೧) ಹನುಮನಂತೆ ಎದೆಬಗೆದು ನನ್ನೆದೆಯಲ್ಲಿನ ಪ್ರೀತಿಯನ್ನು ನಿನಗೆ ತೋರಿಸುವಾಸೆ. ಆದರೆ ನನ್ನ ಕಣ್ಣಲ್ಲಿ ಕಣ್ಣೀರು ಬಂದರೆ ತಡೆಯುವ ಶಕ್ತಿಯಿಲ್ಲದ ನಿನ್ನ ಕಂಗಳು, ನನ್ನೆದೆ ರಕ್ತ ನೋಡಿದರೆ ನಿನ್ನೆದೆ ಬಡಿತ ನಿಲ್ಲಬಹುದು ಎಂದು ಸುಮ್ಮನಿರುವೆ. ಅದಕ್ಕೆ ನನ್ಮೇಲೆ ಸುಮಸುಮ್ನೆ ಅನುಮಾನ ಪಡಬೇಡ್ವೆ...
೨) ನಿನ್ನನ್ನು 'ಸುಂದರಿ' ಎಂದು ನಾ ಹೊಗಳುವೆ. ಆದರೆ ನಿನ್ನನ್ನು ದೇವಲೋಕದಲ್ಲಿ ಮಿಂಚು ಹರಿಸಿರೋ ರಂಬೆ, ಊರ್ವಶಿ, ಮೇನಕೆ, ತಿಲೋತ್ತಮೆ, ತ್ರಿಭುವನಿಯರಿಗೆಲ್ಲ ಹೋಲಿಸಲ್ಲ. ಯಾಕಂದ್ರೆ ಅವರೆಲ್ಲ ದೇವಲೋಕದ ವೈಶ್ಯೆಯರು...
೩) ಮೋಸವನ್ನು ಮೋಸದಿಂದ ಕೊಲ್ಲಬಹುದು.
ಮುಳ್ಳನ್ನು ಮುಳ್ಳಿನಿಂದ ತೆಗೆಯಬಹುದು.
ಸ್ನೇಹವನ್ನು ಸ್ನೇಹದಿಂದ ಸಂಪಾದಿಸಬಹುದು.
ಆದರೆ ನೆನಪನ್ನು ನೆನಪಿನಿಂದ, ದ್ವೇಷವನ್ನು ದ್ವೇಷದಿಂದ, ವಿರಹವನ್ನು ವಿರಹದಿಂದ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಿನ್ನನ್ನು ಪ್ರೀತಿಯಿಂದಲೇ ಪ್ರೀತಿಸಿ ಪಡೆಯಬೇಕೆಂದಿರುವೆ...
೪) ಕಂಗಳು ಎರಡಾಗಿದ್ದರೂ
ಕಾಣೋ ಕನಸು ಒಂದೇ,
ದೇಹಗಳು ಎರಡಾಗಿದ್ದರೂ
ಉಸಿರಾಡೋ ಗಾಳಿ ಒಂದೇ,
ಮನಸ್ಸುಗಳು ಎರಡಾಗಿದ್ದರೂ
ಮಾಡೋ ಪ್ರೀತಿ ಒಂದೇ....
೫) ಹೃದಯದ ಗೂಡಿನೊಳಗೆ
ನಾ ದಿನಾ ಕೊರಗುವೆ,,
ಆದರೂ ನೀ ಖುಷಿಯಾಗಿರಲೆಂದು
ಜೀವನವೀಡಿ ಪ್ರಾರ್ಥಿಸುವೆ...
೬) ಡುತ್ತೀಯಾ ನೀರು ಎಷ್ಟೇ ಬಿಸಿಯಾಗಿ ಕುದಿಯುತ್ತಿದ್ದರೂ, ಅದು ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸಬಲ್ಲದು. ಅದೇ ರೀತಿ ನೀ ನನ್ನ ಮೇಲೆ ಎಷ್ಟೇ ಕೋಪ ಮಾಡಿಕೊಂಡರೂ ಕೊನೆಗೆ ನನ್ನ ಮನ್ನಿಸಿ ನನ್ನ ಮುದ್ದಾಎಂಬುದು ನನಗೆ ಗೊತ್ತು...
