ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

          ಓ ನನ್ನ ಪ್ರೀತಿಯ ಶತ್ರುಗಳೇ, ನೀವು ನನ್ನ ಎಷ್ಟೇ ದ್ವೇಷಿಸಿದರೂ ನಾ ಮಾತ್ರ ನಿಮ್ಮನ್ನು ದ್ವೇಷಿಸುವುದೂ ಇಲ್ಲ, ಪ್ರೀತಿಸುವುದೂ ಇಲ್ಲ. ನಿಮ್ಮನ್ನು ಪ್ರೀತಿಸಲು ಅಥವಾ ದ್ವೇಷಿಸಲು ನನ್ನಿಂದ ಸಾಧ್ಯವಿಲ್ಲ. ಏಕೆಂದರೆ ನನ್ನ ಬಳಿ ಅಷ್ಟೊಂದು ಸಮಯವಿಲ್ಲ. ನನಗೆ ನನ್ನ ಕೆಲಸವೇ ಮುಖ್ಯ ಹೊರತು ನೀವಲ್ಲ. ನಿಮ್ಮನ್ನು ನಾನು ಗೆಲ್ಲುವುದೂ ಇಲ್ಲ, ಕೊಲ್ಲುವುದೂ ಇಲ್ಲ. ಆದರೆ ಖಂಡಿತ ಒಂದಿನ ನೀವು ನನ್ನನ್ನು  ನೋಡಿ ಹೊಟ್ಟೆ ಉರಿದುಕೊಳ್ಳುವಂತೆ ಮಾಡೇ ಮಾಡುತ್ತೇನೆ ಎಂದೆಲ್ಲ ನಾನು ಅಂದುಕೊಳ್ಳುವುದಿಲ್ಲ...

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

          ಓ ನನ್ನ ಪ್ರೀತಿಯ ಶತ್ರುಗಳೇ, ನಾನು ನಿಮಗೆ ಸದಾ ಚಿರಋಣಿಯಾಗಿರುತ್ತೇನೆ. ಏಕೆಂದರೆ ನೀವು ನನಗೆ ಅನೇಕ ಜೀವನ ಪಾಠಗಳನ್ನು ಕಲಿಸಿದ್ದೀರಿ. ಕಷ್ಟಗಳ ಮೇಲೆ ಕಷ್ಟಗಳನ್ನು ನೀಡಿ ನನ್ನನ್ನು ಬಲಿಷ್ಟನನ್ನಾಗಿ ಮಾಡಿದ್ದೀರಿ. ನಾನು ಹೋಗುವ ದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ಎಸೆದು ನನ್ನ ಉತ್ಸಾಹವನ್ನು, ಛಲವನ್ನು, ಧೈರ್ಯವನ್ನು ಇಮ್ಮಡಿಗೊಳಿಸಿದ್ದೀರಿ. ನೀವು ನನ್ನಲ್ಲಿರುವ ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದಾಗಿ ಎತ್ತಿ ತೋರಿಸಿ ನನಗೆ ತಿದ್ದಿಕೊಳ್ಳಲು ಮಾರ್ಗದರ್ಶನ ಮಾಡಿರುವಿರಿ. ಎಷ್ಟೋ ಸಲ ನನ್ನ ಗೆಳೆಯರೇ ನನ್ನ ತಪ್ಪುಗಳನ್ನು ಮುಚ್ಚಿಟ್ಟು ನನಗೆ ತಿದ್ದಿಕೊಳ್ಳಲು ಅವಕಾಶ ನೀಡಿರಲಿಲ್ಲ. ಆದರೆ ನೀವು ನನಗೆ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಿರುವಿರಿ. ಹೀಗಿರುವಾಗ ನಾನೇಕೆ ನಿಮ್ಮನ್ನು ದ್ವೇಷಿಸಲಿ? ನಿಮ್ಮನ್ನು ದ್ವೇಷಿಸಿ ನನ್ನ ಸಮಯವನ್ನು ವ್ಯರ್ಥ ಮಾಡಲಿ...?
ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article
      ಓ ನನ್ನ ಪ್ರೀತಿಯ ಶತ್ರುಗಳೇ, ಮುಂಚೆ ನಾನು ನಿಮ್ಮಿಂದ ನೋವನ್ನು ಅನುಭವಿಸಿರಬಹುದು. ಆದರೆ ಇನ್ಮುಂದೆ ನಿಮ್ಮಿಂದ ನಾನು ನೋವನುಭವಿಸಲು ಸಾಧ್ಯವೇ ಇಲ್ಲ. ಏಕೆಂದರೆ ನಾನೀಗ ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಬಲಿಷ್ಟನಾಗಿರುವೆ. ನೀವು ನನ್ನನ್ನು ನೋಯಿಸಲಾರಿರಿ. ಏಕೆಂದರೆ ನೀವು ನನಗೆ ಏನು ಅಲ್ಲ. ನನ್ನ ಪ್ರೇಯಸಿ ಮಾತ್ರ ನನ್ನನ್ನು ನೋಯಿಸಬಲ್ಲಳು. ಯಾಕೆಂದರೆ ಅವಳು ನನ್ನ ಮನಸ್ಸಲ್ಲಿದ್ದಾಳೆ. ಆದರೆ ನೀವು ನನ್ನಲ್ಲಿಲ್ಲ. ಹೀಗಾಗಿ ನೀವು ನನಗೆ ನೋವನ್ನು ನೀಡಲಾರಿರಿ...

