ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ - Romantic Love Story in Kannada

Chanakya Niti in Kannada
ಕೀರ್ತಿಯ ಕೀತಾಪತಿ  ಒಂದು ರೊಮ್ಯಾಂಟಿಕ್ ಪ್ರೇಮಕಥೆ

                  ಕಿರಣ ತನ್ನ ಪಾಡಿಗೆ ತಾನು ತನ್ನ ಕೆಲಸ ನೋಡಿಕೊಂಡು ಆರಾಮಾಗಿದ್ದನು. ಆದರೆ ಕೀರ್ತಿ ಅವನೆಡೆಗೆ ಆಕರ್ಷಿತಳಾದಳು. ಆಕೆ ಅವನ ಬೆನ್ನು ಬಿದ್ದು ಅವನನ್ನು ಕಾಡಿಸಿ ಪೀಡಿಸಿ ಪ್ರೀತಿಸಲು ಒಪ್ಪಿಸಿದಳು. ನಂತರ ಅವನು ಸಹ ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಲು ಪ್ರಾರಂಭಿಸಿದನು. ಅವರಿಬ್ಬರ ಪ್ರೀತಿ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅವರಿಬ್ಬರೂ ಪರಸ್ಪರ ಕಿತ್ತಾಡಿಕೊಂಡು ದೂರಾದರು. ಅಷ್ಟರಲ್ಲಿ ಕಿರಣನ ಮೇಲೆ ಒಂದು ಸುಳ್ಳು ಅಪವಾದ ಬಂದು ಊರಲ್ಲಿ ಅವನ ಹೆಸರು ಕೆಟ್ಟಿತು. ಕಿರಣ ಕೀರ್ತಿಗೆ ತಾನು ಅಪರಾಧಿಯಲ್ಲ ಎಂದು ವಿವರಿಸಿ ಹೇಳಿದರೂ ಅವಳು ಅವನ ಮಾತನ್ನು ಒಪ್ಪಲಿಲ್ಲ. ಕೀರ್ತಿಗೆ ಕಿರಣನಿಂದಾಗಿ ಊರಲ್ಲಿ ಅಪಕೀರ್ತಿ ಬೇಡವಾಗಿತ್ತು. ಅದಕ್ಕಾಗಿ ಅವಳು ಅವನಿಂದ ಶಾಶ್ವತವಾಗಿ ದೂರಾಗುವ ನಿರ್ಣಯ ಕೈಗೊಂಡಳು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

           ಕಿರಣ ಕೀರ್ತಿಯ ಬರ್ಥಡೇಗೆ ಒಂದು ಗುಲಾಬಿ ಗಿಡವನ್ನು ಗಿಫ್ಟಾಗಿ ಕೊಟ್ಟಿದ್ದನು. ಆಕೆ ಅದನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪೋಷಿಸುತ್ತಿದ್ದಳು. ದಿನಾ ಅದಕ್ಕೆ ನೀರೆರೆಯುತ್ತಾ, ಅದನ್ನು ಸೋಕುತ್ತಾ ಮುದ್ದಾಡಿ ಆನಂದಿಸುತ್ತಿದ್ದಳು. ಇದ್ದಕ್ಕಿದ್ದಂತೆ ಒಂದಿನ ಜೋರಾಗಿ ಬಿರುಗಾಳಿ ಬೀಸಲು ಪ್ರಾರಂಭಿಸಿತು. ತಾನು ಬೆಳೆಸಿದ ಹೂವು ಬಿರುಗಾಳಿಗೆ ಬಾಡಬಾರದೆಂದು ಆಕೆ ಅದನ್ನು ರಕ್ಷಿಸಲು ಮುಂದಾದಳು. ಅವಳಿಗೆ ಏನೂ ಮಾಡಬೇಕು ಎಂಬುದು ಸರಿಯಾಗಿ ಗೊತ್ತಾಗಲಿಲ್ಲ. ಆಕೆ ಬಿರುಗಾಳಿಗೆ ಎದುರು ನಿಂತು ಆ ಹೂವನ್ನು ಕಾಪಾಡಬಹುದಿತ್ತು. ಇಲ್ಲ ಆ ಹೂವನ್ನು ತನ್ನೆದೆಯಲ್ಲಿ ಬಚ್ಚಿಟ್ಟುಕೊಂಡು ರಕ್ಷಿಸಬಹುದಿತ್ತು. ಅದರೆ ಆ ಪೆದ್ದಿ ಹಾಗೆ ಮಾಡಲಿಲ್ಲ. 