೭) "ನಮ್ಮ ಜೀವನವೇ ಒಂದು ವಿಶಾಲವಾದ ಸರೋವರ. ನಾನು ಆ ಸರೋವರದಲ್ಲಿನ ಪುಟ್ಟ ಮೀನು, ನಿನ್ನ ಪ್ರೀತಿಯೇ ಬತ್ತಿಹೋದ ಮೇಲೆ ಹೇಗೆ ಬದುಕಲಿ ನಾನು?" ಎಂದೆಲ್ಲ ನಾನು ನಿನಗೆ ಕೇಳುವ ಪರಿಸ್ಥಿತಿ ಬರದಿರಲಿ ಅಂತಾ ದಿನಾ ಆ ದೇವ್ರಲ್ಲಿ ಪ್ರಾರ್ಥಿಸುತ್ತೇನೆ...
೮) ಪ್ರಿಯೆ ನೀನಿರದ ನಾನು
ತಾರೆಗಳಿಲ್ಲದ ಖಾಲಿಬಾನು..
ನನ್ನನ್ನು ಪ್ರೀತಿಸದಿದ್ದರೆ ನೀನು
ನಾ ಸೇರ್ಕೊತ್ತಿನಿ ತಾಲಿಬಾನು..
೯) ನನ್ನೆದೆಯ ಆಕ್ರಂದನದ ಕೂಗು
ನಿನ್ನ ಹೃದಯವಾ ತಟ್ಟಿದೆ ನೋಡು
ನನ್ನ ಮುರಿದ ಮನಸ್ಸಲ್ಲಿ ನಿನ್ನದೇ ಪ್ರೀತಿ ಹಾಡು
ಮಸಣವಾಯಿತೇ ನಿನ್ನ ಹೃದಯದ ಗೂಡು?
ನೀನೇ ಹೇಳು ಗೆಳತಿ, ಮುಂದೇನು ನನ್ನ ಪಾಡು?
೧೦) ಪುಟ್ಟ ಹೃದಯದಲ್ಲಿ ಪುಟ್ಟ ಯೋಚನೆಗಳನ್ನಿಟ್ಟುಕೊಂಡು ಪುಟಾಣಿಯಾಗಿದ್ದೆ ನಾನು. ಅದೇ ಪುಟ್ಟ ಹೃದಯವನ್ನು ನೀ ಕದ್ದಾಗ ನಾ ಚಿಂತಾಮಣಿಯಾದೆನು...
೧೧) ನಿನ್ನ ನಗುವನ್ನು ನೋಡಿ ನಾ ನನ್ನ ನೋವುಗಳನ್ನು ಮರೆಯುತ್ತಿರುವೆ. ಪ್ಲೀಸ್ ನೀ ಹಾಗೇ ನಗುತಿರು...
೧೨) ಬೆಳದಿಂಗಳ ಚಂದ್ರನ ನಗು
ಸದಾ ಇರಲಿ ನಿನ್ನ ಮುಖದಲಿ...
ಸುಖ ಸಂತೋಷವೆಂಬ ಮಗು
ಸದಾ ನಲಿಯುತಿರಲಿ ನಿನ್ನ ಮಡಿಲಲಿ...
೧೩) ಭೂಕಂಪವಾದರೂ ಕಂಪಿಸದ ನನ್ನೆದೆ, ನಿನ್ನ ಮುಗುಳ್ನಗೆಗೆ ಕಂಪಿಸಿದೆ. ಸಮುದ್ರದಲೆಗೂ ಕದಡದ ನನ್ನ ಮನ, ನಿನ್ನ ಪ್ರೇಮದಲೆಗೆ ಕದಡಿದೆ. ಸಿಡಿಲಿಗೂ ಹೆದರದ ನನ್ನೀ ಕಂಗಳು, ನಿನ್ನ ಹುಸಿಮುನಿಸಿಗೆ ಹೆದರಿವೆ...
೧೪) ಮುಳ್ಳಿದ್ದ್ರೇನೆ ಗುಲಾಬಿಗೆ ಅಂದ,
ಕೊಬ್ಬಿದ್ದ್ರೇನೆ ಹುಡ್ಗೀರಿಗೆ ಚೆಂದ..
ಹೂವಿನ ಸೌಂದರ್ಯವನ್ನು ಕಾಪಾಡಲು ಮುಳ್ಳು ಕಾವಲು ಕಾಯುವಂತೆ ನಾ ನಿನಗೆ ಬೆಂಗಾವಲಾಗಿ ಇರ್ತೀನಿ...
