Nonsense ಗೋಳುಗಳು : Kannada Fun Articles - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

Nonsense ಗೋಳುಗಳು : Kannada Fun Articles

Director Satishkumar

1) ಬ್ಯಾಂಕ್ ಪಾಸಬುಕ್ಕಲ್ಲಿ ನಯಾಪೈಸೆ ದುಡ್ಡಿಲ್ಲದಿದ್ದರೂ ನಮ್ಮ ಜನ ಫೇಸಬುಕ್ಕಲ್ಲಿ ಎರಡೆರಡು ಅಕೌಂಟಗಳನ್ನು ಮಾಡದೇ ಬಿಡಲ್ಲ.

2) ಹುಡುಗರ ಫೋನ್ ನಂಬರಿಗೆ ಬೆಲೆ ಮತ್ತು ಬೇಡಿಕೆ ಎರಡೂ ಇಲ್ಲ.

3) ಎಲ್ಲರಿಗೂ ಎಲ್ಲ ಭಾಗ್ಯಗಳು ಸಿಕ್ಕಿವೆ. ಆದರೆ ಕುಡುಕರಿಗೆ ಇನ್ನು "ಕುಡುಕರ ಭಾಗ್ಯ" ಜಾರಿಯಾಗಿಲ್ಲ. ಮದುವೆಯಾಗದ ಹುಡುಗರಿಗೆ "ಕಂಕಣ ಭಾಗ್ಯ" ಬಂದಿಲ್ಲ.


4)  ನಮ್ಮ ದೇಶದ ರಾಜಕಾರಣಿಗಳಿಗೆ ಇನ್ನೂ ಒಳ್ಳೆ ಬುದ್ಧಿ ಬಂದಿಲ್ಲ. ಮುಂದೆ ಬರೋದು ಇಲ್ಲ.

5) ರಾಹುಲಜಿಗೆ ರಾಣಿಯೂ ಸಿಗ್ತಿಲ್ಲ, ರಾಜ್ಯಭಾರಾನೂ ಸಿಗ್ತಿಲ್ಲ.

6) ಹುಡುಗರು ನೋಡಿ ಜೊಲ್ಲು ಸುರಿಸಲಿ ಅಂತಾನೇ ಮೇಕಪ್ ಮಾಡ್ಕೊಂಡು ಬರೋ ಹುಡುಗಿಯರು, ಹುಡುಗರು ನೋಡಿದಾಗ ಯಾಕ ಕೋಪ ಮಾಡ್ಕೋತಾರಂತ ಅವರಿಗೆ ಗೊತ್ತಾಗಲ್ಲ.


7) ಜಿಯೋ ಸಿಮ್ ಇದ್ರು ಸರಿಯಾಗಿ ನೆಟವರ್ಕ ಸಿಗ್ತಿಲ್ಲ.

8) ಹುಡುಗಿಯ ಅಪ್ಪ ಹೂಂ ಅಂದ್ರು, ಹುಡುಗಿ ಹೂಂ ಅಂತಿಲ್ಲ.

9) ಮೊಬೈಲ್ ಸೂಸೈಡ್ ಮಾಡ್ಕೊತ್ತೀನಿ ಅಂದ್ರು ಜನ ಸೆಲ್ಫಿ ಹುಚ್ಚನ್ನು ಬಿಡ್ತಿಲ್ಲ.


10) ಫೇಸ್ಬುಕಲ್ಲಿರೋ ಹುಡ್ಗೀರು ಹುಡುಗರ ಫ್ರೆಂಡ್ ರಿಕ್ವೇಸ್ಟ ಆ್ಯಕ್ಸೆಪ್ಟ್ ಮಾಡ್ತಿಲ್ಲ.

11) ನನ್ ಹುಡ್ಗಿ Anytime ಆನಲೈನಲ್ಲಿದ್ರು ನನಗೆ ರಿಪ್ಲೆ ಮಾಡ್ತೀಲ್ಲ.

12)  ನನ್ನ ಹತ್ತು "Hi" ಗಳಿಗೆ ಅವಳೊಂದ್ಸಾರಿ "Hi-Hello" ಅಂತಾ ಕಳಿಸಿದರೆ ಅವಳ ಕೈಬೆರಳುಗಳೇನು ಸವೆದೊಗಲ್ಲ. ಆದರೂ ಅವಳು ಕಳಿಸಲ್ಲ.


13) ಪ್ರೇಮಿಗಳಿಗೆ ಸರಿಯಾಗಿ ನಿದ್ದೆ ಬರ್ತಿಲ್ಲ.

14)  ದಿನಾ ರಾತ್ರಿ ಕನಸ್ಸಲ್ಲಿ ಬಂದು ಕಾಡೋಳಿಗೆ ಮನಸ್ಸಲ್ಲಿರೋ ಪ್ರೀತಿ ಮಾತುಗಳನ್ನು ಹೇಳಲು ಧೈರ್ಯ ಸಾಲುತ್ತಿಲ್ಲ.

15) ಪಾಗಲ್ ಹಾರ್ಟಲ್ಲಿರೋ ಪ್ರೀತಿ ಪ್ಯಾರಾಗಾನ ಚಪ್ಪಲಿಯಿಂದ ಹೊಡೆದ್ರು ಹೋಗಲ್ಲ.


