ಮಾಯೆಯ 21 ಮುಖಗಳು : 21 Beautiful faces of Maya in Kannada - Romantic Kavanagalu Poem on Maya Woman in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮಾಯೆಯ 21 ಮುಖಗಳು : 21 Beautiful faces of Maya in Kannada - Romantic Kavanagalu Poem on Maya Woman in Kannada

ಮಾಯೆಯ 21 ಮುಖಗಳು : Romantic Kavanagalu Poem on Maya Woman in Kannada

೧) ಅವಳು ನಿಂತ್ರೆ ಶಿಲಾಬಾಲಿಕೆ, ಕುಂತ್ರೆ ಮಹಾರಾಣಿ, ನಕ್ರೆ ನನ್ನೆದೆಗೆ ರಾಣಿ, ನಡೆದ್ರೆ ಅಪ್ಸರೆ, ಬಳುಕಿದ್ರೆ ಮೇನಕೆ, ಕುಣಿದ್ರೆ ಮೋಹಿನಿ. ಎಲ್ಲ ವಿಶ್ವಸುಂದರಿಯರನ್ನು, ತ್ರಿಲೋಕ ಸುಂದರಿಯರನ್ನು ಒಟ್ಟಿಗೆ ನೋಡಬೇಕಂದ್ರೆ ಅವಳನ್ನು ನೋಡಿದ್ರೆ ಸಾಕು. ಆದ್ರೆ ಅವಳು ಯಾರ ಕಣ್ಣಿಗೂ ಅಷ್ಟೊಂದು ಸುಲಭವಾಗಿ ಕಾಣಿಸಲ್ಲ...

Romantic Kavanagalu Poem on Woman Girl She in Kannada

೨) ಅವಳು ಮಾತಾಡಲ್ಲ. ಬರೀ ಅವಳ ಮಂದಹಾಸ ಮಾತಾಡುತ್ತೆ. ಅವಳ ಮುಂದೆ ಮಾತು ಬಂದರೂ ಮಾತಾಡಬಾರದು. ಏಕೆಂದರೆ ಅವಳು ಹೃದಯದಿಂದ ಮಾತಾಡುತ್ತಾಳೆ. ಹೃದಯದ ಮಾತುಗಳಿಗೆ ಭಾಷೆ ಬೇಕಿಲ್ಲ...

Romantic Kavanagalu Poem on Woman Girl She in Kannada

೩) ಪ್ರವೇಶವಿಲ್ಲದ ಜಾಗಕ್ಕೆ ಪ್ರವೇಶಿಸಲು ಅವಳು ಮೊದಲು ಪರವಾಣಗಿ ಕೇಳ್ತಾಳೆ. ಕೊಡಲ್ಲ ಅಂದ್ರೆ ಅತಿಕ್ರಮಣ ಪ್ರವೇಶ ಮಾಡ್ತಾಳೆ. ಅವಳು ಹೇಳದೆ ಕೇಳದೆ ಎಲ್ಲರ ಎದೆಗೆ ನುಗ್ಗುತ್ತಾಳೆ. ಸುನಾಮಿ ಸಹ ಬರೋವಾಗ ಸಿಗ್ನಲ್ ಕೊಟ್ಕೊಂಡ ಬರುತ್ತೆ. ಆದ್ರೆ ಅವಳು ಹೇಳದೆ ಕೇಳದೆ ಹಾರ್ಟಿಗೆ ಎಂಟ್ರಿ ಕೊಡ್ತಾಳೆ...

Romantic Kavanagalu Poem on Woman Girl She in Kannada

೪) ಅವಳ್ನ ನೋಡಿದ್ರೆ ಹಾಡ ಹಾಡಿದಷ್ಟೇ ಸಂತೋಷವಾಗುತ್ತೆ. ಅವಳ ಜೊತೆ ಮಾತಾಡಿದ್ರೆ ಇಡೀ ಜಗತ್ತನ್ನೇ ಗೆದ್ದಷ್ಟು ಜಂಭ ಬರುತ್ತೆ. ಆ ಸುಂದರಿನಾ ನೋಡಿದಾಗ ಸಂನ್ಯಾಸಿಗೆ ಸಂಸಾರಿ ಆಗೋ ಹುಚ್ಚಿಡಿಯುತ್ತೆ...

