ನು ಬೆಳೆಸಿಕೊಳ್ಳಬೇಕು.  ಆಲಸಿತನವನ್ನು ಸಾಯಿಸಿ ಮೈಮುರಿದು ದುಡಿಯಬೇಕು. ಶ್ರೀಮಂತರ ಕಾಯಿಲೆಗಳು ಬಡವರಿಗೆ ಬರುವಾಗ, ಬಡವರು ಶ್ರಿಮಂತರಾಗಬಾರದು ಎಂಬ ನಿಯಮವೇನಿಲ್ಲ. ಅದೃಷ್ಟವನ್ನು ನಂಬಿ ಕಾಯುತ್ತಾ ಕುಂತರೆ ಕೂದಲುಗಳು ಬೆಳ್ಳಗಾಗುತ್ತವೆ ಅಷ್ಟೇ.


೩) ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಒದ್ದಾಡುವ ಬದಲು, ಹಾಸಿಗೆಯನ್ನು ಉದ್ದ ಮಾಡಿ ನಂತರ ಬೇಕಾದಂತೆ ಕಾಲು ಚಾಚಿ ಮಲಗುವ ಜಾಣತನವನ್ನು ನಾವು ಕಲಿಯಬೇಕು. ನಿಮ್ಮ ದಿನನಿತ್ಯದ ಖರ್ಚುಗಳನ್ನು ಕಡಿಮೆ ಮಾಡಿ ಕೊರಗುವುದಕ್ಕಿಂತ ನಿಮ್ಮ ಆದಾಯವನ್ನು ಹೆಚ್ಚಿಸಲು ಸ್ವಲ್ಪ ಹೆಚ್ಚಿಗೆ ಕೆಲಸ ಮಾಡಬೇಕು.


೪)  ಪ್ರಯತ್ನವಿಲ್ಲದೆ ಹೇಗೆ ಪ್ರತಿಫಲ ಸಿಗುವುದಿಲ್ಲವೋ,  ಅದೇ ರೀತಿ ಆಸೆ ಪಡುವವರೆಗೂ ಅಂತಸ್ತು ಸಿಗುವುದಿಲ್ಲ. ನಿಯತ್ತಾಗಿ ದುಡಿಯುವ ಶಕ್ತಿ ನಿಮ್ಮಲ್ಲಿರುವಾಗ ಅಂತಸ್ತಿಗೆ ಆಸೆಪಡಲು ಯಾಕೆ ಹಿಂಜರಿಕೆ? ನೀವು ಆಸೆಪಟ್ಟು ದುಡಿದಾಗಲೇ ದುಡ್ಡು ಬರುವುದು. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಎಲ್ಲರಿಗೂ ಶ್ರೀಮಂತರಾಗುವ ಆಸೆ ಇರಲ್ಲ. ಆಸೆಪಟ್ಟು ನಿಯತ್ತಾಗಿ ದುಡಿದರೆ ಬಯಸಿದ್ದೆಲ್ಲವೂ ಸಿಕ್ಕೆ ಸಿಗುತ್ತದೆ.

೫) ದೇಹವನ್ನು ದಂಡಿಸುವುದರ ಜೊತೆಗೆ ಸ್ವಲ್ಪ ಮೆದುಳನ್ನು ಸಹ ದಂಡಿಸಬೇಕು. ಆನೆಯಾಗಿ ಕಬ್ಬನ್ನು ತಿನ್ನುವುದಕ್ಕಿಂತ ಇರುವೆಯಾಗಿ ಅನಾಯಾಸದಿಂದ ಸಕ್ಕರೆ ತಿನ್ನುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕು. ಕ್ವಾಂಟಿಟಿಗಿಂತ ಕ್ವಾಲಿಟಿಗಾಗಿ ಕೆಲಸ ಮಾಡಬೇಕು. ದಿನದಲ್ಲಿ ಎಷ್ಟು ಗಂಟೆ ಕೆಲಸ ಮಾಡಿದಿರಿ ಎಂಬುದು ಮುಖ್ಯವಲ್ಲ. ಎಷ್ಟು ಎಕ್ಸಲೆಂಟಾಗಿ ಕೆಲಸ ಮಾಡಿದಿರಿ ಎಂಬುದು ಮುಖ್ಯ.



