ಕೇಳಲೇಬೇಕಾದ 10 ಪ್ರಶ್ನೆಗಳು - Questions Must Ask in Kannada

Chanakya Niti in Kannada
ಕೇಳಲೇಬೇಕಾದ 10 ಪ್ರಶ್ನೆಗಳು

                    ಕೆಲವು ಪ್ರಶ್ನೆಗಳನ್ನು ಯಾರಿಗೂ ಕೇಳಬಾರದಂತ ಅಂದುಕೊಂಡಿರುತ್ತೀವಿ. ಆದರೆ ನೋವಾದಾಗ ಆ ಪ್ರಶ್ನೆಗಳನ್ನು ಕೇಳಲೇಬೇಕು ಎಂದೆನಿಸುತ್ತದೆ. ಆದ್ರೆ ಈ ಪ್ರಶ್ನೆಗಳನ್ನು ಯಾರಿಗೆ ಕೇಳಬೇಕು ? ಯಾಕೆ ಕೇಳಬೇಕು ? ಯಾವಾಗ ಕೇಳಬೇಕು?  ಎಲ್ಲಿ ಕೇಳಬೇಕು? ಎಂದು ಗೊತ್ತಾಗುವುದಿಲ್ಲ. ಇಂಥಹ ಪ್ರಶ್ನೆಗಳು ಮನಸ್ಸಲ್ಲೇ ಉಳಿದು ಕೊನೆವರೆಗೂ ಕಾಡುತ್ತವೆ. ಅಂಥಹ ಕೆಲವು ಪ್ರಶ್ನೆಗಳು ಇಲ್ಲಿವೆ ;
ಕೇಳಲೇಬೇಕಾದ 10 ಪ್ರಶ್ನೆಗಳು
೧) ಹುಡುಗಿ ಕೈಕೊಟ್ರೆ ಅದು ಸಂಸ್ಕೃತಿಯ ಸೌಜನ್ಯವಂತೆ. ಅದೇ ಹುಡುಗ ಕೈಕೊಟ್ರೆ ಅದು ಲೈಂಗಿಕ ದೌರ್ಜನ್ಯವಂತೆ. ಇದು ಯಾವ ಸೀಮೆ ನ್ಯಾಯ?  ಹುಡುಗರ ಮೇಲಾಗುತ್ತಿರುವ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ ?

ಕೇಳಲೇಬೇಕಾದ 10 ಪ್ರಶ್ನೆಗಳು

೨) ದಾನದಲ್ಲಿ ಕರ್ಣ, ಧರ್ಮದಲ್ಲಿ ಯುಧಿಷ್ಠಿರ, ಶೌರ್ಯದಲ್ಲಿ ಅರ್ಜುನ, ಧ್ಯೇಯದಲ್ಲಿ ಧ್ರುವ, ಮಾತಿನಲ್ಲಿ ಮಾಣಿಕ್ಯ, ಛಲದಲ್ಲಿ ಚಾಣಕ್ಯ, ಸ್ನೇಹದಲ್ಲಿ ಸುಧಾಮ, ಪ್ರೀತಿಯಲ್ಲಿ ದುಷ್ಯಂತ, ಬುದ್ಧಿಯಲ್ಲಿ ಬೀರಬಲ, ತ್ಯಾಗದಲ್ಲಿ ಬಾಹುಬಲಿಯಾಗಬಹುದು. ಬಡವರಿಗೆ ಬೆಳಕು, ಅನಾಥರಿಗೆ ಆಸರೆಯಾಗಬಹುದು. ಆದ್ರೆ ಇವೆಲ್ಲ ಬಿಟ್ಟು ಕೆಲ ಹುಡುಗರು ದೇವದಾಸ ಯಾಕಾಗುತ್ತಾರೆ ?

ಕೇಳಲೇಬೇಕಾದ 10 ಪ್ರಶ್ನೆಗಳು

೩) ಬಾಲ್ಯದಲ್ಲಿ ಅಪ್ಪನ ಹೆಗಲೇರಿ ಬದುಕಿನ ಹೊಳೆಯನ್ನು ದಾಟಿದ್ದನ್ನು ಮರೆತ ಮಗ, ಅಪ್ಪ ಬದುಕಿದ್ದಾಗ ಅಪ್ಪನ ಹೆಗಲಿಗೆ ಹೆಗಲು ಕೊಡದೆ, ಅಪ್ಪ ಸತ್ತಾಗ ಅಪ್ಪನ ಚಟ್ಟಕ್ಕೆ ಹೆಗಲು ಕೊಟ್ಟರೇನು ಫಲ?

