36 ನೀತಿ ಮಾತುಗಳು ; Super Crazy Dialogues in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

36 ನೀತಿ ಮಾತುಗಳು ; Super Crazy Dialogues in Kannada

36 ನೀಲಿ ಮಾತುಗಳು ;

೧) ಸಾವು ಬದುಕಿನ ಮಧ್ಯೆ ಒದ್ದಾಡುತ್ತಿರೋ ಮಗುವಿಗೆ ಧನ ಸಹಾಯದ ಕೋರಿಕೆನಾ ಟೆಲಿಕಾಸ್ಟ ಮಾಡೋಕೆ ನ್ಯೂಸ ಚಾನೆಲಗಳಿಗೆ ದುಡ್ಡು ಕೊಡಬೇಕು. ಯಾವಳೋ ಹೀರೋಯಿನ್ ಪ್ರೆಗ್ನೆಂಟ ಆದ್ರೆ ಅದ್ನ ಬಿಟ್ಟಿ ತೋರಿಸೋಕೆ ದುಡ್ಡು ಬೇಕಿಲ್ಲ. ಅವಳೇನು ಯಾರು ಮಾಡದಿರೋ ಸಾಧನೆಯನ್ನಾದ್ರೂ ಮಾಡಿದ್ದಾಳಾ? ದುಡ್ಡಿಗಾಗಿ ಮಾಧ್ಯಮಗಳು ಮೈಮಾರಿಕೊಳ್ಳುವುದಕ್ಕೂ ತಯಾರಾದ್ರೆ ಅಚ್ಚರಿಯೇನಿಲ್ಲ...


36 ನೀತಿ ಮಾತುಗಳು ;

೨) ಅಮವಾಸ್ಯೆ ದಿನ ಚಂದ್ರ ಬರ್ತಾನಂತ ನಂಬಕೊಂಡ ಕುಂತ್ರೆ ಅದು ನಮ್ಮ ಮುಠ್ಠಾಳತನ. ಕೈಕೊಟ್ಟು ಕಣ್ಮರೆಯಾದವರು ಮತ್ತೆ ನಮ್ಮ ಬಾಳಿಗೆ ಬಂದು ಬೆಳಕಾಗುತ್ತಾರೆ ಅಂತಾ ಅನಕೊಂಡ್ರೆ ಅದು ನಮ್ಮ ಹುಚ್ತನ...

36 ನೀತಿ ಮಾತುಗಳು ;

೩) ಏನನ್ನು ನೀಡದೆ ಸತಾಯಿಸಿದ ಹುಡುಗಿಗಾಗಿ ಪದೇಪದೇ ಸಾಯೋ ಮಾತನ್ನಾಡುವ ಯುವಕರು ಎಲ್ಲವನ್ನು ನೀಡಿರುವ ದೇಶಕ್ಕಾಗಿ ಪ್ರಾಣ ಕೊಡುವೆ ಎಂದು ತಮಾಷೆಗೆ ಹೇಳಿದ್ದರೂ ಭಾರತದಲ್ಲಿ ಸಿಡಿಲಿನ ಸಂಚಾರವಾಗುತ್ತಿತ್ತು...

36 ನೀತಿ ಮಾತುಗಳು ;

೪) ಲವ್ ಫೇಲ್ಯುವರ್ ಆದ್ರೇನೆ ತುಂಬಾ ಒಳ್ಳೆಯದು. ಯಾಕಂದ್ರೆ ಲವ್ ಸಕ್ಸೆಸ್ಸಾದ್ರೆ ಬರೀ ಮದ್ವೆಯಾಗಿ ಮಕ್ಕಳಾಗುತ್ತವೆ. ಅದೇ ಲವ್ ಫೇಲ್ಯುವರ್ ಆದ್ರೆ ಕವಿಗಳು, ಕಾದಂಬರಿಕಾರರು, ಕಲಾವಿದರು, ಚಿಂತಕರು, ಬ್ಯುಸಿನೆಸ್ ಮ್ಯಾನಗಳು ಹುಟ್ತಾರೆ. ಜೊತೆಗೆ ನಾಲ್ಕು ಜನ ಬಾರ್ ಮಾಲೀಕರು ಉದ್ಧಾರ ಆಗ್ತಾರೆ...  

36 ನೀಲಿ ಮಾತುಗಳು ;

೫) ಸಿಲ್ಕಳಿಗೊಂದು ಕಾಲ,
ಸನ್ನಿಗೊಂದು ಕಾಲ,
ಹಳೆ ಹುಡ್ಗಿರೊಂದು ರಾಹುಕಾಲ,
ಹುಡುಗರ ಹಾರ್ಟೊಂದು ನಾಯಿಬಾಲ...

36 ನೀಲಿ ಮಾತುಗಳು ;

೬) ಸಿಕ್ಕ ಪ್ರೀತಿಗಾಗಿ ಕಿರಾತಕ ಪುಣ್ಯಾತ್ಮನೂ ಆಗ್ತಾನೆ. ಅದೇ ಸಿಗದ ಪ್ರೀತಿಗಾಗಿ ಪುಣ್ಯಾತ್ಮ ಕಿರಾತಕನೂ ಆಗ್ತಾನೆ. ಸಿಗದ ಹುಡುಗಿಗಾಗಿ ಹಾರ್ಟ ಹಾಳಾಗೋದ್ರೆ ಏನಂತೆ? ಬ್ರೆನಲ್ಲಿ ಬುದ್ಧಿ ಇಲ್ವಾ? ಬುದ್ಧಿನಾ ಬಳಸು. ಕೈಕೊಟ್ಟ ಹುಡುಗಿ ಕಲಿಸಿ ಕೊಟ್ಟ ಪಾಠವನ್ನು ಯಾವುದೇ ಕಾರಣಕ್ಕೂ ಮರೆಯದಿರು. ಮತ್ತೆ ಅದನ್ನು ನೆನೆಸಿಕೊಂಡು ಕೊರಗದಿರು. ಅದೇ ನಿನ್ನ ಬಾಳಿಗೆ ದಾರಿ ತೋರುವ ದಾರಿದೀಪವು...

36 ನೀಲಿ ಮಾತುಗಳು ;

೭) ಕೆಲವು ಸಲ ಕೆಲವು ಮಾತುಗಳು ಕೇವಲವಾಗಿ ಬಿಡುತ್ತವೆ. ಆದರೂ ನಾವು ಭಾವನೆಗಳನ್ನು ಬಚ್ಚಿಡಬಾರದು. ಬಚ್ಚಿಟ್ಟ ಭಾವನೆಗಳೇ ಒಂದಲ್ಲ ಒಂದಿನ ಭೂತವಾಗಿ ಕಾಡಲು ಪ್ರಾರಂಭಿಸುತ್ತವೆ. ಹೃದಯದಲ್ಲಿನ ಭಾವನೆಗಳ ಭಾರ ಕಡಿಮೆಯಾಗಬೇಕೆಂದರೆ ಒಂದು ಅಳಬೇಕು ಇಲ್ಲ ನಗಬೇಕು. ಎರಡೂ ಉಚಿತವಾಗಿವೆ...

