ಹನಿಮೂನಿನ ಅವಾಂತರ : Kannada Thriller Story - Kannada Stories

Chanakya Niti in Kannada
ಹನಿಮೂನಿನ ಅವಾಂತರ  Kannada Thriller Story

        ಕರಿಸಿದ್ದಪ್ಪ ಜನರ ಸಮಸ್ಯೆಗಳಿಗೆ ಮೊಸಳೆ ಕಣ್ಣೀರನ್ನು ಸುರಿಸಿ, ಕಪ್ಪು ಹಣದ ಹೊಳೆಯನ್ನು ಹರಿಸಿ ಎಲೆಕ್ಷನ್‌ನಲ್ಲಿ ಬಹುಮತದಿಂದ ಆರಿಸಿ ಬಂದು ಅತೀ ಚಿಕ್ಕ ವಯಸ್ಸಿನಲ್ಲಿಯೇ ಶಾಸಕನಾದನು. ಅವನ ಅಪ್ಪ ಕೆಂಪು ಬಸಪ್ಪನು ಸಹ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದನು. ಆದರೆ ಏನು ಅಭಿವೃದ್ಧಿ ಮಾಡಿರಲಿಲ್ಲ. ಮೂರ್ನಾಲ್ಕು ಪೀಳಿಗೆಗಳು ಕುಳಿತು ತಿನ್ನುವಷ್ಟು ಆಸ್ತಿಯನ್ನು ಸಂಪಾದಿಸಿದ್ದನು. ಅವನ ದಾರಿಯಲ್ಲೇ ಅವನ ಮುದ್ದಿನ  ಮಗ ಕರಿಸಿದ್ದಪ್ಪನು ಸಹ ಎಲ್ಲ ಅನೀತಿ ಅತ್ಯಾಚಾರಗಳನ್ನು ಮಾಡುತ್ತಾ ಮುಂದೆ ಸಾಗಿದನು. ದಿನಕ್ಕೊಂದು ಹೆಣ್ಣನ್ನು ಕದ್ದುಮುಚ್ಚಿ ಹೊತ್ತೊಯ್ದು ಅನುಭವಿಸಿ ಬೀದಿಗೆ ಬೀಸಾಕುತ್ತಿದ್ದನು. ನಂತರ ತನಗಿರುವ ಹಣಬಲದಿಂದ ಅದನ್ನು ಮುಚ್ಚಾಕಿ ತಲೆಯೆತ್ತಿಕೊಂಡು ಮೆರೆಯುತ್ತಿದ್ದನು. ಎಷ್ಟೋ ಜನ ಅಮಾಯಕ ಹುಡುಗಿಯರ ಕಣ್ಣೀರಿನ ಶಾಪ ಅವನಿಗೆ ತಟ್ಟಿತ್ತು.

ಹನಿಮೂನಿನ ಅವಾಂತರ : Kannada Thriller Story

         ಒಂದಿನ ಕರಿಸಿದ್ದಪ್ಪ ಜೇರಾಲ್ಡ್ಸ್ ಗೇಮ (Gerald's Game) ಎಂಬ ಹೊಸ ಹಾಲಿವುಡ್ ಚಲನಚಿತ್ರವನ್ನು ನೋಡುತ್ತಿದ್ದನು. ಅದರಲ್ಲಿ ಆ ಚಿತ್ರದ ನಾಯಕ ತನ್ನ ಮಡದಿಯೊಂದಿಗೆ ಹನಿಮೂನಿಗಾಗಿ ಯಾರು ಇಲ್ಲದ ಒಂದು ಪ್ರಶಾಂತವಾದ ಅರಣ್ಯದಲ್ಲಿರುವ ಮನೆಗೆ ಹೋಗಿದ್ದನು. ತನ್ನ ಹೆಂಡತಿಯನ್ನು ಬಂಧಿಸಿ ಅನುಭವಿಸುವುದಕ್ಕಾಗಿ ಹ್ಯಾಂಡ್ಸಲಾಕಗಳನ್ನು ತೆಗೆದುಕೊಂಡು ಹೋಗಿದ್ದನು. ಅದರಿಂದ ಪ್ರೇರಿತನಾದ ಕರಿಸಿದ್ದಪ್ಪ ತಾನು ಆ ರೀತಿ ಮಾಡಬೇಕೆಂದು ನಿರ್ಧರಿಸಿದನು. ಆದರೆ ಆತ ಆ ಚಿತ್ರದ ಆರಂಭವನ್ನು ಮಾತ್ರ ನೋಡಿದ್ದನು. ಅಂತ್ಯವನ್ನು ನೋಡಿರಲಿಲ್ಲ. ಆ ಚಿತ್ರದಲ್ಲಿ ನಾಯಕ ನಾಯಕಿಯನ್ನು ಹ್ಯಾಂಡ್ಸಲಾಕ ಮಾಡಿ ಅನುಭವಿಸುವಾಗ ವಯಾಗರ ಮಾತ್ರೆಯ ಹೈಡೋಸನಿಂದಾಗಿ ಎದೆಯೊಡೆದುಕೊಂಡು ಸತ್ತಿರುತ್ತಾನೆ. ಆದ್ರೆ ಅದನ್ನು ಕರಿಸಿದ್ದಪ್ಪ ನೋಡದೆ ಹನಿಮೂನಿನ ಆಸೆಗಾಗಿ ಮದುವೆಯಾಗಲು ಮುಂದಾದನು.
ಹನಿಮೂನಿನ ಅವಾಂತರ : Kannada Thriller Story

            ಕೊನೆಗೂ ಕರಿಸಿದ್ದಪ್ಪ ಹನಿಮೂನಿನ ಹಗಲುಗನಸು ಕಾಣುತ್ತಾ ತನಗಿಂತ ಹತ್ತು ವರುಷ ಚಿಕ್ಕವಳಿರುವ 24 ವರುಷದ ವಿದ್ಯಾವಂತೆ ರೂಪಶ್ರೀಯನ್ನು ಮದುವೆಯಾದನು. ಅವಳೇನು ಅವನ ಕೆಂಪು ಮೂತಿಯನ್ನು ನೋಡಿ ಅವನನ್ನು ಮದುವೆಯಾಗಿರಲಿಲ್ಲ. ಅವಳಿಗೂ ಹಣದ ಆಸೆಯಿತ್ತು. ಜೊತೆಗೆ ರಾಜಕಾರಣದಲ್ಲಿ ಬೆಳೆಯಬೇಕು ಎಂಬ ಹಂಬಲವಿತ್ತು. ಅದಕ್ಕಾಗಿ ಅವಳು ಆ ಅರ್ಧಮುದುಕನನ್ನು ಮದುವೆಯಾಗಿದ್ದಳು. ಮದುವೆಯಾದ ನಂತರ ಕರಿಸಿದ್ದಪ್ಪ ಹನಿಮೂನಿಗಾಗಿ ಗೋವಾದ ಒಂದು ಜನನಿಬಿಡ ಪ್ರದೇಶವನ್ನು ಆಯ್ಕೆ ಮಾಡಿದನು. ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಅಲ್ಲೊಂದು ಒಂಟಿ ರೆಸಾರ್ಟಯಿತ್ತು. ಆ ರೆಸಾರ್ಟಿಗೆ ಕರಿಸಿದ್ದಪ್ಪ ತನ್ನ ಮುದ್ದಿನ ಮಡದಿಯೊಂದಿಗೆ ಹನಿಮೂನಿಗಂತ ಹೋದನು. ಆದರೆ ಹೋಗುವಾಗ ಎಲ್ಲ ಸೆಕ್ಯುರಿಟಿಗಳನ್ನು ತ್ಯಜಿಸಿ ಇಬ್ಬರೇ ಕಾರಿನಲ್ಲಿ ಹೋದರು. ಡ್ರೈವರನನ್ನು ಸಹ ತೆಗೆದುಕೊಳ್ಳದೆ ಕರಿಸಿದ್ದಪ್ಪ ತಾನೇ ಕಾರನ್ನು ಡ್ರೈವ ಮಾಡಿಕೊಂಡು ಹೋದನು. ದಾರಿ ಮಧ್ಯೆದಲ್ಲಿ ಬಾಡಿಗೆ ಬೈಕನ್ನು ತೆಗೆದುಕೊಂಡು ಅದರ ಮೇಲೆ ಹೆಂಡತಿಯನ್ನು ಕೂಡಿಸಿಕೊಂಡು ಲಾಂಗ್ ಡ್ರೈವ್ ಹೋಗಿ ಬಂದು ಅಸೆ ತೀರಿಸಿಕೊಂಡನು. 

