ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story

Chanakya Niti in Kannada
ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                   ಅದೊಂದು ಹಿಂದುಳಿದ ಊರು. ಆ ಊರಲ್ಲಿ ನ್ಯಾಯ ತೀರ್ಮಾನ ಮಾಡೋಕೆ ಗೌಡ್ರೆ ಬರಬೇಕು. ಅದು ಸರಿ ಇರಲಿ ತಪ್ಪಿರಲಿ ಗೌಡ್ರು ಹೇಳಿದ್ದೆ ಅಂತಿಮ. ಗೌಡ್ರಿಗೆ ಶ್ರೀಮಂತರನ್ನು ಕಂಡ್ರೆ ಅಷ್ಟೊಂದು ಆಗಿ ಬರುತ್ತಿರಲಿಲ್ಲ. ಬಡವರನ್ನು ಕಂಡ್ರೆ ಏನೋ ಒಂಥರಾ ಅನುಕಂಪ. ಗೌಡ್ರಿಗೆ ಗೌರವ ಕೊಡದಿದ್ದರೆ ಅವರ ಕೋಪಕ್ಕೆ ಗುರಿಯಾಗಿ ಪಡಬಾರದ ನಾಯಿಪಾಡು ಪಡಬೇಕಾಗುತಿತ್ತು. ಗೌಡ್ರ ಮೇಲಿನ ಭಯದಿಂದ ಊರ ಜನರೆಲ್ಲ ಅವರನ್ನು ಗೌರವಿಸುತ್ತಿದ್ದರು. ಆದರೆ ಅವರನ್ನು ಕಂಡರೆ ಯಾರಿಗೂ ಆಗಿ ಬರುತ್ತಿರಲಿಲ್ಲ. ಗೌಡ್ರ ಎದುರಿಗೆ ಮಾತ್ರ ಎಲ್ಲರೂ ಆಡಂಬರದ ಪ್ರೀತಿ ತೋರಿಸುತ್ತಿದ್ದರು ಅಷ್ಟೇ. ಆದರೆ ಗೌಡರ ಅತ್ತೆ ಮಗಳು ಗೀತಾ ಅವರನ್ನು ಜೀವಕ್ಕಿಂತ ಹೆಚ್ಚಾಗಿ ಹುಚ್ಚಿಯಂತೆ ಪ್ರೀತಿಸುತ್ತಿದ್ದಳು.


ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                   ಗೀತಾ ಗೌಡ್ರಿಗೆ ತನ್ನ ಮನದಲ್ಲಿನ ಪ್ರೀತಿಯನ್ನು ಹೇಳಿ ಮದುವೆಯಾಗುವಂತೆ ಕೇಳಿದಳು. ಆದರೆ ಗೌಡ್ರು ಮದುವೆಗೆ ಒಪ್ಪಲಿಲ್ಲ. ಸದ್ಯಕ್ಕೆ ಗೌಡ್ರಿಗೆ ಮದುವೆಯಲ್ಲಿ ಆಸಕ್ತಿಯಿರಲಿಲ್ಲ. ಅವರಿಗೆ ಹಾಳುಬಿದ್ದ ಊರನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡಬೇಕು, ನಂತರ ಒಂದೊಂದೆ ಮೆಟ್ಟಿಲನ್ನು ಏರುತ್ತಾ ಮುಖ್ಯಮಂತ್ರಿ ಹುದ್ದೆವರೆಗೂ ನಿಯತ್ತಾಗಿ ಬೆಳೆಯಬೇಕು ಎಂಬ ಗುರಿಯಿತ್ತು. ಅವರ ಗಮನವೆಲ್ಲ ಊರ ಅಭಿವೃದ್ಧಿಯ ಕಡೆಗೇನೆ ನೆಟ್ಟಿತ್ತು. ಅದು ಗಡಿ ಗ್ರಾಮವಾದ್ದರಿಂದ ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿ ಅನುದಾನದಿಂದ ವಂಚಿತವಾಗಿತ್ತು. ಆ ಊರಲ್ಲಿ ಮೂಲಭೂತ ಅವಶ್ಯಕತೆಗಳು ಸಹ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಗೌಡ್ರು ಮಾತ್ರ ಯಾವ ಸಿನಿಮಾ ಹೀರೋಗು ಕಮ್ಮಿಯಿಲ್ಲ ಅನ್ನೋವಂತಿದ್ರು. ಆರಡಿ ಎತ್ತರ, ಹಿರಿ ಮೀಸೆ, ಕುರುಚಲು ಗಡ್ಡ, ತೋಲೆಯಂತಿರುವ ತೋಳುಗಳ ಸುಂದರಾಂಗ ಚೆಲುವುನಾಗಿದ್ದ ಗೌಡ್ರಿಗೆ ಬೀಳದ ಹುಡುಗಿಯೇ ಇರಲಿಲ್ಲ. ಹರೆಯದ ಹುಡುಗಿಯರೆಲ್ಲ ಅವರ ಮೇಲೆ ಒಂದು ಕಣ್ಣಿಟ್ಟಿದ್ದರು. ಆದರೆ ಗೌಡ್ರ ಚಿತ್ತವನ್ನು ಚಂಚಲ ಮಾಡಲು ಗೀತಾ ಅವರ ಬಾಳಲ್ಲಿ ಬಂದಳು. ಅವಳು ಗೌಡ್ರನ್ನು ಪ್ರೀತಿಯ ಹೆಸ್ರಲ್ಲಿ ಪದೇಪದೇ ಪೀಡಿಸಿದಳು. ಆದರೆ ಗೌಡ್ರು ವಿಶ್ವಾಮಿತ್ರನಂತೆ ದಾರಿ ತಪ್ಪಲು ತಯಾರಿರಲಿಲ್ಲ.


ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                   ಗೀತಾ ಕೊನೆಗೂ ಗೌಡ್ರನ್ನು ಪ್ರೀತಿಯ ಚಕ್ರವ್ಯೂಹದಲ್ಲಿ ಬೀಳಿಸುವಲ್ಲಿ ವಿಫಲಳಾದಳು. ಅವಳ ತಂದೆತಾಯಿಗಳು ಸಹ ಗೌಡ್ರ ಬಳಿ ಮದುವೆ ವಿಚಾರವಾಗಿ ಮಾತನಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಗೀತಾ ಬೇಸತ್ತು ತನ್ನೂರಿಗೆ ಹೋದಳು. ಅಷ್ಟರಲ್ಲಿ ಗೌಡ್ರು ಹೋರಾಟ ಮಾಡಿ ತಾಲೂಕಾಡಳಿತ, ಜಿಲ್ಲಾಡಳಿತದಿಂದ ತಮ್ಮ ಗ್ರಾಮಕ್ಕೆ ಬರಬೇಕಾಗಿದ್ದ ಅನುದಾನವನ್ನು ತಂದು ಗ್ರಾಮವನ್ನು ಸುಧಾರಿಸಲು ಶುರು ಮಾಡಿದರು. ಮೂರು ತಿಂಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಿದರು. ಮುಂದಿನ M.L.A. ಎಲೆಕ್ಷನಗೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿತ್ತು. ಎಲ್ಲ ರಾಜಕೀಯ ಪಕ್ಷಗಳು ಕೊಳಕು ಕೊಚ್ಚೆ ಹುಂಡಿಗಳು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುವುದರಿಂದ ಅವರು ಎಲ್ಲ ಪಕ್ಷಗಳಿಂದ ದೂರವಿದ್ದರು. ಎಲೆಕ್ಷನಗೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿತ್ತು. ಗೌಡ್ರು ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದರು.
ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                 ಗೀತಾ ಕಾಲೇಜಿಗೆ ರಜೆ ಇರುವುದರಿಂದ ಮತ್ತೆ ಗೌಡ್ರ ಊರಿಗೆ ಬಂದಳು. ಪ್ರೀತಿ ಅಂತ ಮತ್ತೆ ಗೌಡ್ರ ತಲೆ ತಿನ್ನಲು ಶುರುಮಾಡಿದಳು. ಆದರೆ ಗೌಡ್ರು ಅವಳನ್ನು ಏಕಾಂತದಲ್ಲಿ ಕರೆದು, "ನೋಡು ಗೀತಾ ಹುಚ್ಚುಹುಚ್ಚಾಗಿ ಆಡಬೇಡ. ನನಗೆ ಈ ಪ್ರೀತಿಪ್ರೇಮ ಮದುವೆಯಲ್ಲೆಲ್ಲ ಸದ್ಯಕ್ಕೆ ಆಸಕ್ತಿಯಿಲ್ಲ. ನಾನಿನ್ನೂ ರಾಜಕೀಯದಲ್ಲಿ ಸಾಧಿಸೋದು ಸಾಕಷ್ಟಿದೆ. ಪ್ಲೀಸ್ ಅರ್ಥಮಾಡಿಕೋ. ನೀ ಊರಿಗೆ ಹೋಗಿ ಚೆನ್ನಾಗಿ ಓದಿ ಏನಾದರೂ ಸಾಧಿಸಿದ ನಂತರ ನನ್ನ ಬಳಿ ಬಾ. ಆವಾಗ ನಾ ನೀನು ಹೇಳಿದಂತೆಲ್ಲ ಕೇಳುವೆ" ಎಂದು ಮುದ್ದಾಗಿ ಹೇಳಿದರು. ಅದಕ್ಕೆ ಗೀತಾ ಒಪ್ಪಿ ತಲೆಯಾಡಿಸಿದಳು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                 ಗೌಡ್ರು ಗೀತಾಳ ಜೊತೆ ಏಕಾಂತದಲ್ಲಿ ಮಾತನಾಡಿದ್ದನ್ನೆಲ್ಲ ಅವರ ಬಾಲ್ಯದ ಗೆಳತಿ ರತಿ ಕದ್ದು ಕೇಳಿಸಿಕೊಂಡಳು. ಅವಳೆದೆಗೆ ಬೆಂಕಿ ಬಿದ್ದಂಗಾಯಿತು. ಕೂಡಲೇ ಆಕೆ ಗೀತಾಳ ಬಳಿ ಹೋಗಿ "ನಾನು ಗೌಡ್ರನ್ನು ಹೈಸ್ಕೂಲಿನಲ್ಲಿ ಇದ್ದಾಗಿನಿಂದ ಗುಟ್ಟಾಗಿ ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಯನ್ನು ಬಾಯ್ಬಿಚ್ಚಿ ಹೇಳಿಲ್ಲ. ಗೌಡ್ರು ನನಗೆ ಬೇಕು. ಪ್ಲೀಸ್ ನನಗೆ  ಅವರನ್ನು ಬಿಟ್ಟುಕೊಡು'" ಎಂದು ಬೇಡಿಕೊಂಡಳು. ಆದರೆ ಅವಳ ಮಾತುಗಳನ್ನು ಕೇಳಿ ಗೀತಾಳಿಗೆ ಎಲ್ಲಿಲ್ಲದ ಕೋಪ ಉಕ್ಕಿ ಬಂತು. ಅವಳು ಕೋಪದಲ್ಲಿ ರತಿಗೆ "ಗೌಡ್ರು ನನ್ನ ಮಾವನ ಮಗ. ಅವನನ್ನು ನಾನು ನಿನಗಿಂತಲೂ ಮುಂಚೆಯಿಂದಲೇ ಪ್ರೀತಿಸುತ್ತಿರುವೆ. ಅವನು ನನ್ನ ಜನ್ಮಸಿದ್ಧ ಹಕ್ಕು. ನಾನು ಅವನನ್ನೇ ಮದುವೆಯಾಗುವೆ. ನೀನು ನಮ್ಮಿಬ್ಬರ ಮಧ್ಯೆ ಬರಲು ಪ್ರಯತ್ನಿಸಬೇಡ" ಎಂದು ಬೆದರಿಸಿ ಕಳಿಸಿದಳು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                           ಗೀತಾ ಗೌಡ್ರ ಜೊತೆ ಸುತ್ತಾಡಿ ಅಲ್ಪಸ್ವಲ್ಪ ರಾಜಕಾರಣವನ್ನು ಕಲಿತಳು. ದೊಡ್ಡ ಗೌಡ್ರು ಅಚಾನಾಕಾಗಿ ಹೃದಯಘಾತದಿಂದ ತೀರಿಕೊಂಡಾಗ ರಾಜಪ್ಪನೇ ಗೌಡನಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ಅವರಮ್ಮ ಸಹ ಗಂಡನ ನೆನಪಲ್ಲಿ ಬೇಗನೆ ಶಿವನ ಪಾದ ಸೇರಿದರು. ರಾಜಪ್ಪ ಊರ ಗೌಡನಾಗಿ ದೊಡ್ಡ ಮನೆಯಲ್ಲಿ ಒಂಟಿ ದಿನಗಳನ್ನು ಕಳೆಯುತ್ತಿದ್ದನು. ಅವನನ್ನು ಗೌಡ ಎಂದು ಕರೆಯುವ ಧೈರ್ಯ ಯಾರಿಗೂ ಇರಲಿಲ್ಲ. ಎಲ್ಲರೂ ಗೌಡ್ರು ಅಂತಾನೆ ಕರೆಯುತ್ತಿದ್ದರು.  ಗೀತಾ ಬಂದ ನಂತರ ಗೌಡ್ರ ಮನೆಗೊಂದು ಕಳೆ ಬಂದಿತು. ಮೊದಲ ಸಲ ಗೀತಾ ಅವ್ರನ್ನು ರಾಜಪ್ಪ ಗೌಡ ಎಂದು ಕರೆದಳು. ಗೌಡ್ರು ಸ್ವಲ್ಪ ಮುನಿಸಿಕೊಂಡವರಂತೆ ನಾಟಕವಾಡಿ ಎಷ್ಟಾದರೂ ಮುಂದೆ ನನ್ನ ಮಡದಿಯಾಗುವವಳಲ್ಲವೇ ಎಂದು ಸುಮ್ಮನಾದರು. ಒಂದಿನ ನೂರಾರು ಎಕರೆ ಜಮೀನು, ಗದ್ದೆಯೆಲ್ಲ ಸುತ್ತಾಡಿ ಗೀತಾ ಸುಸ್ತಾಗಿದ್ದಳು. ಅದಕ್ಕಾಗಿ  ಗೌಡ್ರನ್ನು ತನ್ನನ್ನು ಮನೆವರೆಗೂ ಹೊತ್ತುಕೊಂಡು ಹೋಗಲು ಬೇಡಿಕೊಂಡಳು. ಅವರು ಆಗಲಿ ಅಂತ ಅವಳನ್ನು ಮನೆವರೆಗೂ ಹೊತ್ತುಕೊಂಡು ಹೋದರು. ಅದನ್ನು ರತಿ ನೋಡಿ ಹೊಟ್ಟೆ ಉರಿದುಕೊಂಡಳು. ರತಿಯ ಹೊಟ್ಟೆ ಉರಿಸುವುದಕ್ಕಾಗಿಯೇ ಗೀತಾ ಆ ರೀತಿ ಕಾಲು ನೋವಂತಾ ನಾಟಕವಾಡಿದ್ದಳು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

        ಗೀತಾಳಿಗೆ ಒಂದು ತಿಂಗಳು ಕಾಲ ಕಳೆದಿದ್ದೆ ಗೊತ್ತಾಗಲಿಲ್ಲ. ಅವಳ ರಜೆ ಮುಗಿಯಿತು. ಅವಳು ಮತ್ತೆ ಕಾಲೇಜಿಗೆ ಹೋಗಲು ಸಿದ್ಧಳಾಗಿ ನಿಂತಳು. ಅವಳಿಗೆ ಗೌಡ್ರನ್ನು ಬಿಟ್ಟೊಗಲು ಮನಸ್ಸಿರಲಿಲ್ಲ. ಗೌಡ್ರಿಗೂ ಅವಳನ್ನು ಕಳಿಸಲು ಮನಸ್ಸಿರಲಿಲ್ಲ. ಆದರೆ ಅವಳು ಹೋಗಲೇಬೇಕಾಗಿತ್ತು. ಗೀತಾ ಗೌಡ್ರನ್ನೊಮ್ಮೆ ಅಪ್ಪಿಕೊಂಡು ಕಣ್ಣಂಚಲ್ಲಿ ಕಣ್ಣೀರು ತುಂಬಿಕೊಂಡು ತನ್ನ ಊರ ಬಸ್ಸು ಹಿಡಿದಳು. ಹೋಗುವಾಗ ಅವಳ ಕಣ್ಣಿಗೆ ರತಿ ಬಿದ್ದಾಗ ಗೀತಾ ಅವಳನ್ನು ನೋಡಿ ಮೂಗು ಮುರಿದುಕೊಂಡು ಹೋದಳು. ಗೀತಾ ಮಾಡಿದ ಅವಮಾನವನ್ನು ರತಿ ಮರೆತಿರಲಿಲ್ಲ. ಹೇಗಾದರೂ ಮಾಡಿ ಗೌಡ್ರನ್ನು ಮದುವೆಯಾಗಿ ಗೀತಾಳ ಮೇಲೆ ಸರಿಯಾಗಿ ಸೇಡು ತೀರಿಸಿಕೊಳ್ಳಲು ರತಿ ತಿರ್ಮಾನಿಸಿದಳು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                     ರತಿ ಒಂದಿನ ಸರಿಯಾದ ಸಮಯ ನೋಡಿಕೊಂಡು ಗೌಡ್ರನ್ನು ಅವರ ಗದ್ದೆಯಲ್ಲಿ ಏಕಾಂತದಲ್ಲಿ ಭೇಟಿಯಾದಳು. ಅವರನ್ನು ತಬ್ಬಿಕೊಂಡು ತನ್ನ ಪ್ರೀತಿಯನ್ನು ಹೇಳಿಕೊಂಡಳು. ಆದರೆ ಗೌಡ್ರು ಅವಳ ಪ್ರೇಮ ನಿವೇದನೆಯನ್ನು ನಯವಾಗಿ ತಿರಸ್ಕರಿಸಿ ತಾವು ಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವಳನ್ನು ದೂರ ತಳ್ಳಿದರು. ಗೌಡ್ರ ಬಾಯಲ್ಲಿ ತನ್ನ ಶತ್ರು ಗೀತಾಳ ಹೆಸರು ಕೇಳಿ ಅವಳ ರಕ್ತ ಕುದಿಯಲು ಶುರುವಾಯಿತು. ಆದರೂ ಅವಳು ಸುಮ್ಮನಾಗಿ ಅಲ್ಲಿಂದ ಕಾಲ್ಕಿತ್ತಳು. ಎಲೆಕ್ಷನ ಸಮೀಪಿಸಿತು. ಎಲ್ಲ ಪಕ್ಷದವರಿಗೆ ಗೌಡ್ರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ಭಯವಿತ್ತು. ಅದಕ್ಕಾಗಿ ಅವರು ಗೌಡ್ರ ಹೆಸರಿಗೆ ಮಸಿ ಬಳಿಯಲು ಅವರ ಹುಳುಕುಗಳನ್ನು ಹುಡುಕಾಡುತ್ತಿದ್ದರು. ಕಾಕತಾಳೀಯವೆಂಬಂತೆ ಅವರಿಗೆ ರತಿಯ ಸೋತ ಪ್ರೇಮವ್ಯಥೆ ಗೊತ್ತಾಯಿತು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                ಎದುರಾಳಿ ಪಕ್ಷದವರು ಗೌಡ್ರ ಹೆಸರಿಗೆ ಮಸಿ ಬಳಿದು ಅವರ ಮಾನ ಹರಾಜಾಕಿ ಅವರು ಎಲೆಕ್ಷನ್‌ನಲ್ಲಿ ಸ್ಪರ್ಧಿಸದಂತೆ ಮಾಡಲು ರತಿಯನ್ನು ದಾಳವಾಗಿ ಬಳಸಿಕೊಂಡರು. ರತಿಗೆ ದುಡ್ಡು ಕೊಟ್ಟು ಗೌಡ್ರು ನಿನ್ನ ಮಾನಭಂಗ ಮಾಡಲು ಪ್ರಯತ್ನಿಸಿದರು ಎಂದು ನಾಟಕವಾಡಲು ಹೇಳಿದರು. ಹೀಗೆ ಬಿಟ್ಟರೆ ಸಿಟಿ ಸುಂದರಿ ಗೀತಾ ಗೌಡ್ರನ್ನು ಕೈವಶಮಾಡಿಕೊಂಡು ಮದುವೆಯಾಗಿ ಹಾರಿಸಿಕೊಂಡು ಹೋಗುತ್ತಾಳೆ ಎಂಬ ಭಯದಲ್ಲಿ ರತಿ ಅವರು ಹೇಳಿದಂತೆ ನಾಟಕವಾಡಲು ಒಪ್ಪಿಕೊಂಡಳು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                              ಯಾರು ಇಲ್ಲದ ಸಮಯ ನೋಡಿಕೊಂಡು ರತಿ ಗೌಡ್ರ ಮನೆಗೋಗಿ ಮತ್ತೆ ತನ್ನ ಪ್ರೇಮವನ್ನು ಪ್ರಸ್ತಾಪಿಸಿದಳು. "ನನ್ನಲ್ಲಿ ಇರದಿರುವಂಥದ್ದು ಆ ಗೀತಾಳಲ್ಲೇನಿದೆ ಅಂಥದ್ದು?" ಎಂದು ವಾದಿಸಿದಳು. ಅವಳ ಏರು ಧ್ವನಿ ಗೌಡ್ರ ತಾಳ್ಮೆಯ ತಂತಿಯನ್ನು ಹರಿದಾಕಿತು. ಗೌಡ್ರು ಸ್ವಲ್ಪ ಖಾರವಾಗಿಯೇ ಆಕೆಗೆ ಮನೆಯಿಂದ ಆಚೆ ಹೋಗಲು ಹೇಳಿದರು. ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ರತಿ ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು, ಜೋರಾಗಿ ಕೂಗಾಡಿ ದೊಡ್ಡ ರಂಪಾಟ ಮಾಡಿ ಜನ ಸೇರಿಸಿದಳು. ಗೌಡ್ರು ಮನೆಕೆಲಸಕ್ಕೆಂದು ಮನೆಗೆ ಕರೆಸಿಕೊಂಡು ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದಳು. ತಾನು ನಿರಪರಾಧಿ ಎಂದು ಸಾಬೀತು ಪಡಿಸಲು ಯಾವುದೇ ಸಾಕ್ಷಾಧಾರಗಳಿಲ್ಲದೇ ಗೌಡ್ರು ಪಂಚಾಯತಿ ಕಟ್ಟೆಯಲ್ಲಿ ಅಪರಾಧಿಯೆಂದು ಒಪ್ಪಿಕೊಳ್ಳಬೇಕಾಯಿತು. ಜೊತೆಗೆ ಊರವರ ಒತ್ತಾಯದ ಮೇರೆಗೆ ಮನೆಹಾಳಿ ರತಿಯನ್ನು ಮದುವೆಯಾಗಬೇಕಾಯಿತು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                       ಎದುರಾಳಿ ಪಕ್ಷದವರು ಈ ಸುಳ್ಳು ಸುದ್ದಿಯನ್ನು ದುಡ್ಡು ಕೊಟ್ಟು ಎಲ್ಲ ಟಿವಿ ಚಾನೆಲಗಳಲ್ಲಿ, ದಿನಪತ್ರಿಕೆಗಳಲ್ಲಿ ಬರುವಂತೆ ಮಾಡಿದರು. ಗೌಡ್ರು ನಿಯತ್ತಾಗಿ ಸಂಪಾದಿಸಿದ ಗೌರವವೆಲ್ಲ ಮಣ್ಣು ಪಾಲಾಯಿತು. ದಿನಪತ್ರಿಕೆಗಳಲ್ಲಿ, ನ್ಯೂಸ್ ಚಾನೆಲಗಳಲ್ಲಿ ಬರುತ್ತಿದ್ದ ಸುಳ್ಳು ಸುದ್ದಿಯನ್ನೇ ನಿಜವೆಂದು ನಂಬಿ ಗೀತಾ ಸಹ ಗೌಡ್ರನ್ನು ಅಪರಾಧಿಯಂತೆ ಕಂಡಳು. ಆದರೆ ಅವಳಿಗೆ ರತಿಯ ಮೇಲೆ ಅನುಮಾನ ಬಂದಿತು. ಆದರೆ ಅವಳೇನು ಮಾಡುವ ಸ್ಥಿತಿಯಲ್ಲಿರಲಿಲ್ಲ. ಕಾಲ ಮಿಂಚಿ ಹೋಗಿತ್ತು. ಗೌಡ್ರ ಮದುವೆ ರತಿಯೊಡನೆ ಆಗಿ ಹೋಗಿತ್ತು. ಅವಮಾನ ಗೌಡ್ರ ಪಾಲಿನ ಶಾಪವಾದರೆ, ವಿಷಾದ ಮತ್ತು ವಿರಹ ಗೀತಾಳಿಗೆ ಶಾಪವಾಯಿತು. ಸುಮ್ಮನೆ ಕೂಡಲು ಗೀತಾಳಿಗೆ ಮನಸ್ಸು ಕೇಳಲಿಲ್ಲ. ಅವಳು ಗೌಡ್ರನ್ನು ನೋಡಲು ಊರಿಗೆ ಓಡೋಡಿ ಬಂದಳು. ಗೌಡ್ರ ಜೊತೆ ಮನ್ಸಬಿಚ್ಚಿ ಮಾತಾಡಿದಾಗ ಗೀತಾಳಿಗೆ ರತಿಯ ಮೇಲೆ ಬಂದಿದ್ದ ಅನುಮಾನ ನಿಜವಾಯಿತು. ಅವಳು ಜಾಸ್ತಿ ಸಮಯ ಅಲ್ಲಿರದೆ ಬಂದ ದಿನವೇ ತನ್ನೂರಿಗೆ ಮರಳಿದಳು. ಮಾಡದ ತಪ್ಪಿಗೆ ಬರುತ್ತಿದ್ದ ನಿಂದನೆಗಳಿಂದ, ಚುಚ್ಚು ಮಾತುಗಳಿಂದ ಗೌಡ್ರು ಕುಗ್ಗಿ ಹೋದರು.


ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                ಮಾನಹಾನಿಯಾದ ಚಿಂತೆಯಲ್ಲಿ ಗೌಡ್ರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ, ರತಿಗೆ ಮೊದಲ ರಾತ್ರಿಯ ಚಿಂತೆಯಾಗಿತ್ತು. ಶಾಸ್ತ್ರ ಸಂಪ್ರದಾಯದ ಪ್ರಕಾರ ಗೌಡ್ರ ಮತ್ತು ರತಿಯ ಮದುವೆಯ ನಂತರದ ಕಾರ್ಯಗಳೆಲ್ಲವು ನಡೆದವು. ಇಷ್ಟೆಲ್ಲ ಆದರೂ ಗೌಡ್ರು ರತಿಯೊಡನೆ ಒಂದು ಮಾತನ್ನು ಸಹ ಆಡಿರಲಿಲ್ಲ. ಎಲ್ಲವನ್ನು ಸಹಿಸಿಕೊಂಡು ಮೌನವಾಗಿದ್ದರು. ಕೋಪದಲ್ಲಿ ಏನಾದರೂ ಒಂದನ್ನು ಮಾತನಾಡಿ ಇರೋ ಸಮಸ್ಯೆಯನ್ನು ಮತ್ತಷ್ಟು ದೊಡ್ಡದಾಗಿಸುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಅವರ ಮೊದಲ ರಾತ್ರಿ ಅವರ ಮೌನವನ್ನು ಮುರಿಯುವಂತೆ ಮಾಡಿತು. ಪ್ರಸ್ಥದ ಕೋಣೆಗೆ ನೂರಾರು ಆಸೆಗಳನ್ನು ಹೊತ್ತು ನಾಚುತ್ತಾ ಬಂದ ರತಿ ಅಳುತ್ತಾ ಕೂರ ಬೇಕಾಯಿತು. ಗೌಡ್ರ ಮೌನ ಆವೇಶವಾಗಿ ಬದಲಾಗಿತ್ತು. ಗೌಡ್ರು ರತಿಗೆ ಸರಿಯಾದ ಶಿಕ್ಷೆ ಕೊಡಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅವಳಿಗೆ ಮರೆತು ಹೋಗುವಂಥ ದೈಹಿಕ ಶಿಕ್ಷೆ ನೀಡುವುದು ಅವರ ಉದ್ದೇಶವಾಗಿರಲಿಲ್ಲ. ಅವಳಿಗೆ ಮಾನಸಿಕ ಹಿಂಸೆ ಕೊಟ್ಟು ಅವಳ ತಪ್ಪನ್ನು ಅವಳಿಗೆ ಅರ್ಥವಾಗಿಸುವುದು ಅವರ ಗುರಿಯಾಗಿತ್ತು.
ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

              ರತಿ ನಾಚಿಕೆ ಬಿಟ್ಟು ಮೆಲ್ಲನೆ ಮಾತು ಪ್ರಾರಂಭಿಸಿದಳು. "ನನ್ಮೇಲೆ ಇನ್ನು ಕೋಪಾನಾ? ಎಷ್ಟಾದರೂ ನಾ ನಿಮ್ಮ ಹೆಂಡತಿಯಲ್ಲವೇ? ನಿಮ್ಮನ್ನು ಕಳೆದುಕೊಳ್ಳಲು ನನಗೆ ಮನಸ್ಸಾಗಲಿಲ್ಲ. ಅದಕ್ಕೆ ಈ ಚಿಕ್ಕ ತಪ್ಪು ಮಾಡಿರುವೆ. ನೀವು ದೊಡ್ಡವರು, ನಾನು ಮಾಡಿದ ತಪ್ಪನ್ನು ಹೊಟ್ಟೆಗಾಕಿಕೊಂಡು ನನ್ನ ಕ್ಷಮಿಸಿ" ಎಂದೇಳಿ ತಾನೇ ಮಾಡಿದ ಗಾಯದ ಮೇಲೆ ಬೆಣ್ಣೆ ಸವರಿದಳು. ಆದರೆ ಗೌಡ್ರು ಕೋಪದಲ್ಲಿದ್ದರು. ಅವಳಿಗೆ ಅವಳ ತಪ್ಪು ಚಿಕ್ಕದಾಗಿತ್ತು. ಆದ್ರೆ ಗೌಡ್ರಿಗೆ ಅದೇ ದೊಡ್ಡ ಮುಳ್ಳಾಗಿತ್ತು. ಮನೆಹಾಳಿಯ ಜೊತೆ ಮಾತಾಡಲು ಇಷ್ಟವಿಲ್ಲದೆ,  ಅವಳನ್ನು ದೂರ ತಳ್ಳಿ ಗೌಡ್ರು ತಮ್ಮ ಪಾಡಿಗೆ ತಾವು ಮಲಗಿದರು. ರತಿಯ ರಸಿಕ ಆಸೆಗಳೆಲ್ಲ ಗೌಡ್ರ ಕೋಪಕ್ಕೆ ಆಹುತಿಯಾಗಿ ಹೋದವು. ರತಿ ಕೋಣೆಯ ದೀಪವಾರಿಸಿ ಕಣ್ಣೀರಾಕುತ್ತಾ ಹಾಸಿಗೆಯನ್ನು ಬಿಗಿದಪ್ಪಿಕೊಂಡಳು. ಗಂಡಸರನ್ನು ಕೈವಶ ಮಾಡಿಕೊಳ್ಳುವ ಬೆಡ್ರೂಮ್ ಬ್ರಹ್ಮಾಸ್ತ್ರದ ಬಗ್ಗೆ ಅವಳು ಚೆನ್ನಾಗಿ ತಿಳಿದುಕೊಂಡಿದ್ದಳು. "ಹೆಣ್ಣಿನ ಸೌಂದರ್ಯದ ಮುಂದೆ ಎಂಥ ವೀರನಾದರೂ ಸೋತು ಶರಣಾಗುತ್ತಾನೆ, ಇನ್ನೂ ಈ ಗೌಡ್ರ ಕೋಪ ಯಾವ ಲೆಕ್ಕ?" ಎಂದು ರತಿ ಬಿಂಕದಿಂದ ಮಾತಾಡಿಕೊಂಡಳು. ಅವಳಲ್ಲಿ ಕ್ರಿಮಿನಲ್ ಐಡಿಯಾಗಳಿಗೇನು ಬರವಿರಲಿಲ್ಲ.