36 ನೀಲಿ ಮಾತುಗಳು ;

೮) ಹಾವಿಗೆ ಹಾವು ಕಚ್ಚಿದ್ರೆ ಏನೂ ಆಗಲ್ಲ. ಸಿಡಿಲಿಗೆ ಸಿಡಿಲು ಬಡಿದ್ರೆ ಏನೂ ಆಗಲ್ಲ. ಕರೆಂಟಿಗೆ ಕರೆಂಟ ಶಾಕ್ ಹೊಡೆದ್ರೂ ಏನೂ ಆಗಲ್ಲ. ಆದ್ರೆ ಪ್ರೀತಿಗೆ ಪ್ರೀತಿಯಿಂದ ಬೈದರೆ ಯಾಕೆ ಪ್ರೀತಿ ಸತ್ತೊಗುತ್ತೆ...?? ದ್ವೇಷಿಸೋದನ್ನು ಪ್ರೇಮಿಗಳನ್ನು ನೋಡಿ ಕಲಿಯಬೇಕು. ಪ್ರೀತಿಸುವುದನ್ನು ವಿರಹಿಗಳನ್ನು ನೋಡಿ ಕಲಿಯಬೇಕು. ಪ್ರೀತಿ-ಗೀತಿ-ಇತ್ಯಾದಿಗಳೆಲ್ಲ ಹಾಳಾಗೋದ್ರೆ ಏನಂತೆ...? ಮುಂದೆ ಮದ್ವೆ-ಗೀದ್ವೆ-ಮಕ್ಕಳು-ಮರಿ ಇತ್ಯಾದಿಗಳನ್ನಾದ್ರೂ ಚೆನ್ನಾಗಿ ಮಾಡಿ...

36 ನೀಲಿ ಮಾತುಗಳು ;

೯) ಲವ್ ಸಕ್ಸೆಸ್ ಆದಾಗ ಊರೆಲ್ಲ ಹೇಳಿಕೊಂಡು ತಿರುಗುವಾಗ ಇಲ್ಲದ ಮುಜುಗುರ, ಈಗ ಲವ್ ಫೇಲ್ಯುವರ್ ಆದ್ಮೇಲೆ ಅಳೋವಾಗ ಯಾಕೆ? ಲವ್ ಮಾಡಿದ್ರೆ ಹಿಸ್ಟರಿ ಆಗಬೇಕು. ಆದ್ರೆ ಕ್ರೈಮಸ್ಟೋರಿ ಆಗಬಾರದು. ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಿ ಉದ್ಧಾರವಾಗಲು ಲವ್ ಫೇಲ್ಯುವರಗಿಂತ ಒಳ್ಳೇ ಕಾರಣ ಬೇಕಿಲ್ಲ... 

36 ನೀಲಿ ಮಾತುಗಳು ;

೧೦) "ಹುಡ್ಗಿರಿಗೆ ಪ್ರೀತಿಲಿ ನಿಯತ್ತಿಲ್ಲ. ಹುಡುಗರ ಎದೆ ನೋವಿಗೆ ಕೊನೆಯಿಲ್ಲ. ಹುಡ್ಗಿರಿಗೆ ಪ್ರೀತಿ ಅರ್ಥ ಗೊತ್ತಿಲ್ಲ. ಹುಡುಗರ ಕಂಬನಿಗೆ ಕಾರಣ ಬೇಕಿಲ್ಲ. ಮನೆಗೊಂದು ಕಾರು, ಊರಿಗೊಂದು ಬಾರು ಬೇಕೆ ಬೇಕು. ಮೋಸ ಮಾಡೋ ಪ್ರತಿ ಹುಡ್ಗಿಗೆ ಒಳ್ಳೆ ಗಂಡ ಸಿಗಲಿ. ಮೋಸ ಹೋದ ಪ್ರತಿ ಹುಡುಗನಿಗೂ ಸಾಯೋವಾಗ್ಲಾದ್ರು ಸ್ವಲ್ಪ ನೆಮ್ಮದಿ ಸಿಗಲಿ..." ಎಂದೆಲ್ಲ ಶಾಪ ಹಾಕಿ ಯಾರೋ ಒಬ್ಬಳು ಮಾಡಿದ ತಪ್ಪಿಗೆ ಎಲ್ಲ ಹುಡುಗಿಯರಿಗೆ ಬೈಯ್ಯಬೇಡಿ... 

36 ನೀಲಿ ಮಾತುಗಳು ;

೧೧) ಏಳಿ, ಎದ್ದೇಳಿ, ಎಚ್ಚರಾಗಿ ಮೊಬೈಲನಲ್ಲಿ ಟೈಮ ನೋಡಿ ಮತ್ತೆ ಮಲ್ಕೋಳ್ಳಿ. ಅಲಾರಾಮ ಆಗೋವರೆಗೂ ಏಳಬೇಡಿ... ಎಷ್ಟು ದಿನ ಅಂತಾ ಭೂಮಿಗೆ ಭಾರವಾಗಿ ಬದುಕುವಿರಿ? ಒಂದಿನವಾದರೂ ಭೂಮಿಗೆ ಆಧಾರವಾಗಿ ಬದುಕಿ... ಕೇವಲ ಒಬ್ಬ ವ್ಯಕ್ತಿಯಾಗಿ ಬದುಕಬೇಡಿ. ಸಮಾಜದ ಶಕ್ತಿಯಾಗಿ ಬದುಕಿ... ಒಳ್ಳೆಯರಿಗೆ ಬೆಳಕು ನೀಡೋ ಸೂರ್ಯನಾಗಿ. ಕೆಟ್ಟವರಿಗೆ ಬಿಸಿ ಮುಟ್ಟಿಸೋ ಸೂರ್ಯನಾಗಿ...

36 ನೀಲಿ ಮಾತುಗಳು ;

೧೨) ಪ್ರೇಮಿಗಳಿಗೆ "Art of Living"ಗಿಂತ ಮುಂಚೆ "Art of Loving" ಕಲಿಸಬೇಕಿದೆ. ಹುಡುಗಿಯರು ಮೀರರ್ ಕಂಡಲ್ಲಿ ಮೇಕಪ್ ಮಾಡಿಕೊಂಡರೆ, ಹುಡುಗರು ಬಾರ ಕಂಡಲ್ಲಿ ಬೆರೆಯುವವರಯ್ಯ... ಪರದೇಶದಲ್ಲಿನ ಜನ ಅಗ್ರಿಮೆಂಟನಂತೆ ಮದುವೆ, ಮಕ್ಕಳು ಇತ್ಯಾದಿಯಲ್ಲ ಮಾಡುತ್ತಾರಂತ ಎಲ್ಲೋ ಓದಿದ್ದೆ. ಅದೇ ರೀತಿ ನಮ್ಮ ಇಂಡಿಯಾದಲ್ಲಿ ಪ್ರೀತಿ ಗೀತಿ ಇತ್ಯಾದಿಗಳನ್ನೆಲ್ಲ ಅಗ್ರಿಮೆಂಟ ಮೇಲೆನೆ ಮಾಡೋ ಹಂಗಿದ್ರೆ ಎಷ್ಟೋ ಚೆನ್ನಾಗಿರುತ್ತಿತ್ತು...