16) ಜೇಬು ಖಾಲಿ, ಹಾರ್ಟು ಖಾಲಿ, ಲೈಫು ಖಾಲಿ, ಮಾರ್ಕ್ಸ್ ಕಾರ್ಡು ಖಾಲಿ. ಅದಕ್ಕೆ ನಾನು ತುಸು ಪೋಲಿ.

17) ನಾನು ಇಷ್ಟಪಟ್ಟಿರೋ ಹುಡುಗಿ ನನಗೆ ಸಿಗಲಿಲ್ಲ. ನನ್ನನ್ನು ಇಷ್ಟಪಡೋ ಹುಡುಗಿಗೆ ನಾನು ಸಿಗಲಿಲ್ಲ.

18) ಕಪ್ಪು ಕಣ್ಣುಗಳಲ್ಲಿ ಸೆನ್ಸಾರಿಲ್ಲದೆ ಬೀಳುತ್ತಿರುವ ನೀಲಿ ಕನಸುಗಳಿಗೆ ಕಡಿವಾಣ ಹಾಕುವ ಕನ್ಯೆ ಬೇಗನೆ ಬರ್ತಿಲ್ಲ. ಎಲ್ಲಿದಾಳೋ ಗೊತ್ತಿಲ್ಲ.


19) ಹುಡುಗಿಯರಿಗೆ ಹತ್ತೋ ಇಪ್ಪತ್ತೋ ಸಾವಿರ ಸಂಬಳವಿರೋ ಸರ್ಕಾರಿ ಗುಲಾಮರ ಮೇಲಿರುವ ಭರವಸೆ, ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸೋ ಖಾಸಗಿ ಯಜಮಾನನ ಮೇಲಿಲ್ಲ.

20)  10 ತೊಲೆ ತೂಗುವ ನನ್ನ ಬೆಳ್ಳಿ ಉಡದಾರವನ್ನು ಮಾರಿ ಅವಳಿಗೆ ಚೂಡಿದಾರ ಕೊಡಿಸುವ ದಾರಿದ್ರ್ಯ ನನಗ್ಯಾಕೆ ಬಂತೋ ಗೊತ್ತಿಲ್ಲ.

21) ಇತ್ತೀಚಿಗೆ ಒಂದು ಕಿಡ್ನಿ ಮಾರಿ ಅವಳಿಗೆ ಕೊಡಿಸಿರುವೆ ಐಫೋನ್. ಆದ್ರೂ ನನಗೆ ಯಾವ ಬ್ಯಾಂಕಿನವರು ಕೊಡ್ತೀಲ್ಲ "ಗರ್ಲಫ್ರೆಂಡ್ ಲೋನ್".

22) ಕಣ್ಣಿಗೆ ಇಷ್ಟವಾದವಳು ಮನಸ್ಸಿಗೆ ಇಷ್ಟವಾಗಲ್ಲ. ಮನಸ್ಸಿಗೆ ಇಷ್ಟವಾದವಳು ಮನೆಯವರಿಗೆ ಇಷ್ಟವಾಗಲ್ಲ.

23) ಓದಿದವರಿಗೆಲ್ಲ ಕೆಲ್ಸ ಸಿಗಲ್ಲ. ಅದೇ ರೀತಿ ಮದುವೆಯಾದವರಿಗೆಲ್ಲ ಮಕ್ಕಳಾಗಲ್ಲ. ಇನ್ನೂ ಕೆಲವರಿಗೆ ಮದ್ವೇನೆ ಆಗಲ್ಲ.


24) ಬ್ಯೂಟಿಫುಲ್ ಆಗಿರೋ ಹುಡ್ಗಿಗೆ ಬುದ್ಧಿ ಇರಲ್ಲ. ಬುದ್ಧಿ ಇರೋ ಹುಡ್ಗಿ ಬ್ಯೂಟಿಫುಲ ಆಗಿರಲ್ಲ.

25) ಹೂವು ದುಂಬಿನಾ ಹುಡ್ಕೊಂಡು ಹೋಗಲ್ಲ. ದುಂಬಿನೆ ಹೂವನ್ನು ಹುಡ್ಕೊಂಡು ಹೋಗುತ್ತೆ. ಹುಡುಗಿ ಹೂವಾದರೆ, ಹುಡುಗ ದುಂಬಿಯಾಗುತ್ತಾನೆ. ಹೂವು ನಕ್ಕಾಗಲೇ ದುಂಬಿ ಬರುವುದು...


ಇನ್ನು ಏನೇನೋ ಆಗ್ತಿಲ್ಲ. ಏನೇನೋ ಸಿಗ್ತಿಲ್ಲ. ಅದ್ನೆಲ್ಲ ಬಿಡಿಸಿ ಹೇಳೊಕೆ ಇದು ಸೂಕ್ತ ಸಮಯವಲ್ಲ. ಟೈಮ್ ಸಿಕ್ಕಾಗ ಮತ್ತೆ ಸ್ವಲ್ಪ ಹೇಳ್ತೀನಿ... continued...

Blogger ನಿಂದ ಸಾಮರ್ಥ್ಯಹೊಂದಿದೆ.