ಒಂದು ರೊಮ್ಯಾಂಟಿಕ್ ಪ್ರೇಮಕಥೆ - ಸಂಜೆರಾಣಿಯ ಮೊದಲ ರಾತ್ರಿ - Kannada Hot Stories

Roaring Creations Kannada
ಸಂಜೆರಾಣಿಯ ಮೊದಲ ರಾತ್ರಿ  ಒಂದು ರೊಮ್ಯಾಂಟಿಕ್ ಪ್ರೇಮಕಥೆ
                           ರಾಕೇಶನಿಗೆ ವಯಸ್ಸು ಮೀರಿ ಹೋಗುತ್ತಿದ್ದರು ಇನ್ನೂ ಮದುವೆಯಾಗಿರಲಿಲ್ಲ. ಎಷ್ಟು ಹುಡುಕಿದರೂ ಅವನಿಗೆ ಒಂದೊಳ್ಳೆ ಹೆಣ್ಣು ಸಿಗುವುದು ಕಠಿಣವಾಗಿತ್ತು. ಅವನು ಚಿಕ್ಕ ವಯಸ್ಸಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಬಂಧುಗಳ ನೆರಳಲ್ಲಿ ಬೇರೆ ಮನೆಯಲ್ಲಿ ಬದುಕುತ್ತಿದ್ದನು. ಅವನ ಒಂಟಿ ಮನೆಗೆ ಒಬ್ಬಳು ಮಹಾರಾಣಿಯ ಕೊರತೆಯಿತ್ತು. ಎಷ್ಟು ಹುಡುಕಿದರೂ ಅವನ ಜಾತಿಯಲ್ಲಿ ಅವನಿಗೆ ಸರಿಯಾದ ಹೆಣ್ಣು ಸಿಗಲಿಲ್ಲ. ಅವನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದನು. ಆಗ ಅವನ ಕಣ್ಣಿಗೆ ಸುಮಾ ಬಿದ್ದಳು. ಅವಳು ಒಂದು ಅನಾಥ ಮಕ್ಕಳ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಅವನಿಗೆ ಅವಳು ಮೊದಲ ನೋಟದಲ್ಲೇ ಇಷ್ಟವಾದಳು. ಅವಳಿಗೇನೊ ದೋಷವಿರುವುದರಿಂದ ಅವಳಿಗಿನ್ನು ಮದುವೆಯಾಗಿರಲಿಲ್ಲ. ಗಂಡುಗಳ ತಾತ್ಸಾರಕ್ಕೆ ಬೇಸತ್ತು ಅವಳು ಮದುವೆಯೇ ಬೇಡವೆಂದು ತನ್ನ ಕೆಲಸದಲ್ಲಿ ತಲ್ಲಿನನಾಗಿದ್ದಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
            ರಾಕೇಶ್ ಮೊದಲಿನಿಂದಲೂ ಅನಾಥ ಮಕ್ಕಳ ಓದಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದನು. ಅವನಿಗೆ ಅನಾಥ ಮಕ್ಕಳ ನೋವು ಗೊತ್ತಿತ್ತು. ಅವನಿಗೆ ಅವನ ಅವಶ್ಯಕತೆಗಿಂತ ಹೆಚ್ಚಿಗೆ ಸಂಬಳ ಸಿಗುತ್ತಿದ್ದರಿಂದ ಅವನು ಧಾರಾಳವಾಗಿ ದಾನ ಮಾಡುತ್ತಿದ್ದನು. ಒಂದಿನ ಹೀಗೆ ಅನಾಥ ಮಕ್ಕಳಿಗೆ ಧನ  ಸಹಾಯ ಮಾಡಲು ಅವನು ಅನಾಥಾಶ್ರಮಕ್ಕೆ ಹೋಗಿದ್ದನು. ಅವನ ಕಣ್ಣಿಗೆ ಆಗ ಸುಮಾ ಬಿದ್ದಳು. ಅವರಿಬ್ಬರಿಗೂ ಪರಿಚಯವಾಯಿತು. ಆ ಪರಿಚಯವನ್ನು ಪರಿಶುದ್ಧ ಪ್ರೀತಿಯಾಗಿಸುವುದು ಅವನ ಗುರಿಯಾಗಿತ್ತು. ಸುಮಾಳ ಆಸೆಯೂ ಅದೇ ಆಗಿತ್ತು. ಅವಳಿಗೂ ಅವನು ಇಷ್ಟವಾಗಿದ್ದನು. ಆದರೆ ಬಾಯಿ ಬಿಟ್ಟು ಹೇಳುವಷ್ಟು ಧೈರ್ಯಶಾಲಿ ಅವಳಾಗಿರಲಿಲ್ಲ.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                                    ರಾಕೇಶನಿಗೆ ಪ್ರೀತಿಪ್ರೇಮ ಅಂತ ಟೈಮ್ ವೆಸ್ಟ್ ಮಾಡುವುದು ಇಷ್ಟವಿರಲಿಲ್ಲ. ಬೇಗನೆ ಮದುವೆಯಾಗಿ ಸುಖಿ ಸಂಸಾರಸ್ಥನಾಗಬೇಕು ಎಂಬುದು ಅವನ ಬಯಕೆಯಾಗಿತ್ತು. ರಾಕೇಶ್ ಒಂದಿನ ಸುಮಾಳನ್ನು ಕಾಫಿಗೆ ಕರೆದನು. ಧೈರ್ಯಮಾಡಿ ಅವಳಿಗೆ "ಸುಮಾ ನನ್ನನ್ನು ಮದುವೆಯಾಗುವೆಯಾ?...." ಎಂದೆಲ್ಲ ಕೇಳಿದನು. ಅದಕ್ಕಾಕೆ "Sorry ಕಣೋ. ನನ್ನಲ್ಲಿ ಒಂದು ದೊಡ್ಡ ದೋಷವಿದೆ. ನೀನು ಬೇರೆ ಯಾರಾದ್ರೂ ಒಳ್ಳೇ ಹುಡ್ಗೀನಾ ನೋಡಿ ಮದುವೆಯಾಗು. ನಾವಿಬ್ಬರೂ ಹೀಗೇ ಒಳ್ಳೇ ಫ್ರೆಂಡ್ಸಾಗಿರೋಣ ಪ್ಲೀಸ್" ಎಂದಳು. ಅವಳ ಮಾತು ಅವನಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟಾಕಿತು. ಆದರಾತ "ಪ್ಲೀಸ್ ಸುಮಾ ತಮಾಷೆ ಮಾಡಬೇಡ. ನನಗೆ ನೀನಂದ್ರೆ ತುಂಬಾ ಇಷ್ಟ. ನಿನಗೇನು ದೊಡ್ಡ ದೋಷವಿದೆ?  ನೀನು ಚೆನ್ನಾಗಿಯೇ ಇದಿಯಲ್ಲ?" ಎಂದನು. ಅವಳಿಗೆ ಏನು ಹೇಳಬೇಕು ಎಂಬುದು ತೋಚಲಿಲ್ಲ. ಅವಳು ಸುಮ್ಮನೆ ಎದ್ದು ಮನೆಯ ದಾರಿ ಹಿಡಿದು ಹೋದಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                     ಸುಮಾಳಿಗೆ ಏನು ಸಮಸ್ಯೆಯಿಲ್ಲ, ಸುಮ್ನೆ ನಾಟಕವಾಡುತ್ತಿದ್ದಾಳೆಂದು ರಾಕೇಶ್ ಭಾವಿಸಿದನು. ಮರುದಿನ ಮತ್ತೆ ಅವಳನ್ನು ಭೇಟಿಯಾದನು. "ಸುಮಾ ನೀನು ಟೀಚರಾಗಿ ಸುಳ್ಳೇಳೊದು ಸರಿಯಲ್ಲ. ಸುಳ್ಳು ಬುರುಕಿ. ನಾನು ನಿನಗೆ ಇಷ್ಟವಿಲ್ಲದಿದ್ರೆ ಇಷ್ಟವಿಲ್ಲ ಅಂತೇಳು. ಸುಮ್ನೆ ಯಾಕೆ ನಿನ್ನಲ್ಲಿಯೇ ಸಮಸ್ಯೆ ಇದೆಯಂತೆ ಸುಳ್ಳೇಳುತ್ತಿದ್ದಿಯಾ?" ಎಂದು ಕೇಳಿದನು. ಅವನ ಪ್ರಶ್ನೆಗೆ ಅವಳು ಭಾವುಕಳಾದಳು. ಅವಳ ಕಣ್ಣುಗಳಲ್ಲಿ ಕಣ್ಣೀರು ಮೆಲ್ಲನೆ ಕಾಲು ಚಾಚಿತು. ಅವಳ ತುಟಿಗಳಿಂದ ಮಾತು ಹೊರ ಬರಲಿಲ್ಲ. ರಾಕೇಶ್ ಅವಳ ಕೈಹಿಡಿದುಕೊಂಡು "ಸುಮಾ ನಿನ್ನಲ್ಲಿ ಏನೇ ಸಮಸ್ಯೆಯಿದ್ದರೂ ನಾ ನಿನ್ನ ಮದುವೆಯಾಗ್ತೀನಿ. ಪ್ಲೀಸ್ ನಾನು ನಿನಗೆ ಇಷ್ಟಾನೋ ಇಲ್ಲವೋ ಎಂಬುದನ್ನು ಹೇಳು ಸುಮಾ" ಎಂದನು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                     ನಾಲ್ಕು ವರ್ಷಗಳಿಂದ ಯಾರಿಗೂ ಗೊತ್ತಾಗದಂತೆ ಬಚ್ಚಿಟ್ಟಿದ್ದ ಒಂದು ರಹಸ್ಯವನ್ನು ಸುಮಾ ರಾಕೇಶನಿಗೆ ಹೇಳಲು ಸಿದ್ಧಳಾದಳು. ಅವಳು ಅವನಿಗೆ "ನೀನಂದ್ರೆ ನನಗೆ ಇಷ್ಟಾನೆ ಕಣೋ. ಆದ್ರೆ ಸಂಜೆಯಾದ್ಮೇಲೆ ನನಗೆ ಸರಿಯಾಗಿ ಕಣ್ಣು ಕಾಣಿಸಲ್ಲ. ನನಗೆ ಸಂಜೆಗುರುಡು ರೋಗವಿದೆ. ಅದಕ್ಕೆ ನಾನಿನ್ನ ಮದುವೆಯಾಗಿ ನಿನ್ನ ಬಾಳಿಗೆ ಕತ್ತಲಾಗೋಕೆ ಇಷ್ಟಪಡಲ್ಲ. ಪ್ಲೀಸ್ ನನ್ನ ಬಿಟ್ಟು ಬಿಡು" ಎಂದು ಬೇಡಿಕೊಂಡಳು.  