ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

Chanakya Niti in Kannada

        ನಿಖಿಲ ಇಂಜಿನಿಯರಿಂಗ್ ಮುಗಿಸಿ ಪುಣೆಯ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅವನ ಟ್ಯಾಲೆಂಟಗೆ ತಕ್ಕುದಾದ ಕೆಲಸ ಅದಾಗಿರಲಿಲ್ಲ. ಅವನಿಗೆ ಇಂಜಿನಿಯರಿಂಗ ಓದಿದಕ್ಕೆ ದೊಡ್ಡ ಪಶ್ಚಾತ್ತಾಪವಾಗಿತ್ತು. ಅವನಿಗೆ "ಕೆಲಸ ಹುಡುಕಿಕೊಂಡು ಪರರಾಜ್ಯಕ್ಕೆ ಪರದೇಶಿಯಂತೆ ಬಂದೆನಲ್ಲ?'' ಎಂಬ ಬೇಜಾರಿತ್ತು. ಆದರೂ ಆತ ತನ್ನ ಕೆಲಸವನ್ನು ನಿಯತ್ತಾಗಿ ಮಾಡಿಕೊಂಡು ನೂರಾರು ಚಿಂತೆಗಳಲ್ಲಿ ಕಳೆದು ಹೋಗುತ್ತಿದ್ದನು. ಅಂಥದರಲ್ಲಿ ಅವನ ಒಂಟಿತನ ಅವನ ಮಾನಸಿಕ ನೆಮ್ಮದಿಯನ್ನು ಕಿತ್ತು ತಿನ್ನುತ್ತಿತ್ತು. ಮೆಕಾನಿಕಲ್ ಇಂಜಿನಿಯರ್ ಆಗಿರುವುದರಿಂದ ಅವನ ಲೈಫಲ್ಲಿ ಗರ್ಲಫ್ರೆಂಡ್ ಎಂಬುವವಳು ಬರೀ ನೀಲಿ ಕನಸುಗಳಿಗಷ್ಟೇ ಸಿಮೀತಳಾಗಿದ್ದಳು. ಅದಕ್ಕಾಗಿ ಆತ ಸಣ್ಣಪುಟ್ಟ ವಿಷಯಗಳಿಗೆಲ್ಲ ಸುಮ್ಮನೆ ಸಿಡುಕುತ್ತಿದ್ದನು.

ಗೋವಾ ಹುಡುಗಿಯ ಪ್ರೇಮಕಥೆ Friendship love story in Kannada

                                                 ನಿಖಿಲ್ ಪ್ರತಿಕ್ಷಣ ಪ್ರೇಯಸಿಯ ಹುಡುಕಾಟದಲ್ಲಿರುತ್ತಿದ್ದನು. ಆದರೆ ಆತ ಹುಡುಗಿಯರನ್ನು ಅತಿಯಾಗಿ ದ್ವೇಷಿಸುತ್ತಿದ್ದನು. ಏಕೆಂದರೆ ಕಾಲೇಜಿನಲ್ಲಿರುವಾಗ ಆತನಿಗೆ ಒಬ್ಬಳು ಪ್ರೀತಿಸಿ ಮೋಸ ಮಾಡಿದ್ದಳು. ಪುಣೆ ಒಂದು ಇಂಡಸ್ಟ್ರಿಯಲ್ ಏರಿಯಾ ಆಗಿರುವುದರಿಂದ ಅಲ್ಲಿ ಕಂಪನಿಗಳಿಗೆ, ಕೆಲಸಗಾರರಿಗೆ  ಏನು ಬರವಿರಲಿಲ್ಲ. ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಯುವಕ ಯುವತಿಯರು ಕೆಲಸ ಅರಸಿಕೊಂಡು ಪುಣೆ ನಗರಕ್ಕೆ ಬಂದು ಸೆಟ್ಲಾಗುತ್ತಿದ್ದರು. ಯೌವ್ವನದ ಪ್ರವಾಹದಲ್ಲಿ ದೇಹದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗದೆ ಪರದಾಡುವವರು ಸಾಕಷ್ಟು ಜನರಿದ್ದರು. ಅಸಂಖ್ಯಾತ ಯುವಕ ಯುವತಿಯರು ಪಾರ್ಕಗಳಲ್ಲಿ ಕೈಕೈ ಹಿಡಿದುಕೊಂಡು ಅಲೆಯುವುದನ್ನು ನೋಡಿ ನಿಖಿಲ ನೊಂದುಕೊಳ್ಳುತ್ತಿದ್ದನು. "ತನಗೂ ಒಬ್ಬಳು ಪ್ರೇಯಸಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು..." ಎಂದು ಒಳಗೊಳಗೆ ಕೊರಗುತ್ತಿದ್ದನು. ಆದರೆ ಒಬ್ಬಳು ಮಾಡಿದ ಮೋಸಕ್ಕೆ ಆತ ಉಳಿದ ಹುಡುಗಿಯರನ್ನೆಲ್ಲ ದ್ವೇಷಿಸುತ್ತಿದ್ದನು. ಐಟಿ ಪಾರ್ಕಲ್ಲಿ ನಾಚಿಕೆ ಬಿಟ್ಟು ಸುತ್ತುವ ಪ್ರೇಮಿಗಳನ್ನು ನೋಡುತ್ತಾ ಎಲ್ಲವನ್ನೂ ಕಳೆದುಕೊಂಡಂತೆ ಕುಳಿತಿರುತ್ತಿದ್ದನು.

