ನೆಪಗಳನ್ನು ಹೇಳುವುದನ್ನು ನಿಲ್ಲಿಸಿ - Kannada Motivational Articles - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ - Kannada Motivational Articles

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ - Kannada Motivational Articles

             ಕೆಲವರು ಕೆಲಸ ಮಾಡುವ ಮನಸ್ಸಿಲ್ಲದೆ ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಕೊರತೆಗಳನ್ನು ಎತ್ತಿ ತೋರಿಸಿ ಜವಾಬ್ದಾರಿಗಳಿಂದ ಜಾರಿಕೊಳ್ಳಲು ಯತ್ನಿಸುತ್ತಾರೆ. ಕೊರತೆಗಳು ಹಾಗೂ ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತವೆ. ಅದಕ್ಕಾಗಿ ಸಮಸ್ಯೆ ಅಥವಾ ಕೊರತೆಗಳು ನಿಮಗಷ್ಟೇ ಇವೆ ಎಂದು ಕೊರಗಬೇಡಿ. ನನಗೂ ಕೊರತೆಗಳಿವೆ. ಆದರೆ ನಾನು ಕೊರಗುವುದಿಲ್ಲ. ಕಷ್ಟಗಳಿಗೆ ನನ್ನ ಹೃದಯ ಕಲ್ಲಾಗಿದೆ. ಆದರೆ ಕೊರಗುವವರಿಗಾಗಿ ಕೆಲವು ಸ್ಪೂರ್ತಿಗಳು ಇಲ್ಲಿವೆ ;

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೧) "ನನಗೆ ಸರಿಯಾದ ಶಿಕ್ಷಣ ಸಿಗಲಿಲ್ಲ...'' ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಫೋರ್ಡ್ ಮೋಟಾರ್ಸ್ ಕಂಪನಿ ಮಾಲೀಕರಾದ 'ಹೆನ್ರಿ ಫೋರ್ಡ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರಿಗೂ ಉಚಿತ ಶಿಕ್ಷಣ ಸಿಕ್ಕಿರಲಿಲ್ಲ...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೨) "ನಾನು ಚಿಕ್ಕವನಿರುವಾಗಲೇ ನನ್ನ ತಂದೆ ತೀರಿಕೊಂಡರು..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ 'ಎ.ಆರ್.ರೆಹಮಾನ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಸಹ ಚಿಕ್ಕವರಿರುವಾಗಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೩) ''ನಾನು ಬಡ ಕುಟುಂಬದಲ್ಲಿ ಜನಿಸಿರುವೆ..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ 'ಡಾ. ಎ.ಪಿ.ಜೆ. ಅಬ್ದುಲ ಕಲಾಮ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಕೂಡ ಬಡ ಕುಟುಂಬದಲ್ಲಿ ಹುಟ್ಟಿ, ಬೆಳೆದು ಎಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೪) "ನನ್ನ ಅರ್ಧ ಜೀವನ ಸೈಕಲ್ ಮೇಲೆಯೇ ಕಳೆದು ಹೋಯಿತು..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ವಾಶಿಂಗ್ ಪೌಡರ್ ನಿರ್ಮಾ ಕಂಪನಿ ಮಾಲಿಕರಾದ 'ಕರ್ಸನ ಭಾಯಿ ಪಟೇಲ್' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಪ್ರಾರಂಭದಲ್ಲಿ ಸೈಕಲ್ ಮೇಲೆಯೇ ಮನೆಮನೆಗೂ ತೆರಳಿ ನಿರ್ಮಾ ಪೌಡರ್ ಮಾರಿ ಅರ್ಧ ಜೀವನ ಕಳೆದಿದ್ದರು...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೫) "ನನಗೆ ಬಾಲ್ಯದಿಂದಲೇ ಎಲ್ಲರು ಮಂದಬುದ್ಧಿಯೆಂದು ಹೀಯಾಳಿಸುತ್ತಾರೆ..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಬಲ್ಬನ್ನು ಕಂಡುಹಿಡಿದು ಜಗತ್ತಿಗೆ ಬೆಳಕು ಕೊಟ್ಟ 'ಥಾಮಸ್ ಆಲ್ವಾ ಎಡಿಸನ್' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಬಾಲ್ಯದಲ್ಲಿ ಅವರನ್ನು ಮಂದಬುದ್ಧಿಯೆಂದು ಶಾಲೆಯಿಂದ ಆಚೆ ಹಾಕಿದ್ದರು...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೬) ''ನಾನೊಂದು ಚಿಕ್ಕ ನೌಕರಿ ಮಾಡುತ್ತಿರುವೆ ಅದರಿಂದ ಏನಾಗುತ್ತದೆ...?'' ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ 'ಧೀರುಭಾಯ ಅಂಬಾನಿ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ರಿಲಯನ್ಸ ಕಂಪನಿ ಪ್ರಾರಂಭಿಸುವ ಮುಂಚೆ ಒಂದು ಚಿಕ್ಕ ನೌಕರಿ ಮಾಡುತ್ತಿದ್ದರು...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೭) ''ನನ್ನ ಕಂಪನಿ ಅಥವಾ ನಾನು ಕೂಡಿಟ್ಟ ಹಣವೆಲ್ಲ ದಿವಾಳಿಯಾಯಿತು..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಜಗತ್ತಿನ ಅತಿ ದೊಡ್ಡ ಕೂಲ್ ಡ್ರಿಂಕ್ಸ್ ಕಂಪನಿ 'ಪೆಪ್ಸಿ' ಕೋಲಾವನ್ನು ನೆನೆಸಿಕೊಳ್ಳಿ. ಯಾಕಂದ್ರೆ ಆ ಕಂಪನಿ ಎರಡು ಸಲ ದಿವಾಳಿಯಾಗಿ ಬೀದಿಗೆ ಬಂದರೂ ಮತ್ತೆ ಈಗ ನಂಬರ್ ಒನ್ ಸ್ಥಾನದಲ್ಲಿದೆ...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೮) "ನನ್ನತ್ರ ಸಾಕಷ್ಟು ದುಡ್ಡಿಲ್ಲ. ನಾನೇಗೆ ಬ್ಯುಸಿನೆಸ್ಸ್ ಸ್ಟಾರ್ಟ್ ಮಾಡಲಿ...?" ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಇನ್ಫೋಸಿಸನ ಸಹ ಸಂಸ್ಥಾಪಕರಾದ 'ನಾರಾಯಣ ಮೂರ್ತಿ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ತಮ್ಮ ಮಡದಿಯ ಒಡವೆಗಳನ್ನು ಮಾರಿ ಬ್ಯುಸಿನೆಸ್ಸ್ ಸ್ಟಾರ್ಟ್ ಮಾಡಿದ್ದರು.... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೯) "ನಾನು ಜಾಬ್ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆದೆ..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಅಲಿಬಾಬಾ ಗ್ರೂಪನ (Alibaba.com) ಮಾಲೀಕರಾದ 'ಜಾಕ್ ಮಾ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಒಟ್ಟು 30 ಜಾಬ್ ಇಂಟರ್ವ್ಯೂಗಳಲ್ಲಿ ರಿಜೆಕ್ಟ್ ಆಗಿ ಎಲ್ಲಿಯೂ ಕೆಲಸ ಸಿಗದೇ ಅಲಿಬಾಬಾ.ಕಾಮನ್ನು ಪ್ರಾರಂಭಿಸಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೧೦) "ನನ್ನ ಕೆಲಸವನ್ನು ಯಾರು ಅಪ್ರಿಸಿಯೇಟ ಮಾಡ್ತಿಲ್ಲ. ಬ್ಯಾಡ್ ಲಕ್ ನನ್ನ ಬೆನ್ನು ಬಿದ್ದಿದೆ..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಬರವಣಿಗೆಯಿಂದಲೇ ಬಿಲೆನಿಯರ್ ಆದ 'ಜೆ.ಕೆ.ರೋಲಿಂಗ್ಸ್' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರ ವಿಶ್ವವಿಖ್ಯಾತ "Harry Potter" ಕೃತಿ ಮೊದಲು 12 ಪ್ರಕಾಶನಗಳಿಂದ ಮುದ್ರಣ ಯೋಗ್ಯವಲ್ಲವೆಂದು ರಿಜೆಕ್ಟ್ ಆಗಿತ್ತು. ಆ ಸಮಯದಲ್ಲಿ ಅವರು ಗಂಡನಿಂದ ಡೈವೋರ್ಸ್ ಆಗಿದ್ದರು. ಜೊತೆಗೆ ಆರ್ಥಿಕವಾಗಿ ದಿವಾಳಿಯಾಗಿದ್ದರು... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೧೧) "ನಾನು ನೋಡೋಕೆ ಸುಂದರವಾಗಿಲ್ಲ...'' ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಜಗತ್ತಿನ ಮನಗೆದ್ದ ನಟ 'ಮಿಸ್ಟರ್ ಬೀನ್' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಸುಂದರವಾಗಿರದಿದ್ದರೂ ತಮ್ಮ ನೈಜ ನಟನೆಯ ಮೂಲಕ ಈಡಿ ಜಗತನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೧೨) "ನನ್ನ ಕೆಲಸ ಹೋಯಿತು. ಮುಂದೇನ ಮಾಡ್ಲಿ...? ಎಂದು ನೀವು ಕೊರಗುತ್ತಿದ್ದರೆ ಒಮ್ಮೆ ಮಿಕ್ಕಿ ಮೌಸನ ಸೃಷ್ಟಿಕರ್ತ, ಡಿಸ್ನಿ ಸ್ಟುಡಿಸೋನ ಸ್ಥಾಪಕ, 22 ಆಸ್ಕರ್ ಪ್ರಶಸ್ತಿಗಳ ವಿಜೇತ 'ವಾಲ್ಟ್ ಡಿಸ್ನಿ' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ "ಅವರಲ್ಲಿ ಕಲ್ಪನಾ ಸಾಮರ್ಥ್ಯವಿಲ್ಲ, ಅವರ ಬರವಣಿಗೆಯಲ್ಲಿ ಹೊಸ ವಿಚಾರಗಳಿಲ್ಲ" ಎಂದು ಅವರನ್ನು ಒಂದು ದಿನಪತ್ರಿಕೆ  ಕೆಲಸದಿಂದ ತೆಗೆದು ಹಾಕಿತ್ತು... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೧೩) "ನಾನು ಸತತವಾಗಿ ಸೋಲುತ್ತಿರುವೆ..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಅಮೇರಿಕಾದ ಮಾಜಿ ಪ್ರೆಸಿಡೆಂಟ್ 'ಅಬ್ರಹಾಂ ಲಿಂಕನ್' ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರ ಮಡದಿ ತೀರಿ ಹೋದರು, ನಂತರ ಅವರ ಬ್ಯುಸಿನೆಸ್ಸ್ ಫ್ಲಾಪ್ ಆಯಿತು, ನರ ದೌರ್ಬಲ್ಯ ಅವರನ್ನು ಕಾಡಿತು. ಅಷ್ಟೆಲ್ಲ ನೋವುಗಳ ಜೊತೆಗೆ 8 ಸಲ ಎಲೆಕ್ಷನಲ್ಲಿ ಸೋತ ನಂತರ ಅವರು 9ನೇ ಬಾರಿ ಗೆದ್ದರು...