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

             ಓ ನನ್ನ ಪ್ರೀತಿಯ ಶತ್ರುಗಳೇ, ನಿಮ್ಮನ್ನು ಕೊಲ್ಲಲು ನನಗೆ ಯಾವುದೇ ಆಯುಧ ಬೇಕಿಲ್ಲ. ನಿಮ್ಮನ್ನು ಕೊಲ್ಲಲು ನನ್ನ ಒಂದು ನಗು ಸಾಕು. ಅಷ್ಟಕ್ಕೇ ನೀವು ಜಲಸಿಯಿಂದ ಹೊಟ್ಟೆ ಉರಿದುಕೊಂಡು ಸತ್ತೊಗುತ್ತೀರಾ. ನನ್ನ ಗೆಳೆಯರಿಗೆ ನನ್ನ ವೀಕನೆಸ್ಸುಗಳು ಮಾತ್ರ ಗೊತ್ತಿವೆ. ಆದರೆ ನನ್ನ ಸಾಮರ್ಥ್ಯ ನಿಮಗೆ ಮಾತ್ರ ಗೊತ್ತಿದೆ. ನೀವು ನನ್ನನ್ನು ದ್ವೇಷಿಸುವುದರಿಂದಲೇ ನಾನು ಜಗತ್ತನ್ನು ಪ್ರೀತಿಸುವುದನ್ನು ಕಲಿತಿರುವೆ. ನೀವು ದ್ವೇಷಿಸುವುದರಿಂದಲೇ ನಾನು ಸರಿಯಾಗಿ ಕೆಲಸ ಮಾಡುತ್ತಿರುವೆ. ನಿಮ್ಮಿಂದಲೇ ನಾನು ಬಲಿಷ್ಟನಾಗಿರುವೆ...

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

         ಓ ನನ್ನ ಪ್ರೀತಿಯ ಶತ್ರುಗಳೇ, ನಿಮ್ಮೆದೆಯಲ್ಲಿ ಕತ್ತಲಿದೆ. ಅದಕ್ಕೆ ನೀವು ಸುಂದರವಾದ ರಾತ್ರಿಯನ್ನು ದ್ವೇಷಿಸುತ್ತಿರುವಿರಿ. ಹೀಗಿರುವಾಗ ನಾನೇಕೆ ನಿಮ್ಮನ್ನು ದ್ವೇಷಿಸಲಿ?. ನಿಜ ಹೇಳುತ್ತಿರುವೆ "ನನಗೆ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲೇಬೇಕು" ಎಂಬ ಛಲ ಹುಟ್ಟಿದ್ದು ನೀವು ಕೊಟ್ಟ ಕಾಟಗಳಿಂದಲೇ. ನಿಮ್ಮಿಂದ ನನಗೆ ಯಾವುದೇ ಹಾನಿಯಾಗಿಲ್ಲ. ಅದರ ಬದಲಾಗಿ ಲಾಭವೇ ಆಗಿದೆ. ಆದರೆ ನನ್ನನ್ನು ದ್ವೇಷಿಸಿ ನೀವು ನಿಮ್ಮ ಸಮಯ, ಶಕ್ತಿಗಳೆರಡನ್ನು ಹಾಳು ಮಾಡಿರುವಿರಿ. ನೀವು ಹೀಗೆ ನನ್ನ ದ್ವೇಷಿಸುತ್ತಲೇ ಇರಿ. ನಾನು ಹಾಗೇ ಎತ್ತರಕ್ಕೆ ಬೆಳೆಯುತ್ತಲೇ ಇರುತ್ತೇನೆ. ಮುಂದೆ ಒಂದಲ್ಲ ಒಂದಿನ ನೀವು ಎಸೆದ ಕಲ್ಲುಗಳಿಂದಲೇ ನಾನು ನನ್ನ ಕನಸಿನ ಅರಮನೆಯನ್ನು ಕಟ್ಟುತ್ತೇನೆ...