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

               ಕೀರ್ತಿ ಆಪಾದನೆಯಂತೆ ಬಂದ ಬಿರುಗಾಳಿಯೊಡನೆ ಹೋರಾಡಿ ಗೆಲ್ಲುವ ಬದಲು, ಆ ಹೂವನ್ನು ಒಂದು ಪಾಲಿಥಿನ (ಪ್ಲಾಸ್ಟಿಕ್) ಚೀಲದಲ್ಲಿ ಬಚ್ಚಿಟ್ಟು ಹೋದಳು. ಅವಳು ಹೋದ ನಂತರ ಆ ಹೂವು ಉಸಿರಾಡಲಾಗದೆ ಉಸಿರುಗಟ್ಟಿ ಸಾವನ್ನಪ್ಪಿತು. ಈ ಕಥೆಯ ದುರಂತ ನಾಯಕಿ ಕೀರ್ತಿ ಆ ಹೂವು ಸತ್ತಿದೇನೋ ಅಥವಾ ಬದುಕಿದೇನೋ ಎಂಬುದನ್ನು ನೋಡಲು ತಪ್ಪಿಯೂ ಆ ಕಡೆ ಸುಳಿದಾಡಲಿಲ್ಲ. ಇಲ್ಲಿರುವ ಹೃದಯಸ್ಪರ್ಶಿ ಸಂಗತಿಯೆಂದರೆ ಆ ಸತ್ತ ಅಮಾಯಕ ಹೂವು ಕಿರಣನ ಪ್ರೀತಿಯಾಗಿತ್ತು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

                    ಕೀರ್ತಿ ಕಡ್ಡಿ ಮುರಿದಂತೆ ಮಾತಾಡಿ ತಿರುಗಿ ನೋಡದೆ ಹೋಗಿದ್ದಳು. ಆದರೆ ಕಿರಣನಿಗೆ ಅವಳನ್ನು ಮರೆಯುವುದು ಅಸಾಧ್ಯವಾಗಿತ್ತು. ಆತ ಪ್ರೀತಿಯಿಂದ ಬೆಳೆಸಿದ್ದ ಗುಲಾಬಿ ಹೂಗಳು ಅರಳಿ ನಿಂತಾಗ ಹಾಳಾದ ಮಳೆ ಸುರಿಯಲು ಪ್ರಾರಂಭಿಸಿತು. ತನ್ನ ಪ್ರೀತಿಯ ಗುಲಾಬಿಗಳು ಮಳೆಯಲ್ಲಿ ನೆನೆದರೆ ಅವುಗಳಿಗೆ ಜ್ವರ ಬರಬಹುದೆಂದು ಕಿರಣ ತಾನು ಮಳೆಯಲ್ಲಿ ನೆನೆಯುತ್ತಾ ಆ ಗುಲಾಬಿಗಳಿಗೆ ಕೊಡೆ ಹಿಡಿದು ನಿಂತನು. ಕೀರ್ತಿ ತನ್ನೆದೆಯಲ್ಲಿರುವ ಪ್ರೀತಿಯನ್ನು ಸಾಯಿಸಿದ್ದಳು. ಆದರೆ ಕಿರಣನಿಗೆ ತನ್ನ ಪ್ರೀತಿಯನ್ನು ಸಾಯಿಸುವ ಮನಸ್ಸಿರಲಿಲ್ಲ. ಈ ಗುಲಾಬಿಗಳಂತೆ ಅವನು ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳಲು ಹಾತೊರೆಯುತ್ತಿದ್ದನು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

               ಗುಲಾಬಿ ಹೂಗಳು ನೆನೆಯಬಾರದಂತ ತಾನು ಕೊಡೆ ಹಿಡಿದು ಮಳೆಯಲ್ಲಿ ನೆನೆಯುತ್ತಾ ನಿಂತಿದ್ದ ಕಿರಣನನ್ನು ನೋಡಿ ಅವನಕ್ಕ ನಗಲು ಪ್ರಾರಂಭಿಸಿದಳು. ಅವನ ಮುಗ್ಧತೆಯನ್ನು ನೋಡಿ ಅವನಕ್ಕನಿಗೆ ಸುಮ್ಮನಿರಲು ಆಗದೆ ಆಕೆ ಅವನಿಗೆ ಬುದ್ಧಿವಾದ ಹೇಳಲು ಹೋದಳು. ಆದರೆ ಅವನ ಕಣ್ಣೀರನ್ನು ನೋಡಿ ಕಂಗಾಲಾದಳು. ಅವನಕ್ಕ ಬಹಳಷ್ಟು ಬಲವಂತ ಮಾಡಿ ಅವನ ಕಣ್ಣೀರಿಗೆ ಕಾರಣ ಕೇಳಿದಾಗ ಆತ ಕೀರ್ತಿಯ ಕಡೆಗೆ ಬೆರಳು ತೋರಿಸಿ ಮತ್ತೆ ಅಳತೊಡಗಿದನು. ಅವನಕ್ಕ ಅವನನ್ನು ಸಮಾಧಾನ ಮಾಡಿ ಅವನ ತಲೆಯೊರೆಸಿ ಅವನಿಗೆ ಕುಡಿಯಲು ಬಿಸಿಬಿಸಿಯಾದ ಕಾಫಿ ಮಾಡಿಕೊಟ್ಟಳು. ಆದರೂ ಆತ ಕೀರ್ತಿಯ ನೆನಪಲ್ಲಿ ಕೊರಗುತ್ತಿದ್ದನು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

