ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು : Kannada Life Changing Articles - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು : Kannada Life Changing Articles

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು

                       ನಾವು ಏನಾದರೂ ಒಂದು ಒಳ್ಳೆಯದನ್ನು ಮಾಡಲು ಹೊರಟಾಗ ಕೆಲಸವಿಲ್ಲದ ಜನ ನಮ್ಮ ಕಾಲೆಳೆಯಲು ಪ್ರಯತ್ನಿಸುತ್ತಾರೆ. ಅದರಿಂದ ನಮಗೆ ಒಳ್ಳೆಯದೇ ಆಗುತ್ತದೆ. ಅವರು ನಮ್ಮ ಕಾಲೆಳೆಯಲು ಪ್ರಯತ್ನಿಸಿದಷ್ಟು ನಾವು ಮೇಲೆರುತ್ತೇವೆ. ಅವರಿಂದಲೇ ನಮ್ಮ ಆತ್ಮವಿಶ್ವಾಸ ಮತ್ತಷ್ಟು ವೃದ್ಧಿಯಾಗುತ್ತದೆ. ಶತ್ರುಗಳಿಂದ ನಷ್ಟಕ್ಕಿಂತ ಲಾಭವೇ ಅಧಿಕವಾಗಿದೆ. ಆದರೆ ನಾವು ಕೆಲವು ವಸ್ತು ಮತ್ತು ವ್ಯಕ್ತಿಗಳನ್ನು ಮೈಗಂಟಿಸಿಕೊಂಡು ನಮ್ಮ ಕಾಲನ್ನು ನಾವೇ ಎಳೆದುಕೊಂಡು ಹಾಳಾಗುತ್ತೇವೆ. ಅದರಲ್ಲಿ ಸಮಾಜದ ತಪ್ಪೇನಿಲ್ಲ. ಅದು ನಮ್ಮದೇ ತಪ್ಪು. 

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

ನಮ್ಮ ಕಾಲನ್ನು ನಮ್ಮಿಂದಲೇ  ಎಳೆಸುವ ಸಂಗತಿಗಳು ಇಂತಿವೆ ;

೧) ನಾವು ಟೈಮಪಾಸಿಗಂತ ಕೆಲವು ವಸ್ತುಗಳನ್ನು ಮಿತಿಮೀರಿ ಬಳಸಿ ನಮ್ಮ ಕಾಲ್ಮೇಲೆ  ನಾವೇ ದೊಡ್ಡ ಕಲ್ಲನ್ನು ಎಳೆದಾಕಿಕೊಳ್ಳುತ್ತೇವೆ. ಉದಾಹರಣೆಗಾಗಿ ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾಗಳ ಗೀಳು. ಕೆಲವರು ಮುದ್ದಾದ ಹೆಂಡತಿಯನ್ನು ಬಿಟ್ಟು ಮಧ್ಯರಾತ್ರಿಯಾದರೂ ಮೊಬೈಲ್ನಲ್ಲಿ ಮೈಮರೆತಿರುತ್ತಾರೆ. ವಿದ್ಯಾರ್ಥಿಗಳು ಹಗಲು ರಾತ್ರಿ  ಟೆಕ್ಸ್ಟಬುಕ್ ಹಿಡಿಯುವ ಬದಲಾಗಿ ಫೇಸ್ಬುಕಲ್ಲಿ ಮುಳುಗಿರುತ್ತಾರೆ. ಇನ್ನು ಕೆಲವರು ತಮ್ಮ ಕೆಲಸಕಾರ್ಯಗಳನ್ನೆಲ್ಲ ಬಿಟ್ಟು ಫೇಸ್ಬುಕಲ್ಲಿರೋ ಹುಡ್ಗೀರ ಫೋಟೊಗಳಿಗೆ ಲೈಕ್ ಮತ್ತು ಕಮೆಂಟಗಳನ್ನು ಮಾಡುತ್ತಾ ದಿನ ತಳ್ಳುತ್ತಾರೆ. 