Romantic Kavanagalu on Woman Beauty

೫) ಕಂಪೌಂಡ ಮೈಕ್ರೋಸ್ಕೋಪಲ್ಲಿ ನೋಡಿದ್ರು ಪ್ರೀತಿ ಕಾಣಲ್ಲ. ಆದ್ರೆ ಕಣ್ಣಿಲ್ಲದಿದ್ದರೂ ಅವಳು ಕಾಣಿಸ್ತಾಳೆ. ಚಂದ್ರನ ಮೇಲೆ ನಿಂತ್ರು ಅವಳೇ ಕಾಣಿಸ್ತಾಳೆ. ಅವಳೊಂಥರಾ ಮುಟ್ಟಿದರೆ ಮುನಿಯುವ ಸಸಿಯಿದ್ದಂತೆ. ಅವಳ ಅಪ್ಪುಗೆ ಕೊರೆಯುವ ಚಳಿಯಿಂದ ರಕ್ಷಣೆ ನೀಡುತ್ತೆ. ಅವಳು ಎಲ್ಲರ ನಿದ್ದೆ ಕದ್ದು ಆರಾಮಾಗಿ ನಿದ್ದೆ ಮಾಡ್ತಾಳೆ...

Romantic Kavanagalu Poem on Woman Girl She in Kannada

೬) ಓಡಾಡುವ ಒಂಟಿ ನೆರಳಿನಂತೆ ಅವಳ ನೆನಪು ಓಲಾಡುತ್ತೆ. ಅವಳ ನೆನಪುಗಳನ್ನು ಸುಡೋದು ಸಿಗರೇಟನ್ನು ಸುಟ್ಟಷ್ಟು ಸುಲಭವಲ್ಲ. ಪದೇಪದೇ ಅವಳನ್ನು ನೆನೆಸಿಕೊಂಡು ಅಳೋಕೆ ಯಾರ ಕಣ್ಣಲ್ಲೂ ಕಣ್ಣೀರು ಹೆಚ್ಚಾಗಿಲ್ಲ. ಆದರೂ ಎಲ್ಲರೂ ಅವಳಿಗಾಗಿ ಅಳುತ್ತಾರೆ. ಮಳೆ ಬಂದಾಗಲೆಲ್ಲ ಅವಳು ತಪ್ಪದೆ ನೆನಪಾಗ್ತಾಳೆ. ಅವಳು ಸತ್ತೋದ್ರು ಅವಳ ನೆನಪುಗಳು ಸಾಯಲ್ಲ. ಅವಳನ್ನು ಬೀಳ್ಕೊಡಲು ಕಣ್ಣೀರ ಹನಿಗಳು ಹಿಂದೇಟು ಹಾಕ್ತವೆ. ಬ್ರಹ್ಮ ಬೆಸೆದ ಪ್ರೀತಿ ನಂಟಿಗೆ ಅವಳ ನೆನಪಿನ ನೋವು ಕಗ್ಗಂಟಾಗುತ್ತೆ...