Hard Work    Success
Smart Work    Success 
Hard Work + Smart work  =  Success
Success = Money Source 


೬) ನಿಮ್ಮ ಕೆಲಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ಮೇಲೆಯೇ ಕೆಲಸ ಪ್ರಾರಂಭಿಸಿ. ಅವಶ್ಯಕತೆ ಇದೆ ಅಂತ ಅನಿಸಿದರೆ ನಿಮ್ಮ ಕೆಲಸವನ್ನು ಮೊದಲು ಸರಿಯಾಗಿ ಕಲಿತುಕೊಳ್ಳಿ. "First Learn, then Earn" ಸೂತ್ರವನ್ನು ಅನುಸರಿಸಿ. ಹೊಸದನ್ನು ಕಲಿತಷ್ಟು ನೀವು ಪರಿಣಿತರಾಗುತ್ತೀರಿ. ನೀವು ಪರಿಣಿತರಾದಷ್ಟು ನಿಮ್ಮ ತಲೆಗೆ ಬೆಲೆ ಹೆಚ್ಚಾಗುತ್ತೆ. ನಿಮ್ಮ ತಲೆಗೆ ಬೆಲೆ ಹೆಚ್ಚಾದ ಮೇಲೆ ದುಡ್ಡಿನ ಮಳೆಯೇ ನಿಮ್ಮ ಮನೆ ಮೇಲೆ ಬೀಳುತ್ತದೆ.  ನೀವು ಹೆಚ್ಚಿಗೆ ಕಲಿತಷ್ಟು ಹೆಚ್ಚಿಗೆ ಸಂಪಾದಿಸುತ್ತೀರಿ. ಕೆಲಸ ಕಲಿಯುವಾಗ ಆಲಸಿಗಳಾಗಬೇಡಿ.


೭) ನಿಮಗೆ ಲಭ್ಯವಿರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಿ. ನೆಪಗಳನ್ನು ಹೇಳಿ ಜಾರಿಕೊಳ್ಳುವುದನ್ನು ನಿಲ್ಲಿಸಿ. ಜವಾಬ್ದಾರಿಗಳ ಜೊತೆಗೆ ರಿಸ್ಕನ್ನು ತೆಗೆದುಕೊಂಡು ಬಲಿಷ್ಟರಾಗಿ. ನಿಮ್ಮನ್ನು ಮತ್ತು ನಿಮ್ಮ ಕೆಲಸವನ್ನು ಇಂಪ್ರೂವ್ ಮಾಡಿಕೊಳ್ಳಿ. ಅನಾವಶ್ಯಕವಾಗಿ ಬರೀ ಯೋಚಿಸುತ್ತಾ ಕೂಡುವ ಬದಲು, ಶೀಘ್ರದಲ್ಲೇ ಕೆಲಸವನ್ನು ಪ್ರಾರಂಭಿಸಿ.


೮) ನಿಮ್ಮಲ್ಲಿ ಅಡಗಿರುವ ವಿಶೇಷ ಸಾಮರ್ಥ್ಯ ಇಲ್ಲವೇ ಕಲೆಯನ್ನು ಗುರ್ತಿಸಿಕೊಳ್ಳಿ. ನಿಮ್ಮ ಫ್ಯಾಷನನ್ನು ಪ್ರೊಫೇಷನನ್ನಾಗಿ ಪರಿವರ್ತಿಸಿ. ನಿಮ್ಮ ಫ್ಯಾಷನ್ ನಿಮ್ಮ ಪ್ರೊಫೇಷನ್ನಾದಾಗ ನೀವು ಸುಲಭವಾಗಿ ದುಡ್ಡನ್ನು ಸಂಪಾದಿಸುತ್ತೀರಿ. ಉದಾಹರಣೆಗಾಗಿ; ಹೈಸ್ಕೂಲ್ನಲ್ಲಿ ಬರವಣಿಗೆ ನನ್ನ ಫ್ಯಾಷನ್ ಆಗಿತ್ತು. ಆದರೀಗ ಕಾಲೇಜಿನಲ್ಲಿ ಅದೇ ನನ್ನ ಪಾರ್ಟಟೈಮ್ ಪ್ರೊಫೆಷನ್ನಾಗಿರುವದರಿಂದ ನಾನು ಕೆಲಸ ಮಾಡುವುದಕ್ಕಿಂತ ಜಾಸ್ತಿ ದುಡ್ಡು ನನ್ನ ಜೇಬಿಗೆ ಬರುತ್ತಿದೆ. ಸಿನಿಮಾ ಕೂಡ ನನ್ನ ಫ್ಯಾಷನ್. ಮುಂದೆ ನನ್ನ ಓದು ಮುಗಿದಾಗ ಅದು ಕೂಡ ನನ್ನ ಪ್ರೊಫೆಷನನ್ನಾಗುತ್ತದೆ. ಆವಾಗಲೂ ದುಡ್ಡು ಬಂದೇ ಬರುತ್ತದೆ. ನಿಮ್ಮಲ್ಲಿನ ಕಲೆ ನಿಮಗೆ ದೊಡ್ಡ ಹೆಸರಿನ ಜೊತೆಗೆ ಸಾಕಾಗುವಷ್ಟು ಸಂಪತ್ತನ್ನು ಸಹ ತಂದುಕೊಡುತ್ತದೆ ಎಂಬುದನ್ನು ಮರೆಯದಿರಿ.