ಕೇಳಲೇಬೇಕಾದ 10 ಪ್ರಶ್ನೆಗಳು

೪) ಕರೆದು ಕರೆದು ಓದೋ ಅನ್ನೋ ಮೇಷ್ಟ್ರುಗಳು, ಜಿಗಿದು ಜಿಗಿದು ಹೊರ ಹೋಗೋ ಅನ್ನೋ ಕ್ಲಾಸರೂಮಗಳು, ತಲೆ ಕೆರೆದುಕೊಂಡ್ರು ಅರ್ಥವಾಗದ ನಾನಸ್ಟಾಪ್ ನಾನಸೆನ್ಸ್ ಲೆಕ್ಚರಗಳು, ತಲೆ ಒತ್ತೆಯಿಟ್ರು ಮುಗಿಯದ ಸಿಲ್ಯಾಬಸಗಳು, ರಾತ್ರಿಯೆಲ್ಲ ಓದಿದ್ದ್ರೂ ನೆನಪಿಗೆ ಬಾರದ ನೋಟ್ಸಗಳು, ಎಷ್ಟು ಸಲ ಇಷ್ಟಪಟ್ಟು ಬರೆದ್ರೂ ಒಮ್ಮೆಯೂ ಪಾಸಾಗದ ಸಬ್ಜೇಕ್ಟಗಳು. ಏನ ಕಥೆನೋ ನಮ್ದು...?

ಕೇಳಲೇಬೇಕಾದ 10 ಪ್ರಶ್ನೆಗಳು

೫) ಎದೆ ನೋವಿಗೆ ಸಾವಿರಾರು ಔಷಧಿಗಳಿವೆ. ಆದರೆ ಎದೆಯಲ್ಲಿರೋ ನೋವಿಗೆ ಔಷಧಿ ಇಲ್ಲ ಯಾಕೆ? ಮನೆಗೆ ಬೆಂಕಿ ಬಿದ್ದರೆ ನಂದಿಸಬಹುದು. ಆದ್ರೆ ಮನಸ್ಸಿಗೆ ಬೆಂಕಿ ಬಿದ್ದರೆ ನಂದಿಸಬಹುದೆ?

ಕೇಳಲೇಬೇಕಾದ 10 ಪ್ರಶ್ನೆಗಳು

೬)  ವರುಷವೀಡಿ ಓದಿದ್ದನ್ನು ಎಕ್ಸಾಮಗಿಂತ ಮುಂಚೆಯೇ ಮರೆತು ಬಿಡ್ತಾರೆ. ಸಂಕಷ್ಟದಲ್ಲಿ ಸಹಾಯ ಮಾಡಿದ ಸ್ನೇಹಿತನನ್ನು ಸಲೀಸಾಗಿ ಮರೆತು ಬಿಡ್ತಾರೆ. ಆದರೆ ಬೆನ್ನು ತೋರಿಸಿ ಬಿಟ್ಟೋದ ಹುಡುಗಿಯನ್ನು ಮರೆಯದೆ ನೆನಪಲ್ಲಿಟ್ಟುಕೊಂಡು ಕೊರಗುತ್ತಾರೆ ಯಾಕೆ?

ಕೇಳಲೇಬೇಕಾದ 10 ಪ್ರಶ್ನೆಗಳು

೭) ಎಲ್ಲ ಲೆಕ್ಚರಗಳು, ಪೇರೆಂಟ್ಸಗಳು, ಬರೀ ಮೂರವೊತ್ತು ಮಾರ್ಕ್ಸು, ಮಾರ್ಕ್ಸು ಅಂತಾ ಹುಡುಗರ ತಲೆ ತಿಂತಾರಲ್ಲ, ಬರೀ ಮಾರ್ಕ್ಸಗಳಿಂದ ಹೊಟ್ಟೆ ತುಂಬುತ್ತಾ? ಬರೀ ಮಾರ್ಕ್ಸಿಗಾಗಿ ಓದಿ ಇವತ್ತು ಬಹಳಷ್ಟು ಜನ ಕೆಲ್ಸಗಾಗಿ ಬೀದಿಬೀದಿ ಅಲೆಯುತ್ತಿರುವುದು ಕಣ್ಣಿಗೆ ಕಾಣಿಸಲ್ವಾ?