            ಕೀರ್ತಿ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದಾಳೆಂಬ ಸುದ್ದಿ ಕಿರಣನ ಕಿವಿಗೆ ಬಿದ್ದಾಗ ಆತ ನಿಂತ ಜಾಗದಲ್ಲೇ ಕುಸಿದು ಬಿದ್ದನು. ತಂಗಾಳಿ ಅವನ ನೋವಿಗೆ ಸಾಂತ್ವನ ಹೇಳಲು ತುಡಿಯುತ್ತಿತ್ತು. ಗಿಡಮರಗಳ ಎಲೆಗಳು ಅವನ ಪ್ಯಾಥೋಸಾಂಗಿಗೆ ಸಂಗೀತ ಸಂಯೋಜಿಸುತ್ತಿದ್ದವು. ಬಿರುಗಾಳಿ ಅವನ ಕಣ್ಣೀರಿಗೆ ಬಾಗಿನ ಕೊಡಲು ಸಿದ್ಧವಾಗಿತ್ತು. ಚಂದಿರನ ತುಟಿಗಳು ಅವನ ವಿರಹ ವೇದನೆಯನ್ನು ನೋಡಿ ನಗುವಿನೊಂದಿಗೆ ನಲಿದಾಡುತ್ತಿದ್ದವು. ಇದನ್ನೆಲ್ಲ ನೋಡಿ ಅವನಕ್ಕನಿಗೆ ಸುಮ್ಮನೆ ಸಹಿಸಿಕೊಂಡಿರಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆಕೆ ಕೀರ್ತಿಯ ಮನವೊಲಿಸಲು ಅವಳ ಮನೆಗೆ ಹೋದಳು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

                  ಕಿರಣನ ಅಕ್ಕನ ಮಾತಿಗೆ ಕೀರ್ತಿ ಕವಡೆ ಕಾಸಿನ ಕಿಮ್ಮತ್ತನ್ನು ಸಹ ಕೊಡಲಿಲ್ಲ. ಎಲ್ಲ ಕಿರಣನದ್ದೇ ತಪ್ಪು ಎಂಬಂತೆ ಮಾತನಾಡಿ ಅವನೊಂದಿಗೆ ಜೀವನ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿಬಿಟ್ಟಳು. ಆದರೆ ಅವನಕ್ಕನಿಗೆ ಹುಡುಗಿಯರ ಮನಸ್ಥಿತಿಯ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಕೀರ್ತಿ ಕಿರಣನನ್ನು ಒಪ್ಪಿದರೆ ಅವಳ ಮನೆಯವರೊಂದಿಗೆ ಮಾತನಾಡಿ ಅವರಿಬ್ಬರ ಮದುವೆ ಮಾಡಿಸಲು ಅವನಕ್ಕ ಶಕ್ತಳಾಗಿದ್ದಳು. ಆದರೆ ಕೀರ್ತಿ ಕಿರಣನನ್ನು ಒಪ್ಪಲು ತಯಾರಿರಲಿಲ್ಲ. ಕೀರ್ತಿಯ ಕೊಬ್ಬು ಅವನಕ್ಕನ ಕೋಪಕ್ಕೆ ಕಾರಣವಾಯಿತು. ಅದಕ್ಕೆ ಅವಳು ಕೋಪದಲ್ಲಿ ಕೀರ್ತಿಗೆ "ನನ್ನ ತಮ್ಮನಂಥ ಹೃದಯವಂತನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗಲು ನಿನಗೆ ಮನಸ್ಸೇಗೆ ಬಂತು? ನಿನ್ನ ಮನಸ್ಸು ಕಿರಣನ ಬಳಿಯಿದೆ. ಹೀಗಿರುವಾಗ ನಿನ್ನ ಗಂಡನಿಗೆ ಬರೀ ಮೈಯನ್ನು ನೀಡಿ ಎರಡು ದೋಣಿಗಳ ಮೇಲೆ ಕಾಲಿಟ್ಟು ನೀ ಜೀವನದ ದಡ ಸೇರುವೆಯಾ? ಅಥವಾ ದೋಣಿ ಮಗುಚಿ ಬಿದ್ದರೂ ಈಜಿ ದಡ ಸೇರುವೆನು ಎಂಬ ಮೊಂಡು ಧೈರ್ಯವೇ ನಿನಗೆ? ಪ್ರಶಾಂತ ಪ್ರೀತಿ ಸರೋವರದಲ್ಲಿ ಈಜಲು ಅಸಮರ್ಥಳಾದ ನೀನು, ಸಂಸಾರ ಸಾಗರದಲ್ಲಿ ಈಜಿ ದಡ ಸೇರುವೆಯಾ?" ಎಂದೆಲ್ಲ ಕೇಳಿದಳು. ಆದರೆ ಕೀರ್ತಿ ಯಾವುದಕ್ಕೂ ಉತ್ತರಿಸದೆ ಅವನಕ್ಕನನ್ನು ಅವಮಾನ ಮಾಡಿ ಕಳುಹಿಸಿದಳು. 