36 ನೀಲಿ ಮಾತುಗಳು ;

೧೩) ಹಾಡ ಹಾಡಿದ್ರೆ ಸಪ್ತ ಸ್ವರಗಳು ಶರಣಾಗಬೇಕು. ಡ್ಯಾನ್ಸ ಮಾಡಿದ್ರೆ ಸ್ಟೇಜ್ ಎದ್ದು ಚಪ್ಪಾಳೆ ತಟ್ಟಬೇಕು. ಲವ್ ಮಾಡಿದರೆ ಲೋಕ ಮೆಚ್ಚಬೇಕು. ಆದ್ರೆ ದೋಸ್ತಿ ಮಾಡಿದರೆ, ನಮ್ಮ ದೋಸ್ತಿ ನೋಡಿ ನಮ್ಮ ದುಶ್ಮನಗಳು ಸಹ ನಮ್ಮ ದೋಸ್ತ ಆಗೋಕೆ ಮುಂದೆ ಬರಬೇಕು... ನಾವು ಸಿರಿತನದಲ್ಲಿ ಕುಚೇಲನಾಗಿದ್ದರೂ ಸಹ ಗೆಳೆತನದಲ್ಲಿ ಕುಬೇರನಾಗಿರಬೇಕು...

36 ನೀಲಿ ಮಾತುಗಳು ;

೧೪) ಯೌವ್ವನದಲ್ಲಿ ಒಂದಾದರೂ ಹುಡುಗಿಗೆ ಸೋತು, ಅವಳು ಸಿಗದಿದ್ದಾಗ ಅಳದಿದ್ರೆ ಗಂಡು ಜಾತಿಗೆ ಅವಮಾನ. ಆದರೆ ಪ್ರೇಮದೇವತೆಯ ಹಿಂದೆ ಬಿದ್ದು ವಿದ್ಯಾದೇವತೆಗೆ ಮೋಸ ಮಾಡಬೇಡಿ... ಕಾಲೇಜ ಲೈಫಲ್ಲಿ ಒಳ್ಳೇ ಲೆಕ್ಚರರ್ ಸಿಗಲ್ಲ. ಫ್ಯುಚರ್ ಇಲ್ಲದವನಿಗೆ ಒಳ್ಳೇ ಲವ್ವರ ಸಿಗಲ್ಲ... ಹುಚ್ಚರಾಗಿ ಪ್ರೀತಿಸಿ. ಆದರೆ ಪ್ರೀತಿಸಿ ಹುಚ್ಚರಾಗ್ಬೇಡಿ. ಪ್ರೀತಿಯಲ್ಲಿ ಹುಚ್ಚರಾಗಿ. ಆದ್ರೆ ಪ್ರೀತಿಗಾಗಿ ಅಲೆದು ಹುಚ್ಚರಾಗ್ಬೇಡಿ... ಪ್ರೀತಿ ಇಲ್ಲದ ಪ್ರಪಂಚವಿಲ್ಲ. ಆದರೆ ಪ್ರೇಯಸಿ ಇಲ್ಲದ ಪ್ರಪಂಚವಿದೆ. ಅದನ್ನು ಪ್ರೀತಿಸುವ ಹೃದಯ ನಮ್ಮಲ್ಲಿರಬೇಕಷ್ಟೇ...

36 ನೀಲಿ ಮಾತುಗಳು ;

೧೫) ವಿಲನಗೆ ಪ್ರೀತಿಯಿಂದ ವೈಲಿನ ಬಾರಿಸೋಕೆ ಬರುತ್ತೆ ಅನಕೊಂಡ್ರೆ ಅದು ನಮ್ಮ ಮುಠ್ಠಾಳತನ. ವಿಲನಗಳಿಗೆ ವಿಷಕಾರೋಕೆ ಮಾತ್ರ ಬರುತ್ತೆ... "ಕೆಟ್ಟವರ ಸಹವಾಸದಿಂದ ಒಳ್ಳೆಯವರು ಕೆಟ್ಟವರಾಗುತ್ತಾರೆ" ಎಂಬುದನ್ನು ನಾನು ಒಪ್ತೀನಿ. ಆದರೆ "ಒಳ್ಳೆಯವರ ಸಹವಾಸದಿಂದ ಕೆಟ್ಟವರು ಒಳ್ಳೆಯವರಾಗುತ್ತಾರೆ" ಎಂಬುದನ್ನು ನಾನೀಗ ಒಪ್ಪಲ್ಲ. ಯಾಕೆಂದರೆ ಇದು ರಾಮಾಯಣ ಕಾಲವಲ್ಲ... ತುಂಬಾ ಒಳ್ಳೆಯವರಾದ್ರೆ ತುಂಬಾ ಬೇಗನೆ ಯಮನಿಗೆ ಕಿಂಕರಾಗುತ್ತೀರಾ. ಅದಕ್ಕೆ ಸ್ವಲ್ಪ ಕೆಟ್ಟವರಾಗಿರಿ. ಹಳೆಯ ಶಾಂತಿ-ಗೀಂತಿ-ವಾಂತಿ ಸಿದ್ಧಾಂತಗಳನ್ನೆಲ್ಲ ಬಿಟ್ಟು ಬಲಿಷ್ಟರಾಗಿ. ಈಗ ಬಲಿಷ್ಟರಾಗಿದ್ರೆ ಮಾತ್ರ ಬದುಕಲು ಸಾಧ್ಯ...

36 ನೀಲಿ ಮಾತುಗಳು ;

೧೬) ಕೋಪದಿಂದ ಕೆರಳದ ಕಂಗಳಲ್ಲಿ ಧೈರ್ಯದ ಜ್ವಾಲೆ ಪ್ರಜ್ವಲಿಸಲಾರದು...  ಪ್ರಾರ್ಥನೆಯ ಜೊತೆಗೆ ಪ್ರಯತ್ನವೂ ಇರಲಿ. ಸ್ನೇಹದ ಜೊತೆಗೆ ಸಲುಗೆಯೂ ಇರಲಿ. ಪ್ರೀತಿಯ ಜೊತೆಗೆ ನೀತಿ, ನಿಯತ್ತು, ನಂಬಿಕೆಯೂ ಇರಲಿ. ನಾವು ಸತ್ತ ಮೇಲೆಯೂ ನಮ್ಮ ಕನಸುಗಳು ನನಸಾಗುತ್ತವೆ. ನಮ್ಮ ಪ್ರಯತ್ನಗಳಿಗೆ ಸೋಲಿಲ್ಲ... ನಿಮ್ಮತ್ರ ಹಂಚಲು ಏನಿರದಿದ್ರೂ ನಿಮ್ಮ ನಗುವನ್ನು ಹಂಚಿ ಖುಷಿಯಾಗಿರಿ... ದಣಿದು ಕುಳಿತುಕೊಳ್ಳಿ. ಆದರೆ ಕುಳಿತು ದಣಿಯಬೇಡಿ. ಬಡವ ದಣಿದು ಕುಳಿತುಕೊಳ್ಳುತ್ತಾನೆ. ಶ್ರೀಮಂತ ಕುಳಿತು ದಣಿಯುತ್ತಾನೆ...

36 ನೀಲಿ ಮಾತುಗಳು ;

೧೭) ಈ ಜಗತ್ತು ಒಂದು ಹುಚ್ಚರ ಸಂತೆ. ಇಲ್ಲಿ  ಕೆಲವರು ಹುಚ್ಚರಂತೆ ಅಭಿನಯಿಸಿದರೆ ಇನ್ನೂ ಕೆಲವರು ನಿಜವಾಗಿಯೂ ಹುಚ್ಚರಾಗಿರುತ್ತಾರೆ. ಒಬ್ಬ ದಡ್ಡ ಇನ್ನೊಬ್ಬ ದಡ್ಡನನ್ನು ಗೌರವಿಸುತ್ತಾನೆ. ಆದರೆ ಒಬ್ಬ ಬುದ್ಧಿವಂತ ಮತ್ತೊಬ್ಬ ಬುದ್ಧಿವಂತನನ್ನು ಆಂತರಿಕವಾಗಿ ದ್ವೇಷಿಸುತ್ತಾನೆ. ಒಳ್ಳೇ ಸಮಯ ಬರದಿದ್ದರೂ ಒಳ್ಳೇ ಸಾವಾದರೂ ಬರಲಿ ಅಂತಾ ಪ್ರಾರ್ಥಿಸುವ ಪೆದ್ದರೂ ಇದ್ದಾರೆ... ಚಳಿಜ್ವರ, ಎಕ್ಸಾಂಜ್ವರ, ಪ್ರೇಮಜ್ವರ ಎಲ್ಲವುಕ್ಕಿಂತ ಕೆಟ್ಟದ್ದು ಕ್ರಿಕೆಟ್ ಜ್ವರ... 

36 ನೀಲಿ ಮಾತುಗಳು ;

೧೮) ವ್ಯಕ್ತಿತ್ವ ಬೆಳೆಯಬೇಕೆಂದರೆ ತತ್ವಗಳು ಬೇಕು. ಕವಿತೆಗಳು ಹುಟ್ಟಬೇಕೆಂದರೆ ಹೃದಯಗಳು ನರಳಬೇಕು... ಮುಳ್ಳುಗಳ ಮಧ್ಯೆನೆ ಗುಲಾಬಿ ಅರಳೋದು. ನೋವು ನಲಿವುಗಳ ಮಧ್ಯೆನೆ ಜೀವನ ಸಾಗೋದು... ಕಣ್ಣೀರಿನಿಂದ ಹೃದಯ ಕಲ್ಲಾದಾಗ ಜೀವನ ಕಗ್ಗಂಟಾಗುತ್ತದೆ... ಬಲಿಷ್ಟವಾದ ಹಲ್ಲುಗಳ ಮಧ್ಯೆ ಮೃದುವಾದ ನಾಲಿಗೆ ನಲಿದಾಡುತ್ತಾ ಬದುಕುವ ಹಾಗೆ ನಾವು ಈ ಕೆಟ್ಟ ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬೇಕು... 

36 ನೀಲಿ ಮಾತುಗಳು ;

೧೯) ಮುಖಕ್ಕೆ ಬಣ್ಣ ಹಚ್ಚೋರು ಇದ್ದಾರೆ. ಮಾತಿಗೆ ಬಣ್ಣ ಹಚ್ಚೋರು ಇದ್ದಾರೆ. ಮನಸ್ಸಿಗೆ ಬಣ್ಣ ಹಚ್ಚೋರು ಇದ್ದಾರೆ... ಗ್ರೇಟ್ ಅಂತಾ ಗುರ್ತಿಸಿ ಕೊಂಡೊರೆಲ್ಲ ಗ್ರೇಟ್ ಅಲ್ಲ. ಕೆಟ್ಟ ಹೆಸರನ್ನು ಪಡೆದವರೆಲ್ಲ ಕ್ರಿಮಿನಲ್ ಅಲ್ಲ... ದಿನಾ ಕೈಮುಗಿಯುವವರಿಗೆ ಆ ದೇವ್ರು ಕನಿಕರ ತೋರಿಸಲ್ಲ. ಆದರೆ ಜನರನ್ನು ಲೂಟಿ ಮಾಡೋರಿಗೆ ಆಯಸ್ಸು, ಆರೋಗ್ಯ, ಅಧಿಕಾರ, ಅಂತಸ್ತು, ಐಶ್ವರ್ಯ ಎಲ್ಲ ಕೊಡ್ತಾನೆ. ದೇವರು ಆವಾಗಾವಾಗ ರಾಜಕಾರಣ ಮಾಡ್ತಾನೆ...

36 ನೀಲಿ ಮಾತುಗಳು ;

೨೦) ಅಪ್ಪನ ಅಂಗಿ ಜೇಬಿನಿಂದ ಹಣಕದ್ದು ಎಂಡ್ರಾಯಿಡ ಮೊಬೈಲ್ ತಗೋಳೋ ಕಳ್ಳನನ್ ಮಕ್ಕಳೇ ಮಹಾನುಭಾವರಂತೆ ಭಾಸವಾಗುತ್ತಾರೆ... ಮುಂಚೆ ಯಾರನ್ನಾದರೂ ಹಾಳು ಮಾಡಬೇಕೆಂದರೆ ಅವರನ್ನು ಒತ್ತಾಯಿಸಿ ಎಲೆಕ್ಷನಗೆ ನಿಲ್ಲಿಸುತ್ತಿದ್ದರು. ಆದರೆ ಈಗ ಅಷ್ಟೊಂದು ಕಷ್ಟಪಡಬೇಕಿಲ್ಲ. ಅವರ ಕೈಗೊಂದು ಮೊಬೈಲ್ ಕೊಟ್ಟು ಒಂದು ಫೇಸ್ಬುಕ್ ಅಕೌಂಟ ಮಾಡಿಕೊಟ್ಟರೆ ಸಾಕು, ಅವರು ಹತ್ತು ಜನ್ಮಕ್ಕಾಗುವಷ್ಟು ಹಾಳಾಗುತ್ತಾರೆ... ಹವಾ ಹಾಕೋರು ಡಮ್ಮಿ ಫ್ರೆಂಡ್ಸ್. ಪ್ರತಿಕ್ಷಣ ಬೈಯ್ದು ಬುದ್ಧಿವಾದ ಹೇಳಿ ಹವಾ ಮಾಡಿಸೋರು ರಿಯಲ್ ಫ್ರೆಂಡ್ಸ್...

