೧) ಅವಳು ನನ್ನ ಬಾಳಲ್ಲಿ ತಂಗಾಳಿಯಂತೆ ಬಂದು ಬಿರುಗಾಳಿಯಂತೆ ಹೋದಳು...
೨) ಕಣ್ಣಿನಿಂದ ಜಾರಿ ಬಿದ್ದ ಕಣ್ಣೀರ ಹನಿಯೊಂದು ಕಾರಣ ಕೇಳಿ, ಮೌನ ತಾಳಿ ಮನವ ನೋಯಿಸಿದೆ...
೩) ಕಣ್ಣೀರ ಮೋಡಗಳು ಕಾದಿವೆ, ವಿರಹದ ಮಳೆ ಸುರಿಸಲು...
೪) ದುಡ್ಡಿರೋರ ದೊಡ್ಡ ಮನಸ್ಸನ್ನು ಅಳತೆ ಮಾಡಬಾರದು...
೫) ಆರೋ ದೀಪದಂತೆ ಸಾಯೋ ಟೈಮಲ್ಲಿ ನಾ ಜಾಸ್ತಿ ನಗ್ತಾ ಇದೀನಿ...
೬) ಹೂವು ಮುಳ್ಳುಗಳು ವೈರಿಗಳಾದ್ರೆ ಹೂವಿಗುಂಟೆ ಬಹುದಿನ? ಹೂವನ್ನು ಮರೆತರೆ ದುಂಬಿಗುಂಟೆ ಅನುದಿನ?
೭) ನನ್ನ ನೋವು ಕೆಲವು ಸಲ ರಾತ್ರಿಯ ಮೌನವನ್ನು ಸೀಳಿಕೊಂಡು ಹೊರ ಬರುತ್ತದೆ...
೮) ಓ ನನ್ನ ನೆನಪೇ, ಪ್ಲೀಸ್ ನನ್ನಿಂದ ದೂರಾಗು... ಪ್ಲೀಸ್ ನನ್ನ ಬದುಕಿಸು...
೯) ಎದೆಲಿರೋ ನೋವುಗಳ ಮುಂದೆ ಈ ಎದೆನೋವು ಯಾವ ಲೆಕ್ಕ?
೧೦) ಕೆಲವು ಸಲ ಆತ್ಮೀಯರನ್ನು ಕಳ್ಕೊಂಡಾಗ ಆಸೆ, ಆಕಾಂಕ್ಷೆಗಳ ಜೊತೆಗೆ ಆತ್ಮಸಾಕ್ಷಿಯೂ ಸತ್ತೊಗುತ್ತೆ...
೧೧) ಶಿಲುಬೆಗೇರಿಸಿದವರ ಶಪಿಸದೇ ಹೋದ ಯೇಸುದೇವ, ಮನವ ನೋಯಿಸಿದವರ ಮನವ ಗೆದ್ದ ಬುದ್ಧದೇವ...
೧೨) ಆಕಾಶ ಕೈಚಾಚಿದೆ ನನ್ನ ಕಣ್ಣೀರೊರೆಸಲು, ಬಿರುಗಾಳಿ ಸ್ತಬ್ದವಾಗಿದೆ ನನ್ನ ಮೌನ ಮುರಿಯಲು, ಈ ಭೂಮಿ ಹಗುರಾಗಿದೆ ನನ್ನ ಮನದ ಭಾರವಿಳಿಸಲು...
೧೩) ಅವಳು ಬಾನಲ್ಲಿನ ಗಗನಸಖಿ, ನಾನು ಬಾರಲ್ಲಿನ ಮಹಾದು:ಖಿ...
೧೪) ಹಾರುವ ಹಕ್ಕಿಗೆ ನೆಲೆಯೂ ಇದೆ, ಬೆಲೆಯೂ ಇದೆ. ಆದ್ರೆ ದಿನಕ್ಕೊಬ್ಬರ ಜೊತೆ ಪ್ರೀತಿ ನಾಟಕವಾಡುವವರಿಗೆ... ಬೆಲೆ ಎಲ್ಲಿ? ನೆಲೆ ಎಲ್ಲಿ?
