ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ - Exclusive Life Love Story Kannada..!!!

Chanakya Niti in Kannada
kannada love stories

                           ಕಾಲೇಜ ಲೈಫ ಹುಡುಗರ ಪಾಲಿಗೆ ಮೋಜು ಮಸ್ತಿಗೆ ಸುವರ್ಣಾವಕಾಶವಾದರೆ ಹುಡುಗಿಯರ ಪಾಲಿಗೆ ಧರ್ಮಸಂಕಟವಾಗುತ್ತದೆ. ಹುಡುಗರು ಮನ ಬಂದಂತೆ ವರ್ತಿಸುತ್ತಾರೆ. ಆದರೆ ಹುಡುಗಿಯರು ಮನೆಯವರು ಆಜ್ಞಾಪಿಸಿದಂತೆ ವರ್ತಿಸಬೇಕಾಗುತ್ತದೆ. ಹುಡುಗರು ಎಕ್ಸಾಮಲ್ಲಿ ಫೇಲಾದರೆ ಅವರನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಆದರೆ ಹುಡುಗಿಯರು ಎಕ್ಸಾಮಲ್ಲಿ ಫೇಲಾದರೆ ಅವರನ್ನು ಬೇಗನೆ ಮದುವೆ ಮಾಡಿ ಗಂಡನ ಮನೆಗೆ ತಳ್ಳಿ ಕೈತೊಳೆದುಕೊಂಡು ಬಿಡುತ್ತಾರೆ. ಅದಕ್ಕಾಗಿ ಬಹಳಷ್ಟು ಹುಡುಗಿಯರು ಏನಾದರೂ ಒಂದನ್ನು ಸಾಧಿಸಿ ಸ್ವತಂತ್ರ ಜೀವನ ಸಾಗಿಸಬೇಕು ಎಂಬ ಮಹದಾಸೆಯಿಂದ ಚೆನ್ನಾಗಿ ಓದಿ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಾರೆ. ಇನ್ನು ಕೆಲ ಹುಡುಗಿಯರು ಹುಡುಗರ ತರ ಪೋಲಿ ಅಲೆದು ಶೋಕಿ ಮಾಡಿ ಶೀಲ ಕೆಡಿಸಿಕೊಂಡು ಗಂಡನ ಗುಲಾಮಗಿರಿ ಮಾಡಿಕೊಂಡು ಹೇಗೋ ಜೀವನ ತಳ್ಳುತ್ತಾರೆ. ಹುಡುಗಿಯರಿಗೂ ಸಾಧಿಸುವ ಸಾಮರ್ಥ್ಯವಿದೆ. ಆದರೆ ಅವರ ಕನಸುಗಳಿಗೆ ಅವರ ಹೆತ್ತವರೇ ಕಲ್ಲಾಕುತ್ತಾರೆ. ಇವೆಲ್ಲ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೇ ಚೆನ್ನಾಗಿ ಓದಿ ಸ್ವಾವಲಂಬಿ ಜೀವನ ಸಾಗಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ ಹುಡುಗಿಯೇ ಆಶಾ.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

                         ಚೆನ್ನಾಗಿ ಓದಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂಬಾಸೆಯಿಂದ ಆಶಾ ಚೆನ್ನಾಗಿ ಓದುತ್ತಿದ್ದಳು. ಮಿಕ್ಕ ಹುಡುಗಿಯರಂತೆ ಬ್ಯೂಟಿ ಪಾರ್ಲರಗಳನ್ನು ಸುತ್ತುತ್ತಾ ಟೈಮ ವೇಸ್ಟ ಮಾಡುತ್ತಿರಲಿಲ್ಲ. ಅವಳು ನ್ಯಾಚುರಲ್ ಬ್ಯೂಟಿಯಾಗಿದ್ದಳು. ಅವಳಿಗೆ ಮೇಕಪ್ ಮಾಡಿಕೊಂಡು ಮೆರೆದಾಡುವ ಅವಶ್ಯಕತೆ ಇರಲಿಲ್ಲ. ಆದರೆ ಆಶಾಳ ಕಾಲೇಜ ಲೈಫನಲ್ಲಾದ ಒಂದು ಘಟನೆ ಅವಳ ಯೋಚನೆಗಳನ್ನೇ ಬದಲಿಸಿತು. ಸೆಮಿಸ್ಟರ್ ಎಕ್ಸಾಮನಲ್ಲಿ ಆಶಾ ಟಾಪ್ ಮಾಡಿದ್ದಳು. ಆಗ ಅವಳ ಕ್ಲಾಸಲ್ಲಿ ಕೆಲವು ಕಿಡಿಗೇಡಿಗಳು ಅವಳಿಗೆ ಕೇಳಿಸುವಂತೆ ಜೋರಾಗಿ ಮಾತನಾಡುತ್ತಾ "ಎಷ್ಟೇ ಮಾರ್ಕ್ಸ್ ಪಡೆದುಕೊಂಡರೂ ಅಷ್ಟೇ. ಮುಂದೆ ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಪಾತ್ರೆ ತೊಳೆಯುವುದು ತಪ್ಪಲ್ಲ...." ಎಂದೇಳಿ ಅವಳನ್ನು ಗೇಲಿ ಮಾಡಿದರು. ಇದು ಕೈಲಾಗದ ಕಿಡಿಗೇಡಿಗಳಿಗೆ ತಮಾಷೆಯಾಗಿತ್ತು. ಆದರೆ ಆಶಾಳಿಗೆ ಅದು ಕಣ್ತೆರೆಸುವ ಘಟನೆಯಾಯಿತು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

