೧) ಬಾಳಲ್ಲಿ ಬೆಳ್ಳಿ ಚುಕ್ಕಿ ಮೂಡಿದಾಗ
ಹೃದಯದಲಿ ಪ್ರೀತಿ ಉಕ್ಕಿ ಬಂತು.
ಆದರೆ ಜೊತೆಯಲ್ಲಿ ನೀನಿಲ್ಲದ ಕೊರಗು
ಅರಳುವ ಕಣ್ಣಲ್ಲಿ ಕಣ್ಣೀರ ತಂತು...
೨) ಬದುಕಿನ ಜ್ಯೋತಿ
ಆರಿಸಿತು ಪ್ರೀತಿ
ಕಾರಣವಾಯಿತು ಜಾತಿ
ಇದಕ್ಕ್ಯಾರು ಹೇಳ್ತಾರೆ ನೀತಿ?
೩) ಸೌಂದರ್ಯ ಸಂಪತ್ತಿನ ಪ್ರೀತಿ ಲೆಕ್ಕಾಚಾರ
ಎರಡು ಸ್ವಾರ್ಥ ಹೃದಯಗಳ ವ್ಯಭಿಚಾರ
ಮೋಸ ಹತಾಶೆಯೇ ಅದರ ಗ್ರಹಚಾರ
ಇಲ್ಲವೇ ಬೇಲಿ ಹಾರಿದ ಕಾಮಾಚಾರ...
೪) ಹರಿದ ಚಪ್ಪಲಿಯಂತೆ
ಮುರಿದ ಮನಸು,
ಪಾದವಿಡಲು ಹಿಂಜರಿಯುವುದು
ಮತ್ತೆ ಒಂದಾಗುವ ಕನಸು...
೫) ಮನಸ್ಸಿನ ಭಾವ, ಮಾಡಿದೆ ನೋವ
ಖುಷಿಯಲಿ ಕೊರಗುತಿದೆ ಜೀವ
ಕಾರಣವಾಗಿದೆ ಸಿಗದೇ ಹೋದ
ಒಂದು ಪ್ರೀತಿ ಹೂವ...
೬) ಮರುಳಾದೆನು ಕಪಟ ಪ್ರೀತಿಗೆ
ಬಲಿಯಾದೆನು ಅಪ್ಪಟ ನೋವಿಗೆ
ಶರಣಾಗುವುದಿಲ್ಲ ನಾನು ಸಾರಾಯಿಗೆ
ಮೋರೆ ಹೋಗುವುದಿಲ್ಲ ನಾ ಸಾವಿಗೆ
ಅವಳ ಕಪಟ ಪ್ರೀತಿಯಲ್ಲ ಬಾಳ ದೀವಿಗೆ...
೭) ಕೇಳು ಓ ನನ್ನ ಮನದರಸಿ
ಬಂದಿರುವೆ ನಾ ನಿನ್ನನ್ನೇ ಅರಸಿ
ಅಪ್ಪಿಕೋ ನನ್ನನ್ನು ಕಣ್ಣೀರ ಒರೆಸಿ
ಪ್ರೀತಿಯಿದ್ದರೂ ಕಾಡದಿರು ಸತಾಯಿಸಿ...
೮) ಮೊದಲು ನಾ ಯೋಚಿಸುತ್ತಿದ್ದೆ
ಅವಳ ಪ್ರೀತಿಗೆ ಬೆಲೆ ಕಟ್ಟಲಾಗದೆಂದು,
ಆದರೆ ಈಗ ನಾ ಯೋಚಿಸುತ್ತಿದ್ದೇನೆ
ಅವಳ ಮೋಸಕ್ಕೆ ಸುಂಕ ಕಟ್ಟಬೇಕೆಂದು...
೯) ಕೆಲ ಲಾಸ್ಯ ಲಲನಾಮಣಿಯರ ಪ್ರೀತಿ
ಸ್ವಾರ್ಥ ಮೋಹದ ಬಲೆಯು ಮಾತ್ರ
ಅವರಿಗೆ ನೀ ನೀಡದಿರು ಪ್ರೇಮಪತ್ರ
ಏಕೆಂದರೆ ಮದುವೆಯ ಮುಂಚೆಯೇ
ಸಿಗುತ್ತೆ ನಿನಗೆ ವಿಚ್ಛೇದನ ಪತ್ರ...
೧೦) ದ್ವಿಮುಖ ಪ್ರೀತಿಯಲ್ಲಿ ನೀ ಹಾರಿಸಿದೆ ಕಾಗೆ
ಜೀವನವನ್ನೇ ಸುಡುತ್ತಿದೆ ವಿರಹದ ಬೇಗೆ
ಹೃದಯದಲ್ಲಿ ಈಗ ಬರೀ ನೋವಿನ ಬೇಸಿಗೆ
ಹೀಗಿರುವಾಗ ನಾ ಹೇಗೆ ಮೂಡಿಸಲಿ?
ನಮ್ಮಿಬ್ಬರ ಪ್ರೀತಿಗೆ ಮರು ಬೇಸುಗೆ...