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                               ಗೌಡ್ರನ್ನು ಮೋಸದಿಂದ ಮದುವೆಯಾದ ರತಿ ಏನೋ ಒಂದು ಮಹಾ ಸಾಧನೆ ಮಾಡಿದವಳಂತೆ ಬೀಗುತ್ತಾ ಹಾಯಾಗಿದ್ದಳು. ಆದರೆ ಗೌಡ್ರು ತೋರಿಕೆಗೆ ನಗುತ್ತಾ, ಗೀತಾಳ ನೆನಪಿನಲ್ಲಿ ಒಳಗೊಳಗೆ ಕೊರಗುತ್ತಾ ನರಕಯಾತನೆಯನ್ನು ಅನುಭವಿಸುತ್ತಿದ್ದರು. ಅತ್ತ ಕಡೆ ಗೀತಾಳೂ ಅಷ್ಟೇ ಕೊರಗುತ್ತಿದ್ದಳು. ಅವಳ ಶೋಕದ ಶಾಪಕ್ಕೆ ಸುಮ್ಮನೆ ಸುಳಿದಾಡುವ ಗಾಳಿಗೆ ಸೂತಕ ಕವಿದಿತ್ತು. ಹಾಡುತ್ತಾ ನಲಿಯುವ ಕೋಗಿಲೆಯ ಕಂಠಕ್ಕೆ ಸ್ವರ ಮರೆತು ಹೋಗಿತ್ತು. ವಸಂತ ಋತು ಬಂದರೂ ಮಾಮರಗಳಿಗೆ ಮರ್ಮರದ ಛಾಯೆ ತಟ್ಟಿತ್ತು. ಗೆಜ್ಜೆ ಕಟ್ಟಿಕೊಳ್ಳದೆ ಟೊಂಕ ಕಟ್ಟಿ ನರ್ತಿಸುವ ನವಿಲಿನ ಕಾಲು ನೆಟ್ಟಗಿದ್ದರೂ ಅದರ ಹೃದಯಕ್ಕೆ ಮುಳ್ಳು ಚುಚ್ಚಿತ್ತು. ಜಗವನ್ನೇ ತನ್ನ ಕಿರಣಗಳಿಂದ ಬೆಳಗುವ ಸೂರ್ಯನ ಕಂಗಳಿಗೆ ಕತ್ತಲು ಕವಿದಿತ್ತು. ಕಿಲಕಿಲನೆ ನಗುವ ಚಂದ್ರಮನ ತುಟಿಗಳು ನಿಶಬ್ದವಾಗಿದ್ದವು. ಇವೆಲ್ಲದರ ಮಧ್ಯೆ ಯಾವುದೋ ಒಂದು ಮೂಲೆಯಲ್ಲಿ ಗೀತಾಳ ವಿರಹ ವೇದನೆಯ ಆಕ್ರಂದನ ಕೇಳಿ ಬರುತಿತ್ತು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                              ರತಿ ಗೌಡ್ರನ್ನು ಒಲಿಸಿಕೊಳ್ಳಲು ಭಗೀರಥ ಪ್ರಯತ್ನ ಮಾಡತೊಡಗಿದಳು. ಸಿಕ್ಕ ಸಣ್ಣಪುಟ್ಟ ಸಂದರ್ಭಗಳಲ್ಲಿ ತನ್ನ ಸೀರೆಯ ಸೆರಗನ್ನು ಜಾರಿಸಿ ಗೌಡ್ರನ್ನು ಸೆಳೆಯಲು ಸಂಚಾಕಿದಳು. ರಾತ್ರಿ ಮಲಗುವ ಕೋಣೆಯಲ್ಲಿ ಗೌಡ್ರನ್ನು ಮೋಡಿ ಮಾಡಲು ವಿಚಿತ್ರವಾಗಿ ಆಡತೊಡಗಿದಳು. ಅವರನ್ನು ಸೆಳೆಯಲು ನಾಚಿಕೆಬಿಟ್ಟು ವರ್ತಿಸಿದಳು. ಬೆಳಿಗ್ಗೆ ಕಾಫಿ ಕೊಡುವಾಗ, ಮಧ್ಯಾಹ್ನ ಊಟ ಬಡಿಸುವಾಗ ಬೇಕಂತಲೇ ಸೆರಗು ಜಾರಿಸಿ ಗೌಡ್ರು ಮುಜುಗುರ ಪಟ್ಟುಕೊಳ್ಳುವಂತೆ ಮಾಡಿದಳು. ಇಷ್ಟು ಸಾಲದಕ್ಕೆ ರಾತ್ರಿ ಕೋಣೆಯಲ್ಲಿ ಅರೆಬೆತ್ತಲೆ ಸರ್ವಾಂಗ ಪ್ರದರ್ಶನ ಮಾಡುತ್ತಿದ್ದಳು. "ಮಹಾನ್ ತಪಸ್ವಿ ವಿಶ್ವಾಮಿತ್ರನೇ ಮೇನಕೆಯ ಮೈಮಾಟಕ್ಕೆ ಜೊಲ್ಲು ಸುರಿಸಿ ತಪಸ್ಸು ಬಿಟ್ಟಾಗ ಈ ಗೌಡ್ರ ಸನ್ಯಾಸತ್ವ ಯಾವ ಮಹಾ?" ಎಂಬುದು ರತಿಯ ಆಲೋಚನೆಯಾಗಿತ್ತು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                       ಗೌಡ್ರು ಬೆಡ್ರೂಮಿನಲ್ಲಿರುವ ವಿಚಾರ ಗೊತ್ತಿದ್ದರೂ ರತಿ ಸ್ನಾನ ಮಾಡಿಕೊಂಡು ನೇರವಾಗಿ ಅಲ್ಲಿಗೆ ನುಗ್ಗಿದಳು. ಅವರಿಗೆ ಅರೆಬೆತ್ತಲೆ ಬೆನ್ನು ತೋರಿಸಿ ಅವರ ಮುಂದೇನೆ ಸೀರೆಯುಟ್ಟಳು. "ಸಾಲದಕ್ಕೆ ತಾಳಿ ಕಟ್ಟಿದ ಗಂಡನಿಗಾಗಿ ಹೆಣ್ಮಕ್ಕಳು ತಮ್ಮ ಸರ್ವಸ್ವನ್ನು ಸಮರ್ಪಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ತಾಳಿ ಕಟ್ಟಿದ ಗಂಡನ ಮುಂದೆ ನಾಚುವಂಥದ್ದೇನಿದೆ?" ಎಂದೇಳಿ ಗೌಡ್ರನ್ನು ಮುಟ್ಟಲು ಮುಂದಾದಳು. ಇನ್ನೂ ಅವಳ ಚೆಂಗಲಾಟಗಳನ್ನು ಸಹಿಸಿಕೊಂಡು ಸುಮ್ಮನಿರುವುದು ಅವರಿಂದ ಸಾಧ್ಯವಿರಲಿಲ್ಲ. ಅದಕ್ಕಾಗಿ ಗೌಡ್ರು ಅವಳಿಗೆ "ನೀನು ಪೂರ್ತಿ ಬೆತ್ತಲಾಗಿ ನನ್ಮುಂದೆ ನಿಂತರೂ ನಾನಿನ್ನ ಮುಟ್ಟಲ್ಲ. ನಿನ್ನಂಥ ನೀಚಳ ಜೊತೆಗೆ ಸಂಸಾರ ಮಾಡುವುದು, ಸರಸವಾಡುವುದು ಕನಸಿನ ಮಾತು. ನೀನು ಸತ್ರೂ ನಿನ್ನ ನಾನು ಮಡದಿಯಾಗಿ ಸ್ವೀಕರಿಸಲ್ಲ, ನಿನ್ನ ಮೈಮುಟ್ಟಲ್ಲ" ಎಂದೇಳಿ ಅವಳನ್ನು ಬೇರೆ ಕೋಣೆಯಲ್ಲಿರಿಸಿದರು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                         ಗೌಡ್ರು ಗೀತಾಳ ನೆನಪಲ್ಲಿ ತಲೆದಿಂಬನ್ನು ತಬ್ಬಿಕೊಂಡು ಕನಸುಗಳನ್ನು ಕಾಣುತ್ತಾ ಮಲಗುತ್ತಿದ್ದರು. ಆದರೆ ರತಿ ಗೌಡ್ರು ಮನಸ್ಸು