ನಿದ್ರೆ ಬಾರದ ರಾತ್ರಿಗಳು : Kannada Love Story

Chanakya Niti in Kannada
ನಿದ್ರೆ ಬಾರದ ರಾತ್ರಿಗಳು : Kannada Love Story  
 
     ಮಧ್ಯರಾತ್ರಿ 12.20 ಆಗಿತ್ತು. ಗೀತಾ ನಿದ್ದೆ ಬಾರದೆ ಒದ್ದಾಡುತ್ತಿದ್ದಳು. ಮನಸ್ಸಲ್ಲಿ ಏನೇನೋ ಬೇಡದ ಯೋಚನೆಗಳು ಬಂದು ಅವಳು ಯೋಚನಾ ಲೋಕದಲ್ಲಿ ಮುಳುಗಿ ನಿದ್ದೆಯನ್ನು ಕಳೆದುಕೊಂಡಿದ್ದಳು. ನಿದ್ರೆ ಬಾರದ ಕಂಗಳಲ್ಲಿನ ನೆಗೆದು ಬಿದ್ದ ಕನಸುಗಳು ಅವಳನ್ನು ಕಾಡುತ್ತಿದ್ದವು. ಗೀತಾ ಅವಳ  ಕುಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಯಾವುದೇ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗಿಂತ ಕಮ್ಮಿಯಿಲ್ಲ ಎನ್ನುವಂತೆ ಓದಿಸಲು ಅವಳು ಹಗಲಿರುಳು ಶ್ರಮಿಸುತ್ತಿದ್ದಳು. ಅದೇ ಯೋಚನೆಯಲ್ಲಿ ಮುಳುಗಿದ್ದಳು. ಅಷ್ಟರಲ್ಲಿ ಪಕ್ಕದ ಮನೆಯಿಂದ ಒಬ್ಬಳು ಬಸುರಿ ನರಳುವ ಶಬ್ದ ಕೇಳಿ ಬಂತು. ತಕ್ಷಣವೇ ಆಕೆ ಎದ್ದು ಪಕ್ಕದ ಮನೆಗೆ ಓಡಿದಳು.
ಹುಡುಗಿಯರು ಕುಡಿಯೋದು ತಪ್ಪಾ?
         ಗೀತಾಳ ಪಕ್ಕದ ಮನೆಯಲ್ಲಿ ಒಂದು ನವಜೋಡಿ ವಾಸವಾಗಿತ್ತು. ಅವರ ಸಂಸಾರದಲ್ಲಿ ಸಾವಿರಾರು ಸಂಕಷ್ಟಗಳಿದ್ದರೂ ಸರಸ ಸಲ್ಲಾಪಗಳಿಗೇನು ಬರವಿರಲಿಲ್ಲ. ಆ ನವ ಜೋಡಿಗಳು ಸಮಯ ಸಂದರ್ಭವೆನ್ನದೆ ಅವಕಾಶ ಸಿಕ್ಕಾಗಲೆಲ್ಲ ಸೌಂದರ್ಯ ಸಮರದಲ್ಲಿ ಮುಳುಗಿರುತ್ತಿದ್ದರು. ಅವರ ಕಣ್ಣಾಮುಚ್ಚಾಲೆ ಆಟದ ಸದ್ದು ಅಕ್ಕಪಕ್ಕದ ಮನೆಯವರೆಗೂ ಕೇಳಿಸುತ್ತಿತ್ತು. ಮನೆ ಮಹಡಿಯ ಮೇಲೆ ಚಂದ್ರನ ಬೆಳಕಲ್ಲಿ, ತಂಗಾಳಿಯ ಹಿನ್ನೆಲೆ ಸಂಗೀತದೊಂದಿಗೆ ಆ ನವ ದಂಪತಿಗಳು ಮುಚ್ಚುಮರೆಯಿಲ್ಲದೆ  ಪ್ರೇಮಯುದ್ಧದಲ್ಲಿ ನಿರತರಾಗಿರುವುದನ್ನು ನೋಡಿ ಗೀತಾ ಎಷ್ಟೋ ಸಲ ನಾಚಿ ನೀರಾಗಿದ್ದಳು. ಆದರೆ ಕೆಲ ತಿಂಗಳುಗಳು ಕಳೆದ ನಂತರ ಆ ದಂಪತಿಗಳಲ್ಲಿನ ಅನ್ಯೋನ್ಯತೆ ಕಾಣೆಯಾಯಿತು. ಹಗಲುರಾತ್ರಿ ಎನ್ನದೆ ಮೈಗಂಟಿಕೊಂಡು ಮುದ್ದಾಡುತ್ತಿದ್ದವರು ಸೂರ್ಯ ಚಂದ್ರರಂತೆ ದೂರವಿರಲು ಪ್ರಾರಂಭಿಸಿದರು.

ನಿದ್ರೆ ಬಾರದ ರಾತ್ರಿಗಳು : Kannada Love Story

        ಆ ಗಂಡನಿಗೆ ಹೆಂಡತಿಯ ಮೇಲಿನ ಆಸಕ್ತಿ ಕಡಿಮೆಯಾಯಿತು. ಅವಳಿಗೂ ಅಷ್ಟೇ ಗಂಡನ ಮೇಲಿನ ರಸಿಕತೆ ಕಡಿಮೆಯಾಯಿತು. ಬರುಬರುತ್ತಾ ಆ ಗಂಡನಿಗೆ ರಾತ್ರಿಯೂ ಸಹ ಹೆಂಡತಿ ಬೇಡವಾದಳು. ಈಗ ಆ ಗಂಡ ತನ್ನ ಗರ್ಭಿಣಿ ಹೆಂಡತಿಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಕೆಲಸದ ನಿಮಿತ್ಯ ಯಾವುದೋ ದೂರದ ಊರಿಗೆ ಹೋಗಿದ್ದನು. ಈ ಮಧ್ಯರಾತ್ರಿಯಲ್ಲಿ ಆ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದಳು. ಸಹಾಯಕ್ಕಾಗಿ ಗಂಡನಿಗೆ ಕರೆಯುತ್ತಿದ್ದಳು. ಆದರೆ ಸಂಕಷ್ಟದಲ್ಲಿ ಗಂಡ ಅವಳ ಬಳಿಯಿರಲಿಲ್ಲ. ಆ ಹೆಂಡತಿ ವೈಷ್ಯಗಿಂತಲೂ ನಿರ್ಲಜ್ಜೆಯಾಗಿ ತನ್ನ ಗಂಡನ ಮೈಮನವನ್ನು ತಣಿಸಿದ್ದಳು. ಹಗಲುರಾತ್ರಿಯೆನ್ನದೆ ಮನೆಯ ಕಂಡಕಂಡ ಮೂಲೆಯಲ್ಲಿ ಬೆತ್ತಲಾಗಿ ಅವನನ್ನು ಸಂತುಷ್ಟಪಡಿಸಿದ್ದಳು. ಅವನಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ್ದಳು. ಆದರೆ ಅವನ ವಂಶೋದ್ಧಾರಕ್ಕಾಗಿ ಅವಳು ನರಳುವಾಗ ಅವಳ ಬಳಿ ಅವನಿರಲಿಲ್ಲ ಎಂಬುದನ್ನು ಕಣ್ಣಾರೆ ನೋಡಿದ ಗೀತಾಳ ಕಣ್ಣಂಚಿನಲ್ಲಿ ಕಣ್ಣೀರು ಕಾಲುಚಾಚಿತು.


ನಿದ್ರೆ ಬಾರದ ರಾತ್ರಿಗಳು : Kannada Love Story

     ಆ ಗರ್ಭಿಣಿಯನ್ನು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಅದಕ್ಕಾಗಿ ಗೀತಾ ಸಹಾಯಕ್ಕಾಗಿ ಅಕ್ಕಪಕ್ಕದ ಮನೆಯವರನ್ನು ಕರೆದಳು. ಆದರೆ ಎಲ್ಲರೂ ಅವರವರ ಇಂದ್ರಿಯ ಸುಖದಲ್ಲಿ ಸೋತಿದ್ದರು. ಅದಕ್ಕಾಗಿ ಸಹಾಯಕ್ಕೆ ಯಾರೂ ಬರಲಿಲ್ಲ. ಗೀತಾ ಸರ್ಕಾರಿ ಅಂಬ್ಯುಲೆನ್ಸಗೆ ಕರೆಮಾಡಿದಳು. ಆದರೆ ಅಂಬ್ಯುಲೆನ್ಸ ಬೇರೆ ಕಡೆ ಸೇವೆಯಲ್ಲಿ ನಿರತವಾಗಿತ್ತು. ಆಕೆ ತನ್ನ ಗೆಳೆಯರಿಗೆ ಕರೆಮಾಡಿ ಊರಲ್ಲಿನ ಕೆಲವು ಟ್ಯಾಕ್ಸಿ ಡ್ರೈವರಗಳ ನಂಬರ ತೆಗೆದುಕೊಂಡು ಕರೆ ಮಾಡಿದಳು. ಕೆಲ ಡ್ರೈವರಗಳು ರಾತ್ರಿ ಸಮಯವಾಗಿದ್ದರಿಂದ ಹೆಂಡತಿಯನ್ನು ಬಿಟ್ಟು ಬರಲ್ಲವೆಂದರು. ಇನ್ನೂ ಕೆಲವರು ಹೆಚ್ಚಿನ ದುಡ್ಡಿಗೆ ಬೇಡಿಕೆ ಇಟ್ಟರು. ಎಷ್ಟೋ ಜನ ಡ್ರೈವರಗಳು ಕುಡಿದ ಅಮಲಿನಲ್ಲಿ ಅಶ್ಲೀಲವಾಗಿ ಮಾತಾಡಿದರು. ಕೊನೆಗೆ ಒಬ್ಬ ಡ್ರೈವರ್ ಅವಳಿಗೆ ಒಂದು ನಂಬರ ಕೊಟ್ಟು "ಈ ನಂಬರಿಗೆ ಕರೆಮಾಡಿ ಕೂಡಲೇ ರಾಜಾ ಬರುತ್ತಾನೆ..." ಎಂದೇಳಿ ಕಾಲ್ ಕಟ್ ಮಾಡಿದನು.