36 ನೀಲಿ ಮಾತುಗಳು ;

೨೧) ಸೊನ್ನೆ ಕಂಡು ಹಿಡಿದ ಭಾರತೀಯರಿಗೆ ಗೌರವ ಸಲ್ಲಿಸಲು ನಮ್ಮ ಹುಡುಗರು ಪ್ರತಿ ಎಕ್ಸಾಂಲ್ಲಿ ದೊಡ್ಡ ಸೊನ್ನೆಯನ್ನು ಸಾಧಿಸುತ್ತಾರೆ. ಸಾಲದಕ್ಕೆ "ನಾನು ಮ್ಯಾಥ್ಸನಲ್ಲಿ ಸ್ಟ್ರಾಂಗ ಅಂತಾ ಪ್ರೂವ ಮಾಡೋಕೆ ಆಕಾಶದಲ್ಲಿರೋ ನಕ್ಷತ್ರಗಳನ್ನೆಲ್ಲ ಲೆಕ್ಕ ಹಾಕಿ ಹೇಳಲಾ...?" ಎಂದು ಕೇಳುತ್ತಾರೆ. ಸುಮ್ಮನಿರಲಾರದೆ ಸುಮಸುಮ್ಮನೆ ತರ್ಲೆ ಮಾಡಿ ಜಿರ್ಲೆ ಬಿಟ್ಕೊಂಡು ಒದ್ದಾಡುವುದರಲ್ಲಿ ಹುಡುಗರು ಎಕ್ಸಪರ್ಟು... 

36 ನೀಲಿ ಮಾತುಗಳು ;

೨೨) ಅಣ್ತಮ್ಮಂದಿರ ಕಾದಾಟದಲ್ಲಿ ನೆರೆಮನೆ ಕೂಸು ಶ್ರೀಮಂತವಾಯ್ತು... ಪ್ರೇಮಿಗಳ ಕಿತ್ತಾಟದಲ್ಲಿ ಪ್ರೀತಿಕೂಸು ಪರದೇಶಿಯಾಯ್ತು... ಪ್ರೀತಿಸುವವರಿಗೆ ಕಾಡಿಗೆ ಸೌಂದರ್ಯವನ್ನು ಹೆಚ್ಚಿಸುವ ದೃಷ್ಟಿ ಬೊಟ್ಟಾಗುತ್ತದೆ. ಆದ್ರೆ ಅದೇ ಕಾಡಿಗೆ ದ್ವೇಷಿಸುವವರಿಗೆ ಕಳಂಕಾನೂ ತರುತ್ತೆ... ಲವ್ವರ್ನಾ ಕಳ್ಕೊಂಡ ಬಿಡಿ, ನಿಮಗೆ ಲೈಫ್ ಏನಂತಾ ಚೆನ್ನಾಗಿ ಅರ್ಥವಾಗುತ್ತೆ...

36 ನೀಲಿ ಮಾತುಗಳು ;

೨೩) ಜನನಾಯಕರ ಹಗರಣಗಳ ನಡುವೆ ಜನ ಸಾಮಾನ್ಯರ ಪ್ರಾಣಹರಣವಾಗ್ತಿದೆ. ರೈತರ ಬೆನ್ನೆಲುಬನ್ನೆ ಮುರಿದು ದೇಶ ಕಟ್ಟೋಕೆ ಹೊರಟೀರೋ ಮುಠ್ಠಾಳರಿಗೆ ಬುದ್ಧಿ ಎಲ್ಲಿದೆ? ಕರ್ನಾಟಕದಲ್ಲಿ ಸಿನಿಮಾ ಸ್ಟಾರಗಳಿಗಿಂತ ಸೀರಿಯಲ್ ಸುಂದರಿಯರೇ ಜಾಸ್ತಿ ಫೇಮಸ್ ಆಗೋ ಮೂಲಕ ಕಾವೇರಿ ನೀರಿಗಿಂತ ಕಣ್ಣೀರಿಗೇನೆ ಬೆಲೆ ಜಾಸ್ತಿ ಅಂತಾ ಪ್ರೂವ್ ಮಾಡಿದ್ದಾರೆ... ಕಣ್ಣೀಲ್ಲದ ಕಾನೂನನ್ನು ನಂಬಿಕೊಂಡು ನ್ಯಾಯದ ಕನಸು ಕಾಣ್ತೀರೋ ನಮ್ಮ ಜನಗಳನ್ನು ನೋಡಿದರೆ ಕರಳು ಪ್ಯಾಥೋಸಾಂಗಿಗೆ ತಮಟೆ ಬಾರಿಸಿ ಕುಣಿದಾಡಿದಂತಾಗುತ್ತೆ...

36 ನೀಲಿ ಮಾತುಗಳು ;

೨೪)  ದೇವತೆಗಳ ರಾಜ ದೇವೆಂದ್ರನಿಗಿಂತ ರಾಕ್ಷಸರ ರಾಜ ರಾವಣನೇ ಎಷ್ಟೋ  ವಾಸಿ. ಯಾಕ ಗೊತ್ತಾ? ತಾನು ಮೋಹಿಸಿದ ಸೀತೆಯ ಮೇಲೆ ರಾವಣ ಅತ್ಯಾಚಾರ ಮಾಡಲಿಲ್ಲ. ಆದ್ರೆ ದೇವೇಂದ್ರ ತಾನು ಮೋಹಿಸಿದ ಅಹಲ್ಯೆಯ ಮೇಲೆ ಆಕೆಯ ಅರಿವಿಗೆ ಬಾರದಂತೆ ಅತ್ಯಾಚಾರವೆಸಗಿದ... ಗಾಂಧಾರಿ ಪತಿಪುತ್ರರ ವಿಷಯದಲ್ಲಿ ಕಣ್ಣೀದ್ದು ಕುರುಡಿಯಾಗಿದ್ದಳು. ಅದು ಅವಳ ತ್ಯಾಗ. ಆದ್ರೆ ಕುಂತಿ ಕರ್ಣನ ವಿಷಯದಲ್ಲಿ ಬಾಯಿದ್ದು ಮೂಕಿಯಾಗಿದ್ದಳು. ಅದು ಖಂಡಿತ ಅವಳ ಅಸಹಾಯಕತೆಯಲ್ಲ. ಅದಕ್ಕಾಗಿ ನಾನು ಕುಂತಿಯಂಥ ತಾಯಿಯನ್ನು, ಶಕುನಿಯಂಥ ಸಂಬಂಧಿಯನ್ನು, ದ್ರೋಣಾಚಾರ್ಯನಂಥ ಗುರುವನ್ನು ದ್ವೇಷಿಸುತ್ತೇನೆ...

