ಮುರಿದ ಮನಸ್ಸಿನ 20 ಮಾತುಗಳು - 20+ Sad Love Quotes in Kannada - kannada feelings quotes - Kannada Sad whatsapp status - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮುರಿದ ಮನಸ್ಸಿನ 20 ಮಾತುಗಳು - 20+ Sad Love Quotes in Kannada - kannada feelings quotes - Kannada Sad whatsapp status

ಮುರಿದ ಮನಸ್ಸಿನ 20 ಮಾತುಗಳು : Kannada Sad WhatsApp Love Status

೧) ಪ್ರೀತಿಸಿ ಮದ್ವೆಯಾಗ್ತೀನಿ ಅಂತಾ ವಂಚಿಸಿದ ಹುಡುಗನಿಗೆ ಶಿಕ್ಷೆ ವಿಧಿಸಲು ನೂರಾರು ಸೆಕ್ಷನಗಳಿವೆ. ಆದ್ರೆ ಪ್ರೀತಿಸಿ ಮದ್ವೆಯಾಗ್ತೀನಿ ಅಂತಾ ವಂಚಿಸಿದ ಹುಡುಗಿಗೆ ಶಿಕ್ಷೆ ವಿಧಿಸಲು ಯಾವ ಸೆಕ್ಷನಯಿದೆ?. ಯಾವ ಕೋರ್ಟಿಗೆ ಪುರಸೋತ್ತಿದೆ? ಎಲ್ಲ್ರೂ ಬರೀ ಹುಡುಗಿಯರ ಕಷ್ಟಕ್ಕೇನೆ ಕರಗುತ್ತಾರೆ. ಹುಡುಗರ ಕಷ್ಟಕ್ಕೆ ಯಾರ ಕೇರ್ ಮಾಡ್ತಾರೆ?

Sad Love Feelings Quotes in Kannada

೨) ವಿರಹಿಗಳು ಲವ್ ಫೇಲ್ಯುವರ್ ಆಯ್ತಂತಾ ಪ್ರೇಮಿಗಳ ಬಗ್ಗೆ, ಪ್ರೀತಿಯ ಬಗ್ಗೆ ಎಲ್ಲಿಯೂ ಹಗುರವಾಗಿ ಮಾತಾಡಲ್ಲ. ಯಾಕೆಂದರೆ ವಿರಹಿಗಳು ಮಕ್ಕಳಾಗದ ಬಂಜೆ ಮನಸ್ಸಿನವರಲ್ಲ...

Sad Love Feelings Quotes in Kannada

೩) ಬದುಕುವುದಕ್ಕಾಗಿ  ಮೈಮಾರಿಕೊಳ್ಳೊ ಹುಡುಗಿಯರನ್ನು ನಾನು ಗೌರವಿಸುತ್ತೀನಿ. ಆದರೆ ಅರಮನೆಯಲ್ಲಿ ಬದುಕುವುದಕ್ಕಾಗಿ ಮನಸ್ಸು ಮಾರಿಕೊಂಡ ಅವಳನ್ನು ದ್ವೇಷಿಸುತ್ತೇನೆ. ಸಮಯ ಸಾಧಕಿ ಅವಳು...

Sad Love Feelings Quotes in Kannada

೪) ಎಷ್ಟಂತ ದ್ವೇಷಿಸಲಿ ಗೆಳತಿ ನಿನ್ನ
ನನ್ನೆದೆಯಲ್ಲಿನ ಪ್ರೀತಿ ಬತ್ತೋದ ಮೇಲೆ...
ಎಷ್ಟಂತ ನೆನೆಯಲಿ ಮನದೊಡತಿ ನಿನ್ನ
ನನ್ನೆದೆಯಲ್ಲಿ ನೀನು ಸತ್ತೋದ ಮೇಲೆ...

Sad Love Feelings Quotes in Kannada


೫) ನೀನೇ ನನ್ನವಳೆಂದು ಹೇಗೆ 
ನಾ ಕೂಗಿ ಕೂಗಿ ಹೇಳಲಿ? 
ನೀ ನನ್ನಿಂದ ದೂರಾಗಿ ಇನ್ನೊಬ್ಬನನ್ನು 
ವರಿಸಲೆಂದು ಹಸೆಮಣೆಯೇರಿ ನಗುನಗುತ್ತಾ ಕುಳಿತಾಗ...??


Sad Love Feelings Quotes in Kannada

Sad Love Feelings Quotes in Kannada

೬) ಅವಳನ್ನು ಮರೆಯುವುದಕ್ಕಾಗಿ ನಾನು ಲೂಸಿಯಾ ಮಾತ್ರೆಯನ್ನು ಹುಡುಕುತ್ತಿರುವೆ... ಈ ಮರೆವು ಅನ್ನೋ ಶಾಪ ನನಗೆ ಬೇಗನೆ ಬರಬಾರದಿತ್ತಾ ಅಂತಾ ಅನ್ನಿಸ್ತಿದೆ. ಯಾಕೆಂದರೆ ಜನ ಸತ್ತ ಹೆಂಡತಿಯನ್ನು ಮರೆತು ಹಾಯಾಗಿರುವಾಗ, ನಾನು ಅದೇ ಹಳೇ ಹುಡುಗಿಯನ್ನು ನೆನಪಲ್ಲಿಟ್ಟುಕೊಂಡು ಕೊರಗುತ್ತಿದ್ದೇನೆ...