ನಿದ್ರೆ ಬಾರದ ರಾತ್ರಿಗಳು : Kannada Love Story

              ಗೀತಾ ತಕ್ಷಣವೇ ಆ ನಂಬರಿಗೆ ಕರೆ ಮಾಡಿ ಸಹಾಯಕ್ಕಾಗಿ ಕೋರಿಕೊಂಡಳು. ಜೊತೆಗೆ "ಬಾಡಿಗೆ ಎಷ್ಟಾಗುತ್ತೆ..?" ಎಂದಳು. ಆ ಕಡೆಯಿಂದ ರಾಜಾ ಕೋಪದಲ್ಲಿ "ಏನ್ರೀ ಇಂಥ ಸಮಯದಲ್ಲಿ ಟೈಮವೆಸ್ಟ ಮಾಡ್ತಿರಲ್ರಿ? ನನಗೆ ದುಡ್ಡು ಕೊಡಬೇಡಿ. ನಿಮ್ಮ ಅಡ್ರೆಸ್ಸನ್ನು ವಾಟ್ಸಾಪಲ್ಲಿ ಬೇಗನೆ ಶೇರ ಮಾಡಿ..." ಎಂದನು. ತಡಮಾಡದೆ ಗೀತಾ ಆ ನಂಬರಿಗೆ ವಾಟ್ಸಾಪಲ್ಲಿ ತಾನಿರುವ ಅಡ್ರೆಸ್ಸನ್ನು ಶೇರ ಮಾಡಿದಳು. ಐದೇ ನಿಮಿಷದಲ್ಲಿ ಮನೆ ಮುಂದೆ ಟವೆರಾ ಕಾರು ಬಂದು ನಿಂತಿತು. ಆತ ಆ ಗರ್ಭಿಣಿಯನ್ನು ಗಾಡಿಯಲ್ಲಿ ಕೂಡಿಸಿಕೊಂಡು ನಗರದ ಆಸ್ಪತ್ರೆ ಕಡೆಗೆ ವೇಗವಾಗಿ ಚಲಿಸಿದನು. 20 ಕಿಲೋಮೀಟರ್ ಇರುವ ದಾರಿಯನ್ನು ಕೇವಲ ಹತ್ತೇ ನಿಮಿಷದಲ್ಲಿ ಕ್ರಮಿಸಿ ಆ ಗರ್ಭಿಣಿಯನ್ನು ಸೇಫಾಗಿ ಆಸ್ಪತ್ರೆ ಸೇರಿಸಿದನು. ಅವಳ ಡೆಲಿವರಿ ಆಗುವ ತನಕ ತಾನು ಅಲ್ಲೇ ಕಾದನು. ಡೆವಿವರಿ ಆದ ನಂತರ ಅವಳ ಗಂಡನಿಗೆ ಕರೆ ಮಾಡಿ ಹೆಣ್ಣು ಮಗುವಾಗಿರುವ ಸಿಹಿಸುದ್ದಿಯನ್ನು ತಿಳಿಸಿದನು. ಆದರೆ ಅಪ್ಪ ಆದ ಖುಷಿ ಆ ಗಂಡನ ಧ್ವನಿಯಲ್ಲಿ ಕೇಳದಿದ್ದಾಗ ಆತ ಅಪಸೆಟ ಆದನು.

ನಿದ್ರೆ ಬಾರದ ರಾತ್ರಿಗಳು : Kannada Love Story

           ಗೀತಾ ತನ್ನನ್ನು ತಾ ನಂಬದಾಗಿದ್ದಳು. "ಸಿನಿಮಾ ಹೀರೋಗಿಂತಲೂ ಸ್ಮಾರ್ಟಾಗಿರುವ ಈ ಯುವಕ ಡ್ರೈವರ್ ಯಾಕಾಗಿದ್ದಾನೆ?" ಎಂಬ ಯೋಚನೆಯಲ್ಲಿ ಮುಳುಗಿದ್ದಳು. ರಾಜಾ ಅವಳಿಗೆ "ನೀವು ಇಲ್ಲೇ ಇರ್ತಿರಾ? ಅಥವಾ ಮನೆವರೆಗೂ ಬಿಡಬೇಕಾ?" ಎಂದು ಕೇಳಿದನು. ಆದರೆ ಗೀತಾ ತನ್ನ ಕಲ್ಪನಾ ಲೋಕದಲ್ಲಿ ಕಳೆದೋಗಿದ್ದಳು. ಆತ ಅವಳನ್ನು ಎಚ್ಚರಿಸಿದಾಗ ಆಕೆ "ಇಲ್ಲ... ಅವಳ ಗಂಡ ಬರುವ ತನಕ ನಾನಿಲ್ಲೇ ಇರ್ತೀನಿ. ನಾನೀಗ ದುಡ್ಡು ತಂದಿಲ್ಲ. ನಿಮ್ಮ ಬಾಡಿಗೇನಾ ನಾಳೆ ಕೊಡುತ್ತೇನೆ. ಪ್ಲೀಸ್ ನಂಬಿ..." ಎಂದಳು. ಆವಾಗಾತ "ಇರಲಿ ಮೇಡಂ. I will understand. No problem. ನೀವು ನಾಳೆ ನನ್ನ ಪೇ.ಟಿ.ಎಮ.ಗೆ ದುಡ್ಡನ್ನು ಕಳಿಸಿ ಪರವಾಗಿಲ್ಲ..." ಎಂದೇಳಿ ಅವಳಿಗೆ ಖರ್ಚಿಕೆ ದುಡ್ಡನ್ನು ಕೊಟ್ಟು ಹೋದನು. ಗೀತಾ ಬೆರಗಾಗಿ ಆ ಸುಂದರನನ್ನೇ ನೋಡುತ್ತಾ ನಿಂತಳು. "ಯಾರೀತ ರಿಯಲ್ ಹೀರೋ?" ಎಂಬ ಪ್ರಶ್ನೆ ಅವಳನ್ನು ಕಾಡಿತು. ಅವಳಿಗೆ ಅವನ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆ ಹುಟ್ಟಿತು.   

ನಿದ್ರೆ ಬಾರದ ರಾತ್ರಿಗಳು : Kannada Love Story  

       ರಾಜನ ಆಲೋಚನೆಯಲ್ಲಿ ಗೀತಾಳಿಗೆ ತನ್ನ ಕೆಲಸದಲ್ಲಿ ಗಮನಹರಿಸಲು ಅಸಾಧ್ಯವಾಯಿತು. ಶಾಲೆಯಲ್ಲಿ ಆಕೆ ಅವನ ಚಿಂತೆಯಲ್ಲಿಯೇ ಕಳೆದಳು. ಅವಳಿಗೆ ಅವನನ್ನು ಮತ್ತೆಮತ್ತೆ ನೋಡಬೇಕು, ಅವನೊಂದಿಗೆ ಮನ್ಸಬಿಚ್ಚಿ ಮಾತಾಡಬೇಕು ಎಂದೆಲ್ಲ ಅನ್ನಿಸತೊಡಗಿತು. ಅಷ್ಟರಲ್ಲಿ ಆಕೆಗೆ ಅವನಿಗೆ ಕಾರ ಬಾಡಿಗೆ ಕೊಡಬೇಕಾಗಿರುವುದು ನೆನಪಿಗೆ ಬಂತು. ಆಕೆ ಅವನಿಗೆ ಕರೆ ಮಾಡಿ "ರಾಜು ಸರ್... ನಿಮ್ಮ ಬಾಡಿಗೆ ದುಡ್ಡನ್ನು ಕೊಡಬೇಕಾಗಿತ್ತು ಎಲ್ಲಿ ಸಿಗ್ತೀರಾ?" ಎಂದು ಕೇಳಿದಳು. ಆದರೆ ಆತ "ಕ್ಷಮಿಸಿ ನಾನು ತುಂಬಾ ಬ್ಯುಸಿ ಇದೀನಿ. ನೀವು ನನ್ನ ಪೇ.ಟಿ.ಎಮ.ಗೆ 1000ರೂಪಾಯಿ ಕಳಿಸಿ ಸಾಕು" ಎಂದನು. ಆಕೆ ಅವನಿಗೆ "ನಿನ್ನೆ ರಾತ್ರಿ ಉಳಿದ ಡ್ರೈವರ್‌ಗಳು 3000 ಕೇಳ್ತಾ ಇದ್ರು. ನೀವೇಕೆ ಕಡಿಮೆ ಬಾಡಿಗೆ ಕೇಳ್ತಿದೀರಾ?" ಎಂದಳು. ಆತ "ಬೇರೆಯವರು ಕಷ್ಟದಲ್ಲಿರುವಾಗ ಸಿಕ್ಕಿದ್ದೇ ಚಾನ್ಸು ಅಂತಾ ದುಡ್ಡ ಕೀಳಬಾರದು ರೀ. ನಮ್ಮಪ್ಪನಿಗೇನು ಕಮ್ಮಿಯಿಲ್ಲ. ಅದಕ್ಕೆ ನೀವು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ, ಬಾಯ್" ಎಂದು ಕಾಲ್ ಕಟ್ ಮಾಡಿದನು. ಅವಳಿಗೆ ಅವನೊಂದಿಗೆ ಮಾತಾಡಬೇಕು ಎಂಬ ಆಸೆಯಿತ್ತು. ಆದರೆ ಆತ ನಿರಾಸೆ ಮಾಡಿದನು. ಆಕೆ ಅವನಿಗೆ ಪೇ.ಟಿ.ಎಮ್. ಮೂಲಕ ಹಣ ಕಳಿಸಿ ತನ್ನ ಕೆಲಸದಲ್ಲಿ ಮಗ್ನನಾದಳು. ಆದರೆ ಆಕೆ ತುಂಬಾ ಡಿಸ್ಟರ್ಬ ಆಗಿದ್ದಳು. 