ಅದಕ್ಕಾತ "ಏನು ಸುಮಾ ನೀನು?  ಇಷ್ಟಕ್ಕೆ ಹೆದರಿಸಿ ಬಿಟ್ಟೆಯಲ್ಲ? ಇರುಳುಗುರುಡು ಏನು ದೊಡ್ಡ ರೋಗವಲ್ಲ. ನಾನಿನ್ನ ಮದುವೆಯಾಗ್ತೀನಿ, ಪ್ಲೀಸ್ ಒಪ್ಕೋ ಸುಮಾ. ನಿನ್ನ ಲೈಫಲ್ಲಿ ವಿಟಾಮಿನ್ Aನ ಕೊರತೆಯಿದೆ. ನನ್ನ ಲೈಫಲ್ಲಿ ವಿಟಾಮಿನ್ SHEಯ ಕೊರತೆಯಿದೆ. ಸಂಜೆವೊತ್ತು ನಾನಿನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತೀನಿ. ಸಂಜೆ ರಾಣಿ ಥರ ನೋಡಿಕೊಳ್ತೀನಿ. ಪ್ಲೀಸ್ ಮದುವೆಗೆ ಒಪ್ಕೋ ಸುಮಾ" ಎಂದು ಬೇಡಿಕೊಂಡನು. ಅವಳು ಅವನನ್ನು ಮದುವೆಯಾಗಲು ಒಪ್ಪಿಕೊಂಡಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
              ರಾಕೇಶ್ ಸುಮಾಳತ್ರ "ಹೇಗೆ ನೀನು ಇಷ್ಟು ವರ್ಷ ಸಂಜೆ ಕಣ್ಣಿಲ್ಲದೆ ಕಾಲ ಕಳೆದೆ?" ಎಂದು ಕೇಳಿದನು. ಅದಕ್ಕಾಕೆ "ನೋಡ ಮರಿ, ಈ ಸುಮಾ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಹೆದರಲ್ಲ. ನಾನು ಚಾಲೆಂಜಗಳನ್ನು ಇಷ್ಟಪಟ್ಟು ಎದುರಿಸುತ್ತೇನೆ. I love challenges" ಎಂದಳು. ರಾಕೇಶ್ ಅವಳ ಆತ್ಮವಿಶ್ವಾಸದ ಮಾತುಗಳಿಗೆ ಮನಸೋತು ಅವಳಿಗೆ ಕಾಂಪ್ಲಿಮೆಂಟಗಳನ್ನು ಕೊಟ್ಟನು. ಜೊತೆಗೆ 'ಸಾಹಸಿ ಸುಮಾ' ಎಂಬ ಬಿರುದನ್ನು ಕೊಟ್ಟನು. ಗುರುಹಿರಿಯರ ಆರ್ಶೀವಾದದೊಂದಿಗೆ ಅವರಿಬ್ಬರ ಮದುವೆ ಸಿಂಪಲಾಗಿ ನಡೆಯಿತು. ಮದುವೆಯಾಗುವಾಗ ಯಾವುದೇ ಸಮಸ್ಯೆಗಳು ಬಂದಿರಲಿಲ್ಲ. ಆದರೆ ಮೊದಲ ರಾತ್ರಿಯ ದಿನ ಸಮಸ್ಯೆಗಳು ಬರುವ ಸಾಧ್ಯತೆಗಳಿದ್ದವು. ಸಂಜೆಯಾದ್ಮೇಲೆ ಸುಮಾಳಿಗೆ ಕಣ್ಣು ಕಾಣುವುದಿಲ್ಲ, ಅವಳು ಇರುಳುಗುರುಡಿ ಎಂಬ ಸತ್ಯ ಅವಳ ಮನೆಯವರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಅವಳ ಆಪ್ತ ಸಖಿಯರಿಗೂ ಸಹ ಅವಳ ಸಮಸ್ಯೆ ಗೊತ್ತಿರಲಿಲ್ಲ.  ಆ ಸೆಕ್ರೆಟನ್ನು ಸೆಕ್ರೆಟಾಗೇ ಇಡಲು ಸುಮಾ ತುಂಬ ಕಷ್ಟಪಟ್ಟಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
         ಅವತ್ತು ನವದಂಪತಿಗಳ  ಮೊದಲ ರಾತ್ರಿಗೆ ಎಲ್ಲ ಸಿದ್ಧತೆಗಳು ಕುಂಟುತ್ತಾ ಸಾಗಿದ್ದವು. ಮದುವೆಯ ದಿನಕ್ಕಿಂತ ಹೆಚ್ಚಿನ ಮೇಕಪನ್ನು ಮೊದಲರಾತ್ರಿ ದಿನ ಅವಳಿಗೆ ಅವಳ ಗೆಳತಿಯರು ಬಲವಂತವಾಗಿ ಹಾಕಿದ್ದರು. ಅಲ್ಲದೆ "ನಿನ್ನ ನೋಡಿದರೆ ನಿನ್ನ ಗಂಡ ಫ್ಲ್ಯಾಟಾಗಿ ಬಿಡುತ್ತಾನೆ. ಇವತ್ತು ರಾತ್ರಿ ಖಂಡಿತ ನಿನಗೆ ನಿದ್ರೆ ಮಾಡಲು ಬಿಡುವುದಿಲ್ಲ. ತುಂಬಾ ಕಾಟ ಕೊಡುತ್ತಾನೆ" ಎಂದೇಳಿ ಅವಳನ್ನು ಗೋಳಿಡಿದುಕೊಂಡರು. ಅವಳನ್ನು ಸುಮ್ಮನೆ ರೇಗಿಸಿದರು. ಅವರ ಕುಚೇಷ್ಟೆಯಲ್ಲಿ ಅವಳ ಸೆಕ್ರೆಟ್ ಸೆಕ್ರೆಟಾಗೆ ಉಳಿಯಿತು. ಯಾರಿಗೂ ಅವಳ ಸಮಸ್ಯೆ ಗೊತ್ತಾಗಲಿಲ್ಲ. ಸುಮಾ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟು ಪ್ರಸ್ಥದ ಕೋಣೆಗೆ ಕಾಲಿಟ್ಟಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                      ಸಂಜೆ ಸುಮಾಳಿಗೆ ಕಣ್ಣು ಕಾಣುವುದಿಲ್ಲ ಎಂಬುದು ರಾಕೇಶನಿಗೆ ಗೊತ್ತಿತ್ತು. ಅವಳು ಹೇಗೆ ತನ್ನ ಸೆಕ್ರೆಟನ್ನು ಮೆಂಟೆನ್ ಮಾಡುತ್ತಾಳೋ ಅಂತ ಅವನಿಗೆ ಟೆನ್ಶನ್ ಆಗಿತ್ತು. ಸುಮಾ ಸೇಫಾಗಿ ಪ್ರಸ್ಥದ ಕೋಣೆ ಸೇರಿದಾಗ ಅವನು ನಿರಾಳನಾದನು. ಅವಳನ್ನು ಕೈಹಿಡಿದು ಮಂಚದ ಮೇಲೆ ಮೆಲ್ಲನೆ ಕೂರಿಸಿದನು. ಅವಳು ತಂದಿದ್ದ ಕೇಸರಿ ಹಾಲನ್ನು ಅವಳಿಗೆ ಪ್ರೀತಿಯಿಂದ ಕುಡಿಸಿದನು. ಅವನಿಗೆ ಅವಳ ಜೊತೆ ತಮಾಷೆ ಮಾಡಬೇಕು ಎಂದೆನಿಸಿತು. ಅದಕ್ಕಾಗಿ ಆತ ಅವಳಿಗೆ ಒಂದು ಚಾಲೆಂಜ್ ಮಾಡಿದನು. "ಸಾಹಸಿ ಸುಮಾ ಅವರೇ ನಿಮಗೊಂದು ಪುಟ್ಟ ಚಾಲೆಂಜಿದೆ. ನಿಮಗೆ ಹೇಗಿದ್ದರೂ ಕಣ್ಣು ಕಾಣಿಸುವುದಿಲ್ಲ. ನಿಮ್ಮ ಕಣ್ಣಿಗೆ ಬಟ್ಟೆ ಕಟ್ಟುವ ಅವಶ್ಯಕತೆನೂ ಇಲ್ಲ. ನಾವಿಬ್ಬರೂ ಕಣ್ಣಾಮುಚ್ಚಾಲೆ ಆಟವಾಡೋಣ. ನೀವು ನನ್ನ ಹಿಡಿಯಬೇಕು. ಚಾಲೆಂಜ್ ಓಕೆನಾ?" ಎಂದನು. ಅದಕ್ಕಾಕೆ "ಇಷ್ಟೆನಾ ನಿನ್ನ ಚಾಲೆಂಜ್?  ಈ ಚಿಕ್ಕ ಕೋಣೆಯಲ್ಲಿ ನಿನ್ನನ್ನು ಹಿಡಿಯುವುದೇನು ದೊಡ್ಡ ಸವಾಲಲ್ಲ. ನನಗೆ ಚಾಲೆಂಜ್ ಓಕೆ" ಎಂದಳು. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                             ರಾಕೇಶ್ ಅವಳನ್ನು ಮೂರು ಸುತ್ತು ತಿರುಗಿಸಿ ಬಿಟ್ಟನು. ಅವಳು ಅವನನ್ನು ಹುಡುಕಾಡಲು ಶುರು ಮಾಡಿದಳು. ಅವನು ಅವಳಿಂದೆ ಬಂದು ಬೆನ್ನು ಸವರಿ ದೂರ ಓಡಿದನು. ನಂತರ ದೂರದಿಂದಲೇ ಅವಳ ಸೊಂಟ ಸವರಿ ಸುಮ್ಮನೆ ನಿಂತನು. ಅವಳಿಗೆ ಕಚಗುಳಿ ಇಟ್ಟು ಕಾಡಿದನು. ಅವವಿಬ್ಬರ ಕಣ್ಣಾಮುಚ್ಚಾಲೆ ಆಟ ಹೀಗೆ ಸಖತ್ತಾಗಿ ಸಾಗಿತ್ತು. ಅವಳು ಅವನ ಹೆಜ್ಜೆ ಸಪ್ಪಳದ ಮೇಲೆ ಅವನನ್ನು ಸರಿಯಾಗಿ ಹಿಡಿದು ಚಾಲೆಂಜಲ್ಲಿ ಗೆದ್ದಳು. ಆದರೆ ಮಂಚಕ್ಕೆ ಎಡವಿ ಕೆಳಗೆ ಬಿದ್ದಳು. ರಾಕೇಶ್ ಅವಳನ್ನು ಎತ್ತಿಕೊಂಡು ಮಂಚದ ಮೇಲೆ ಮಲಗಿಸಿ ಅವಳ ಆರೈಕೆ ಮಾಡಿದನು. ಅವಳಿಗೆ ಕಣ್ಣು ಕಾಣಿಸುತ್ತಿರಲಿಲ್ಲ ಎಂಬುದೆ ಅವನಿಗೆ ಒಂಥರಾ ಅದೃಷ್ಟವಾಗಿತ್ತು. ಕೂಡಲೇ ಅವನ ಕಳ್ಳ ಕಣ್ಣುಗಳು ಅವಳ ಸುಂದರವಾದ ಸರ್ವಾಂಗಳನ್ನೊಮ್ಮೆ ಸ್ಕ್ಯಾನ್ ಮಾಡಿದವು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                       ಅವರಿಬ್ಬರ ಪೋಲಿ ಮಾತುಗಳು ಪ್ರಾರಂಭವಾದವು. " ಸುಮಾ ನಿನಗೆ ರಾತ್ರಿ ಕಣ್ಣು ಕಾಣುವುದಿಲ್ಲ ಎಂಬುದೇ ನನ್ನ ಅದೃಷ್ಟ ನೋಡು. ಎಲ್ಲರಿಗೂ ನಿನ್ನಂಥ ಹೆಂಡತಿ ಸಿಕ್ಕ್ರೆ ಎಷ್ಟು ಚೆಂದ ಅಲ್ವಾ?" ಎಂದನು. ಅದಕ್ಕಾಕೆ "ಎಷ್ಟಾದರೂ ನೀವು ಗಂಡಸರು ನಿಮ್ಮ ಕೀಳು ಬುದ್ಧಿನಾ ಬೀಡೊದಿಲ್ಲವಲ್ಲ. ನಿನ್ನ ಕಣ್ಣುಗಳು ಈಗಾಗಲೇ ನೋಡಬಾರದನ್ನು ನೋಡಿದಂತಿವೆ. ಅದಕ್ಕೆ ಈ ಮಾತನ್ನಾಡುತ್ತಿರುವೆ" ಎಂದಳು. ಅದಕ್ಕಾತ "ಹಾಗೇನಿಲ್ಲವೇ, ನಾನಿನ್ನೂ ಏನು ನೋಡಿಲ್ಲಪ್ಪ. ನಾನು ತುಂಬಾ ಒಳ್ಳೇ ಹುಡುಗ. ಎಲ್ಲ ಗಂಡಸರು ಹೆಂಡ್ತಿರಿಗೆ ತುಂಬಾ ಹೆದರತ್ತಾರಲ್ಲ. ಅದ್ಕೆ ಹೆಂಡ್ತಿರಿಗೆ ರಾತ್ರಿ ಕಣ್ಣು ಕಾಣಿಸದಿದ್ರೆ ಎಷ್ಟು ಚೆಂದ ಅಲ್ವಾ ಅಂದೆ. ಆದರೆ ನೀನು ನನ್ನ ಮಾತನ್ನು ಡಬ್ಬಲ್ ಮೀನಿಂಗಲ್ಲಿ ಅಪಾರ್ಥ ಮಾಡಿಕೊಂಡೆ " ಎಂದನು. "ನೀನು ನನಗೆ ಕಣ್ಣಾಮುಚ್ಚಾಲೆ ಆಟವಾಡಲು ಹೇಳಿ ನನ್ನ ಸೊಂಟ ಸವರಿದಾಗಲೆ ನೀನೆಷ್ಟು ಒಳ್ಳೇ ಹುಡುಗ ಅಂತಾ ನನಗೆ ಗೊತ್ತಾಗಿದೆ. ಜಾಸ್ತಿ ಡ್ರಾಮಾ ಮಾಡಬೇಡ ರಾಜಾ...." ಎಂದಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                         ಅವಳ ಮಾತಿನ್ನು ಮುಗಿದಿರಲಿಲ್ಲ. ರಾಕೇಶ್ ಕೋಣೆಯ ಬಲ್ಬನ್ನು ಆರಿಸಿದನು. ಅವಳಿಗೆ ಬೆಳಕಿನ ಇಂಟೆನಸಿಟಿಯ ಮೇಲೆ ಕೋಣೆಯ ದೊಡ್ಡ ದೀಪವಾರಿ ಚಿಕ್ಕ ಕೆಂಪು ದೀಪ ಹೊತ್ತಿಕೊಂಡಿದ್ದು ಗೊತ್ತಾಯಿತು. ಅವಳು ಅವನಿಗೆ "ರಾಕೇಶ್ ನಿನಗೆ ನನ್ನ ಕಡೆಯಿಂದ ಒಂದು ಚಿಕ್ಕ ವಿನಂತಿ, ನಡೆಸಿಕೊಡುವೆಯಾ? ಎಂದಳು. ಆತ "ಆಗಲಿ ಅದೇನಂಥ ಹೇಳು. ಸಾಧ್ಯವಾದರೆ ಈಗಲೇ ನಡೆಸಿಕೊಡುವೆ" ಎಂದನು. ಅವಗಾಕೆ "ಏನಿಲ್ಲ ನಮ್ಮ ಫಸ್ಟ್ ನೈಟನ್ನು ನಾವು ಸ್ವಲ್ಪ ದಿನ ಮುಂದಕ್ಕಾಕೋಣ. ಯಾಕೆಂದರೆ ನಾನುನೀನು ಮೊದಲ ಸಲ ಮಿಲನವಾಗುವುದನ್ನು ನನಗೆ ನೋಡಬೇಕೆಂಬ ಆಸೆ. ನನಗೆ ನಿನ್ನ ಕಣ್ಣಲ್ಲಿರುವ ಪ್ರೀತಿಯನ್ನು ನೋಡುವಾಸೆ. ಪ್ಲೀಸ್ ಕಣೋ...." ಎಂದಳು. ಅದಕ್ಕಾತ "ಇಷ್ಟೇನಾ ಸುಮಾ. ನೀನು ಹೇಳಿದ್ದು ಸರಿಯಾಗಿದೆ. ನಾವಿಬ್ಬರೂ ನಮ್ಮ ಮೊದಲ ರಾತ್ರಿಯನ್ನು ಮುಂದಕ್ಕೆ ಹಾಕೋಣ. ನಮ್ಮ ಮೊದಲ ರಾತ್ರಿ ನಿನ್ನಿಷ್ಟದಂತೆ ಹಗಲಲ್ಲೇ ಆಗಲಿ" ಎಂದೇಳಿ ಅವಳ ತಲೆ ಸವರಿ ಮಲಗಿಕೊಂಡನು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                    ಸುಮಾಳಿಗೆ ತಾನೀಗ ಸಿಂಗಲಲ್ಲ, ಒಬ್ಬ ಜವಾಬ್ದಾರಿಯುತ ಸತಿ ಎಂಬ ಸತ್ಯ ಹೆದರಿಸಿತು. ಅವಳಿಗೆ ಮುಂದಿನ ಜೀವನದ ಬಗ್ಗೆ ಭಯವಾಯಿತು. ಪ್ರತಿದಿನ ರಾಕೇಶ್ ಕೆಲಸಕ್ಕೆ ಹೋಗಲೇಬೇಕು, ಅಕಸ್ಮಾತ್ತಾಗಿ  ಸಂಜೆ ಅವನು ಬರುವುದು ತಡವಾದರೆ ನನ್ನ ಗತಿಯೇನು? ಎಲ್ಲ ಸಂಜೆ ಅವನು ನನಗೆ ಕಣ್ಣಾಗಿರಲು ಸಾಧ್ಯನಾ? ಎಂಬ ಚಿಂತೆ ಅವಳ ನಿದ್ರೆಗೆ ಭಂಗ ತಂದಿತು. ಅದೇ ಚಿಂತೆಯಲ್ಲಿ ಅವಳು ನಿದ್ದೆಗೆಟ್ಟು ಕುಂತಳು. ಮರುದಿನ ರಾಕೇಶ್ ಬೇಗನೆದ್ದು ಫ್ರೆಶ್ಶಾಗಿ ರೆಡಿಯಾದರೂ ಸುಮಾಳಿಗೆ ಎಚ್ಚರವಾಗಲಿಲ್ಲ. ಅವಳು ತಡವಾಗಿ ಎದ್ದಿದ್ದರಿಂದ ಅವಳ ಗೆಳತಿಯರು ಅವಳನ್ನು ಮತ್ತೆ ಗೋಳಿಡಿದುಕೊಂಡರು. ಅವಳ ಫಸ್ಟ್ ನೈಟ ಕಥೆ ಹೇಳುವಂತೆ ಕಾಡಿದರು. ಒಂದೆರಡು ದಿನಗಳು ಕಳೆದ ನಂತರ ಬಂಧುಬಳಗದವರ ಜೊತೆ ಸ್ನೇಹಿತರು ಸಹ ಅವರವರ ಮನೆಗೆ ತೆರಳಿದರು. ರಾಕೇಶನಿಗೆ ಸುಮಾಳ ಬಗ್ಗೆ ಚಿಂತೆ ಶುರುವಾಯಿತು. ಮೊದಲ ಸಲ ಅವನಿಗೆ ಅವನ ಅಪ್ಪ ಅಮ್ಮ ಜೀವಂತವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸಿತು. ಜೊತೆಗೆ ಅಮ್ಮ ಅಪ್ಪನ ನೆನಪಾಗಿ ಕಣ್ಣೀರು ಬಂದು ಕೆನ್ನೆ ಬಿಸಿಯಾಯಿತು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                     ಮೂರು ಅಂತಸ್ತಿನ ದೊಡ್ಡ ಮನೆಯಲ್ಲಿ ಸುಮಾ ಮತ್ತು ರಾಕೇಶ್ ಇಬ್ಬರೇ ಇದ್ದರು. ಅವರಿಬ್ಬರ ಏಕಾಂತಕ್ಕೆ ಭಂಗ ತರಲು ಮನೆಯಲ್ಲಿ ಒಂದು ಬೆಕ್ಕು ಕೂಡ ಇರಲಿಲ್ಲ. ಅವರಿಬ್ಬರಿಗೆ ಅದೃಷ್ಟ ಅಂದ್ರೆ ಇದೆ ಎಂದೆನಿಸಿತು. ಸುಮಾಳ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದು ರಾಕೇಶ್ ನಿರ್ಧರಿಸಿದನು. ಅಂಧರ ಶಾಲೆಗಳಿಗೆ ಭೇಟಿ ನೀಡಿ ಕೆಲವೊಂದಿಷ್ಠು ಸಲಹೆಗಳನ್ನು ಪಡೆದುಕೊಂಡನು. ಪರಿಣಿತ ವೈದ್ಯರನ್ನು ಸಂಪರ್ಕಿಸಿದನು. ಆದರೆ ಪ್ರಯೋಜನವಾಗಲಿಲ್ಲ.  ಆಫೀಸಿನಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಇಂಟರನೆಟ್ ಮತ್ತು ಯ್ಯೂಟೂಬನಲ್ಲಿ ಸುಮಾಳ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಿದನು. ಆದರೆ ಅವನಿಗೆ ಸರಿಯಾದ ಪರಿಹಾರ ಸಿಗಲಿಲ್ಲ.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
         ರಾಕೇಶ್ ಸುಮಾಳಿಗೆ ಸಂಜೆ ಕಣ್ಣಾಗಿರಲು ನಿರ್ಧರಿಸಿದನು. ಅವಳಿಗೆ ಮನೆಯ ಮೂಲೆಮೂಲೆಗಳನ್ನು ಪರಿಚಯಿಸಿದನು. ರಾತ್ರಿ ಸಮಯದಲ್ಲಿ ಅವಳ ಕೈಹಿಡಿದು ಅವಳನ್ನು ಮನೆಯೆಲ್ಲ ಸುತ್ತಿಸಿದನು. ತಾನು ಇಂಟರನೆಟ್ಟಲ್ಲಿ ಕಲಿತಿರುವುದನ್ನೆಲ್ಲ ಅವಳಿಗೆ ಕಲಿಸಿದನು. ಕೆಲವು ದಿನಗಳ ನಂತರ ಸುಮಾಳಿಗೆ ಆತ್ಮವಿಶ್ವಾಸ ಹೆಚ್ಚಾಯಿತು. ಅವಳಿಗೆ ತಾನು ಸಂಜೆಗುರುಡಿ ಎಂಬುದೇ ಮರೆತು ಹೋಯಿತು. ಅವಳು ಸಂಜೆಯಾದ ಮೇಲೂ ರಾಕೇಶನ ಸಹಾಯವಿಲ್ಲದೆ ಮನೆಯೆಲ್ಲ ಧೈರ್ಯವಾಗಿ ಸುತ್ತಾಡುವಷ್ಟು ಸಮರ್ಥಳಾದಳು. ಅವಳ ಆತ್ಮವಿಶ್ವಾಸದ ಹೆಜ್ಜೆಗಳನ್ನು ನೋಡಿ ಅವನು ಆನಂದಭಾಷ್ಪಗಳನ್ನು ಸುರಿಸಿದನು. ಅವನ ದೊಡ್ಡ ಚಿಂತೆ ದೂರಾಯಿತು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                                  ರಾಕೇಶನನ್ನು ಮದುವೆಯಾಗಿ ನಾನು ಸರಿಯಾದ ಕೆಲಸ ಮಾಡಿದೆ ಎಂದು ಸುಮಾ ಖುಷಿಪಟ್ಟಳು.  ತವರು ಮನೆಯ ನೆನಪು ಸಹ ಬರದಷ್ಟು ಚೆನ್ನಾಗಿ ಅವನು ಸುಮಾಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಅವಳನ್ನು ಯಾವುದಕ್ಕೂ ಬಲವಂತ ಮಾಡುತ್ತಿರಲಿಲ್ಲ. ಆಫೀಸಿನ ಕೆಲಸಗಳನ್ನು ಬೇಗನೆ ಮುಗಿಸಿ ಸಂಜೆಯಾಗುವ ಮೊದಲೇ ಅವನು ಮನೆಗೆ ಬರುತ್ತಿದ್ದನು. ನಂತರ ಸುಮಾಳಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದನು. ಅಡುಗೆ ಮನೆಯಲ್ಲಿ ತನ್ನ ಗಂಡನನ್ನು ದುಡಿಸಿಕೊಳ್ಳಲು ಇಷ್ಟವಿಲ್ಲದೆ ಸುಮಾ ಸಂಜೆಯಾಗುವ ಮೊದಲೆ ಅಡುಗೆ ಮಾಡಿ ಹಾಯಾಗಿ ವಿಶ್ರಾಂತಿ ಪಡೆಯುತ್ತಿದ್ದಳು. ಅವರಿಬ್ಬರ ಸಂಸಾರ ಹೀಗೆಯೇ  ಸುಖಕರವಾಗಿ ಸಾಗಿತ್ತು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                     ಅವರಿಬ್ಬರ ಮದುವೆಯಾಗಿ ಮೂರು ತಿಂಗಳಾಗಿತ್ತು. ರಾಕೇಶನನ್ನು ಅನಾವಶ್ಯಕವಾಗಿ ಕಾಯಿಸಲು ಸುಮಾಳಿಗೆ ಮನಸ್ಸಾಗಲಿಲ್ಲ. ಅವಳಿಗೂ ಭಾವನೆಗಳನ್ನು ಬಚ್ಚಿಡುವುದು ಭಾರವಾಗಿತ್ತು. ಅವರಿಬ್ಬರ ಮೊದಲ ರಾತ್ರಿಯನ್ನು ಹಗಲೊತ್ತಿನಲ್ಲಿ ಆಚರಿಸುವುದಕ್ಕಾಗಿ ಅವಳು ಅವನಿಗೆ ಒಂದಿನ ಆಫೀಸಿಗೆ ರಜೆ ಹಾಕಲು ಹೇಳಿದಳು. ಅವನು ಸಹ ಅವಳ ಆಮಂತ್ರಣಕ್ಕಾಗಿಯೇ ಹಗಲು ರಾತ್ರಿ ಕಾಯುತ್ತಿದ್ದನು. ಆದರೂ ಆಫೀಸಿನಲ್ಲಿ ಸದ್ಯಕ್ಕೆ ರಜೆ ಸಿಗಲ್ಲ ಅಂತೆಲ್ಲ ಸುಳ್ಳು ರಾಗವೇಳೆದನು. ಅವನ ಮಾತಿನ ಧಾಟಿಯಲ್ಲಿಯೇ ಅವನು ಸುಳ್ಳೇಳುತ್ತಿದ್ದಾನೆಂಬುದು ಅವಳಿಗೆ ಖಾತ್ರಿಯಾಯಿತು. ಅವಳು ಸರಿ ಎಂದು ಸುಮ್ಮನಾಗಿ ಮನೆ ಕೆಲಸದಲ್ಲಿ ನಿರತಳಾದಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                                                      ಮರುದಿನ ರಾಕೇಶ್ ಆಫೀಸಿಗೊಗದೆ ಮನೆಯಲ್ಲೇ ಉಳಿದನು. ಸುಮಾಳಿಗೆ ಸರಪ್ರೈಸ್ ಕೊಡಲು ಒಂದು ವಾರ ರಜೆ ಹಾಕಿದ್ದನು. ಅವನ ಪೋಲಿತನ ಸುಮಾಳಿಗೆ ಮೊದಲ ರಾತ್ರಿಯಲ್ಲೇ ಚೆನ್ನಾಗಿ  ಗೊತ್ತಾಗಿತ್ತು. ಅವಳು ಮೊದಲ ಮಿಲನಕ್ಕೆ ಮಾನಸಿಕವಾಗಿ ಸಂಪೂರ್ಣ ಸಿದ್ಧಳಾಗಿದ್ದಳು. ರಾಕೇಶ್ ಅವಳನ್ನು ಹೂವಿನಂತೆ ಹೊತ್ತುಕೊಂಡು ಬೆಡ್ರೂಮಿಗೆ ಹೋದನು. ಅವನನ್ನು ಸರಿಯಾಗಿ ಗೋಳಿಡಿದುಕೊಂಡು ಮೊದಲರಾತ್ರಿಯಲ್ಲಿ ಅವನಾಡಿದ ಕಣ್ಣಾಮುಚ್ಚಾಲೆ ಆಟದ ಲೆಕ್ಕ ಚುಕ್ತಾ ಮಾಡಲು ಸುಮಾ ನಿರ್ಧರಿಸಿ, ಬಟ್ಟೆಯಿಂದ  ಅವನ ಕಣ್ಣುಗಳನ್ನು ಬಿಗಿಯಾಗಿ ಕಟ್ಟಿದಳು. ಅವನನ್ನು ಮೂರು ಸುತ್ತು ತಿರುಗಿಸಿ ದೂರಾದಳು. ರಾಕೇಶ್ ಅವಳನ್ನು ಹಿಡಿಯಲು ಹರಸಾಹಸ ಪಟ್ಟನು. ಆದರೆ ಅವನಿಂದ ಅವಳನ್ನು ಹಿಡಿಯಲು ಆಗಲಿಲ್ಲ. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
