
ಪ್ರತಿಯೊಂದು ಮಾತು ಸಂದರ್ಭಾನುಸಾರವಾಗಿ ಬೇರೆಬೇರೆ ಅರ್ಥಗಳನ್ನು ಕೊಡುತ್ತದೆ. ಆದ್ದರಿಂದ ಕೆಲವು ಸಲ ಸಿಂಗಲ್ ಮೀನಿಂಗ ಪದಗಳು ಡಬ್ಬಲ್ ಮೀನಿಂಗನಂತೆ ಭಾಸವಾಗುತ್ತವೆ. ಎಲ್ಲ ಮಾತುಗಳು ಅಶ್ಲೀಲತೆಯ ನೆರಳಲ್ಲಿ ನರಳುವುದಿಲ್ಲ. ಹೇಳುಗರ ಮತ್ತು ಕೇಳುಗರ ಭಾವನೆಗಳ ಮೇಲೆ ಮಾತುಗಳು ಅಶ್ಲೀಲವಾಗುತ್ತವೆ. ಅಂಥಹ ಕೆಲವು ಮಾತುಗಳು ಇಲ್ಲಿವೆ ;
೧) ತನ್ನ ಗಾಡಿ ಟೈರ ಮೇಲೆ ನಂಬಿಕೆ ಇಲ್ಲದಿರೋ ಡ್ರೈವರ್ ಮಾತ್ರ ಸ್ಟೇಪ್ನಿ ಇಟ್ಟಿರುತ್ತಾನೆ...
೨) ಬೆಂಕಿ ಹತ್ತಿದಾಗ ಮಾತ್ರ ಆರಿಸಬೇಕು. ಅದ್ನ ಬಿಟ್ಟು ನಾವೇ ಬೆಂಕಿ ಹಚ್ಚಿ, ನಾವೇ ಆರಿಸೋ ನಾಟಕ ಆಡಬಾರದು...
೩) ಅರಳಿ ನಿಂತ ಹೂವು, ಬೆಳೆದು ನಿಂತ ಹುಡುಗಿ ಎರಡು ಅಪಾಯಕಾರಿನೆ...
೪) ಸಿಗದ ಹುಡುಗಿಯ ಪ್ರೀತಿಯಲ್ಲಿ ಬಿದ್ದ ಹುಡುಗನ ಪಾಡು "ಕೆಸರಿಗೆ ಸಿಕ್ಕ ಎತ್ತಿನಂತೆ"...
೫) ನಮ್ಮ ಕಾಲಿಗೆ ಚುಚ್ಚಿದ ಮುಳ್ಳನ್ನು ನಾವೇ ತೆಗೆಯಬೇಕು. ನಮ್ಮೆದೆಗೆ ಹತ್ತಿದ ಬೆಂಕಿಯನ್ನು ನಾವೇ ಆರಿಸಿಕೊಳ್ಳಬೇಕು...
೬) ಜೀವನವೇ ಹಾಳಾಗೋದ್ಮೇಲೆ, ಈ ಜೀವನಾದ್ದ್ರೂ ಯಾಕ ಬೇಕು?
೭) ತಣ್ಣೀರಿಗೂ ಬೆಂಕಿಯನ್ನು ಆರಿಸೋ ತಾಕತ್ತಿದೆ. ಬಿಸಿನೀರಿಗೂ ಬೆಂಕಿಯನ್ನು ಆರಿಸೋ ತಾಕತ್ತಿದೆ.
೮) ಪ್ರೇಯಸಿ ಇಲ್ಲದ ಹೃದಯ ಸಿಮಕಾರ್ಡಿಲ್ಲದ ಮೊಬೈಲನಂತೆ...
೯) ಬಿದ್ದು ಎದ್ದೋನು ಮತ್ತೆ ಬೀಳೊಕೆ ಚಾನ್ಸ್ ಇಲ್ಲ. ಆದರೆ ಸೋತು ಗೆದ್ದವನು ಮತ್ತೆ ಸೋಲದೆ ಇರಲ್ಲ...
೧೦) ಕ್ಯಾಮೆರಾ ಕಣ್ಣುಗಳಿಂದ ತಪ್ಪಿಸಿಕೊಳ್ಳಬಹುದು. ಅದರೆ ಸಮಾಜದ ಕೆಂಗಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ...
೧೧) ಹಣಕ್ಕಾಗಿ ಬಾಯಿ ಬಿಡೋಕ್ಕೆ ನಾನು ಹೆಣವಲ್ಲ...