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

                           ಪ್ರತಿಯೊಬ್ಬರ ಜೀವನದಲ್ಲಿ ಮಿತ್ರರಿಲ್ಲದಿದ್ದರೂ ಶತ್ರುಗಳು ಇದ್ದೇ ಇರುತ್ತಾರೆ. ಶತ್ರುಗಳಿರದಿದ್ದರೂ ನಮ್ಮ ಏಳ್ಗೆಯನ್ನು ಸಹಿಸದೆ ಹೊಟ್ಟೆ ಉರಿದುಕೊಳ್ಳುವ ದ್ವೇಷಿಗಳಾದರೂ ಇರುತ್ತಾರೆ. ನಿಮ್ಮ ಜೀವನದಲ್ಲಿಯೂ ಶತ್ರುಗಳಿದ್ದಾರೆ ಎಂಬುದು ನನಗೆ ಗೊತ್ತು. ನಿಮಗೆ ಧೈರ್ಯ ತುಂಬಿ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ನಾನು ಈ ಅಂಕಣವನ್ನು ಬರೆದಿರುವೆ ಅಷ್ಟೇ.  ಬೇರೆ ಯಾವ ಉದ್ದೇಶವೂ ಇಲ್ಲ. ಪ್ರತಿಸಲ ಶತ್ರುಗಳನ್ನು ಗೆಲ್ಲೊಕ್ಕಾಗಲ್ಲ, ಕೆಲವು ಸಲ ಕೊಲ್ಲಲೇಬೇಕಾಗುತ್ತದೆ ಎಂಬ ಮಾತು ಬೇರೆ. ಹೊರಗಿನ ಶತ್ರುಗಳ ಜೊತೆ ಹೋರಾಡಿ ಅವರನ್ನು ಗೆಲ್ಲಬಹುದು ಇಲ್ಲ ಕೊಲ್ಲಬಹುದು. ಆದರೆ ಒಳಗಿನ ಹಿತಶತ್ರುಗಳ ಜೊತೆ ಹೋರಾಡುವುದು ಕಷ್ಟಸಾಧ್ಯ. ಏಕೆಂದರೆ ನಮ್ಮ ಹಿತಶತ್ರುಗಳು ನಮ್ಮ ಕಣ್ಣಿಗೆ ಬೀಳುವ ಮೊದಲೇ ನಾವು ಹಾಳಾಗಿರುತ್ತೇವೆ. ಶತ್ರುಗಳಿಗಿಂತ ಹಿತಶತ್ರುಗಳೇ ಅಧಿಕ ಅಪಾಯಕಾರಿಗಳಾಗಿರುತ್ತಾರೆ.

ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article

                           "ನಿಮ್ಮ ಶತ್ರುಗಳನ್ನು ಪ್ರೀತಿಸಿ" ಎಂದು ನಾನು ಹೇಳಲಾರೆ. ಆದರೆ "ಅವರನ್ನು ದ್ವೇಷಿಸುತ್ತಾ ನೀವು ಅವನತಿಯ ಹಾದಿಯನ್ನು ಹಿಡಿಯಬೇಡಿ" ಎಂದಷ್ಟೇ ನಾನು ಹೇಳಬಲ್ಲೆ. ನಿಮ್ಮನ್ನು ಬೇರೆಯವರು ದ್ವೇಷಿಸುತ್ತಾರೆ ಎಂದರೆ ನಿಮ್ಮಲ್ಲಿ ಏನೋ ಒಂದು ವಿಶೇಷತೆ ಇದೆ ಎಂದರ್ಥ. ಆದರೆ ನೀವು ವಿನಾಕಾರಣ ಬೇರೆಯವರನ್ನು ದ್ವೇಷಿಸುತ್ತಿದ್ದರೆ ನೀವು ಜಲಸಿಯಿಂದ ಉರಿಯುವ ಖಾಲಿಡಬ್ಬ ಎಂದರ್ಥ. ನಿಮ್ಮ ಶತ್ರುಗಳ ವಿಚಾರ ನಿಮಗೆ ಬಿಟ್ಟಿದ್ದು. ನೀವು ಯಾರನ್ನೋ ದ್ವೇಷಿಸಿ ನಿಮ್ಮ ಶಕ್ತಿ ಹಾಗೂ ಸಮಯವನ್ನು ಹಾಳು ಮಾಡಿದರೆ ನನಗೇನು ನಷ್ಟವಿಲ್ಲ. ಅದು ನಿಮ್ಮ ನಷ್ಟ. ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ...


ನನ್ನ ಪ್ರೀತಿಯ ಶತ್ರುಗಳಿಗೆ - To My Dear Enemies - Kannada Motivational Article
Blogger ನಿಂದ ಸಾಮರ್ಥ್ಯಹೊಂದಿದೆ.