ನಿದ್ರೆ ಬಾರದ ರಾತ್ರಿಗಳು : Kannada Love Story

           ಗೀತಾ ಶಾಲೆಯ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ರಾಜ ಎದುರಾದನು. ಆತ ಕಾರಲ್ಲಿದ್ದನು. ಅವಳು ಸ್ಕೂಟಿ ಮೇಲಿದ್ದಳು. ಆಕೆ ಅವನಿಗೆ ಡಿಂಪಲ್ ಕೊಟ್ಟರೂ ಕೂಡ ಆತ ನಿರ್ಲಕ್ಷಿಸಿ ಹೋದನು. ಅದು ಅವಳ ಜಂಭಕ್ಕೆ ಹಾನಿ ಮಾಡಿತು. "ನನ್ನಂಥ ಸುಂದರವಾಗಿರುವ ಹುಡುಗಿ ಸ್ಮೈಲ್ ಕೊಟ್ರು ಸುಮ್ನೆ ಹೋದ ಅವನಿಗೆ ಎಷ್ಟು ಸೊಕ್ಕಿರಬಹುದು?" ಎಂದು ಅವನ ಕಾರನ್ನು ಹಿಂಬಾಲಿಸಿದಳು. ಆತ ಊರಾಚೆ ಇರುವ ಪ್ರಶಾಂತವಾದ ಮರದ ಕೆಳಗೆ ಕಾರ ಪಾರ್ಕ ಮಾಡಿ ಸಿಗರೇಟ ಸೇದುತ್ತಾ ಕುಳಿತ್ತಿದ್ದನು. ಅವನಿಗೆ ಕಾಲೇಜ ಲೈಫಲ್ಲಿ ಯಾವುದೇ ಗರ್ಲಫ್ರೆಂಡ ಇರದೇ ಇರುವುದರಿಂದ ಆತ ಸಿಗರೇಟ ಸುಂದರಿಯನ್ನು ಸಂಗಾತಿ ಮಾಡಿಕೊಂಡಿದ್ದನು. ಆತ ಸಿಗರೇಟ ಸೇದುತ್ತಿರುವುದನ್ನು ಗೀತಾಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕೆ ಆಕೆ "ಈ ರೀತಿ ಸಿಗರೇಟ ಸೇದಿ ಯಾಕ ಓಜೋನ್ ಲೇಯರನ್ನಾ ಹಾಳು ಮಾಡ್ತೀರಾ?" ಎಂದು ರೇಗಿದಳು. ಅದಕ್ಕಾತ "ರೀ ಸ್ಕೂಲ ಟೀಚರ್ ನಾವ ಬಿಡೋ ಸಿಗರೇಟ್ ಹೊಗೆಗಿಂತ ಹೆಚ್ಚಾಗಿ ನಿಮ್ಮಂಥ ಹುಡ್ಗೀರ ಹಾಟನೆಸ್ಸಿಗೇನೆ ಓಜೋನ್ ಹೆಚ್ಚಿಗೆ ಹಾಳಾಗ್ತಿದೆ ರೀ" ಎಂದನು. ಆಕೆ ಕೋಪದಲ್ಲಿ "ಈಗ ನೀವು ಸಿಗರೇಟ್ ಬಿಡ್ತಿರೋ ಅಥವಾ ಇಲ್ವೋ ಅಂತೇಳಿ" ಅಂದನು. ಅದಕ್ಕಾತ "ನನಗೆ ಸಿಗರೇಟ್ ಬಿಡು ಅಂತಾ ಹೇಳೋ ಹಕ್ಕು ನನ್ನ ಪ್ರೇಯಸಿಗೆ ಮಾತ್ರ ಇರೋದು. ಸ್ವಾರಿ ಟೀಚರ್" ಎಂದನು. ಗೀತಾ ಕೋಪಿಸಿಕೊಂಡು ಮನೆಗೆ ಹೋದಳು. 

ನಿದ್ರೆ ಬಾರದ ರಾತ್ರಿಗಳು : Kannada Love Story

           ರಾಜನಿಂದ ಗೀತಾಳ ಮನಸ್ಸಿಗೆ ನೋವಾಗಿದ್ದರೂ ಆಕೆ ಅವನ ಬಗ್ಗೆನೇ ಚಿಂತಿಸುತ್ತಿದ್ದಳು. ಅವಳಿಗೆ ರಾಜನ ಬಗ್ಗೆ ಸರಿಯಾಗಿ ತಿಳಿದುಕೊಂಡು ಅವನ ಜೊತೆ ಮುಂದುವರೆಯಬೇಕಿತ್ತು. ಅದಕ್ಕಾಗಿ ಆಕೆ ಅವನ ಜೊತೆ ಓದಿದ ಒಬ್ಬಳು ಹುಡುಗಿಯ ಜೊತೆ ಸ್ನೇಹ ಬೆಳೆಸಿದಳು. ಅವಳಿಂದ ಆಕೆ ರಾಜನ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಂಡಳು. "ರಾಜ ದುಡ್ಡಿಗಾಗಿ ಯಾವ ಕೆಲಸವನ್ನು ಮಾಡುವುದಿಲ್ಲ. ಅವನು ಬೇರೆಯವರ ಬಾಡಿದ ಮುಖದಲ್ಲಿ ನಗು ನೋಡೊಕೆ ಎಲ್ಲ ಕೆಲಸಗಳನ್ನು ನಿಸ್ವಾರ್ಥದಿಂದ ಮಾಡುತ್ತಾನೆ. ಅವನ ಅಪ್ಪ ಟ್ರಾವೆಲ್ಸ ನಡೆಸಿ ಸಾಕಷ್ಟು ದುಡ್ಡು ಸಂಪಾದಿಸಿದ್ದಾರೆ. ಅದಕ್ಕಾಗಿ ಅವನಿಗೆ ದುಡ್ಡಿನ ಕೊರತೆಯಿಲ್ಲ. ಆದರೆ ಅವರಪ್ಪನಿಗೆ ಆ್ಯಕ್ಸಿಡೆಂಟಾಗಿ ಕೈ ಮುರಿದಿದ್ದರಿಂದ ಅವನು ತನ್ನ ಓದಿಗೆ ಅರ್ಧವಿರಾಮವಿಟ್ಟು ಅಪ್ಪ ಹುಷಾರಾಗುವ ತನಕ ಅಪ್ಪನ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾನೆ. ಅವನಿಗೆ ಸಿಗರೇಟ್ ಒಂದನ್ನು ಬಿಟ್ಟು ಬೇರೆನು ದುಶ್ಚಟಗಳಿಲ್ಲ. ಅವನು ಕಷ್ಟದಲ್ಲಿರುವ  ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡುತ್ತಾನೆ" ಎಂಬೆಲ್ಲಾ ವಿಚಾರಗಳು ಗೀತಾಳಿಗೆ ಗೊತ್ತಾದವು. ಅವಳಿಗೆ ರಾಜನ ಮೇಲೆ ಹೆವ್ವಿ ಕ್ರಶ್ಶಾಯಿತು.

ನಿದ್ರೆ ಬಾರದ ರಾತ್ರಿಗಳು : Kannada Love Story

        ಗೀತಾಳಿಗೆ ಒಂದಿನ ದೇವಸ್ಥಾನದಲ್ಲಿ ತನ್ನ ಗೆಳತಿಯ ಮುಖಾಂತರ ರಾಜನ ತಾಯಿತಂದೆಯ ಪರಿಚಯವಾಯಿತು. ಆಕೆ ಅವರ ಮುಂದೆ "ನಿಮ್ಮ ಮಗ ಸಿಗರೇಟ್ ಸೇದ್ತಾನೆ, ನೀವೇನು ಬುದ್ಧಿವಾದ ಹೇಳಲ್ವಾ?" ಎಂದು ಕೇಳಿದಳು. ಅದಕ್ಕವರು "ಜಾಣ ಪೆದ್ದನಿಗೆ ಏನಮ್ಮ ಬುದ್ಧಿವಾದ ಹೇಳೋದು? ಅವನನ್ನು ಮದುವೆಯಾಗುವವಳೇ ಅವನನ್ನು ಮೂಗುದಾರ ಹಾಕಿ ಇಟ್ಕೊತ್ತಾಳೆ..." ಎಂದೇಳಿ ನಸುನಕ್ಕರು. ಅವರಿಗೆ ಗೀತಾಳ ಮಾತಿನ ಹಿಂದಿನ ಮರ್ಮ ಅರ್ಥವಾಗಿತ್ತು. ಅದಕ್ಕಾಗಿ ಅವರು ಗೀತಾಳನ್ನು ತಮ್ಮ ಮನೆಗೆ ಕರೆದರು. ಅವರ ಮನಸ್ಸಿಗೆ ಬೇಜಾರು ಮಾಡಲು ಇಷ್ಟವಿಲ್ಲದೆ ಆಕೆ ರಾಜನ ಮನೆಗೆ  ಹೋದಳು. ಗೀತಾ ರಾಜನ ತಂದೆತಾಯಿಗಳಿಗೆ ಅವನ ಬಗ್ಗೆ ಕೇಳಿದಳು. ಆಗ ಅವಳಿಗೆ ಮತ್ತಷ್ಟು ಇಂಟರೆಸ್ಟಿಂಗ್ ವಿಚಾರಗಳು ಗೊತ್ತಾದವು. 

ನಿದ್ರೆ ಬಾರದ ರಾತ್ರಿಗಳು : Kannada Love Story

        "ರಾಜ ಡಿಗ್ರಿ ಮುಗಿದ ನಂತರ ಹೆಚ್ಚಿನ ಓದಿಗಾಗಿ ಮುಂಬಯಿಗೆ ಹೋಗಬೇಕು. ಜೊತೆಗೆ ಫಿಲ್ಮ್ ಮೇಕರ ಆಗಬೇಕು ಎಂಬ ಕನಸು ಕಂಡಿದ್ದನು. ಡಿಗ್ರಿ ಮುಗಿದ ನಂತರ ಅವರಪ್ಪನಿಗೆ ಆ್ಯಕ್ಸಿಡೆಂಟ ಆಗಿರುವುದರಿಂದ ಮನೆಯಲ್ಲೇ ಉಳಿದನು. ಟ್ರಕ್ ಡ್ರೈವರ್ ಆಗಿದ್ದು ಯಾವುದೇ ಫಿಲ್ಮ್ ಸ್ಕೂಲಿಗೆ ಹೋಗದೆ ಏಕಲವ್ಯನಂತೆ ಫಿಲ್ಮ್ ಮೇಕಿಂಗನ್ನು ಕಲಿತು ಟೈಟಾನಿಕ, ಅವತಾರಗಳಂಥ ಸೂಪರಹಿಟ ಚಿತ್ರಗಳನ್ನು ಕೊಟ್ಟ ಜೇಮ್ಸ ಕ್ಯಾಮರಾನ ಅವನಿಗೆ ಸ್ಫೂರ್ತಿಯಾಗಿದ್ದನು" ಎಂಬುದು ತಿಳಿಯಿತು. ಗೀತಾ ರಾಜನ ರೂಮಿಗೆ ಹೋದಾಗ ಬೆಚ್ಚಿ ಬೆರಗಾದಳು. ಅವನ ರೂಮಿನ ಗೋಡೆ ತುಂಬೆಲ್ಲ ಅವನೇ ಬಿಡಿಸಿದ ಚಿತ್ರಗಳು ರಾರಾಜಿಸುತ್ತಿದ್ದವು. ಅವನ ಕುಂಚದ ಕಲೆಯಲ್ಲಿ ಸ್ತ್ರೀಯ ಸೌಂದರ್ಯ ಸೂರೆಯಾಗಿತ್ತು. ಜೊತೆಗೆ ಅವನು ಅರ್ಧಕ್ಕೆ ಬರೆದು ಬಿಟ್ಟ ಕವನಗಳು ಅವಳ ಮನ ಕದ್ದವು. ಇಷ್ಟೆಲ್ಲವನ್ನು ಕಣ್ತುಂಬಿಕೊಂಡ ಮೇಲೆ "ಸದ್ಯಕ್ಕೆ ಡ್ರೈವರ್ ಆಗಿರುವ ರಾಜನು ಸಹ ಮುಂದೊಂದು ದಿನ ಜೇಮ್ಸ ಕ್ಯಾಮೆರಾನನಂತೆ ಫಿಲ್ಮ್ ಡೈರೆಕ್ಟರ್ ಆಗುತ್ತಾನೆ" ಎಂಬುದು ಅವಳಿಗೆ ಖಾತ್ರಿಯಾಯಿತು.