                    ಕಾಲೇಜ ಮುಗಿಸಿಕೊಂಡು ಮನೆಗೋದ ಮೇಲೂ ಕಿಡಿಗೇಡಿಗಳ ಗೇಲಿ ಮಾತುಗಳು ಆಶಾಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ಆ ಹುಡುಗರ ಮೇಲೆ ಅವಳಿಗೆ ಕೋಪ ಉಕ್ಕಿ ಬರಲಿಲ್ಲ. ಏಕೆಂದರೆ ಅವರ ಮಾತಿನಲ್ಲಿ ಸತ್ಯಾಂಶವಿತ್ತು. ಮದುವೆಯಾಗಿ ಗಂಡನ ಮನೆ ಪಾಲಾದ ಹುಡುಗಿಯೊಬ್ಬಳ ಪಾಡನ್ನು ಅವಳು ಕಣ್ಣಾರೆ ಕಂಡಿದ್ದಳು. ಅವಳ ಮನೆ ಮಹಡಿಯ ಮೇಲೆ ಒಂದು ನವ ವಿವಾಹಿತ ಜೋಡಿ ವಾಸವಾಗಿತ್ತು. ಅವಳ ಮನೆ ಮಹಡಿಯ ಮೇಲೆ ಬಾಡಿಗೆಗಿದ್ದ ಗಂಡ-ಹೆಂಡತಿಯ ಜೀವನ ಆಶಾಳ ಎಷ್ಟೋ ಪ್ರಶ್ನೆಗಳಿಗೆ ಆಹಾರವಾಗಿತ್ತು. ಒಬ್ಬ ಮನೆ ಕೆಲಸದವಳಿಗಿರುವ ಸ್ವಾತಂತ್ರ್ಯ ಆ ಹೆಂಡತಿಗಿರಲಿಲ್ಲ. ಅವಳು ಗಂಡನ ಗುಲಾಮಳಂತೆ ಜೀವನವನ್ನು ತಳ್ಳುತ್ತಿದ್ದಳು. ಏಕೆಂದರೆ ಆಕೆ ಓದಿದ್ದರೂ ಅವಳಿಗೆ ಕೆಲಸವಿರಲಿಲ್ಲ. ಅದಕ್ಕಾಗಿ ಆಕೆ ಗಂಡನ ಸೇವೆ ಮಾಡಿಕೊಂಡು ಮನೆಯಲ್ಲಿ ಬಿದ್ದಿರುತ್ತಿದ್ದಳು. ಸಣ್ಣಪುಟ್ಟ ಖರ್ಚುಗಳಿಗೂ ಸಹ ಗಂಡನ ಮುಂದೆ ಕೈಚಾಚುತ್ತಿದ್ದಳು. 

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

            ಗಂಡ ನೆಪ ಹೇಳಿ ದುಡ್ಡು ಕೊಡಲು ಹಿಂಜರಿದಾಗ ನಾಚಿಕೆ ಬಿಟ್ಟು ಅವನತ್ರ ಅಂಗಲಾಚಿ ದುಡ್ಡು ಕೇಳುತ್ತಿದ್ದಳು. ಆತ ಕೊಡದಿದ್ದಾಗ ಆಕೆ ನಾಚಿಕೆ ಬಿಟ್ಟು ಅವನಿಗೆ ಸೆರಗು ಹಾಸಿ ಮಲಗಿಸಿ ಅವನನ್ನು ಸಂತುಷ್ಟಪಡಿಸಿ ತನ್ನ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸುತ್ತಿದ್ದಳು. ಅವಳ ಗಂಡ ಅವಳನ್ನು ದಿನವೆಲ್ಲ ಸೇವಕಿಯಂತೆ ನಡೆಸಿಕೊಂಡರೆ ರಾತ್ರಿಯೆಲ್ಲ ಸುಖದ ಸರಕಿನಂತೆ ಬಳಸಿಕೊಳ್ಳುತ್ತಿದ್ದನು. ದಿನವೆಲ್ಲ ಬರೀ ಗಂಡನಿಗಾಗಿ ಗುಲಾಮಳಂತೆ ದುಡಿಯುವುದು, ರಾತ್ರಿಯೆಲ್ಲ ಅವನಿಗೆ ಮೈಯೊಪ್ಪಿಸಿ ನರಳುವುದು ಅವಳ ದಿನಚರಿಯಾಗಿತ್ತು. 