ಗೋವಾ ಹುಡುಗಿಯ ಪ್ರೇಮಕಥೆ Friendship love story in Kannada

                     ಒಂದಿನ ನಿಖಿಲ ಒಂದು ಪಾರ್ಕಲ್ಲಿ ಒಬ್ಬನೇ ಏನೋ ಯೋಚಿಸುತ್ತಾ ಕುಳಿತ್ತಿದ್ದನು. ಅವನ ಕಣ್ಣಿಗೆ ಸರಸವಾಡುತ್ತಾ ಸಾಗುತ್ತಿರುವ ಪ್ರೇಮಿಗಳು ಕಂಡರು. ಬೇಡವೆಂದರು ಅವನ ಕಣ್ಣುಗಳು ಅವರನ್ನೇ ಹಿಂಬಾಲಿಸಿದವು. ಆ ಪ್ರೇಮಿಗಳು ಒಂದು ದಟ್ಟವಾದ ಪೊದೆ ಹಿಂದೆ ಸೇರಿಕೊಂಡು ಸರಸ ಸಲ್ಲಾಪದಲ್ಲಿ ಮುಳುಗಿದರು. ಅವರ ನಗುವಿನ ಸದ್ದು ಅವನೆದೆಯನ್ನು ಮತ್ತಷ್ಟು ನೋಯಿಸಿತು. ಹುಡುಗಿ ಕೊಡುತ್ತಿರುವ ಬಿಸಿಯಾದ ಮುತ್ತುಗಳಿಂದ ನಾಚಿ ನೀರಾಗಿದ್ದ ಹುಡುಗನ ಮುಖ ನೋಡಿ ನಿಖಿಲ ನಿರಾಶನಾದನು. ಆ ಹುಡುಗನ ಬಾಹು ಬಂಧನದಲ್ಲಿ ಸ್ವರ್ಗ ಸುಖವನ್ನು ಅನುಭವಿಸುತ್ತಿರುವ ಹುಡುಗಿಗೆ ಹಿಡಿಶಾಪ ಹಾಕುತ್ತಾ ನಿಖಿಲ ಅಲ್ಲಿಂದ ಹೊರಟು ಬಸ್ಸಿಗಾಗಿ ಕಾಯುತ್ತಾ ನಿಂತನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                                 ನಿಖಿಲ ಸ್ವಲ್ಪ ಸಮಯ ಕಾದ ನಂತರ ಒಂದು ಬಸ್ಸು ಪ್ರಯಾಣಿಕರಿಂದ ತುಂಬಿ ತುಳುಕುತ್ತಾ ಬಂತು. ನಿಖಿಲನಿಗೆ ಆ ಬಸ್ಸಲ್ಲಿ ಕುಳಿತುಕೊಳ್ಳಲು ಜಾಗ ಸಿಗಲಿಲ್ಲ. ಆತ ನಿಂತುಕೊಂಡೇ ಪ್ರಯಾಣಿಸಬೇಕಾದ ಸಂದರ್ಭ ಎದುರಾಯಿತು. ಪುಣೆ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ನಿಖಿಲ ನಿಂತಿದ್ದನು. ಬಸ್ಸು ವೇಗವಾಗಿ ಚಲಿಸುತ್ತಿತ್ತು. ಒಮ್ಮೆಲೇ ಬಸ್ಸಿಗೆ ಎದುರಾಗಿ ಗೋಮಾತೆ ಬಂದಿದ್ದರಿಂದ ಡ್ರೈವರ್ ಜೋರಾಗಿ ಬ್ರೇಕ್ ಹಾಕಿದನು. ಆಗ ನಿಖಿಲ ಆಯತಪ್ಪಿ ಮುಂದೆ ನಿಂತಿರುವ ಹುಡುಗಿಯನ್ನು ತಬ್ಬಿಕೊಂಡನು. ಅವನೇನು ಬೇಕಂತಾ ಅವಳನ್ನು ತಬ್ಬಿಕೊಂಡಿರಲಿಲ್ಲ. ಆದರೆ ಅವಳು ಅದನ್ನೇ ದೊಡ್ಡ ರಂಪಾಟ ಮಾಡಿ ಅವನ ಮಾನ ಮರ್ಯಾದೆಯನ್ನು ಮೂರುಕಾಸಿಗೆ ಹರಾಜು ಹಾಕಿದಳು. ಅವನು ಸ್ವಾರಿಗಳ ಸುರಿಮಳೆ ಸುರಿಸಿದರೂ ಆಕೆ ಬೈಗುಳಗಳ ಬೆಂಕಿಮಳೆಯನ್ನು ಸುರಿಸಿದಳು. ವಿಧಿಯಿಲ್ಲದೆ ಆತ ಬಸ್ಸಿನಿಂದ ಇಳಿದು ಬೇಸರದಲ್ಲಿ ತನ್ನ ಬಾಡಿಗೆ ರೂಮಿನ ದಾರಿ ತುಳಿದನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

             ರಾತ್ರಿ ೧೨ ಗಂಟೆ ದಾಟಿದರೂ ನಿಖಿಲನನ್ನು ನಿದ್ರಾದೇವಿ ಆವರಿಸಿಕೊಂಡಿರಲಿಲ್ಲ. ಖಾಲಿ ಜೀವನದಲ್ಲಿನ ಪೋಲಿ ಯೌವ್ವನ ಅವನನ್ನು ಅಣುಕಿಸುತ್ತಿತ್ತು. ಅವನು ಸಂಜೆ ಬಸ್ಸಿನಲ್ಲಿ ನಡೆದ ಘಟನೆಯನ್ನೇ ಪದೇಪದೇ ನೆನಪಿಸಿಕೊಂಡು ಕೊರಗುತ್ತಿದ್ದನು. ಅವನಿಗೆ ಹುಡುಗಿಯರ ಮೇಲೆ ಮತ್ತಷ್ಟು ಕೋಪ ಬಂದಿತು. ಅವನು ಹುಡುಗಿಯರನ್ನು ಮತ್ತಷ್ಟು ದ್ವೇಷಿಸಲು ಪ್ರಾರಂಭಿಸಿದನು. ನಿದ್ರೆ ಬಾರದೆ ಹೊರಳಾಡಿ ಅರೆನಿದ್ರೆ ಮಾಡಿ ಮರುದಿನ ಆಫೀಸಿಗೆ ಸ್ವಲ್ಪ ಲೇಟಾಗಿ ಹೋದನು. 

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

             ನಿದ್ರೆಯಿಲ್ಲದೆ ಅವನ ಕಣ್ಣುಗಳು ಕೆಂಪಾಗಿದ್ದವು. ಅಷ್ಟಕ್ಕೆ ಆಫೀಸಿನಲ್ಲಿ ಮ್ಯಾನೇಜರ ಅವನನ್ನು ತರಾಟೆಗೆ ತೆಗೆದುಕೊಂಡು "ರಾತ್ರಿ ಯಾವ ಬಾರಲ್ಲಿ ಬಿದ್ದಿದ್ದೆ?'' ಎಂದು ರೇಗಿಸಿದರು. ಅವನನ್ನು ನೋಡಿ ಅಲ್ಲಿದ್ದ ಎಲ್ಲ ಹುಡುಗಿಯರು ಗೊಳ್ಳನೆ ನಕ್ಕರು. ನಿಖಿಲ ತಲೆತಗ್ಗಿಸಿ ತನ್ನ ಕೆಲಸದ ಕಡೆಗೆ ಗಮನ ಹರಿಸಿದನು. ಯಾರೋ ಹಿಂದಿನಿಂದ ಅವನನ್ನು ಕರೆದಂಗಾಯಿತು. ಅವನು ತಿರುಗಿ ನೋಡಿದಾಗ ಅವನ ತಲೆ ತಿರುಗುವುದೊಂದೇ ಬಾಕಿಯಿತ್ತು. ಏಕೆಂದರೆ ನಿನ್ನೆ ಬಸ್ಸಿನಲ್ಲಿ ಬೈದ ಹುಡುಗಿ ಅವನ ಕಣ್ಣೆದುರಿಗೆ ನುಲಿಯುತ್ತಾ ನಿಂತಿದ್ದಳು. ಆ ಹುಡುಗಿ ನಿನ್ನೆ ಬಸ್ಸಿನಲ್ಲಿ ನಡೆದಿದ್ದಕ್ಕೆ ಸ್ವಾರಿ ಕೇಳಿ ಕಾಂಪ್ರೊಮೈಸ್ ಮಾಡಿಕೊಳ್ಳಲು ಮುಂದಾದಳು. ಆದರೆ ಆತ ಏನನ್ನು ಮಾತಾಡದೆ ಮುಖ ತಿರುಗಿಸಿಕೊಂಡು ಹೋದನು.