ಬದಲಾಯಿಸಿ ತನ್ನ ಬಳಿ ಬರಬಹುದೆಂದು ರಾತ್ರಿಯೆಲ್ಲ ಕಾಯುತ್ತಿದ್ದಳು. ಆದರೆ ಗೌಡ್ರು ಬರಲ್ಲ ಎಂಬುದು ಖಾತ್ರಿಯಾದಾಗ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಗೌಡ್ರು ರತಿಯನ್ನು ಒಮ್ಮೆಯೂ ಮುಟ್ಟಲಿಲ್ಲ. ಆಕೆಯೊಂದಿಗೆ ಒಂದು ಮಾತನ್ನು ಆಡಲಿಲ್ಲ. ಆಕೆಯನ್ನು ಸಾಧ್ಯವಾದಷ್ಟು ದೂರಾನೇ ಇಟ್ಟರು. ರತಿಯ ವನವಾಸ ಅವಳನ್ನು ಹಿಂಸಿಸಿ ಕೊಲ್ಲುತ್ತಿತ್ತು. ಉಕ್ಕಿ ಬರುವ ಹರೆಯದ ಆಸೆಗಳಿಗೆ ಉತ್ತರಿಸಲಾಗದೆ ಅವಳು ಒದ್ದಾಡುತ್ತಿದ್ದಳು. ತನ್ನಾಸೆಗಳನ್ನು ತೀರಿಸಿಕೊಳ್ಳಲಾಗದೆ ನರಳುತ್ತಿದ್ದಳು. ಹೀಗೆ ವರುಷ ಉರುಳಿ ಹೋಯಿತು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                       ಕೆಲವು ದಿನಗಳ ನಂತರ ಎಲೆಕ್ಷನ್ ಬಂದಿತು. ತಾವು ಮಾಡಿದ ಮಾದರಿ ಗ್ರಾಮದ ಅಭಿವೃದ್ದಿ ತಮ್ಮನ್ನು ಗೆಲ್ಲಿಸಬಹುದು ಎಂಬ ಭ್ರಮೆಯಲ್ಲಿ ಗೌಡ್ರು ಮೈಮರೆತಿದ್ದರು. ಅದೇ ಭ್ರಮೆಯಿಂದಲೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮತ್ತಷ್ಟು ಅವಮಾನ ಅನುಭವಿಸಿದರು. ಊರ ಜನ ಅವರನ್ನು ಗೇಲಿ ಮಾಡಿಕೊಂಡು ನಕ್ಕರು. "ಸತ್ತ ಹೆಣ ಸಿಂಗಾರವರಿಯದು, ಊರ ಜನ ಉಪಕಾರವರಿಯರು" ಎಂಬ ಸತ್ಯ ಅವರಿಗೆ ಮನದಟ್ಟಾಯಿತು. ಅವರು ರಾಜಕೀಯದ ಆಸೆಯನ್ನು ಬಿಟ್ಟು ತಮ್ಮ ಗದ್ದೆ ಕೆಲಸಗಳನ್ನು ನೋಡಿಕೊಂಡಿರಲು ತೀರ್ಮಾನಿಸಿದರು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                ಗೌಡ್ರ ಮನಸ್ಸಲ್ಲಿ ರತಿ ಬರುವ ಯಾವ ಸಾಧ್ಯತೆಯೂ ಇರಲಿಲ್ಲ. ಗೌಡ್ರ ಮನಸ್ಸು ಬರೀ ಗೀತಾಳ ಗುಂಗಲ್ಲೇ ಇರುತ್ತಿತ್ತು. ಒಂದಿನ ಗೌಡ್ರ ಜೀವದ ಗೆಳೆಯ ಪ್ರಕಾಶ ಅವರನ್ನು ಭೇಟಿಯಾಗಿ "ಮದುವೆಯಾಗಿ ಒಂದು ವರ್ಷ ಕಳೆದೋಯ್ತು. ಎಲ್ಲಿ ಇನ್ನೂ ಮರಿಗೌಡನ ಅಳುವಿನ ಸದ್ದೇ ಇಲ್ಲ? " ಎಂದು ಕೇಳಿದನು. ಅದಕ್ಕೆ ಗೌಡ್ರು ಭಾವುಕರಾಗಿ ತಮ್ಮ ಸಂಸಾರದ ಗುಟ್ಟನ್ನು ಅವನತ್ರ ರಟ್ಟು ಮಾಡಿದರು. ಗೌಡ್ರಿಗೆ ಗೀತಾಳನ್ನು ಮರೆಯಲು ಸಾಧ್ಯವಾಗಲಿಲ್ಲ. ಅವರು ಗೀತಾಳನ್ನು ಎರಡನೇ ಮದುವೆಯಾಗಲು ನಿರ್ಧರಿಸಿ ಅವಳ ಊರಿಗೆ ಹೊರಟರು. ಹೋಗುವಾಗ ತಮ್ಮ ಜೀವದ ಗೆಳೆಯನಿಗೆ ಈ ವಿಷಯ ತಿಳಿಸಿ ಸ್ವಲ್ಪ ಮನೆ ಕಡೆಗೆ ನೋಡಿಕೊಳ್ಳಲು ಹೇಳಿ ಹೋದರು.


ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                                    ಗೀತಾಳ ಮನಸ್ಸಲ್ಲಿನ್ನು ಗೌಡ್ರೆ ಇದ್ದರು. ಆದ್ರೆ ಅವಳ ಬಾಳಲ್ಲಿ ಅವರಿರಲಿಲ್ಲ. ಮನೆಯವರ ಒತ್ತಾಯಕ್ಕೆ ಮಣಿದು ಗೀತಾ ಮದುವೆಯಾಗಲು ತಯಾರಾಗಿದ್ದಳು. ಗೌಡ್ರ ಅನಿರೀಕ್ಷಿತ ಆಗಮನ ಅವಳ ಮನಸ್ಸಿನ ತಳಮಳಕ್ಕೆ ಕಾರಣವಾಯಿತು. ಗೌಡ್ರಿಗೆ ಗೀತಾಳ ಮದುವೆ ನಿಶ್ಚಯವಾಗಿರುವ ವಿಷಯ ಗೊತ್ತಿರಲಿಲ್ಲ. ಅಪ್ಪ ಅಮ್ಮ ಕರೆದ ನಂತರವೇ ಗೌಡ್ರು ಬಂದಿದ್ದಾರೆಂದು ಗೀತಾ ಭಾವಿಸಿದ್ದಳು. ಆದರೆ ಗೌಡ್ರು ಅಚಾನಾಕಾಗಿ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಿದ್ದರು. ಒಂದಿನ ರಾತ್ರಿ  ಗೌಡ್ರು ಗೀತಾಳನ್ನು ಏಕಾಂತದಲ್ಲಿ ಬಳಿ ಕರೆದು ಅವಳನ್ನು ಎರಡನೇ ಮದುವೆಯಾಗುವ ಮನದಿಂಗೀತವನ್ನು ವ್ಯಕ್ತಪಡಿಸಿದರು.  