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

              ಮನಸ್ಸಿಲ್ಲದಿದ್ದರೆ ತನ್ನ ಮೈಯನ್ನು ಒಪ್ಪಿಸದೇ ಆರಾಮಾಗಿರುವ ಸ್ವಾತಂತ್ರ್ಯ ವೈಷ್ಯಯರಿಗಿದೆ. ಆದರೆ ಆ ಸಣ್ಣ ಸ್ವಾತಂತ್ರ್ಯವೂ ಅವಳಿಗಿರಲಿಲ್ಲ. ಅವಳಿಗೆ ಮನಸ್ಸಿಲ್ಲದಿದ್ದರೂ ಸಹ ಆಕೆ ತನ್ನ ಗಂಡನಿಗೆ ಮೈಯೊಪ್ಪಿಸಿ ಮರುಗಬೇಕಿತ್ತು. ಭಾನುವಾರ ಬಂತೆಂದರೆ ಗಂಡ ಮಧ್ಯಾಹ್ನ 12 ಗಂಟೆ ನಂತರವೇ ಎದ್ದೇಳುತ್ತಿದ್ದನು. ಆದರೆ ವರ್ಷದ 365 ದಿನಗಳ ಕಾಲ ಅವಳು ಬೆಳಿಗ್ಗೆ ಸುರ್ಯೋದಯಕ್ಕಿಂತ ಮುಂಚೆ ಎದ್ದೇಳುತ್ತಿದ್ದಳು. ಅವಳಿಗೆ ಬೇರೆ ವಿಧಿಯಿರಲಿಲ್ಲ. ಇಂಥ ಇತ್ಯಾದಿ ಸಂಗತಿಗಳನ್ನು ಕಣ್ಣಾರೆ ಕಂಡಿದ್ದರಿಂದ ಆಶಾಳಿಗೆ ಸ್ವಾವಲಂಬಿ ಬದುಕನ್ನು ಸಾಗಿಸಬೇಕು ಎಂಬ ಛಲ ಹುಟ್ಟಿತ್ತು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

          ಆಶಾಳಿಗೆ ಇಷ್ಟು ದಿನ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸಿಕೊಂಡು ಸ್ವಾವಲಂಬಿ ಬದುಕನ್ನು ಸಾಗಿಸಬೇಕು ಎಂಬ ಛಲವಿತ್ತು. ಆದರೆ ಕಾಲೇಜ್ನಲ್ಲಿ ಕಿಡಿಗೇಡಿಗಳು ಅವಳನ್ನು ಗೇಲಿ ಮಾಡಿದಾಗ ಅವಳ ದೃಷ್ಟಿಕೋನ ಬದಲಾಯಿತು. ಅವಳ ದೂರದೃಷ್ಟಿ ವಿಶಾಲವಾಯಿತು. ಕೆಲಸ ಗಿಟ್ಟಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂಬಾಸೆ ಹೊಂದಿದ್ದ ಆಶಾಳಿಗೆ "ನಾನೇ ಸಾವಿರಾರು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಬೇಕು" ಎಂಬ ಛಲ ಹುಟ್ಟಿಕೊಂಡಿತು. ಅವಳು ಕಿಡಿಗೇಡಿಗಳ ಗೇಲಿ ಮಾತುಗಳಿಂದ ಪ್ರೇರಿತಳಾಗಿ ಅವರ ಕೊಂಕು ಮಾತುಗಳನ್ನು ಹುಸಿಯಾಗಿಸಲು ಪಣತೊಟ್ಟಳು. ಓದು ಮುಗಿದ ನಂತರ ನಾನೇ ಒಂದು ಸ್ವಂತ ಕಂಪನಿ ಸ್ಟಾರ್ಟ ಮಾಡಬೇಕು, ಬ್ಯುಸಿನೆಸ್ ವ್ಯುಮನ್ ಆಗಬೇಕು ಎಂಬೆಲ್ಲ ಆಸೆಗಳು ಅವಳಲ್ಲಿ ಕುಡಿಯೊಡೆದವು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

                      ಆಶಾಳಿಗೆ ಅವಳೊಳಗಿನ ಫ್ಯಾಷನನ್ನು ಹೊರ ಜಗತ್ತಿಗೆ ಪರಿಚಯಿಸುವ ಹಂಬಲ ಹೆಚ್ಚಾಯಿತು. "ಮದುವೆಯಾದ ಮೇಲೆ ಬರೀ ಅಡುಗೆ ಮಾಡಿಕೊಂಡು, ಕಸ ಗೂಡಿಸಿಕೊಂಡು, ಪಾತ್ರೆ ತೊಳೆಯುತ್ತಾ, ಗಂಡನಿಗೆ ಸೆರಗು ಹಾಸುತ್ತಾ, ಮಕ್ಕಳ ಡೈಪರ ಚೇಂಜ ಮಾಡುತ್ತಾ ಇರಲಾರೆ" ಎಂಬ ನಿರ್ಧಾರಕ್ಕೆ ಆಶಾ ಬಂದಳು. ತನ್ನ ಯೋಚನೆಗಳ ಮೂಲಕ ಜಗತ್ತನ್ನು ಬದಲಾಯಿಸುವ ಕನಸುಗಳನ್ನು ಆಕೆ ಕಂಡಳು. ಅದಕ್ಕಾಗಿ ಆಕೆ ತನ್ನ ಫ್ಯಾಷನನ್ನು ಫಾಲೋ ಮಾಡತೊಡಗಿದಳು. ತನ್ನ ಹೆಚ್ಚಿನ ಸಮಯವನ್ನು ಪ್ರೋಡಕ್ಟಿವ್ ಕೆಲಸಗಳಿಗೆ ಮೀಸಲಾಗಿಟ್ಟಳು. "ಏನಾದರೂ ಒಂದನ್ನು ಸಾಧಿಸಿ ತೋರಿಸಬೇಕು..." ಎಂಬ ಹುಚ್ತನ ಅವಳಲ್ಲಿ ಹೆಚ್ಚಾಯಿತು. ಅದಕ್ಕಾಗಿ ಅವಳು ಓದನ್ನು ಕಡೆಗಣಿಸಿ ಸ್ಕೀಲಗಳನ್ನು ಕಲಿಯುವುದರ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸಿದಳು. ಯ್ಯೂಟೂಬ ಮತ್ತು ಗೂಗಲಿನ ಸಹಾಯದಿಂದ ಎಲ್ಲ ಬ್ಯುಸಿನೆಸ್ ಸ್ಟ್ಯಾಟರ್ಜಿಗಳನ್ನು ಅರ್ಥಮಾಡಿಕೊಂಡಳು. ನೂರಾರು ಪುಸ್ತಕಗಳನ್ನು ಓದಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡಳು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