ಹನಿಮೂನಿನ ಅವಾಂತರ  Kannada Thriller Story

                ನವಜೋಡಿಗಳ ಹನಿಮೂನ ಯಾತ್ರೆ ನಾಚಿಕೆಯ ಪರದೆಯನ್ನು ಗಾಳಿಪಟ ಮಾಡಿಕೊಂಡು ಗೋವಾದ ಕಡಲ ತೀರದ ಕಡೆಗೆ ಸಾಗಿತು. ಕರಿಸಿದ್ದಪ್ಪ ತನ್ನ ರಸಿಕತೆಯನ್ನು ಪ್ರದರ್ಶಿಸಿ ರೂಪಶ್ರೀಯನ್ನು ನಾಚಿಸಿದನು. ಆಕೆಯೂ ಅಷ್ಟೇ, ಪೋಲಿ ಮಾತುಗಳನ್ನಾಡಿ ಅವನ ಕೆನ್ನೆಯನ್ನು ಕೆಂಪಾಗಿಸಿದಳು. ಸಂಜೆಯಾಗುವಷ್ಟರಲ್ಲಿ ಅವರಿಬ್ಬರೂ ಆತ ನೋಡಿದ ರಹಸ್ಯ ರೆಸಾರ್ಟನ್ನು ತಲುಪಿದರು. ಯಾರು ಇಲ್ಲದ ಆ ನಿಗೂಡ ಬಂಗಲೆಯನ್ನು ನೋಡಿ ರೂಪರ್ಶಿ ಹೆದರಿದಳು. ಅವಳಿಗೆ ಅವಳು ನೋಡಿದ ದೆವ್ವದ ಸಿನಿಮಾಗಳೆಲ್ಲ ಒಮ್ಮೆಲೇ ಕಣ್ಮುಂದೆ ಬಂದು ಹೋದವು. ಅವಳು ಆ ಮನೆಯೊಳಗೆ ಕಾಲಿಡಲು ಹಿಂದೇಟು ಹಾಕಿದಳು. ಆದರೂ ಧೈರ್ಯ ತಂದುಕೊಂಡು ಒಳಗೆ ಕಾಲಿಟ್ಟಳು.

ಹನಿಮೂನಿನ ಅವಾಂತರ : Kannada Thriller Story

           ರೂಪಶ್ರೀ ಬಟ್ಟೆ ಬದಲಾಯಿಸುವಾಗ ಒಂದು ಕರಿ ಬೆಕ್ಕು ಅವಳಿಗೆ ಕಾಣಿಸಿಕೊಂಡು ಒಮ್ಮೆಲೇ ಮಾಯವಾಯಿತು. ಅವಳು ಜೋರಾಗಿ ಕೀರುಚಿದಳು. ಅವಳು ಸಂಪೂರ್ಣವಾಗಿ ಹೆದರಿ ಬೆವರಿದ್ದಳು. ಅವಳನ್ನು ಸಮಾಧಾನ ಮಾಡಿ ಧೈರ್ಯ ಹೇಳುವ ನೆಪದಲ್ಲಿ ಕರಿಸಿದ್ದಪ್ಪ ಅವಳ ಕೋಣೆಗೆ ನುಗ್ಗಿ ಪೋಲಿಯಾಟವನ್ನು ಪ್ರಾರಂಭಿಸಲು ಮುಂದಾದನು. ಆದರೆ ದೂರದ ಪ್ರಯಾಣವಾಗಿದ್ದರಿಂದ ಆಕೆ ಬಹಳಷ್ಟು ಸುಸ್ತಾಗಿದ್ದಳು. ಈಗ ಅವಳಿಗೆ ಸರಸ ಸಲ್ಲಾಪದಲ್ಲಿ ಆಸಕ್ತಿ ಇರಲಿಲ್ಲ. ಅದಕ್ಕಾಗಿ ಆಕೆ ಅವನ ಪೋಲಿಯಾಟಕ್ಕೆ ಪೂರ್ಣ ವಿರಾಮವಿಡಲು ಮುಂದಾದಳು. ಆದರೆ ಆತ ಅವಳನ್ನು ಬಲವಾಗಿ ಅಪ್ಪಿಕೊಂಡು ಮುತ್ತಿನ ಮಳೆ ಸುರಿಸುತ್ತಾ ಮುಂದುವರೆದನು. ಹೆಣ್ಣನ್ನು ಬಲವಂತವಾಗಿ ಅನುಭವಿಸುವುದು ಅವನಿಗೇನು ಹೊಸದಾಗಿರಲಿಲ್ಲ. ಆದರೆ ಅವಳಿಗೆ ಈ ಸರಸ ಸಲ್ಲಾಪ ಮೊದಲ ಅನುಭವವಾಗಿತ್ತು. ಆಕೆ ಅವನ ತೋಳುಗಳಿಂದ ತಪ್ಪಿಸಿಕೊಂಡು ದೂರ ಓಡಿದಳು.

ಹನಿಮೂನಿನ ಅವಾಂತರ : Kannada Thriller Story

                ಕರಿಸಿದ್ದಪ್ಪ ರೂಪಶ್ರೀಯನ್ನು ಹಿಂಬಾಲಿಸಿದನು. ಆಕೆ ನಗುತ್ತಾ ಆ ನಿಗೂಡ ಬಂಗಲೆ ತುಂಬೆಲ್ಲ ಓಡಾಡಿದಳು. ಅವಳ ಮೀನಿನ ಹೆಜ್ಜೆಗಳನ್ನು ಆತ ಬೆನ್ನಟ್ಟಿ ಅವಳನ್ನು ಹಿಡಿದು, ಅವಳ ಬೆನ್ನನ್ನು ಚುಂಚಿಸಿದನು. ಆಕೆ "ಪ್ಲೀಸ್ ರೀ... ನಾನೀಗ ಬಹಳ ಸುಸ್ತಾಗಿರುವೆ. ಜೊತೆಗೆ ನನಗೆ ತುಂಬ ಹೊಟ್ಟೆ ಹಸಿವಾಗಿದೆ...." ಎಂದು ರಾಗ ಎಳೆಯುತ್ತಿದ್ದಳು. ಅಷ್ಟರಲ್ಲಿ ಆತ ಅವಳ ಬಾಯ್ಮುಚ್ಚಿ ಅವಳನ್ನು ಬೆಡ್ರೂಮಿಗೆ ಹೊತ್ತುಕೊಂಡು ಹೋದನು. ಅವಳಿಗೆ ಬರೀ ಹೊಟ್ಟೆ ಹಸಿವಾದರೆ, ಅವನಿಗೆ ಈಡೀ ದೇಹದ ಹಸಿವಾಗಿತ್ತು. ಅದಕ್ಕೆ ಆತ ಅವಳನ್ನು ಮಂಚದ ಮೇಲೆ ಮಲಗಿಸಿ ತಾನು ತಂದಿದ್ದ ಹ್ಯಾಂಡ್ಸಲಾಕಗಳಿಂದ ಅವಳ ಕೈಗಳನ್ನು ಬಂಧಿಸಿದನು. ಅವಳು ಅವನಿಗೆ "ಪ್ಲೀಸ್ ಈಗ ನನ್ನ ಬಿಡಿ. ನಾನೆಂದೂ ನಿಮ್ಮವಳೇ ತಾನೇ? ಪ್ಲೀಸ್..." ಎಂದು ಬೇಡಿಕೊಳ್ಳುತ್ತಿದ್ದಳು. ಆದರೆ ಆತ ಅವಳ ಮಾತನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅವನಿಗೆ ಹೆಣ್ಣನ್ನು ಬಲವಂತವಾಗಿ ಅನುಭವಿಸಿದ ಅಭ್ಯಾಸವಿತ್ತು. ಅದೇ ಅಭ್ಯಾಸದಲ್ಲಿ ಅವನಿಗೆ ಹೆಂಡತಿ ಮತ್ತು ಬೇರೆ ಹೆಣ್ಣುಗಳ ಮಧ್ಯೆ ಇರುವ ವ್ಯತ್ಯಾಸ ಗೊತ್ತಾಗಲಿಲ್ಲ. ಅವಳು ಕೆಲ ನಿಮಿಷಗಳ ಕಾಲ ಅವನನ್ನು ವಿರೋಧಿಸಿ ಸೋತು ಸುಮ್ಮನೆ ಕಣ್ಮುಚ್ಚಿ ನಿದ್ರೆಗೆ ಜಾರಿದಳು. 