ನಿದ್ರೆ ಬಾರದ ರಾತ್ರಿಗಳು : Kannada Love Story

                      ರಾಜನ ತಂದೆತಾಯಿಗಳ ಒತ್ತಾಯದ ಮೇರೆಗೆ ಗೀತಾ ಅವನ ಮನೆಯಲ್ಲಿ ಉಪಹಾರ ಸೇವಿಸುತ್ತಿದ್ದಳು. ಅಷ್ಟರಲ್ಲಿ ರಾಜ ಬಂದನು. ಅವನಿಗೆ ಗೀತಾಳನ್ನು ನೋಡಿ ಆಘಾತವಾಯಿತು. "ಇವಳ್ಯಾಕೆ ನಮ್ಮನೆಗೆ ಬಂದಿದ್ದಾಳೆ?" ಎಂಬ ಪ್ರಶ್ನೆ ಕಾಡಿತು. ಅಷ್ಟರಲ್ಲಿ ಅಪರಪ್ಪ ರಾಜನನ್ನು "ಏನೋ, ಕಸ್ಟಮರ್ ಜೊತೆ ಮಿಸ್ ಬಿಹೇವ ಮಾಡ್ತಿಯಂತೆ? ಸಿಗರೇಟ್ ಬೇರೆ ಸೇದ್ತಿಯಂತೆ. ಹೇಂಗಿದೆ ಮೈಗೆ?" ಎಂದು ದಬಾಯಿಸಿದರು. ಅವನಿಗೆ ಅಪ್ಪ ನಾಟಕವಾಡುತ್ತಿದ್ದಾರೆ ಎಂಬುದು ಅರ್ಥವಾಯಿತು. ಅದಕ್ಕಾತ "ಬೇಗನೆ ನನಗೊಂದು ಮದುವೆ ಮಾಡಿಸಿ. ಸಂಗಾತಿ ಬಂದಮೇಲೆ ಸಿಗರೇಟ್ ಬಿಟ್ಟು ಬಿಡ್ತೀನಿ" ಎಂದನು. ಅದಕ್ಕೆ ಅವನಪ್ಪ "ಜೀವನದಲ್ಲಿ ಏನಾದರೂ ಸಾಧಿಸಿ ಗುಡ್ಡೆ ಹಾಕು. ಆಮೇಲೆ ಮದ್ವೆ ಮಾಡಿಸತ್ತೀನಿ. ಈಗ ತೆಪ್ಪಗೆ ಟ್ರಾವೆಲ್ಸ ನೋಡ್ಕೊ. ನಮ್ಮ ಟ್ರಾವೆಲ್ಸಲ್ಲಿರೋ ಎಲ್ಲ ಗಾಡಿಗಳು ನನ್ನ ಪ್ರೇಯಸಿಯರು. ಆ ಗಾಡಿಗಳನ್ನು ನಾನು ನಿಮ್ಮಮ್ಮನಿಗಿಂತ ಹೆಚ್ಚಾಗಿ ಪ್ರೀತಿಸತ್ತೀನಿ. ಯಾವುದಾದರೂ ಗಾಡಿಗೆ ಏನಾದರೂ ಆದರೆ ಚರ್ಮ ಸುಲಿದು ಬಿಡ್ತೀನಿ" ಎಂದು ತಮಾಷೆಗೆ ರೇಗಿದರು. ಅವರಮ್ಮ ಕೂಡ "ನೋಡಪ್ಪ ರಾಜ, ನನ್ನ ಸವತಿಯರನ್ನೆಲ್ಲ ಚೆನ್ನಾಗಿ ನೋಡ್ಕೊಳಪ್ಪ. ಇಲ್ಲಾಂದ್ರೆ ನಿಮ್ಮಪ್ಪನ ಪ್ರಾಣ ಹಾರಿ ಹೋಗುತ್ತೆ..." ಎಂದು ಮೆಲ್ಲನೆ ಕೀಚಾಯಿಸಿದರು.

ನಿದ್ರೆ ಬಾರದ ರಾತ್ರಿಗಳು : Kannada Love Story

                  ಅಪ್ಪಅಮ್ಮ ಮತ್ತು ಮಗನ ನಾಟಕ ಗೀತಾಳಿಗೆ ಅರ್ಥವಾಗಲಿಲ್ಲ. ರಾಜನಿಗೆ ಅವರಪ್ಪ ನಿಜವಾಗಿಯೂ ರೇಗಿದರೆಂದು ಅವಳು ಭಾವಿಸಿದಳು. ಅದಕ್ಕಾಗಿ ರಾಜನಿಗೆ ಕ್ಷಮೆ ಕೇಳಬೇಕೆಂದು ಅವನಿಗೆ ತನ್ನನ್ನು ಮನೆತನಕ ಡ್ರಾಪ್ ಮಾಡಲು ಕೇಳಿಕೊಂಡಳು. ದಾರಿಮಧ್ಯೆದಲ್ಲೆ ಆಕೆ ಅವನಿಗೆ ಕ್ಷಮೆ ಕೇಳಿದಳು. ಆತ ಇದೆಲ್ಲ ಏನ ದೊಡ್ಡ ವಿಷಯವಲ್ಲ ಬಿಡಿ ಎಂದೇಳುವ ಬದಲು, "ಏನ್ರೀ ನೀವು? ಹಾಲು ಜೇನಿನಂತಿರುವ ಸಂಸಾರದಲ್ಲಿ ಹುಳಿ ಹಿಂಡಿದ್ರಲ್ರಿ. ನಿಮ್ಮಿಂದಾಗಿ ನಾನು ನಮ್ಮಪ್ಪನ ಕಡೆಯಿಂದ ಬೈಯ್ಯಿಸಿಕೊಳ್ಳಬೇಕಾಯಿತು..." ಎಂದೆಲ್ಲ ಹೇಳಿ ಡ್ರಾಮಾ ಮಾಡಿ ಅವಳ ಸಿಂಪಥಿ ಗಿಟ್ಟಿಸಲು ಪ್ರಯತ್ನಿಸಿದನು. ಆದರೆ ಕಳ್ಳನನ್ ಮಗ ಡ್ರಾಮಾ ಮಾಡ್ತಿದಾನೆ ಎಂಬುದು ಅವಳಿಗೂ ಅರ್ಥವಾಯಿತು. ಅವಳೂ ಸಹ ಡ್ರಾಮಾ ಮಾಡಿ ಜಾರಿಕೊಂಡಳು. ಆದರೆ ಅವಳ ಮನಸ್ಸು ಸಂಪೂರ್ಣವಾಗಿ ಜಾರಿತು. ಆಕೆ ಅವನನ್ನು ಗುಟ್ಟಾಗಿ ಪ್ರೀತಿಸಲು ಪ್ರಾರಂಭಿಸಿದಳು. ಅವನ ಪ್ರತಿ ಹೆಜ್ಜೆಯನ್ನು ಫಾಲೋ ಮಾಡಿದಳು. ಫೇಸ್ಬುಕಲ್ಲಿ ಅವನ ಪೇಜನ್ನು ಫಾಲೋ ಮಾಡಿ ಅವನ ಕಥೆ ಕವನಗಳನ್ನೆಲ್ಲ ಓದಿ ಲೈಕ್ ಮಾಡಿದಳು. ಅವಳ ಮನಸ್ಸಲ್ಲಿ ಆತ ಭದ್ರವಾಗಿ ನೆಲೆಯೂರಿದನು.

ನಿದ್ರೆ ಬಾರದ ರಾತ್ರಿಗಳು : Kannada Love Story

          ಒಂದಿನ ರಾಜ ಬಾಡಿಗೆ ಮೇಲೆ ತಿರುಪತಿಗೆ ಹೋಗಿದ್ದನು. ಆತ ಮರಳಿ ಬರಲು ಒಂದು ವಾರ ಬೇಕಿತ್ತು. ಅಷ್ಟರಲ್ಲಿ ಗೀತಾಳ ಮನ ಅವನನ್ನು ನೋಡದೆ ತಳಮಳಿಸುತ್ತಿತ್ತು. ಆಕೆ ಕರೆ ಮಾಡಿದರೂ ಸಹ ಆತ ರಿಸೀವ ಮಾಡುತ್ತಿರಲಿಲ್ಲ. ಆಕೆಗೆ ಅವನ ಮೇಲೆ ಕೆಟ್ಟ ಕೋಪ ಬರುತ್ತಿತ್ತು. ಒಂದು ವಾರದ ನಂತರ ತಡರಾತ್ರಿ ಸಮಯದಲ್ಲಿ ರಾಜ ಊರಿಗೆ ಮರಳಿ ಬರುತ್ತಿದ್ದನು. ಆಗ ಅವನ ಕಣ್ಣಿಗೆ ಒಬ್ಬಳು ಹುಡುಗಿ ಬಿದ್ದಳು. ಆ ಹುಡುಗಿ "ಓದಿಗೆ ದುಡ್ಡಿಲ್ಲ, ಮನೆಯಲ್ಲಿ ಯಾರು ಸಹಕರಿಸುತ್ತಿಲ್ಲ" ಎಂಬ ಕಾರಣವನ್ನಿಟ್ಟುಕೊಂಡು ಅಡ್ಡದಾರಿ ತುಳಿಯಲು ತಯಾರಾಗಿದ್ದಳು. ಆ ಹುಡುಗಿ SSLCಯಲ್ಲಿ 92% ಮಾಡಿ ಈಡೀ ತಾಲೂಕಿಗೆ ಫಸ್ಟ್ ಬಂದಿದ್ದಳೆಂಬುದು ಅವನಿಗೆ ಗೊತ್ತಿತ್ತು. ಅದಕ್ಕಾಗಿ ಆತ ಅವಳ ಮನವೊಲಿಸಿ ಸರಿಯಾಗಿ ಬುದ್ಧಿವಾದ ಹೇಳಿ ಅವಳನ್ನು ಅವಳ ಮನೆಗೆ ತಲುಪಿಸಿದನು. ಜೊತೆಗೆ ಅವಳ ಓದಿನ ಸಂಪೂರ್ಣ ಖರ್ಚುವೆಚ್ಚವನ್ನು ತಾನೇ ನೋಡಿಕೊಳ್ಳುವ ಭರವಸೆ ನೀಡಿದನು.

