ಸಕ್ಸೆಸ್ ಅನ್ನೋದು ಸುಮ್ಮನೆ ಸಿಗುವ ವಸ್ತುವಲ್ಲ. ಸಕ್ಸೆಸ್ ಮತ್ತು ಸೆ** ಅಂದುಕೊಂಡಷ್ಟು ಸುಲಭವಾಗಿ ಸಿಗುವುದಿಲ್ಲ. ಎರಡಕ್ಕೂ ಸಿಕ್ಕಾಪಟ್ಟೆ ಬೆವರು ಸುರಿಸಲೇಬೇಕಾಗುತ್ತದೆ. ಎಷ್ಟು ಸಾಧಿಸಿದರೂ ಕಡಿಮೆಯೇ. ನಿರಂತರ ಪ್ರಯತ್ನಗಳ ಪ್ರತಿಫಲವೇ ಸಕ್ಸೆಸ್. ಸಕ್ಸೆಸ್ ಅನ್ನೋದೊಂದು ಸಿಕ್ಕರೆ ಸಾಕು, ಸಂಪತ್ತು, ಸನ್ಮಾನ, ಸೌಲಭ್ಯಗಳ ಜೊತೆಜೊತೆಗೆ ಸುಂದರಿಯರು ಸಹ ಸುಲಭವಾಗಿ ಸಿಗುತ್ತಾರೆ. ಯಾರು ಯಾವ ಕಾರಣಕ್ಕಾಗಿ ಸಕ್ಸೆಸನ್ನು ಹುಡುಕಿಕೊಂಡು ಹೊರಟಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತಿರುತ್ತೆ. ಸಕ್ಸೆಸಿಗೆ ಯಾವುದೇ ಸುಲಭ ಸೂತ್ರಗಳಿಲ್ಲ. ಆದರೆ ಸಕ್ಸೆಸಫುಲ ವ್ಯಕ್ತಿಗಳಿಂದ ಕೆಲವು ಟಿಪ್ಸಗಳು ಸಿಗುತ್ತವೆ. ಸಕ್ಸೆಸಫುಲ್ ವ್ಯಕ್ತಿಗಳ ಸೆಕ್ರೆಟ್ಸಗಳನ್ನು ತಿಳಿದುಕೊಳ್ಳುವುದರಿಂದ ನಮಗೂ ಸಕ್ಸೆಸಿನ ದಾರಿ ಸಮೀಪವಾಗಬಹುದು...
ಸಕ್ಸೆಸಫುಲ್ ವ್ಯಕ್ತಿಗಳ ಕೆಲವು ಗುಟ್ಟುಗಳು ಇಲ್ಲಿವೆ ;
೧) ಸಾಮಾನ್ಯವಾಗಿ ಸಕ್ಸೆಸಫುಲ್ ವ್ಯಕ್ತಿಗಳು ಶ್ರಮಜೀವಿಗಳಾಗಿರುತ್ತಾರೆ. ಅದಕ್ಕಾಗಿ ವರ್ಕಹೋಲಿಕ ಮೆಂಟಾಲಿಟಿಯನ್ನು ಬೆಳೆಸಿಕೊಂಡಿರುತ್ತಾರೆ. ಅವರಲ್ಲಿ ಡೆಡಿಕೇಷನ ಅನ್ನೋದು ರಕ್ತಗತವಾಗಿರುತ್ತದೆ. ಅವರು ಒಂದು ವಾರಕ್ಕೆ ಖುಷಿಯಿಂದ ಸರಾಸರಿಯಾಗಿ 100+- ಗಂಟೆ ಕೆಲಸ ಮಾಡುತ್ತಾರೆ.
೨) ಸಕ್ಸೆಸಫುಲ್ ವ್ಯಕ್ತಿಗಳು ನಿರಂತರವಾಗಿ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಅವರು ನಿರಂತರವಾಗಿ ಏನಾದರೂ ಒಂದು ಹೊಸದನ್ನು ಕಲಿಯುತ್ತಲೇ ಇರುತ್ತಾರೆ. ಅವರು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ. ಅವರಲ್ಲಿ ಉತ್ತಮ ಸಂವಹನ ಕೌಶಲ್ಯಗಳಿರುತ್ತವೆ.