ಹನಿಮೂನಿನ ಅವಾಂತರ : Kannada Thriller Story  

                ರಾತ್ರಿ ತನ್ನೊಂದಿಗೆ ಏನೇನೆಲ್ಲ ಆಗಿದೆ ಎಂಬುದು ರೂಪಶ್ರೀಗೆ ಗೊತ್ತಿರಲಿಲ್ಲ. ಬೆಳಿಗ್ಗೆ ಅವಳು ಕಣ್ಣು ಬಿಟ್ಟಾಗ ಅವಳ ಮೈಮೇಲೆ ಬಟ್ಟೆಯಿಲ್ಲದ್ದನ್ನು ನೋಡಿ ಅವಳು ಮುಜುಗುರ ಅನುಭವಿಸಿದಳು. ಆತ ಘಾಡವಾದ ನಿದ್ರೆಯಲ್ಲಿದ್ದನು. ಆಕೆ ಅವನನ್ನು ಕಾಲಿನಿಂದ ಒದ್ದು ಎಬ್ಬಿಸಿದಳು. ಆತ ಅರೆನಿದ್ರೆಯಲ್ಲಿ ಅವಳ ಹ್ಯಾಂಡ್ಸಲಾಕಗಳನ್ನು ತೆಗೆದು ಮತ್ತೆ ನಿದ್ರೆಗೆ ಜಾರಿದನು. ಆ ಬಂಧನದಿಂದ ಬಿಡಿಸಿಕೊಂಡ ನಂತರ ಅವಳು ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ಅವಳ ಹೊಟ್ಟೆಯಲ್ಲಿ ಇಲಿಗಳು ಓಡಾಡಿದಂತಾಗುತ್ತಿತ್ತು. ಅವಳಿಗೆ ಅಷ್ಟೊಂದು ಹಸಿವಾಗಿತ್ತು. ಬೇಗನೆ ಸ್ನಾನ ಮಾಡಿ ಅವಲಕ್ಕಿ ಮಾಡಿಕೊಂಡು ತಿನ್ನಬೇಕು ಎಂದು ತೀರ್ಮಾನಿಸಿ ಅವಳು ಬಾಥರೂಮಿನ ದಾರಿ ತುಳಿದಳು. ಆದರೆ ಆಕೆಗೆ ಅವನು ರಾತ್ರಿ ಕೊಟ್ಟ ಕಾಟಕ್ಕೆ ಅವನನ್ನು ಗೋಳಿಡಿದುಕೊಳ್ಳೋ ಆಸೆಯಾಯಿತು. ಆಕೆ ಬೆಡ್ರೂಮಿಗೆ ಓಡೋಗಿ ಆ ಹ್ಯಾಂಡ್ಸಲಾಕಗಳಿಂದ ಅವನನ್ನು ಬಂಧಿಸಿದಳು. ಅವನ ನಿದ್ದೆ ಒಮ್ಮೆಲೇ ಹಾರಿ ಹೋಯಿತು. ಆತ ಕೀರುಚಾಡಲು ಪ್ರಾರಂಭಿಸಿದನು. ಆಕೆ ಅವನೆಡೆಗೆ ನೋಡಿ ನಗುತ್ತಾ ಬಚ್ಚಲ ಮನೆ ಸೇರಿದಳು. ಆತ "ಪ್ಲೀಸ್ ನನ್ನ ರಿಲೀಸ್ ಮಾಡೇ ಟಾಯ್ಲೆಟ ಅರ್ಜೆಂಟ ಆಗ್ತಿದೆ" ಎಂದು ಕೀರುಚಿದನು. ಆಕೆ ಹಳೇ ಹಿಂದಿ ಹಾಡುಗಳನ್ನು ಜೋರಾಗಿ ಗುನುಗುತ್ತಾ ಸ್ನಾನ ಮಾಡುತ್ತಿದ್ದಳು. ಅವನ ಧ್ವನಿ ಕೇಳಿಸಿದರೂ ಆಕೆ ಸುಮ್ಮನೆ ತನ್ನ ಪಾಡಿಗೆ ತಾ ಸ್ನಾನ ಮುಗಿಸಿದಳು. ನಂತರ ಅವನ ಹೊಟ್ಟೆಯೂರಿಸಬೇಕೆಂದು ಅರೆಬರೆ ಬಟ್ಟೆ ಹಾಕಿಕೊಂಡು ಬೆಡ್ರೂಮಿಗೆ ಕಾಲಿಟ್ಟಳು.

ಹನಿಮೂನಿನ ಅವಾಂತರ  Kannada Thriller Story
             ತನ್ನನ್ನು ನೋಡಿ ಕರಿಸಿದ್ದಪ್ಪ ಟೆಂಪ್ಟಾಗಿ ಜೊಲ್ಲು ಸುರಿಸುತ್ತಾನೆ ಎಂಬಾಸೆಯಲ್ಲಿ ರೂಪಶ್ರೀ ಇದ್ದಳು. ಆದರೆ ಅಲ್ಲಾಗಿದ್ದ ಅನಾಹುತವನ್ನು ನೋಡಿ ಆಕೆ ಜೋರಾಗಿ ಕೀರುಚಿದಳು. ಕರಿಸಿದ್ದಪ್ಪ ಹಾಸಿಗೆಯ ಮೇಲೆ ಕೊಲೆಯಾಗಿ ಬಿದ್ದಿದ್ದನು. ಅವನ ಹಣೆಗೆ ಗುಂಡೇಟು ಬಿದ್ದಿತ್ತು. ಅವನ ರಕ್ತದಿಂದ ಹಾಸಿಗೆಯೆಲ್ಲ ಕೆಂಪಾಗಿತ್ತು. ಆಕೆಗೆ ಏನು ಮಾಡಬೇಕು ಎಂಬುದು ತಿಳಿಯದಾಯಿತು. ಆಕೆ ಜೋರಾಗಿ ಅಳತೊಡಗಿದಳು. ಕೆಲ ನಿಮಿಷಗಳ ನಂತರ ಆಕೆ ಸುಧಾರಿಸಿಕೊಂಡಳು. ಅವಸರವಾಗಿ ಸೀರೆಯುಟ್ಟುಕೊಂಡು ತನ್ನ ಮೊಬೈಲನಿಂದ ಕರೆ ಮಾಡಲು ಪ್ರಯತ್ನಿಸಿದಳು. ಆದರೆ ಅಲ್ಲಿ ಅವಳಿಗೆ ನೆಟವರ್ಕ ಸಿಗುವುದು ಅಸಾಧ್ಯವಾಗಿತ್ತು. ತಾನೆಲ್ಲಿರುವೆ ಎಂಬುದು ಅವಳಿಗೆ ಸರಿಯಾಗಿ ಗೊತ್ತಿರಲಿಲ್ಲ. ಅವಳನ್ನು ಕರೆದುಕೊಂಡು ಬಂದಿದ್ದವನು ಕೊಲೆಯಾಗಿ ಬಿದ್ದಿದ್ದನು. 

ಹನಿಮೂನಿನ ಅವಾಂತರ  Kannada Thriller Story

         ರೂಪಶ್ರೀಗೆ ಅವನನ್ನು ಕೊಂದವರು ಯಾರು ಎಂಬ ಪ್ರಶ್ನೆ ಕಾಡಲು ಶುರುಮಾಡಿತು. ಆಕೆ ಕೊಲೆಗಾರನ ಸುಳಿವಿಗಾಗಿ ಮನೆಯೆಲ್ಲ ಹುಡುಕಲು ಪ್ರಾರಂಭಿಸಿದಳು. ಆದರೆ ಆಕೆಗೆ ಮತ್ತೆ ಮೊದಲಿನ ಕರಿ ಬೆಕ್ಕು ಎದುರಾಯಿತು. ಆಕೆ ಹೆದರಿ ಮನೆಯಿಂದ ಓಡಿ ಹೊರಬಂದಳು. ಹಿಂತಿರುಗಿ ನೋಡದೆ ದಾರಿ ಕಾಣಿಸಿದ ಕಡೆಗೆ ಓಡಿದಳು. ಎರಡು ಗಂಟೆಗಳ ನಂತರ ಅವಳಿಗೆ ಒಂದು ನಗರ ಸಿಕ್ಕಿತು. ಅವಳಿಗೆ ಆ ಜನರ ಭಾಷೆ ಒಂಚೂರು ತಿಳಿಯಲಿಲ್ಲ. ಆಕೆ ಕೊನೆಗೆ ಅಲ್ಲಿನ ಪೊಲೀಸ್ ಸ್ಟೇಷನಗೆ ಹೋಗಿ ನಡೆದದ್ದನ್ನೆಲ್ಲ ವಿವರಿಸಿ ದೂರು ಕೊಟ್ಟಳು. ಪೋಲಿಸರು ಬಂದು ಸ್ಥಳ ಪರಿಶೀಲನೆ ನಡೆಸಿ ಕರಿಸಿದ್ದಪ್ಪನ ಬಾಡಿಯನ್ನು ಪೋಸ್ಟ ಮಾರ್ಟಮಗೆ ಕಳುಹಿಸಿದರು. ಆತ ಕೊಲೆಯಾಗಿ ಸತ್ತ ಸುದ್ದಿ ಗೋವಾದ ಗಡಿದಾಟಿ ಕರ್ನಾಟಕದ ಬಾಗಿಲು ತಟ್ಟಿತು. ರಾಜ್ಯದ ಎಲ್ಲ ನ್ಯೂಸ್ ಚಾನೆಲಗಳಲ್ಲಿ ಅವನ ಸಾವಿನ ಸುದ್ದಿ ರೋಚಕವಾಗಿ ಹರಿದಾಡಿತು. "ಹನಿಮೂನಿನಲ್ಲಿ MLA ಕರಿಸಿದ್ದಪ್ಪನವರ ಬರ್ಬರ ಹತ್ಯೆ ; ಕಣ್ಣಾಮುಚ್ಚಾಲೆ ಆಡುವಾಗ ಕಣ್ಮುಚ್ಚಿದ ಕರಿಸಿದ್ದಪ್ಪ..." ಎಂದೆಲ್ಲ ರಂಗುರಂಗೀನ ಸುದ್ದಿ ಎಲ್ಲ ಸುದ್ದಿವಾಹಿನಿಗಳಲ್ಲಿ ಎರಡ್ಮೂರು ದಿನಗಳ ತನಕ ಪ್ರಸಾರವಾಯಿತು.

