100 ಡಬ್ಬಲ್ ಮೀನಿಂಗ ಮಾತುಗಳು ; Double Meaning Dialogues in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

100 ಡಬ್ಬಲ್ ಮೀನಿಂಗ ಮಾತುಗಳು ; Double Meaning Dialogues in Kannada

100 ಡಬ್ಬಲ್ ಮೀನಿಂಗ ಮಾತುಗಳು ;

೧) ಪ್ರೀತಿಯಾದಾಗಲೇ ಯೌವ್ವನ ಪಾವನ...
ಮದುವೆಯಾದಾಗಲೇ ಜೀವನ ಪಾವನ...

೨) ನಂಬಿ ಕೆಟ್ಟವರಿದ್ದಾರೆ.
ನಂಬಿಸಿ ಕೆಟ್ಟವರಿದ್ದಾರೆ.
ನಂಬದೇನೆ ಕೆಟ್ಟವರೂ ಇದ್ದಾರೆ...

೩) ಲವ್ ಫೇಲ್ಯುವರ್ ಆದ ಪ್ರತಿಯೊಬ್ಬರೂ ಕಾದಂಬರಿಕಾರರೇ...

೪) ಅವಳಿಗೆ ಲಗ್ನವಾಗೋಕೆ ನಾಚಿಕೆ, 
ಅವನಿಗೆ ಭಗ್ನಪ್ರೇಮಿ ಆಗ್ತಿನೇನೋ ಅನ್ನೋ ಹೆದರಿಕೆ...

೫) ಹುಡುಗರ ದೇಹದಲ್ಲಿರೋ ಅತ್ಯಂತ ಹಾಟ್ ಪ್ಲೇಸ್ (Hot Place) ಅಂದ್ರೆ ಹಾರ್ಟ (Heart). ಯಾಕೆಂದರೆ ಅಲ್ಲಿ ಯಾವುದಾದರೂ ಒಬ್ಬಳು ಚೆಲ್ವಿ ಇದ್ದೇ ಇರ್ತಾಳೆ...

100 ಡಬ್ಬಲ್ ಮೀನಿಂಗ ಮಾತುಗಳು ;

೬) ಹುಡುಗರ ಬಾಯಿಯಿಂದ ಬರೋ ಸಿಗರೇಟ್ ಹೊಗೆಗಿಂತ, ಹುಡುಗಿಯರ ಕೆಂದುಟಿಯಿಂದ ಬರೋ ಮಾದಕ ನಗೆಯಿಂದ ಓಜೋನ್ ಪದರು ಜಾಸ್ತಿ ಹಾಳಾಗುತ್ತಿದೆ...

೭) ಕೆಲವು ಸಲ ಸ್ವರ್ಗ ಸುಖ ಸಿಗಬೇಕೆಂದರೆ ಸೊಂಟ ನೋವಿನಲ್ಲಿಯೂ ಸಂತರ ವಾಣಿಯನ್ನು ಕೇಳಬೇಕಾಗುತ್ತದೆ....

೮) ಹುಡುಗಿಯರು ಹೃದಯ ಭಕ್ಷಕರು...

೯) ಮೆದುಳು ಮನಸ್ಸಿನ ಮಾತನ್ನು ಕೇಳುತ್ತದೆ. ಆದರೆ ಮನಸ್ಸು ಮೆದುಳಿನ ಮಾತನ್ನು ಕೇಳುವುದಿಲ್ಲ...

೧೦) ದೋಡ್ಮೀನ ಸಿಗಲಿಲ್ಲ ಅಂತಾ ಸಿಕ್ಕಿರೋ ಸಣ್ಮೀನಗಳನ್ನ ಮತ್ತೆ ನೀರಿಗೆ ಬಿಡೋಕ್ಕಾಗತ್ತಾ..? ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತಾ ಮದುವೆಯಾಗದೆ ಕೈಗೆ ಕೆಲಸ ಕೋಡೋಕ್ಕಾಗತ್ತಾ...?

100 ಡಬ್ಬಲ್ ಮೀನಿಂಗ ಮಾತುಗಳು ;

೧೧) ಅವಳಲ್ಲಿಗ ನಾನಿಲ್ಲ. ಆದರೆ ನನ್ನಲ್ಲಿ ಅವಳಿನ್ನು ಇದ್ದಾಳೆ. ಅವಳು ಹೋಗ್ತೀನಿ ಅಂದ್ರು ನಾನು ಕಳಿಸಲ್ಲ...

೧೨) ಕೆಲ ಕಾಲೇಜ ಹುಡುಗರು  ಮ್ಯಾಥ್ಸನಲ್ಲಿ ಸ್ಟ್ರಾಂಗ ಅಂತಾ ತೋರಿಸೋಕೆ ರಾತ್ರಿ ನಕ್ಷತ್ರಗಳನ್ನು ಎಣಿಸೋಕೆ ಪ್ರಯತ್ನಿಸುತ್ತಾರೆ...