36 ನೀಲಿ ಮಾತುಗಳು ;

೨೫) ಜೀವನದಲ್ಲಿ ದುರ್ಯೋಧನನಂಥ ದೋಸ್ತ ಬೇಕು. ಅರ್ಜುನನಂಥ ದುಶ್ಮನ್ ಬೇಕು. ಚಾಣಕ್ಯನಂಥ ಗುರು ಬೇಕು. ರಾಧೆಯಂಥ ಪ್ರೇಯಸಿ ಬೇಕು. ಕೊನೆಗೆ ಭೀಷ್ಮನಂತೆ ಬಯಸಿದಾಗ ಬರೋ ಸಾವು ಬೇಕು... ತಾಯಿಯ ಮೇಲಿನ ನಿಷ್ಠೆಯನ್ನು ರಾವಣನನ್ನು ನೋಡಿ ಕಲಿಯಬೇಕು. ತಂದೆ ಮೇಲಿನ ಗೌರವವನ್ನು ರಾಮನನ್ನು ನೋಡಿ ಕಲಿಯಬೇಕು. ರಾಮಾಯಣ ಮಹಾಭಾರತ ಮುಗಿದರೂ ಶಕುನಿ, ಶೂರ್ಪನಖಿ, ರಾವಣ, ಕೀಚಕ, ಪಾಂಚಾಲಿಯರು ಹುಟ್ಟುತ್ತಲೇ ಇರುತ್ತಾರೆ. ಅವರನ್ನು ಸಂಹರಿಸಲು ಶ್ರೀರಾಮ ಶ್ರೀಕೃಷ್ಣರು ಹುಟ್ಟಿ ಬಂದೇ ಬರುತ್ತಾರೆ...

36 ನೀಲಿ ಮಾತುಗಳು ;

೨೬) ಕಾಲೇಜ್ನಲ್ಲಿ ಈ ಪ್ರೀತಿ ಪ್ರೇಮದ ಮೇಲೆ ಯಾಕೊಂದು ವಿಚಾರ ಸಂಕೀರಣ ಅಂದ್ರೆ ಸೆಮಿನಾರ ನಡೆಸಬಾರದು...? ಯಾಕಂದ್ರೆ ಸದ್ಯಕ್ಕೆ ಈ ಪ್ರೀತಿ ಎಂಬುದು ಅತೃಪ್ತ ಹೃದಯಗಳ ಫ್ಯಾಷನ್ ಶೋ ಆಗಿದೆ. ಈ ಹೃದಯಗಳ ಮೇಲೆ ಪ್ರೇಯಸಿಯರು ಕ್ಯಾಟ್ ವಾಕ್ ಮಾಡ್ತಾರೆ... ಓದೋ ಆಸೆಯಿದ್ದವನು ಟ್ರೈನ್ ಮೇಲೆ ಕುಂತ್ರು ಓದ್ತಾನೆ. ಪ್ರೀತಿಸುವ ಆಸೆಯಿದ್ದವಳು ಜಗತ್ತೇ ಎದುರಾಗಿ ನಿಂತ್ರು ಹೃದಯಕ್ಕೆ ಗಂಡುಗಚ್ಚೆ ಹಾಕಿ ಪ್ರೀತಿಸ್ತಾಳೆ. ಅದಕ್ಕಾಗಿ ಚಳಿಯಾದಾಗಲೇ ಸ್ವೆಟರ್ ಜೊತೆ ಮುದ್ದಾಡಬೇಕು. ಮಳೆಯಾದಾಗಲೇ ಕೊಡೆ ಜೊತೆ ಗುದ್ದಾಡಬೇಕು. ಪ್ರಾಯ ಬಂದಾಗಲೇ ಹೃದಯಕ್ಕೆ ಪ್ರೀತಿ ಗಾಯ ಮಾಡ್ಕೋಬೇಕು. ಯೌವ್ವನ ಬಂದಾಗಲೇ ಯುವತಿಗಾಗಿ ಸ್ನೇಹಿತರನ್ನು ಸವತಿ ಮಾಡ್ಕೋಬೇಕು...

36 ನೀಲಿ ಮಾತುಗಳು ;

೨೭) ರಾಜತಂತ್ರಕ್ಕೂ, ಪಂಚತಂತ್ರಕ್ಕೂ, ಪ್ರಜಾತಂತ್ರಕ್ಕೂ ಯಾವಾಗಲೂ ವೈಷಮ್ಯ ಇದ್ದೇ ಇರುತ್ತದೆ. ನೀವು ಧರ್ಮಸಮ್ಮತವಾಗಿರುವಾಗ ಶಕುನಿಗಳ ಕಪಟ ಪ್ರತಿಜ್ಞೆಗಳಿಗೆ ಹೆದರುವ ಅವಶ್ಯಕತೆ ಇಲ್ಲ.  ಸುಳ್ಳನ್ನು ಪದೇಪದೇ ಹೇಳುವುದರಿಂದ ಅದು ಒಂದಿನ ಸತ್ಯವಾಗಿ ಬಿಡುತ್ತದೆ. ಸತ್ಯವನ್ನು ಹೇಳದೆ ಹೋದರೆ ಅದು ಅಸ್ತಿತ್ವ ಕಳೆದುಕೊಂಡು ಒಂದಿನ ಸುಳ್ಳಾಗಿ ಬಿಡುತ್ತದೆ. ನಮ್ಮ ನೆರಳನ್ನು ನಾವೇ ಹಿಡಿಯೋಕ್ಕಾಗಲ್ಲ. ಆದ್ರೆ ಅದೇ ನೆರಳು ಮಧ್ಯಾಹ್ನ 12 ಗಂಟೆಗೆ ನಮ್ಮ ಕಾಲ ಕೆಳಗೆ ಬಿದ್ದಿರುತ್ತೆ...

36 ನೀಲಿ ಮಾತುಗಳು ;

೨೮) ಯುದ್ಧ, ಚುನಾವಣೆ, ಸ್ನೇಹ, ಪ್ರೀತಿ ಇತ್ಯಾದಿಗಳಲ್ಲಿ ಪಕ್ಷಾಂತರ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೀತಿಯಲ್ಲಿಯೂ ಸಹ "ಪಕ್ಷಾಂತರ ವಿರೋಧಿ ಕಾಯ್ದೆ"ಯನ್ನು ಜಾರಿಗೆ ತರಲೇಬೇಕಾದ ಸಂದರ್ಭ ಬಂದಿದೆ. ಅದಕ್ಕಾಗಿ "ಬಣ್ಣಬಣ್ಣದ ಚಿಟ್ಟೆಗಳನ್ನು ಪ್ರೀತಿಸಿ ಕೆಟ್ಟೆ, ಪ್ರೀತಿ ಪ್ರೇಮ ಅಂತಾ ನನ್ನ ಕನಸ್ಸನ್ನು ನಾನೇ ಸುಟ್ಟೆ, ನನ್ನ ಭವಿಷ್ಯವನ್ನು ನಾನೇ ಬಲಿಕೊಟ್ಟೆ" ಅಂತಾ ಬಾಯಬಡ್ಕೋಳೊ ಮಟ್ಟಕ್ಕೆ ಪ್ರೀತಿಸಬೇಡಿ...