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

                               ವಾಟ್ಸಾಪಿನಲ್ಲಿರುವ ಶತಮೂರ್ಖರ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಮೊಬೈಲ್ ಮತ್ತು ಫೇಸ್ಬುಕಗಳು ಯಾವ ಡ್ರಗ್ ಅಡಿಕ್ಷನಗೂ ಕಮ್ಮಿಯಿಲ್ಲ. ಈಗ ನಾವು ಮೊಬೈಲ್ ಮತ್ತು ಫೇಸ್ಬುಕನ್ನು ಬಳಸುತ್ತಿಲ್ಲ. ಅವೇ ನಮ್ಮನ್ನು ಬಳಸಿಕೊಳ್ಳುತ್ತಿವೆ. ಮೊಬೈಲ್, ಫೇಸ್ಬುಕ್, ವಾಟ್ಸಾಪ್ ಇತ್ಯಾದಿಗಳ ಗೀಳು ನಮ್ಮ ಫೋಕಸ್ ಮತ್ತು ಪ್ರೊಡಕ್ಟಿವಿಟಿಯನ್ನು ಹಾಳು ಮಾಡುತ್ತವೆ. ಅದಕ್ಕಾಗಿ ಇವುಗಳನ್ನು ಲಿಮಿಟಲ್ಲಿ ಬಳಸಿದರೆ ನಮ್ಮ ಲೈಫ ಲಕ್ಷಣವಾಗಿರುತ್ತದೆ.


೨) ನಾವು ಅವಶ್ಯಕತೆಗಾಗಿ ಕೆಲವು ಹಾನಿಕಾರಕ ವ್ಯಕ್ತಿಗಳ ಸ್ನೇಹವನ್ನು ಅನಾವಶ್ಯಕವಾಗಿ ಸಂಪಾದಿಸುತ್ತೇವೆ. ಹಾನಿಕಾರಕ ವ್ಯಕ್ತಿಗಳ ಸ್ನೇಹದಿಂದ ನಮಗೆ ಹಾನಿಕಾರಕ ವಸ್ತುಗಳು ಪರಿಚಯವಾಗುತ್ತವೆ. ಈ ಹಾನಿಕಾರಕ ವ್ಯಕ್ತಿಗಳು ಫ್ರೆಂಡಶಿಪ್ ಮತ್ತು ಪ್ರೀತಿಯ ಹೆಸ್ರಲ್ಲಿ ನಮ್ಮನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಇವರು ಯಾವಾಗಲೂ ನಮ್ಮನ್ನು ನಿಂದಿಸುತ್ತಾರೆ, ಗೇಲಿ ಮಾಡುತ್ತಾರೆ, ಬರೀ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತಾರೆ, ಅವರಿಂದ ಚಿಕ್ಕ ಸಮಸ್ಯೆಗೂ ಸೋಲುಷನ್ ಸಿಗಲ್ಲ. ಅಲ್ಲದೆ ಇವರು ನಮ್ಮ ಭಾವನೆಗಳೊಂದಿಗೆ ಆಟವಾಡುತ್ತಾರೆ, ನೆಪ ಹೇಳಿ ನಯವಿನಯದಿಂದ ನಮ್ಮ ಕತ್ತನ್ನು ಕೊಯ್ಯುತ್ತಾರೆ. ನಮ್ಮಿಂದಾಗುವಷ್ಟು ಲಾಭವನ್ನು ಮಾಡಿಕೊಂಡು ನಮ್ಮನ್ನು ಟೈಮಪಾಸಿಗೆ ಬಳಸಿಕೊಂಡು ಬೀದಿಗೆ ಬಿಸಾಕಿ ಹೋಗುತ್ತಾರೆ. ಇಂಥವರ ಸ್ನೇಹ ಮಾಡದೆ ಸುಮ್ಮನಿದ್ದರೆ ನಮಗೆ ಒಳ್ಳೆಯದು. ಹಿರಿಯರು ಹೇಳಿದ "ನಿನ್ನ ಗೆಳೆಯರನ್ನು ತೋರಿಸು, ನಾನು ನಿನ್ನ ಭವಿಷ್ಯವನ್ನು ತೋರಿಸುತ್ತೇನೆ" ಎಂಬ ಮಾತನ್ನು ಮರೆಯಬಾರದು.

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

೩) ನಾವು ದಿನನಿತ್ಯ ಮನರಂಜನೆಗಾಗಿ ಟಿವಿ ನೋಡಿ ನಮ್ಮ ಲೈಫನ್ನೆ ಕಣ್ಣೀರ ಕಾಮಿಡಿಯನ್ನಾಗಿ ಮಾಡಿಕೊಳ್ಳುತ್ತೇವೆ. ಪಾಪ ಹೆಣ್ಮಕ್ಕಳು ಹಾಳಾದ ಧಾರಾವಾಹಿಗಳನ್ನು ನೋಡಿ ಅತ್ತೆ, ಸೊಸೆ ಜೊತೆ ಮಹಾಯುದ್ಧ ಮಾಡುವುದಲ್ಲದೆ, ಗಂಡನ ಮೇಲೆ ಅನಾವಶ್ಯಕವಾಗಿ ಅನುಮಾನಪಟ್ಟು ತಮ್ಮ ಜೀವನವನ್ನು ಧಾರಾವಾಹಿಗಿಂತ ಕೆಟ್ಟದಾಗಿಸಿಕೊಳ್ಳುತ್ತಾರೆ. ಇನ್ನು ಮಕ್ಕಳು ಕೆಲ್ಸಕ್ಕೆ ಬಾರದ ಬಿಗಬಾಸನಂಥ ಗೊಳ್ಳು ಶೋಗಳನ್ನು ನೋಡಿ ಓದನ್ನು ಬರಿಬಾದ ಮಾಡಿಕೊಳ್ಳುತ್ತಾರೆ. ಟಿವಿಯಲ್ಲಿ ಬರುವ ಎಲ್ಲ ಪ್ರೊಗ್ರಾಮಗಳು ಟಿ.ಆರ್.ಪಿ. ಸ್ಟಂಟಗಳಾಗಿವೆ. ಅವುಗಳಿಂದ ನಮಗೆ ಅಪ್ಪಟ ಮನರಂಜನೆಯೂ ಸಿಗುವುದಿಲ್ಲ, ಸ್ವಲ್ಪ ಜ್ಞಾನವೂ ಸಿಗುವುದಿಲ್ಲ.