             ಸುಮಾ ಅವನನ್ನು ಸರಿಯಾಗಿ ಆಟವಾಡಿಸಿದಳು. ಅವನು ಸೋತು ಅವಳಿಗೆ ಶರಣಾದನು. ಅವಳು ಜಾಸ್ತಿ ಸತಾಯಿಸಿದೆ ಅವನಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. "ನಿನಗೆ ಹಗಲೊತ್ತಿನಲ್ಲಿಯೂ ಕಣ್ಣು ಕಾಣಿಸದ್ದರೆ ಎಷ್ಟೋ ಚೆನ್ನಾಗಿರುತಿತ್ತು. ನಿನ್ನ ಕಂಗಳಲ್ಲಿನ ಮಿಂಚನ್ನು ನೋಡಿದ ನಂತರ ನಿನ್ನ ಮೈಮುಟ್ಟಲು ನನಗೆ ಭಯವಾಗುತ್ತಿದೆ" ಎಂದು ಅವಳನ್ನು ರೇಗಿಸಿದನು. ಅದಕ್ಕಾಕೆ ಅವನ ಕಣ್ಮುಚ್ಚಿ ಜೋರಾಗಿ ಅವನ ಕೆನ್ನೆ ಕಚ್ಚಿದಳು. ಅವನ ಉತ್ಸಾಹದ ವೇಗಕ್ಕೆ ಅವಳ ನಾಚಿಕೆ ಸಂಪೂರ್ಣವಾಗಿ ಸತ್ತಿತ್ತು. ಮೊದಲ ರಾತ್ರಿಯಲ್ಲಿ ತನ್ನ ಮನಗೆದ್ದ ಗಂಡನಿಗಾಗಿ ಹಗಲೊತ್ತಿನಲ್ಲಿ ಬೆತ್ತಲಾಗಿ ಅವನ ಮನಸ್ಸನ್ನು ತಣಿಸಿದಳು. ಹೊರಗಡೆ ಜೋರಾಗಿ ಮಳೆ ಸುರಿಯಲು ಶುರುವಾಯಿತು. ಅವರ ಮುದ್ದಾಟ ಹಾಗೇ ಮುಂದುವರೆಯಿತು. ಸೂರ್ಯನಿಗೆ ಸುಸ್ತಾಗಿ ಅವನು ಮನೆಗೋಗಿ ಸಂಜೆಯಾದರೂ ಅವರಿಬ್ಬರ ಸರಸ ಸಲ್ಲಾಪ ಕೊನೆಯಾಗುವ ಲಕ್ಷಣಗಳು ಕಾಣಲಿಲ್ಲ. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                 ರಾಕೇಶ ಸೋತು ಹಿಂದೆ ಸರಿದರೂ ಸುಮಾ ಅವನನ್ನು ಬಳಿಸೆಳೆದು ಗಟ್ಟಿಯಾಗಿ ಅಪ್ಪಿಕೊಂಡಳು. ಅವನು ಅವಳ ಬಂಧನದಿಂದ ಬಿಡಿಸಿಕೊಂಡು ಸ್ನಾನ ಮಾಡಿ ರಿಫ್ರೇಶಯಾಗಿ ಬೆಡ್ರೂಮಿಗೆ ಹೋದನು. ಮುಖದಲ್ಲಿ ಮಂದಹಾಸದ ಚಂದಿರನನ್ನು ಹೊತ್ತು ಹಾಯಾಗಿ ಮಲಗಿದ್ದವಳನ್ನು ಎಬ್ಬಿಸಲು ಅವನಿಗೆ ಮನಸ್ಸಾಗಲಿಲ್ಲ. ಅವನು ಅವಳನ್ನು ಹಾಗೆಯೇ ನೋಡುತ್ತಾ ಅವಳ ಪಕ್ಕದಲ್ಲಿ ಕುಳಿತನು. ಅರ್ಧಗಂಟೆಯ ನಂತರ ಸುಮಾಳಿಗೆ ಸಡನ್ನಾಗಿ ಎಚ್ಚರವಾಯಿತು. ಅವಳಲ್ಲಿ ಸತ್ತು ಹೋಗಿದ್ದು ನಾಚಿಕೆ ಮತ್ತೆ ಮರುಜನ್ಮ ಪಡೆಯಿತು. "ಛೀ ನಿನಗೆ ನಾಚಿಕೆಯಾಗುವುದಿಲ್ವಾ? ನಾನು ಅರೆಬೆತ್ತಲೆಯಾಗಿದ್ದರೂ ನನ್ನ ನೋಡುತ್ತಾ ಸುಮ್ಮನೆ ಕುಳಿತಿರುವೆಯಲ್ಲ?" ಎಂದು ರಾಕೇಶನನ್ನು ಛೇಡಿಸಿದಳು. ಅದಕ್ಕಾತ "ಕ್ಷಮಿಸಿ ಸಂಜೆರಾಣಿಯವರೇ. ನಿಮಗೆ ನಾಚಿಕೆ ಎಂಬುದು ಸ್ವಲ್ಪವೂ ಇಲ್ಲ ಎಂದು ನಮಗೆ ಇವತ್ತೇ ಗೊತ್ತಾಗಿದೆ. ಬೇಗೆನೆ ಸ್ನಾನ ಮಾಡಿಕೊಂಡು ಬನ್ನಿ, ಬೇಕಾದರೆ ಸೀರೆಯುಟ್ಟುಕೊಳ್ಳಲು ಸಹಾಯ ಮಾಡುತ್ತೇನೆ" ಎಂದು ಅವಳನ್ನು ರೇಗಿಸಿದನು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                     ಸಂಜೆಯಾಗಿರುವುದರಿಂದ ಸುಮಾಳಿಗೆ ಕಣ್ಣು ಕಾಣುವುದಿಲ್ಲ, ಅವಳು ಸಹಾಯಕ್ಕಾಗಿ ಖಂಡಿತ ಕರೆಯುತ್ತಾಳೆಂದು ಅವನು ಕಾಯುತ್ತಾ ಕುಳಿತ್ತಿದ್ದನು. ಅಷ್ಟರಲ್ಲಿ ಸ್ನಾನದ ಕೋಣೆಯಿಂದ ಸುಮಾ ಅವನನ್ನು ಸಹಾಯಕ್ಕಾಗಿ ಕರೆದಳು. "ನಿನ್ನನ್ನು ಮದುವೆಯಾದರೆ ಯಾವ ಗಂಡನಿಗೂ ಸಿಗದ ಸುವರ್ಣಾವಕಾಶಗಳು ಸಿಗುತ್ತವೆ ಎಂಬುದು ನನಗೆ ಮೊದಲೆ ಗೊತ್ತಿತ್ತು ಸುಮಾ" ಎಂದು ಅವಳನ್ನು ಮತ್ತೆ ರೇಗಿಸಿದನು. ಅವಳು ಬೇಗನೆ ತಯಾರಾಗಿ ಹಾಲಗೆ ಬಂದಳು. ಅವಳಿಗೆ ತುಂಬಾ ಹೊಟ್ಟೆ ಹಸಿವಾಗಿತ್ತು. ಅಷ್ಟರಲ್ಲಿ ರಾಕೇಶ್ ಆರ್ಡರ್ ಮಾಡಿದ ಊಟ ಮನೆಗೆ ಬಂತು. ಅವರಿಬ್ಬರು ಚೆನ್ನಾಗಿ ಊಟ ಮಾಡಿ ಸ್ವಲ್ಪ ಹರಟೆ ಹೊಡೆಯುತ್ತಾ ಕುಳಿತರು. ನಂತರ ಟೆರೆಸ್ ಮೇಲೆ ಒಂದು ವಾಕ್ ಹೋಗಿ ಬೆಡ್ರೂಮಿಗೆ ಹೋಗಿ ಮಲಗಿದರು. ರಾಕೇಶನಿಗೆ ಇನ್ನು ೫ ದಿನ ರಜೆಯಿತ್ತು. ಅದಕ್ಕಾಗಿ ಅವನು ಕನ್ಯಾಕುಮಾರಿಗೆ ಹೊರಡಲು ತಯಾರಿ ಮಾಡಿಕೊಂಡಿದ್ದನು. ಬೆಳಿಗ್ಗೆ ಬೇಗನೆದ್ದು ತಯಾರಾಗಿ ಅವರಿಬ್ಬರು ಕನ್ಯಾಕುಮಾರಿಗೆ ಹೊರಟರು. ಕಾರಿನಲ್ಲಿ ಹೋಗುವಾಗಲೂ ಅವರ ಪೋಲಿಯಾಟಗಳು ನಿರಾಂತಕವಾಗಿ ಮುಂದುವರೆದವು. ವಾರದ ನಂತರ ಒಲ್ಲದ ಮನಸ್ಸಿನಿಂದ ಅವರಿಬ್ಬರು ಮನೆಗೆ ಮರಳಿದರು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                              ಕಥೆಯಲ್ಲಿ ಒಬ್ಬ ಖಡಕ್ ವಿಲನ್ ಜೊತೆಗೆ ಸಾಫ್ಟ ಸೆಕ್ಸ ಇರದಿದ್ದರೆ ಆ ಕಥೆಗೆ ಕಿಕ್ ಇರುವುದಿಲ್ಲ. ಅದೇ ರೀತಿ ಸಂತೋಷವಾಗಿರುವವರ ಬಾಳಲ್ಲಿ ಕಷ್ಟ ನೀಡದಿದ್ದರೆ ಆ ದೇವರಿಗೆ ಕಿಕ್ ಸಿಗುವುದಿಲ್ಲ. ಅದಕ್ಕಾಗಿ ಆ ಪಾಪಿ ದೇವರು ಅವರಿಬ್ಬರ ಸಂತೋಷದ ಜೀವನಕ್ಕೆ ಒಬ್ಬ ವಿಲನನನ್ನು ಕಳುಹಿಸಿದನು. ಒಂದಿನ ಸಂಜೆ  ಸುಮಾಳ ಗೆಳತಿ ಅವಳನ್ನು ನೋಡಲು ಅವಳ ಮನೆಗೆ ಬಂದಳು. ರಾಕೇಶ್ ಮತ್ತು ಸುಮಾ ಅವರ ಗುಟ್ಟನ್ನು ರಟ್ಟಾಗದಂತೆ ನೋಡಿಕೊಳ್ಳಲು ಬಹಳಷ್ಟು ಪ್ರಯತ್ನಿಸಿದರು. ಆದರೆ ಸುಮಾಳಿಗೆ ಸಂಜೆಗುರುಡು ರೋಗವಿರುವ ವಿಷಯ ಅವಳ ಗೆಳತಿಗೆ ಗೊತ್ತಾಯಿತು. ಅವಳು ಯಾರಾತ್ರಾನೂ ಅವಳ ಸಮಸ್ಯೆಯನ್ನು ಹೇಳಲ್ಲವೆಂದು ಮಾತು ಕೊಟ್ಟು ಮನೆಗೆ ಹೋದಳು. ಆದರೆ ಮನೆಗೆ ಹೋದ ನಂತರ ತನ್ನ ಗಂಡನಿಗೆ ಹೇಳಿ ವಿಷಾದ ವ್ಯಕ್ತಪಡಿಸಿದಳು. ದುರಾದೃಷ್ಟಕ್ಕೆ ಅವಳ ಗಂಡ ರಾಕೇಶನ ಆಫೀಸ್ ಬಾಸ್ ಗಿರಿ ಆಗಿದ್ದನು. ಗಿರಿಗೆ ಸುಮಾಳ ಸಮಸ್ಯೆಗಿಂತ ಅವಳ ಮತ್ತು ರಾಕೇಶನ ಸೆಕ್ಸಲೈಫಿನ್ನದ್ದೆ ಚಿಂತೆಯಾಯಿತು. ಸಂಜೆ ಕಣ್ಣು ಕಾಣದ ಸುಮಾಳನ್ನು ಮದುವೆಯಾಗಿ ರಾಕೇಶ್ ರಸಿಕ ರಾತ್ರಿಗಳನ್ನು ಅನುಭವಿಸುತ್ತಿದ್ದಾನೆ ಎಂದೆಲ್ಲ ಯೋಚಿಸಿ ಸುಮಾಳ ಮೇಲೆ ಮೋಹಿತನಾದನು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                ಮರುದಿನ ಆಫೀಸಿನಲ್ಲಿ  ಗಿರಿ ರಾಕೇಶನ ಮೇಲೆ ಎಂದು ತೋರಿಸದ ಪ್ರೀತಿಯನ್ನು ತೋರಿಸಿ ಆತ್ಮೀಯತೆಯಿಂದ ಮಾತನಾಡಿಸಿದನು. ನಂತರ ತನ್ನ ಕ್ಯಾಬೀನಿಗೆ ತೆರಳಿ ಸುಮಾಳನ್ನೇ ಕಲ್ಪಿಸುತ್ತಾ ಕುಳಿತನು. ತನ್ನ ಹೆಂಡತಿಗೂ ರಾತ್ರಿ ಕಣ್ಣು ಕಾಣಿಸದಿದ್ದರೆ ಚೆನ್ನಾಗಿತ್ತು ಎಂದು ಕೊರಗಿದನು. ಇವತ್ತು ಸಂಜೆ ರಾಕೇಶನನ್ನು ಆಫೀಸ್ ಕೆಲಸದ ನೆಪದಲ್ಲಿ ದೆಹಲಿಗೆ ಕಳುಹಿಸಿ, ತಾನು ಸುಮಾಳ ಜೊತೆ ಸೇರಲು ಸಂಚು ರೂಪಿಸಿದನು. ಕೂಡಲೇ ಫ್ಲಾಯಿಟ್ ಟಿಕೆಟ್ ಬುಕ್ ಮಾಡಿಸಿ ಅದನ್ನು ರಾಕೇಶನಿಗೆ ಕೊಟ್ಟು, ಇದು ಬಹಳ ಮುಖ್ಯವಾದ ಕೆಲಸ ಎಂದೇಳಿ ಆಫೀಸಿನಿಂದಲೇ ನೇರವಾಗಿ ಏರಪೋರ್ಟಗೆ ತೆರಳಲು ಸೂಚಿಸಿದನು. ರಾಕೇಶ ಸುಮಾಳಿಗೆ ಕರೆಮಾಡಿ ತಾನು ದೆಹಲಿಗೆ ಹೋಗುವ ವಿಷಯ ತಿಳಿಸಿ ಜಾಗ್ರತೆಯಾಗಿರಲು ತಿಳಿಸಲು ಪ್ರಯತ್ನಿಸಿದನು. ಆದರೆ ನೆಟವರ್ಕ ಸಮಸ್ಯೆಯಿಂದ ಅವನಿಗೆ ವಿಷಯ ತಿಳಿಸಲು ಸಾಧ್ಯವಾಗಲಿಲ್ಲ. ಆಮೇಲೆ ನೆಟವರ್ಕ ಸಿಕ್ಕಾಗ ಕರೆಮಾಡಿ ಹೇಳಿದರಾಯ್ತು ಎಂದವನು ಹೊರಟನು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                          ರಾಕೇಶ್ ಹೋದ ಮೇಲೆ ಗಿರಿ ಸುಮಾಳಿಗಾಗಿ ಅವನ ಮನೆಗೆ ಹೋದನು. ಅವತ್ತು ಸ್ಕೂಲಿನಿಂದ ಬರಲು ಅವಳಿಗೆ ಸ್ವಲ್ಪ ತಡವಾಗಿತ್ತು. ಸಂಜೆಯಾಗುವ ಮುಂಚೆಯೇ ಅವಳು ಮನೆ ಸೇರಿದ್ದಳು. ಆದರೆ ಬಾಗಿಲ ಚಿಲಕವನ್ನು ಭದ್ರವಾಗಿ ಹಾಕುವುದನ್ನು ಮರೆತ್ತಿದ್ದಳು. ದಿನಾ ಸೂರ್ಯ ಮುಳುಗುವ ಮೊದಲೇ ಅವಳು ಅಡುಗೆ ಮಾಡಿ ರಾಕೇಶನಿಗಾಗಿ ಕಾಯುತ್ತಾ ಕುಂತಿರುತ್ತಿದ್ದಳು. ಆದರೆ ತಡವಾಗಿ ಮನೆಗೆ ಬಂದಿರುವುದರಿಂದ ಆ ದಿನ ಅವಳಿನ್ನು ಅಡುಗೆ ಮಾಡಿರಲಿಲ್ಲ. ಸರಿಯಾಗಿ ಕಣ್ಣು ಕಾಣಿಸದಿದ್ದರು ರೂಢಿಯ ಮೇಲೆ ಅಡುಗೆ ಮನೆಯಲ್ಲಿ ತರಕಾರಿ ಹೆರಚುತ್ತಿದ್ದಳು. ಗಿರಿ ಕಳ್ಳ ಬೆಕ್ಕಿನ ತರಹ ಮನೆಗೆ ನುಗ್ಗಿ, ಕೆಟ್ಟ ದೃಷ್ಟಿಯಿಂದ ಸುಮಾಳನ್ನು ನೋಡುತ್ತಾ ನಿಂತನು. ಅವಳ ದೇಹದ ಓರೆಕೋರೆಗಳನ್ನು ನೋಡಿ ಜೊಲ್ಲು ಸುರಿಸಿದನು. ಬಿಗಿಯಾದ ಬಟ್ಟೆಗಳಲ್ಲಿ ಬಂಧಿಯಾಗಿದ್ದ ಅವಳ ಕಟ್ಟುಮಸ್ತಾದ ದೇಹಸಿರಿಯನ್ನು ನೋಡಿ "ನನ್ನ ಹೆಂಡತಿಯು ಇದ್ದಾಳೆ ಭಾರವಾದ ಬಲೂನ್ ಥರಾ" ಎಂದು ಮನದಲ್ಲೇ ಮಂಡಿಗೆ ಮುರಿದನು. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                  ಸುಮಾ ಏನನ್ನೋ ತೆಗೆದುಕೊಳ್ಳಲು ಅಡುಗೆ ಮನೆಯಿಂದ ಹೊರಬಂದಳು. ಅವಳ ಆತ್ಮವಿಶ್ವಾಸದ ಹೆಜ್ಜೆಗಳನ್ನು ನೋಡಿ ಗಿರಿ ಬೆರಗಾದನು. ಜೊತೆಗೆ ಬೆದರಿದನು. ಅವಳನ್ನು ಹೇಗೆ ಮುಟ್ಟುವುದು ಎಂದು ಚಿಂತಿಸಿ ಬೆವರಿದನು. ಸುಮಾ ಮತ್ತೆ ಅಡುಗೆ ಮನೆ ಸೇರಿದಳು. ಸೆಕೆಯಿಂದ ಅವರು ಸ್ವಲ್ಪ ಬೆವರಿದ್ದಳು. ಅದಕ್ಕಾಗಿ ಸೀರೆಯಿಂದ ಗಾಳಿ ಬೀಸಿಕೊಳ್ಳುತ್ತಿದ್ದಳು. ಸಿನಿಮಾ ನೋಡುವಾಗ ಬರುವ ಜಾಹೀರಾತಿನಂತೆ ಅವಳ ಸೊಂಟದ ಸೊಗಸು ಅವನನ್ನು ಸೆಳೆಯಿತು. ಧೈರ್ಯಮಾಡಿ ಅವನು ಅಡುಗೆ ಮನೆಯನ್ನು ಹೊಕ್ಕನು. ಸುಮಾಳಿಗೆ ಗಾಳಿಯ ರಭಸದ ಮೇಲೆ ಯಾರೋ ಬಂದಿರುವುದು ಗೊತ್ತಾಯಿತು. ಕೂಡಲೇ ಆಕೆ "ಯಾಕೇ ರಾಕೇಶ್ ಇವತ್ತು ಮನೆಗೆ ಬರಲು ಇಷ್ಟೊಂದು ತಡ ಮಾಡಿರುವೆ? ನನಗೆ ಎಷ್ಟೊಂದು ಭಯವಾಗ್ತಿತ್ತು ಗೊತ್ತಾ" ಎಂದಳು. ಗಿರಿಗೆ ಏನು ಮಾಡಬೇಕು ಎಂಬುದು ತಿಳಿಯದಾಯಿತು. ಮಾತಾಡಿದರೆ ಅವಳಿಗೆ ನನ್ನ ಧ್ವನಿ ಗೊತ್ತಾಗುತ್ತದೆ ನಾನು ಸಿಕ್ಕಿಹಾಕಿಕೊಳ್ಳುತ್ತೇನೆಂದು ಅವನು ಹೆದರಿದನು. ಅವನ ಗಂಟಲು ಕಟ್ಟಿತು. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