೯) ಬರೀ ದುಡ್ಡಿಗಾಗಿ ಕೆಲಸ  ಮಾ ಡಬೇಡಿ. ಆತ್ಮತೃಪ್ತಿಗಾಗಿ, ಖುಷಿಗಾಗಿ ಕೆಲಸ ಮಾಡಿ. ನಿಮಗೆ ಇಷ್ಟವಿರುವ ಕೆಲಸವನ್ನೇ ಮಾಡಿ. ಇಷ್ಟವಿಲ್ಲದ ಕೆಲಸವನ್ನು ಕಾಟಾಚಾರಕ್ಕೆ ಮಾಡಿ ಎನರ್ಜಿ ಜೊತೆಗೆ ಟೈಮ್ ವೆಸ್ಟ್ ಮಾಡಬೇಡಿ. ನಿಮ್ಮ ಕೆಲಸವನ್ನು ನೀವು ಪ್ರೀತಿಸಿದರೆ, ದುಡ್ಡು ನಿಮ್ಮನ್ನು ಪ್ರೀತಿಸುತ್ತದೆ. ಮಲ್ಟಿಪಲ್ ಮೂಲಗಳಿಂದ ನಿಮಗೆ ದುಡ್ಡು ಬರುವ ರೀತಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.  ನೀವು ಬಿಲೆನಿಯರ ಆಗಲು ನಿಮಗೆ ಒಂದು ಬ್ರಿಲಿಯಂಟ್ ಐಡಿಯಾ ಸಾಕು.


೧೦) ದುಡ್ಡು ಉಳಿಸುವುದರಿಂದ ನೀವು ಶ್ರೀಮಂತರಾಗುವುದಿಲ್ಲ, ಹೆಚ್ಚಿಗೆ ಗಳಿಸುವುದರಿಂದ ನೀವು ಶ್ರಿಮಂತರಾಗುತ್ತಿರಿ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ದುಡ್ಡನ್ನು ಬ್ಯಾಂಕಲ್ಲಿಟ್ಟು ಕೊಳೆಯಿಸುವುದರ ಬದಲು ಬೇರೆ ಕೆಲಸಗಳಲ್ಲಿ ಹೂಡಿಕೆ ಮಾಡಿ. ದುಡ್ಡನ್ನು ಸೇವಿಂಗ ಮಾಡಿಟ್ಟು ವೆಸ್ಟ್ ಮಾಡಬೇಡಿ. ಸರಿಯಾದ ಕೆಲಸಕ್ಕೆ ಇನವೆಸ್ಟ್ ಮಾಡಿ. ಮೂರ್ನಾಲ್ಕು ಮೂಲಗಳಿಂದ ದುಡ್ಡು ನಿಮ್ಮ ಮನೆಗೆ ಬರುವಂತೆ ಕೆಲಸ ಮಾಡಿ.


                                    ಇವು ದುಡ್ಡು ಮಾಡಲು ದಾರಿಗಳಲ್ಲ, ಬರೀ ಸರಿಯಾದ ಉಪಾಯಗಳಷ್ಟೇ. ಇವು ನನ್ನ ವೈಯಕ್ತಿಕ ವಿಚಾರಗಳಾಗಿರುವುದರಿಂದ, ಇವುಗಳನ್ನು ನೀವು ಸೀರಿಯಸ್ಸಾಗಿ ತೆಗೆದುಕೊಳ್ಳದಿರುವುದು ಉತ್ತಮ. ನನ್ನ ಪ್ರಕಾರ, ನಿಮಗೆ ದುಡ್ಡು ಮಾಡುವ ಆಸೆಯ ಜೊತೆಗೆ ಮೈಮುರಿದು ನಿಯತ್ತಾಗಿ ದುಡಿಯುವ ಮನಸ್ಸಿದ್ದರೆ ದುಡ್ಡು ಮಾಡುವುದು ಕಷ್ಟದ ಕೆಲಸವೇನಲ್ಲ. ಸೋಮಾರಿ ಸಿದ್ದರಿಗೆ ಮಾತ್ರ ದುಡ್ಡು ಮಾಡುವುದು, ಶ್ರೀಮಂತರಾಗುವುದು ಕಷ್ಟದ ಕೆಲಸ. ನಿಮಗೆ ದುಡಿದು ದುಡ್ಡು ಮಾಡುವ ಆಸೆಯಿದ್ದರೆ ನನ್ನ ಕಡೆಯಿಂದ ಆಲ್ ದ ಬೆಸ್ಟ್...






Blogger ನಿಂದ ಸಾಮರ್ಥ್ಯಹೊಂದಿದೆ.