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

                  ಮನರಂಜನೆ ಯಾವುತ್ತು ನಮ್ಮ ಏಳ್ಗೆಗೆ ಮಿತ್ರನಾಗಲ್ಲ ಎಂಬುದನ್ನು ಮರೆಯದಿದ್ದರೆ ಒಳ್ಳೆಯದು. ಟಿವಿಯಲ್ಲಿ ಕ್ರಿಕೆಟ್ ನೋಡಿ ಕೇಕೆ ಹಾಕುವ ಬದಲು ಗ್ರೌಂಡಿಗಿಳಿದು ನಿಜವಾಗಿಯು ಕ್ರಿಕೆಟ್ ಆಡಿದರೆ ದೇಹದ ಜೊತೆಗೆ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಮನರಂಜನೆಗಾಗಿ ಟಿವಿ ನೋಡಿ ನಮ್ಮ ತಲೆಯನ್ನು ಕಸದ ತೊಟ್ಟಿಯನ್ನಾಗಿಸಿಕೊಳ್ಳುವ ಬದಲು, ಕೆಲವು ಕಲಾತ್ಮಕ ಸಿನಿಮಾಗಳನ್ನು ನೋಡುವುದು ಒಳ್ಳೆಯದು. "M.S.Dhoni ; The Untold Story", "Sachin Tendulkar : A Billion Dreams" "ದಂಗಲ್", "ಟಾಯ್ಲೆಟ್ ; ಏಕ್ ಪ್ರೇಮಕಥಾ"ಗಳಂತ ಸಿನಿಮಾಗಳನ್ನು ನೋಡಿದರೆ ನಮಗೆ ಮನರಂಜನೆ ಮತ್ತು ಸಾಮಾಜಿಕ ಜ್ಞಾನದ ಜೊತೆಗೆ ಸ್ಪೂರ್ತಿಯೂ ಸಿಗುತ್ತದೆ.

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

೪) ನಾವು ಕೆಲಸದ ಒತ್ತಡದಲ್ಲಿಯೋ ಇಲ್ಲ ದುಡ್ಡಿನ ಓಟದಲ್ಲಿಯೋ ಸಿಲುಕಿ ಸರಿಯಾಗಿ ನಿದ್ದೆ ಮಾಡದೆ ನಿದ್ರಾಹೀನತೆಯಿಂದ ಬಳಲುತ್ತೇವೆ. ದಿನಕ್ಕೆ 6-8 ಗಂಟೆ ನಿದ್ದೆ ಮಾಡಲೇಬೇಕು. ನಿದ್ರಾ ಹೀನತೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನಿದ್ರಾಹೀನತೆಯಿಂದ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಜ್ಞಾಪಕಶಕ್ತಿಯ ಕೊರತೆ, ಹೃದಯಾಘಾತಗಳಾಗುವ ಸಂಭವ ಹೆಚ್ಚಿದೆ. ನಾವು ಸರಿಯಾಗಿ ಸಮಯ ನಿರ್ವಹಣೆ ಮಾಡದೆ ಸಿಕ್ಕ ಸಮಯವನ್ನು ಸಿಕ್ಕಸಿಕ್ಕಂತೆ ಬೇಕಾಬಿಟ್ಟಿಯಾಗಿ ಪೋಲು ಮಾಡಿ ನಂತರ ನಿದ್ದೆಗೆಟ್ಟು ಅನಾರೋಗ್ಯಕ್ಕೆ ಆಹ್ವಾನ ನೀಡುತ್ತೇವೆ. ಈ ರೀತಿ ಮಾಡಿ ನಮ್ಮ ಕಾಲನ್ನು ನಾವೇ ಎಳೆದುಕೊಂಡು ಕೆಳಗೆ ಬೀಳುತ್ತೇವೆ. 