೧೨) ಕೆಲವು ಸಲ ಬೇಸಿಗೆಕಾಲದಲ್ಲಿ ಮಳೆಯಾಗುತ್ತೆ, ಚಳಿಗಾಲದಲ್ಲಿ ಸೆಕೆಯಾಗುತ್ತೆ, ಮಳೆಗಾಲದಲ್ಲಿ ಚಳಿಯಾಗುತ್ತೆ...
೧೩) ದಿನಾ ಅಳೋರಿಗೆ ಮಾತ್ರ ಕಣ್ಣೀರಿನ ಅಸಲಿ ಬೆಲೆ ಅರ್ಥವಾಗುತ್ತದೆ...
೧೪) ಮನೆಯಲ್ಲಿ ದೂಪ ಹಾಕಿದ್ರೆ ಮಾಡಿದ ಪಾಪ ಹೋಗಲ್ಲ...
೧೫) ನಮ್ಮ ದೇಶದ ಕಾನೂನಿಗೆ ನರದೌರ್ಬಲ್ಯವಿದೆ...
೧೬) 20ರ ಹುಡುಗಿ 70ರ ಮುದುಕಿಯಂತೆ ಹಾಸಿಗೆ ಹಿಡಿದು ಮಲಗಿದ್ದಾಳೆ...
೧೭) ಮೈಶೀಲ ಕಳೆದುಕೊಂಡ ಹುಡುಗಿ ಜೊತೆ ಸುಖವಾಗಿ ಸಂಸಾರ ಮಾಡಬಹುದು. ಆದರೆ ಮನಸ್ಸಿನ ಶೀಲ ಕಳೆದುಕೊಂಡ ಹುಡುಗಿಯ ಜೊತೆ ಸುಖವಾಗಿ ಸಂಸಾರ ಮಾಡುವುದು ಸುಲಭವಲ್ಲ...
೧೮) ಕಾಯಿಲೆಗೆ ಔಷಧಿ ಕೊಡಬಹುದು ವಿನಹ ಸಾವಿಗಲ್ಲ...
೧೯) ಇವತ್ತಿನ ಭಕ್ತಾದಿಗಳು ನಾಳಿನ ದೇವರಾದರೆ ಅಚ್ಚರಿಯಿಲ್ಲ...
೨೦) ಅಲ್ಲಾಡುತ್ತಿರುವ ಸೂಜಿಗೆ ದಾರ ಪೋಣಿಸುವುದೇಗೆ?
೨೧) ಕೆಲವರ ಹೃದಯ ತೆಪೆ ಹಚ್ಚಿದ ಚಡ್ಡಿಗಿಂತಲೂ ವಿಕಾರವಾಗಿರುತ್ತದೆ.
೨೨) ಮಗುವಿನಂತೆ ನಗು...
೨೩) ಮೆರವಣಿಗೆ ಸಾಗುವವನಿಗೆ ಅಂಬಾರಿ ಬೇಕೇ ವಿನಹ ಸಾಯೋನಿಗಲ್ಲ...
೨೪) ಊರು ಹೋಗು ಎಂದಾಗ ಬಾರು ಬಾಯೆಂದು ಕೈಬೀಸಿ ಕರೆಯುತ್ತೆ...
೨೫) ಹೆಚ್ಚಾಗುತ್ತಿದೆ ಸೆಲ್ಫಿ ಹಾವಳಿ, ಫೇಸ್ಬುಕನಲ್ಲಿ ಮದುವೆಯಾಗಿ ಒಂದೆರಡು ಮಕ್ಕಳಾಗಲಿ...
೨೬) ಹೆಂಡತಿ ಬೈದರೆ ನಿಜವಾದ ಗಂಡನಿಗೆ ಬೇಜಾರಾಗಲ್ಲ...
೨೭) ಪ್ರೀತಿ ಮಾಡೋವಾಗ ಭಗ್ನಗಳು,
ಮದುವೆಯಾಗುವಾಗ ವಿಘ್ನಗಳು,
ಮದುವೆಯಾದ ಮೇಲೆ ನಗ್ನಗಳು...
೨೮) ಹಾಗಲಕಾಯಿಯಂತಿರೋ ರಾಜಕಾರಣಿಗಳಿಗೆ ಬೇವಿನ ಕಾಯಿಯಂತಿರೋ ಮಠಾಧೀಶರ ಶ್ರೀರಕ್ಷೆಯಿದೆ...