ಗೋವಾ ಹುಡುಗಿಯ ಪ್ರೇಮಕಥೆ Friendship love story in Kannada

              ಬಸ್ಸಿನಲ್ಲಿ ಬೈದ ಹುಡುಗಿ ನಿಖಿಲನಿಗಾಗಿ ಬಸಸ್ಟ್ಯಾಂಡಲ್ಲಿ ಕಾಯುತ್ತಾ ನಿಂತಿದ್ದಳು. ಆದರೆ ನಿಖಿಲ ಅವತ್ತು ಅವಳ ಕಣ್ತಪ್ಪಿಸಿ ಬೇರೆ ಬಸ್ಸಿಡಿದು ಹೋದನು. ಆ ಹುಡುಗಿಯ ಹೆಸರು ಅನುಪಮಾ ಎಂದಿತ್ತು. ಅವಳು ಗೋವಾದವಳು. ಅವಳು ಸಹ ಅವನಂತೆ ಕೆಲಸ ಹುಡುಕಿಕೊಂಡು ಪುಣೆ ಮಹಾನಗರದ ಪಾಲಾಗಿದ್ದಳು. ಅವಳು ಕೋಪದಲ್ಲಿ ನಿಖಿಲನಿಗೆ ಬೈದು ರಾತ್ರಿಯೆಲ್ಲ "ನಾನು ಮಾಡಿದ್ದು ತಪ್ಪು..." ಎಂದು ಕೊರಗಿದ್ದಳು. ಅಲ್ಲದೆ ಮುಂಜಾನೆ ಆಫೀಸಿಗೆ ಬರುವಾಗ ಆಕೆ ಬಸ್ಸಲ್ಲಿ ನಿಖಿಲನ ಒಳ್ಳೆತನವನ್ನು ನೋಡಿ ಮೆಚ್ಚಿಕೊಂಡಿದ್ದಳು. ಮುಂಜಾನೆ ನಿಖಿಲ ಬಸ್ಸಲ್ಲಿ ಬರುವಾಗ ಬಸ್ಸಲ್ಲಿ ಅಷ್ಟೇನು ಜನಜಂಗುಳಿ ಇರಲಿಲ್ಲ. ಅವನಿಗೆ ಸೀಟು ಸಿಕ್ಕಿದ್ದರಿಂದ ಆತ ಕಿವಿಯಲ್ಲಿ ಇಯರಪೋನ ಹಾಕಿಕೊಂಡು ಹಾಡು ಕೇಳುತ್ತಾ ಕಿಟಕಿ ಪಕ್ಕ ಆರಾಮಾಗಿ ಕುಳಿತ್ತಿದ್ದನು. 

ಗೋವಾ ಹುಡುಗಿಯ ಪ್ರೇಮಕಥೆ Friendship love story in Kannada

              ಬಸ್ ಮುಂದೆ ಸಾಗಿದಂತೆ ಜನಜಂಗುಳಿ ಹೆಚ್ಚಾಯಿತು. ಒಬ್ಬಳು ಮದುವೆಯಾದ ಹುಡುಗಿ ಕೊಂಕುಳಲ್ಲಿ ಮಗುವನ್ನು ಹೊತ್ತುಕೊಂಡು ಬಸ್ ಹತ್ತಿದಳು. ಎಲ್ಲ ಕಡೆ ಕಣ್ಣಾಯಿಸಿ ನೋಡಿದಳು. ಆದರೆ ಎಲ್ಲಿಯೂ ಸೀಟ ಖಾಲಿಯಿರಲಿಲ್ಲ. ಅದಕ್ಕಾಗಿ ಸಪ್ಪೆ ಮೋರೆ ಹಾಕಿಕೊಂಡು ನಿಂತಳು. ವೇಗದಲ್ಲಿ ಬಸ್ಸು ವಕ್ರವಕ್ರವಾಗಿ ಚಲಿಸುತ್ತಿರುವಾಗ ಅವಳು ಓಲಾಡುವುದನ್ನು ನೋಡುತ್ತಾ ಎಲ್ಲ ಹುಡುಗರು ಮಜಾ ತೆಗೆದುಕೊಳ್ಳುತ್ತಿದ್ದರು. ಅವಳುಟ್ಟಿದ್ದ ತಿಳಿಗುಲಾಬಿ ಸೀರೆ ಎಲ್ಲರ ಗಮನವನ್ನು ಸೆಳೆದಿತ್ತು. ಮದುವೆಯಾಗಿ ಒಂದು ಮಗುವಾಗಿದ್ದರೂ ಅವಳ ಸೌಂದರ್ಯ ಎಲ್ಲರನ್ನೂ ಚುಂಬಕದಂತೆ ಸೆಳೆಯುತ್ತಿತ್ತು. ಪಡ್ಡೆ ಹುಡುಗರಷ್ಟೇ ಅಲ್ಲದೆ ಮದುವೆಯಾದ ಗಂಡಸರು ಸಹ ಅವಳ ಅಂಗಾಂಗಗಳನ್ನು ಕದ್ದುಮುಚ್ಚಿ ತಮ್ಮ ನೀಲಿ ಕಣ್ಣುಗಳಿಂದ ಸ್ಕ್ಯಾನ್ ಮಾಡುತ್ತಿದ್ದರು. ಕಾಮದ ಕಳ್ಳ ನೋಟಗಳನ್ನು ಎದುರಿಸಲಾಗದೆ ಆಕೆ ಮಾನಸಿಕ ಹಿಂಸೆ ಅನುಭವಿಸಲು ಪ್ರಾರಂಭಿಸಿದಳು. ಅವಳ ಮನಸ್ಥಿತಿಯನ್ನು ತಕ್ಷಣವೇ ಅರ್ಥಮಾಡಿಕೊಂಡ ನಿಖಿಲ ಅವಳಿಗೆ ತನ್ನ ಜಾಗವನ್ನು ಬಿಟ್ಟುಕೊಟ್ಟು ತಾನು ನಿಂತನು. ಅವಳು ಅವನಿಗೆ ಧನ್ಯವಾದಗಳನ್ನು ಅರ್ಪಿಸಿ ಮುಗುಳ್ನಕ್ಕಳು. ಅಷ್ಟರಲ್ಲಿ ಅವನ ಆಫೀಸ ಬಂದಿದ್ದರಿಂದ ಆತ ಬಸ್ಸಿಳಿದು ವೇಗವಾಗಿ ಆಫೀಸಿಗೆ ಹೊರಟು ಹೋದನು.