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                         ಗೀತಾ ಈಗ ಮೊದಲಿಗಿಂತಲೂ ಮ್ಯಾಚುರ್ಡ್ ಆಗಿದ್ದಳು. ಆದರೆ ಗೌಡ್ರ ಮುಂದೆ ಪೆದ್ದಿಯಂತಾಡುತ್ತಿದ್ದಳು. ಗೀತಾಳಿಗೆ ಗೌಡ್ರನ್ನು ಕಂಡರೆ ಇಷ್ಟವಿತ್ತು. ಆದರೆ ಎರಡನೇ ಹೆಂಡ್ತಿಯಾಗಿ ಅವರ ಜೀವನಕ್ಕೆ ಕಾಲಿಟ್ಟು ಹೆಸರು ಕೆಡಿಸಿಕೊಳ್ಳುವುದು ಅವಳಿಗಿಷ್ಟರವಿಲ್ಲ. ಗೌಡ್ರ ಮದುವೆ ಆಹ್ವಾನವನ್ನು ತಿರಸ್ಕರಿಸುವ ಧೈರ್ಯವೂ ಅವಳಲ್ಲಿರಲಿಲ್ಲ. ಅವಳು ಏನು ಹೇಳಲಾಗದ ಸಂಧಿಗ್ಧ ಪರಿಸ್ಥಿತಿಗೆ ಸಿಲುಕಿದಳು. ಗೌಡ್ರು ಅವಳ ಮೌನಕ್ಕೆ ಹೆದರಿದರು. ಅವರು ಮತ್ತೆ ಅವಳನ್ನು ಮದುವೆಗೆ ಒಪ್ಪಿಗೆಯನ್ನು ಕೇಳಿದಾಗ ಅವಳೆದೆ ಕಂಪಿಸಿತು. ಅವಳು "ನಾನು ನಿನ್ನನ್ನು ಬಹಳ ಇಷ್ಟಪಟ್ಟಿದ್ದೆ. ಆದರೆ ನೀನು ನನ್ನ ದೂರ ತಳ್ಳಿ ಬೇಡದ ಯಡವಟ್ಟುಗಳನ್ನು ಮಾಡಿಕೊಂಡೆ. ಎರಡನೇ ಹೆಂಡತಿಯಾಗಿ ನಾನಿನ್ನ ಬಾಳಿಗೆ ಬರಲಾರೆ. ನಾನು ಯಾವತ್ತಿದ್ರೂ ನಿನ್ನವಳೇ. ನನ್ನ ದೇಹ ನಿನ್ನ ಸೊತ್ತು. ನನ್ನನ್ನು ಸ್ವೀಕರಿಸು" ಎಂದೇಳಿ ಸೆರಗು ಜಾರಿಸಿ ಕಣ್ಣೀರಾಕುತ್ತಾ ಕೈಮುಗಿದು ನಿಂತಳು. ಗೌಡ್ರಿಗೆ ಅವಳ ಅಂತಿಮ ನಿರ್ಧಾರ ಅರ್ಥವಾಯಿತು. ಸುರ್ಯೋದಯವಾಗುತ್ತಿದ್ದಂತೆಯೇ ಗೌಡ್ರು ಗೀತಾಳಿಗೆ ತಿಳಿಸದೇ ತಮ್ಮೂರಿಗೆ ಮರಳಿದರು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                         ಗೀತಾಳ ಭಾವನೆಗಳು ಗೌಡ್ರಿಗೆ ಅರ್ಥವಾದವು. ಅವರು ಅವಳನ್ನು ಮರೆತು ರತಿಯನ್ನು ಕ್ಷಮಿಸಿ ಅವಳೊಡನೆ ಸುಖವಾಗಿ ಸಂಸಾರ ಮಾಡಿಕೊಂಡಿರಲು ನಿರ್ಧರಿಸಿದರು.  ಆದರೆ ಊರಿಗೆ ಬರುತ್ತಿದ್ದಂತೆಯೇ ಗೌಡ್ರಿಗೆ ಮತ್ತೊಂದು ಆಘಾತ ಎದುರಾಗಿತ್ತು. ರತಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಳು. ಅವಳ ಅಂತ್ಯಕ್ರಿಯೆಯನ್ನು ನೆರವೇರಿಸುವುದಕ್ಕಾಗಿ ಈಡೀ ಊರು ಗೌಡ್ರ ದಾರಿ ಕಾಯುತ್ತಿತ್ತು. ರತಿ ಸತ್ತಿದ್ದಾಳೆಂಬ ಸತ್ಯವನ್ನು ಅವರಿಂದ ಸುಲಭವಾಗಿ ಅರಗಿಸಿಕೊಳ್ಳಲಾಗಲಿಲ್ಲ. ಪೋಲೀಸರು ಬಂದು ಒಂದೆರಡು ಬಾರಿ ಕಾಟಾಚಾರಕ್ಕೆ ವಿಚಾರಣೆ ನಡೆಸಿ ರತಿಯ ಸಾವನ್ನು ಆತ್ಮಹತ್ಯೆಯೆಂದು ಸಾರಿ ಹೋದರು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                    ಗೌಡ್ರ ಬದುಕು ವಿಧಿಯ ಕ್ರೂರತನಕ್ಕೆ ಕೊಚ್ಚಿಕೊಂಡು ಹೋಯಿತು. ಬದುಕಿದ್ದಾಗ ಒಂದಿನಾನೂ ರತಿಯೊಂದಿಗೆ ಮಾತನಾಡದ ಗೌಡ್ರು ಅವಳು ಸತ್ತ ನಂತರ ಅವಳ ಫೋಟೋ ಮುಂದೆ ನಿಂತು ಗಂಟೆಗಟ್ಟಲೆ ಮಾತನಾಡಿದರು. ಕೊನೆಗೆ ನನ್ನ ತಿರಸ್ಕಾರದಿಂದಲೇ ರತಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಭಾವಿಸಿ ತಮ್ಮನ್ನು ತಾವು ಸಮಾಧಾನ ಮಾಡಿಕೊಂಡರು. ಗೀತಾಳ ಪ್ರೀತಿಯ ನೆನಪುಗಳು, ರತಿಯ ಹುಚ್ಚಾಟದ ನೆನಪುಗಳು ಗೌಡ್ರನ್ನು ಕಾಡಿ ಕೊಲ್ಲಲು ಶುರುಮಾಡಿದವು. ಗೌಡ್ರು ಆತ್ಮಶಾಂತಿಗಾಗಿ ಸುಂದರವಾದ ಭಾರತ ದೇಶವನ್ನೆಲ್ಲ ಸುತ್ತಿ ಸಾಯಬೇಕು ಎಂದು ನಿರ್ಧರಿಸಿ ಊರಲ್ಲಿನ ಮನೆ, ಗದ್ದೆ, ಆಸ್ತಿ ಪಾಸ್ತಿಯನ್ನೆಲ್ಲ ಬಂದ ಬೆಲೆಗೆ ಮಾರಾಟ ಮಾಡಿ ವೈರಾಗಿಯಾಗಿ ಊರು ಬಿಟ್ಟು ಹೋದರು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                                       ಗೌಡ್ರು ಊರು ಬಿಟ್ಟು ಹೋದ ನಂತರ ಉಪಕಾರವರಿಯದ ಊರ ಜನ ಬೇಕಾಬಿಟ್ಟಿಯಾಗಿ ಮಾತಾಡಿದರು. ಅರ್ಥವಿರದ ಅವರ ಮಾತುಗಳ ಮಳೆಯಲ್ಲಿ ರತಿಯ ಸಾವಿನ ರಹಸ್ಯ ಬಯಲಾಯಿತು. ರತಿಯದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸತ್ಯ ಎಲ್ಲರ ಹರಕು ಬಾಯಲ್ಲಿ ನಲಿದಾಡಿತು. ಗೌಡ್ರು ತಮ್ಮ ಸಂಸಾರದ ಗುಟ್ಟನ್ನು ತಮ್ಮ ಗೆಳೆಯನಿಗೆ ಹೇಳಿದ್ದಲ್ಲದೆ, ಅವನಿಗೆ ತಮ್ಮ ಮನೆ ಜವಾಬ್ದಾರಿಯನ್ನು ವಹಿಸಿ ಹೋಗಿದ್ದು ದೊಡ್ಡ ತಪ್ಪಾಗಿತ್ತು. ಗೌಡ್ರು ಗೀತಾಳ ಊರಿನ ದಾರಿ ಹಿಡಿದಾಗ, ಅವರ ಗೆಳೆಯ ಅವರ ಮನೆಗೋಗಿ ಮನೆಯಲ್ಲಿ ಒಬ್ಬಳೇ ಇರುವ ರತಿಯ ಮನಸ್ಸು ಕೆಡಿಸಿದನು. "ಗೀತಾಳನ್ನು ಎರಡನೇ ಮದುವೆಯಾಗಲು ಗೌಡ್ರು ಅವಳೂರಿಗೆ ಹೋಗಿದ್ದಾರೆ" ಎಂಬ ಸತ್ಯವನ್ನು ರಸವತ್ತಾಗಿ ರತಿಯ ಕಿವಿಯಲ್ಲಿ ತುಂಬಿದನು. ರತಿ ಗೀತಾಳ ಮೇಲಿನ ಸೇಡಿಗೆ ಗೌಡ್ರನ್ನು ಮೋಸದಿಂದ ಮದುವೆಯಾಗಿದ್ದಳು. ಆದರೆ ಮತ್ತೆ ಗೌಡ್ರು ಗೀತಾಳನ್ನು ಮದುವೆಯಾಗುತ್ತಾರೆಂದು ಅವಳು ವ್ಯಾಕುಲಗೊಂಡಳು. ತಾನು ಗೌಡ್ರ ಮಡಿಲು ಸೇರದ ಪಾಪದ ಹೆಣ್ಣಾದೆ ಎಂದವಳು ವ್ಯಥಿಸಿದಳು. ಗೌಡ್ರ ಗೆಳೆಯ ಅವಳನ್ನು ಸಮಾಧಾನ ಮಾಡುವ ನಾಟಕವಾಡಿ ಅವಳಿಗೆ ಹತ್ತಿರವಾಗಿ ಮನೆಯಲ್ಲೇ ಉಳಿದುಕೊಂಡನು.