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

             ತನಗಿನ್ನೂ ಕೀರ್ತಿ ಸಿಗಲ್ಲವೆಂದು ತಿಳಿದು ಕಿರಣ ಸಾಯಲು ಊರಾಚೆ ಇರುವ ದೊಡ್ಡ ಕೆರೆಗೆ ಹೋದನು. ಆದರೆ ಅಷ್ಟರಲ್ಲಿ ಕೀರ್ತಿ ತನ್ನ ಮನೆಯವರೊಂದಿಗೆ ಅಲ್ಲಿರುವ ದೇವಸ್ಥಾನಕ್ಕೆ ಬಂದಳು. ಅವಳೊಂದಿಗೆ ಕೊನೆಯ ಸಲ ಮಾತಾಡಬೇಕೆಂಬ ಆಸೆಯಿಂದ ಆತ ದೇವಸ್ಥಾನಕ್ಕೆ ಬಂದನು. ಆದರೆ ಕೀರ್ತಿ ಅವನನ್ನು ನೋಡಿದರೂ ನೋಡದವರಂತೆ ಕಡೆಗಣಿಸಿದಳು. ಅವನೆದೆಗೆ ಯಾರೋ ಸೂಜಿಯಿಂದ ಚುಚ್ಚಿದಂಗಾಗುತ್ತಿತ್ತು. ಕೀರ್ತಿ ದೇವರ ಮುಂದೆ ನಿಂತು, ಕಿರಣನಿಗೆ ಕೇಳಿಸುವಂತೆ  "ನಾನೀಗ ತುಂಬಾ ಖುಷಿಯಾಗಿರುವೆ. ಪ್ರಯೋಜನಕ್ಕೆ ಬಾರದ ಪ್ರೀತಿ ಪ್ರೇಮಕ್ಕೆಲ್ಲ ನಾನು ಎಳ್ಳುನೀರು ಬಿಟ್ಟು ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗುತ್ತಿರುವೆ. ನಾನು ನಿನ್ನನ್ನು ಒಂದಿನಾನು ಪೂಜಿಸಲಿಲ್ಲ. ಆದ್ರೂ ನೀ ನನಗೆ ಆರ್ಶೀವದಿಸಿರುವೆ. ನಿನ್ನ ಕೃಪೆ ನನ್ನ ಮೇಲೆ ಹೀಗೆ ಇರಲಿ ದೇವರೆ..." ಎಂದು ಜೋರಾಗಿ ಹೇಳಿ ನಗುತ್ತಾ ಕಾರ ಹತ್ತಿ ಮನೆಗೆ ಹೋದಳು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

             ಕೀರ್ತಿ ಹೋದ ನಂತರ ಕಿರಣ ಅಳುತ್ತಾ ದೇವರ ಮುಂದೆ ನಿಂತು, "ನಾನು ಅವಳನ್ನು ಪ್ರತಿಕ್ಷಣ ಪ್ರೀತಿಸಿದಂತೆ, ನಿನ್ನನ್ನು ಪ್ರತಿಕ್ಷಣ ಪೂಜಿಸಿದೆ. ಆದರೆ ನೀನೂ ಅವಳಂತೆ ನನಗೆ ವಂಚಿಸಿದೆ. ನಿನ್ನನ್ನು ಪೂಜಿಸದ ಅವಳಿಗೆ ಎಲ್ಲವನ್ನೂ ಕೊಟ್ಟೆ. ಆದ್ರೆ ನಿನ್ನನ್ನು ಪೂಜಿಸಿದ ನನಗೆ ನೀನೇನು ಕೊಡಲಿಲ್ಲ. ನೀನು ಮಾಡಿದ್ದು ಸರಿಯಿಲ್ಲ. ಹುಡುಗಿಯರಿಗೊಂದು ನ್ಯಾಯ, ನಮಗೊಂದು ನ್ಯಾಯಾನಾ?" ಎಂದೆಲ್ಲ ಮಾತಾಡಿ ಕಿರಣ ಸಾಯಲು ಕೆರೆಯ ಕಡೆಗೆ ಹೊರಟನು. ಅಷ್ಟರಲ್ಲಿ ಅವನ ಗೆಳೆಯ ಅವನ ಹೆಸರಿಡಿದು ಕೂಗುತ್ತಾ ಅವನನ್ನು ಹಿಂಬಾಲಿಸಿದನು. ಅವನ ಗೆಳೆಯ ಎಷ್ಟೇ ಸಮಾಧಾನ ಮಾಡಿದರೂ ಆತನ ಮನಸ್ಸು ಹಗುರಾಗಲಿಲ್ಲ. ಆತ ಪದೇಪದೇ ಸಾಯುವ ಮಾತನ್ನಾಡುತ್ತಿದ್ದನು. ಅವನ ಗೆಳೆಯ ಹರಸಾಹಸ ಮಾಡಿ ಅವನನ್ನು ಮನೆಗೆ ಕರೆದುಕೊಂಡು ಬಂದನು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