Romantic Kavanagalu Poem on Woman Girl She in Kannada

೭) ಅವಳು ಯಾರಿಗೆ ಕೈಕೊಟ್ಟು, ಯಾರ ಕೈಹಿಡಿದು ಹೋಗ್ತಾಳೆ ಎಂಬುದು ಅವಳ ಹಣೆಬರಹ ಬರೆದ ಬ್ರಹ್ಮನಿಗೂ ಹೇಳೋಕ್ಕಾಗಲ್ಲ. ಅವಳು ಎದೆಯೊಳಗೆ ಸೇರಿಕೊಂಡು ಎದೆಯೊಡೆದು ಹೋಗುತ್ತಾಳೆ. ನಗುನಗುತ್ತಾ ಎದುರಾಗಿ ನೋವನ್ನು ಎರಚಿ ಮರೆಯಾಗುತ್ತಾಳೆ. ಆ ಪ್ರೇಮದೇವತೆ ಮೌನ ತಾಳಿದಾಗ ಮನ್ಸು ಬೇಜಾರಲ್ಲಿ ಬಳಲುತ್ತೆ. ಹೆಣ್ಣು ಬಾಳಿನ ಕಣ್ಣು ಅಂತಾರೆ. ಆದರೆ ಅವಳು ಕೆರಳಿದರೆ ಹೆಣ್ಣಾದ ಅವಳೇ ಮಣ್ಣು ಕೊಡ್ತಾಳೆ...

Romantic Kavanagalu Poem on Woman Girl She in Kannada

೮) ಅವಳ ಮೌನ ಮಾತಾದರೆ, ಹುಚ್ಚು ಮನ ಗಾಳಿಯಲ್ಲಿ ತೇಲಾಡುತ್ತೆ. ಅವಳನ್ನು ಪ್ರೀತಿಸಿದ ಹೃದಯ ಮಣ್ಣಲ್ಲಿ ಮಣ್ಣಾದರೂ ಅವಳಿಗಾಗಿ ಮಿಡಿಯುತ್ತೆ. ಅವಳು ಮಾಯದ ಲೋಕದಿಂದ ಬಂದು ಎದೆಯಲ್ಲಿ ಮಾಯದ ಗಾಯ ಮಾಡಿ ತಿರುಗಿ ನೋಡದೆ ಹೋಗುತ್ತಾಳೆ. ಅವಳ ನಡೆನುಡಿಗಳನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಅವಳೊಂಥರಾ ನೀರಲ್ಲಿ ಚಲಿಸುವ ಹಾವಿದ್ದಂತೆ...

Romantic Kavanagalu Poem on Woman Girl She in Kannada

೯) ಅವಳು ಹೆಂಗೆಂಗೋ ಆಡ್ತಾಳೆ, ಸುಮಸುಮ್ನೆ ನಗ್ತಾಳೆ, ಕನಸಲಿ ಬರ್ತಾಳೆ, ಬೇಜಾನ ಕಾಟ ಕೊಡ್ತಾಳೆ... ಅವಳು ಎದುರಿಗೆ ಬಂದರೆ ಎದೆಬಡಿತ ತಾನಾಗಿಯೇ ಅಧಿಕವಾಗುತ್ತೆ. ಅವಳ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡೋಕೆ ಡಬ್ಬಲ್ ಗುಂಡಿಗೆ ಬೇಕಾಗುತ್ತೆ. ಅನುಮಾನವೇ ಇಲ್ಲ, ಅವಳು ಹೆಣ್ಣುಲಿ... ಮರಭೂಮಿಲಿ ಮಳೆಯಾಗುವಂತೆ ಅವಳು ಹುಡುಗರ ಬರಿದಾದ ಹಾರ್ಟಿಗೆ ಹೆಜ್ಜೆ ಹಾಕ್ತಾಳೆ...