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                           ಎಲ್ಲರೂ ರಾತ್ರಿಯನ್ನು ಪ್ರೀತಿಸಿದರೆ, ರತಿ ಮಾತ್ರ ರಾತ್ರಿಯನ್ನು ದ್ವೇಷಿಸುತ್ತಿದ್ದಳು. ಕಚ್ಚಿ ಸಾಯಿಸುವ ಗುಪ್ತ ಆಸೆಗಳಿಗೆ ಅವಳು ಹೆದರುತ್ತಿದ್ದಳು. ಒಂಟಿತನದ ಬೇಗೆಗೆ ಅವಳು ಬಳಲಿ ಬೆಂಡಾಗುತ್ತಿದ್ದಳು. ಗೌಡ್ರು ತನ್ನನ್ನು ಬಯಸಿ ತನ್ನ ಬಳಿ ಬರಬಹುದು ಎಂಬ ಹುಚ್ಚು ಬಯಕೆಯಲ್ಲಿ ಬಾಗಿಲ ಚಿಲಕ ಹಾಕದೆ ಅರೆಬೆತ್ತಲೆಯಾಗಿ ಮಲಗಿ ರೋಧಿಸುತ್ತಿದ್ದಳು. ಅವತ್ತು ಸಹ ಅವಳು ಅದನ್ನೇ ಮಾಡಿದಳು. ಬಾಗಿಲ ಚಿಲಕ ಹಾಕಿಕೊಳ್ಳದೆ ಕೋಣೆ ಸೇರಿ ಭಾರವಾದ ಒಡವೆಗಳನ್ನು ಬಿಚ್ಚಿಟ್ಟು ನಿರಾಭರಣ ಅರೆನಗ್ನ ಸುಂದರಿಯಾಗಿ ಅವಳು ಹಾಸಿಗೆಯ ಮೇಲೆ ಉರುಳಿದಳು. ರತಿ ತನ್ನ ರಸಿಕ ಕನಸುಗಳನ್ನು ಕಾಣುತ್ತಾ ಮೈಮರೆತಳು. ಗೌಡ್ರ ಗೆಳೆಯ ಅವಳ ಕೋಣೆಗೆ ನುಗ್ಗಿ ಅವಳ ಸೌಂದರ್ಯವನ್ನು ನೋಡುತ್ತಾ ಹಾಗೆಯೇ ನಿಂತನು. ನಂಬಿಕಸ್ಥ ಗೆಳೆಯನಿಗೆ ಮೋಸ ಮಾಡಲು ಮನಸ್ಸಾಗದೆ ಆತ ನಾಚಿ ಹೊರ ಬಂದನು. ರತಿಯಂಥ ಸುಂದರಿಯ ಜೊತೆ ಸುಖವಾಗಿ ಸಂಸಾರ ಮಾಡುವುದನ್ನು ಬಿಟ್ಟು ಗೀತಾಳನ್ನು ಹುಡುಕಿಕೊಂಡು ಹೋದ ಗೌಡ್ರ ಮೇಲೆ ಆ ಗೆಳೆಯನಿಗೆ ಸ್ವಲ್ಪ ಕೋಪ ಬಂತು. ಗಂಡನ ಸ್ಪರ್ಶಸುಖಕ್ಕಾಗಿ ವರ್ಷದಿಂದ ಕಾಯುತ್ತಾ ಕೊರಗುತ್ತಿರುವ ರತಿಯ ಮೇಲೆ ಅನುಕಂಪವೂ ಬಂತು. 

ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

                ಅವನು ಎಷ್ಟೇ ಪ್ರಯತ್ನಿಸಿದರೂ ಅವನ ವಿಕೃತ ಮನಸ್ಸು ಅವನ ಮಾತನ್ನು ಕೇಳಲಿಲ್ಲ. ರತಿ ಕನಸ್ಸಲ್ಲಿ ಗೌಡ್ರನ್ನು ಪರಿತಪಿಸುತ್ತಿದ್ದಳು. ಅರೆನಿದ್ದೆಯಲ್ಲಿ ಅವರನ್ನು ಕರೆಯುತ್ತಿದ್ದಳು. ಗೌಡ್ರ ಗೆಳೆಯ ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲು ರತಿಯ ಕೋಣೆ ಸೇರಿ ಅವಳ ಪಕ್ಕ ಮೆಲ್ಲನೆ ಉರುಳಿ ಅವಳನ್ನು ಅಪ್ಪಿಕೊಂಡನು. ರತಿಗೆ ಎಚ್ಚರವಾಯಿತು. ಆದ್ರೆ ಗೌಡ್ರು ಮನೆಯಲ್ಲಿಲ್ಲ ಎಂಬುದು ಅವಳಿಗೆ ಮರೆತು ಹೋಗಿತ್ತು. ಕನಸುಗಳ ಹಾವಳಿಯಲ್ಲಿ ಅವಳು ಗೌಡ್ರ ಗೆಳೆಯನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. ಆದರೆ ಕೊನೆಗೆ ಅವಳಿಗೆ ತನ್ನ ತಪ್ಪಿನ ಅರಿವಾಯಿತು. ಅವಳು ಎದೆಬಡಿದುಕೊಂಡು ಅಳಲು ಪ್ರಾರಂಭಿಸಿದಳು. ಅವಳು ರಂಪಾಟ ಮಾಡುತ್ತಾಳೆಂದು ಆತ ಅವಳ ಬಾಯ್ಮುಚ್ಚಲು ಪ್ರಯತ್ನಿಸಿದನು. ಆದರೆ ಆಕೆ ಜೋರಾಗಿ ಕೀರಚಾಡಿದಾಗ ಭಯದಲ್ಲಿ ಆತ ಅವಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದನು. ನಂತರ ಯಾರಿಗೂ ಅನುಮಾನ ಬರದಂತೆ ಅವಳನ್ನು ನೇಣಾಕಿ ಅಲ್ಲಿಂದ ಫರಾರಿಯಾಗಿದ್ದನು. ನೀಚ ರಾಜಕಾರಣಿಗಳ ಮಾತುಗಳನ್ನು ಕೇಳಿ ಗೌಡ್ರನ್ನು ವಂಚಿಸಿ ಮದುವೆಯಾದ ರತಿ ಕೊನೆಗೆ ಮೂರನೇ ವ್ಯಕ್ತಿಯ ಕಾಮದಾಸೆಗೆ ಬಲಿಯಾಗಿ ಅನ್ಯಾಯವಾಗಿ ಕೊಲೆಯಾದಳು....


ಕೊಲೆಯಾದಳು ಹುಡುಗಿ : ಒಂದು ಸೇಡಿನ ಪ್ರೇಮಕಥೆ

Note : All Commercial Rights of this story are reserved by Roaring Creations Films. This is fully imaginary story and does't belongs to anyone in anyway. This story is written for commercial purpose only. So please don't take it too seriously. 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story Reviewed by Director Satishkumar on March 21, 2018 Rating: 4.5
Powered by Blogger.