ಗೋವಾ ಹುಡುಗಿಯ ಪ್ರೇಮಕಥೆ Friendship love story in Kannada

                       ನಿಖಿಲನ ಔದಾರ್ಯಕ್ಕೆ ಅನುಪಮಾ ಇಂಪ್ರೆಸ್ ಆಗಿದ್ದಳು. ಅದಕ್ಕಾಗಿ ಅವನಿಗೆ ಕ್ಷಮೆ ಕೇಳಿ ರಾಜಿಯಾಗಲು ನಿರ್ಧರಿಸಿದಳು. "ಎಷ್ಟು ಒಳ್ಳೆ ಹುಡುಗನನ್ನು ಅಪಾರ್ಥ ಮಾಡಿಕೊಂಡು ದುಡುಕಿದೆನಲ್ಲ..." ಎಂದವಳು ಬೇಸರಪಟ್ಟುಕೊಂಡಳು. ಅವಳು ಸಾಕಷ್ಟು ಹರಸಾಹಸ ಮಾಡಿ ನಿಖಿಲನನ್ನು ಮಾತಾಡಿಸುವಲ್ಲಿ ಸಫಲಳಾಗಿ ಅವನತ್ರ ಕ್ಷಮೆ ಕೇಳಿ ರಾಜಿಯಾದಳು. ಅವಳು "ಇನ್ಮುಂದೆ ಒಳ್ಳೆ ಫ್ರೆಂಡ್ಸಾಗಿರೋಣ..." ಎಂದಾಗ ಅವನ ಮುಖದಲ್ಲಿನ ಮಂದಹಾಸ ಮರೆಯಾಯಿತು. ಅವನು "ನಿನ್ನ ಫ್ರೆಂಡಶೀಪ ನನಗೆ ಬೇಕಿಲ್ಲ. ನಿನ್ನ ಪಾಡಿಗೆ ನೀನಿರು..." ಎಂದು ಜಾರಿಕೊಳ್ಳಲು ಯತ್ನಿಸಿದನು. ಆತ ಮೇಲ್ನೋಟಕ್ಕೆ ಹುಡುಗಿಯರನ್ನು ದ್ವೇಷಿಸುತ್ತಿದ್ದರೂ ಆತ ಒಳಗಡೆ ಪ್ರೇಯಸಿಗಾಗಿ ಹಂಬಲಿಸುತ್ತಿರುವುದು ಅವಳಿಗೆ ಅರ್ಥವಾಯಿತು. ಆಕೆ ಅವನಿಗೆ ಒಂದು ಹುಡುಗ ಹುಡುಗಿ ಒಳ್ಳೇ ಫ್ರೆಂಡ್ಸಾಗಿರಬಹುದು ಎಂದು ಬಹಳಷ್ಟು ಕನವಿನ್ಸ್ ಮಾಡಿದಾಗ ಆತ ಅವಳೊಂದಿಗೆ ತೋರಿಕೆಯ ಫ್ರೆಂಡಾಗಲು ಮುಂದಾದನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                 ದಿನ ಕಳೆದಂತೆ ನಿಖಿಲ ಮತ್ತು ಅನುಪಮಾಳ ಗೆಳೆತನ ಘಾಡವಾಗುತ್ತಾ ಸಾಗಿತು. ಎಲ್ಲರೂ ಅವರನ್ನು ಪ್ರೇಮಿಗಳೆಂದು ಭಾವಿಸಿ ಅವರ ಕಾಲೆಳೆಯಲು ಪ್ರಾರಂಭಿಸಿದರು. ನಿಖಿಲ ಅನುಪಮಾಳನ್ನು ಫ್ರೆಂಡಾಗಿ ನೋಡುವುದಕ್ಕಿಂತ ಹೆಚ್ಚಾಗಿ ಅವಳನ್ನು ಪ್ರೇಯಸಿಯಾಗಿ ನೋಡುತ್ತಿದ್ದನು. ಆದರೆ ನಿಖಿಲನನ್ನು ಪರಿಶುದ್ಧ ಫ್ರೆಂಡಾಗಿ ಕಾಣುತ್ತಿದ್ದ ಅನುಪಮಾಳಿಗೆ ಸಹೋದ್ಯೋಗಿಗಳ ಕುಚೇಷ್ಟೆಯನ್ನು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. "ಒಬ್ಬ ಹುಡುಗಿ ಒಬ್ಬ ಹುಡುಗನ ಜೊತೆ ಫ್ರೆಂಡಾಗಿರಬಾರದಾ?" ಎಂದವಳು ಎಲ್ಲರನ್ನು ತರಾಟೆಗೆ ತೆಗೆದುಕೊಂಡಳು. ಆದರೆ ಎಲ್ಲರೂ ಅವಳನ್ನು ಮತ್ತಷ್ಟು ರೇಗಿಸಿದರು. ಪ್ರತಿದಿನ ಅವಳನ್ನು ಹೆಚ್ಚಿಗೆ ರೇಗಿಸಲು ಪ್ರಾರಂಭಿಸಿದರು. "ಸಾಮಾನ್ಯವಾಗಿ ಒಂದು ಹುಡುಗ ಮತ್ತು ಹುಡುಗಿ ಎಷ್ಟೇ ಒಳ್ಳೇ ಸ್ನೇಹಿತರಾಗಿದ್ದರೂ ಸಹ ಜನ ಅವರನ್ನು ಪ್ರೇಮಿಗಳಂತೆಯೇ ನೋಡುತ್ತಾರೆ. ಅದು ಅವರ ಕಣ್ಣುಗಳ ಸಮಸ್ಯೆ. ನಮ್ಮ ಸಮಸ್ಯೆಯಲ್ಲ. 