ಹನಿಮೂನಿನ ಅವಾಂತರ : Kannada Thriller Story

              ಕರಿಸಿದ್ದಪ್ಪನ ನಿಗೂಡ ಸಾವು ಅವನ ಪಾರ್ಟಿಗೆ ದೊಡ್ಡ ಮುಜುಗುರವನ್ನು ತಂದಿಟ್ಟಿತು. ಅವನ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು ಹೈಕಮಾಂಡನಿಂದ ಒತ್ತಡ ಹೆಚ್ಚಾಯಿತು. ಗೋವಾ ಪೋಲಿಸರು ಎಲ್ಲ ದಿಕ್ಕುಗಳಲ್ಲಿ ಪ್ರಯತ್ನಿಸಿದರೂ ನಿಜವಾದ ಕೊಲೆಗಾರರನ್ನು ಪತ್ತೆಹಚ್ಚುವಲ್ಲಿ ವಿಫಲವಾದರು. ಅದಕ್ಕಾಗಿ ಆ ಕೇಸಿನ ಜವಾಬ್ದಾರಿ ಕರ್ನಾಟಕ ಪೋಲೀಸರ ಹೇಗಲೇರಿತು. ಇದು ಬಹಳ ಸೆನ್ಸಿಟಿವ ಕೇಸಾಗಿದ್ದರಿಂದ ಮೇಲಾಧಿಕಾರಿಗಳು A.C.P. ಶಿವನಿಗೆ ಇದರ ತನಿಖೆಯ ಜವಾಬ್ದಾರಿಯನ್ನು ವಹಿಸಿದರು. ಆತ ದಕ್ಷ ಪೋಲಿಸ್ ಅಧಿಕಾರಿಯೆಂದು ಸಾಕಷ್ಟು ಹೆಸರು ಮಾಡಿದ್ದನು. ತಕ್ಷಣವೇ ಶಿವ ತನಿಖೆಗಾಗಿ ಗೋವಾದ ಗಡಿ ತುಳಿದು ವಿಚಾರಣೆಯನ್ನು ಪ್ರಾರಂಭಿಸಿದನು. ಆದರೆ ಅವನಿಗೂ ಏನು ಸುಳಿವು ಸಿಗಲಿಲ್ಲ. ಆತ "ಯಾವನೋ ಹನಿಮೂನಿನಲ್ಲಿ ಸತ್ತಿದ್ದಕ್ಕೆ ಮದುವೆಯಾಗದ ನಾನೇಕೆ ಮರುಗಬೇಕು?" ಎಂದು ಭಾವಿಸಿ ತನಿಖೆಯನ್ನು ಅರ್ಧಕ್ಕೆ ಬಿಟ್ಟು ಗೋವಾದ ಬೀಚಗಳಲ್ಲಿ ಮಜಾ ಮಾಡಿ ವಾಪಸ್ ಬಂದನು.

ಹನಿಮೂನಿನ ಅವಾಂತರ : Kannada Thriller Story

              ರೂಪಶ್ರೀ ತನ್ನ ಗಂಡ ಕರಿಸಿದ್ದಪ್ಪನನ್ನು ಕಳೆದುಕೊಂಡ ಆಘಾತದಿಂದ ಇನ್ನೂ ಹೊರ ಬಂದಿರಲಿಲ್ಲ. ಅಂಥದರಲ್ಲಿ ತನಿಖೆಯ ಆತುರದಲ್ಲಿ ಪೋಲಿಸರು ಅವಳಿಗೆ ಸಾವಿರಾರು ಪ್ರಶ್ನೆಗಳನ್ನು ಕೇಳಿ ಮತ್ತಷ್ಟು ನೋಯಿಸಿದರು. ಆತ ಕೊಲೆಯಾದ ದಿನ ಅಲ್ಲಿ ಅವಳನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಆದ್ದರಿಂದ ಅವಳಿಗೆ ತಲೆಬೀಸಿ ಹೆಚ್ಚಾಯಿತು. ಮೇಲಾಧಿಕಾರಿಗಳು ಈ ಕೇಸಿನ ತನಿಖೆ ನಡೆಸುತ್ತಿದ್ದ ಶಿವನ ಮೇಲೆ ಒತ್ತಡ ಹೇರಿದಾಗ ಆತ ರೂಪಶ್ರೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಅವಳ ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತಿದ್ದನು. ಆದರೂ ಎಲ್ಲಿಯೂ ಅವನಿಗೆ ಒಂದು ಸಣ್ಣ ಸುಳಿಯೂ ಸಿಗುತ್ತಿರಲಿಲ್ಲ. ಕರಿಸಿದ್ದಪ್ಪನ ಪೋಸ್ಟ ಮಾರ್ಟಮ್ ರಿಪೋರ್ಟ್ ಬಂದಿತು. ಅದನ್ನು ನೋಡಿ ಶಿವ ಶಾಕಾದನು. ಯಾಕೆಂದರೆ ಕರಿಸಿದ್ದಪ್ಪನ ಖಾಸಗಿ ಬಂದೂಕಿನಿಂದಲೇ ಅವನ ಮೇಲೆ ಗುಂಡು ಹಾರಿಸಲಾಗಿತ್ತು. ಅವನ ದೇಹದಲ್ಲಿ ಅವನ ಲೈಸೆನ್ಸಿನ್ ಬಂದೂಕಿನ ಗುಂಡುಗಳೇ ಇರುವುದನ್ನು ಪೋಸ್ಟ್ ಮಾರ್ಟಮ್ ರಿಪೋರ್ಟ್ ಸ್ಪಷ್ಟವಾಗಿ ಹೇಳುತ್ತಿತ್ತು. ಹೀಗಾಗಿ ಈ ಕೇಸ್ ವಿಚಿತ್ರ ತಿರುವನ್ನು ಪಡೆದುಕೊಂಡಿತು. 

ಹನಿಮೂನಿನ ಅವಾಂತರ  Kannada Thriller Story

         ತನಿಖೆಯ ಹೊಣೆ ಹೊತ್ತ ಶಿವ ಕರಿಸಿದ್ದಪ್ಪನ ಕೊಲೆ ಹಿಂದೆ ಅವನ ಹೆಂಡತಿ ರೂಪಶ್ರೀಯ ಕೈವಾಡವಿದೆ ಎಂಬ ಶಂಕೆ ವ್ಯಕ್ತಪಡಿಸಿದನು. ಶಿವ ರೂಪಶ್ರೀಯನ್ನು ಠಾಣೆಗೆ ಕರೆಯಿಸಿದನು. ಅವಳನ್ನು ಹೆದರಿಸಿ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದನು. ಆದರೆ ಆಕೆಗೆ ಏನು ಗೊತ್ತಿರಲಿಲ್ಲ. ಆಕೆ ನಡೆದ ಸಂಗತಿಯನ್ನೆಲ್ಲ ಮುಚ್ಚುಮರೆಯಿಲ್ಲದೆ ವಿವರಿಸಿ ಹೇಳಿದಳು. ಆದರೆ ಪೋಲೀಸರಿಗೆ ಅವಳ ಹೇಳಿಕೆ ಕಥೆಯಂತೆ ಕಂಡಿತು. ಅದಕ್ಕಾಗಿ ಅವರು ಅವಳಿಗೆ ಚಿತ್ರಹಿಂಸೆ ಕೊಟ್ಟು ವಿಚಾರಿಸಿದರು. ಆದರೆ ಅವಳಿಗೆ ಏನು ಗೊತ್ತಿರಲಿಲ್ಲ. ಪೋಲೀಸರ ಅನುಮಾನ ಸಹಜವಾಗಿತ್ತು. ಏಕೆಂದರೆ ಹನಿಮೂನಿಗೆ ಹೋದಾಗ ಕರಿಸಿದ್ದಪ್ಪನ ಜೊತೆ ಅವಳನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಕೊನೆಗೆ ಆಕೆ ಅಮಾಯಕಿ ಎಂದು ಗೊತ್ತಾದಾಗ ಆಕೆಯನ್ನು  ಪೋಲಿಸರು ಮನೆಗೆ ಕಳುಹಿಸಿದರು. 