Romantic Kavanagalu Poem on Woman Girl She in Kannada

೧೦) ಅವಳು ಆದಿ ಅಂತ್ಯವಿಲ್ಲದ ಪ್ರೀತಿಗೆ ಬುನಾದಿ ಹಾಕುತ್ತಾಳೆ. ಅವಳು ಕಣ್ಣಿಂದ ದೂರಾದಷ್ಟು ಮನಸ್ಸಿಗೆ ಹತ್ತಿರವಾಗುತ್ತಾಳೆ. ಅವಳು ಪ್ರೀತಿ ಅನ್ನೋ ದಾರ ಹೊಸೆದು ಹುಡುಗರ ಎದೆಯಲ್ಲಿ ಬುಗುರಿ ಆಡಿಸ್ತಾಳೆ. ದುರ್ಬಲವಾಗಿರುವ ಮನಸ್ಸುಗಳನ್ನು ಅವಳು ಪ್ರಬಲವಾಗಿ ಆವರಿಸಿಕೊಂಡು ಬಿಡುತ್ತಾಳೆ. ಅವಳು ರಾಣಿಯಾಗಿರಲು ಇಷ್ಟಪಡ್ತಾಳೆ. ಆದ್ರೆ ಕೊನೆಗವಳು ಪಂಜರದ ಗಿಣಿಯಾಗುತ್ತಾಳೆ. ಅವಳ ತುಟಿಯಲ್ಲಿ ನಲಿದಾಡುವ ತೋರಿಕೆಯ ನಗು ಎಲ್ಲರಿಗೂ ಕಾಣಿಸುತ್ತೆ. ಆದರೆ ಅವಳ ಕಣ್ಣಂಚಲ್ಲಿ ಇಣುಕುವ ಕಣ್ಣೀರ ಹನಿ ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರಿಗೆ ಮಾತ್ರ ಕಾಣಿಸುತ್ತೆ...

Romantic Kavanagalu Poem on Woman Girl She in Kannada

೧೧) ಕಣ್ಣಿಂದ ಕಣ್ಣಿಗೆ ಹರಡುವ ಪ್ರೀತಿಯೆಂಬ ಕಾಯಿಲೆಗೆ ರಾಯಭಾರಿ ಅವಳು. ಅವಳು ಪ್ರೇಮಲೋಕದ ಅಪ್ಸರೆ. ಅವಳ ಸ್ಮೈಲಿಗೆ ಕಾದಧರೆ ತಂಪಾಗುತ್ತೆ, ಬತ್ತೋದ ಕೆರೆ ತುಂಬಿ ತುಳುಕುತ್ತೆ. ಅವಳು ಕಣ್ಮುಂದೆ ಏಂಜೆಲ್ ಥರಾ ಕಾಣಿಸ್ತಾಳೆ. ಆದ್ರೆ ರಾತ್ರಿ ಕನಸಲ್ಲಿ ಡೆವಿಲ್ ಥರಾ ಕಾಡ್ತಾಳೆ. ಯಾವುದಾದರೂ ವಸ್ತುನಾ ಕಳ್ಕೊಂಡಾಗ ಖುಷಿಯಾದ್ರೆ ಅವಳು ಯಾರದಾದ್ರೂ ಹೃದಯ ಕದ್ದಿದ್ದಾಳೆ ಎಂದರ್ಥ. ಅವಳ ನಗುವಿನ ಸದ್ದಿಗೆ ಎದೆಯ ತಂತಿ ಹರಿದೋಗುತ್ತೆ. ಅವಳ ತುಟಿಯ ಚುಂಚಿನಿಂದ ಲೆಕ್ಕವಿಲ್ಲದಷ್ಟು ಜನರ ಎದೆಯಲ್ಲಿ ಮಂದಹಾಸ ಮೂಡುತ್ತೆ...

Romantic Kavanagalu Poem on Woman Girl She in Kannada

೧೨) ಅವಳ ಪ್ರೀತಿಬೇರು ಎದೆಯಲ್ಲಿ ಆಳವಾಗಿ ಬೇರು ಬಿಟ್ಟಾಗ ಊಟ ಸೇರಲ್ಲ, ನಿದ್ದೆ ಬರಲ್ಲ. ಯಾವುದೇ ಸಿನಿಮಾ ನೋಡಿದ್ರೂ ಹೀರೋಯಿನ್ ಜಾಗದಲ್ಲಿ ಅವಳೇ ಕಾಣಿಸ್ತಾಳೆ. ಅವಳು ಬಾಥರೂಮಲ್ಲೂ ಕಾಣ್ತಾಳೆ, ಬೆಡ್ರೂಮಲ್ಲೂ ಕಾಡ್ತಾಳೆ, ಬೇಡ ಬೇಡ ಅಂದ್ರು ಬಾಳಿನಲ್ಲಿ ಬರ್ತಾಳೆ. ನಂತರ ಬೇಡಬೇಡ ಅಂದ್ರು ತಿರುಗಿ ನೋಡದೆ ಬೆನ್ನು ತೋರಿಸಿ ಬಿಟ್ಟೊಗುತ್ತಾಳೆ...