೩) ಸಕ್ಸೆಸಫುಲ್ ವ್ಯಕ್ತಿಗಳು ಕಂಫರ್ಟ ಝೋನನಲ್ಲಿ ಹಾಯಾಗಿರಲು ಇಷ್ಟಪಡುವುದಿಲ್ಲ. ಅವರು ಕಂಫರ್ಟ ಝೋನ ಬಿಟ್ಟು ಬದುಕುತ್ತಾರೆ. ಅವರು ಹುಚ್ಚರಂತೆ ಲೆಕ್ಕವಿಲ್ಲದೆ ಹೆಚ್ಚುಕಮ್ಮಿ ರಿಸ್ಕಗಳನ್ನು ತೆಗೆದುಕೊಂಡು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಅವರು ಯಾವಾಗಲೂ ಕ್ಯಾಲ್ಕುಲೇಟೆಡ ರಿಸ್ಕಗಳನ್ನು ತೆಗೆದುಕೊಂಡು ಸಫಲರಾಗುತ್ತಾರೆ.
೪) ಸಕ್ಸೆಸಫುಲ್ ವ್ಯಕ್ತಿಗಳಲ್ಲಿ ಒಂದು ಪ್ರಬಲವಾದ ಸ್ಪರ್ಧಾ ಮನೋಭಾವವಿರುತ್ತದೆ. ಅವರು ಸ್ಪರ್ಧಿಸಲು ಆಸಕ್ತಿ ತೋರಿಸುತ್ತಾರೆ. ಇನ್ನು ಕೆಲವರು ತಮ್ಮೊಂದಿಗೆ ತಾವೇ ಸ್ಪರ್ಧಿಸುತ್ತಾರೆ.
೫) ಸಕ್ಸೆಸಫುಲ್ ವ್ಯಕ್ತಿಗಳು ಕೊರತೆಗಳಿಗಾಗಿ ಕೊರಗುತ್ತಾ ಕೂರುವುದಿಲ್ಲ. ದುಡ್ಡಿಲ್ಲವೆಂದು ಅವರು ಕೈಕಟ್ಟಿ ಸಪ್ಪೆ ಮೋರೆ ಹಾಕಿಕೊಂಡು ಸುಮ್ಮನೆ ಕೂರುವುದಿಲ್ಲ. ದುಡ್ಡನ್ನು ಹೇಗೆ ಸಂಪಾದಿಸಬಹುದು ಎಂಬುದರ ಬಗ್ಗೆ ಯೋಜಿಸುತ್ತಾರೆ. ಆದರೆ ಯೋಚಿಸುವುದಿಲ್ಲ. ಅವರು ಸಮಸ್ಯೆಗಳಿಗೆ ಹೆದರುವುದಿಲ್ಲ. ಅವರು ಸಮಸ್ಯೆಗಳಿಗಿಂತ ಹೆಚ್ಚಾಗಿ ಸೋಲುಷನ ಮೇಲೆ ಗಮನಹರಿಸುತ್ತಾರೆ.
೬) ಸಕ್ಸೆಸಫುಲ್ ವ್ಯಕ್ತಿಗಳು ಸಾಧ್ಯವಾದಷ್ಟು ಬೇಗನೆ ಎದ್ದೇಳುತ್ತಾರೆ. ಅವರು ಶಾರ್ಪಾದ ಮೆದುಳಿನ ಜೊತೆಗೆ ಶಕ್ತಿಶಾಲಿಯಾದ ದೇಹವನ್ನು ಬೆಳೆಸುವುದಕ್ಕಾಗಿ ವ್ಯಾಯಾಮಗಳನ್ನು ಮಾಡುತ್ತಾರೆ. ಸುರ್ಯೊದಯಕ್ಕಿಂತ ಮುಂಚೆ ಏಳುವುದರಿಂದ ದೇಹದಲ್ಲಿ ಒಂದು ಧನಾತ್ಮಕ ಶಕ್ತಿ ಪ್ರವಹಿಸುತ್ತದೆ. ಅವರು ಈ ಧನಾತ್ಮಕ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಹೀಗಾಗಿ ಅವರಲ್ಲಿ ನೆಗೆಟಿವ್ ವಿಚಾರಗಳಿಗೆ ಜಾಗವಿರಲ್ಲ.