ಹನಿಮೂನಿನ ಅವಾಂತರ  Kannada Thriller Story

         ಈಗ ರೂಪಶ್ರೀಯ ಮನಸ್ಸಲ್ಲಿ ಗಂಡ ಸತ್ತ ನೋವಿಗಿಂತ, ತಾನು ರಾಜಕೀಯದಲ್ಲಿ ಬೆಳೆಯಲು ಇದೇ ಒಳ್ಳೇ ಸಂದರ್ಭ ಎಂಬ ದುರಾಸೆಯೇ ತುಂಬಿತು. ಅವಳು ಪ್ರೆಸ್ ಮೀಟ್ ಕರೆದು ಪೋಲೀಸರ ಮೇಲೆ ಗೂಬೆ ಕೂರಿಸಿ "ನನ್ನ ಗಂಡಿನ ಸಾವಿಗೆ ನ್ಯಾಯ ಬೇಕೆ ಬೇಕು. ಇಲ್ಲವಾದರೆ ವಿಧಾನಸೌಧದ ಎದುರು ಮೌನ ಪ್ರತಿಭಟನೆ ಮಾಡುವುದಾಗಿ" ಬೆದರಿಕೆ ಹಾಕಿದಳು. ಜನ ಅವಳ ನಾಟಕವನ್ನೇ ಗಂಡನ ಮೇಲಿನ ಪ್ರೀತಿಯೆಂದು ತಿಳಿದು ಅವಳನ್ನು ಮಧ್ಯಂತರ ಚುನಾವನೆಯಲ್ಲಿ ಆರಿಸಿ ತಂದು ಅವಳನ್ನು ಶಾಸಕಿಯನ್ನಾಗಿ ಮಾಡಿದರು. ಆಕೆ ಅದೇ ಅನುಕಂಪವನ್ನು ಅಸ್ತ್ರವಾಗಿ ಬಳಸಿಕೊಂಡು ಮಂತ್ರಿಯಾದಳು. ಅಧಿಕಾರ ಸಿಕ್ಕ ನಂತರ ಅಕ್ರಮವಾಗಿ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿ ಮೋಜು ಮಸ್ತಿ ಮಾಡುತ್ತಾ ಸುಖದಲ್ಲಿ ತೇಲಾಡಿದಳು. ಇದನ್ನೆಲ್ಲ ನೋಡಿದ ನಂತರ ಶಿವನಿಗೆ "ಕರಿಸಿದ್ದಪ್ಪನ ಸಾವಿನ ಹಿಂದೆ ಅವಳ ಕೈವಾಡವಿದೆ'' ಎಂಬ ಅನುಮಾನ ಮತ್ತೆ ಬಂತು. ಆತ ತನಿಖೆಯ ನೆಪದಲ್ಲಿ ಆಕೆಯನ್ನು ವಿಚಾರಣೆ ನಡೆಸಲು ಮುಂದಾದಾಗ ಆಕೆ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅವನನ್ನು ಟ್ರಾನ್ಸಫರ್ ಮಾಡಿಸಿ ಜಾರಿಕೊಂಡಳು.

ಹನಿಮೂನಿನ ಅವಾಂತರ : Kannada Thriller Story

           ರೂಪಶ್ರೀಗೆ ಇನ್ನೂ ಹರೆಯದ ವಯಸ್ಸಿತ್ತು. ತನ್ನ ಗಂಡ ಸತ್ತಿದ್ದಾನೆ ಎಂಬ ಕೊರಗು ಅವಳಿಗೆ ಸ್ವಲ್ಪವೂ ಇರಲಿಲ್ಲ. ಯಾಕೆಂದರೆ ಆಕೆ ಬರೀ ದುಡ್ಡಿಗಾಗಿ ಅವನನ್ನು ಮದುವೆಯಾಗಿದ್ದಳು. ಒಂದಿನ ರಾತ್ರಿ ಆಕೆ ಸತ್ತ  ಗಂಡನನ್ನು ಮರೆತು, ತನ್ನ ಖಾಸಗಿ ರೆಸಾರ್ಟನಲ್ಲಿ ಮತ್ತೊಬ್ಬ ಗಂಡಸನ ತೋಳತೆಕ್ಕೆಯಲ್ಲಿ ಮೈಮರೆತ್ತಿದ್ದಳು. ಯೌವ್ವನದ ಆಸೆಗಳನ್ನು ಎದುರಿಸಲಾಗದೆ ತನ್ನ ಗೆಳೆಯನೊಂದಿಗೆ ಸರಸವಾಡುತ್ತಿದ್ದಳು. ಪರಪುರುಷನ ಸ್ಪರ್ಶಸುಖವನ್ನು ಆನಂದಿಸುತ್ತಿದ್ದಳು. ಅವನ ಕಾಮ ಅವಳ ಕೋಮಲವಾದ ಶರೀರವನ್ನು ನೋಯಿಸುತ್ತಿದ್ದರೂ ಆಕೆ ನಸುನಗುತ್ತಿದ್ದಳು. ಆದರೆ ಅಷ್ಟರಲ್ಲಿ ಜೋರಾಗಿ ಗಾಳಿ ಬೀಸಿತು. ಮನೆಯ ಕಿಟಿಕಿಗಳೆಲ್ಲ ಪಟಪಟನೆ ಬಡಿದು ಕಿತ್ತು ಬಿದ್ದವು. ಗಾಳಿಯ ರಭಸಕ್ಕೆ ಬಾಗಿಲು ತಾನಾಗಿಯೇ ತೆರೆದು ಮುರಿದು ಬಿತ್ತು. ಅವಳ ಕೋಣೆಯಲ್ಲಿ ಯಾವುದೋ ಒಂದು ದುಷ್ಟಶಕ್ತಿಯ ಪ್ರವೇಶವಾಯಿತು. ಅದಕ್ಕೆ ಹೆದರಿ ಅವಳ ಗೆಳೆಯ ಅಲ್ಲಿಂದ ಅರೆಬೆತ್ತಲೆಯಾಗಿ ಓಡಿ ಹೋದನು.


ಹನಿಮೂನಿನ ಅವಾಂತರ : Kannada Thriller Story

           ಈಗ ಮಧ್ಯರಾತ್ರಿ ಆ ಒಂಟಿ ಮನೆಯಲ್ಲಿ ರೂಪಶ್ರೀ ಒಬ್ಬಳೇ ಇದ್ದಳು. ಆಕೆ ಆ ದುಷ್ಟಶಕ್ತಿಗೆ ಹೆದರಿ ಕೀರಚಲು ಮುಂದಾದಳು. ಒಮ್ಮೆಲೇ ಅವಳ ಗಂಟಲು ಕಟ್ಟಿತು. ಅವಳು ಕೀರಚಲು ಪ್ರಯತ್ನಿಸಿ ಸೋತಳು. ಅವಳ ಕಣ್ಣಿಗೆ ಆ ದುಷ್ಟಶಕ್ತಿ ಕಾಣಿಸುತ್ತಿರಲಿಲ್ಲ. ಆದರೆ ಅದರ ಅನುಭವ ಅವಳಿಗಾಗುತ್ತಿತ್ತು. ಯಾವುದೋ ಕಾಣದ ಕೈಗಳು ಅವಳನ್ನು ಅಪ್ಪಿಕೊಂಡವು. ಕೀರಚಲು ಅವಳತ್ರ ಶಕ್ತಿಯಿರಲಿಲ್ಲ. ಅವಳಿಗೆ ಆ ಕೈಗಳ ಕಾಟವನ್ನು ತಡೆದುಕೊಳ್ಳುವುದು ಸವಾಲಾಯಿತು. ಅವಳ ಸೀರೆಯನ್ನು ಆ ಕಾಣದ ಕೈಗಳು ಸೆಳೆದವು. ಅವಳ ತುಟಿಗಳನ್ನು ಯಾರೋ ಜೋರಾಗಿ ಕಚ್ಚಿದಂಗಾಯಿತು. ಅವಳ ಕೋಮಲವಾದ ದೇಹದ ಮೇಲೆ ಕಾಣದ ಕೈಗಳು ಮಾಡುತ್ತಿರುವ ಹಲ್ಲೆಯನ್ನು ಎದುರಿಸಲಾರದೆ ಆಕೆ ಅಳತೊಡಗಿದಳು. ಅವಳ ಅಳುವಿಗೆ ಹಿಂಜರಿಯದೆ ಆ ದುಷ್ಟಶಕ್ತಿ ತನ್ನಾಸೆಯನ್ನು ತೀರಿಸಿಕೊಂಡು ಮಾಯವಾಯಿತು. ಮರುದಿನ ಅವಳಿಗೆ ಆ ದುಷ್ಟಶಕ್ತಿ ತನ್ನ ಸತ್ತೋದ ಗಂಡನಿರಬಹುದು ಎಂಬ ಅನುಮಾನ ಬಂದಿತು.