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

೧೪) "ನಾನು ಕಾಲೇಜ್ ಎಕ್ಸಾಮಲ್ಲಿ ಫೇಲ್ ಆದೆ ಅಥವಾ ಕಮ್ಮಿ ಅಂಕ ಪಡೆದೆ ಇಲ್ಲ ಡ್ರಾಪ್ ಔಟ್ ಆದೆ..." ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಬಿಲಗೇಟ್ಸ್ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಯಾವ ಇಂಜಿನಿಯರಿಂಗ್ ಕಾಲೇಜನಲ್ಲಿಯೂ Rank ಬಂದಿಲ್ಲ. ಆದರೆ ಎಲ್ಲ ಇಂಜಿನಿಯರಿಂಗ್ ಕಾಲೇಜ್ Rankers ಅವರ ಕಂಪನಿಯಲ್ಲಿ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

            ನಾನು ಹೀಗೆಯೇ ಉದಾಹರಣೆಗಳನ್ನು ಬರೆಯುತ್ತಾ ಹೋದರೆ ನನ್ನ ಈ ವೆಬಸೈಟ ಸಾಕಾಗುವುದಿಲ್ಲ. ಅಷ್ಟೊಂದು ಜನ ಮಹಾನ್ ಸಾಧಕರು ನಮ್ಮ ಕಣ್ಣ ಮುಂದಿದ್ದಾರೆ. ನೀವು ಸೋತಾಗ, ಸೋತು ಗೆದ್ದವರ ಕಡೆಗೆ ನೋಡಿ. ಸೋಲದೆ ಗೆದ್ದವರು ಯಾರು ಇಲ್ಲ. ಪ್ರಯತ್ನಶಾಲಿಗಳಿಗೆ ಸೋಲೆಂಬುದು ಸಿಗಲು ಸಾಧ್ಯವಿಲ್ಲ. ನಿಮ್ಮ ಮನಸ್ಥಿತಿಯನ್ನು ಬದಲಿಸಿ. ಆಮೇಲೆ ಪರಸ್ಥಿತಿಗಳು ತಾನಾಗಿಯೇ ಬದಲಾಗುತ್ತವೆ. ನಿಮ್ಮ ಕೊರತೆಗಳಿಗೆ ಕೊರಗದೆ ನಿಮ್ಮ ಗುರಿಯೆಡೆಗೆ ಗಮನ ಹರಿಸಿ. ಧೈರ್ಯವಾಗಿ ಮುನ್ನುಗ್ಗಿ. ಪ್ಲೀಸ್ ಗೆಳೆಯರೇ, ಸಣ್ಣಪುಟ್ಟ ಸಮಸ್ಯೆಗಳಿಗೆ ಹೆದರಿ ನಿಮ್ಮ ಗುರಿಯಿಂದ ಹಿಂದೆ ಸರಿಯಬೇಡಿ. ನೆಪಗಳನ್ನು ಹೇಳಿ ನಿಮಗೆ ನೀವೇ ವಂಚಿಸಿಕೊಳ್ಳಬೇಡಿ. ಪ್ಲೀಸ್ ಕುಂಟು ನೆಪಗಳನ್ನು ಹೇಳುವುದನ್ನು ನಿಲ್ಲಿಸಿ... 

ನೆಪಗಳನ್ನು ಹೇಳುವುದನ್ನು ನಿಲ್ಲಿಸಿ : Stop Giving Excuses

                   ಈ ಅಂಕಣ ಸಂಪೂರ್ಣವಾಗಿ ಇಂಟರ್ನೆಟನ ಮಾಹಿತಿಗಳ ಮೇಲೆ ಆಧಾರಿತವಾಗಿದೆ. ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ... Blogger ನಿಂದ ಸಾಮರ್ಥ್ಯಹೊಂದಿದೆ.