ಏನು ವ್ಯತ್ಯಾಸವಾಗಲ್ಲ - The Best Kannada Motivational Article - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಏನು ವ್ಯತ್ಯಾಸವಾಗಲ್ಲ - The Best Kannada Motivational Article

ಏನು ವ್ಯತ್ಯಾಸವಾಗಲ್ಲ - The Best Kannada Motivational Article

೧) ಇವತ್ತಿನ ದಿನ ನಿಮ್ಮ ಪಾಲಿಗೆ  ಅತ್ಯಂತ ಸವಾಲುದಾಯಕವಾಗಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ಸವಾಲುಗಳೊಡನೆ ಹೋರಾಡದೆ ಸುಲಭವಾಗಿ ಸೋತರೆ ಖಂಡಿತ ವ್ಯತ್ಯಾಸವಾಗುತ್ತದೆ...

ಏನು ವ್ಯತ್ಯಾಸವಾಗಲ್ಲ...The Best Kannada Motivational Article

೨) ಇವತ್ತಿನ ದಿನ ನಿಮ್ಮ ಜೇಬುಗಳು ಖಾಲಿಯಿದ್ದರೆ, ಬ್ಯಾಂಕ್ ಬ್ಯಾಲೆನ್ಸ್ ಝಿರೋ ಆಗಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ಈ ಸಿಚುವೆಷನನ್ನು (Situation) ಬದಲಾಯಿಸಲು ಕೆಲಸ ಮಾಡದಿದ್ದರೆ, ಪರಿಶ್ರಮ ಪಡದಿದ್ದರೆ ಖಂಡಿತ ವ್ಯತ್ಯಾಸವಾಗುತ್ತದೆ... 

The Best Kannada Motivational Article

೩) ಇವತ್ತಿನ ದಿನ ವಾತಾವರಣ ಸರಿಯಿಲ್ಲದಿದ್ದರೆ, ಪ್ರಕೃತಿ ನಿಮ್ಮನ್ನು ಪರೀಕ್ಷಿಸುತ್ತಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ಇದನ್ನೇ ನೆಪ ಮಾಡಿಕೊಂಡು ಕೆಲಸ ಮಾಡದೇ ಮನೆಯಲ್ಲಿ ಮಲಗಿದರೆ ಖಂಡಿತ ವ್ಯತ್ಯಾಸವಾಗುತ್ತದೆ... 

The Best Kannada Motivational Article

೪) ಯಾರಾದರೂ ನಿಮ್ಮ ಕೈಯಲ್ಲಿ ಅದೃಷ್ಟವಿಲ್ಲವೆಂದು ನಿಂದಿಸಿದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ಕೈಯಲ್ಲಿನ ರೇಖೆಗಳನ್ನೇ ಅದೃಷ್ಟವೆಂದು ನಂಬಿ ಕುಂತರೆ ವ್ಯತ್ಯಾಸವಾಗುತ್ತದೆ... 

ಏನು ವ್ಯತ್ಯಾಸವಾಗಲ್ಲ...The Best Kannada Motivational Article

೫) ನೀವೊಬ್ಬ ಕಾಲೇಜ ಡ್ರಾಪೌಟ್ ಆಗಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ಕಾಲೇಜ್ ಡ್ರಾಪೌಟ್ ಆಗಿ ಟೈಮಪಾಸ್ ಮಾಡುತ್ತಿದ್ದರೆ, ನಿಮ್ಮ ಗೋಲ್ಡನ್ ಟೈಮನ್ನು ಗೊಳ್ಳು ಹರಟೆಗಳಲ್ಲಿ ಕಳೆಯುತ್ತಿದ್ದರೆ ಖಂಡಿತ ವ್ಯತ್ಯಾಸವಾಗುತ್ತದೆ... 

ಏನು ವ್ಯತ್ಯಾಸವಾಗಲ್ಲ...The Best Kannada Motivational Article

೬) ಇವತ್ತು ನಿಮ್ಮನ್ನು ನಿಮ್ಮ ಕೆಲಸದಿಂದ ಕಿತ್ತಾಕಿದರೂ ಏನು ವ್ಯತ್ಯಾಸವಾಗಲ್ಲ. ಆದರೆ ನಿಮ್ಮಲ್ಲಿ ಸೆಲ್ಫ ಇಂಡಿಪೆಂಡೆಂಟ್ (Self  Independent) ಆಗುವ ಯೋಚನೆ ಇಲ್ಲದಿದ್ದರೆ ಖಂಡಿತ ನಷ್ಟವಾಗುತ್ತದೆ... 