೧೫) ಯಾವತ್ತೊ ಒಂದಿನ ನಾನಿಲ್ಲ ಅಂತಾ ಗೊತ್ತಾದಾಗ ಒಂದು ಹನಿ ಕಣ್ಣೀರಿನ ಬದಲಾಗಿ ಒಂದು ನಗು ನಿಮ್ಮ ಮುಖದಲ್ಲಿ ಮೂಡಿದರೆ ಸಾಕು, ಅದೇ ಈ ಅನಾಥನಿಗೆ ನೀವು ನೀಡೋ ನಿಜವಾದ ಶ್ರದ್ಧಾಂಜಲಿ...
೧೬) ಅವಳೀಗ ನನ್ನವಳಲ್ಲ, ಅವಳಿಗ ನನ್ನ ಮನಸ್ಸಲ್ಲು ಇಲ್ಲ. ಆದ್ರೆ ನೆನಪಲ್ಲಿ ಯಾಕೀದಾಳೆ?
೧೭) ನಾವ ಇಷ್ಟ ಪಡೋರು ನಮ್ಮನ್ನು ಯಾಕ ಇಷ್ಟ ಪಡಲ್ಲ ಅಂತಾ ಗೊತ್ತಾದಾಗ ಆಗೋ ನೋವೇ ಬೇರೆ...
೧೮) ಇಷ್ಟಪಟ್ಟಿರೋ ವಸ್ತುಗಳನ್ನು ಮರಿಬಹುದು. ಆದ್ರೆ ಇಷ್ಟಪಟ್ಟಿರೋ ವ್ಯಕ್ತಿಗಳನ್ನು ಮರೆಯಕ್ಕಾಗಲ್ಲ...
೧೯) ಮಳೆಗೆ ಬಡ್ತನ ಬಂದ್ರೆ ಅದ್ನ ಬರಗಾಲ ಅಂತೀವಿ... ಬುದ್ಧಿಗೆ ಬಡ್ತನ ಬಂದ್ರೆ ಅದ್ನ ಕೇಡಗಾಲ ಅಂತೀವಿ...
೨೦) ನಾನು ದಾರಿ ತಪ್ಪಿದ ಮಗಳು, ನನ್ನೊಡಿ ನಗುತಿವೆ ಈ ಹೂಗಳು, ಅತ್ತು ಕಂಗೆಟ್ಟಿವೆ ಕಂಗಳು, ಕತ್ತು ಸೇರದಾಗಿದೆ ಅನ್ನದಗಳು...
೨೧) ನಾನು ಯಾರನ್ನು ಪ್ರೀತಿಸಲ್ಲ. ಯಾಕಂದ್ರೆ ಸದ್ಯಕ್ಕೆ ನನ್ನ ಹೃದಯ ಅವಳತ್ರ ಅಳ್ತಿದೆ...
೨೨) ಅಂದು ಜಗವೆಲ್ಲ ನನ್ನ ದ್ವೇಷಿಸುತ್ತಿದ್ದರೂ ನೀ ನನ್ನ ಪ್ರೀತಿಸುತ್ತಿದ್ದೆ. ಆದ್ರೆ ಇಂದು ಜಗವೆಲ್ಲ ನನ್ನ ಪ್ರೀತಿಸುತ್ತಿದೆ. ಆದ್ರೆ ನೀ ಮಾತ್ರ ದ್ವೇಷಿಸುತ್ತಿದೀಯಾ ಯಾಕೆ?
೨೩) ಪ್ರೀತಿ ಮಾಡಬಾರದು. ಮಾಡಿದರೆ ಮೋಸ ಹೋಗಬಾರದು...
೨೪) ಒಂದು ಸಾರಿ ಕೇಳೆ ನನ್ನ ಹಾಡು, ನೀನಾಗೆ ಸೇರುವೆ ನನ್ನೆದೆಯ ಗೂಡು...
೨೫) ನನ್ನೆದೆಯಲ್ಲಿರುವ ಹೂವು ನೀನು. ಆದ್ರೆ ನಿನ್ನೆದೆಯಲ್ಲಿನ ಮುಳ್ಳು ನಾನು...
೨೬) ನಿನ್ನ ಕಣ್ಣೀರಿನ ಕರೆಯೋಲೆ, ಹಾಕಿದೆ ಪ್ರೀತಿಗೆ ವಿಜಯದ ಮಾಲೆ...