Romantic Kavanagalu Poem on Woman Girl She in Kannada

೧೩) "ಅವಳಿಗೊಂದು ಪೋಲಿ ಕನಸು ಬೀಳಬಾರದೆ? ಆ ಕನಸಲ್ಲಿ ನಾನೇ ಬರಬಾರದೆ?" ಎಂದು ಯುವಕರು ಪರಿತಪಿಸುತ್ತಾರೆ. ಅವಳನ್ನು ಕಳ್ಕೊಂಡು ಕೆಲವರು ಕವಿಗಳಾದರೆ, ಮಿಕ್ಕವರು ಕುಡುಕರಾಗುತ್ತಾರೆ. ಅವಳಿಗೆ ಬೇಜಾರಾದರೆ ಪಯಣಿಸುವ ದೋಣಿಯನ್ನೇ ಕೊರೆದು ಮುಳುಗಿಸಿ ಬಿಡುತ್ತಾಳೆ. ಅವಳ ಕಾಡುವ ಕನಸುಗಳಲ್ಲಿ, ಕವಿತೆಗಳಲ್ಲಿ ಕಲ್ಲು ಹೃದಯದವರು ಕೂಡ ಕರಗಿ ಹೋಗುತ್ತಾರೆ. ಅವಳಿಗಾಗಿ ಬಹಳಷ್ಟು ಜನ ಏಕಾಂಗಿಯಾಗಿ ಅಲೆದಾಡುತ್ತಿದ್ದಾರೆ, ಏಕಾಂತದಲ್ಲಿ ಅಳುತ್ತಿದ್ದಾರೆ. ಅವಳಿಂದ ನಿರ್ಮಾಣವಾದ ನೋವಿನ ನಾಟ್ಯಕ್ಕೆ ಕಣ್ಣೀರು ವೇದಿಕೆಯಾಗುತ್ತೆ...

Romantic Kavanagalu Poem on Woman Girl She in Kannada

೧೪) ಅವಳು ಎದೆ ಮೇಲೆ ಕೈಯಿಟ್ರೆ ಒಂದು ಕ್ಷಣ ಉಸಿರೇ ನಿಂತಂಗಾಗುತ್ತೆ. ಅವಳಿಗೆ ಕೋಪವೂ ಇದೆ, ಕರುಣೆಯೂ ಇದೆ, ಕೊಬ್ಬು ಇದೆ. ಅವಳು ಹಠಮಾರಿನೇ. ಆದ್ರೆ ಹೆಮ್ಮಾರಿಯಲ್ಲ. ಅವಳು ಸುಳ್ಳೇಳಲ್ಲ. ಆದ್ರೆ ಯಾವತ್ತು ನಿಜ ನುಡಿಯಲ್ಲ. ಅವಳ ನೇತ್ರಗಳು ನನ್ನ ಮೇಲೆ ಬಿದ್ದಾಗ ನನ್ನ ಮುದ್ದು ಮನಸ್ಸು ಸ್ವಾಧೀನ ಕಳೆದುಕೊಂಡು ಪೆದ್ದುಪೆದ್ದಾಗಿ ವರ್ತಿಸುತ್ತೆ. ಅವಳ ಮುಗುಳ್ನಗೆಯ ತುಂತುರು ಮಳೆಯಿಂದ ನನ್ನೆದೆಯಲ್ಲಿ ಪ್ರೀತಿಯ ಕಾಮನಬಿಲ್ಲು ಮೂಡುತ್ತೆ. ಅವಳು ಉಸಿರಲ್ಲಿ ಉಸಿರಾಗಿ ಬೆರೆಯುತ್ತಾಳೆ. ತಂಗಾಳಿಯಲ್ಲಿ ತಬ್ಬಿಕೊಂಡು ಮುದ್ದಿಸುತ್ತಾಳೆ. ಅವಳ ಕಾಲ್ಗೆಜ್ಜೆ ಸದ್ದಿಗೆ ನನ್ನೆದೆ ಬಡಿತ ತಾಳ ಹಾಕುತ್ತೆ. ಅವಳು ಕಣ್ಣಂಚಲ್ಲಿ ಹುಟ್ಟಿದ ಪ್ರೀತಿಗೆ ತುಟಿಯಂಚಲ್ಲಿ ಜಾಗ ಕೊಡ್ತಿಯಾ ಅಂತಾ ಕೇಳ್ತಾಳೆ. ಎದುರಲ್ಲಿ ಬಂದಾಗ ಕ್ರಾಸಲುಕ್ ಕೊಡ್ತಾಳೆ. ಕನಸಲ್ಲಿ ಬಂದಾಗ ಕಿಸ್ ಕೊಡ್ತಾಳೆ. ಪೋಲಿ ಅವಳು... 