              ಆಶಾಳ ಮೆದುಳಲ್ಲಿ ಈಗ ಬರೀ ಬ್ಯುಸಿನೆಸ್ ಕುರಿತಾದ ಆಲೋಚನೆಗಳೇ ಹರಿದಾಡುತ್ತಿದ್ದವು. ಅದಕ್ಕಾಗಿ ಆಕೆಗೆ ಎಕ್ಸಾಮಲ್ಲಿ ಕಡಿಮೆ ಅಂಕಗಳು ಬಂದವು. ಅವಳು ಓದುತ್ತಿರುವ ಬಿಎಸ್ಸಿ ಪದವಿಗೂ ಅವಳ ತಲೆಯಲ್ಲಿ ಓಡುತ್ತಿರುವ ಬ್ಯುಸಿನೆಸ್ಸಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅವಳಿಗೆ ಎಕ್ಸಾಮಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮನೆಯಲ್ಲಿ ಎಲ್ಲರೂ ರೇಗಿದರು. ಕಾಲೇಜನಲ್ಲಿ ಎಲ್ಲರೂ ಅವಳನ್ನು ಕಿಂಡಲ್ ಮಾಡಿ ನಕ್ಕರು. ಆದರೆ ಆಶಾ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ತನ್ನ ಗುರಿಯೆಡೆಗೆ ಗಮನ ಹರಿಸಿದಳು. ಆಶಾಳ ಕನಸುಗಳ ಕಥೆ ಕೇಳಿ ಎಲ್ಲರೂ ನಗುತ್ತಿದ್ದರು. ಆದರೆ ಸಿದ್ಧಾರ್ಥ ಮಾತ್ರ ಅವಳ ಕನಸುಗಳನ್ನು ನಂಬಿ ಅವಳನ್ನು ಪ್ರೋತ್ಸಾಹಿಸುತ್ತಿದ್ದನು. ಅದಕ್ಕಾಗಿ ಆಕೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದಳು. ಅವನು ಸಹ ಅವಳನ್ನು ಅತಿಯಾಗಿ ಹಚ್ಚಿಕೊಂಡಿದ್ದನು. ದಿನ ಕಳೆದಂತೆ ಅವರಿಬ್ಬರೂ ಪ್ರೇಮಿಗಳಾದರು. ಆದರೆ ಆಶಾ ಮಾತ್ರ ತನ್ನ ಗುರಿಯನ್ನು ಮರೆಯಲಿಲ್ಲ. ಆಕೆ ತನ್ನ ಸಂಪೂರ್ಣ ಗಮನವನ್ನು ತನ್ನ ಗುರಿಯೆಡೆಗೇನೆ ಹರಿಸಿದಳು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

              ಆಶಾಳ ಓದು ಮುಗಿಯಿತು. ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸಿದರು. ಆದರೆ ಆಕೆ ಮನೆಯವರಿಗೆ ತನ್ನ ಬ್ಯುಸಿನೆಸ ಐಡಿಯಾವನ್ನು ಹೇಳಿ ಮನೆಯವರ ಮನಸ್ಸನ್ನು ಗೆದ್ದು ಮದುವೆ ಎಂಬ ಬಂಧನದಿಂದ ಪಾರಾದಳು. ಆದರೆ ಸಿದ್ಧಾರ್ಥ ಅವಳನ್ನು ಮದುವೆಯಾಗುವಂತೆ ಒತ್ತಾಯಿಸಲು ಪ್ರಾರಂಭಿಸಿದನು. ಅವನಿಗೆ ಒಂದು ದೊಡ್ಡ ಕಂಪನಿಯಲ್ಲಿ ಒಂದು ಸಣ್ಣ ಕೆಲಸ ಸಿಕ್ಕಿತ್ತು. ಅವನಿಗೆ ದೊಡ್ಡ ಕನಸುಗಳೇನು ಇರಲಿಲ್ಲ. ಅದಕ್ಕಾಗಿ ಬೇಗನೆ ಮದುವೆಯಾಗಿ ಮಿಡಲ್ ಕ್ಲಾಸ್ ಜೀವನದಲ್ಲಿ ಸಾಧ್ಯವಾದಷ್ಟು ಸುಖ ಪಡಬೇಕು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ ಆಶಾಳ ಆಸೆ ಆಕಾಂಕ್ಷೆಗಳೇ ಬೇರೆಯಾಗಿದ್ದವು. ಆಕೆಗೆ ಅವನನ್ನು ಕಳೆದುಕೊಳ್ಳುವುದು ಒಂಚೂರು ಇಷ್ಟವಿರಲಿಲ್ಲ. ಹಾಗಂತಾ ಈಗಲೇ ಮದುವೆಯಾಗಿ ತನ್ನ ಕನಸುಗಳನ್ನೆಲ್ಲ ಬಲಿಕೊಡಲು ಆಕೆ ತಯಾರಿರಲಿಲ್ಲ. ಆಕೆ ಅವನಿಗೆ ಈಗಲೇ ಮದುವೆ ಬೇಡವೆಂದು ಹೇಳಿದರೂ ಆತ ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