೨೭) ನಾ ನಿನ್ನ ಪ್ರೀತಿ ಕನಸುಗಳಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಿದ್ದೆ. ಆದ್ರೆ ನೀ ನನಗೆ ಮೋಸಗಾರ್ತಿ ಪಟ್ಟ ಕಟ್ಟಿ ಕುಡಿಯುತ್ತಿರುವೆ ಏಕೆ?
೨೮) ಒಲವಿನ ಸುಂದರಿ ಕೊಂದಳು ಯಾಕೇರಿ? ಒಲವಿನ ಕಥೆಯಲಿ, ಮೋಹದ ಬಲೆಯಲಿ...
೨೯) ಈ ಒಂಟಿ ಜೀವನ, ನೀ ಕೊಟ್ಟ ಬಹುಮಾನ...
೩೦) ಲೈಕು, ಕಮೆಂಟು ಕೊಡೋಕೆ ನನ್ನ ಲೈಫೇನು ಫೇಸ್ಬುಕ್ ಸ್ಟೇಟಸ್ ಅಲ್ಲ...
೩೧) ಓ ಸಖಿ, ಓ ಸಖಿ, ನೀನಿಲ್ಲದೆ ನಾ ಹೇಗೆ ಸುಖಿ? ನಾನು ದು:ಖಿ...
೩೨) ಸೂರ್ಯ ಉದಯಿಸುವ ಮೊದಲೇ ಮುಳುಗೋದ, ಚಂದ್ರ ನಗುವ ಮೊದಲೆ ಅಳಲು ಶುರುಮಾಡಿದ, ಕಾಗೆ ಕೂಗುವ ಮೊದಲೇ ಕಾರ್ಮೋಡ ಕವಿಯಿತು, ಕೋಗಿಲೆ ಹಾಡುವ ಮೊದಲೇ ವಸಂತ ಮಾಸ ಮರೆಯಾಯ್ತು, ಕಣ್ಣೀರು ಜಾರುವ ಮೊದಲೆ ಕನಸು ಕಮರಿತು...
೩೩) ಬಿರುಗಾಳಿ ಎದೆಯಲ್ಲಿ ಬಿರುಕು ಮೂಡಿಸಿದ ತಂಗಾಳಿ ಅವಳು...
೩೪) ಅವಳ ದೀಪಕ ರಾಗಕ್ಕೆ ಸಂಜೆ ಬೀದಿ ದೀಪಗಳು ತನ್ನಿಂದ ತಾನೇ ಹೊತ್ತಿಕೊಳ್ಳುತ್ತಿದ್ದವು. ಆದ್ರೆ ಇವತ್ತು ಅವಳ ಮೌನರಾಗಕ್ಕೆ ನನ್ನೆದೆಯ ನಂದಾದೀಪ ನಂದಿದೆ...
೩೫) ಕನಸ ಕಾಣೋದನ್ನ ಕಲಿಸಿ ಮನಸ ಕದ್ದೋಳು ನೀನು. ನಗುವುದನ್ನು ಕಲಿಸಿ ಅಳಿಸಿ ಹೋದವಳು ನೀನು. ಸಾಯೋನನ್ನ ಬದುಕಿಸಿ ಕೊಂದವಳು ನೀನು...
೩೬) ನಿನ್ನ ನಗುವಿನ ಸದ್ದಿಲ್ಲದೆ ನನ್ನ ಪ್ರೇಮಲೋಕದಲ್ಲಿ ಶೋಕ ತುಂಬಿದೆ...
೩೭) ಅಳೋವಾಗ ಕರ್ಚಿಫ ಕೊಟ್ಟು ಹೋಗೊರಿಗಿಂತ, ಕೈಯ್ಯಿಂದ ಕಣ್ಣೀರನ್ನು ಒರೆಸೋರು ಮುಖ್ಯ...
೩೮) ದೋಸ್ತ ಅನ್ನೋ ಮಾತು ದಿಲ್ಲನಿಂದ ಬರಬೇಕು, ತುಟಿಗಳಿಂದಲ್ಲ...