           ಸುಮಾ ಮತ್ತೆ "ಯಾಕೋ ರಾಕೇಶ್ ಏನಾಯ್ತು? ಯಾಕೆ ಏನು ಮಾತಾಡದೆ ಮೌನವಾಗಿರುವೆ?" ಎಂದು ಕೇಳಿದಳು. ಅವಳ ಆ ಪ್ರಶ್ನೆಯಿಂದಲೇ ಗಿರಿಗೆ ಒಂದು ಐಡಿಯಾ ಹೊಳೆಯಿತು. ತಕ್ಷಣವೇ ಆತ ಸುಮಾಳ ಅರೆಬೆತ್ತಲೆ ಬೆನ್ನ ಮೇಲೆ ತನ್ನ ಕೈಬೆರಳುಗಳಿಂದ "ಇವತ್ತು ನಾನು ಮೌನವ್ರತ ಮಾಡುತ್ತಿರುವೆ" ಎಂದು ಬರೆದನು. ಅದಕ್ಕಾಕೆ "ಏ ಪೋಲಿ ಇದೇನು ನಿನ್ನ ಹೊಸ ಹುಚ್ಚು?  ಯಾವ ಸಾಧನೆಗಾಗಿ ಈ ಮೌನವ್ರತ? ಎಂದು ನಸುನಕ್ಕಳು. ಅದಕ್ಕಾತ "ನಿನಗಾಗಿಯೇ ಈ ಮೌನವ್ರತ. ನಿನಗೊಂದು ಸರಪ್ರೈಸಿದೆ" ಎಂದು ಮತ್ತೆ ಅವಳ ಬೆನ್ಮೇಲೆ ಬರೆದನು. ಅವನ ಮಾತಿಗೆ ಅವಳ ಬೆನ್ನು ತುಟಿಯಾಟಿತು. ಅವನು ಮುಂದುವರೆದು ಅವಳ ಬೆನ್ನಿಗೆ ಮುತ್ತಿಟ್ಟು, ಅವಳನ್ನು ಸೊಂಟ ಬಳಸಿ ತಬ್ಬಿಕೊಂಡನು. ತನ್ನ ಕೈಬೆರಳುಗಳನ್ನೇ ತಂತಿಯಾಗಿಸಿಕೊಂಡು ಅವಳ ನಡದ ವೀಣೆಯನ್ನು ನುಡಿಸಿದನು. ಅವಳು ಮೈಮರೆತು ಕಣ್ಮುಚ್ಚಿದಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
            ಅವನ ಕೈಬೆರಳುಗಳು ಹದ್ದುಮೀರಿ ಮುಂದುವರೆದಾಗ ಅವಳು, "ಏ ಪೋಲಿ ಅಲ್ಲಿಂದ  ಕೈ ತೆಗೆಯೋ ಕಚಗುಳಿ ಇಟ್ಟಂಗಾಗ್ತಿದೆ" ಎಂದು ಸ್ವಲ್ಪ ಜೋರಾಗಿಯೇ ಗದರಿದಳು. ಅವನ ಬೆರಳುಗಳು ನಡಗಲು  ಪ್ರಾರಂಭಿಸಿದವು. ಅವನು ನಡಗುತ್ತಾ ಅವಳ ಉದರವನ್ನು ಸ್ಪರ್ಶಿಸಿದನು. ಅವನ ಸ್ಪರ್ಶದಲ್ಲಿನ ಒರಟುತನ  ಅವಳನ್ನು ಚುಚ್ಚಿತು. ಅವಳಿಗೆ ತನ್ನ ಜೊತೆಗಿರುವವನು ರಾಕೇಶ್ ಅಲ್ಲ ಎಂಬ ಅನುಮಾನ ಮೂಡಿತು. ಅದಕ್ಕಾಗಿ ಆಕೆ ಅಲ್ಲಿದ್ದ ಚಾಕುವನ್ನು ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡಳು. ಅಷ್ಟರಲ್ಲಿ ಗಿರಿ ಕೈಹಿಡಿದುಕೊಂಡು ಅವಳನ್ನು ಬೆಡ್ರೂಮಿಗೆ ಕರೆದುಕೊಂಡು ಹೋದನು. ಅವನ ಹೆದರುವ ಹೆಜ್ಜೆಗಳಿಂದಾಗಿ ಅವಳ ಅನುಮಾನ ಮತ್ತಷ್ಟು ಬಲವಾಯಿತು. ಗಿರಿ ಅವನಾಕಿದ್ದ ಶೂಗಳನ್ನು ಬಿಚ್ಚಿ ಬೀಸಾಕಿದನು. ಅದರ ವಾಸನೆ ಅವಳ ಅನುಮಾನಕ್ಕೆ ಪುಷ್ಟಿ ನೀಡಿತು. ಬೆಳಿಗ್ಗೆ ಆಫೀಸಿಗೆ ಹೋಗುವಾಗ ರಾಕೇಶ್ ಶೂಗಳ ಬದಲಾಗಿ, ಸಾಧಾರಣ ಚಪ್ಪಲಿಗಳನ್ನು ಹಾಕಿಕೊಂಡು ಹೋಗಿರುವುದನ್ನು ಆಕೆ ಸರಿಯಾಗಿ ಗಮನಿಸಿದ್ದಳು. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                           ಗಿರಿ ಅವಳನ್ನು ಮಂಚದ ಮೇಲೆ ತಳ್ಳಿ ಅವಳ ಮೇಲೆ ಬೀಳಲು ಮುಂದಾದನು. ಅಷ್ಟರಲ್ಲಿ ಅವಳು ತನ್ನ ಸೊಂಟದಲ್ಲಿದ್ದ ಚಾಕುವನ್ನು ಹೊರತೆಗೆದು ಅವನಿಗೆ ಬಲವಾಗಿ ಚುಚ್ಚಿದಳು. ಗಿರಿ ಕಿರುಚುತ್ತಾ ನೆಲಕ್ಕುರುಳಿ ಒದ್ದಾಡತೊಡಗಿದನು. ಅವಳ ಅನುಮಾನ ನಿಜವಾಯಿತು. ಅವಳು ಸರಿಯಾದದ್ದನ್ನೇ ಮಾಡಿದ್ದಳು. ಅವನ ಕೀರುಚಾಟದ ಧ್ವನಿಯ ಮೇಲೆ ಅವನಿರುವ ಜಾಗ ಪತ್ತೆ ಹಚ್ಚಿ ಅವನನ್ನು ಅಂದಾಜಿನ ಮೇಲೆ ಕೆನ್ನೆಕೆನ್ನೆ ಚೆನ್ನಾಗಿ ಬಾರಿಸಿದಳು. ನಂತರ ಸ್ವಲ್ಪ ಭಾವುಕಳಾಗಿ ಮಾತನಾಡಲು ಶುರುಮಾಡಿದಳು. "ನೀನು ಮನೆಗೆ ಬಂದು ಮೌನವಾಗಿದ್ದಾಗಲೆ ನನಗೆ ನಿನ್ನ ಮೇಲೆ ಅನುಮಾನ ಬಂದಿತ್ತು. ಆದರೆ ನಾನು ರಾಕೇಶನ ಪ್ರೀತಿಯ ನೆನಪುಗಳಲ್ಲಿ ಮೈಮರೆತೆ. ನಿನ್ನ ನಡಗುವ ಕೈಬೆರಳುಗಳು ನನಗೆಲ್ಲ ಅರ್ಥಮಾಡಿಸಿದವು. ಕೊನೆಗೆ ನೀ ಶೂ ಬಿಚ್ಚಿ ನನ್ನ ತಳ್ಳಿದಾಗ ನನಗೆ ನನ್ನ ಅನುಮಾನ ಕನಫರ್ಮ ಆಯಿತು. ನಿನಗೆ ನಾಚಿಯಾಗುವುದಿಲ್ವಾ? ಇದು ನಿಜವಾದ ಗಂಡಸರು ಮಾಡುವ ಕೆಲ್ಸಾನಾ? ನನ್ನ ಗಂಡನಷ್ಟು ಪೋಲಿಯಾಗಿರುವ ಗಂಡ್ಸು ಬೇರೆ ಯಾರಾಗಿರಲು ಸಾಧ್ಯವಿಲ್ಲ. ಆದರೆ ಅವನು ನನ್ನೊಂದಿಗೆ ಮಾತ್ರ ಪೋಲಿಯಾಗಿರುತ್ತಾನೆ. ಅವನು ಬೇರೆ ಹೆಣ್ಣನ್ನು ಕಣ್ಣೆತ್ತಿಯು ಸಹ ನೋಡುವುದಿಲ್ಲ. ಅವನ ಪೋಲಿತನದಲ್ಲಿಯೂ, ಸ್ಪರ್ಶದಲ್ಲಿಯೂ ಒಂದು ಪಾವಿತ್ರ್ಯತೆ ಇದೆ. ಆದರೆ ನೀನು ಕೆಟ್ಟ ಹುಳು" ಎಂದೇಳಿ ಅವನನ್ನು ಜೋರಾಗಿ ಒದ್ದಳು. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                                         ಅವನು ಮತ್ತಷ್ಟು ಕೀರುಚತೊಡಗಿದನು. ಅವಳು ಅವನ ಬಾಯಿಗೆ ಬಟ್ಟೆ ತುರುಕಿ, "ನೀನು ಯಾರಂತ ನಿಜ ಹೇಳು" ಎಂದು ಗದರಿಸಿದಳು. ಆದರೆ ಆತ ಬಾಯಿ ಬಿಡಲಿಲ್ಲ. ಸುಮಾ ರಾಕೇಶನಿಗೆ ಕರೆ ಮಾಡಲು ತನ್ನ ಮೊಬೈಲನ್ನು ಹುಡುಕಲು ಮುಂದಾದಳು. ಅಷ್ಟರಲ್ಲಿ ಗಿರಿಯ ಮೊಬೈಲ್ ಸದ್ದಾಯಿತು. ಸುಮಾ ಅವನ ಮೊಬೈಲನ್ನು ಎತ್ತಿಕೊಂಡಳು. ಕಾಲ್ ರಿಸಿವ್ ಮಾಡಿದಾಗ ಅವಳಿಗೆ ಶಾಕ್ ಆಯ್ತು. ಫೋನಿನಲ್ಲಿ ಅವಳ ಗೆಳತಿಯ ಧ್ವನಿ ಕೇಳಿ ಆಕೆ ಬೆಚ್ಚಿ ಬಿದ್ದಳು. ಕೂಡಲೆ ತನ್ನ ಮನೆಗೆ ಬರುವಂತೆ ಹೇಳಿ ಸುಮಾ ಕಾಲ್ ಕಟ್ ಮಾಡಿದಳು. ತಾನು ಚಾಕು ಚುಚ್ಚಿದ್ದು ತನ್ನ ಗೆಳತಿಯ ಗಂಡನಿಗೆಂದು ಗೊತ್ತಾದಾಗ ಅವಳಿಗೆ ಬೇಜಾರಾಯಿತು. 