೧೩) ಜಾಸ್ತಿ ನೀಲಿ ಚಿತ್ರಗಳನ್ನು ನೋಡಬೇಡಿ. ಯಾಕೆಂದರೆ ಗಂಡಸುತನ ಕಡಿಮೆಯಾಗುವ ಸಾಧ್ಯತೆ ತುಂಬಾಯಿದೆ...

೧೪) ಹಗಲು ರಾತ್ರಿ ಮೆಸೇಜ್ ಮಾಡಿ ಮೊಬೈಲ್ ಟಚಪ್ಯಾಡ್ ಕಿತ್ತೊದ್ರು ಹುಡುಗಿ ಮಾತ್ರ ಸಿಗಲಿಲ್ಲ...

೧೫) ರಾಮಾಯಣ ಮುಗಿದ್ರೂ ಪ್ರೇಮಾಯಣ ಮುಗಿಯಲ್ಲ. ಪ್ರೇಮಾಯಣ ಮುಗಿದ್ರೂ ಕಾಮಾಯಣ ಮುಗಿಯಲ್ಲ...

100 ಡಬ್ಬಲ್ ಮೀನಿಂಗ ಮಾತುಗಳು ;

೧೬) ಪಕ್ಷ ಬದಲಾಯಿಸುವವಳು ಪಕ್ಷಾಂತರಿ... 
ಗಂಡನನ್ನು ಬದಲಾಯಿಸುವವಳು ಗಂಡಾಂಡರಿ...
ಆದ್ರೆ ಪ್ರಿಯಕರನನ್ನು ಬದಲಾಯಿಸುವವಳು.....??

೧೭) ಒಂದು ಪಾಪದ ಕೂಸಿಗೆ ಎಷ್ಟು ಜನ ಬೇಕಾದರೂ ತಂದೆಯಾಗಬಹುದು. ಆದರೆ ತಾಯಿ ಮಾತ್ರ ಒಬ್ಬಳೇ...

೧೮) ಕೆಲ ಹುಡುಗಿಯರಿಗೆ ಕಾಲ್ ಮಾಡಿದಾಗ ಕನೆಕ್ಟ ಆಗದಿದ್ರೆ ಲೈನ್ ಬ್ಯುಸಿ (Line Busy) ಅಂತಾ ಅನ್ಕೋತ್ತಿವಿ. ಆದ್ರೆ ಹುಡುಗಿಯರೇ ಬ್ಯುಸಿ ಇರ್ತಾರೆ...

೧೯) ಬ್ರೇನ್ ಕೊಟ್ಟ ದೇವರು ಬುದ್ಧಿ ಕೊಡೋದನ್ನ ಮರೆತು ಬಿಟ್ಟ...

೨೦) ನಿದ್ದೆಯಿಲ್ಲದ ರಾತ್ರಿಗಳು ನೆಮ್ಮದಿ ತಿಂತಾವೆ... ಬುದ್ಧಿಯಿಲ್ಲದ ಬಡ್ಡಿಮಕ್ಕಳು ಬುರುಡೆ ತಿಂತಾರೆ...

100 ಡಬ್ಬಲ್ ಮೀನಿಂಗ ಮಾತುಗಳು ;

೨೧) ರಾತ್ರಿ ಮಾತುಗಳು ಮೌನವಾದರೂ, ತುಟಿಗಳು ಮಾತಾಡುತ್ತಲೇ ಇರುತ್ತವೆ...

೨೨) ಗ್ರಹಣ ಕಳೆದರೂ ಗ್ರಹಚಾರ ಕಳೆಯಲ್ಲ...

೨೩) ಕೆಲವರಿಗೆ ಪೋಲಿ ಕವನ ಕೇಳಿದರೆ ತಣ್ಣೀರ ಸ್ನಾನ ಮಾಡಿದಷ್ಟು ಖುಷಿಯಾಗುತ್ತೆ...

೨೪) ಸುರಪಾನ ಮತ್ತು ಸುರಸುಂದರಿ ಒಟ್ಟಿಗೆ ಸಿಕ್ಕರೆ ಎಲ್ಲರೂ ಸುಸ್ತಾಗುತ್ತಾರೆ...

೨೫) ಅರ್ಥಗಳಲ್ಲಿನ ಅನರ್ಥಗಳನ್ನು ಹುಡುಕುವ ಬಡ್ಡಿ ಬುದ್ಧಿವಂತಿಕೆ ಹುಡುಗಿಯರಿಗೆ ಮಾತ್ರ ಇರೋದು...