              ಸಿದ್ಧಾರ್ಥ ಬೇಗನೆ ಮದುವೆಯಾಗುವಂತೆ ಆಶಾಳ ಮೇಲೆ ಒತ್ತಡ ಹೇರಿದನು. ಆಗ ಆಕೆ "ಒಬ್ಬ ಯಶಸ್ವಿ ಪುರುಷನ ಹಿಂದೆ ನಿಲ್ಲಲು ನನಗೆ ಇಷ್ಟವಿಲ್ಲ. ನಾನೇ ಯಶಸ್ವಿಯಾಗುವ ಆಸೆಯಿದೆ ನನಗೆ. ನನಗೂ ನನ್ನೆದೆ ಆದ ಕನಸುಗಳಿವೆ. ಗಾಜಿನ ಬಳೆಗಳ ಜೊತೆಗೆ ರೊಲೆಕ್ಸ ವಾಚನ್ನು ಧರಿಸುವ ಹಟವಿದೆ ನನಗೆ. ಬರೀ ಒಂದೇ ಮನೆಯ ಒಲೆಯನ್ನು ಉರಿಸುವ ಆಸೆಯಿಲ್ಲ ನನಗೆ. ಸಾವಿರಾರು ಮನೆಯ ಒಲೆಗಳಿಗೆ  ಆಸರೆಯಾಗುವ ಆಕಾಂಕ್ಷೆ ನನಗೆ. 3×3 ಕೀಚನನಲ್ಲಿ ಕೊಳೆಯುವ ಆಸೆಯಿಲ್ಲ ನನಗೆ. 6×6  ಕ್ಯಾಬೀನಿನಲ್ಲಿ ಕೂರುವ ಆಸೆಯಿದೆ ನನಗೆ. ಚಹಾದೊಂದಿಗೆ ನನಗೆ ಎಕ್ಸೆಲ್ ಶೀಟಗಳನ್ನು, ಪವರಪಾಯಿಂಟ್ ಪ್ರಜೆಂಟೆಷನಗಳನ್ನು ಸಹ ಮಾಡಲು ಬರುತ್ತದೆ. ನನ್ನ ವಿಜನ (Vision) ದೊಡ್ಡದಿದೆ. ನನಗೆ ಶ್ರೀಮಂತ ಹುಡುಗನನ್ನು ಮದುವೆಯಾಗುವ ದುರಾಸೆಯಿಲ್ಲ. ನನಗೆ ನಾನೇ ಶ್ರೀಮಂತಳಾಗುವ ಆಸೆಯಿದೆ..ಅದಕ್ಕಾಗಿಯೇ ನಾನು ಕಾಲೇಜ ಮುಗಿದ ಮೇಲೆ ಮ್ಯಾರೇಜ ಆಗಿಲ್ಲ. ಎರಡು ಹೊತ್ತಿನ ರೊಟ್ಟಿ ಮಾಡುವ ನನಗೆ ಅದನ್ನು ನಿಯತ್ತಾಗಿ ಸಂಪಾದಿಸುವ ಸಾಮರ್ಥ್ಯವೂ ಇದೆ. ಪ್ಲೀಸ್ ನನ್ನ ಕನಸಿನ ಜೀವನವನ್ನು ಜೀವಿಸಲು ನನಗೆ ಅವಕಾಶ ಮಾಡಿಕೊಡು..." ಎಂದೆಲ್ಲ ಆಕೆ ಅವನನ್ನು ಬೇಡಿಕೊಂಡಳು. ಆದರೆ ಆತ ಅವಳ ಕನಸನ್ನು ಹುಚ್ಚು ಆಸೆಯೆಂದು ತಿಳಿದನು. ಅವಳ ಆಸೆ ಆಕಾಂಕ್ಷೆಗಳು ಅವನಿಗೆ ವಿಚಿತ್ರವಾಗಿ ಕಂಡವು. ಆದರೂ ಆತ ಅವಳಿಗಾಗಿ ಕೆಲವು ತಿಂಗಳುಗಳ ಕಾಲ ಕಾಯಲು ಸಿದ್ಧನಾದನು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