36 ನೀಲಿ ಮಾತುಗಳು ;

೨೯) ಸಜ್ಜನರ ಸಲಹೆಗಳನ್ನು ತಿರಸ್ಕರಿಸಬೇಡಿ. ದುರ್ಜನರ ಸಲಹೆಗಳನ್ನು ಪುರಸ್ಕರಿಸಬೇಡಿ.  "ಕರಗೋಗ್ತೀನಿ ಅನ್ನೋ ಸ್ವಾರ್ಥದಿಂದ ಕ್ಯಾಂಡಲ್ ಸುಮ್ನಿದ್ರೆ, ನಮಗೆಲ್ಲ ಬೆಳಕು ಸಿಗುತ್ತಿತ್ತಾ? ನಮಗೆ ಕೆಟ್ಟದಾದರೂ ಇನ್ನೊಬ್ಬರಿಗೆ ಒಳ್ಳೆದಾಗುತ್ತಿದ್ರೆ ನಾವು ಸಾಯೋಕೆ ತಯಾರಾಗಬೇಕು..." ಎಂದೆಲ್ಲ ಭಾಷಣ ಬಿಗಿಯುವವನು ಯಾವುದೇ ತ್ಯಾಗ ಮಾಡದೆ ಬೇರೆಯವರನ್ನು ಬಲಿಕೊಟ್ಟು ತಾನು ಬಚ್ಚಲ ಮನೆಯಲ್ಲಿ ಅಡಗಿ ಕುಳಿತ್ತಿರುತ್ತಾನೆ...

36 ನೀಲಿ ಮಾತುಗಳು ;

೩೦) ದೀಪವನ್ನೇ ತಿಂತೀನಿ ಅಂತಾ ಬರೋ ಮಿನುಕು ಹುಳುವಿಗೆ, ದೀಪ ತನ್ನನ್ನು ತಿನ್ನುತ್ತೆ ಅನ್ನೋದರ ಬಗ್ಗೆ ಸ್ವಲ್ಪವೂ ಕಲ್ಪನೆ ಇರುವುದಿಲ್ಲ. ಗುಬ್ಬಚ್ಚಿಗಳ ಸೈನ್ಯವನ್ನು ಬಲಪಡಿಸಿ ರಣಹದ್ದಗಳನ್ನು ಸದೆಬಡಿಸುವ ಸಾಹಸ ನಿಜಕ್ಕೂ ಊಹಿಸಲಾಗದ ಎದೆಗಾರಿಕೆ. ಆದರೆ ಗೆಲುವು ನಮ್ಮ ಕಡೆಗೇನೆ ಇದೆ ಎಂದು ಭಾವಿಸೋದು ಕೂಡ ಒಂದು ದೊಡ್ಡ ದುರ್ಬಲತೆನೇ... ದುರ್ಬಲರ ಜೊತೆ ಹೋರಾಡಿ ಗೆದ್ದವನನ್ನು ಹೇಗಲೇರಿಸಿಕೊಂಡು ಮೆರೆಸೋ ಬದಲು, ಬಲಿಷ್ಟರ ಜೊತೆ ಹೋರಾಡಿ ಸೋತವನನ್ನು ಬೆನ್ನು ಚಪ್ಪರಿಸಿ ಬೆಳೆಸಿ...

36 ನೀಲಿ ಮಾತುಗಳು ;

೩೧) ನಿಮ್ಮ ಸಾಕ್ಷರತೆ ಪ್ರಮಾಣ,  IQ ವ್ಯಾಲ್ಯು, ರೀಡಿಂಗ್, ರೈಟಿಂಗೆಲ್ಲ ಇಂಪ್ರೂವ ಆಗಬೇಕಾದರೆ ದಿನಾಲು ತಪ್ಪದೆ ನಿಮ್ಮ ಪ್ರೀತಿಪಾತ್ರರಿಗೆ ಮೆಸೇಜ್ ಮಾಡಿ... ಸಾಧ್ಯವಾದ್ರೆ ನನ್ನನ್ನು ನಿಮ್ಮ ಪ್ರೀತಿಪಾತ್ರನನ್ನಾಗಿ ಮಾಡಿಕೊಳ್ಳಿ... ಬಹುಪತ್ನಿತ್ವಕ್ಕೆ ಬ್ರೇಕ್ ಬಿದ್ದಿದೆ. ಬಾಲ್ಯ ವಿವಾಹಕ್ಕೆ ಬ್ರೇಕ್ ಬಿದ್ದಿದೆ. ಆದ್ರೆ ಇನ್ನೂ ಬಹುಪ್ರೇಮತ್ವಕ್ಕೆ ಯಾಕ ಬ್ರೇಕ್ ಬಿದ್ದಿಲ್ಲ? ಎಲ್ಲಿದ್ದೀರಿ ಬುದ್ಧಿಯಿಲ್ಲದ ಬುದ್ಧಿಜೀವಿಗಳೇ..? ಹಜಾರದಲ್ಲಿ ಹಾಸಿಗೆ ಹಾಕಿ, ಹಳೇ ಹುಡುಗಿಯ ನೆನಪಿಗೆ ಸೊಳ್ಳೆ ಬತ್ತಿ ಹಚ್ಚಿ, ಕಣ್ಮುಚ್ಚಿ ಬಾಯ್ತೆರೆದು ಮಲಗಿದರೆ ಅಪ್ಸರೆ ಬಂದು ಮುತ್ತು ಕೊಡುತ್ತಾಳಂತೆ... 

36 ನೀಲಿ ಮಾತುಗಳು ;

೩೨) ಹೆಣ್ಮಕ್ಕಳ ನೋವುಗಳು ಸಾವಿರದೆಂಟು ಇರ್ತವೆ. ಆದ್ರೆ ಅವರು ಅವುಗಳನ್ನೆಲ್ಲ ಬೀದಿಯಲ್ಲಿ ಹೇಳಿಕೊಂಡು ಕಣ್ಣೀರ ಸಿಂಪಥಿ ಗಿಟ್ಟಿಸೋಕೆ ಇಷ್ಟಪಡಲ್ಲ. ಆದ್ರೆ ಗಂಡ್ಮಕ್ಕಳು ಯಾವುದೇ ಸಮಸ್ಯೆಗಳಿಲ್ಲದಿದ್ದರೂ ಬಾರ ಸಿಂಪಥಿ ಗಿಟ್ಟಿಸೋಕೆ ಕುಡಿದು ಸಾಯ್ತಾರೆ... ದಿನಾ ಬಾರಗೆ ಬಂದು ಬಾಟಲ್ ಮೇಲೆ ಬಾಟಲ್ ಖಾಲಿ ಮಾಡುತ್ತಾ ಭಾರತರತ್ನದ ಕನಸು ಕಾಣುವವರೂ ಇದ್ದಾರೆ...