100 ಡಬ್ಬಲ್ ಮೀನಿಂಗ ಮಾತುಗಳು ;

೨೬) ಹುಲಿಗೆ ಬಿಲ ತೋಡಿ ಪ್ರಯೋಜನವಿಲ್ಲ, ಬಲಿಷ್ಟವಾದ ಬಲೆನೇ ಬೀಸಬೇಕು. ಆನೆಗೆ ಗುಂಡಿ ತೊಡಿ ಪ್ರಯೋಜನವಿಲ್ಲ, ಖೆಡ್ಡಾನೆ ತೋಡಬೇಕು...

೨೭) ಭಾರತ ಬಂದ ಮಾಡಿದ್ರೂ ನಮ್ಮ ಬಾರ್ ಮಾತ್ರ ಬಂದ ಮಾಡ್ಬೇಡಿ...

೨೮) ಹುಡುಗರು ಒಂದೇ ಹುಡುಗಿಯಲ್ಲಿ ಪಂಚ ಪತಿವೃತೆಯರನ್ನು ಕಾಣುತ್ತಾರೆ. ಆದ್ರೆ ಕೆಲ ಹುಡುಗಿಯರು ಹತ್ತಾರು ಹುಡುಗರಲ್ಲಿ ಒಬ್ಬ ಪುರುಷೋತ್ತಮನನ್ನು ಅರಸಲು ಪ್ರಯತ್ನಿಸುತ್ತಾರೆ.


೨೯) ನಾಯಿಗೆ ಮತ್ತೆ ಶ್ರೀಮಂತನಿಗೆ ಇರೋ ಸಾಮ್ಯತೆ ಎಂದರೆ ಅವರಿಬ್ಬರೂ ಬೆವರುವುದಿಲ್ಲ...
  
೩೦) ನರಿಗಳು ವಂಚಿಸೋಕೆ ಫೇಮಸ್ಸು. ನಾಯಿಗಳು ಕಂಡ ಕಂಡಲ್ಲೆಲ್ಲ ಕಾಲು ಚಾಚೋಕೆ ಫೇಮಸ್ಸು. ಹುಡುಗಿಯರು ಕೈಕೋಡೊಕೆ ಫೇಮಸ್ಸು. ಆದ್ರೆ ಹುಡುಗರು ಲಂಗಗಳ ಹಿಂದೆ ಮಂಗನಂತೆ ಅಲೆಯೋಕೆ ಫೇಮಸ್ಸು...


100 ಡಬ್ಬಲ್ ಮೀನಿಂಗ ಮಾತುಗಳು ;

೩೧) ಹೋಳಿ ಹಬ್ಬದಲ್ಲಿ ಕಾಮನನ್ನು ಸುಟ್ಟು ನಿರಾಳರಾಗ್ತೀವಿ. ಆದ್ರೆ ಕಾಮಿನಿಯರನ್ನು ಸುಡೋದ್ಯಾವಾಗ...?

೩೨) ಅಯೋಗ್ಯನನ್ನು ಕಟ್ಟಿಕೊಂಡ ತಪ್ಪಿಗೆ ದಿನಾ ಫೂಲಾಗೋ ಹೆಂಡತಿಗೆ ಏಪ್ರಿಲ್ ಫೂಲ್ ಹೊಸದೇನಲ್ಲ...

೩೩) ಸ್ವಾಮಿಗಳು, ಸಂತರು, ಸನ್ಯಾಸಿಗಳು ಹಗಲೊತ್ತು "ರಾಮ ರಾಮ" ಅಂತಾರೆ. ರಾತ್ರಿವೊತ್ತು "ಹರಾಮ ಕಾಮ" ಅಂತಾ ಸಾಯ್ತಾರೆ...

೩೪) ಮಳೆ ಬಂದಾಗ ಕೊಡೆ ಹಿಡಿಯೋ ಹುಡುಗರನ್ನು ನೋಡಿದ ಹುಡುಗಿಯರು ಬಿಸಿಲಲ್ಲು ಕೊಡೆ ಹಿಡಿ ಅಂತಾ ಅನ್ನೋರೆ ತಾನೆ...?

೩೫) ಹಗಲು ದ್ವೇಷಿಗಳಿಂದಲೇ ರಾತ್ರಿಗೆ ರಸಿಕ ಕಳೆ ಬರುತ್ತದೆ...

100 ಡಬ್ಬಲ್ ಮೀನಿಂಗ ಮಾತುಗಳು ;

೩೬) "ಎಲ್ಲ ಹುಡುಗ ಹುಡುಗಿಯರು ಕೆಟ್ಟವರಲ್ಲ" ಅಂತಾ ಹೇಳುವವರು ಖಂಡಿತಾ ಒಳ್ಳೆಯವರಲ್ಲ...

೩೭) ಚಳಿಜ್ವರಕ್ಕಿಂತ ಪ್ರೇಮಜ್ವರ ತುಂಬಾ ಕೆಟ್ಟದ್ದು...