೩೯) ಕೊಂಕು ಮಾತುಗಳನ್ನು ಕೊಂಕುಳಲ್ಲಿ ಇಟ್ಟುಕೊಂಡು ಕುಣಿಯುತ್ತಿರುವ ಕಿರಾತಕಿ ಅವಳು...
೪೦) ಚಿಕ್ಕ ಚಿಕ್ಕ ರಂದ್ರಗಳಿಂದಲೇ ದೋಣಿ ಮುಳುಗುತ್ತೆ... ಚಿಕ್ಕ ಚಿಕ್ಕ ಮನಸ್ತಾಪದಿಂದಲೇ ದೊಡ್ಡ ದೊಡ್ಡ ಸಂಬಂಧಗಳು ಮುರಿದು ಹೋಗುತ್ತವೆ...
೪೧) ಮರೆಯಾಗದೆ ನೆನಪಲ್ಲೇ ಇರೋರ್ನ ಮತ್ತೆಮತ್ತೆ ನೆನಪು ಮಾಡ್ಕೊಳೋದೇಕೆ...??
೪೨) ನೀ ನನ್ನ ನೋವಿಗೆ ನೆಪ ಮಾತ್ರ. ನೀ ನನ್ನ ನೋವಿಗೆ ನೆನಪಲ್ಲ...
೪೩) ಈ ನನ್ನ ಚೂರು ಚೂರಾದ ಹೃದಯದಲ್ಲಿ ಇನ್ನು ನಿನ್ನ ನೆನಪಿದೆ. ಈ ನೆನಪನ್ನೇ ಅಳಿಸೋ ನೆಪದಲ್ಲಿ ನೂರಾರು ಸುಂದರಿಯರು ಹತ್ರ ಆಗೋಕೆ ಪ್ರಯತ್ನಿಸಿ ಸೋತೋದ್ರು...
೪೪) ಪ್ರೇಮಲೋಕದಲ್ಲಿ ಡಿಸೈಡ್ ಆದ ಪ್ರೀತಿ, ಭೂಲೋಕದಲ್ಲಿ ಸೂಸೈಡ್ ಮಾಡ್ಕೋಳತ್ತೆ...
೪೫) ಸುಂದರವಾಗಿ ಕಾಣಿದ ಕನಸೊಂದು ಈಗ ದುಸ್ವಪ್ನವಾಗಿ ಕಾಡ್ತಿದೆ...
೪೬) ವಿಶಾಲ ಹೃದಯಕ್ಕೆ ಆಯಸ್ಸು ಕಮ್ಮಿ...
೪೭) ತಿನ್ನೋ ಊಟದಲ್ಲಿ ಕಲಬೆರಕೆ. ಜೀವಾ ಉಳಿಸೋ ಔಷಧಿಯಲ್ಲಿ ಕಲಬೆರಕೆ. ಆದ್ರೆ ಈಗ ಪ್ರೀತಿ ಪ್ರೇಮದಲ್ಲೂ ಕಲಬೆರಕೆನಾ?
೪೮) ನನಗೆ ನೀನೂ ಬೇಡ, ನಿನ್ನ ಹುಸಿ ಪ್ರೀತಿಯೂ ಬೇಡ. ನನಗೆ ನಿನ್ನ ನೆನಪುಗಳಿವೆ, ಅಷ್ಟೇ ಸಾಕು. ಅಷ್ಟರಲ್ಲೇ ನಾ ಸಂತೋಷವಾಗಿರ್ತೀನಿ...
೪೯) ಅವಳು ಹೇಳಿದ ಕೊನೆಯ ಮಾತು, "ನನ್ನ ಮರೆತು ಹಾಯಾಗಿರು. ಆಗದಿದ್ದ್ರೆ ನೆನಪಿಸಿಕೊಂಡು ಹಾಳಾಗೋಗು..."
೫೦) ಬದುಕಿರೋವಾಗ ಜೊತೆಗಿರದವರು ಸತ್ಮೇಲೆ ಜೊತೆಯಾಗ್ತಾರಾ? ಹುಡ್ಗೀರು ನೆನಪಾದ್ರೆ, ಹುಡುಗ್ರು ನೆಪ ಅಷ್ಟೇ...