Romantic Kavanagalu Poem on Woman Girl She in Kannada

೧೫) ಬಲಿಷ್ಟವಾದ ಶಸ್ತ್ರಾಸ್ತ್ರಗಳಿಂದ ಸಾಯದವನು ಅವಳ ಒಂದೇ ಒಂದು ಮುಗುಳ್ನಗೆಗೆ, ಕುಡಿನೋಟಕ್ಕೆ ಬಲಿಯಾಗ್ತಾನೆ... ಅವಳು ನನ್ನೆದೆಯ ಮೇಲೆ ತಲೆಯಿಟ್ಟು ಮಲಗಿದಾಗ ಅವಳ ಪರಿಶುದ್ಧ ಪ್ರೀತಿಯ ಸ್ಪರ್ಶದಿಂದ ನನ್ನ ನೋವೆಲ್ಲ ಮಾಯವಾಗಿ  ಹೋಗ್ತವೆ. ಜೊತೆಗೆ ಹೃದಯದಲ್ಲಿದ್ದ ಕೆಲವು ಕೆಟ್ಟ ಭಾವನೆಗಳು ಸುಟ್ಟು ಭಸ್ಮವಾಗ್ತವೆ. ಅವಳು ಸ್ಮೈಲಲ್ಲಿ ಅಟೋಗ್ರಾಫ ಕೊಟ್ಟಾಗ, ಹುಡುಗರ ಹಾರ್ಟಲ್ಲಿ ಅವಳ ಫೋಟೋಗ್ರಾಫ್ ಅಚ್ಚಾಗುತ್ತೆ...

Romantic Kavanagalu Poem on Woman Girl She in Kannada

೧೬) ಅವಳು ಜಗತ್ತಿನ ಅದ್ಭುತಗಳಿಗಿಂತ ಸರ್ವಶ್ರೇಷ್ಠಳು. ಜಗತ್ತಿನ ಎಲ್ಲ ಸುಂದರ ವಸ್ತುಗಳು ಅವಳ ಸೌಂದರ್ಯದ ಎದುರು ನಾಚಿ ತಲೆ ತಗ್ಗಿಸುತ್ತವೆ. ಅವಳು ಸಂಗಾತಿಯಾಗಿ ಸಿಕ್ರೆ ಸತ್ತೋಗ ಬಿಡೋಣಾ ಅನ್ನೋವಷ್ಟು ಖುಷಿಯಾಗುತ್ತೆ. ಅವಳು ಹಾಡೋವಾಗ ಕಲ್ಲುಗಳು ಕೂಡ ಕಿವಿಕೊಟ್ಟು ಕೇಳ್ತವೆ. ಅವಳ ಸೌಂದರ್ಯವನ್ನು ಸವಿಯಲು ದಿನಾ ಸೂರ್ಯ ಅವಳು ಎಳೊಕ್ಕಿಂತ ಮುಂಚೆ ಎದ್ದು ಕಾಯ್ತಾ ಕುಂತಿರತ್ತಾನೆ. ಅವಳನ್ನು ಪ್ರೀತಿಸಲು ಸುಡೋ ಸೂರ್ಯ ತಣ್ಣಗಾಗ್ತಾನೆ, ನಗುವ ಚಂದ್ರನ ಸುಮ್ನೆ ಅಳ್ತಾನೆ. ಕನ್ನಡಿಯನ್ನು ನೋಡದೆ ಇರುವಷ್ಟು ಸುಂದರಿ ಅವಳು. ಕನ್ನಡಿಯನ್ನು ದ್ವೇಷಿಸುವಷ್ಟು ರೂಪಸಿ ಅವಳು...