೩೮) ಹಲವಾರು ಜನ ತಿರುಗಾಡೋ ದಾರಿಯಲ್ಲಿ ಹುಲ್ಲು ಬೆಳೆಯಲ್ಲ... ಹಲವಾರು ಜನರ ಜೊತೆ ಮಲ್ಕೊಳೋರ ವಂಶ ಬೆಳಗಲ್ಲ...

೩೯) "ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ..." ಅನ್ನೋ ಗಂಡಸರ ಬುದ್ಧಿ ಯಾವಾಗಲೂ ಚಪ್ಪಲಿ ಕೆಳಗೇನೆ ಇರುತ್ತದೆ...

೪೦) ನಮ್ಮ ಜನ ರಾತ್ರಿ ಕುಂಭಕರ್ಣರಲ್ಲ. ನಮ್ಮ ಜನ ಹಗಲಿಗಿಂತ ರಾತ್ರಿನೇ ಜಾಸ್ತಿ ಆ್ಯಕ್ಟಿವ್ ಆಗಿರುತ್ತಾರೆ. ರಾತ್ರಿ ಎಲ್ಲರಲ್ಲಿ ಕ್ರಿಯೆಟಿವಿಟಿ ತುಂಬಿ ತುಳುಕುತ್ತಿರುತ್ತದೆ...

100 ಡಬ್ಬಲ್ ಮೀನಿಂಗ ಮಾತುಗಳು ;

೪೧) ಪ್ರೀತಿ ಮಾಡುವಾಗಲೂ ಮಹಾಯುದ್ಧ...
ಮದ್ವೆಯಾಗುವಾಗಲೂ ಮಹಾಯುದ್ಧ...
ಮಕ್ಕಳು ಮಾಡುವಾಗಲೂ ಮಹಾಯುದ್ಧ... 
ಎಲ್ಲಿದೆ ಶಾಂತಿ?

೪೨) ತಾಯಿ ದೇವರಾಗಬಹುದು. ಆದರೆ ದೇವರು ತಾಯಿಯಾಗಲಾರ. ಅದಕ್ಕೆ ದೇವರಿಗಿಂತ ತಾಯಿನೇ ಶ್ರೇಷ್ಠ...

೪೩) ಕೆಲ ಹುಡ್ಗೀರಿಗೆ ಬಾಲವೊಂದಿರಬೇಕಿತ್ತು. ಯಾಕೆಂದರೆ ಹುಡುಗರ ಮನದಿಂದ ಮನಕ್ಕೆ ನೆಗೆಯಲು ಈಜೀ (Easy) ಆಗ್ತಿತ್ತು...

೪೪) ಬದುಕಿದ್ದು ಸತ್ತೊನಿಗೆ ಬರ್ಥಡೇ ಸೆಲೆಬ್ರೆಷನ ಬೇಕೆ...?

೪೫) ನಗುವ ಚಂದ್ರನೂ ಕೂಡ ಅಮವಾಸ್ಯೆಯಂದು ನರಳಲೇಬೇಕು. ಸುಡುವ ಸೂರ್ಯ ಕೂಡ ಸುಂದರಿಯನ್ನು ಕಂಡಾಕ್ಷಣ ಸುಮ್ಮನಾಗಬೇಕು.

100 ಡಬ್ಬಲ್ ಮೀನಿಂಗ ಮಾತುಗಳು ;

೪೬) ಹಗಲಲ್ಲಿ ಬಾವಲಿಯ ಕಣ್ಣು ಮಂಜಾದ್ರೆ ಅದು ಸೂರ್ಯನ ತಪ್ಪಲ್ಲ...

೪೭) ಓದಿದವರಿಗೆಲ್ಲ ಕೆಲ್ಸ ಸಿಗಲ್ಲ. ಮದುವೆಯಾದವರಿಗೆಲ್ಲ ಮಕ್ಕಳಾಗಲ್ಲ...

೪೮) ಹಾಳಾದ ಮೇಲೆ ಹಾಳಾಗೋ ಕನಸುಗಳು ಬೀಳ್ತವೆ...

೪೯) ಸುಂಟರಗಾಳಿ ಬಿರುಗಾಳಿಯ ಜೊತೆ ಗುದ್ದಾಡೋದ ಬಿಟ್ಟು ತಂಗಾಳಿ ಜೊತೆ ಸರಸವಾಡಿ ಮುದ್ದಾಡೋಕೆ ಸಾಯುತ್ತೆ...

೫೦) ಜಾತ್ರೆಯಂಥ ಈ ಜಗದಲ್ಲಿ ಜೋರಾಗಿ ಸದ್ದು ಮಾಡಬೇಕು ಅಂದ್ರೆ ಈ ಜಗತ್ತು ಸದ್ದಿಲ್ಲದೆ ಮಲಗಿರೋವಾಗ ನಾವು ಸದ್ದಿಲ್ಲದೆ ಕಷ್ಟ ಪಡಬೇಕು...

100 ಡಬ್ಬಲ್ ಮೀನಿಂಗ ಮಾತುಗಳು ;

೫೧) ಮೋಸ ಹೋದವನಿಗಿಂತ ಮೋಸ ಮಾಡಿದವನಿಗೆ ತಾನೇನು ಮೋಸ ಮಾಡಿದೆ ಅನ್ನೋದು ಚೆನ್ನಾಗಿ ಗೊತ್ತಿರುತ್ತದೆ...

೫೨) ಕುಡಿಯೋದನ್ನ ಮರಿಬೇಕಂದ್ರೆ ಎಷ್ಟು ಕುಡಿಬೇಕು ಅನ್ನೋದು ಗೊತ್ತಾಗಲ್ಲ...

೫೩) ಎಲ್ಲ ಇದ್ದೂ ಇಲ್ಲ ಅನ್ನೋನು ಕೈಲಾಗದವನು. ಇಲ್ದೆ ಇದ್ರು ಮಾಡ್ತೀನಿ ಅನ್ನೋನು ಸಾಹಸಿ...

೫೪) ಹುಡ್ಗೀರ್ನಾ ಮತ್ತು ಮೊಬೈಲ್ನಾ ಜಾಸ್ತಿ ಸಂಭಾಳಿಸಬಾರದು...

೫೫) ಎಲ್ಲ ಜಿಮ್ ಬಾಡಿಗಳಲ್ಲಿ ಧಮ್ ಇರುತ್ತೆ ಅಂತಾ ಹೇಳಕ್ಕಾಗಲ್ಲ...

100 ಡಬ್ಬಲ್ ಮೀನಿಂಗ ಮಾತುಗಳು ;

೫೬) ಆಧುನಿಕ ಮಾನವನಿಗಿಂತ ಆದಿ ಮಾನವನೇ ಉತ್ತಮ...

೫೭) ಕಾಮದ ಕಣ್ಣುಗಳಲ್ಲಿರುವ ಪ್ರೇಮದ ಸಂದೇಶಗಳು ಎಲ್ಲರಿಗೂ ಕಾಣಿಸಲ್ಲ...

೫೮) ಕೆಂಪಾಗಿ ಕಾದ ಹೆಂಚಿನ ಮೇಲೆ ಕೈಯಿಡೋದು, ಮರದಿಂದ ಮರಕ್ಕೆ ಹಾರೋ ಮಂಗನ ಕೈಗೆ ಮಾಣಿಕ್ಯ ಕೊಡೋದು, ಮನಸ್ಸಿಂದ ಮನಸ್ಸಿಗೆ ಹಾರೋ ಹುಡ್ಗಿರಿಗೆ ಮನಸ್ಸು ಕೊಡೋದು ಎಲ್ಲ ಒಂದೇ...

೫೯) ನಿದ್ದೆಗೆಟ್ಟು ನೈಟ್ ಸ್ಟಡಿ ಮಾಡಿದವರೆಲ್ಲ ಪಾಸಾಗಲ್ಲ... 

೬೦) ಪ್ರೇಮಿಗಳ ಜಗಳದಲ್ಲಿ ಫ್ರೆಂಡ್ಸು ಪರದೇಶಿಗಳಾದ್ರು...

100 ಡಬ್ಬಲ್ ಮೀನಿಂಗ ಮಾತುಗಳು ;

೬೧) ಬೇಜಾರುಗಳ ಮಧ್ಯೆ ಸ್ವಲ್ಪ ಬಿಡುವು ಮಾಡ್ಕೊಂಡು ನಗಬೇಕು. ಅದೇ ಜೀವನ...

೬೨) ಕಂಡ ಕಂಡವರು ಹೊಟ್ಟೆ ಕಿಚ್ಚು ಪಡೋವಂತೆ ನಾವು ಬದುಕಿ ತೋರಿಸಬೇಕು...

೬೩) ಹುಡ್ಗೀರ ಸೆಲಗೆ ನಾವೇಷ್ಟೆ ಕರೆನ್ಸಿ ಹಾಕಿಸಿದ್ರು, ಅವರು ಮಿಸಕಾಲ ಕೊಡೋ ಬುದ್ಧಿನಾ ಬಿಡಲ್ಲ. ಹುಡ್ಗಿರೆಲ್ಲ ಮಿಸಕಾಲ ಮಹಾರಾಣಿಯರು...