Sad Love Feelings Quotes in Kannada

೭) ನಿನ್ನ ಹುಸಿ ಪ್ರೀತಿಯ ಉಸಿರು ತಾಕಿ
ಕೆಸರು ಗದ್ದೆಯಾಗಿದೆ ಹೃದಯದ ಇಳೆ.
ಮತ್ತೇ ನೀ ಮಳೆಯಾಗಿ ಬಂದರೆ
ತೊಳೆದು ಹೋಗಬಹುದೇ ವಿರಹದ ಕೊಳೆ ?

Sad Love Feelings Quotes in Kannada

೮) ಸನಿಹಕೆ ಬರದ ಸ್ನೇಹ ಜೊಳ್ಳಲ್ಲ
ಹೃದಯಕೆ ಬರದ ಪ್ರೀತಿ ಗೊಳ್ಳಲ್ಲ...
ಪ್ರೀತಿ ಬರೀ ಫಜೀತಿ. ಆದರೂ
ನನಗೆ ಬೇಕು ನಿನ್ನ ಪ್ರೀತಿ...

Sad Love Feelings Quotes in Kannada

೯) ಪ್ರೀತಿಯನ್ನು ಒಂದು ಖಾಲಿ ಪುಟದಲ್ಲಿಯೂ, ಒಂದೇ ಒಂದು ಕಣ್ಸನ್ನೆಯಲ್ಲಿಯೂ ವ್ಯಕ್ತಪಡಿಸಬಹುದು. ಆದರೆ ವಿರಹ ಹಂಗಲ್ಲ. ಸಾವಿರಾರು ಪುಟಗಳಷ್ಟು ಬರೆದರೂ ವಿರಹ ಮುಗಿಯಲ್ಲ...

Sad Love Feelings Quotes in Kannada

೧೦) ನೀ ನೀರಾದರೆ, 
ನಾ ಈಜು ಮರೆತ ಮೀನಾಗುವೆ...
ನೀ ಸಂಗೀತವಾದರೆ,
ನಾ ಮರೆತ ಸ್ವರವಾಗುವೆ...

Sad Love Feelings Quotes in Kannada

೧೧)  ಸುತ್ತಲೂ ಬೆಳಕಿದೆ. ಆದರೆ
ನನ್ನ ಕಂಗಳಿಗೆ ಕತ್ತಲು ಕವಿದಿದೆ.
ಸುತ್ತಲೂ ನಗುವಿದೆ. ಆದರೆ
ನನ್ನ ತುಟಿಗಳಿಗೆ ಸಿಡಿಲು ಬಡಿದಿದೆ.
ಸುತ್ತಲೂ ಹರ್ಷವಿದೆ. ಆದರೆ 
ನನ್ನೆದೆಯಲ್ಲಿ ಶೋಕ ಕವಿದಿದೆ...

Sad Love Feelings Quotes in Kannada

೧೨) ನಿನ್ನ ಬದುಕಿನಲ್ಲಿ ನಾನು ಮುಗಿದ ಹೋದ ಅಧ್ಯಾಯವಾಗಿರಬಹುದು. ಆದರೆ ನನ್ನೆದೆಯ ಗೋಡೆ ಮೇಲಿರೋ ನಿನ್ನ ನೆನಪು ಎಂದು ಮುಗಿಯದ, ಮರೆಯದ ಅಧ್ಯಾಯ...

Sad Love Feelings Quotes in Kannada

೧೩)  ನನ್ನ ಕಣ್ಣೀರಿನ ಅಂತರ್ಜಲ ಯಾವತ್ತೂ ಬತ್ತಲ್ಲ ಅನ್ನೋದು ಅವನಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದಲೇ ಆತ ನನ್ನ ಕಣ್ಣೀರಿನ ಈಜುಕೊಳದಲ್ಲಿ ಜಲಕ್ರೀಡೆಯಾಡಿ ಸಂಭ್ರಮಿಸುತ್ತಿದ್ದಾನೆ...

Sad Love Feelings Quotes in Kannada


೧೪) ನೆನಪುಗಳ ನೋವಲ್ಲಿ ನನ್ನ ನಗು ಮಡಿದು ಹೋಗಿದೆ. ಮತ್ತೆ ನನ್ನ ತುಟಿ ಮೇಲೆ ನೈಸರ್ಗಿಕ ನಗು ಅರಳೊದು ಅನುಮಾನವೇ ಸರಿ. ಯಾಕೆಂದರೆ ಕೊನೆತನಕ ಅವಳು ನಗುನಗುತ್ತಾ ಇರಬೇಕು ಎಂಬ ಕಾರಣಕ್ಕೆ ನನ್ನ ನಗುವನ್ನು ಆಕೆಗೆ ಧಾರೆಯೆರದು ಕೊಟ್ಟಿರುವೆ... 