ಕೇಳಲೇಬೇಕಾದ 10 ಪ್ರಶ್ನೆಗಳು

೮) ಕೈಯಲ್ಲಿ ಸುಟ್ಟ ಬಿಡಿ, ಪಕ್ದಲ್ಲೇ ಕ್ವಾಟರ್ ಬಾಟ್ಲಿ, ಎದುರಲ್ಲೇ ಕೈ ಕೊಟ್ಟ ಹುಡುಗಿ ಇದ್ದ್ರೇ ಸಾಕು ಶುರುವಾಗುತ್ತೆ ಹುಡುಗರ ರಗಳೆ. ಇದಕ್ಕೆಲ್ಲ ಕೊನೆ ಯಾವಾಗ? ಹುಡುಗಿಯರು ಎಲ್ಲದರಲ್ಲಿಯೂ ತುಂಬಾನೇ ಫಾಸ್ಟು. ಆದ್ರೆ ಮನಸ್ಸಲ್ಲಿರೋ ಮಾತನ್ನು ಹೇಳೋಕೆ ಯಾಕಿಷ್ಟು ಲೇಟು?

ಕೇಳಲೇಬೇಕಾದ 10 ಪ್ರಶ್ನೆಗಳು

೯) ಅಕ್ಷರ ಕಲಿಯದವರು ಜಗತ್ತನ್ನೇ ಆಳಿದ್ದಾರೆ. ಪುಸ್ತಕ ಹಿಡಿಯದವರು ಇತಿಹಾಸಾನೆ ಬರೆದಿದ್ದಾರೆ. ಪೆನ್ ನೋಡದವರು ಪ್ರಪಂಚಾನೆ ಸುತ್ತಿದ್ದಾರೆ. ಓದು ಜೀವನ ರೂಪಿಸಬೇಕು. ಅದ್ನ ಬಿಟ್ಟು ಓದೋದ್ರಲ್ಲೇ ಅರ್ಧ ಜೀವನ ಮುಗಿಬಾರ್ದು. ಈಗಿನ ಹೈಬ್ರಿಡ ಜಮಾನಾದಲ್ಲಿ ಬದುಕೋದೆ ಬರೀ 60 ವರ್ಷ. ಅದರಲ್ಲಿ 30 ವರ್ಷ PhD ಪಡೆಯೋಕೆನೆ ತಗೊಂಡ್ರೆ, ನೀವು ಮನೆ ಕಟ್ಟಿ, ಸೆಟ್ಲಾಗಿ, ಮದ್ವೆಯಾಗಿ, ಮಕ್ಕಳು ಮರಿ ಮಾಡಿ, ಮಕ್ಕಳ ಮದ್ವೆಯಾಗೋವಷ್ಟ್ರಲ್ಲೇ ನೀವು ಮಣ್ಣಾಗುತ್ತೀರಾ. ಇಂಥದರಲ್ಲಿ ನಿಮಗೆ ದೇಶಸೇವೆಗೆ ಎಲ್ಲಿಂದ ಪುರಸೋತ್ತು ಸಿಗುತ್ತೆ...??

ಕೇಳಲೇಬೇಕಾದ 10 ಪ್ರಶ್ನೆಗಳು

೧೦) ಈ ಜಗತ್ತಿನಲ್ಲಿ ಆಗಿರೋ ಎಲ್ಲ ಕದನಗಳು, ಕಲಹಗಳು ಬರೀ ಹೆಣ್ಣು-ಮಣ್ಣು-ಹೊನ್ನಿಗಾಗಿ ಮಾತ್ರಾನಾ? ಈ ಮೂರನ್ನು ಬಿಟ್ಟು ಬೇರೆ ಕಾರಣಕ್ಕೆ ಕಲಹಗಳು ಆಗೇ ಇಲ್ವಾ?

ಕೇಳಲೇಬೇಕಾದ 10 ಪ್ರಶ್ನೆಗಳು


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಕೇಳಲೇಬೇಕಾದ 10 ಪ್ರಶ್ನೆಗಳು - Questions Must Ask in Kannada ಕೇಳಲೇಬೇಕಾದ 10 ಪ್ರಶ್ನೆಗಳು - Questions Must Ask in Kannada Reviewed by Director Satishkumar on March 22, 2018 Rating: 4.5
Powered by Blogger.