೬೪) ಊರ ಸೇವೆ ಮಾಡಿ ಮುಲ್ಲಾ ಸೊರಗಿದ. ಮುಲ್ಲಾನ ಚಿಂತಿ ಮಾಡಿ ಅಲ್ಲಾ ಕೊರಗಿದ...

೬೫) ಗಂಡನ ಪುರುಷ ಪರಾಕ್ರಮದ ಮುಂದೆ ಹೆಂಡತಿಯ ಮೌನ ಪ್ರತಿಭಟನೆಗೆ ಮೌಲ್ಯವುಂಟೆ...??.

100 ಡಬ್ಬಲ್ ಮೀನಿಂಗ ಮಾತುಗಳು ;   

೬೬) ನಾಯಿಗಳಿಗೆ ನಿಯತ್ತು ಜಾಸ್ತಿ.
ಕುದುರೆಗಳಿಗೆ ಕೃತಜ್ಞತೆ ಜಾಸ್ತಿ.
ಆದರೆ ಮನುಷ್ಯರಿಗೆ....

೬೭) ನಾವು ತಲೆ ಕೆಟ್ಟು ಓದಬಾರದು. ನಾವು ಓದೋದನ್ನು ನೋಡಿ ಮತ್ತೊಬ್ರು ತಲೆ ಕೆಡಿಸಿಕೊಳ್ಳಬೇಕು...

೬೮) ಸುಡುಗಾಡಲ್ಲಿರುವ ಸುಖ ಸಂಸಾರದಲ್ಲಿಲ್ಲ...

೬೯) ಪ್ರತಿಯೊಂದು ಸೆಂಟಿಮೆಂಟಲ್ಲಿ ಸ್ವಾರ್ಥ ತುಂಬಿದೆ...

೭೦) ಈ ಕಾಫಿ ಶಾಪು, ಪಬ್ಬು, ಕ್ಲಬ್ಬು, ಪಾರ್ಕು ಎಲ್ಲ ಕಾಮಿಗಳ ತವರು ಮನೆ. ಪರಿಶುದ್ಧವಾದ ಹೃದಯ ಒಂದೆನೇ ಪ್ರೇಮಿಗಳ ಅರಮನೆ...

100 ಡಬ್ಬಲ್ ಮೀನಿಂಗ ಮಾತುಗಳು ;

೭೧) ರಾಜಕಾರಣಿಗಳ ಆಸೆಗಳು ಸ್ವಾಮಿಗಳ ಜೋಳಿಗೆಯಂತಾಗಿವೆ. ಎಷ್ಟಾಕ್ಕಿದ್ರೂ ತುಂಬೋದೆ ಇಲ್ಲ...

೭೨) ಖುಷಿಯಾಗಿದ್ದಾಗ ಲಕ್ಷ್ಮೀನೂ ಬರ್ತಾಳೆ, ಸರಸ್ವತಿನೂ ಬರ್ತಾಳೆ, ಐಶ್ವರ್ಯಾನು ಬರ್ತಾಳೆ.  So smile please...

೭೩) ಕೆಲ್ಸ ಮಾಡೋವಾಗ ಟೈಮ ಬಗ್ಗೆ ಯೋಚ್ನೆ ಮಾಡಬಾರದು...

೭೪) ಭೂಮಿ ಎಷ್ಟೇ ವಿಶಾಲವಾಗಿದ್ರು ಕೊನೆಗೆ ನಮಗೆ ಸಿಗೋದು ಜಸ್ಟ ಆರಡಿ ಮಾತ್ರ...

೭೫) ಸುಂಟರಗಾಳಿಗೆ ಸೆಕ್ಯುರಿಟಿ ಬೇಕಿಲ್ಲ...

100 ಡಬ್ಬಲ್ ಮೀನಿಂಗ ಮಾತುಗಳು ;

೭೬) ಹರಿಯೋ ನದಿಗೆ ಅಣೆಕಟ್ಟು ಕಟ್ಟಿ ನದಿನಾ ತಡಿಬಹುದು. ಆದ್ರೆ ಸುನಾಮಿ, ಸುಂಟರಗಾಳಿನಲ್ಲ.

೭೭) ಪ್ರೇಮ ಹೇಳುತ್ತೆ "ಪ್ರೇಯಸಿನಾ ಬಿಟ್ಟು ಉಳಿದೆಲ್ಲ ಹುಡುಗಿಯರು ಸೋದರಿಯರು ಅವರನ್ನು ಗೌರವಿಸು" ಅಂತಾ. ಆದರೆ ಕಾಮ...?

೭೮) ಸೀರಿಯಲ್ ಸುಂದರಿಯರ ಕಣ್ಣೀರಿನಿಂದ ಕಾವೇರಿ ನೀರಿನ ಸಮಸ್ಯೆ ಬಗೆ ಹರಿಯಲ್ಲ...