                             ಸಿದ್ಧಾರ್ಥ ಎಲ್ಲ ಪ್ರೇಮಿಗಳಂತೆ ಕೈಕೈಹಿಡಿದು ಕಂಡಕಂಡ ಕಬ್ಬನ ಪಾರ್ಕಗಳನ್ನು  ಸುತ್ತಲು, ಜನ ಬರದ ಸಿನಿಮಾಗಳನ್ನು ಆಶಾಳೊಂದಿಗೆ ಜೊತೆಯಾಗಿ ನೋಡಲು ಹಂಬಲಿಸುತ್ತಿದ್ದನು. ಆದರೆ ಆಶಾ ಮಾತ್ರ ತನ್ನ ಬ್ಯುಸಿನೆಸ್ ಸ್ಟಾರ್ಟಪಗೆ ಬೇಕಾಗುವ ವಸ್ತುಗಳನ್ನು ಕೂಡಿಸುವುದರಲ್ಲಿ ಬ್ಯುಸಿಯಾಗಿರುತ್ತಿದ್ದಳು. ಹೀಗೆ ಒಂದೆರಡು ತಿಂಗಳುಗಳು ಕಳೆದವು. ಆಶಾ ಬರೀ ತನ್ನದೇ ಲೈಫಿನ ಹಿತವನ್ನು ಸಾಧಿಸುತ್ತಿದ್ದಾಳೆಂದು ತಪ್ಪಾಗಿ ಭಾವಿಸಿ ಸಿದ್ಧಾರ್ಥ ಅವಳ ಮೇಲೆ ಮುನಿಸಿಕೊಂಡನು. ಆದರೆ ಆಕೆ ಶಾಂತ ಚಿತ್ತದಿಂದ ಅವನನ್ನು ಸಮಾಧಾನ ಮಾಡಲು ಶತ ಪ್ರಯತ್ನ ಮಾಡಿದಳು. ನಾಲ್ಕಾರು ಮುತ್ತುಗಳನ್ನು ನೀಡಿ ಅವನ ಮನವೊಲಿಸಿ ಪ್ರಯತ್ನಿಸಿದಳು. ಆದರೆ ಆತ ಮಾತ್ರ ಅವಳನ್ನು ಮದುವೆಯಾಗುವಂತೆ ಒತ್ತಾಯಿಸಿದನು. 

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

            ಸಿದ್ಧಾರ್ಥನಿಗೆ ಮಿಡಲ್ ಕ್ಲಾಸ್ ಜೀವನ ಸಾಗಿಸುವುದರಲ್ಲಿ ಮಜವಿತ್ತು. ಆದರೆ ಅವಳಿಗೆ ಹಾಯಕ್ಲಾಸ್ ಜೀವನ ಸಾಗಿಸುವ ಕನಸಿತ್ತು. ಏನನ್ನು ಸಾಧಿಸದೇ ಸುಮ್ಮನೆ ಮದುವೆಯಾಗಿ ಲೈಫ್ ಹಾಳು ಮಾಡಿಕೊಳ್ಳಲು ಆಕೆ ತಯಾರಿರಲಿಲ್ಲ. ಅದಕ್ಕಾಗಿ ಆಕೆ ಸದ್ಯಕ್ಕೆ ಮದುವೆಯಾಗಲು ಸಾಧ್ಯವಿಲ್ಲವೆಂದು ನೇರವಾಗಿ ಹೇಳಿದಳು. ಕೋಪದಲ್ಲಿ ಸಿದ್ಧಾರ್ಥ ಅವಳೊಂದಿಗೆ ಬ್ರೇಕಪ್ ಮಾಡಿಕೊಂಡು ಬೇರೆ ಹುಡುಗಿಯೊಂದಿಗೆ ಹೊಸ ಲವ್ ಅಫೇರ್ ಪ್ರಾರಂಭಿಸಿದನು. ಹೊಸ ಪ್ರೇಯಸಿಯೊಂದಿಗೆ ಮದುವೆಗೂ ಮುಂಚೆಯೇ ಮಂಚದವರೆಗೂ ಮುಂದುವರೆದು ತನ್ನಾಸೆಗಳನ್ನು ತೀರಿಸಿಕೊಂಡು ಆಮೇಲೆ ಮದುವೆಯಾದನು. ಅವನಿಗೆ ಆಶಾಳಂತ ಸ್ವಾಭಿಮಾನಿ ಹುಡುಗಿ ಬೇಕಿರಲಿಲ್ಲ. ಅವನಿಗೆ ಅವನು ಹೇಳಿದಂತೆ ಕೇಳಿಕೊಂಡು, ಮನೆಕೆಲಸಗಳನ್ನು ಮಾಡುತ್ತಾ ಮನೆಯಲ್ಲಿ ಸುಮ್ಮನೆ ಬಿದ್ದಿರುವ ಪೆದ್ದ ಹುಡುಗಿ ಬೇಕಿದ್ದಳು. ಅದಕ್ಕೆ ಅವನು ಆಶಾಳನ್ನು ಮರೆತು ಹೊಸ ಹುಡುಗಿಯೊಂದಿಗೆ ಹೊಸ ಜೀವನ ಪ್ರಾರಂಭಿಸಿದನು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