೨೯) ಹೆದರಿಕೊಂಡ್ರೆ ಪ್ರೀತಿ ಮಾಡೋಕ್ಕಾಗಲ್ಲ. ನಾಚಿಕೊಂಡ್ರೆ ಮಕ್ಕಳ ಮಾಡೋಕ್ಕಾಗಲ್ಲ...
೩೦) ದಿನಾ ಕೊರಗುವುದಕ್ಕಿಂತ ಒಮ್ಮೆ ಸಾಯೋದೆ ಲೇಸು...
೩೧) ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣೋವಂತೆ, ಎಲ್ಲರೂ ದೂರದಿಂದ ಚೆನ್ನಾಗಿಯೇ ಕಾಣಿಸುತ್ತಾರೆ...
೩೨) ತೋಳ್ಬಲ ಇಲ್ಲದವನಿಗೆ ನೆಲ ಕೂಡ ಎದ್ದು ಬಡಿಯುತ್ತೆ...
೩೩) ಹೆಣಕ್ಕೆ ಮುತ್ತುವ ಹದ್ದುಗಳಂತೆ, ಹಣಕ್ಕೆ ಮುತ್ತುವ ಗೆಳೆಯರು ಬೇಕಿಲ್ಲ...
೩೪) ಕಚಗುಳಿ ಇಟ್ಟು ನಗಿಸೋ ನೆನಪುಗಳಿಗಿಂತ, ಕಾರಣವಿಲ್ಲದೆ ಕಾಡಿ ಅಳಿಸೋ ನೆನಪುಗಳೇ ಹೆಚ್ಚಾಗಿವೆ...
೩೫) ಹೆಂಡತಿ ಕೆರಳಿದ ಮೇಲೆ ಗಂಡ ಅರಳಬಲ್ಲನೇ...??
೩೬) ಅರಳಿದ ಹೂವು ಎಂದಾದರೂ ಬಾಡಲೇಬೇಕು. ಯೌವ್ವನದಲ್ಲಿ ಮೆರೆದಾಡಿದ ಹುಡುಗಿ ಒಂದಿನ ಮುದುಕಿಯಾಗಿ ಮುಜುಗುರ ಪಡಲೇಬೇಕು...
೩೭) ದೂರದ ನಕ್ಷತ್ರ ದೂರದಲ್ಲಿದ್ದರೇನೆ ಚೆಂದ...
೩೮) ಹಾವಿನ ಹೆಡೆ ಜೊತೆ ಸರಸ ಆಡಬಾರದು. ಹೆಣ್ಣಿನ ಜಡೆ ಜೊತೆ ವಿರಸ ಕಟ್ಕೊಬಾರದು...
೩೯) ಪ್ರತಿಭೆಗೆ ಪ್ರತಿಗಾಮಿಗಳಿರುವುದು ಸಹಜ...
೪೦) ಸುತ್ತಲೂ ಮೋಡ ಕವಿದ ವಾತಾವರಣವಿದೆ. ಆದ್ರೆ ಮಳೆಯಾಗುವ ಸಂಭವವಿಲ್ಲ...
೪೧) ಪೂಜಾರಿಗೆ ದೇವರಾಗೋ ದುರಾಸೆ...
೪೨) ಎಲ್ಲರಿಗೂ ಪ್ರೇಮದಾಸನ ಪ್ರೇಮಗೀತೆಗಳಿಗಿಂತ ದೇವದಾಸನ ವಿರಹಗೀತೆಗಳೇ ಹೆಚ್ಚಿಷ್ಟವಾಗುತ್ತವೆ...
೪೩) ಹೆಣ್ಣು ಹುಲಿಗೆ ಹುಣ್ಣು ಹುಟ್ಟಿದ್ರೆ, ಗಂಡು ಹುಲಿಗೆ ದೊಡ್ಡ ಗಂಡಾಂತರ ಬಂದಂತೆ...
೪೪) ಸುಂದರಿಯನ್ನು ನೋಡಿದಾಗ ಸಿಕ್ಸ್ಥ ಸೆನ್ಸ (Sixth Sense) ಸರಿಯಾಗಿ ಕೆಲಸ ಮಾಡಲ್ಲ.
೪೫) ಉಚಿತ ಪ್ರೇಮದಲ್ಲಿ ವಿರಹದ ಜೊತೆಗೆ ಸಾವು ನೋವು ಖಚಿತ...
೪೬) ಕಾಯಿಲೆ ಬಿದ್ದ ಹೃದಯದಲ್ಲಿಯೇ ಕಾಮಿನಿಯರ ಕಾಟವಿರುತ್ತೆ...