              ಕಿರಣನಿಗೆ ಕೀರ್ತಿಯನ್ನು ಮರೆತು ಬದುಕಲು ಇಷ್ಟವಿರಲಿಲ್ಲ. ಅವಳ ನೆನಪಲ್ಲೇ ಅವನು ಕೊರಗುತ್ತಿದ್ದನು. ಆತ ತನ್ನ ತಂದೆತಾಯಿಗಳನ್ನು ಫೋಟೋದಲ್ಲಿ ಮಾತ್ರ ನೋಡಿದ್ದನು. ಅವನ ಪಾಲಿಗೆ ಅವನ ಅಕ್ಕ ಎಲ್ಲವೂ ಆಗಿದ್ದಳು. ಟೀಚರ್ ಕೆಲಸ ಮಾಡಿಕೊಂಡು ಅವನನ್ನು ಓದಿಸುತ್ತಿದ್ದಳು. ಆದರೆ ಓದು ಅವನ ತಲೆಗತ್ತಲಿಲ್ಲ. ಅದಕ್ಕಾಗಿ ಆತ ಓದನ್ನು ಬಿಟ್ಟು ತನ್ನದೇ ಆದ ಒಂದು ಪುಟ್ಟ ಟ್ರಾವೇಲ್ಸ ಇಟ್ಟುಕೊಂಡಿದ್ದನು. ತನಗಾಗಿ ತನ್ನ ಖುಷಿಯನ್ನೆಲ್ಲ ತ್ಯಾಗ ಮಾಡಿದ ಅಕ್ಕನಿಗಾಗಿ ಬದುಕಲು ಕಿರಣ ನಿರ್ಧರಿಸಿದನು. ಕರೆಯದೇನೆ ತನ್ನ ಬಾಳಲ್ಲಿ ತಂಗಾಳಿಯಂತೆ ಬಂದು ಬಿರುಗಾಳಿಯಂತೆ ಹೋದ ಕೀರ್ತಿಯನ್ನು ತನ್ನೆದೆಯಿಂದ ಕಿತ್ತು ಬಿಸಾಕಿ ತನ್ನ ಕೆಲಸದಲ್ಲಿ ಗಮನ ಹರಿಸಿದನು. 

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

          ಕೀರ್ತಿಯ ಮದುವೆ ದಿನ ಸಮೀಪಿಸುತ್ತಿದ್ದಂತೆ ಕಿರಣನ ಎದೆ ಜೋರಾಗಿ ಬಡಿದುಕೊಳ್ಳಲು ಶುರು ಮಾಡಿತು. ಕೀರ್ತಿ ಧಾರೆ ಸೀರೆಯುಟ್ಟು ಬೇರೆಯವನ ತಾಳಿಗೆ ಕೊರಳಚಾಚಿ ಬೇರೆ ಊರಿಗೆ ಹೋಗುತ್ತಾಳೆಂದು ಕಿರಣ ಮತ್ತೆ ಕೊರಗಲು ಶುರು ಮಾಡಿದನು. ಆತ ಬೇಡವೆಂದರೂ ಅವಳ ಮದುವೆಯ ದಿನ ಬಂದೇ ಬಿಟ್ಟಿತು. ಕೀರ್ತಿ ತನ್ನ ಮದುವೆಯೆಂದು ಕುಣಿದು ಕುಪ್ಪಳಿಸುತ್ತಿದ್ದಳು. ಆದರೆ ಕಿರಣನ ಅದೃಷ್ಟವೆಂಬಂತೆ ಕೀರ್ತಿಯನ್ನು ಮದುವೆಯಾಗಲು ಬರುತ್ತಿದ್ದ ಗಂಡು ಆಕ್ಸಿಡೆಂಟಾಗಿ ದಾರಿಮಧ್ಯೆದಲ್ಲೇ ಮೃತಪಟ್ಟನು. ವಿಧಿಯಿಲ್ಲದೆ ಅವಳ ಮದುವೆ ನಿಂತಿತು. ಅವಳು ಕಣ್ಣೀರಾಕುತ್ತಾ ಕುಂತರೆ ಅವನು ಖುಷಿಪಡುತ್ತಾ ಗಾಳಿಯಲ್ಲಿ ತೇಲಾಡಿದನು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