ಏನು ವ್ಯತ್ಯಾಸವಾಗಲ್ಲ...The Best Kannada Motivational Article

೭) ಒಂದು ವೇಳೆ ನಿಮಗೆ ಬ್ಯುಸಿನೆಸಲ್ಲಿ (Business) ಲಕ್ಷಗಟ್ಟಲೇ ನಷ್ಟವಾದರೆ ಏನು ವ್ಯತ್ಯಾಸವಾಗಲ್ಲ. ಆದರೆ ಲಕ್ಷದಲ್ಲಾಗಿರುವ ನಷ್ಟವನ್ನು ಕೋಟಿಗಳ ಲಾಭದಲ್ಲಿ ಬದಲಾಯಿಸುವ ಛಲ ನಿಮ್ಮಲ್ಲಿರದಿದ್ದರೆ ಖಂಡಿತ ವ್ಯತ್ಯಾಸವಾಗುತ್ತದೆ... 

The Best Kannada Motivational Article

೮) ನೀವು ಸಾಲದಲ್ಲಿ ಸಾಯುತ್ತಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ಸಾಲದಿಂದ ಹೊರಬರಲು ಕಷ್ಟಪಟ್ಟು ನಿಯತ್ತಾಗಿ ದುಡಿಯದಿದ್ದರೆ ವ್ಯತ್ಯಾಸವಾಗುತ್ತದೆ... 

The Best Kannada Motivational Article

೯) ಸದ್ಯಕ್ಕೆ ನಿಮ್ಮಲ್ಲಿ ಸ್ಪೆಷಲ್ ಸ್ಕಿಲಗಳಿರದಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನಿಮ್ಮಲ್ಲಿ ಏನಾದರೂ ಒಂದನ್ನು ಕಲಿಯುತ್ತೇನೆ, ಕಲಿತು ಸಾಧಿಸುತ್ತೇನೆ ಎಂಬ ಉತ್ಸಾಹವಿಲ್ಲದಿದ್ದರೆ ಎಲ್ಲವೂ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೦) ನೀವು ಎಕ್ಸಾಮಲ್ಲಿ ಫೇಲ್ ಆದರೂ ಏನು ವ್ಯತ್ಯಾಸವಾಗಲ್ಲ. ಆದರೆ ನಿಮ್ಮಲ್ಲಿ Knowledge ಇಲ್ಲದಿದ್ದರೆ ಖಂಡಿತ ದೊಡ್ಡ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೧) ನಿಮ್ಮ ಹೆಜ್ಜೆಗೆ ಹೆಗಲು ಕೊಡಲು ನಿಮ್ಮ ಜೊತೆ ಯಾರು ಇಲ್ಲದಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವೇ ಕೆಲಸ ಮಾಡದೆ ನಿಮ್ಮ ಕನಸುಗಳಿಗೆ ಹೆಗಲು ಕೊಡದಿದ್ದರೆ ಖಂಡಿತ ವ್ಯತ್ಯಾಸವಾಗುತ್ತದೆ... 
ಏನು ವ್ಯತ್ಯಾಸವಾಗಲ್ಲ - The Best Kannada Motivational Article