'ನಾವು ಏನು? ನಮ್ಮ ಗೆಳೆತನ ಎಂಥದ್ದು?' ಎಂಬುದು ನಮಗೆ ಗೊತ್ತಿದ್ದರೆ ಸಾಕು. ಜನ ಏನೆಂದುಕೊಂಡರು ನಿಮಗೇನು ವ್ಯತ್ಯಾಸವಾಗಲ್ಲ" ಎಂದವಳು ನಿಖಿಲನೊಂದಿಗಿನ ಗೆಳೆತನವನ್ನು ಧೈರ್ಯವಾಗಿ ಮುಂದುವರೆಸಿದಳು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                          ಅನುಪಮಾ ನಿಖಿಲನನ್ನು ಅತಿಯಾಗಿ ನಂಬುತ್ತಿದ್ದಳು. ಅವನತ್ರ ಯಾವುದೇ ಮುಜುಗುರವಿಲ್ಲದೆ ಗಂಟೆಗಟ್ಟಲೆ ಹರಟುತ್ತಿದ್ದಳು. ರಾತ್ರಿ ನಿದ್ರೆ ಬರದಿದ್ದರೆ ಫೋನ್ ಕಾಲ ಮಾಡಿ ಅವನ ತಲೆ ತಿನ್ನುತ್ತಿದ್ದಳು. ಆವಾಗಾತ ಅವಳಿಗೆ ಫೋನಲ್ಲಿ ಬೋರಿಂಗ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದನು. ಮುಂದೆ ಅವರಿಬ್ಬರು ಹಣ ಉಳಿಸುವುದಕ್ಕಾಗಿ ಒಂದೇ ಮನೆಯಲ್ಲಿರಲು ನಿರ್ಧರಿಸಿದರು. ಗುರ್ತು ಪರಿಚಯವಿಲ್ಲದ ಪರರಾಜ್ಯದ ಪುಣೆ ನಗರದಲ್ಲಿ ಅವಳು ಬರೀ ನಿಖಿಲನನ್ನು ಮಾತ್ರ ನಂಬುತ್ತಿದ್ದಳು. ಅದಕ್ಕಾಗಿ ಅವಳು ಅವನೊಂದಿಗೆ ಒಂದೇ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು. ಪಾಶ್ಚಿಮಾತ್ಯ ಜೀವನ ಶೈಲಿಯಿಂದ ಪ್ರಭಾವಿತಳಾದವಳಿಗೆ ಒಂದೇ ಮನೆಯಲ್ಲಿ ಒಬ್ಬ ಹುಡುಗನ ಜೊತೆ ಇರುವುದರಲ್ಲಿ ತಪ್ಪೇನು ಕಾಣಿಸಲಿಲ್ಲ. ಒಂದೇ ಮನೆಯಲ್ಲಿರುವುದರಿಂದ ಅವರಿಬ್ಬರ ಸ್ನೇಹ ಮತ್ತಷ್ಟು ಘಾಡವಾಯಿತು. ಆದರೆ ಈಗಲೂ ನಿಖಿಲ ಅನುಪಮಾಳನ್ನು ಪ್ರೇಯಸಿಯಂತೆಯೇ ಕಲ್ಪಿಸಿಕೊಳ್ಳುತ್ತಿದ್ದನು. ಅವಳ ಮನಸ್ಸಲ್ಲಿನ ಸ್ನೇಹ ಆದಷ್ಟು ಬೇಗ ಪ್ರೀತಿಯಾಗಿ ಬದಲಾಗಲಿ ಎಂದವನು ಪ್ರತಿಕ್ಷಣ ದೇವರಲ್ಲಿ ಪ್ರಾರ್ಥಿಸುತ್ತಿದ್ದನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                        ಕಂಪನಿ ಕೆಲಸಕ್ಕೆ ಒಂದು ವಾರ ರಜೆಯಿರುವುದರಿಂದ ಅನುಪಮಾ ನಿಖಿಲನನ್ನು ತನ್ನೂರಿಗೆ ಕರೆದುಕೊಂಡು ಹೋದಳು. ಅವಳ ಮನೆಯವರು ಅವಳಿಗೆ ನೀಡಿದ ಸ್ವಾತಂತ್ರ್ಯವನ್ನು ಕಂಡು ಅವನು ಬೆರಗಾದನು. ಅನುಪಮಾ ಅವನಿಗೆ ಗೋವಾದ ಸುಂದರ ತಾಣಗಳನ್ನು ತೋರಿಸಲು ಕರೆದುಕೊಂಡು ಹೋದಳು. ಗೋವಾದಲ್ಲಿ ಅವಳನ್ನು ಮಾಡರ್ನ ಡ್ರೆಸಲ್ಲಿ ನೋಡಿ ಅವನ ತಲೆ ತಿರುಗಿತು. ದಿನಾ ರೂಮಲ್ಲಿ ಆತ ಅವಳನ್ನು ಸ್ಲಿವಲೆಸ್ ಮತ್ತು ಶಾರ್ಟಗಳಲ್ಲಿ ನೋಡುತ್ತಿದ್ದರೂ ಅವನಿಗೆ ಏನು ಅನ್ನಿಸಿರಲಿಲ್ಲ. ಈಗ ಆತ ಅವಳಂದಕ್ಕೆ ಸಂಪೂರ್ಣವಾಗಿ ಸೆರೆಯಾಗಿದ್ದನು. ಗೋವಾ ಹುಡುಗಿಯನ್ನೊಮ್ಮೆ ಸೀರೆಯಲ್ಲಿ ನೋಡಬೇಕು ಎಂಬ ಕಳ್ಳ ಆಸೆ ಅವನ ಮನಸ್ಸಲ್ಲೊಮ್ಮೆ ಮೂಡಿ ಮರೆಯಾಯಿತು. 

