ಬೇವು ನಿಜವಾದ ಮಾವು : Yugadi Poem in Kannada - ugadi kannada kavanagalu - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬೇವು ನಿಜವಾದ ಮಾವು : Yugadi Poem in Kannada - ugadi kannada kavanagalu

ಬೇವು ನಿಜವಾದ ಮಾವು

ನಮ್ಮ ನಾಲಿಗೆ ಬಯಸುವ ರುಚಿ
ದೇಹಕ್ಕೆ ಯಾವತ್ತೂ ಅಲ್ಲ ಶುಚಿ
ಬೇವಿನ ಸೊಪ್ಪು ನಾಲಿಗೆಗೆ ಕಹಿ
ಆದರೆ ಆರೋಗ್ಯಕ್ಕೆ ಅದೇ ಸಿಹಿ...

ಬೇವಿನ ಬೇರು, ತೊಗಟೆ, ಎಲೆ,
ಹೂ-ಕಾಯಿ ಎಲ್ಲವೂ ಉಪಯುಕ್ತ
ಅದು ಇರುವುದೇ ನಮ್ಮ ಪ್ರಯುಕ್ತ
ಅದನ್ನು ಸೂಕ್ತವಾಗಿ ಬಳಸದ
ನೀನು ನಿರುಪಯುಕ್ತ...

ನಿನಗೆ ಬೇವಿನ ಮರವೇ ತಂಪು
ಮಾವಿನ ಮರ ನೀಡಲ್ಲ ಸೊಂಪು
ದಣಿದ ದೇಹಕ್ಕೆ ಬೇವಿನ ಮರವೇ ಇಂಪು
ಈಗಲಾದರೂ ತಿಳಿ ನೀನು ಬೇವಿನ ಕಂಪು

ಕೇಳೇ, ಬೇವು ನಿಜವಾದ ಮಾವು
ಯುಗಾದಿ ಹಬ್ಬಕ್ಕೆ ಬೇಕು ಬೇವು
ಅದರಿಂದ ದೂರಾಗುವುದು 
ನಿನ್ನ ಬಾಳಲ್ಲಿದ್ದ ನೂರಾರು ನೋವು

ಬೇವಿನ ಮೇಲೆ ನಿನಗೇಕೆ ಕೋಪ?
ಅದರಿಂದ ಇಳಿಯುತ್ತೆ ನಿನ್ನ ದೇಹದ ತಾಪ
ಗೆಳತಿ ಮಾವನ್ನು ಅತಿಯಾಗಿ ಪ್ರೀತಿಸದಿರು
ಹಿತವಲ್ಲವೆಂದು ಬೇವನ್ನು ಮರೆಯದಿರು.
ಬೇವು ನಿಜವಾದ ಮಾವು....


ಬೇವು ನಿಜವಾದ ಮಾವು : Yugadi Poem in Kannada

೨) ಚಿರಂತನ ಸ್ನೇಹ  

ಬರೀ ಸಂಕಷ್ಟ ಬಂದಾಗ ಗೆಳೆಯನ
ಗೆಳೆತನ ಬಯಸುವ ಮನುಜ,
ಸ್ನೇಹದ ಸಮಾಧಿ ಮೇಲೆ ಸ್ವಾರ್ಥ
ಸಾಧಿಸುವ ಮುಗ್ಧ ತನುಜ...

ಸಂತಸದಲಿ ಸಂತಸದಿ ಸಂತಸವ
ಹಂಚಿಕೊಂಡೆ ನೀನು,
ಅದಕ್ಕಾಗಿ ಇನಿಯನ ಕಷ್ಟದಲಿ
ಇಷ್ಟಪಟ್ಟು ನೆರವಾಗಲಿ ನಿನ್ನಯ ತನು...

ಗೆಳೆಯನ ಮನೆತನ ನೋಡದೆ
ಅವನ ಮನತನವ ನೋಡು.
ಅವರಿವರ ಚಾಡಿ ಮಾತ ಕೇಳದೇ,
ಹಗೆತನ ಸಾಧಿಸದೆ ಗೆಳೆತನ ಕಾಪಾಡು..

ಕಷ್ಟದಲ್ಲಿ ನೀ ಕಷ್ಟಿಯಾಗಿ ಬಾಗು
ಸುಖದಲ್ಲಿ ನೀ ಸುಖಿಯಾಗಿ ತೇಗು
ದು:ಖದಲ್ಲಿ ನೀ ದು:ಖಿಯಾಗಿ ಹೋಗು
ಹೆಜ್ಜೆಹೆಜ್ಜೆಗು ನೀ ಜೊತೆಯಾಗಿ ಸಾಗು...

ಗೆಳೆತನದಲ್ಲೇ ಮಿಡಿಯಲಿ ನಿನ್ನ ಮನ
ಪಡೆಯುತಿರಲಿ ಮಾಸದ ಅಮರ ಕ್ಷಣ
ನಿನ್ನ ಸ್ನೇಹ ಚಿರಂತನವೆಂದು ಸಾಬೀತಾಗಲಿ
ಅದಕೇಳಿ ವಂಚಿಸುವ ಮನಗಳು ಬದಲಾಗಲಿ... 


ಬೇವು ನಿಜವಾದ ಮಾವು : Yugadi Poem in Kannada

Blogger ನಿಂದ ಸಾಮರ್ಥ್ಯಹೊಂದಿದೆ.