೭೯) ಆಧುನಿಕ ಪ್ರೇಮಿಗೂ, ಮಾನಸಿಕ ರೋಗಿಗೂ ಯಾವುದೇ ವ್ಯತ್ಯಾಸವಿಲ್ಲ...

೮೦) ಎಲ್ಲರಿಗೂ ಮನಸ್ಸಿರುತ್ತೆ. ಆದ್ರೆ ಕೆಲವರಿಗೆ ಮಾತ್ರ ಒಳ್ಳೆ ಮನಸ್ಸಿರುತ್ತದೆ...
100 ಡಬ್ಬಲ್ ಮೀನಿಂಗ ಮಾತುಗಳು ;
೮೧) ತನಗಿಂತ ತನ್ನವರು ಚೆನ್ನಾಗಿರಬೇಕೆಂದು ಕೆಲವು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ.

೮೨) ಲವ್ ಮಾಡು. ಆದ್ರೆ ಮದ್ವೆಯಾಗಬೇಡ. ಮದ್ವೆಯಾಗು ಆದ್ರೆ ಮಕ್ಕಳ ಮಾಡಬೇಡ.
ಮಕ್ಕಳ ಮಾಡು. ಆದ್ರೆ ಹೆಂಡ್ತಿಗೆ ಹೆಚ್ಚಿಗೆ ತೊಂದರೆ ಕೊಡಬೇಡ. ಏನಾದರೂ ಮಾಡು. ಆದ್ರೆ ಉದ್ಧಾರ ಮಾತ್ರ ಆಗಬೇಡ...

೮೩) ನಿಮ್ಮೊಳಗೆ ನಿದ್ದೆ ಮಾಡುತ್ತಿರುವ ಸಾಧಕನನ್ನು ಬಡಿದೆಬ್ಬಿಸಿ...

೮೪) ಸುಳ್ಳೇ ಸೋಪಾನ. ಆದ್ರೆ ಸುಳ್ಳೇಳುವಾಗ ಸ್ವಲ್ಪ ಜೋಪಾನ...

೮೫) ಅಮವಾಸ್ಯೆ ದಿನ ಗಂಡ್ಮಕ್ಕಳು ಹುಟ್ಟಬಾರದು. ಹುಣ್ಣಿಮೆ ದಿನ ಹೆಣ್ಮಕ್ಕಳು ಹುಟ್ಟಬಾರದು. ಮೊದಲ ಪ್ರೀತಿ ಸಿಗದೆ ಹಾಳಾಗಿರೋ ಹಾರ್ಟಲ್ಲಿ ಮತ್ತೆ ಸಿಗದಿರೋ ಪ್ರೀತಿ ಹುಟ್ಟಬಾರದು...

100 ಡಬ್ಬಲ್ ಮೀನಿಂಗ ಮಾತುಗಳು ;

೮೬) ಗುಲಾಬಿಯನ್ನು ಮುದ್ದಾಡಬೇಕೆಂದರೆ ಅದರ ಮುಳ್ಳುಗಳ ಜೊತೆ ಗುದ್ದಾಡಲೇಬೇಕು. ಪ್ರೇಯಸಿಯ ಪ್ರೀತಿಯನ್ನು ಸಂಪಾದಿಸಬೇಕೆಂದರೆ ಅವಳು ಕೋಡೋ ಕಷ್ಟಗಳನ್ನು ಸಹಿಸಲೇಬೇಕು...

೮೭) ಈಜು ಬರದೆ ನೀರಲ್ಲಿ ಮುಳುಗಿದವನಿಗೆ ಚಳಿಯಾದರೇನು? ಮಳೆಯಾದರೇನು? ಅರಿಯದೇ ಪ್ರೀತಿಯಲ್ಲಿ ಬಿದ್ದವನಿಗೆ ಕಣ್ಣೀರು ಬಂದರೇನು? ಪನ್ನೀರು ಬಂದರೇನು?

೮೮) ಸೆನ್ಸಾರ್ ಆಗದ ಸಿನಿಮಾ ಅವಳು. ಸೆನ್ಸೆ ಇಲ್ಲದ ಸಂತ ಅವನು...

೮೯) ಪುರಾಣ ಕಾಲದಲ್ಲಿ ಪಾಂಚಾಲಿಯ ಮನಸ್ಸನ್ನು ತಿಳಿಯೋಕೆ ಪಂಚ ಪಾಂಡವರಿಗೆ ಅಷ್ಟೊಂದು ಟೈಮ ಬೇಕಾಯಿತು. ಇನ್ನೂ ಮಾಡರ್ನ ಪಾಂಚಾಲಿಯರ ಮನಸ್ಸಲ್ಲೇನಿದೆ ಎಂಬುದನ್ನು ತಿಳಿಯೋಕೆ ಒಂದ ಜನ್ಮ ಹೇಗೆ ಸಾಕಾಗುತ್ತೆ...?