Romantic Kavanagalu Poem on Woman Girl She in Kannada

೧೭) ಅವಳು ಎದೆ ಮೇಲೆ ಮಲ್ಕೊಂಡು ಕಿಲಕಿಲ ನಗ್ತಾಳೆ. ಬೋರಾದಾಗ ಅದೇ ಎದೆ ಮೇಲೆ ಕಲ್ಲಾಕಿ ಹೋಗ್ತಾಳೆ. ಅವಳು ಅವಳ ಬೇಡಿಕೆಗಳ ಈಡೇರಿಕೆಗಾಗಿ ಹೊಗಳಿ ಹೂಳೋ ಹುನ್ನಾರ ಮಾಡ್ತಾಳೆ. ಅವಳ ರಕ್ತದಲ್ಲಿ ಯಾವಾಗ ಪ್ರೀತಿ ಹರಿಯುತ್ತೆ, ಯಾವಾಗ ದ್ವೇಷ ಹರಿಯುತ್ತೆ ಎಂಬುದು ಅವಳಿಗೂ ಗೊತ್ತಾಗಲ್ಲ. ಅವಳ ಅಂತರಂಗವನ್ನು ಅರಿಯಲು ಹೋಗಿ ಎಷ್ಟೋ ಜನ ಅಲೆಮಾರಿ ಪ್ರೇಮ ರೋಗಿಗಳಾಗಿದ್ದಾರೆ...

Romantic Kavanagalu Poem on Woman Girl She in Kannada

೧೮) ಅವಳ ಹುಸಿಕೋಪದ ಹಿಂದೆ ಬೆಟ್ಟದಷ್ಟು ಪ್ರೀತಿಯಿರುತ್ತೆ. ಆದ್ದರಿಂದ ಅವಳು ಬೈದಾಗ ಯಾರೂ ಕೋಪಿಸಿಕೊಂಡು ಅವಳಿಂದ ದೂರಾಗಲ್ಲ. ಆದರೆ ಬೇರೆಯವರು ಅವಳಿಗೆ ಬೈದರೆ ಅವಳು ಕೋಪಿಸಿಕೊಂಡು ದೂರ ಓಡುವ ಪ್ರಯತ್ನ ಮಾಡ್ತಾಳೆ. ಅವಳ ಮುಂದೆ ಕೆಲವು ಸಲ ನಗು ಬಂದರೂ ನಗಬಾರದು. ಅಳು ಬಂದರೂ ಅಳಬಾರದು. ಮೊದಲು ಅವಳು ಪ್ರೀತಿಹಾಡಿಗೆ ಪಲ್ಲವಿಯಾಗ್ತಾಳೆ. ನಂತರ ಆ ಹಾಡಿನ ಸಂಗೀತಕ್ಕೆ ಶೃತಿಯಾಗ್ತಾಳೆ. ಆದ್ರೆ ಕೊನೆಯಲ್ಲಿ ಹಾಡಿನ ರಾಗವನ್ನೇ ತಪ್ಪಿಸಿ ಬಿಡ್ತಾಳೆ...