ನಿದ್ರೆ ಬಾರದ ರಾತ್ರಿಗಳು : Kannada Love Story

         ರಾಜನಿಗೆ ನಿರಂತರವಾಗಿ ದೂರದ ಊರುಗಳ ಪ್ರವಾಸದ ಬಾಡಿಗೆಗಳು ಬರುತ್ತಿದ್ದವು. ಇದರಿಂದಾಗಿ ಆತನಿಗೆ ಶೇವ್ ಮಾಡಿಕೊಳ್ಳಲು ಸಹ ಸಮಯ ಸಿಗುತ್ತಿರಲಿಲ್ಲ. ಅವನು ಗಡ್ಡ ಬಿಟ್ಟಿರುವುದನ್ನು ನೋಡಿ ಗೀತಾ ಅವನಿಗೆ ಪೇ.ಟಿ.ಎಮ.ನಲ್ಲಿ 50 ರೂಪಾಯಿ ಕಳಿಸಿ, "ಸ್ವಲ್ಪ ಶೇವ್ ಮಾಡಿಸಿಕೋ ರಾಜ... ದುಡ್ಡು ಬೇಕಿದ್ರೆ ನನ್ನ ಧಾರಾಳವಾಗಿ ಕೇಳು..." ಎಂದು ಮೆಸೇಜ್ ಮಾಡಿದಳು. ಅವಳ ಪೋಲಿ ಮೆಸೇಜ್ ಅವನ ಕೋಪಕ್ಕೆ ಕಾರಣವಾಯಿತು. ಆತ ಅವಳಿಗೆ ಕಾಲ ಮಾಡಿ "ನೀವ್ಯಾರ್ರಿ ನನಗೆ ಶೇವ್ ಮಾಡಿಸಿಕೊ ಅಂತೇಳಿ ದುಡ್ಡು ಕಳಿಸೋಕೆ? ನಿಮ್ಮನ್ನು ನೀವು ಏನೆಂದು ಕೊಂಡಿದ್ದೀರಾ? ನನ್ನ ಪ್ರೇಯಸಿಗೆ ಮಾತ್ರ ಈ ಥರ ಎಲ್ಲ ಮಾಡೋ ಪರ್ಮಿಶನ್ ಇರೋದು.. ನೀವು ಸುಮ್ನೆ ಸೈಲೆಂಟಾಗಿ ಸೈಡಲ್ಲಿರಿ..." ಎಂದೆಲ್ಲ ಸೀರಿಯಸ್ಸಾಗಿ ವಾರ್ನ ಮಾಡಿದನು. ಅದರೆ ಗೀತಾ ಅದನ್ನು ತಮಾಷೆಯಾಗಿ ತೆಗೆದುಕೊಂಡಳು.

ನಿದ್ರೆ ಬಾರದ ರಾತ್ರಿಗಳು : Kannada Love Story

         ರಾಜ ಗೀತಾಳಿಗೆ ಪೇ.ಟಿ.ಎಮ. ಮೂಲಕ ಅವಳ 50 ರೂಪಾಯಿಯನ್ನು ವಾಪಸ್ಸು ಕಳುಹಿಸಿದನು. ಆಕೆ ಕೋಪಿಸಿಕೊಂಡು ಅವನನ್ನು ನೇರವಾಗಿ ಭೇಟಿಯಾಗಿ "ಏನ್ ನಿನ್ನ ಸಮಸ್ಯೆ? ಯಾಕ ಹೀಗೆ ನೀನು? ನನ್ನ ಪ್ರೀತಿ ನಿನಗೆ ಅರ್ಥವಾಗ್ತಿಲ್ವಾ?" ಎಂದು ಕೇಳಿದಳು. ಅದಕ್ಕಾತ "ಕ್ಷಮಿಸಿ ಮೇಡಂ. ನೀವು ಸ್ಕೂಲಲ್ಲಿ ಮಕ್ಕಳಿಗೆ ಪಾಠ ಮಾಡೋ ಟೀಚರ್. ನಾನು ಮಾಮೂಲಿ ಡ್ರೈವರ್. ಅಷ್ಟೇ ಅಲ್ದೇ ನಾನು ನಿಮಗಿಂತ ಎರಡು ವರ್ಷ ಚಿಕ್ಕವನು. ಸಮಾಜ ನಮ್ಮನ್ನು ನೋಡಿ ನಗುತ್ತೆ. ನಿಮ್ಮ ಪ್ರೀತಿಗೆ ನಾನು ಲಾಯಕ್ಕಾದ ಹುಡುಗನಲ್ಲ. ನನ್ನ ಬಿಟ್ಟು ಬೇರೆ ಒಳ್ಳೇ ಹುಡುಗನನ್ನು ಆರಿಸಿಕೊಳ್ಳಿ..." ಎಂದೇಳಿ ಅವಳಿಂದ ದೂರಾಗಲು ಪ್ರಯತ್ನಿಸಿದನು. ಆದರೆ ಅವಳಿಗೆ ಅವನೇ ಬೇಕಾಗಿದ್ದನು. ಅವನನ್ನು ಸುಲಭವಾಗಿ ಬಿಟ್ಟು ಕೊಡಲು ಅವಳ ಮನಸ್ಸು ಒಪ್ಪಲಿಲ್ಲ. ಅದಕ್ಕಾಗಿ ಆಕೆ ಅವನ ಜೊತೆ ಬೆಸ್ಟ ಫ್ರೆಂಡಾಗಿರುವ ನಾಟಕವಾಡಲು ಮುಂದಾದಳು. 

ನಿದ್ರೆ ಬಾರದ ರಾತ್ರಿಗಳು : Kannada Love Story

          ಗೀತಾ ರಾಜನ ಜೊತೆ ಬೆಸ್ಟ ಫ್ರೆಂಡಾಗಿರುವಂತೆ ನಟಿಸತೊಡಗಿದಳು. ಅವನ ಜೊತೆ ತನಗಿಷ್ಟವಿರುವ ಪ್ರವಾಸಿ ತಾಣಗಳನ್ನು ಸುತ್ತಿದಳು. ಜೊತೆಗೆ ಸಣ್ಣಪುಟ್ಟ ನೆಪಗಳನ್ನು ಮಾಡಿಕೊಂಡು ಅವನ ಮನಸ್ಸಲ್ಲಿ ಪ್ರೀತಿಯೆಂಬ ಇಟ್ಟಿಗೆಯಿಂದ ತನ್ನ ಮನೆಯನ್ನು  ಕಟ್ಟಿದಳು. ಆಕೆ ಒಮ್ಮೆ ಅವನೊಂದಿಗೆ ಮನಾಲಿಗೆ ಪ್ರವಾಸಕ್ಕೆ ಹೋಗಿದ್ದಳು. ಆವಾಗಾಕೆ ಮೊದಲ ಸಲ ಕಣ್ಣಿಗೆ ಕಾಡಿಗೆ ಹಚ್ಚುವುದನ್ನು ಮರೆತ್ತಿದ್ದಳು. ವಿಪರ್ಯಾಸ ಎಂಬಂತೆ ಕಾರ ಪಂಕ್ಚರ ಆಯಿತು. ರಾಜ ಕಾರಿನ ಚಕ್ರವನ್ನು ಬದಲಾಯಿಸಿದ ನಂತರ ಅವಳಿಗೆ "ಕಪ್ಪು ಕಾಡಿಗೆಯನ್ನು ದ್ವೇಷಿಸಬೇಡ. ಈ ಕಾಡಿಗೆ ಕಪ್ಪಾಗಿದ್ದರೂ ಸಹ ಅದನ್ನು ಕಣ್ಣಿಗೆ ಹಚ್ಚಿಕೊಂಡಾಗ ಅದು ಸೌಂದರ್ಯವನ್ನು ಹೆಚ್ಚಿಸುತ್ತೆ. ಅದೇ ಕಾಡಿಗೆಯನ್ನು ಕೆನ್ನೆಗೆ ಹಚ್ಚಿಕೊಂಡ್ರೆ ಅದು ದೃಷ್ಟಿಬೊಟ್ಟಾಗುತ್ತೆ. ಕೆಟ್ಟ ಕಣ್ಣುಗಳಿಂದ ನಿನ್ನನ್ನು ಕಾಪಾಡುತ್ತೆ" ಎಂದೇಳಿ ಕಾರ ಟೈರಿನ ಕಪ್ಪು ಮಸಿಯನ್ನು ಅವಳ ಕೆನ್ನೆಗೆ ಸವರಿದನು. ಮೊದಲ ಸಲ ಆತ ಅವಳ ಜೊತೆ ಇಷ್ಟೊಂದು ಸಲುಗೆಯಿಂದ ನಡೆದುಕೊಂಡಿದ್ದನು. ಜೊತೆಗೆ ಅವಳನ್ನು ನೋಡಿ ನಾಚಿಕೊಂಡಿದ್ದನು. ಅವಳಿಗೆ ಆತ ತನ್ನ ಪ್ರೇಮದಲ್ಲಿ ಬಿದ್ದಿದ್ದಾನೆ ಎಂಬುದು ಕನಫರ್ಮ ಆಯಿತು.