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

             ಸ್ಕೂಟಿ ಮೇಲೆ ಹೋಗುವಾಗ ಆತ ಬೇಕಂತಲೆ ಅವಳನ್ನು ಒಂದೆರಡು ಬಾರಿ ಅಪ್ಪಿಕೊಂಡನು. ಆದರೆ ಅವಳು ಅವನು ಒಳ್ಳೆ ಹುಡುಗ ಬೇರೆ ಹುಡುಗರಂತೆ ಸಮಯ ಸಾಧಕನಲ್ಲವೆಂದುಕೊಂಡು ಸುಮ್ಮನಾದಳು. ಅವನು ಸಹ ಬೇರೆ ಹುಡುಗರಂತೆ ಕಣ್ಣಿಗೆ ಬಿದ್ದ ಗೋವಾ ಹುಡುಗಿಯರನ್ನು ಬಾಯ್ತೆರೆದು ನೋಡುತ್ತಾ ನಿಂತನು. ಅವಳು ಅನುಪಮಾಳನ್ನು ಮರೆತು ಬೇರೆ ಹುಡುಗಿಯರನ್ನು ನೋಡುತ್ತಾ ನಿಂತಿರುವಾಗ ಆಕೆ ಅವನನ್ನು ಎಚ್ಚರಿಸಿ ತರಾಟೆಗೆ ತೆಗೆದುಕೊಂಡಳು. ನಂತರ ಅವರಿಬ್ಬರೂ ಹಾಗೆಯೇ ಮಾತನಾಡುತ್ತಾ ಸಮುದ್ರದ ದಡದಲ್ಲಿ ಕುಳಿತುಕೊಂಡು ಮುಳುಗುತ್ತಿರುವ ಸೂರ್ಯನನ್ನು ನೋಡಿ ಭಾವುಕರಾದರು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                            ಮರುದಿನ ಮತ್ತೆ ಅನುಪಮಾ ನಿಖಿಲನನ್ನು ಗೋವಾದಲ್ಲಿ ಮಿಕ್ಕಿರುವ ಪ್ರವಾಸಿ ಸ್ಥಳಗಳನ್ನು ತೋರಿಸಲು ಕರೆದುಕೊಂಡು ಹೋದಳು. ಆದರೆ ಆತ ಮತ್ತೆ ಗೋವಾ ಸುಂದರಿಯರನ್ನು ಬಾಯಿಬಿಟ್ಟುಕೊಂಡು ನೋಡಲು ಶುರುಮಾಡಿದನು. ಆಗ ಅನುಪಮಾಳ ಬಾಯಿಯಿಂದ ಗೋವಾ ಹುಡುಗಿಯರ ಗೋಳು ಹೊರ ಬಂದಿತು. "ಗೋವಾಗೆ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವವರಿಗಿಂತ ಹುಡುಗಿಯರನ್ನು ನೋಡಲು, ಕುಡಿದು ಪಾರ್ಟಿ ಮಾಡಲು,  ಸೆಕ್ಸ್ ಮಾಡಿ ಸುಸ್ತಾಗಲು ಬರುವವರೇ ಹೆಚ್ಚಾಗಿದ್ದಾರೆ. ಗೋವಾದ ಹುಡುಗಿಯರು ಸ್ವಲ್ಪ ಮಾಡರ್ನ ಆಗಿ ಬಟ್ಟೆ ಹಾಕಿಕೊಳ್ಳುತ್ತಾರೆಂಬ ಮಾತ್ರಕ್ಕೆ ಅವರು ಬಿಟ್ಟಿ ಬಿದ್ದಿದ್ದಾರೆ ಎಂದಲ್ಲ. ಅವರೂ ಸಹ ಸ್ವದೇಶಿ ಸಂಸ್ಕೃತಿಯನ್ನು ಪಾಲಿಸುತ್ತಾರೆ. ಆದರೆ ಗೋವಾಗೆ ಬರುವ ಎಲ್ಲ ಗಂಡಸರು ಕೆಟ್ಟ ದೃಷ್ಟಿಯಿಟ್ಟುಕೊಂಡೇ ಗೋವಾಗೆ ಬರುತ್ತಾರೆ. ಗೋವಾದ ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ " ಎಂದಾಕೆ ಗೋವಾ ಹುಡುಗಿಯರ ಗೋಳನ್ನು ಹೊರಹಾಕಿದಳು. ಆಗ ಎಚ್ಚೆತ್ತುಕೊಂಡ ನಿಖಿಲ "ಸ್ವಾರಿ. ಆದರೆ ಗೋವಾದ ಹುಡುಗಿಯರಲ್ಲಿ ನಿನ್ನಷ್ಟು ಯಾರು ಮುದ್ದಾಗಿಲ್ಲ ಬಿಡು" ಎಂದನು. ಆಗ ಆಕೆ ಅವನನ್ನು ಓಡಾಡಿಸಿಕೊಂಡು ಮುದ್ದಾಗಿ ಹೊಡೆದಳು. ಆತ ನೋವಾದಂತೆ ನಾಟಕವಾಡುವಾಗ ಅವಳು ಅವನನ್ನು ಮಡಿಲಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡುತ್ತಿದ್ದಳು. ಆವಾಗಾತ ಅವಳ ಕೆನ್ನೆ ಕಚ್ಚಿ "ಫೂಲ್..." ಎಂದು ಬೀಚಿನೆಡೆಗೆ ಓಡಿ ಹೋದನು. ಆಕೆ ಅವನನ್ನು ಹಿಡಿಯಲು ಅವನಿಂದೆ ಓಡಿದಳು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                 ಗೋವಾದ ಸುಂದರ ತಾಣಗಳನ್ನು ಅನುಪಮಾಳಂಥ ಸುಂದರಿಯ ಜೊತೆ ಸುತ್ತಾಡುತ್ತಾ ಒಂದು ವಾರ ಕಳೆದದ್ದು ನಿಖಿಲನಿಗೆ ಗೊತ್ತೇ ಆಗಲಿಲ್ಲ. ಅವನ ಮನಸ್ಸಿನಲ್ಲಿ ಅನುಪಮಾ ಶಾಶ್ವತವಾಗಿ ನೆಲೆಯೂರಿದಳು. ಅವನು ಅವಳನ್ನು ಭಾವಿ ಪತ್ನಿಯಂತೆ ಕಾಣತೊಡಗಿದನು. ಗೋವಾದ ಮಾನ್ಸೂಸಿನಲ್ಲಿ ಅವಳೆದೆಯಲ್ಲಿ ಪ್ರೀತಿ ಮಳೆಯಾಗಬಹುದು, ತುಂತುರು ಮಳೆಯ ಪೋಲಿ ಚಳಿಯಲ್ಲಿ ಅವಳು ತನ್ನನ್ನು ತಬ್ಬಿಕೊಂಡು ಮುದ್ದಾಡಬಹುದು ಎಂಬೆಲ್ಲ ಲೆಕ್ಕಾಚಾರಗಳನ್ನು ಆತ ಹಾಕಿದ್ದನು. ಆದರೆ ಅವನ ಲೆಕ್ಕಾಚಾರಗಳೆಲ್ಲ ತಲೆಕೆಳಗಾದಾಗ ಆತ ನಿರಾಸೆಯಿಂದ ಅನುಪಮಾಳೊಂದಿಗೆ ಪುಣೆಗೆ ಮರಳಿದನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