              ಸಿದ್ಧಾರ್ಥ ಏನೋ ಮದುವೆಯಾಗಿ ಮಡದಿಯೊಂದಿಗೆ ಸರಸವಾಡುತ್ತಾ ಸುಖವಾಗಿದ್ದನು. ಅವನಿಗೆ ದಿನವೆಲ್ಲ ಅವನಿಂದ ಬೈಯ್ಯಿಸಿಕೊಂಡು ತಲೆತಗ್ಗಿಸಿ ಕೆಲಸ ಮಾಡುವ, ರಾತ್ರಿಯೆಲ್ಲ ನಾಚಿಕೆಯಿಲ್ಲದೆ ಬೆತ್ತಲಾಗಿ ಅವನ ಮೈಮನ ತಣಿಸುವ ಅಮಾಯಕಿ ಸಿಕ್ಕಿದಳು. ಆತ ಅವಳನ್ನು ಬಹುಪಾಲು ಗಂಡಂದಿರಂತೆ ಸುಖದ ಸರಕಾಗಿ ಬಳಸಿಕೊಳ್ಳಲು ಪ್ರಾರಂಭಿಸಿದನು. ಹೆಂಡತಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡದೆ  ಗುಲಾಮಳಂತೆ ನಡೆಸಿಕೊಂಡನು. ಅವನಿಗೆ ಹೆಂಡತಿ ಮೇಲೆ ಪ್ರೀತಿಗಿಂತ ಜಾಸ್ತಿ ವ್ಯಾಮೋಹವಿತ್ತು. ದಿನವೆಲ್ಲ ಆತ ಅವಳನ್ನು ರೇಗಿದರೂ ರಾತ್ರಿ ಅವಳನ್ನು ಪುಸಲಾಯಿಸಿ ಮುದ್ದು ಮಾಡಿ ಅನುಭವಿಸುತ್ತಿದ್ದನು. ಅವನ ಸರಸಕ್ಕೆ ಅವಳ ಬೆನ್ನು ನಾಚಿದರೂ ಆತ ಅವಳನ್ನು ಬಿಡುತ್ತಿರಲಿಲ್ಲ. ಅವನ ಕಾಮದಾಸೆಗೆ ಅವಳು ಕೈಗೊಂಬೆಯಾಗಿ ನರಳುತ್ತಿದ್ದಳು. ತನ್ನ ಬೆರಳ ಸನ್ನೆಗೆ ತಲೆಯಲ್ಲಾಡಿಸುವ ಹೆಂಡತಿ ಸಿಕ್ಕಿದ್ದರಿಂದ ಸಿದ್ಧಾರ್ಥ ಮೊದಲ ಪ್ರೇಯಸಿ ಆಶಾಳನ್ನು ಸಂಪೂರ್ಣವಾಗಿ ಮರೆತು ಬಿಟ್ಟನು. ಆದರೆ ಆಶಾಳಿಗೆ ಅವನನ್ನು ಅಷ್ಟು ಸುಲಭವಾಗಿ ಮರೆಯಲಾಗಲಿಲ್ಲ. ಅವಳು ಅವನು ಸತ್ತು ಹೋಗಿದ್ದಾನೆಂದು ತಿಳಿದು ಕೋಣೆಯಲ್ಲಿ ಬಾಗಿಲಾಕಿಕೊಂಡು ಜೋರಾಗಿ ಬಿಕ್ಕಿಬಿಕ್ಕಿ ಅತ್ತು ಅವನ ನೆನಪುಗಳಿಂದ ಮುಕ್ತಿ ಪಡೆದಳು.

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

               ಆಶಾಳ ಮನಸ್ಸಲ್ಲಿ ಮುರಿದ ಪ್ರೀತಿಯ ನೆನಪುಗಳು ಆವಾಗಾವಾಗ ನೋಯಿಸುತ್ತಿದ್ದವು. ಅವಳ ಕನಸುಗಳಿಗೆ ಯಾರೂ ಸಪೋರ್ಟ್ ಮಾಡದಿರುವುದರಿಂದ ಅವಳಿಗೆ ಹೆಜ್ಜೆಹೆಜ್ಜೆಗೂ ಹರ್ಟಾಗುತಿತ್ತು. ಆದರೆ ಆಕೆ ಬರುವ ನೋವುಗಳನ್ನೆಲ್ಲ ನುಂಗಿ ನಗುನಗುತ್ತಾ ಮುಂದೆ ಸಾಗಿದಳು. ಕೊನೆಗೂ ಅವಳು  ಅವಳೆಂದುಕೊಂಡಂತೆ ಬ್ಯುಸಿನೆಸ್ ಸ್ಟಾರ್ಟ ಮಾಡಿದಳು. ಅವಳು ಪ್ರಾರಂಭಿಸಿದ ಪುಟ್ಟ 'ಗಿಫ್ಟಿಂಗ್ ಕಂಪನಿ' (Gifting Company) ಎರಡು ವರ್ಷದಲ್ಲಿ ಭಾರತದಾದ್ಯಂತ ಹೆಸರು ಮಾಡಿತು. ಆಶಾಳ ಎಲ್ಲ ಕನಸುಗಳು ನನಸಾಗಿದ್ದವು. ಆಕೆ ತನ್ನ ಸ್ವಂತ ಖರ್ಚಲ್ಲಿ ಐಫೋನ್, ರೊಲೆಕ್ಸ ವಾಚಗಳನ್ನೆಲ್ಲ ಖರೀದಿಸಿದಳು. ರಕ್ಷಾ ಬಂಧನದ ದಿನ ಮೊದಲ ಸಲ ಅಣ್ಣನಿಗೆ ಒಂದು ದೊಡ್ಡ ಗಿಫ್ಟ ಕೊಟ್ಟಳು. ಪ್ರತಿಸಲ ಅವಳಿಗೆ ಅಣ್ಣನಿಂದ ಗಿಫ್ಟ ತೆಗೆದುಕೊಳ್ಳುವಾಗ ನಾನು ಅಣ್ಣನಿಗೆ ಏನು ಗಿಫ್ಟ ಕೊಟ್ಟಿಲ್ಲವೆಂಬ ಕೊರಗು ಅವಳನ್ನು ಕಾಡುತ್ತಿತ್ತು. ಆ ಕೊರಗು ಈಗ ಕಣ್ಮರೆಯಾಯಿತು. 