36 ನೀಲಿ ಮಾತುಗಳು ;

೩೩) "ನನ್ನ ಹಣೆ ಬರಹಕ್ಕೆ ನಾನೇ ಹೊಣೆ, ಹೊಸ ಹಣೆಬರಹ ಬರೆಯಲು ನನ್ನಮ್ಮನಿಗೆ ಕೊಡಲೆ ನನ್ನ ಹಣೆ...? ಈ ಭೂಮಿ ನನ್ನ ಗಂಡನ ಮನೆ. ಆ ಬಾನು ನನ್ನಯ ತವರು ಮನೆ...". ನಮ್ಮ ಹುಟ್ಟಿಗೆ ನಾವು ಕಾರಣರಲ್ಲ. ಆದರೆ ನಮ್ಮ ಸಾವಿಗೆ ನಾವೇ ಕಾರಣರು... ತಾಯಿ ಕೊಟ್ಟ ಜೀವಾನಾ ತಾಯ್ನಾಡಿಗೆ ಕೊಡೋಕೆ ನಾವು ಸದಾ ಸಿದ್ಧವಾಗಿರಬೇಕು...  ನಮ್ಮ ದು:ಖಕ್ಕೆ ಬೇರೆಯವರು ಕಾರಣವಾದ್ರೂ, ನಾವು ಬೇರೆಯವರ ದು:ಖಕ್ಕೆ ಕಾರಣರಾಗೋದು ಬೇಡ... ಅಳುಮುಂಜಿಗಳ ಮುಖದ ಮೇಲೆ ನಗು ತರಿಸೋದು ಅಷ್ಟೊಂದು ಸುಲಭದ ಕೆಲಸವಲ್ಲ. ಬೇರೆಯವರ ನಗುವಿಗೆ ನಾವು ಕಾರಣ ಅಂತಾ ಗೊತ್ತಾದಾಗ ಆಗೋ ಖುಷಿಯೇ ಬೇರೆ. ಅದಕ್ಕೆ ನೊಂದವರನ್ನು ನಗಿಸಿ...

36 ನೀಲಿ ಮಾತುಗಳು ;

೩೪) ಜೀವನ ಒನ್ ವೇ ರೋಡ ಇದ್ದಂಗೆ. ವಾಪಸ್ ಅದೇ ರೋಡಲ್ಲಿ ಬರೋಕ್ಕಾಗಲ್ಲ. ಬಂದ್ರು ಬದಕ್ಕಾಗಲ್ಲ... ಹಾರ್ಟಲ್ಲಿ ಏನಾದ್ರೂ ಪೇನ್ (Pain) ಇದ್ರೇನೆ ಬ್ರೇನಲ್ಲಿ ಏನಾದ್ರೂ ಮಾಡಬೇಕು ಅನ್ನೋ ಛಲ ಹುಟ್ಟುತ್ತೆ... ದುಡ್ಡು ಗಳಿಸಿ ಇಲ್ಲ ಜ್ಞಾನ ಗಳಿಸಿ. ಆದ್ರೆ ಸುಮ್ಮನೆ ಟೈಮ ವೇಸ್ಟ ಮಾಡಬೇಡಿ... ನಿಮಗೆ ವಿರೋಧಿಗಳು ಬೇಕಿದ್ರೆ ಒಳ್ಳೇ ಕಾರ್ಯ ಮಾಡಿ. ಸಾಧಿಸಲು ಶುರುಮಾಡಿ... ಮಾಡೋದಕ್ಕೆ ಕೆಲ್ಸ ಸಿಕ್ರೆ ಮಾತ್ರ ತಿನ್ನೋದಕ್ಕೆ ಅನ್ನ ಸಿಗುತ್ತೆ... ಕಷ್ಟಗಳು ಬಂದಾಗ ಕಣ್ಣೀರು ಸುರಿಸೋ ಬದಲಾಗಿ ಬೆವರು ಸುರಿಸಿ... ಸಾವಿನ ಕಥೆಗೆ ಹುಟ್ಟೇ ಮುನ್ನುಡಿ. ನಗುವಿನ ಅಲೆಗೆ ಅಳುವೇ ಬೆನ್ನುಡಿ. ಸಾಧನೆಗೆ ಸೋಲೆ ಬುನಾದಿ...

36 ನೀಲಿ ಮಾತುಗಳು ;

೩೫) ಫ್ಯಾನ್ ಕೆಳಗೆ ಕುಂತು ಹರಟೆ ಹೊಡೆಯೊನಿಗೆ ಕೋಡೋ ಗೌರವದಲ್ಲಿ ಅರ್ಧದಷ್ಟನ್ನು ಬಿಸಿಲಲ್ಲಿ ಕೆಲ್ಸ ಮಾಡೋ ರೈತರಿಗೆ ಕೊಟ್ಟಿದ್ರೆ ಇವತ್ ನಮ್ಮ ದೇಶ ಹೀಗೀರುತ್ತಿರಲಿಲ್ಲ... ರಾತ್ರಿ ಬ್ರಾಂಡಿ ಕುಡಿದು ತೂರಾಡೋರು ದಿನಾ ಬೆಳಿಗ್ಗೆ ಗಾಂಧೀಮಂತ್ರ ಹೇಳ್ತಾರೆ... ನಮ್ಮ ದೇಶದ ಕಾನೂನಿಗೆ ಕಣ್ಣು ಬರೋವರೆಗೂ ಕಾಮಕಾಂಡಗಳು ನಡೆಯುತ್ತಲೇ ಇರುತ್ತವೆ...

36 ನೀಲಿ ಮಾತುಗಳು ;

೩೬) ಬಿದ್ದಾಗ ಹೆಗಲ ಮೇಲೆ ಕೈಹಾಕಿ ಸಮಾಧಾನ ಮಾಡಿ, ಗೆದ್ದಾಗ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋನೆ ನಿಜವಾದ ಗೆಳೆಯ... ಕಷ್ಟಗಳನ್ನು ಕೆದಕಿ ಕೇಳುವವನು ಗೆಳೆಯನಲ್ಲ. ಕಷ್ಟಗಳನ್ನು ಅರ್ಥ ಮಾಡ್ಕೊಂಡು ಇಷ್ಟಪಟ್ಟು ಸಹಾಯ ಮಾಡುವವನೆ ನಿಜವಾದ ಗೆಳೆಯ...  ಗೊಳ್ಳು ಗೆಳೆಯರ ಭಾವನಾ ಪ್ರಪಂಚದಲ್ಲಿ ನೀವು ಮುಳುಗಿ ಒದ್ದಾಡಬೇಡಿ... 


36 ನೀಲಿ ಮಾತುಗಳು ;

Blogger ನಿಂದ ಸಾಮರ್ಥ್ಯಹೊಂದಿದೆ.