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

೫) ಕಾಲೇಜ ಬಿಟ್ಟ ನಂತರ ಕಲಿಯಲು ನಾವು ಆಸಕ್ತಿ ತೋರಿಸುವುದಿಲ್ಲ. ಓದುವ ವಿಷಯದಲ್ಲಿ ನಾವು ತುಂಬ ಆಲಸಿಗಳಾಗುತ್ತೇವೆ. ಈ ಆಲಸಿತನದಿಂದಲೇ ನಾವು ನಮ್ಮ ಏಳ್ಗೆಗೆ ಮಾರಕವಾಗುತ್ತೇವೆ. ಸಿಕ್ಕಾಪಟ್ಟೆ ಬ್ಯುಸಿ(Busy) ಇದೀನಿ ಅಂತಾ ತೋರಿಸಿಕೊಳ್ಳಲು ಹೋಗಿ ನಮ್ಮ ಬ್ಯುಸಿನೆಸ್ಸನ್ನು ಬರಿಬಾದ ಮಾಡುತ್ತೇವೆ. ಬ್ಯುಸಿ ಇರುವುದರಿಂದ ಯಾವನು ಮುಂದೆ ಬರಲ್ಲ. ಸರಿಯಾಗಿ ಬ್ಯುಸಿನೆಸ್(Business) ಮಾಡಿದಾಗಲೇ ಎಲ್ಲರೂ ಮುಂದೆ ಬರೋದು. ಬೇರೆಯವರಿಗೆ ಬ್ಯುಸಿ(Busy) ಇದೀನಿ ಅಂತೇಳಿ ಮಧ್ಯಾಹ್ನ ಮನೇಲಿ ಮಲಗಿದರೆ ಏನ ಬಂತು? ನಮ್ಮ ಆಲಸ್ಯ ನಮ್ಮನ್ನೆ ಕೊಲ್ಲುತ್ತದೆ. 

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

                   ಪ್ರತಿದಿನ ಏನಾದರೂ ಒಂದನ್ನು ಕಲಿತಾಗಲೇ ನಾವು ಮುಂದೆ ಬರೋದು. ನಿಜವಾದ ಕಲಿಕೆ ಪ್ರಾರಂಭವಾಗುವುದು ಕಾಲೇಜ ಬಿಟ್ಟ ಮೇಲೆಯೇ. ಬಿಲಗೇಟ್ಸನಂಥ ಬಿಲೆನಿಯರಗಳೇ ದಿನಾ ಒಂದೆರಡು ಗಂಟೆ ಕಥೆ, ಕಾದಂಬರಿ, ಅಂಕಣಗಳನ್ನೆಲ್ಲ ಆಸಕ್ತಿಯಿಂದ ಓದುತ್ತಾರೆ. ಆದರೆ ನಾವು ಏನನ್ನು ಓದದೆ ಬರೀ ನಿದ್ದೆ ಮಾಡಿ ಹೊಟ್ಟೆ ಬೆಳೆಸುತ್ತೇವೆ, ವಿನ: ಬುದ್ಧಿ ಬೆಳೆಸಲ್ಲ. ಓದುವ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಲೇಬೇಕು. ಜೊತೆಗೆ ಹೊಸಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು.

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :

             ನಮ್ಮಿಂದಲೇ ನಮ್ಮ ಕಾಲನ್ನು ಎಳೆಸುವ ವಿಷಯಗಳು ಇನ್ನು ಬಹಳಷ್ಟಿವೆ. ಆದರೆ  ಈ ವಿಷಯಗಳು ನಮಗೆ ಅತ್ಯಂತ ಹತ್ತಿರವಾಗಿವೆ. ಕಾಲುಜಾರಿ ಕೆಳಗೆ ಬೀಳುವುದಕ್ಕೂ, ಸೋಕ್ಕೆರಿ ಕೆಳಗೆ ಉರುಳುವುದಕ್ಕು ತುಂಬ ವ್ಯತ್ಯಾಸವಿದೆ. ನಿಮ್ಮ ಬದುಕು, ನಿಮ್ಮಿಷ್ಟ. ನನಗೇನು ಕಷ್ಟವೂ ಇಲ್ಲ, ನಷ್ಟವೂ ಇಲ್ಲ....

ನಿಮ್ಮ ಕಾಲನ್ನು ನಿಮ್ಮಿಂದಲೇ ಎಳೆಸುವ 5 ಸಂಗತಿಗಳು :




Blogger ನಿಂದ ಸಾಮರ್ಥ್ಯಹೊಂದಿದೆ.