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                    ಸುಮಾ ರಾಕೇಶನಿಗೆ ಕರೆ ಮಾಡಬೇಕು ಎಂದು ಮೊಬೈಲ್ ತೆಗೆದುಕೊಳ್ಳುವಷ್ಟರಲ್ಲಿ ರಾಕೇಶ್ ಮನೆಗೆ ಬಂದನು. ಎಷ್ಟು ಪ್ರಯತ್ನಿಸಿದರೂ ಅವನಿಗೆ ನೆಟವರ್ಕ ಸಿಕ್ಕಿರಲಿಲ್ಲ. ಸುಮಾಳಿಗೆ ಹೇಳದೆ ಹೋಗಲು ಮನಸ್ಸಾಗದೆ ಅವನು ಓಡೋಡಿ ಮನೆಗೆ ಬಂದಿದ್ದನು. ರಾಕೇಶ್ ಒಳ ಬಂದು ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿರುವ ಗಿರಿಯನ್ನು ನೋಡಿ ಗಾಬರಿಯಾದನು. ಅಳುತ್ತಾ ನಿಂತಿದ್ದ ಸುಮಾಳನ್ನು ಆತ ಸಮಾಧಾನ ಮಾಡುವಷ್ಟರಲ್ಲಿ ಸುಮಾಳ ಗೆಳತಿ ಬಂದಳು. ತನ್ನ ಗಂಡನ ಪರಿಸ್ಥಿತಿಯನ್ನು ನೋಡಿ ಎದೆಬಡಿದುಕೊಂಡು ಅಳುವ ಬದಲು ನಿನಗೆ ಹೀಗೆ ಆಗಬೇಕಿತ್ತೆಂದು ಶಾಪ ಹಾಕಿದಳು. ಆಸ್ಪತ್ರೆಯ ಹೊಸಿಲು ತುಳಿಯುವ ಮುನ್ನವೇ ಗಿರಿಯ ಪ್ರಾಣ ಪರಮೇಶ್ವರನ ಪಾದ ಸೇರಿತು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                      ಸುಮಾಳ ಜೊತೆಗಾದ ಈ ಅನಿರೀಕ್ಷಿತ ಕೆಟ್ಟ ಘಟನೆಗೆ ರಾಕೇಶ್ ಕಳವಳಗೊಂಡನು. ಸುಮಾಳಿಗೆ ಆದ ಶಾಕನಿಂದ ಚೇತರಿಸಿಕೊಳ್ಳಲು ಒಂದು ವಾರ ಸಮಯ ಬೇಕಾಯಿತು. ಅವಳೊಂದಿಗೆ ಇಂಥ ಘಟನೆಗಳು ಮತ್ತೆ ಮರುಕಳಿಸಬಾರದೆಂಬ ಕಾರಣಕ್ಕೆ ಮನೆಕಾವಲಿಗೆ ವಾಚಮನ್ ಒಬ್ಬನನ್ನು ನೇಮಿಸಿದನು. ಜೊತೆಗೆ ಮನೆಕೆಲಸದಲ್ಲಿ ಅವಳಿಗೆ ಸಹಾಯ ಮಾಡಲು ಒಬ್ಬಳು ಮನೆಕೆಲಸದವಳನ್ನು ನಿಯೋಜಿಸಿದನು. ಆದರೂ ಸುಮಾಳ ಮುಖದಲ್ಲಿ ನಗು ಮೂಡಲಿಲ್ಲ. ಅವಳು ಏನನ್ನೋ ಯೋಚಿಸುತ್ತಾ ಬೆಡ್ರೂಮಲ್ಲಿ ಕುಳಿತ್ತಿದ್ದಳು. ರಾಕೇಶ್ ಅವಳತ್ರ ಹೋಗಿ "ಇನ್ನೂ ಯಾಕೆ ಡಲ್ಲಾಗಿರುವೆ? ಆದದ್ದನ್ನೆಲ್ಲ ಒಂದು ಕೆಟ್ಟ ಕನಸೆಂದು ತಿಳಿದು ಮರೆತು ಬೀಡು ಪ್ಲೀಸ್" ಎಂದನು. ಅದಕ್ಕಾಕೆ "ನಾನು ಅದನ್ನು ಯಾವಾಗಲೋ ಮರೆತಿರುವೆ. ಮತ್ತೆ ಹಳೆಯದನ್ನೆಲ್ಲ ಕೆದಕಬೇಡ" ಎಂದೇಳಿ ಸುಮ್ಮನಾದಳು.
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
                                  ರಾಕೇಶ್ ಗಾಬರಿಗೊಂಡು "ಸುಮಾ ಮತ್ಯಾಕೆ ಹೀಗೆ ಮೌನವಾಗಿರುವೆ? ನನಗೆ ಬೇಜಾರಾಗ್ತಿದೆ" ಎಂದನು. "ನೀನು ಆ ಘಟನೆಯಾದಾಗಿನಿಂದ ನನ್ನ ಬಳಿ ಬಂದಿಲ್ಲ. ನನ್ನನ್ನು ನೀನು ಮುಟ್ಟಿಲ್ಲ, ಮುದ್ದಿಸಿಲ್ಲ. ನಾನಿನ್ನೂ ಪವಿತ್ರವಾಗಿದೀನಿ ಕಣೋ. ಪ್ಲೀಸ್ ನನ್ನನ್ನು ಸ್ವೀಕರಿಸು" ಎಂದಳು. ಅವಳ ಮಾತಿಗೆ ರಾಕೇಶ್ ನಗತೊಡಗಿದನು. "ಏ ಹುಚ್ಚಿ, ನೀನು ಯಾವತ್ತಿದ್ರು ಪರಮ ಪವಿತ್ರಳೇ. ಯಾಕ ಏನೇನೋ ಇಮ್ಯಾಜಿನ ಮಾಡಿಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ತಿಯಾ? ನೀನು ಕರಿಲಿ ಅಂತಾ ಕಾಯ್ತಿದಿನೆ" ಎಂದನು. ಸುಮಾ ಅವನನ್ನು ಅಪ್ಪಿಕೊಂಡು ಅಳತೊಡಗಿದಳು. ಆತ ಅವಳನ್ನು ಸಂತೈಸಿದನು. ಜೊತೆಗೆ ಅವಳು ನಗಲಿ ಅಂತ ಅವಳಿಗೆ ಕಚಗುಳಿ ಇಟ್ಟನು. ಆದರೆ ಅವಳು ನಗಲಿಲ್ಲ. ಮತ್ತಷ್ಟು ಸಿರಿಯಸ್ಸಾದಳು. ಅವನು ಮತ್ತೆ ಕಚಗುಳಿ ಇಟ್ಟನು. ಆದರೂ ಅವಳು ನಗಲಿಲ್ಲ. ಸ್ವಲ್ಪ ಕೋಪಿಸಿಕೊಂಡಳು. ಅವನು ಅವಳ ಕೆನ್ನೆ ಕಚ್ಚಿದನು. ಆದರೆ ಅವಳು ಪ್ರತಿಕ್ರಿಯಿಸಲಿಲ್ಲ. ಕೊನೆಗೆ ಅವನು ಬೇಸತ್ತು ಸುಮ್ಮನೆ ನಿಂತನು. ಅವನ ಸಪ್ಪೆ ಮೋರೆ ನೋಡಿ ಅವಳು ಜೋರಾಗಿ ನಗಲು ಶುರು ಮಾಡಿದಳು....
ಸಂಜೆರಾಣಿಯ ಮೊದಲ ರಾತ್ರಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ
Note : All Commercial Rights of this story are reserved by Roaring Creations Films. This is fully imaginary story and does't belongs to anyone in anyway. This story is written for commercial purpose only. So please don't take it too seriously. 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಒಂದು ರೊಮ್ಯಾಂಟಿಕ್ ಪ್ರೇಮಕಥೆ - ಸಂಜೆರಾಣಿಯ ಮೊದಲ ರಾತ್ರಿ - Kannada Hot Stories  ಒಂದು ರೊಮ್ಯಾಂಟಿಕ್ ಪ್ರೇಮಕಥೆ -  ಸಂಜೆರಾಣಿಯ ಮೊದಲ ರಾತ್ರಿ -  Kannada Hot Stories Reviewed by Director Satishkumar on March 14, 2018 Rating: 4.5
Powered by Blogger.