೭) ಸಕ್ಸೆಸಫುಲ್ ವ್ಯಕ್ತಿಗಳು ಭವಿಷ್ಯವನ್ನು ಊಹಿಸಿ ಮುನ್ನಡೆಯುತ್ತಾರೆ. ಅವರಲ್ಲಿ ಒಂದು ದೂರದೃಷ್ಟಿ ಇರುತ್ತದೆ. ಅವರು ಸಮಾಜದ ಅಭ್ಯುದಯದ ಬಗ್ಗೆ ಕಾಳಜಿ ತೋರಿಸುತ್ತಾರೆ. ಅದಕ್ಕಾಗಿ ಅವರು ಕೆಲವು ಕೆಲಸಗಳನ್ನು ನಿಸ್ವಾರ್ಥದಿಂದ ಮಾಡುತ್ತಾರೆ.
೮) ಸಕ್ಸೆಸಫುಲ್ ವ್ಯಕ್ತಿಗಳು ಸಮಯವನ್ನು ಗೌರವಿಸುತ್ತಾರೆ. ಅವರು ತಮ್ಮ ಸಾಧನೆಗಾಗಿ ಸ್ವಾರ್ಥಿಗಳಾಗಿರುತ್ತಾರೆ. ಅವರು ತಮ್ಮ ಅಮೂಲ್ಯವಾದ ಸಮಯವನ್ನು ಬೇರೆಯವರಿಗಾಗಿ ವ್ಯರ್ಥ ಮಾಡುವುದಿಲ್ಲ. ಅವರು ತಮ್ಮ ಸಮಯವನ್ನು ಅಳೆದುತೂಗಿ ದುಡ್ಡಿನಂತೆ ಖರ್ಚು ಮಾಡುತ್ತಾರೆ. ಅವರು ತಮಗೆ ಸಿಕ್ಕ ಸಮಯವನ್ನು ತಮ್ಮ ಏಳ್ಗೆಗಾಗಿ ಸರಿಯಾಗಿ ಬಳಸಿಕೊಳ್ಳುತ್ತಾರೆ.
೯) ಸಕ್ಸೆಸಫುಲ್ ವ್ಯಕ್ತಿಗಳು ಸಾಧ್ಯವಾದಷ್ಟು ಶಾಂತಚಿತ್ತದಿಂದ ಮತ್ತು ಸಮಯಚಿತ್ತದಿಂದ ವರ್ತಿಸುತ್ತಾರೆ. ಅವರಲ್ಲಿ ತಕ್ಕಮಟ್ಟಿಗೆ ಪ್ರಾಮಾಣಿಕತೆಯು ಇರುತ್ತದೆ. ಅವರಲ್ಲಿ ಉತ್ತಮ ಹವ್ಯಾಸಗಳಿರುತ್ತವೆ. ಅಪರೂಪಕ್ಕೆ ಅವರಲ್ಲಿ ಕೆಲವು ಸಣ್ಣಪುಟ್ಟ ಕೆಟ್ಟ ಗುಣಗಳಿರುತ್ತವೆ. ಆದರೆ ಆ ಗುಣಗಳು ನಾಲ್ಕು ಗೋಡೆಗಳ ಮಧ್ಯೆದಲ್ಲಿಯೇ ಇರುತ್ತವೆ. ಅವರು ತಮ್ಮ ಸಮಸ್ಯೆಗಳನ್ನು ಸಮಾಜದ ಮುಂದೆ ತಪ್ಪಿಯೂ ಇಡುವುದಿಲ್ಲ.