ಹನಿಮೂನಿನ ಅವಾಂತರ  Kannada Thriller Story

                  ರೂಪಶ್ರೀ ಒಂಟಿಯಾಗಿದ್ದಾಗ ಆ ಅದೃಶ್ಯ ದುಷ್ಟಶಕ್ತಿ ಬಂದು ಅವಳನ್ನು ಕಾಡತೊಡಗಿತು. ಅವಳಿಗೆ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿತು. ಅವಳಿಗೆ ಆ ದುಷ್ಟಶಕ್ತಿ ತನ್ನ ಗಂಡನಿರಬಹುದು ಎಂಬ ಅನುಮಾನ ನಿಜವಾಯಿತು. ಕರಿಸಿದ್ದಪ್ಪನ ಅತೃಪ್ತ ಆತ್ಮ ದುಷ್ಟ ಶಕ್ತಿಯಾಗಿ ಅವಳನ್ನು ಹಿಂಸಿಸುತ್ತಿತ್ತು. ಆ ಅತೃಪ್ತ ಆತ್ಮಕ್ಕೆ ತನ್ನನ್ನು ಸಾಯಿಸಿದವರು ಯಾರೆಂದು ಗೊತ್ತಾಗಬೇಕಿತ್ತು. ಅದಕ್ಕಾಗಿ ಅದು ಅವಳ ಹಿಂದೆ ಬಿದ್ದಿತ್ತು. ಅವಳು ಕರಿಸಿದ್ದಪ್ಪನ ಆತ್ಮಕ್ಕೆ "ನಿನ್ನ ಸಾವಿಗೆ ನಾನು ಖಂಡಿತ ನ್ಯಾಯ ಕೊಡಿಸುವೆ. ಪ್ಲೀಸ್ ನನ್ನ ನಂಬು" ಎಂದು ಪ್ರಮಾಣ ಮಾಡಿ ಹೇಳಿದಳು. ಆ ಅತೃಪ್ತ ಆತ್ಮ ಅವಳಿಗೆ ಒಂದು ವಾರದ ಸಮಯ ನೀಡಿ ಅಲ್ಲಿಂದ ಮಾಯವಾಯಿತು. ತಾನೇ ಖುದ್ದಾಗಿ ಟ್ರಾನ್ಸಫರ ಮಾಡಿಸಿದ್ದ ನಿಷ್ಠಾವಂತ ಪೊಲೀಸ್ ಅಧಿಕಾರಿ ಶಿವನನ್ನು ಆಕೆ ಮತ್ತೆ ಕರೆಯಿಸಿಕೊಂಡಳು. ತಾನೇ ಕ್ಲೋಸ್ ಮಾಡಿದ ಕೇಸನ್ನು ತಾನೇ ಒಪನ ಮಾಡಿಸಿ ತನಿಖೆಗೆ ಆದೇಶಿಸಿದಳು.

ಹನಿಮೂನಿನ ಅವಾಂತರ : Kannada Thriller Story

            ರೂಪಶ್ರೀಗೆ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ತಾನೇ ಆಗಬೇಕು ಎಂಬ ಮಹದಾಸೆಯಿತ್ತು. ಅದಕ್ಕಾಗಿ ಆಕೆ ಜನರ ಕಣ್ಣಲಿ ಈಡೇರದ ಭರವಸೆಗಳನ್ನು ಬಿತ್ತಿದಳು. ಅದಕ್ಕೆ ತಕ್ಕಂತೆ ನಾಲಿಗೆಗೆ ಬಣ್ಣ ಹಚ್ಚಿಕೊಂಡು ನಾಟಕವಾಡಲು ಪ್ರಾರಂಭಿಸಿದಳು. ಆದರೆ ಕರಿಸಿದ್ದಪ್ಪನ ಅತೃಪ್ತ ಆತ್ಮ ಅವಳಿಗೆ ನೀಡಿದ್ದ ಒಂದು ವಾರದ ಕಾಲಾವಧಿ ಮುಗಿಯಿತು. ಆ ಆತ್ಮ ಮತ್ತೆ ಅವಳನ್ನು ಕಾಡಲು ಪ್ರಾರಂಭಿಸಿತು. ಆಕೆ ಮತ್ತೆ ಶಿವನನ್ನು ಕರೆಯಿಸಿ ತನಿಖಾ ವರದಿ ಕೇಳಿ ರೇಗಿದಳು. ಸಾಧ್ಯವಾದಷ್ಟು ಬೇಗ ಕರಿಸಿದ್ದಪ್ಪನನ್ನು ಕೊಂದ ಕೊಲೆಗಾರನನ್ನು ಹಿಡಿಯಲು ಆದೇಶಿಸಿದಳು. ಆದರೆ ಶಿವ ಹಗಲುರಾತ್ರಿ ಕಣ್ಣಿಗೆ ಎಣ್ಣೆ ಬಿಡ್ಕೊಂಡು ಹುಡುಕಿದರೂ ಅವನಿಗೆ ಒಂದು ಸಣ್ಣ ಸುಳಿವೂ ಸಿಗಲಿಲ್ಲ. ಆತ ತುಂಬ ಅಪಸೆಟ್ ಆದನು. ಅವನಿಗೆ ಇನ್ನೂ ರೂಪರ್ಶಿಯ ಮೇಲೆಯೇ ಅನುಮಾನವಿತ್ತು. ಅದಕ್ಕಾಗಿ ಆತ ಅವಳ ಹೆಜ್ಜೆಗುರುತುಗಳನ್ನು ಹಿಂಬಾಲಿಸಿದನು. 

ಹನಿಮೂನಿನ ಅವಾಂತರ : Kannada Thriller Story

            ಒಂದಿನ ರಾತ್ರಿ ರೂಪಶ್ರೀ ತನ್ನ ಖಾಸಗಿ ರೆಸಾರ್ಟಿಗೆ ಹೊರಟ್ಟಿದ್ದಳು. ಆತ ಅವಳನ್ನು ಹಿಂಬಾಲಿಸಿದನು. ದಾರಿಮಧ್ಯೆದಲ್ಲಿ ಅವಳ ಕಾರಿನ ಮೇಲೆ ಗುಂಡಿನ ದಾಳಿಯಾಯಿತು. ಆಕೆ ಅದೃಷ್ಟವಶಾತ ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಪಾರಾದಳು. ಶಿವ ಅವಳನ್ನು ಬಿಟ್ಟು ಗುಂಡು ಬಂದ ದಿಕ್ಕಿನಲ್ಲಿ ತನ್ನ ಬೈಕನ್ನು ವೇಗವಾಗಿ ಓಡಿಸಿದನು. ಅವನಿಗೆ ದಾಳಿಕೊರರು ಸಿಗಲಿಲ್ಲ. ಆದರೆ ಅವರ ಒಂದು ಸಣ್ಣ ಸುಳಿವು ಸಿಕ್ಕಿತು. ಆ ಸುಳಿವಿನ ಬೆನ್ನಟ್ಟಿ ಹೊರಟ ಅವನಿಗೆ ಒಂದು ದೊಡ್ಡ ಅಚ್ಚರಿ ಕಾದಿತ್ತು.