೪೭) ನೀರಿಗೆ ಇಳಿದ ಮೇಲೆ ಚಳಿ ಆಗೋದೆ... ಪ್ರೀತಿಗೆ ಬಿದ್ದ ಮೇಲೆ ನೋವಾಗೋದೆ....
೪೮) ಹಗಲೊತ್ತು ಗುದ್ದಾಡು, ರಾತ್ರಿವೊತ್ತು ಮುದ್ದಾಡು...
೪೯) ಹೃದಯ ಕೊಟ್ಟವನು ಕೋಡಂಗಿ, ಈಸಕೊಂಡವಳು ವೀರಭದ್ರೆ...
೫೦) ಕೆಲ ಹುಡುಗ ಹುಡುಗಿಯರು ನಕ್ಷತ್ರಗಳಂತೆ, ರಾತ್ರಿ ಬರ್ತಾರೆ, ಹಗಲೊತ್ತಲ್ಲಿ ಮಾಯವಾಗುತ್ತಾರೆ...
೫೧) ಹಗಲು ನಿದ್ದೆ ಮತ್ತು ಹಗಲುಗನಸಲ್ಲಿರೋ ಮಜಾನೆ ಬೇರೆ...
೫೨) ಬಜಾರಿ ಬಾಯಲ್ಲಿ ಭಗವದ್ಗೀತೆ ಕೇಳೊ ಭಾಗ್ಯ ಎಲ್ಲರಿಗೂ ಸಿಗಲ್ಲ...
೫೩) ನಿದ್ದೆ ಬರದಿದ್ದರೂ, ಬಂದ್ರೂ ಮಲಗಲೇಬೇಕು. ಇಲ್ಲಾಂದ್ರೆ ನಿದ್ರಾದೇವಿ ನಿಗರಾಡುತ್ತಾಳೆ...
೫೪) ಮುದ್ದೆ ಹೆಚ್ಚಾದಾಗ ನಿದ್ದೆ ಬರುವುದು ಸಹಜ...
೫೫) ಚಳಿ ಅಂತಾ ನೇರವಾಗಿ ಸ್ಟೌವ ಮೇಲೆ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ...
೫೬) ಕೆಲವರಿಗೆ ಹನಿಮೂನಿಗಿಂತ ಜಾಮೂನೇ ತುಂಬ ಇಷ್ಟ...
೫೭) ಬುಡಕ್ಕೆ ಬೆಂಕಿ ಬಿದ್ದಾಗ ಬೆಟ್ಟ ಹತ್ತಿ ಬಾವುಟ ನೆಡೋ ಹುಚ್ಚಾಟ ಹುಡುಗರಿಂದ ಮಾತ್ರ ಸಾಧ್ಯ...
೫೮) ರಾಜಕಾರಣಿಗಳ ಕೈಗೆ ಕೋಲು ಕೊಟ್ಟು ನಮ್ಮ ಜನ ಕರಡಿಯಂತೆ ಕುಣಿಯೋಕೆ ಪ್ರತಿಸಲ ಆಸೆಪಡ್ತಾರೆ...
೫೯) ಪ್ರೇಯಸಿ ಇರದಿದ್ದರೆ ಗೋವಾ ನೋಡೋ ವಯಸ್ಸಲ್ಲಿ ಗೋಕರ್ಣಕ್ಕೆ ಹೋಗೋ ಆಸೆಯಾಗುತ್ತೆ...
೬೦) ಮನಸ್ಸಲ್ಲಿರೋದನ್ನ ಮುಖ ಪ್ರತಿಬಿಂಬಿಸುತ್ತದೆ...
೬೧) ಒಂಟಿ ಗುಬ್ಬಚ್ಚಿಯ ಮೇಲೆ ರಣಹದ್ದಿನ ಪರಾಕ್ರಮ ನಿಜಕ್ಕೂ ನಾಚಿಕೆಗೇಡು...
೬೨) ಕಾಮ ತೀರಿದ ಮೇಲೆ ಪ್ರೇಮ ಮುಳ್ಳು ಮುಳ್ಳು...
೬೩) ಮೂಗುತಿನಾ ಮನಸ್ಸು ಗೆದ್ದವನು ಹಾಕಿದ್ರೆ ನೋವಾಗಲ್ಲವಂತೆ...
೬೪) ಮುಖ ಕಪ್ಪಾದರೆ ಮನಸ್ಸು ಕೂಡ ಕಪ್ಪೇ?
೬೫) ಕರೆನ್ಸಿ ಇದ್ದಷ್ಟೇ ಮಾತನಾಡು....