೧೫) "ಹೂವಿಗೆ ಅರಳೋದು ಮಾತ್ರ ಗೊತ್ತು, ಅಳೋದು ಗೊತ್ತಿಲ್ಲ. ಸೂರ್ಯನಿಗೆ ಸುಡೋದು ಮಾತ್ರ ಗೊತ್ತು, ನಂದಿಸೋದು ಗೊತ್ತಿಲ್ಲ. ನನಗೆ ನಿನ್ನನ್ನು ಪ್ರೀತಿಸೋದು ಮಾತ್ರ ಗೊತ್ತು, ಮರೆಯೋದು ಗೊತ್ತಿಲ್ಲ" ಅಂತಾ ನಾನು ಯಾವತ್ತು ಹೇಳಲ್ಲ ಅನಿಸುತ್ತೆ...
೧೬) ಉತ್ತರಾಯಣ ಬರೋವರೆಗೂ ಭೀಷ್ಮ ತನ್ನ ಸಾವನ್ನು ಬಿಗಿಹಿಡಿದಿಟ್ಟುಕೊಂಡು ಕಾದಂತೆ, ಸಾವು ಬರೋವರೆಗೂ ನಿನ್ನ ನಾನು ನನ್ನೆದೆಯಲ್ಲಿ ಬಚ್ಚಿಟ್ಟುಕೊಳ್ಳುವೆ...
೧೭) ಸಿದ್ಧಾರ್ಥ ಬುದ್ಧನಾಗಲು ಕಾಡಿಗೆ ಹೋದ, ರಾಮ ಪುರುಷೋತ್ತಮನಾಗಲು ಕಾಡಿಗೆ ಹೋದ, ವಿಶ್ವಾಮಿತ್ರ ಸಿದ್ಧಿ ಸಾಧಿಸಲು ಕಾಡಿಗೆ ಹೋದ. ಆದರೆ ನಾನ್ಯಾಕೆ ಕಾರಣವಿಲ್ಲದೆ ಕಾಡಿಗೆ ಹೋಗಲಿ? ನೀನು ನಾಡಲ್ಲೆ ಇರುವಾಗ...
೧೮) ಕಣ್ಮನ ಕೆರಳಿಸಿದೆ ನಿನ್ನಯ ಕಿರುನೋಟ
ಮೈಮನ ತಣಿಸಿದೆ ನಿನ್ನಯ ಮೈಮಾಟ
ಕನಸಲೂ, ನನಸಲೂ ನಿನ್ನದೇ ಕಾಟ
ಮರೆತು ಹೋಗಿದೆ ಕಾಲೇಜ್ನಲ್ಲಿ ಕಲಿತ ಪಾಠ...
ನಿನ್ನ ಪ್ರೀತಿಪಾಠದ ಮುಂದೆ ಅಪ್ಪಅಮ್ಮ, ಟೀಚರಗಳೆಲ್ಲ ಕಲಿಸಿದ ನೀತಿಪಾಠ ಮರೆತು ಹೋಗಿದೆ...
೧೯) ನನ್ನ ಕನಸುಗಳ ಕಾವಲಿಗೆ ನಾ ನಿನ್ನ ನೇಮಿಸಿದ್ದೆ. ಆದರೆ ನೀನೇ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿರುವೆಯಲ್ಲ, ಇದು ಸರೀನಾ?
೨೦) ನನಗೆ ನಿನ್ನ ದ್ವೇಷದಲ್ಲಿರುವ ಪ್ರೀತಿಯನ್ನು, ಕೋಪದಲ್ಲಿರುವ ಕರುಣೆಯನ್ನು, ಮೌನದಲ್ಲಿರುವ ಮಾತಿನರ್ಥವನ್ನು ಹುಡುಕುವುದರಲ್ಲಿ ಏನೋ ಒಂದು ಮಜಾ ಇದೆ.
೨೧) ಹೆಣ್ಣಿಗಾಗಿ ಸಾವಿರಾರು ಸಾಮ್ರಾಜ್ಯಗಳು, ಕೋಟೆಗಳು, ತಲೆ-ತಲೆಮಾರುಗಳು ಉರುಳಿರುವಾಗ, ನಿನಗಾಗಿ ನನ್ನ ಹೃದಯ ಉರುಳಿದ್ದು ಯಾವ ಮಹಾ ಲೆಕ್ಕ?
೨೨) ಬೇರು ನೆನೆದಾಗಲೇ ಹೂ ಅರಳೋದು,
ತುಟಿ ನಕ್ಕಾಗಲೇ ಮುಖ ಅರಳೋದು,
ನಿನ್ನ ಪ್ರೀತಿ ಸಿಕ್ಕಾಗಲೇ ನನ್ನ ಹೃದಯ ಮಿಡಿಯೋದು...