ಹನಿಮೂನಿನ ಅವಾಂತರ  Kannada Thriller Story

          ಮೂರ್ನಾಲ್ಕು ಜನ ನವಯುವಕರ ಗುಂಪು ಟಾರ್ಗೆಟ್ ಮಾಡಿ ಸಮಾಜ ಘಾತುಕ ಗಣ್ಯ ವ್ಯಕ್ತಿಗಳನ್ನು ಸಾಲಾಗಿ ಕೊಲ್ಲುತ್ತಿರುವ ಭಯಾನಕ ಸತ್ಯ ಶಿವನಿಗೆ ಗೊತ್ತಾಯಿತು. ಕಾನೂನಿನ ಅಂಗರಕ್ಷಕರಾದ ಪೋಲೀಸರು ಮಾಡಬೇಕಾದ ಕೆಲಸವನ್ನು ಆ ಯುವಕರು ಮಾಡುತ್ತಿದ್ದರು. ಅದಕ್ಕಾಗಿ ಶಿವನಿಗೆ ಅವರ ಬಗ್ಗೆ ಹೆಮ್ಮೆ ಅನಿಸಿತು. ನಾನು ಮಾಡಬೇಕಾದ ಕೆಲಸವನ್ನು ಈ ಸಾಹಸಿ ಯುವಕರು ಮಾಡುತ್ತಿದ್ದಾರಲ್ಲ ಎಂದು ಆತ ಸಮಾಧಾನ ಮಾಡಿಕೊಂಡನು. ಆದರೂ ಅವನಿಗೆ ಅವರ ಉದ್ದೇಶ ತಿಳಿದುಕೊಳ್ಳಬೇಕೆಂಬ ಆಸೆಯಾಯಿತು. ಅದಕ್ಕಾಗಿ ಆತ ಅವರ ಹಿನ್ನೆಲೆಯನ್ನು ಅಧ್ಯಯನ ಮಾಡಲು ಶುರುಮಾಡಿದನು. ಅವರ ಹಿನ್ನೆಲೆಯ ಕಥೆ ಕೇಳಿ ಅವನ ಕಣ್ಣುಗಳು ಒದ್ದೆಯಾದವು. ಆ ಯುವಕರು ಒಂದು ಪುಟ್ಟ ಪಟ್ಟಣದಲ್ಲಿ ಓದುತ್ತಿದ್ದರು. ಅವರಿಗೆಲ್ಲ ಒಬ್ಬಳು ಬೆಸ್ಟ ಫ್ರೆಂಡ್ ಇದ್ದಳು. ಇದ್ದಕ್ಕಿದ್ದಂತೆ ಒಂದೆರಡು ದಿನ ಅವಳು ಕಾಲೇಜಿಗೆ ಬರಲಿಲ್ಲ. ಅವರು ಅವಳನ್ನು ವಿಚಾರಿಸಬೇಕು ಎನ್ನುವಷ್ಟರಲ್ಲಿ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ ಎಂಬ ಸುದ್ದಿ ಅವರ ಕಿವಿಗೆ ಬಿತ್ತು. ಅವರು ಅವಳನ್ನು ನೋಡಲು ಆಸ್ಪತ್ರೆಗೆ ಹೋದರು. ಅವರು ಅವಳಿಗೆ "ನಿಂಜೊತೆ ನಾವಿದ್ದೀವಿ, ಹೆದರಬೇಡ" ಎನ್ನುವಷ್ಟರಲ್ಲಿ ಅವಳ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಹನಿಮೂನಿನ ಅವಾಂತರ : Kannada Thriller Story

                  ಅವಳು ಆತ್ಮಹತ್ಯೆ ಮಾಡಿಕೊಂಡು ಸಾಯುವಷ್ಟು ಹೇಡಿಯಲ್ಲ ಎಂಬುದು ಅವಳ ಗೆಳೆಯರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಅವರ ಗೆಳತಿಯ ಸಾವಿನ ಹಿಂದಿರುವ ಅಸಲಿ ರಸಹ್ಯ ಹುಡುಕಲು ಹೊರಟರು. ಅವಳ ಸಾವಿನ ಹಿಂದಿರುವ ಅಸಲಿ ಕಾರಣ ಗೊತ್ತಾದಾಗ ಅವರು ನಿಂತ ಜಾಗದಲ್ಲಿಯೇ ಕುಸಿದು ಬಿದ್ದರು. ಅವಳ ಮೇಲೆ ನಾಲ್ಕು ಜನ ಕಾಮುಕರು ಎರಡು ದಿನ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಅವರಲ್ಲಿ ಕರಿಸಿದ್ದಪ್ಪನು ಕೂಡ ಒಬ್ಬನಾಗಿದ್ದನು. ಮನುಷ್ಯತ್ವವಿಲ್ಲದ ಮೃಗಗಳು ಅವಳನ್ನು ಚಿತ್ರಹಿಂಸೆ ಕೊಟ್ಟು ಅನುಭವಿಸಿದ ನಂತರ ಅವಳಿಗೆ ವಿಷಕೊಟ್ಟು ಮಧ್ಯರಾತ್ರಿ ಅವಳ ಮನೆಮುಂದೆ ಬಿಸಾಕಿ ಹೋಗಿದ್ದರು. ಮಾನಕ್ಕೆ ಹೆದರಿ ಅವಳ ತಂದೆತಾಯಿಗಳು ಅವಳೊಂದಿಗೆ ಆದ ಅನ್ಯಾಯವನ್ನು ಬಚ್ಚಿಟ್ಟು ಸಂಕಟವನ್ನು ಅನುಭವಿಸಿದ್ದರು. ಅವರ ಗೆಳತಿಯ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ನಿರ್ಧರಿಸುವಷ್ಟರಲ್ಲಿ ಅವರ ಕಿವಿಗೆ ಮತ್ತೊಂದು ಕೆಟ್ಟ ಸುದ್ದಿ ಬಂದು ಅಪ್ಪಳಿಸಿತ್ತು. 

ಹನಿಮೂನಿನ ಅವಾಂತರ : Kannada Thriller Story

                ಕರಿಸಿದ್ದಪ್ಪ ಮತ್ತೊರ್ವ ಕಾಲೇಜ ಯುವತಿಯ ಮೇಲೆ ಅತ್ಯಾಚಾರವೆಸಗುವ ಪ್ರಯತ್ನ ಮಾಡುವಾಗ ಯಡವಟ್ಟು ಮಾಡಿಕೊಂಡು ಸಿಕ್ಕಿ ಬಿದ್ದಿದ್ದನು. ಆ ಯುವತಿ ಧೈರ್ಯವಾಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟು ನ್ಯಾಯಕ್ಕಾಗಿ ಅಂಗಲಾಚಿದಳು. ಆದರೆ ಎಲ್ಲ ಪೊಲೀಸ್ ನಾಯಿಗಳು ಕರಿಸಿದ್ದಪ್ಪನ ಕಾಲು ನೆಕ್ಕಲು ಮಾತ್ರ ಲಾಯಕ್ಕಾಗಿದ್ದವು. ಅವರಂತೆ ಎಲ್ಲ ವಕೀಲರು ಸಹ ಮನೆಯಲ್ಲಿ ತಮಗೂ ಅಕ್ಕತಂಗಿಯರೆಲ್ಲ ಇದ್ದಾರೆ ಎಂಬುದನ್ನು ಮರೆತು ಕೋರ್ಟಲ್ಲಿ ಕರಿಸಿದ್ದಪ್ಪನ ಪರವಾಗಿ ವಾದಿಸಿ ಅವನಿಗೆ ಬೆಲ್ ಕೊಡಿಸಿದ್ದರು. ಸಣ್ಣಪುಟ್ಟ ವಿಷಯಗಳಿಗೆಲ್ಲ ಭಾರತ ಬಂದ ಮಾಡುವ ಜನ ಅವಳ ವಿಷಯದಲ್ಲಿ ಒಂದೆರಡು ದಿನ ಫೇಸ್ಬುಕಲ್ಲಿ, ಟ್ವಿಟರಲ್ಲಿ ತುಟಿಗಳ ಅನುಕಂಪ ತೋರಿಸಿ ಸುಮ್ಮನಾದರು. ಟಿವಿ ಚಾನೆಲಗಳು ಟಿ.ಆರ್.ಪಿ.ಗಾಗಿ ನಾಲ್ಕು ದಿನ ಅವಳ ಕಣ್ಣೀರ ಕಥೆಯನ್ನು ಪ್ರಸಾರ ಮಾಡಿ ಮರೆಯಾದವು. ಸೆಲೆಬ್ರಿಟಿಗಳು, ಸಿನಿಮಾ ತಾರೆಗಳೆಲ್ಲರು ಕ್ಯಾಮರಾ ಮುಂದೆ ಉತ್ತರಕುಮಾರನ ಪೌರುಷವನ್ನು ಪ್ರದರ್ಶಿಸಿದರು. ಆದರೆ ಯಾರೊಬ್ಬರು ಬೀದಿಗೀಳಿದು ಅವಳ ಪರ ಹೋರಾಟ ಮಾಡಲಿಲ್ಲ.

ಹನಿಮೂನಿನ ಅವಾಂತರ  Kannada Thriller Story

          ಭಾರತದ 130+ ಕೋಟಿ ಜನ ಅವಳಿಗಾದ ಅನ್ಯಾಯವನ್ನು ಕಣ್ಣಾರೆ ಕಂಡರೂ ಮನೆಯಲ್ಲಿ ಐ.ಪಿ.ಎಲ್. ಕ್ರಿಕೆಟ್ ನೋಡುತ್ತಾ ಕುಳಿತ್ತಿದ್ದರು. ಮೀಸೆಹೊತ್ತ ಗಂಡಸರು ತಮ್ಮ ಮಡದಿಯರ ಮೇಲೆ ದಬ್ಬಾಳಿಕೆಯ ದರ್ಬಾರ್ ನಡೆಸುತ್ತಾ ತೆಪ್ಪಗಿದ್ದರು. ಯಾರೊಬ್ಬರು ಮನಸ್ಸಪೂರ್ವಕವಾಗಿ ತನ್ನ ಸಹಾಯಕ್ಕೆ ಬರದೇ ಇದ್ದರಿಂದ ಅವಳು ಬಹಳಷ್ಟು ನೊಂದುಕೊಂಡಳು. ಅದಕ್ಕಾಗಿ ಆಕೆ ತನಗಾದ ಅನ್ಯಾಯಕ್ಕೆ ನ್ಯಾಯಬೇಕೆಂದು ವಿಧಾನಸೌಧದ ಮುಂದೆ ಧರಣಿ ಕುಂತಳು. ಅರೆಬೆತ್ತಲೆ ಮೌನ ಚಳುವಳಿ ಮಾಡಿದಳು. ಆದರೆ ಎಲ್ಲರೂ ಮತ್ತೆ ತುಟಿಗಳ ಅನುಕಂಪ ತೋರಿಸಿ ಸುಮ್ಮನಾದರು. 