          ಪುಣೆಗೆ ಮರಳುವಾಗ ರೈಲಿನಲ್ಲಿ ಅನುಪಮಾ ನಿಖಿಲನ ಭುಜದ  ಮೇಲೆ ತಲೆಯಿಟ್ಟು ನಿದ್ರೆಗೆ ಜಾರಿದ್ದಳು. ತನ್ನ ಕಾಲೇಜಿನಲ್ಲಾದ ಕಹಿ ಘಟನೆಯಿಂದಾಗಿ ಆತ ಹುಡುಗಿಯರನ್ನು ದ್ವೇಷಿಸುತ್ತಿದ್ದನು. ಆದರೆ ಆತ ತನಗೇ ಗೊತ್ತಿಲ್ಲದಂತೆ ಅನುಪಮಾಳನ್ನು ಪ್ರೀತಿಸಲು ಪ್ರಾರಂಭಿಸಿದನು. ಆದರೆ ಅವಳೆದೆಯಲ್ಲಿ ಪ್ರೀತಿಯಿರಲಿಲ್ಲ... ಅವಳೆದೆಯಲ್ಲಿ ಅವನ ಮೇಲೆ ಬರೀ ಸ್ನೇಹವಿತ್ತು. ಅವಳ ಸ್ನೇಹದ ಸಲುಗೆಯನ್ನೇ ಆತ ಪ್ರೀತಿಯೆಂದುಕೊಂಡಿದ್ದನು. ಅಲ್ಲದೆ ಅವನು ಅವಳಂದಕ್ಕೆ ಮಾರುಹೋಗಿದ್ದನು, ಮದುವೆಯಂತ ಆದರೆ ಅವಳನ್ನೇ ಎಂದು ನಿರ್ಧರಿಸಿದ್ದನು. ದಿನಾ ರಾತ್ರಿ ತನ್ನ ನೀಲಿ ಕನಸುಗಳಲ್ಲಿ  ಅನುಪಮಾಳನ್ನು ಕಲ್ಪಿಸಿಕೊಂಡು ಅದೆಷ್ಟೋ ಮೊದಲ ರಾತ್ರಿಗಳನ್ನು ಆತ ಸವಿದಿದ್ದನು. ಆದರೆ ಅವಳ ಮನಸ್ಸಲ್ಲಿ ಅಂಥಹ ಕೆಟ್ಟ ಆಲೋಚನೆಗಳೇನು ಬಂದಿರಲಿಲ್ಲ. ಅವಳ ಮನಸ್ಸು ಪರಿಶುದ್ಧವಾಗಿತ್ತು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                    ಚಿಕ್ಕ ವಯಸ್ಸಿನಲ್ಲಿ ಒಂದು ಹುಡುಗ ಮತ್ತು ಹುಡುಗಿ ಒಳ್ಳೇ ಸ್ನೇಹಿತರಾಗಿರುವುದು ತುಂಬಾ ಸುಲಭ. ಏಕೆಂದರೆ ಬಾಲ್ಯದಲ್ಲಿ ಭಾವನೆಗಳು ಪರಿಶುದ್ಧವಾಗಿರುತ್ತವೆ. ಆದರೆ ಅದೇ ಯೌವ್ವನದಲ್ಲಿ ಭಾವನೆಗಳು ಬದಲಾಗಿರುತ್ತವೆ. ಮನಸ್ಸು ಮಂಗನಂತಾಗಿರುತ್ತದೆ. ಅದಕ್ಕಾಗಿ ಈಗ ಸ್ನೇಹಿತರಾಗಿರುವುದು ಅಷ್ಟೊಂದು ಸುಲಭವಲ್ಲ. ಆದರೆ ಇದು ಖಂಡಿತ ಸಾಧ್ಯ. ಒಂದು ಹುಡುಗ ಮತ್ತು ಒಂದು ಹುಡುಗಿ ಒಂದೇ ಮನೆಯಲ್ಲಿ ಒಳ್ಳೇ ಫ್ರೆಂಡ್ಸಾಗಿರಬಹುದು. ಅದರಲ್ಲಿ ತಪ್ಪೇನಿಲ್ಲ. ಆದರೆ ಅದು ಸುಲಭವಾಗಿ ಸಾಧ್ಯವಾಗದ ಮಾತುಗಳಲ್ಲೊಂದು. 

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

         ನಾವು ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಬೆಸ್ಟ ಫ್ರೆಂಡಾಗಿರಬಹುದು. ಆದರೆ ಎದುರುಗಡೆ ಇರುವ ವ್ಯಕ್ತಿಯ ಭಾವನೆಗಳನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೂ ನಾವು ನಮ್ಮ ಭಾವನೆಗಳಿಗೆ ಒಂದು ಅತ್ಯುನ್ನತ ಸ್ಥಾನ ಕೊಟ್ಟರೆ ನಾವು ಬೇರೆ ಹುಡುಗಿ ಅಥವಾ ಹುಡುಗನ ಜೊತೆ ಲೈಫಲಾಂಗ್ ಬೆಸ್ಟ್ ಫ್ರೆಂಡಾಗಿರಬಹುದು. ಅನುಪಮಾ ತನ್ನ ಭಾವನೆಗಳಿಗೆ ಅತ್ಯುನ್ನತ ಸ್ಥಾನವನ್ನು ಕೊಟ್ಟು ನಿಖಿಲನಿಗೆ ಬೆಸ್ಟ ಫ್ರೆಂಡಾಗಿದ್ದಳು. ಆದರೆ ಆತ ಅವಳನ್ನು ಪ್ರೇಮ, ಕಾಮ, ವ್ಯಾಮೋಹದಿಂದ ಕಾಣುತ್ತಾ ಅವಳನ್ನು ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡು ಅವಳಂದವನ್ನು ಸವಿಯುತ್ತಾ ಜೀವನಪೂರ್ತಿ ಅವಳೊಂದಿಗೆ ಬಾಳುವ ಕನಸನ್ನು ಕಾಣುತ್ತಿದ್ದನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                  ದಿನ ಕಳೆದಂತೆ ನಿಖಿಲನ ಪ್ರೇಮ ರೋಗ ಹೆಚ್ಚಾಯಿತು. ಜೊತೆಗೆ ಅನುಪಮಾಳ ಅಂದ ಅವನ ತಲೆಯನ್ನು ನಿರಂತರವಾಗಿ ಕೆಡಿಸುತ್ತಲೇ ಇತ್ತು. ಆತ ರಾತ್ರಿ ನಿದ್ದೆ ಬರುತ್ತಿಲ್ಲವೆಂದು ಅವಳೊಂದಿಗೆ ಹರಟುತ್ತಾ ಮಧ್ಯರಾತ್ರಿಯವರೆಗೂ ಕೂರುತ್ತಿದ್ದನು. ಅವಳೊಂದಿಗೆ ಚೆಸ್ ಆಡುವಾಗ ಆಟದಲ್ಲಿ ಅವಳನ್ನು ವಂಚಿಸುತ್ತಿದ್ದನು. ಅವಳು ಮುದ್ದಾಗಿ ಮುನಿಸಿಕೊಂಡು ಅವನನ್ನು ಹೊಡೆಯುತ್ತಿದ್ದಳು. ಆಗ ಆತ ಅವಳ ಪವಿತ್ರ ಸ್ಪರ್ಷವನ್ನು ಪೋಲಿಯಂತೆ ಆಸ್ವಾದಿಸಿ ಸುಖಿಸುತ್ತಿದ್ದನು. ಅವಳೊಂದಿಗೆ ಕೋಳಿ ಜಗಳವಾಡುವ ನೆಪದಲ್ಲಿ ಅವಳನ್ನು ತಬ್ಬಿಕೊಂಡು ತನ್ನ ತೀಟೆ ತೀರಿಸಿಕೊಳ್ಳುತ್ತಿದ್ದನು. ಆದರೆ ಪಾಪ ಅವಳಿಗೆ ಅವನ ಕಲ್ಮಶ ಮನಸ್ಸಿನ ಇನ್ನೊಂದು ಮುಖ ಅರ್ಥವಾಗಿರಲಿಲ್ಲ. ಆಕೆ ಅವನನ್ನು ಸಂಪೂರ್ಣವಾಗಿ ನಂಬಿದ್ದಳು. ಅವನು ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡಿದರೂ ಆಕೆ ಅವನ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಿರಲಿಲ್ಲ. ಆಕೆ ಅಷ್ಟೊಂದು ಅಮಾಯಕಿಯಾಗಿದ್ದಳು. ಆದ್ದರಿಂದಲೇ ಹೇಗಾದರೂ ಮಾಡಿ ಅವಳ ಮನಸ್ಸಲ್ಲಿನ ಸ್ನೇಹವನ್ನು ಪ್ರೀತಿಯನ್ನಾಗಿಸಿ ಅವಳನ್ನು ಕೈವಶ ಮಾಡಿಕೊಳ್ಳಬೇಕೆಂದು ನಿಖಿಲ ನಿರ್ಧರಿಸಿದನು.