               ಕಿರಣನ ಮೇಲೆ ಬಂದಿದ್ದ ಅಪವಾದಗಳೆಲ್ಲ ಮಂಜಿನಂತೆ ಕರಗಿ ದೂರಾದವು. ಅವನಿಗೆ ಊರಲ್ಲಿ ಮತ್ತೆ ಒಳ್ಳೇ ಹೆಸರು ಬಂದಿತು. ಆದರೆ ಈಗ ಕೀರ್ತಿಗೆ ಕೆಟ್ಟ ಹೆಸರು ಬಂತು. ಮದುವೆ ದಿನವೇ ಅವಳ ಭಾವಿಗಂಡ ಆ್ಯಕ್ಸಿಡೆಂಟನಲ್ಲಿ ಸತ್ತಿದ್ದರಿಂದ ಅವಳ ಕಾಲ್ಗುಣ ಸರಿಯಿಲ್ಲವೆಂದು ಊರ ಜನ ಗಾಳಿಸುದ್ದಿ ಹಬ್ಬಿಸಿದರು. ಅವಳನ್ನು ಮದುವೆಯಾಗಲು ಬರುವ ಗಂಡುಗಳೆಲ್ಲ ಅವಳ ಕಾಲ್ಗುಣ ಸರಿಯಿಲ್ಲವೆಂದು ನಿರಾಕರಿಸಿ ಹೋಗುತ್ತಿದ್ದರು. ಅವಳನ್ನು ಮದುವೆಯಾಗಲು ಯಾರು ಮುಂದಾಗಲಿಲ್ಲ. ಕಿರಣನಿಗೆ ಇನ್ನೂ ಅವಳನ್ನು ಮದುವೆಯಾಗಬೇಕು ಎಂಬ ಹಂಬಲವಿತ್ತು. ಆದರೆ ಬಾಯಿಬಿಟ್ಟು ಅವಳನ್ನು ಕೇಳುವ ಧೈರ್ಯವಿರಲಿಲ್ಲ. ಅದಕ್ಕಾಗಿ ಅವನಕ್ಕ ಕೀರ್ತಿಯ ಮನೆಯವರೊಂದಿಗೆ ಮಾತಾಡಿ ಅವರಿಬ್ಬರ ಮದುವೆ ಮಾಡಿಸಲು ಮುಂದಾದಳು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

            ಕಿರಣ ಮತ್ತು ಕೀರ್ತಿಯ ಮದುವೆಗೆ ಅವಳ ಮನೆಯವರು ಸಮ್ಮತಿ ಸೂಚಿಸಿದರು. ಆದರೆ ಕೀರ್ತಿಯ ಮನದಲ್ಲಿನ್ನೂ ತಳಮಳವಿತ್ತು. ತಾನೇ ಒದ್ದ ಹುಡುಗನೊಂದಿಗೆ ಹೇಗೆ ಮತ್ತೆ ಒಂದಾಗುವುದು ಎಂಬ ಮುಜುಗುರವಿತ್ತು. ಅದಕ್ಕಾಗಿ ಅವಳು ಮೌನಿಯಾಗಿದ್ದಳು. ಅವಳ ಮೌನ ಮಾತಾಗಲಿಲ್ಲವಾದರೂ ಒಂದೇ ಚಪ್ಪರದಲ್ಲಿ ಕಿರಣ ಕೀರ್ತಿಯ ಮದುವೆಯ ಜೊತೆಗೆ ಅವನ ಅಕ್ಕನ ಮದುವೆಯೂ ಅದೇ ಊರಿನ ಒಬ್ಬ ಶಿಕ್ಷಕನೊಂದಿಗೆ ಅದ್ದೂರಿಯಾಗಿ ನಡೆಯಿತು. ಎಲ್ಲರು  ಖುಷಿಯಲ್ಲಿ ತೇಲಾಡುತ್ತಿದ್ದರೂ, ಕೀರ್ತಿ ಮಾತ್ರ ಮೌನಿಯಾಗಿದ್ದಳು. ಮದುವೆಯಾಗುವಾಗಲು ಅವಳು ಕಿರಣನೊಂದಿಗೆ ಮಾತಾಡಲಿಲ್ಲ. ಒಮ್ಮೆಯೂ ನಾಚಿಕೊಂಡು ನಗಲಿಲ್ಲ. ಕಿರಣ ಮತ್ತು ಕೀರ್ತಿಯನ್ನು ಒಂಟಿಯಾಗಿ ಬಿಟ್ಟು ಅವನಕ್ಕ ತನ್ನ ಗಂಡನ ಜೊತೆ ಹನಿಮೂನಿಗೆ ಹೋದಳು. 