೧೦) ಸಕ್ಸೆಸಫುಲ್ ವ್ಯಕ್ತಿಗಳು ಜಗತ್ತು ತಮ್ಮ ಬಗ್ಗೆ ಏನೆಂದು ಕೊಳ್ಳುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಹೊಗಳಿಕೆಗಳಿಗೆ ಹಿಗ್ಗಲ್ಲ, ತೆಗಳಿಕೆಗಳಿಗೆ ಕುಗ್ಗಲ್ಲ. ಅವರು ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮಾಡುತ್ತಾ ಮುನ್ನುಗ್ಗುತ್ತಾರೆ. ಅವರು ನಿಂದನೆಗಳನ್ನು, ಅವಮಾನಗಳನ್ನು ಸನ್ಮಾನಗಳಂತೆ ಸ್ವೀಕರಿಸಿ ಅವಮಾನಿಸಿದವರಿಂದಲೇ ಸನ್ಮಾನಿಸಿಕೊಳ್ಳುತ್ತಾರೆ.
೧೧) ಸಕ್ಸೆಸಫುಲ್ ವ್ಯಕ್ತಿಗಳು ಸೋಲನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಅವರು ಸೋಲಿಗೆ ಹೆದರುವುದಿಲ್ಲ. ಅವರು ಸಾಮಾನ್ಯವಾಗಿ ಭಯಕ್ಕೆ ಭಯ ಹುಟ್ಟಿಸುವಂಥ ಮನೋಭಾವವನ್ನು ಹೊಂದಿರುತ್ತಾರೆ. ಅವರು ಸೋಲನ್ನು ಸಮರ್ಥವಾಗಿ ಎದುರಿಸಿ ಗೆಲುವಿನ ನಗೆ ಬೀರುತ್ತಾರೆ. ಅವರು ತಮ್ಮ ತಪ್ಪುಗಳನ್ನು ಬೇಗನೆ ತಿದ್ದಿಕೊಂಡು ಅವುಗಳಿಂದ ಪಾಠ ಕಲಿಯುತ್ತಾರೆ.
೧೨) ಸಕ್ಸೆಸಫುಲ್ ವ್ಯಕ್ತಿಗಳು ಸಿಕ್ಕಾಪಟ್ಟೆ ಕನಸುಗಳನ್ನು ಕಾಣುತ್ತಾರೆ. ಅವರು ಕನಸುಗಳನ್ನು ಕಾಣೋವಾಗ ಬೇಲಿ ಹಾಕಿಕೊಳ್ಳಲ್ಲ. ಅವರು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಆ ಕನಸುಗಳ ನನಸಿಗಾಗಿ ಶ್ರದ್ಧೆಯಿಂದ ದುಡಿಯುತ್ತಾರೆ. ಅವರು ತಮ್ಮ ಪ್ಲ್ಯಾನಗಳನ್ನು ಶೇರ್ ಮಾಡುವ ಬದಲಾಗಿ ನೇರವಾಗಿ ರಿಸಲ್ಟಗಳನ್ನು ಜಗತ್ತಿನ ಮುಂದಿಡುತ್ತಾರೆ.
೧೩) ಸಕ್ಸೆಸಫುಲ್ ವ್ಯಕ್ತಿಗಳು ತಮ್ಮ ಫ್ಯಾಷನ್ನನ್ನೇ ಪ್ರೋಫೆಷನ್ನಾಗಿ ಪರಿವರ್ತಿಸುತ್ತಾರೆ. ಅವರು ಅವರಲ್ಲಿನ ಕಲೆಯನ್ನು ಕೊಲೆ ಮಾಡದೆ ಅದನ್ನು ಜಗತ್ತಿನ ಮುಂದೆ ಪ್ರದರ್ಶಿಸಿ ಅನಾಯಾಸವಾಗಿ ಸಂಪತ್ತನ್ನು ಸಂಪಾದಿಸುತ್ತಾರೆ.