೧೨) ನಿಮ್ಮ ಕನಸುಗಳ ಮೇಲೆ ಯಾರಿಗೂ ನಂಬಿಕೆ ಇಲ್ಲದಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನಿಮ್ಮ ಕನಸುಗಳು ಮೇಲೆ ನಿಮಗೇ ನಂಬಿಕೆಯಿಲ್ಲದಿದ್ದರೆ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೩) ಬೇರೆಯವರು ನಿಮ್ಮ ಬ್ಯುಸಿನೆಸ್ ಐಡಿಯಾಗಳನ್ನು ಬಕ್ವಾಸ್ ಎಂದು ಬೈದರೆ ಏನು ವ್ಯತ್ಯಾಸವಾಗುವುದಿಲ್ಲ. ಆದರೆ ನೀವು ನಿಮ್ಮ ಐಡಿಯಾಗಳನ್ನು ಇಂಪ್ಲಿಮೆಂಟ್ ಮಾಡಿ ಬೈದವರ ಬಾಯಿ ಮುಚ್ಚಿಸದಿದ್ದರೆ ಖಂಡಿತ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೪) ನಿಮ್ಮ ಲುಕ್ (Look) ಚೆನ್ನಾಗಿಲ್ಲ, ನೀವು ದಪ್ಪಗೀದ್ದೀರಿ, ತೆಳ್ಳಗಿದ್ದೀರಿ, ಕಪ್ಪಗಿದ್ದೀರಿ ಎಂದರೆ ಏನು ವ್ಯತ್ಯಾಸವಾಗಲ್ಲ. ಆದರೆ ನಿಮ್ಮ ಕೆಲಸ ಚೆನ್ನಾಗಿಲ್ಲದಿದ್ದರೆ ಎಲ್ಲವೂ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೫) ನಿಮ್ಮ ಗರ್ಲಫ್ರೆಂಡ್ ಅಥವಾ ಬಾಯಫ್ರೆಂಡ್ ನಿಮ್ಮನ್ನು ಬಿಟ್ಟೊದ್ರೂ ಏನು ವ್ಯತ್ಯಾಸವಾಗಲ್ಲ. ಆದ್ರೆ ನೀವು ಅವಳ / ಅವನ ನೆನಪಲ್ಲೇ ಕೊರಗಿ ಕಣ್ಣೀರಾಕುತ್ತಾ ಕುಂತರೆ ವ್ಯತ್ಯಾಸವಾಗುತ್ತದೆ. ಈಗಲೂ ನಿಮ್ಮ ಎಕ್ಸ್ ಲವರ್ (X -Lover) ನಿಮ್ಮನ್ನು ಅನಸಕ್ಸೆಸಫುಲ್ (Unsuccessful) ಎಂದುಕೊಂಡರೆ ಭಾರೀ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೬) ನಿಮಗೆ ಹೆಜ್ಜೆಹೆಜ್ಜೆಗೂ ಶತ್ರುಗಳಿದ್ದರೂ ಏನು ವ್ಯತ್ಯಾಸವಾಗಲ್ಲ. ಆದರೆ ಹೆದರಿ ನೀವು ಹೆಜ್ಜೆಯಿಡಲು ಹಿಂದೇಟು ಹಾಕಿದರೆ ವ್ಯತ್ಯಾಸವಾಗುತ್ತದೆ... 

The Best Kannada Motivational Article

೧೭) ನಿಮ್ಮ ದಾರಿಯಲ್ಲಿ ಕಲ್ಲು ಮುಳ್ಳುಗಳಿದ್ದರೆ ಏನು ವ್ಯತ್ಯಾಸವಾಗಲ್ಲ. ಆದರೆ ನೀವು ನಡೆಯುವುದನ್ನೇ ನಿಲ್ಲಿಸಿದರೆ ವ್ಯತ್ಯಾಸವಾಗುತ್ತದೆ... 

The Best Kannada Motivational Article

                 ನಮ್ಮ ಜೀವನದಲ್ಲಿ ಬೇರೆಯವರಿಂದ ಆಗುವ ಹಾನಿಯೇನು ದೊಡ್ಡದಲ್ಲ. ಆದರೆ ನಮಗೆ ನಾವೇ ಮಾಡಿಕೊಳ್ಳುವ ಹಾನಿಗಳು ದೊಡ್ಡದಾಗಿವೆ. ಬದುಕಲ್ಲಿ ಯಾವುದಕ್ಕಾಗಿ ಯಾವಾಗ ವ್ಯತ್ಯಾಸವಾಗುತ್ತದೆ? ಯಾವಾಗ ವ್ಯತ್ಯಾಸವಾಗುವುದಿಲ್ಲ? ಎಂಬುದನ್ನು ನಾವು ಚೆನ್ನಾಗಿ ಅರಿತುಕೊಂಡರೆ ನಮ್ಮ ಬಾಳು ಸುಂದರವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಜೊತೆಗೆ ಲೈಕ್ ಮತ್ತು ಶೇರ್ ಮಾಡಿ.

The Best Kannada Motivational Article


Blogger ನಿಂದ ಸಾಮರ್ಥ್ಯಹೊಂದಿದೆ.