೧೧) ಗೆಳತಿ ನೀ ಎಲ್ಲೆಯಿರು, ಹೇಗೆಯಿರು
ಯಾರೊಂದಿಗೆ ಬೇಕಾದರೂ ಇರು
ಕೊನೆಯವರೆಗೂ ನಗುನಗುತಾ ಇರು
ಆದರೆ ಒಂದನ್ನು ಮಾತ್ರ ಮರೆಯದಿರು,
ನಿನಗಾಗಿಯೇ ಕಾಯುತ್ತಿರುತ್ತದೆ
ನನ್ನೆದೆಯ ಸೂರು...
೧೨) ಮನಸ್ಸೇ ಇಲ್ಲದವಳು ಮನಸ್ಸನ್ನು ಸೇರಿಹಳು
ಮನಸ್ಸನ್ನು ಒಡೆದವಳು ಮನಸ್ಸಲ್ಲೇ ಉಳಿದಿಹಳು
ಕನಸಲ್ಲಿ ಬಂದು ಕಾಡಿಸಿದವಳು
ಈಗ ಆ ಕಣ್ಣನ್ನೇ ಚುಚ್ಚಿ ದೂರ ನಡೆದಿಹಳು...
೧೩) ಆಮ್ಲಜನಕವಿರದಿದ್ದರೂ
ನಾ ಬದುಕಬಲ್ಲೆ. ಆದರೆ
ನೀನಿಲ್ಲದೆ ನಾ ಬದುಕಲಾರೆ...
ಸೂರ್ಯನ ಬೇಗೆಯನ್ನು
ನಾ ಜೀವನವೀಡಿ ತಾಳಬಲ್ಲೆ.
ಆದರೆ ವಿರಹದ ಬೇಗೆಯನ್ನು ಕ್ಷಣವೀಡಿ ತಾಳಲಾರೆ...
೧೪) ಸ್ನೇಹಿತರಿಗೆ ಸ್ನೇಹಿತರ ದಿನವಿದೆ
ಪ್ರೇಮಿಗಳಿಗೆ ಪ್ರೇಮಿಗಳ ದಿನವಿದೆ
ಆದರೆ ನಮ್ಮಂಥ ವಿರಹಿಗಳಿಗೆ
"ವಿರಹಿಗಳ ದಿನ" ಯಾಕಿಲ್ಲ?
ನಮ್ಮ ನೋವು ನಮ್ಮನ್ನು ಪ್ರೀತಿಸಿದವಳಿಗೆನೇ
ಅರ್ಥವಾಗ್ತಿಲ್ಲ. ಇನ್ನೂ ನಿಮಗೇನು ಅರ್ಥವಾಗುತ್ತೆ.
ನಮ್ಮ ನೋವು ನಮ್ಮನ್ನು ಪ್ರೀತಿಸಿದವಳಿಗೆನೇ
ಅರ್ಥವಾಗ್ತಿಲ್ಲ. ಇನ್ನೂ ನಿಮಗೇನು ಅರ್ಥವಾಗುತ್ತೆ.
೧೫) ಸೆಳೆದಳು ಸೆಲೆಗೆ
ಬೀಳಿಸಿದಳು ಬಲೆಗೆ
ಕೊಟ್ಟಳು ಸಲಿಗೆ
ಮಾಡಿದಳು ಸುಲಿಗೆ...
೧೬) ನನ್ನವಳು ಆಗಿದ್ದಳು ರಾಧೆ
ಆಗಾಗ ಹೇಳುವಳು ಗಾದೆ
ಈಗೀಗ ತೆಗೆಯುವಳು ತಗಾದೆ
ಮುನಿದರೆ ಕೊಡುವಳು ಒದೆ...
೧೭) ಆಧುನಿಕ ಪ್ರೀತಿಯಲ್ಲಿನ
ಅಮರ ಪ್ರೇಮಿ,
ಯಾವುದೇ ರೋಗವಿಲ್ಲದೆ
ನರಳುವ ಮಹಾನ್ ರೋಗಿ...
೧೮) ಕಾರಣ ಗೊತ್ತಿದ್ದರೂ ದು:ಖಿಸುತ್ತಿದೆ
ನನ್ನ ಕರುಣೆಯಿಲ್ಲದ ಅಕ್ಷಿ.
ಏಕೆಂದರೆ ಕಾರಣವಿಲ್ಲದಿದ್ದರೂ
ದೂರಾಗಿದೆ ನನ್ನ ಹೃದಯದ ಪಕ್ಷಿ...
೧೯) ನೀ ನನಗೆ ಸಿಗಲು ಏನು ಕಾರಣ?
ನನ್ನ ಹೃದಯ ಮಿಡಿತಕ್ಕೆ
ಬರೆದೆ ನೀ ಪ್ರೇಮ ಚರಣ
ಚಿಟ್ಟೆಯಂತೆ ಪಕ್ಷಾಂತರ ಮಾಡಿ ತಂದೆಯೇಕೆ ಮರಣ?