೯೦) ಕಾಲೇಜಿಗೆ ರಜಾ ಕೊಟ್ರೆ ಹುಡುಗರಿಗೆ ಮಜಾ, ಹುಡುಗಿಯರಿಗೆ ಸಜಾ...

100 ಡಬ್ಬಲ್ ಮೀನಿಂಗ ಮಾತುಗಳು ;

೯೧) ಸಿನಿಮಾ ಮಂದಿ ಬರೀ ಮುಖಕ್ಕೆ ಮಾತ್ರ ಬಣ್ಣ ಹಚ್ಚಿ ನಾಟಕವಾಡ್ತಾರೆ. ಆದ್ರೆ ಕುಲಗೆಟ್ಟ ರಾಜಕಾರಣಿಗಳು, ನೀತಿಗೆಟ್ಟ ಕಾಮಿ ಸ್ವಾಮಿಗಳು ನಾಲಿಗೆಗೆ, ಮೈಗೆ, ಮನಸ್ಸಿಗೆ, ಕೈಗೆ, ಕಾಲಿಗೆ ಎಲ್ಲ ಕಡೆ ಬಣ್ಣ ಹಚ್ಚಿ ರಂಗೀನಾಟ ಆಡುತ್ತಾರೆ...

೯೨) ದುಡ್ಡಿನ ದರ್ಪದಲ್ಲಿ ದೇಹಗಳ ಜೊತೆಗೆ ಮನಸ್ಸುಗಳು ಸಹ ಮಾರಾಟವಾಗುತ್ತವೆ...

೯೩)  ಟೀಚರಗೆ ಸುಳ್ಳೇಳಬಾರದು
ಲವ್ವರಗೆ ನಿಜ ಹೇಳಬಾರದು
ಸ್ನೇಹಕ್ಕೆ ಸಜಾ ಕೊಡಬಾರದು
ಪ್ರೀತಿಗೆ ರಜಾ ಕೊಡಬಾರದು...

೯೪) ಹಸಿವಾದಾಗ ಆಚಾರ ವಿಚಾರ ನೋಡಬಾರದು. ಆಹಾರ ಎಲ್ಲಿದೆ ಅನ್ನೋದ್ನ ಮಾತ್ರ ನೋಡಬೇಕು...

೯೫) ನೀರಲ್ಲಿ ಕರಗದ ಕಲ್ಲು, ಒಬ್ಬ ವಿರಹಿಯ ಬಿಸಿ ಕಣ್ಣೀರಲ್ಲಿ ಕರಗಬಹುದು...

100 ಡಬ್ಬಲ್ ಮೀನಿಂಗ ಮಾತುಗಳು ;

೯೬) ಬಾಲ ಸುಟ್ಟ ಬೆಕ್ಕಿನಂತಾಗಿದೆ ಲೈಫು. ಕನಸಿದೆ ಆದ್ರೆ ನನಸಾಗಿಸುವ ಮನಸ್ಸಿಲ್ಲ...

೯೭) ಮನಸ ತುಂಬಾ ಗಲೀಜಿದ್ರೆ ಬರೀ ನೊಣಗಳು ಮಾತ್ರ ಬರ್ತಾವೆ. ಮನಸ ತುಂಬ ಹೂಗಳಿದ್ರೆ ಚಿಟ್ಟೆಗಳು ಬರಬಹುದು...

೯೮) ಸೊಳ್ಳೆ ಪರದೆಗೂ ಒಂದು ದೊಡ್ಡ ಬಾಗಿಲಿರಲಿ. ಅದರಲ್ಲಿ ಬೇಕಾದವರು ಮಾತ್ರ ಒಳ ಬರಲಿ...

೯೯)  ಗಂಡು ಹುಲಿ ಜೊತೆ ಸೆಣಸಾಡಿ ಗೆಲ್ಲಬೇಕು. ಹೆಣ್ಣು ಹುಲಿ ಜೊತೆ ಸರಸವಾಡಿ ಸೋಲಬೇಕು. ಎರಡನ್ನೂ ಉಲ್ಟಾಪಲ್ಟಾ ಮಾಡಿದರೆ ಮಜಾ ಇರುವುದಿಲ್ಲ...

೧೦೦) ಉಪ್ಪರಿಗೆಯ ಮೇಲಿರುವವರ ದಬ್ಬಾಳಿಕೆಯಲ್ಲಿ ಚಪ್ಪರದಲ್ಲಿರುವವರ ಧ್ವನಿ ಕೇಳಿ ಬರಲ್ಲ...

100 ಡಬ್ಬಲ್ ಮೀನಿಂಗ ಮಾತುಗಳು ;

Blogger ನಿಂದ ಸಾಮರ್ಥ್ಯಹೊಂದಿದೆ.