ನಿದ್ರೆ ಬಾರದ ರಾತ್ರಿಗಳು : Kannada Love Story

            ಗೀತಾಳ ಸವಿಮಾತುಗಳ ಸಲ್ಲಾಪದಲ್ಲಿ ಸಂಜೆ ಕಳೆದು ರಾತ್ರಿಯಾಯಿತು. ಮನಾಲಿಯ ಕಾಡುಮರಗಳಿಂದ ಬೀಸುತ್ತಿದ್ದ ತಂಪಾದ ಗಾಳಿ ಅವರಿಬ್ಬರ ಮೈಬೀಸಿ ಏರಿಸಿತ್ತು. ಚಾಟಿ ಏಟಿನಂತೆ ಚಳಿ ಅವರ ಮೈಗೆ ಬಡಿಯುತ್ತಿತ್ತು. ಇಂಥ ಸುಂದರವಾದ ರಾತ್ರಿಯಲ್ಲಿ ಗೀತಾಳಿಗೆ ರಾಜನ ನಿಯತ್ತನ್ನು ಪರೀಕ್ಷೆ ಮಾಡುವ ಮನಸ್ಸಾಯಿತು. ಆಕೆ ಅವನನ್ನು ಮೆಲ್ಲನೆ ತಬ್ಬಿಕೊಂಡು ಮುತ್ತಿಟ್ಟಳು. ಆತ ಹೆದರಿದ್ದನು. ಅವನಿಗೆ ತನ್ನ ನಿಯತ್ತಿನ ಮೇಲೆ ನಂಬಿಕೆ ಇರಲಿಲ್ಲ. ಆಕೆ ಅವನನ್ನು ಹಾಗೆಯೇ ಚುಂಬಿಸುತ್ತಾ ಮುಂದುವರೆದಳು. ಆತ ತನ್ನ ನಿಯತ್ತನ್ನು ಕಳೆದುಕೊಂಡು ಅವಳನ್ನು ಬಲವಾಗಿ ಅಪ್ಪಿಕೊಂಡನು. ಅವಳ ಬೆನ್ನು ನಾಚುವಂತೆ ಅವಳನ್ನು ಚುಂಬಿಸಿದನು. ಆಕೆ ಅವನ ಚುಂಚನಗಳಿಂದ ಮೈಮರೆತಳು. ಒಮ್ಮೆಲೇ ಅವಳ ಆತ್ಮಸಾಕ್ಷಿ ಎಚ್ಚರವಾಯಿತು. ಆಕೆ ಎದ್ದು ಅವನ ಕೆನ್ನೆಗೆ ಬಾರಿಸಿ ಅವನ ಮೇಲೆ ಕೂಗಾಡಿದಳು. "ನಾನು ನಿನ್ನ ಬೆಸ್ಟ ಫ್ರೆಂಡ್ ಅಂತಾ ಅಂದುಕೊಂಡು ನಿಂಜೊತೆ ಬಂದಿದ್ದೆ. ಆದರೆ ನಾನು ಮೈಮರೆತಾಗ ನೀ ನನ್ನೇ ಹಾಳು ಮಾಡಲು ಮುಂದಾಗ್ತೀಯಾ ಅಂತಾ ನಾ ಕನಸ್ಸಲ್ಲೂ ಅಂದುಕೊಂಡಿರಲಿಲ್ಲ. ಥೂ ನಿನ್ನ. ನೀವೆಲ್ಲ ಡ್ರೈವರ್‌ಗಳು ಒಂದೇ" ಎಂದು ಬೈದಳು. ಆತ ಅವಳಿಗೆ ಕ್ಷಮೆ ಕೇಳಿ ತನ್ನ ಕೋಣೆ ಸೇರಿದನು.

ನಿದ್ರೆ ಬಾರದ ರಾತ್ರಿಗಳು : Kannada Love Story

         ಗೀತಾ ರಾಜನ ನಿಯತ್ತನ್ನು ಪರೀಕ್ಷೆ ಮಾಡಲು ಹೋಗಿ ತನ್ನ ನಿಯತ್ತನ್ನು ಕಳೆದುಕೊಂಡು ಮೈಮರೆತ್ತಿದ್ದಳು. ಅವಳಿಗೆ ಅವನನ್ನು ಪರೀಕ್ಷಿಸುವ ಮನೆಹಾಳ ಐಡಿಯಾವನ್ನು ಅವರಪ್ಪನೇ ಕೊಟ್ಟಿದ್ದನು. ಜೊತೆಗೆ "ಡ್ರೈವರಗಳೆಲ್ಲ ನಿಯತ್ತಿಲ್ಲದ ನಾಯಿಗಳು. ಅವರು ಮನೆಯಲ್ಲಿ ಮುದ್ದಾದ ಹೆಂಡತಿ ಇದ್ದರೂ ಹೊರಗಡೆ ಸ್ಟೇಪ್ನಿಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ತಮ್ಮ ಹೆಂಡತಿಯರ ಮೇಲೆ ನಂಬಿಕೆ ಇರುವುದಿಲ್ಲ" ಎಂದೆಲ್ಲ ಹೇಳಿ ಅವಳಿಗೆ ಡ್ರೈವರಗಳ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದನು. ಅವಳಿಗೆ ತನ್ನ ಮೇಲೆ ತನಗೆ ನಾಚಿಕೆಯಾಗತೊಡಗಿತು. ಬೆಳಿಗ್ಗೆ ಎದ್ದು ಊರಿಗೆ ಹೊರಡಲು ತಯಾರಾದ ನಂತರ ರಾಜ ಗೀತಾಳಿಗೆ ಮತ್ತೊಮ್ಮೆ ಕ್ಷಮೆ ಕೇಳಿದನು.  "ಸ್ವಾರಿ ಫ್ರೆಂಡ್. ನನಗೆ ನಿನ್ನ ಲವ್ವರ್ ಆಗೋ ಯೋಗ್ಯತೇನು ಇಲ್ಲ. ಬೆಸ್ಟ ಫ್ರೆಂಡ್ ಆಗಿರೋ ಯೋಗ್ಯತೇನು ಇಲ್ಲ. ನಿನ್ನೆ ನಡೆದಿದ್ದಕ್ಕೆ ಸ್ವಾರಿ. ಇದೇ ನಮ್ಮಿಬ್ಬರ ಕೊನೆ ಭೇಟಿ. ಇನ್ಮೇಲೆ ನಾನು ಯಾವತ್ತು ನಿನಗೆ ಮುಖ ತೋರಿಸಲ್ಲ" ಎಂದೇಳಿ ಅವಳ ಕಣ್ಮುಂದೇನೆ ತನ್ನ ಮೊಬೈಲಲ್ಲಿನ ಅವಳ ನಂಬರನ್ನು ಡಿಲೀಟ ಮಾಡಿದನು. ಮರಳಿ ಮನೆಗೆ ಬರುವ ದಾರಿಯಲ್ಲಿ ಅವಳೊಂದಿಗೆ ಏನನ್ನು ಮಾತಾಡದೆ ಮೌನವಾಗಿ ಬಂದನು.


ನಿದ್ರೆ ಬಾರದ ರಾತ್ರಿಗಳು : Kannada Love Story

    ಈಗ ರಾಜನಿಗೂ ಗೀತಾಳ ಮೇಲೆ ಪ್ರೀತಿ ಕಾಯಿಲೆ ಹುಟ್ಟಿಕೊಂಡಿತ್ತು. ಗೀತಾಳಿಗೂ ಅವನ ಮೇಲೆ ಇನ್ನೂ ಬೆಟ್ಟದಷ್ಟು ಪ್ರೀತಿಯಿತ್ತು. ಆದರೆ ಹರೆಯದ ವಯಸ್ಸು ಮಾಡಿದ ಹುಚ್ಚು ತಪ್ಪಿಗೆ ಅವರಿಬ್ಬರೂ ಬೇರೆ ಬೇರೆಯಾಗಿ ಕೊರಗುತ್ತಿದ್ದರು. ರಾಜ ಬಾಡಿಗೆ ಮೇಲೆ ಬೇರೆ ಊರಿಗೆ ಹೋಗಿದ್ದನು. ಆದರೆ ಆತ ಕೊರೆಯುವ ಚಳಿಯಲ್ಲಿ ಅವಳ ಮುದ್ದಾದ ನೆನಪುಗಳ ದಾಳಿಗೆ ತತ್ತರಿಸಿದ್ದನು. ಗೀತಾಳಿಗೂ ಅಷ್ಟೇ, ಪದೇಪದೇ ಅವನನ್ನು ನೋಡಬೇಕು ಎಂಬ ಆಸೆಯಾಗುತ್ತಿತ್ತು. ಅದಕ್ಕಾಗಿ ಆಕೆ ಅವನಿಗೆ ಫೋನ್ ಕರೆ ಮಾಡಿದಳು. ಅವಳೊಂದಿಗೆ ಮಾತಾಡಲು ಧೈರ್ಯಸಾಲ್ಲದೆ ಆತ ಅವಳ ಕರೆಯನ್ನು ಕೇರಲೆಸ ಮಾಡಿದನು. 

ನಿದ್ರೆ ಬಾರದ ರಾತ್ರಿಗಳು : Kannada Love Story

            ರಾತ್ರಿಯ ಕತ್ತಲು ಅವನನ್ನು ಹೆದರಿಸುತ್ತಿದ್ದರೂ ಆತ ಹೊಟ್ಟೆಪಾಡಿಗಾಗಿ ನಿದ್ದೆಗೆಟ್ಟು ಗಾಡಿ ಓಡಿಸಲೇಬೇಕಿತ್ತು. ಆತ 24×7 ಕೆಲಸದಲ್ಲಿ ಕಾಲ ಕಳೆದರೆ, ಆಕೆ ನಿದ್ರೆ ಬಾರದ ರಾತ್ರಿಗಳಲ್ಲಿ ಕಣ್ಣೀರಾಕುತ್ತಾ ಕೂಡುತ್ತಿದ್ದಳು. ಕೊನೆಗೆ ಅವಳಿಗೆ ಕಣ್ಣೀರು ಸಾಲದೆ ಅವನಿಗೆ "ಗೆಳೆಯ, ಶತ್ರುಗಳ ಚುಚ್ಚು ಮಾತಿಗಿಂತ ಹೆಚ್ಚಾಗಿ ನಿನ್ನ ಮೌನ ನನ್ನನ್ನು ಚಿತ್ರಹಿಂಸೆ ಮಾಡಿ ಕೊಲ್ಲುತ್ತಿದೆ. ನೀ ಹೀಗೆ ಸುಮ್ನಿದ್ರೆ ನಾ ಸತ್ತೋಗತ್ತೀನಿ. I don't want to cry daily. Please bring sexy smile on my nude lips" ಎಂದು ಮೆಸೇಜ್ ಮಾಡಿದಳು. ಆದರೆ ಆತ ಅವಳ ಮೇಲೆ ಪ್ರೀತಿಯಿದ್ದರೂ "ತನ್ನ ಗಾಡಿ ಮೇಲೆ ನಂಬಿಕೆ ಇಲ್ಲದಿರೋ ಡ್ರೈವರ್ ಮಾತ್ರ ಸ್ಟೇಪ್ನಿ ಇಟ್ಟಿರುತ್ತಾನೆ. ಅದೇ ರೀತಿ ನಾನೊಬ್ಬ. ನಿನಗೆ ನಾನು ಯೋಗ್ಯನಲ್ಲ... Sorry bye" ಎಂದು ರಿಪ್ಲೆ ಕಳಿಸಿ ಸುಮ್ಮನಾದನು. ಆಕೆ ಅದನ್ನೋದಿ ತಲೆದಿಂಬನ್ನು ತಬ್ಬಿಕೊಂಡು ಅಳತೊಡಗಿದಳು.