ಹನಿಮೂನಿನ ಅವಾಂತರ : Kannada Thriller Story

                ಕರಿಸಿದ್ದಪ್ಪನಿಗೆ ಅವಳು ದೊಡ್ಡ ತಲೆನೋವಾದಳು. ಮೊದಲೇ ಆತ ಜೈಶ್ರೀರಾಮ ಎನ್ನುತ್ತಾ ಎಲ್ಲ ಹರಾಮ ಕೆಲಸಗಳನ್ನು ಮಾಡುವ ರಾಜಕೀಯ ಪಕ್ಷದಲ್ಲಿದ್ದನು. ಅದಕ್ಕಾಗಿ ಆ ನೊಂದ ಯುವತಿಯ ಹೋರಾಟದ ಮೇಲೆ ಜಾತಿ ಧರ್ಮಗಳ ನೀಚ ರಾಜಕಾರಣದ ಕರಿ ನೆರಳು ಬಿದ್ದಿತು. ಕೊನೆಗೂ ಅವಳಿಗೆ ನ್ಯಾಯ ಸಿಗಲಿಲ್ಲ. ಕೊನೆಗೆ ಆಕೆ "ಭಾರತದಲ್ಲಿರುವ ಮೀಸೆಹೊತ್ತ ನವಯುವಕರಿಗೆಲ್ಲ ನಾಚಿಕೆಯಾಗಬೇಕು. ನನ್ನಂತೆ ನಿಮ್ಮ ಅಕ್ಕತಂಗಿಯರ ಮೇಲೆ ಈ ರೀತಿ ಅನ್ಯಾಯವಾಗಿದ್ದರೆ ನೀವು ಸುಮ್ಮನೆ ನರಸತ್ತವರಂತೆ ಇರುತ್ತಿದ್ರಾ?" ಎಂಬ ಪ್ರಶ್ನೆಯನ್ನು ಮುಂದಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದಳು.

ಹನಿಮೂನಿನ ಅವಾಂತರ : Kannada Thriller Story

                     ಮೊದಲೇ ತಮ್ಮ ಗೆಳತಿಯ ಸಾವಿನಿಂದ ರೊಚ್ಚಿಗೆದ್ದಿದ್ದ ಆ ನವಯುವಕರು ಈ ಯುವತಿಯ ಘಟನೆಯಿಂದ ಮತ್ತಷ್ಟು ಕೆರಳಿದರು. ಅವರಿಗೆ ಭಾರತದಲ್ಲಿರಲು ನಾಚಿಕೆಯಾಯಿತು. ಕುರುಡು ಕಾನೂನನ್ನು ನಂಬಿ ಕುಂತರೆ ನ್ಯಾಯ ಸಿಗುವುದಿಲ್ಲ ಎಂಬ ಸತ್ಯ ಅವರಿಗೆ ಸರಿಯಾಗಿ ಅರ್ಥವಾಯಿತು. ಅದಕ್ಕಾಗಿ ಅವರು ನೇರವಾದ ರಣತಂತ್ರವನ್ನು ಬಿಟ್ಟು  ಚಾಣಕ್ಯ ತಂತ್ರಗಳನ್ನು ಅಳವಡಿಸಿಕೊಂಡು ಈ ಸಮಾಜಕ್ಕೆ ಕಂಟಕವಾಗಿರುವವರನ್ನು ಸಾಲಾಗಿ ಕೊಲ್ಲಲು ಪ್ರಾರಂಭಿದರು. ಅವರು ಯಾವುದೇ ಸಾಕ್ಷ್ಯಾಧಾರಗಳ ಸುಳಿವು ಬಿಡದೆ ರಹಸ್ಯವಾಗಿ ಎಲ್ಲ ಪಾಪಿಗಳನ್ನು  ಸಾಯಿಸುತ್ತಿದ್ದರು. ಅದೇ ರೀತಿ ಕರಿಸಿದ್ದಪ್ಪನನ್ನು ಸಾಯಿಸಲು ಪ್ರಯತ್ನಿಸಿ ಬಹಳಷ್ಟು ಸಲ ಹೀನಾಯವಾಗಿ ಸೋತಿದ್ದರು. ಯಾಕೆಂದರೆ ಅವನಿಗೆ ಪೊಲೀಸ್ ನಾಯಿಗಳ ಬಲಿಷ್ಟ ರಕ್ಷಣೆಯಿತ್ತು. ಅವರ ಕಣ್ತಪ್ಪಿಸಿ ಅವನನ್ನು ಕೊಲ್ಲುವುದು ಅವರಿಗೆ ಸಾಹಸದ ಕೆಲಸವಾಗಿತ್ತು. ಆದರೆ ಅವರು ಛಲ ಬಿಡದೆ ಅವನನ್ನು ಕೊಲ್ಲಲು ಬಲೆಗಳನ್ನು ಹೆಣೆಯುತ್ತಲೇ ಹೋದರು.

ಹನಿಮೂನಿನ ಅವಾಂತರ  Kannada Thriller Story

                        ಒಂದಿನ ಆ ಯುವಕರಿಗೆ ಕರಿಸಿದ್ದಪ್ಪ ಪೊಲೀಸ್ ಸೆಕ್ಯುರಿಟಿಯಿಲ್ಲದೆ ಹನಿಮೂನಿಗಾಗಿ ತನ್ನ ಹೆಂಡತಿಯೊಡನೆ ಗೋವಾಗೆ ಹೋಗುವ ವಿಷಯ ಗೊತ್ತಾಯಿತು. ಅವರು ಸರಿಯಾಗಿ ಪ್ಲ್ಯಾನ್ ಮಾಡಿ ತಮ್ಮ ಹೆಜ್ಜೆ ಗುರುತು ಮೂಡದಂತೆ ಆ ರೆಸಾರ್ಟನಲ್ಲಿ ಅವನ ಕಥೆಯನ್ನು ಮುಗಿಸಿದ್ದರು. ನಂತರ ಅವರು ಮುಂದಿನ ಪಾಪಿಯ ಸಮಾಧಿಗೆ ಸ್ಕೆಚ್ ರೂಪಿಸಿ ಅಲ್ಲಿಂದ ಕಾಲ್ಕಿತ್ತರು. ಆ ಯುವಕರ ಸಾಹಸ ಶಿವನಿಗೆ ತುಂಬಾ ಇಷ್ಟವಾಯಿತು. ಅದಕ್ಕಾಗಿ ಆತ ಸಾಕ್ಷ್ಯಾಧಾರಗಳು ಇಲ್ಲ ಎಂಬ ನೆಪವೊಡ್ಡಿ ಕರಿಸಿದ್ದಪ್ಪನ ಕೊಲೆ ಕೇಸನ್ನು ಮುಚ್ಚಿ ಹಾಕಿದನು. ರೂಪಶ್ರೀ ಆ ಅತೃಪ್ತ ಆತ್ಮದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡು ನೆಮ್ಮದಿಯಾಗಿ ಸಾಯಲು ಪ್ರಯತ್ನಿಸಿದಳು. ಆದರೆ ದುರ್ಭಾಗ್ಯವೆಂಬಂತೆ ಬದುಕುಳಿದಳು. ಆ ಸಾಹಸಿ ಯುವಕರು ಭಾರತದಲ್ಲಿರುವ ಪಾಪಿಗಳನ್ನು ಬೇಟೆಯಾಡುತ್ತಾ ಧೈರ್ಯವಾಗಿ  ಮುನ್ನುಗ್ಗಿದರು...


ಹನಿಮೂನಿನ ಅವಾಂತರ : Kannada Thriller Story


Note : All Commercial Rights of this story are reserved by Roaring Creations Films. This is fully imaginary story and does't belongs to anyone in anyway. This story is written for commercial purpose only. So please don't take it too seriously. 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಹನಿಮೂನಿನ ಅವಾಂತರ : Kannada Thriller Story - Kannada Stories ಹನಿಮೂನಿನ ಅವಾಂತರ : Kannada Thriller Story - Kannada Stories Reviewed by Director Satishkumar on April 17, 2018 Rating: 4.5
Powered by Blogger.