Sad Love Feelings Quotes in Kannada


೧೫) ಅವಳ ನಗುವಿನ ಹಿಂದೆ ಒಂದು ವಂಚನೆ ಅಡಗಿದೆ. ಆದರೆ ನನ್ನ ಕೃತಕ ನಗುವಿನ ಹಿಂದೆ ನೂರಾರು ನೋವುಗಳು ನಲಿದಾಡುತ್ತಿವೆ. "ನಗು ಬರುವಂತೆ ಅಳಬೇಕು. ಅಳು ಬರುವಂತೆ ನಗಬೇಕು" ಎಂಬ ಪಾಠಗಳನ್ನು ನನಗೆ ಕಲಿಸಿದವಳು, ಈಗ  ಪಾಠಗಳನ್ನು  ಮರೆತು ಕೊರಗುತ್ತಿದ್ದಾಳೆ...

Sad Love Feelings Quotes in Kannada

೧೬) ನನ್ನ ಮಾತು ಮಮತೆಯ ಮುತ್ತಾಗಿ ನನ್ನ ಮನದೊಡತಿಯ ಮನಸೇರಿ, ಅವಳ ಮೌನ ಮತ್ತೆ ಮಾತಾಡುವಂತೆ ಮಾಡುತ್ತೆ ಎಂಬ ಹುಚ್ಚು ನಂಬಿಕೆಯ ಮೇಲೆ ನನ್ನೆದೆ ಯಾಂತ್ರಿಕವಾಗಿ ಮಿಡಿಯುತ್ತಿದೆ...

Sad Love Feelings Quotes in Kannada

೧೭) ಕೈಕೊಟ್ಟು ಹೋದ ಲವ್ವರಗಿಂತ ಬೆಸ್ಟ ಟೀಚರರಿಲ್ಲ. ಇವತ್ತು ಪ್ರೀತಿಸಿ ನಾಳೆ ಮರೆತು ಬಿಡೋಕೆ ಪ್ರೀತಿಯ ನೆನಪುಗಳೇನು ಮ್ಯಾಥ್ಸನ ಸೂತ್ರಗಳಲ್ಲ. ಅವು ಹೃದಯದ ಸೂತ್ರಗಳು. ಅವುಗಳನ್ನು ಸತ್ರು ಮರೆಯೋಕ್ಕಾಗಲ್ಲ...

Sad Love Feelings Quotes in Kannada

೧೮) ನಾನು ಅವಳೊಬ್ಬಳನ್ನು ದ್ವೇಷಿಸಬಹುದು. ಆದರೆ ಹೆಣ್ಣನ್ನು ದ್ವೇಷಿಸಲ್ಲ. ಯಾಕೆಂದರೆ ನನಗೆ ಜನ್ಮ ಕೊಟ್ಟ ತಾಯಿ ಹೆಣ್ಣು , ಜಾಗ ಕೊಟ್ಟ ಭೂಮಿ ಹೆಣ್ಣು,  ಅಕ್ಷರ ಹೇಳಿಕೊಟ್ಟ ಶಿಕ್ಷಕಿ ಹೆಣ್ಣು, ಅಕ್ಕರೆ ತೋರಿಸಿದ ಸೋದರಿ ಹೆಣ್ಣು, ವಾತ್ಸಲ್ಯ ತೋರಿಸಿದ ಗೆಳತಿ ಹೆಣ್ಣು, ಮುಂದೆ ಮುದ್ದಿಸುವ ಮಡದಿಯೂ ಹೆಣ್ಣು... 

Sad Love Feelings Quotes in Kannada

೧೯) ಪ್ರೀತಿಸಿದ ಹುಡುಗಿ ಬಿಟ್ಟೋದ ನಂತರ ಹುಡುಗರು ಪೋಲಿ ಕಾವ್ಯ ಬರೆಯದೇ ಏನ ಪ್ರೇಮಕಾವ್ಯ ಬರೆಯೋಕ್ಕಾಗತ್ತಾ? ನೀ ಓದಿದರೂ, ಓದದಿದ್ದರೂ ನಾ ಪುಟತುಂಬ ಬರೆಯುವೆನು... ಎದೆತುಂಬಿ ಹಾಡುವೆನು... 

Sad Love Feelings Quotes in Kannada

೨೦) ಪ್ರೀತಿಯೆಂಬ ಹೃದಯಗಳ ವಿಷಯದಲ್ಲಿ ವಿರಹವೆಂಬ ವಿಷ ಬರದಿರಲಿ ಅನ್ನೋದೆ ಎಲ್ಲ ಮುರಿದ ಮನಸ್ಸುಗಳ ಮುಗ್ಧ ಕೋರಿಕೆ...

Sad Love Feelings Quotes in Kannada
Blogger ನಿಂದ ಸಾಮರ್ಥ್ಯಹೊಂದಿದೆ.