ನಿದ್ರೆ ಬಾರದ ರಾತ್ರಿಗಳು : Kannada Love Story


               ಗೀತಾ ರಾಜನನ್ನು ನೋಡಬೇಕೆಂದು ಪ್ರತಿಕ್ಷಣ ಹಂಬಲಿಸುತ್ತಿದ್ದಳು. ಆದರೆ ಆತ ಊರಲ್ಲಿ ಅವಳ ಕಣ್ತಪ್ಪಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಅವರ ಗ್ರಾಮ ದೇವತೆಯ ಜಾತ್ರೆ ಸಮೀಪಿಸಿತು. ಎಲ್ಲ ಓಡಾಟಗಳ ಜವಾಬ್ದಾರಿಗಳನ್ನು ದೇವಸ್ಥಾನದ ಕಮೀಟಿಯವರು ರಾಜನ ಹೆಗಲೇರಿಸಿದರು. ರಾಜ ಎಲ್ಲ ಬಿಟ್ಟು ಜಾತ್ರೆಯ ಸಿದ್ಧತೆಯಲ್ಲಿ ತೊಡಗಿದನು. ಅವನನ್ನು ನೋಡಲು ಗೀತಾ ಪದೇಪದೇ ಅಲ್ಲಿಗೆ ಬರುತ್ತಿದ್ದಳು. ಆತ ನೋಡಿಯೂ ನೋಡದವರಂತೆ ನಿರ್ಲಕ್ಷಿಸಿದಾಗ ಕಣ್ಣಂಚಲ್ಲಿ ನೀರು ತುಂಬಿಕೊಂಡು ಮರಳಿ ಬರುತ್ತಿದ್ದಳು. ಅವರಿಬ್ಬರ ಪ್ರೀತಿಯ ಗುಟ್ಟು ಊರಲ್ಲಿ ರಟ್ಟಾಯಿತು. ಆದರೆ ಯಾವುದೇ ರಾಧ್ಧಾಂತವಾಗಲಿಲ್ಲ. ಗೀತಾಳಿಗಿಂತ ಹೆಚ್ಚಾಗಿ ರಾಜನ ಮೇಲೆ ಎಲ್ಲರಿಗೂ ಪ್ರೀತಿ ಅಭಿಮಾನವಿತ್ತು. ಊರ ಜನರೆಲ್ಲ ಅವರನ್ನು ಪ್ರೇಮಿಗಳೆಂದುಕೊಂಡು ಅವರ ಕಾಲೆಳೆದು ತಮಾಷೆ ಮಾಡುತ್ತಿದ್ದರು. ಆದರೆ ಅವರಿಬ್ಬರೂ ಮುಖಕೊಟ್ಟು ಮಾತಾಡಲಾಗದೆ ಒದ್ದಾಡುತ್ತಿದ್ದರು.

ನಿದ್ರೆ ಬಾರದ ರಾತ್ರಿಗಳು : Kannada Love Story

           ಊರ ಜಾತ್ರೆಯ ದಿನ ಬಂದೇ ಬಿಟ್ಟಿತು. ಊರೆಲ್ಲ ಹಬ್ಬದ ಸಂಭ್ರಮ ತುಂಬಿ ತುಳುಕುತ್ತಿತ್ತು. ಆದರೆ ಗೀತಾಳ ಮತ್ತು ರಾಜನ ಮುಖದಲ್ಲಿ ಮಂದಹಾಸದ ಕೊರತೆ ಎದ್ದು ಕಾಣುತ್ತಿತ್ತು. ಗೀತಾ "ಏನೇ ಆದರೂ ಇವತ್ತು ರಾಜನ ಜೊತೆ ಮಾತಾಡಿ ಅವನಿಗೆ ಮತ್ತೆ ಪ್ರಪೋಸ್ ಮಾಡಿ, ಅವನಿಂದ ಗಾಜಿನ ಬಳೆಗಳನ್ನು ತನ್ನ ಕೈಗೆ ಏರಿಸಿಕೊಳ್ಳಬೇಕು" ಎಂದು ನಿರ್ಧರಿಸಿ ಜಾತ್ರೆಗೆ ಹೋಗಿ ರಾಜನನ್ನು ಹುಡುಕಾಡಲು ಶುರುಮಾಡಿದಳು. ಜಾತ್ರೆಯಲ್ಲಿ ಜನಸಾಗರ ಸೇರಿತ್ತು. ಅದರಲ್ಲಿ ಅವಳ ಸಪೂರ ಸೊಂಟದ ಮೇಲೆ ಯಾರದೋ ಕಾಮದ ಕೈಗಳು ಆಡಿ ಹೋಗಿದ್ದಕ್ಕೆ ಅವಳು ತುಂಬಾ ಅಪಸೆಟ್ ಆದಳು. ಒಂದು ಸಲವಾಗಿದ್ದರೆ ಅವಳು ಸಹಿಸಿಕೊಂಡು ಸುಮ್ಮನಾಗುತ್ತಿದ್ದಳು. ಆದರೆ ಎರಡ್ಮೂರು ಸಲ ಅದೇ ರೀತಿಯ ಕಿರುಕುಳ ಪುನರಾವರ್ತನೆ ಆದಾಗ ಅವಳು ನಿಸ್ಸಾಹಾಯಕತೆಯಿಂದ ಅಳತೊಡಗಿದಳು. ಅಷ್ಟರಲ್ಲಿ ರಾಜ ಕೂಡ ಅವಳನ್ನು ಹುಡುಕುತ್ತಾ ಜಾತ್ರೆಗೆ ಬಂದನು. ಮೊದಲ ಸಲ ಅವಳನ್ನು ಸೀರೆಯಲ್ಲಿ ನೋಡಿ ಅವಳ ಸೌಂದರ್ಯಕ್ಕೆ ಸೋತು ಮೈಮರೆತನು. ಆದರೆ ಅವಳ ಕಣ್ಣುಗಳು ಕೆಂಪಾಗಿರುವುದನ್ನು ನೋಡಿ ಆತ ಕೆರಳಿದನು.

ನಿದ್ರೆ ಬಾರದ ರಾತ್ರಿಗಳು : Kannada Love Story

        ಹೂಗಳು ಸುಮ್ಮಸುಮ್ಮನೆ ಅರಳಲ್ಲ. ಅದೇ ರೀತಿ ಅವಳು ಸುಮ್ಮನೆ ಅಳಲ್ಲವೆಂದು ಅವಳ ಕೋಪಕ್ಕೆ ಕಾರಣವನ್ನು ಹುಡುಕುತ್ತಾ ಹೊರಟನು. ನಾಲ್ಕಾರು ಜನ ಶ್ರೀಮಂತ ಪೋಲಿ ಹುಡುಗರು ಜಾತ್ರೆಗೆ ಬರುವ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳವನ್ನು ಕೊಡುತ್ತಿದ್ದರು. ನೂಕುನುಗ್ಗಲಿರುವ ಜನಸಂದಣಿಯಿಂದ ಹೆಣ್ಮಕ್ಕಳ ಖಾಸಗಿ ಅಂಗಗಳ ಮೇಲೆ ಕೈಹಾಕಿ ಚೆಲ್ಲಾಟವಾಡುತ್ತಿದ್ದರು. ಯಾರ ಕಣ್ಣಿಗೂ ಕಾಣದಂತೆ ಹುಡುಗಿಯರ ಸೊಂಟ ಸವರಿ ಸುಮ್ಮನಾಗುತ್ತಿದ್ದರು. ಜನದಟ್ಟಣೆಯಲ್ಲಿ ಬೇಕಂತಲೇ ಹುಡುಗಿಯರ ಮೇಲೆ ಬಿದ್ದು ಆಸೆ ತೀರಿಸಿಕೊಳ್ಳುತ್ತಿದ್ದರು. ಗೀತಾ ಸ್ವಲ್ಪ ಸುಧಾರಿಸಿಕೊಂಡು ಮುಂದೆ ಹೊರಟಾಗ ಆ ಪೋಲಿ ಹುಡುಗರು ಅವಳ ಸೊಂಟಕ್ಕೆ ಕೈಹಾಕುವುದು ರಾಜನ ಕಣ್ಣಿಗೆ ಬಿತ್ತು. ಆತ ಕೆರಳಿ ಕೆಂಡಾಮಂಡಲವಾಗಿ ಆ ಪೋಲಿ ಹುಡುಗರನ್ನು ಚೆನ್ನಾಗಿ ಹೊಡೆದು ಅವರ ಕೈಬೆರಳನ್ನು ಕತ್ತರಿಸಿದನು. ಅವನ ಕಣ್ಣಲ್ಲಿ ಅಷ್ಟೊಂದು ಕೋಪವನ್ನು ಗೀತಾ ಮೊದಲ ಸಲ ನೋಡಿದ್ದಳು. ಆ ಕೋಪದಲ್ಲಿ ಅವಳಿಗೆ ಅವನ ಪ್ರೀತಿಯೂ ಕಾಣಿಸಿತು. ಆದರೆ ಆತ ಅವಳೊಂದಿಗೆ ಮಾತಾಡದೆ ತನ್ನ ಮನೆಗೆ ಹೋದನು. ಆಕೆ ಅವನನ್ನು ಹಿಂಬಾಲಿಸಿದಳು.