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

                               ಆಶಾ ತನ್ನ ಜೀವನದಲ್ಲಿ ತಾನೆಂದುಕೊಂಡಂತೆ ಎಲ್ಲವನ್ನೂ ಸಾಧಿಸಿ, ಸಾಕಷ್ಟು ಸಂಪಾದಿಸಿ ಸ್ವಾವಲಂಬಿಯಾಗಿದ್ದಳು. ಒಂದಿನ ಅವಳ ಕಣ್ಣಿಗೆ ಹಳೇ ಪ್ರಿಯಕರ ಸಿದ್ಧಾರ್ಥ ಕಾಣಿಸಿದನು. ಅವನು ಬಿಸಿಲಿನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದನು. ಅವನನ್ನು ನೋಡಿ ಅವಳ ಕಂಗಳು ತುಂಬಿ ಬಂದವು. ಜೊತೆಗೆ ಅವಳಿಗೂ ಒಬ್ಬ ಸರಿಯಾದ ಸಂಗಾತಿ ಬೇಕೆನಿಸಿತು. ಅದೇ ಯೋಚನೆಯಲ್ಲಿ ಅವಳು ಆಫೀಸ ತಲುಪಿದಳು. 

ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ

             ಅವಳು ಆಫೀಸಿಗೆ ತಲುಪಿದ ನಂತರ ತನ್ನನ್ನೇ ತಾ ನಂಬದಾದಳು. ಏಕೆಂದರೆ ಭಾರತದ ಒಬ್ಬ ಹೆಸರಾಂತ ಕ್ರಿಕೆಟ್ ಆಟಗಾರ ಅವಳ ಕಂಪನಿಗೆ ಒಂದು ಭಾರೀ ಗಿಫ್ಟನ್ನು ಖರೀದಿಸಲು ತಾನೇ ಖುದ್ದಾಗಿ ಬಂದಿದ್ದನು. ಆಶಾ ಅವನಿಗಾಗಿ ಒಂದೊಳ್ಳೆ ಗಿಫ್ಟನ್ನು ಸೆಲೆಕ್ಟ ಮಾಡಿ ಕೊಟ್ಟಳು. ಅವನಿಗೆ ಅವಳ ಸೆಲೆಕ್ಷನ ತುಂಬಾ ಹಿಡಿಸಿತು. ಜೊತೆಗೆ ಆಶಾಳ ನಡವಳಿಕೆ ಅವನನ್ನು ಮೋಡಿ ಮಾಡಿತು. ಅವನು ಆಶಾಳಿಗೆ ಮನಸೋತು ಅವಳನ್ನು ಮದುವೆಯಾಗಲು ಮುಂದಾದನು. ಆಶಾ ಮದುವೆಯಾಗಲು ಸ್ವಲ್ಪ ಸಮಯಾವಕಾಶ ಕೇಳಿದಾಗ ಆತ ಬೇಕಾದರೆ ಬೇಡಿದಷ್ಟು ವಧುದಕ್ಷಿಣೆ ನೀಡಿ ಮದುವೆಯಾಗುವೆ ಎಂದು ನಗೆಚಟಾಕಿ ಹಾರಿಸಿದನು. ಆಶಾ ಅವನಿಗೆ ಮದುವೆಯ ಸಮ್ಮತಿ ನೀಡಿದಳು. ಅವರಿಬ್ಬರ ಮದುವೆ ಎಲ್ಲರ ಆರ್ಶಿವಾದದೊಂದಿಗೆ ಅದ್ದೂರಿಯಾಗಿ ನಡೆಯಿತು. ಆಶಾ ಎಲ್ಲ ಯುವತಿರಿಗೆ, ಕಾಲೇಜ ಹುಡುಗಿಯರಿಗೆ ರೋಲ್ ಮಾಡೆಲ್ ಆದಳು. ಆದರೆ ಅವಳ ಏಳ್ಗೆಯನ್ನು ಕಂಡು ಸಿದ್ಧಾರ್ಥ ಒಳಗೊಳಗೆ ಕೊರಗಿ ಕಣ್ಣೀರಾಕುತ್ತಾ ಜೀವನವನ್ನು ತಳ್ಳಿದನು... 


ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ - Exclusive Life Love Story Kannada..!!! ಹುಡುಗಿಯೊಬ್ಬಳ ವಿಚಿತ್ರ ಆಸೆ : ಒಂದು ಲೈಫ್ ಲವ್ ಸ್ಟೋರಿ - Exclusive Life Love Story Kannada..!!! Reviewed by Director Satishkumar on June 12, 2018 Rating: 4.5
Powered by Blogger.