Romantic Kavanagalu Poem on Woman Girl She in Kannada

೧೯) ಅವಳಿಂದ ಶಾಪಗ್ರಸ್ತ ಹೃದಯವನ್ನು ಬೆಳಗಿಸಲು ಅವಳಿಗೆ ಮಾತ್ರ ಸಾಧ್ಯ. ಬೆಳದಿಂಗಳ ಬೆಳಕಲ್ಲಿ ನಗುವ ಚಂದ್ರನ ನೋಡಿ ನಗೋದ ಬಿಟ್ಟು ಎಷ್ಟೋ ಜನ ಅವಳನ್ನು ನೆನೆಸಿಕೊಂಡು ಅಳ್ತಾರೆ. ಎಷ್ಟೋ ದಿನಗಳ ನಂತರ ಅವಳನ್ನು ನೋಡಿದಾಗ ಮರಭೂಮಿಯಲ್ಲಿ ಓಯಾಸಿಸನ್ನು ನೋಡಿದಷ್ಟೇ ಖುಷಿಯಾಗುತ್ತೆ. ಆದ್ರೆ ಅವಳು ನನ್ನ ಪ್ರೇಮಗಂಗೆ ಎಂಬುದು ನೆನಪಾದಾಗ ಕಣ್ಣಲ್ಲಿ ಜಲಪಾತ ಸೃಷ್ಟಿಯಾಗುತ್ತೆ...

Romantic Kavanagalu Poem on Woman Girl She in Kannada

೨೦) ಅವಳನ್ನು ನೋಡಿದ್ರೆ ಅವಳೊಬ್ಬಳು ಮಹಾನ್ ದರೋಡೆಗಾರ್ತಿ ಅಂತಾ ಅನಿಸುತ್ತೆ. ಯಾಕಂದ್ರೆ ಅವಳು ಮುಷ್ಟಿಯಷ್ಟಿರೋ ಕಾಣದ ಹೃದಯವನ್ನು ಎಲ್ಲರ ಕಣ್ಮುಂದೇನೆ ಕದಿಯುತ್ತಾಳೆ. ಅಮವಾಸ್ಯೆ ದಿನ ಆಗಸದಲ್ಲಿ ಚಂದ್ರನ ನಗು ಕಾಣಲ್ಲ. ಅವಳಿಲ್ಲದೆ ಯಾರ ಮುಖದಲ್ಲಿಯೂ ನಗು ಮೂಡಲ್ಲ. ಹಾಯಾಗಿದ್ದವರು ಅವಳಿಂದೆ ಬಿದ್ದು ಹಾಳಾಗ್ತಾರೆ.  ಹಾಳಾದವರು ಅವಳಿಂದ ಉದ್ಧಾರವಾಗ್ತಾರೆ...

Romantic Kavanagalu Poem on Woman Girl She in Kannada

೨೧) ಅವಳು ಸಾಧಕಿಯಲ್ಲ, ಸಮಯಸಾಧಕಿ. ಅವಳು ವಂಚಕಿಯಲ್ಲ, ನಯವಂಚಕಿ. ಅವಳು ಕೀಚಕಿಯಲ್ಲ, ಕಿರಾತಕಿ. ಅವಳು ನನ್ನವಳಲ್ಲ. ನನ್ನವಳಾಗಲು ಸಾಧ್ಯವೂ ಇಲ್ಲ. ಯಾಕಂದ್ರೆ ಮಾಯೆ ಅವಳು. ಅವಳು ಯಾರ ಕೈಗೂ ಸಿಗುವುದಿಲ್ಲ. ಯಾರ ಕಣ್ಣಿಗೂ ಕಾಣಿಸುವುದಿಲ್ಲ...

Romantic Kavanagalu Poem on Woman Girl She in Kannada
Blogger ನಿಂದ ಸಾಮರ್ಥ್ಯಹೊಂದಿದೆ.