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

                                         ಬೆಕ್ಕಿನ ಮನಸ್ಸು ಬರೀ ಹಾಲನ್ನೇ ಬಯಸುವಂತೆ ನಿಖಿಲನ ಮನಸ್ಸು ಅನುಪಮಾಳನ್ನು ಬಯಸುತ್ತಿತ್ತು. ಅದಕ್ಕಾಗಿ ಆತ ಅವಳ ಬಗ್ಗೆ ಅತಿಯಾದ ಕಾಳಜಿ ವಹಿಸಿದನು. ಅವಳ ಬೇಕು ಬೇಡಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವಳು ಸದಾ ಸಂತೋಷವಾಗಿರುವಂತೆ ನೋಡಿಕೊಂಡನು. ಮೂರು ತಿಂಗಳಲ್ಲಿ ಅವಳ ಮನಸ್ಸಲ್ಲಿ ಅವನಿಗಿದ್ದ ಸ್ನೇಹಿತನ ಜಾಗ ಪ್ರಿಯಕರನಾಗಿ ಬದಲಾಗಲು ಪ್ರಾರಂಭವಾಯಿತು. ಅವಳು ತನ್ನ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಸಾಕಷ್ಟು ಹರಸಾಹಸಪಟ್ಟಳು. ಆದರೆ ಸಾಧ್ಯವಾಗದೆ ಕೊನೆಗೆ ಅವನಿಗೆ ಮನಸೋತಳು. 

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

        ಒಂದಿನ ನಿಖಿಲ ತರ್ಲೆ ಮಾತುಗಳನ್ನಾಡುತ್ತಾ ಅವಳನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದನು. ಅವಳು ಅವನ ಮೇಲೆ ಭಾವಪರವಶಳಾದಳು. ಅದೇ ಸಂದರ್ಭವನ್ನು ಆತ ಸರಿಯಾಗಿ ಬಳಸಿಕೊಂಡು ಅವಳನ್ನು ತಬ್ಬಿಕೊಂಡನು. ಹುಡುಗಿಯರಿಗೆ ಯಾರಾದರೂ ಅತಿಯಾಗಿ ಕಾಳಜಿ ವಹಿಸಿದರೆ, ಅವರನ್ನು ಸಂತೋಷವಾಗಿಡಲು ಪ್ರಯತ್ನಿಸಿದರೆ ಸಾಕು ಅವರು ಕರಗಿ ಹೋಗುತ್ತಾರೆ. ತಮ್ಮನ್ನು ಮಾನಸಿಕವಾಗಿ ಸಂತೋಷವಾಗಿಡಲು ಪ್ರಯತ್ನಿಸಿದವರನ್ನು ದೈಹಿಕವಾಗಿ  ಸಂತುಷ್ಟಪಡಿಸಲು ಮುಂದಾಗುತ್ತಾರೆ. ಹಿಂದುಮುಂದು ಯೋಚಿಸದೆ ತಮ್ಮನ್ನು ಸಮರ್ಪಿಸಿಕೊಂಡು ಬಿಡುತ್ತಾರೆ. ಅದೇ ತಪ್ಪನ್ನು ಈಗ ಅನುಪಮಾ ಕೂಡ ಮಾಡಿದಳು. ರಾತ್ರಿ  ನಿಖಿಲನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಬೆಳಿಗ್ಗೆ ಕಣ್ಣೀರಾಕುತ್ತಾ ಕುಂತಳು. ಆತ ಅವಳನ್ನು ಸಮಾಧಾನ ಮಾಡಿ ಮದುವೆಯಾಗುವ ಪ್ರತಿಜ್ಞೆ ಮಾಡಿದನು. ಜಾತಿ ಬೇರೆ ಎಂಬ ಕಾರಣಕ್ಕೆ ಅವರಿಬ್ಬರ ಪ್ರೀತಿಗೆ ಮನೆಯವರು ಸಮ್ಮತಿಸಲಿಲ್ಲ. ಮನೆಯವರ ವಿರೋಧದ ನಡುವೆಯೂ ಅವರಿಬ್ಬರೂ ಮದುವೆಯಾಗಿ ಸುಖಸಂಸಾರಕ್ಕೆ ಮುನ್ನುಡಿ ಬರೆದರು... 

ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories

           "ಒಂದು ಹುಡುಗಿ ಮತ್ತು ಹುಡುಗ ಎಷ್ಟೇ ಪ್ರಯತ್ನಿಸಿದರೂ ಕೂಡ ಬರೀ ಬೆಸ್ಟ ಫ್ರೆಂಡ್ಸಾಗಿರಲು ಸಾಧ್ಯವಿಲ್ಲ" ಎಂದು ಶೇಕ್ಸಪಿಯರ್ ಹೇಳಿದ ಮಾತು ನಿಖಿಲ್ ಮತ್ತು ಅನುಪಮಾರ ವಿಷಯದಲ್ಲಿ ಅಕ್ಷರಶಃ ನಿಜವಾಯಿತು. ಬೆಸ್ಟ ಫ್ರೆಂಡ್ಸಯೆಂದು ಹೇಳಿಕೊಂಡು ಒಳಗೊಳಗೆ ಗುಟ್ಟಾಗಿ ಮೋಹಿಸುವ ಯುವಕ ಯುವತಿಯರನ್ನು ಅಷ್ಟೊಂದು ಸಲೀಸಾಗಿ ನಂಬಲು ಸಾಧ್ಯವಿಲ್ಲ. ಈ ಕಥೆಯನ್ನು ಲೈಕ್ ಮಾಡಿ. ಜೊತೆಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ.


ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories ಗೋವಾ ಹುಡುಗಿಯ ಪ್ರೇಮಕಥೆ - Friendship love story in Kannada - Kannada Love Stories Reviewed by Director Satishkumar on June 29, 2018 Rating: 4.5
Powered by Blogger.