ನಿದ್ರೆ ಬಾರದ ರಾತ್ರಿಗಳು : Kannada Love Story

               ಗೀತಾ ರಾಜನ ಮನೆಗೆ ಬಂದು ಅವನನ್ನು ಕೊಲ್ಲುವಂತೆ ನೋಡುತ್ತಾ "ಯಾಕೋ ಮನಸ್ಸಲ್ಲಿ ಪ್ರೀತಿ ತುಂಬಿಕೊಂಡು ಮುಖದಲ್ಲಿ ಮುಳ್ಳನ್ನು ಬೆಳೆಸುತ್ತಿರುವೆ? ನನ್ನ ಮೇಲೆ ಪ್ರೀತಿ ಇರದಿದ್ದರೆ ಯಾಕೋ ಆ ಹುಡುಗರಿಗೆ ಹೊಡೆದೆ? " ಎಂದು ಕೇಳಿದಳು. ಇಷ್ಟೆಲ್ಲ ಆದ ಮೇಲೂ ಅವನಿಗೆ ತನ್ನ ಪ್ರೀತಿಯನ್ನು ಮುಚ್ಚಿಡುವ ಮನಸ್ಸಾಗಲಿಲ್ಲ. ಅವನು ಅವಳಿಗೆ "ಇನ್ಮೇಲಿಂದ ನಿನ್ನ ನೋವಿಗೆ ನಾ ನಗುವಾಗಿ ಬರ್ತೀನಿ. ನಿನ್ನ ಪ್ರತಿ ಹೆಜ್ಜೆಗೆ ನಾ ಹೆಗಲು ಕೊಡ್ತೀನಿ. ನಿನ್ನ ಕಣ್ಣೀರ್ನಾ ಒರೆಸೋ ಕೈಯ್ಯಾಗ್ತೀನಿ. ನಿನ್ನ ಉಸಿರಿಗೆ ನಾ ಹೆಸರಾಗ್ತೀನಿ. ನೀ ಮಲಗೊವಾಗ ತಲೆದಿಂಬಾಗಿ ನಾ ನನ್ನ ಮಡಿಲನ್ನು ಹಾಸ್ತೀನಿ. ನಿನಗೆ ನಿದ್ದೆ ಬರದಿದ್ದಾಗ ಕಥೆ ಹೇಳಿ, ಹಾಡ ಹಾಡಿ ಮಲಗಿಸ್ತೀನಿ. ಕಣ್ಣ ರೆಪ್ಪೆಯಾಗಿ ನಿನ್ನ ಕಾಯ್ತೀನಿ. ನೀ ಕತ್ತಲೆಯಲ್ಲಿದ್ದಾಗ ನಾ ಬೆಳಕಾಗಿ ಬರ್ತೀನಿ. ಒಟ್ನಲ್ಲಿ ಸಾಯೋತನಕ ನಿಂಜೊತೆಯಲ್ಲಿ ಇರ್ತೀನಿ" ಎಂದೇಳಿ ತನ್ನ ಪ್ರೀತಿಯನ್ನು ಅವಳಿಗೆ ಹೇಳಿದನು. ಆಕೆ ಅವನ ಪ್ರೇಮವನ್ನು ಒಪ್ಪಿಕೊಂಡು "ನೀ ಎಷ್ಟೇ ಬ್ಯುಸಿ ಇದ್ರೂ ದಿನಾ ನನಗೆ ಕಥೆ ಹೇಳಿ ಊಟ ಮಾಡಿಸಬೇಕು. ಪದೇಪದೇ ಪೋಲಿ ಜೋಕುಗಳನ್ನು ಹೇಳಿ ನನ್ನ ನಗಿಸಬೇಕು. ದಿನಾ ಕಾರಣವಿಲ್ಲದೆ ನಂಜೊತೆ ಕಿತ್ತಾಡಿ ಮುದ್ದಾಗಿ ಬೈಯ್ದು ನಂತರ ಮುದ್ದಿಸಬೇಕು. ನಿನ್ನೆದೆ ಮೇಲೆ ಮಲಗಿಸಿಕೊಂಡು ನನ್ನಾಸೆಗಳನ್ನೆಲ್ಲ ಆಲಿಸಬೇಕು. ಕಾಸ್ಟ್ಲಿ ಗಿಫ್ಟಗಳನ್ನು ಕೊಡದೆ ನಿನ್ನ ಕ್ವಾಲಿಟಿ ಸಮಯವನ್ನು ನನಗೆ ಕೊಡಬೇಕು" ಎಂದೇಳಿ ಅಳುತ್ತಾ ಅವನನ್ನು ಅಪ್ಪಿಕೊಂಡಳು. ಊರ ಜಾತ್ರೆಯಲ್ಲಿ ಅವರಿಬ್ಬರ ಪ್ರೇಮಜಾತ್ರೆ ಜೋರಾಗಿ ಸದ್ದು ಮಾಡಲು ಶುರುಮಾಡಿತು.

ನಿದ್ರೆ ಬಾರದ ರಾತ್ರಿಗಳು : Kannada Love Story

        ಅವರಿಬ್ಬರ ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇದ್ದಕ್ಕಿದ್ದಂತೆ ಒಂದಿನ ಗೀತಾ ಬಂದು ರಾಜನಿಗೆ ಚೆನ್ನಾಗಿ ಬೈಯ್ದು "ಇನ್ಮೇಲೆ ನಿನ್ನ ಹಾಳಾದ ಮುಖಾನಾ ನನಗೆ ತೋರಿಸಬೇಡ" ಎಂದೇಳಿ ತಿರುಗಿ ನೋಡದೆ ಹೋದಳು. ರಾಜನಿಗೆ ಅವಳು ಯಾಕೆ ಹೀಗಾಡುತ್ತಿದ್ದಾಳೆ ಎಂಬುದು ತಿಳಿಯದಾಯಿತು. ಅವಳ ಕೋಪಕ್ಕೆ ಕಾರಣವೇನೆಂದು ಕೇಳಿದರೂ ಆಕೆ ಹೇಳದೆ ಹೋದಳು. ರಾಜನ ತಂದೆತಾಯಿಗಳು ಕೂಡ ಅವಳಿಗೆ ಕರೆ ಮಾಡಿ ಅವಳ ಕೋಪಕ್ಕೆ ಕಾರಣ ಕೇಳಿದರು. ಆದರೆ ಆಕೆ ಏನನ್ನೂ ಹೇಳದೆ ಮತ್ತಷ್ಟು ಕೋಪಿಸಿಕೊಂಡಳು. ರಾಜ ಅವಳ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದನು. ಆದರೆ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. ಕೊನೆಗೂ ಅವಳ ಕೋಪಕ್ಕೆ ಕಾರಣವೇನೆಂದು ಅವನಿಗೆ ತಿಳಿಯಲಿಲ್ಲ. ಅಷ್ಟರಲ್ಲಿ ಅವರಪ್ಪನ ಮುರಿದ ಕೈ ಸರಿಯಾಯಿತು. ಆತ ಟ್ರಾವೆಲ್ಸಿನ ಎಲ್ಲ ಜವಾಬ್ದಾರಿಯನ್ನು ತನ್ನ ತಂದೆಗೆ ವಹಿಸಿ ತನ್ನ ಕನಸಿನ ಕಡೆಗೆ ಹೊರಡಲು ತಯಾರಾದನು. 

ನಿದ್ರೆ ಬಾರದ ರಾತ್ರಿಗಳು : Kannada Love Story

                      ಕೊನೆ ಸಲ ಗೀತಾಳನ್ನು ನೋಡಬೇಕೆಂಬ ಆಸೆಯಿಂದ ಅವಳ ಮನೆಗೆ ಹೋದನು. ಆದರೆ ಅವಳು ಮುಖ ಕೊಟ್ಟು ಮಾತಾಡದೆ ಕೋಪಕಾರಿ ಕಳುಹಿಸಿದಳು. ಕೊನೆಗೂ ಅವನಿಗೆ ಅವಳ ಕೋಪದ ಹಿಂದಿರುವ ಕಾರಣ ತಿಳಿಯಲಿಲ್ಲ. ಆತ ಅವಳಿಗೆ "ನಾನು ಮಾಡಿರುವ ತಪ್ಪೇನು ಅಂತಾ ನೀ ಬಾಯ್ಬಿಟ್ಟು ಹೇಳಿದ್ದರೆ ನಾ ಖಂಡಿತ ತಿದ್ದಿಕೊಳ್ಳುತ್ತಿದೆ. ಆದರೆ ನೀ ನನಗೆ ಆ ಅವಕಾಶ ಕೊಡದೆ ನನ್ನ ಪ್ರೀತಿಯನ್ನು ಕೊಲೆ ಮಾಡಿದೆ. ಇರಲಿ ನೀನು ತಪ್ಪು ಮಾಡಲು ಸಾಧ್ಯವಿಲ್ಲ. ತಪ್ಪು ನಂದೇ ಇರಬಹುದು. ಅದಕ್ಕೆ Sorry Bye" ಎಂದೇಳಿ ತನ್ನ ಮನೆಗೆ ಬಂದನು. ಆದರೆ ಅವಳ ನೆನಪುಗಳು ಅವನನ್ನು ಬೆನ್ನಟ್ಟಿ ಬಂದು ಕಾಡಿದವು. ಆತ ತಿರುಪತಿಗೆ ಹೋಗಿ ತನ್ನ ಕೂದಲುಗಳೊಂದಿಗೆ ಅವಳ ನೆನಪುಗಳನ್ನು ಸಹ ದಾನ ಮಾಡಿದನು. ನಂತರ ತನ್ನ ಫಿಲ್ಮ್ ಡೈರೆಕ್ಟರ್ ಆಗುವ ಕನಸ್ಸನ್ನು ನನಸಾಗಿಸಲು ಮುಂಬೈ ಮಹಾನಗರಿಯ ದಾರಿ ತುಳಿದನು.... Continued


ನಿದ್ರೆ ಬಾರದ ರಾತ್ರಿಗಳು : Kannada Love Story

Note : All Commercial Rights of this story are reserved by Roaring Creations Films. This is fully imaginary story and does't belongs to anyone in anyway. This story is written for commercial purpose only. So please don't take it too seriously. 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ನಿದ್ರೆ ಬಾರದ ರಾತ್ರಿಗಳು : Kannada Love Story ನಿದ್ರೆ ಬಾರದ ರಾತ್ರಿಗಳು : Kannada Love Story Reviewed by Director Satishkumar on April 14, 2018 Rating: 4.5
Powered by Blogger.