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

           ಕೀರ್ತಿ ಮದುವೆಯಾದ ನಂತರ ಹಳೆಯದ್ದನ್ನೆಲ್ಲ ಸಂಪೂರ್ಣವಾಗಿ ಮರೆತ್ತಿದ್ದಳು. ಆದರೆ ಕಿರಣನ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಮದುವೆಗೂ ಮುಂಚೆ ಕೀರ್ತಿ ಮಾಡಿದ ಪ್ರೀತಿ ಕೀತಾಪತಿ ಕೋಪವಾಗಿ ಹೆಪ್ಪುಗಟ್ಟಿತ್ತು. ಅವರಿಬ್ಬರ ಮೊದಲ ಮಿಲನದ ದಿನ ಅವಳಿಗೆ ಅವನೊಂದಿಗೆ ಮುಖಕೊಟ್ಟು ಮಾತಾಡುವ ಧೈರ್ಯವಿರಲಿಲ್ಲ. ಇನ್ನೂ ಅವಳಿಗೆ ಮುಜುಗುರವಿತ್ತು. ಅವಳು ಅವನೊಂದಿಗೆ ಏನನ್ನೂ ಮಾತಾಡದೆ ಮಂಚದ ಮೇಲೆ ಶವದಂತೆ  ಮಲಗಿದಳು. ಆದರೆ ಆತ ಅವಳನ್ನು ಅಪ್ಪಿಕೊಂಡು ಅವಳ ಅಂಗಾಂಗಗಳ ಮೇಲೆ ತನ್ನ ಕೈಬೆರಳುಗಳನ್ನು ಮೆಲ್ಲನೆ ಆಡಿಸುತ್ತಾ, " ಏನೇ ಅಂದರೂ ನಿನಗೆ ತುಂಬಾ ಕೊಬ್ಬು ಕಣೇ. ನಾಳೆ ಮಾಸಿ ಹೋಗುವ ನಿನ್ನ ಈ ಸೌಂದರ್ಯದ ಸೊಕ್ಕಲ್ಲಿ ಆ ಸಿಟಿ ಹುಡುಗನನ್ನು ಮದುವೆಯಾಗಲು ಮುಂದಾಗಿದ್ದೆಯಲ್ಲ? ನಿನಗೆ ನಿನ್ನ ಸೌಂದರ್ಯದ ಮೇಲೆ ಅಷ್ಟೊಂದು ಅಹಂಕಾರವೇ?" ಎಂದೇನುತಾ ಅವಳ ಸೊಂಟ ಸವರಿ ಅವಳನ್ನು ಉದ್ರೇಕಿಸಿದನು. ಹಾಗೆಯೇ ಮುಂದುವರೆಯುತ್ತಾ "ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ನನ್ನನ್ನು ಮರೆಯಲು ನಿನಗೆ ಮನಸ್ಸಾದರೂ ಹೇಗೆ ಬಂತೆ?" ಎಂದೇನುತ್ತಾ ಅವಳ ನಾಭಿಯನ್ನು ಚುಂಚಿಸಿದನು.

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

                      ಅವನ ಮಾತಿನಲ್ಲಿ ಒರಟುತನವಿತ್ತು. ಆದರೆ ಅವನ ಸ್ಪರ್ಶದಲ್ಲಿ ಪ್ರೀತಿ ತುಂಬಿ ತುಳುಕುತ್ತಿತ್ತು. ಅವನು ತೆಗಳುತ್ತಾ ಅವಳನ್ನು ಮುದ್ದಿಸುತ್ತಿದ್ದನು. ಅವನ ಕೋಮಲವಾದ ಸ್ಪರ್ಶ ಅವಳನ್ನು ಮುದ್ದಿಸಿದರೆ, ಅವನ ಒರಟು ಮಾತು ಅವಳೆದೆಯನ್ನು ಚುಚ್ಚುತ್ತಿತ್ತು. ಅದಕ್ಕಾಗಿ ಆಕೆ ಗೊಂದಲಕ್ಕೆ ಸಿಲುಕಿದಳು. ಅವನು ತನ್ನನ್ನು ಪ್ರೀತಿಸುತ್ತಿದ್ದಾನೋ ಇಲ್ಲ ದ್ವೇಷಿಸುತ್ತಿದ್ದಾನೋ ಎಂಬುದು ಅವಳಿಗೆ ತಿಳಿಯದಾಯಿತು. ಆದರೂ ಆಕೆ ಮೌನಕ್ಕೆ ಶರಣಾದಳು. ಆದರೆ ಆತ ತನ್ನ ಪ್ರೇಮಯುದ್ಧವನ್ನು ಮುಂದುವರೆಸಿದನು. ಅವಳೆದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. "ಯಾವುದೋ ಅಪವಾದ ಬಂತೆಂದು ನನ್ನ ಬಿಟ್ಟೋದ ನಿನ್ನನ್ನು ನಾ ಹೇಗೆ ನಂಬಲಿ? ಮುಂದೆ ನನ್ನ ಮೇಲೆ ಮತ್ತೆ ಅಪವಾದಗಳು ಬಂದಾಗ ನೀ ನನ್ನ ಬಿಟ್ಟೊಗಲ್ಲ ಅನ್ನೋಕೆ ಏನ ಗ್ಯಾರಂಟಿ?" ಎಂದು ಕೇಳುತ್ತಾ ಜೋರಾಗಿ ಅವಳ ಕೆನ್ನೆಯನ್ನು ಕಚ್ಚಿದನು. ಅವನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲದೆ ಆಕೆ ಹೆದರಿ ಮೌನಕ್ಕೆ ಶರಣಾದಳು. ಆದರೆ ಅವನಿಗೆ ಅವಳ ಬಾಯಿ ಬಿಡಿಸಬೇಕಿತ್ತು. "ಸೌಂದರ್ಯದ ಶವದೊಂದಿಗೆ ಸರಸವಾಡಲು ನಾನು ಷಂಡನಲ್ಲ. ನೀನೀಗ ಮಾತಾಡದಿದ್ದರೆ ನಾನಿನ್ನ ಮೈಮುಟ್ಟುವುದಿಲ್ಲ" ಎಂದೇಳಿ ಆತ ಅವಳ ತುಟಿಗಳನ್ನು ಚುಂಬಿಸಿದನು. 