೨೦) ಏ ಪ್ರೀತಿಯೆಂಬ ಮಾಯ
ಯಾಕೆ ಮಾಡಿದೆ ನನ್ನ ಮನಸಿಗೆ ಗಾಯ?
ಹಾಳಾಗಿದೆ ನನ್ನ ಇದ್ದದ್ದೊಂದು ಹೃದಯ
ಮರಳಿ ನೀಡುವೆಯಾ ನೀ, ನನ್ನ ಪ್ರಾಯ?
೨೧) ಕೇಳದೆ ನೀ ಕಟ್ಟಿದ ರಾಖಿ
ತಪ್ಪಿಸಿದೆ ನೀನಾಗುವುದು ನನ್ನ ಸಖಿ
ನನ್ನಿಂದ ದೂರಾದ ನೀನಲ್ಲ ಸುಖಿ
ಕೇಳೇ ಗೆಳತಿ, ನಿನ್ನಂತೆ ನಾನೂ ದು:ಖಿ...
೨೨) ನಿನ್ನಿಂದಲೇ ಬಾಡಿದೆ ನಮ್ಮ ಪ್ರೇಮದ ಮೊಗ್ಗು
ಅಳುತ್ತಿದೆ ಮನದಲಿ ನಿನ್ನ ಪ್ರೀತಿಯ ಮಗು
ಕೇಳುತ್ತಿಲ್ಲವೇ ಅದರ ಆಕ್ರಂದನದ ಕೂಗು?
ಕರುಣೆಯಿದ್ದರೆ ಸಂತೈಸಿ ನನ್ನೊಡನೆ ಸೇರಿ ಸಾಗು
ಇಲ್ಲವೇ ನನ್ನ ಸಮಾಧಿ ಸೇರಿಸಿ ಮುಂದೆ ಹೋಗು...
೨೩) ಕನಸಲ್ಲಿಯೂ ನಿನ್ನದೇ ಕನವರಿಕೆ
ನಾ ಮಾಡಬೇಕೆ ನನ್ನ ಪ್ರೀತಿಯ ಮನವರಿಕೆ
ಪ್ರೀತಿ ನಿನಗೇಕೆ ವಿರಹದ ಅವತರಣಿಕೆ
ನೀ ನೀಡುತ್ತಿಯಾ ನನ್ನ ಭಾವಕ್ಕೆ ಚೇತರಿಕೆ
ಆಗದಿರೇ ನೀನೆಂದು ನನಗೆ ಮರೀಚಿಕೆ
ಏಕೆಂದರೆ ನೀನೇ ನನ್ನ ಬದುಕಿನ ಶೀರ್ಷಿಕೆ...
೨೪) ನಿನ್ನನ್ನು ನನ್ನ ಕಡೆ ಉಸಿರಿರೋವರೆಗೂ ಪ್ರೀತಿಸಬೇಕೆಂದೆ, ಆದ್ರೆ ಸಾಧ್ಯವಾಗಲಿಲ್ಲ. ನಿನ್ನನ್ನು ನನ್ನ ಕಡೆ ಉಸಿರು ನಿಂತರೂ ದ್ವೇಷಿಸಬಾರದೆಂದುಕೊಂಡಿದ್ದೆ, ಆದ್ರೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ನೀ ಪ್ರಾಣ ಹೋಗೋ ಸಂದರ್ಭದಲ್ಲಿ "ಪ್ರಾಣ ಕೊಡ್ತೀನಿ ಕಣೋ" ಅಂದಿದ್ದೆ. ಆದ್ರೆ ನಾ ಬದುಕಿರುವಾಗಲೇ ನೀ ಇನ್ನೊಬ್ಬನ ಕೈಹಿಡಿದು ನನ್ನ ಜೀವಂತಶವ ಮಾಡಿ ಬಿಟ್ಟಿದ್ದೆ...
೨೫) ಬಾರು ಬಾ..ಬಾ.. ಅಂತಾ ಕರೆಯುತಿತ್ತು.
ಮನಸ್ಸು ಹೋಗು..ಹೋಗು.. ಅಂತಾ ಹೇಳುತಿತ್ತು.
ಎದೆಯಲ್ಲಿ ಕಾರಣವಿಲ್ಲದೆ ದೂರಾದ ಗೆಳತಿಯ ನೆನಪು ನೋವಾಗಿ ಪದೇ ಪದೇ ಕಾಡುತಿತ್ತು.
ಪ್ರತಿಸಲವೂ ಅವಳನ್ನು ಮರೆಯಲೆಂದು ಕುಡಿಯಲು ಹೋದಾಗ, "ನಾನು ಕುಡಿದು ಹಾಳಾಗುತ್ತಿದ್ದೇನೆ ಎಂದು ನನ್ನವಳಿಗೆ ಗೊತ್ತಾದರೇ ಅವಳು ಕೊರಗುತ್ತಾಳೆ" ಎಂಬ ಅನಾಥಪ್ರಜ್ಞೆ ನನ್ನನ್ನು ಸರಿದಾರಿಯಲ್ಲಿ ನಡೆಸುತಿತ್ತು...