೧೪) ಸಕ್ಸೆಸಫುಲ್ ವ್ಯಕ್ತಿಗಳು ಅದೃಷ್ಟವನ್ನು ನಂಬಿ ಕೂರುವುದಿಲ್ಲ. ಅವರು ತುಂಬಾ ಬ್ಯಾಲನ್ಸ್ಡ ಮೈಂಡಸೆಟನ್ನು ಹೊಂದಿರುತ್ತಾರೆ. ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ಕೊರಗದೆ, ಸಾಮರ್ಥ್ಯಗಳ ಬಗ್ಗೆ ಹೆಮ್ಮೆಪಟ್ಟು ಮುಂದೆ ಬರುತ್ತಾರೆ. ಅವರು ಸಾಧ್ಯವಾದಷ್ಟು ಒಪನ ಹಾರ್ಟೆಡ ಆಗಿರುತ್ತಾರೆ.
೧೫) ಸಕ್ಸೆಸಫುಲ್ ವ್ಯಕ್ತಿಗಳು ಕುಂಟು ನೆಪಗಳನ್ನು ಹೇಳಿ ಕೆಲಸದಿಂದ ಜಾರಿಕೊಳ್ಳುವುದಿಲ್ಲ. ಅವರು ತಮ್ಮ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅವುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಅವರು ನೆಪಗಳನ್ನು ಹೇಳಿ ತಮ್ಮನ್ನು ತಾವು ವಂಚಿಸಿಕೊಳ್ಳುವುದಿಲ್ಲ. ಹೀಗಾಗಿ ಅವರಲ್ಲಿ ನಾಯಕತ್ವದ ಗುಣ ಸ್ವಾಭಾವಿಕವಾಗಿ ಬೆಳೆದಿರುತ್ತದೆ.
೧೬) ಸಕ್ಸೆಸಫುಲ್ ವ್ಯಕ್ತಿಗಳು ಒಂಟಿಯಾಗಿದ್ದಾಗ ತಮ್ಮೊಂದಿಗೆ ತಾವು ಮಾತಾಡಿಕೊಳ್ಳುತ್ತಾರೆ. ಅವರು ಆತ್ಮವಿಶ್ವಾಸದ ಜೊತೆ ಆತ್ಮಗೌರವವನ್ನು ಸಹ ಹೊಂದಿರುತ್ತಾರೆ. ಅವರು ಯಾವುದೇ ಕಾರಣಕ್ಕೂ ತಮ್ಮ ಆ್ಯಟಿಟುಡನ್ನು ಬಿಟ್ಟು ಕೊಡುವುದಿಲ್ಲ. ಅವಶ್ಯಕತೆ ಇದ್ದರೆ ಅವರು ಹೋಗುವ ದಾರಿಯನ್ನು ಬದಲಾಯಿಸುತ್ತಾರೆ. ಆದರೆ ತಮ್ಮ ಗುರಿಯನ್ನು ಬದಲಾಯಿಸುವುದಿಲ್ಲ.
೧೭) ಸಕ್ಸೆಸಫುಲ್ ವ್ಯಕ್ತಿಗಳು ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ. ಅವರು ತಮಗೆ ಇಷ್ಟವಿರುವ ಕೆಲಸವನ್ನೇ ಮಾಡುತ್ತಾರೆ. ಇಷ್ಟವಿಲ್ಲದ ಕೆಲಸವನ್ನು ಕಾಟಾಚಾರಕ್ಕೆ ಮಾಡಿ ಸಮಯದ ಜೊತೆಗೆ ಶಕ್ತಿಯನ್ನು ವ್ಯಯಿಸುವ ಮುಠ್ಠಾಳತನವನ್ನು ಅವರು ತಪ್ಪಿಯೂ ಮಾಡುವುದಿಲ್ಲ.