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

            ಅವಳ ಸಹನೆಯ ಕಟ್ಟೆ ಒಡೆಯಿತು. ಅವಳು ಅವನನ್ನು ಬಲವಾಗಿ ಅಪ್ಪಿಕೊಂಡು "ಯಾಕೋ ಬೇಡದ ಪ್ರಶ್ನೆಗಳನ್ನು ಕೇಳಿ ಪ್ರಾಣ ತಿಂತಿದೀಯಾ? ನನಗೂ ನಿನ್ನ ಬಿಟ್ಟಿರಲು ಇಷ್ಟವಿರಲಿಲ್ಲ ಕಣೋ. ಮನೆಯವರ ಬ್ಲ್ಯಾಕ್ಮೇಲಿಗೆ ಹೆದರಿ ನಾ ಬೇರೆ ಮದುವೆಗೆ ಒಪ್ಪಿಕೊಂಡಿದ್ದೆ ಅಷ್ಟೇ. ನೀನಿಲ್ಲದೆ ಇಷ್ಟು ದಿನ ನಾನು ತುಂಬಾ ನೊಂದಿರುವೆ. ಪ್ಲೀಸ್ ನನ್ನ ಮತ್ತೆ ನೋಯಿಸಬೇಡ್ವೋ..." ಎಂದು ಬೇಡಿಕೊಂಡಳು. ಅವನನ್ನು ಚುಂಬಿಸಿ, "ನಾನಿನ್ನ ಯಾವತ್ತೂ, ಯಾವುದೇ ಕಾರಣಕ್ಕೂ ಬಿಟ್ಟೊಗಲ್ಲ ಕಣೋ. ನಿನಗೆ ನಂಬಿಕೆ ಬರಬೇಕಾದರೆ ನಾನೇನು ಮಾಡಬೇಕು ಅಂತಾ ಹೇಳೋ..." ಎಂದು ಅವನೆದೆ ಮೇಲೆ ಮುದ್ದಾಗಿ ಹೊಡೆದಳು. ಅದಕ್ಕಾತ "ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇರುವುದರಿಂದಲೇ ನಿನ್ನ ಮದುವೆಯಾಗಿರುವೆ. ನೀನು ನನ್ನೊಂದಿಗೆ ಸರಿಯಾಗಿ ಮಾತಾಡಿ ಸರಿಸುಮಾರು ಎರಡುವರೆ ವರ್ಷವಾಯಿತು. ಮದುವೆಯಾಗುವಾಗಲೂ, ಮದುವೆಯಾದ ಮೇಲೂ ನೀ ನನ್ನೊಂದಿಗೆ ಮುಖಕೊಟ್ಟು ಮಾತಾಡಲಿಲ್ಲ. ಅದಕ್ಕೆ ಈ ರೀತಿ ನಿನ್ನ ಬಾಯಿಬಿಡಿಸಿದೆ ಸ್ವಾರಿ..." ಎಂದನು. ಅದಕ್ಕಾಕೆ ಕೋಪಿಸಿಕೊಂಡು "ನಿಮ್ಮಜ್ಜಿ ನೀನು ನಿಜವಾಗಲೂ ದ್ವೇಷಿಸುತ್ತಿರುವೆ ಎಂದು ನಾನೆಷ್ಟು ಹೆದರಿದ್ದೆ ಗೊತ್ತಾ?" ಎಂದಳು. ಹೀಗೇ ಬಿಟ್ಟರೆ ಅವಳು ಬೆಳಗಾಗುವ ತನಕ ಮಾತಾಡುತ್ತಾಳೆಂದು ಆತ ಅವಳ ತುಟಿಗಳಿಗೆ ತನ್ನ ತುಟಿಗಳನ್ನು ಸೇರಿಸಿದನು. ಅವರಿಬ್ಬರ ಸೌಂದರ್ಯ ಸಮರ ಸುರ್ಯೋದಯದ ಕಡೆಗೆ ಸಾಗಿತು....

ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ

Note : All Commercial Rights of this story are reserved by Roaring Creations Films. This is fully imaginary story and does't belongs to anyone in anyway. This story is written for commercial purpose only. So please don't take it too seriously. 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 


ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ - Romantic Love Story in Kannada ಕೀರ್ತಿಯ ಕೀತಾಪತಿ : ಒಂದು ರೊಮ್ಯಾಂಟಿಕ್ ಪ್ರೇಮಕಥೆ - Romantic Love Story in Kannada Reviewed by Director Satishkumar on April 08, 2018 Rating: 4.5
Powered by Blogger.