ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature in Kannada

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

                          ಪ್ರತಿಯೊಬ್ಬರು ನೈಸರ್ಗಿಕವಾಗಿ ದೈಹಿಕವಾಗಿ ಮ್ಯಾಚುರ್ಡ ಆಗುತ್ತಾರೆ. ಆದರೆ ಯಾರು ಸಹ ನೈಸರ್ಗಿಕವಾಗಿ ಬೌದ್ಧಿಕವಾಗಿ ಮ್ಯಾಚುರ್ಡ ಆಗಲು ಸಾಧ್ಯವಿಲ್ಲ. ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿ ಸೋಲುಗಳನ್ನು ಸೋಲಿಸಿದವರು ಮಾತ್ರ ಬೌದ್ಧಿಕವಾಗಿ ಮ್ಯಾಚುರ್ಡ ಆಗುತ್ತಾರೆ. ಸಂಕಷ್ಟಗಳನ್ನು ಎದುರಿಸಿ ಗೆಲ್ಲದವರು, ಜವಾಬ್ದಾರಿಗಳಿಂದ ದೂರ ಓಡುವವರು ಮ್ಯಾಚುರ್ಡ ಆಗಲು ಸಾಧ್ಯವಿಲ್ಲ. ಅಂಥವರಿಗೆ ಮ್ಯಾಚುರ್ಡ ಆಗಲು ಕೆಲವು ಸಲಹೆಗಳು ಇಲ್ಲಿವೆ ;

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೧) ಬೇರೆಯವರನ್ನು ಬದಲಾಯಿಸಲು ಪ್ರಯತ್ನಿಸಬೇಡಿ. ಮೊದಲು ಸಂದರ್ಭಾನುಸಾರ ನಿಮಷ್ಟಕ್ಕೆ ನೀವು ಬದಲಾಗಿ. ಬೇರೆಯವರನ್ನು ಅವರಿದ್ದಂತೆಯೇ ಸ್ವೀಕರಿಸಿ. ಅನಾವಶ್ಯಕವಾಗಿ ಬೇರೆಯವರನ್ನು ಬದಲಾಯಿಸಲು ಪ್ರಯತ್ನಿಸಿ ಸಮಯವನ್ನು ವ್ಯರ್ಥ ಮಾಡಬೇಡಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೨) ಬೇರೆಯವರನ್ನು ಪ್ರೀತಿಸುವ ಮೊದಲು ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮ ಜೀವನವನ್ನು ಪ್ರೀತಿಸಿ. ಸದ್ಯಕ್ಕೆ ನಿಮ್ಮ ಬಳಿ ಇರುವುದನ್ನು ಗೌರವಿಸಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೩) "ಪ್ರತಿಯೊಬ್ಬರು ಅವರವರ ಪ್ರಕಾರ ಸರಿಯಾಗಿದ್ದಾರೆ" ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಿ. ಪ್ರಯೋಜನಕ್ಕೆ ಬಾರದ ವಿಷಯಗಳಿಗಾಗಿ ಬೇರೆಯವರೊಂದಿಗೆ ಚರ್ಚೆಗೆ ಇಳಿಯಬೇಡಿ. ಸಿನಿಮಾ, ರಾಜಕೀಯ, ಗಾಸಿಪ ಇತ್ಯಾದಿಗಳ ಚರ್ಚೆಯಿಂದ ನಿಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳಬೇಡಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೪) ಯಾರಿಂದಲೂ ಏನನ್ನು ಎಳ್ಳಷ್ಟೂ ಸಹ ಬಯಸಬೇಡಿ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಸ್ನೇಹ ಮತ್ತು ಪ್ರೀತಿಗಳಲ್ಲಿ ಅತಿಯಾಗಿ ಏನನ್ನು ಬಯಸಬೇಡಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೫) ನೀವು ಎಷ್ಟು ಜಾಣರು, ನೀವು ಎಷ್ಟು ಶ್ರೀಮಂತರು ಎಂಬಿತ್ಯಾದಿ ವಿಷಯಗಳನ್ನು ಜಗತ್ತಿನ ಎದುರು ಸಾಬೀತು ಮಾಡಲು ಹೆಣಗಾಡಬೇಡಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೬) ನೀವು ಏನೇ ಮಾಡಿದರೂ ನಿಮ್ಮ ಲಾಭಕ್ಕಾಗಿ, ನಿಮ್ಮ ಮನ ಶಾಂತಿಗಾಗಿ ಮಾಡುತ್ತೀರಿ ಎಂಬುದನ್ನು ಒಪ್ಪಿಕೊಳ್ಳಿ. ಸುಮ್ಮನೆ ಸಜ್ಜನರಂತೆ ನಾಟಕವಾಡಿ ನಗೆಪಾಟಲಿಗೆ ಈಡಾಗಬೇಡಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೭) ಯಾರ ಮೇಲು ಅತಿಯಾಗಿ ಅವಲಂಬಿತರಾಗಬೇಡಿ. ನಿಮ್ಮ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ. ಬೇರೆಯವರಿಗೆ ನಿಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡಬೇಡಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೮) ಬೇರೆಯವರೊಂದಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಸಂಬಂಧಪಡದ ವಿಷಯಗಳ ಬಗ್ಗೆ ಅನಾವಶ್ಯಕವಾಗಿ ಚಿಂತಿಸುವುದನ್ನು ನಿಲ್ಲಿಸಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೯) ನಿಮ್ಮಷ್ಟಕ್ಕೆ ನೀವು ಸಂತೋಷವಾಗಿರುವುದನ್ನು ಕಲಿಯಿರಿ. ನಿಮ್ಮ ಸಂತೋಷ ವಸ್ತುಗಳ ಮೇಲೆ ನಿರ್ಧಾರವಾಗದಂತೆ ನೋಡಿಕೊಳ್ಳಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

೧೦) ನಿಮ್ಮ ಅವಶ್ಯಕತೆ ಮತ್ತು ಬೇಡಿಕೆಗಳ ಮಧ್ಯ ಇರುವ ವ್ಯತ್ಯಾಸವನ್ನು ಮೊದಲು ಅರ್ಥ ಮಾಡಿಕೊಳ್ಳಿ. ಅನಗತ್ಯವಾದ  ಬೇಡಿಕೆಗಳು ನಿಮ್ಮನ್ನು ನೋಯಿಸುತ್ತವೆ ಎಂಬುದು ನೆನಪಿರಲಿ.

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature

          ಇವಿಷ್ಟು ಸಲಹೆಗಳು  ಬೌದ್ಧಿಕವಾಗಿ ಮ್ಯಾಚುರ್ ಆಗಲು ಸಾಕೆನಿಸುತ್ತವೆ. ನಿಮಗೆ ಗೊತ್ತಿರುವ ಟಿಪ್ಸಗಳನ್ನು ಕಮೆಂಟ ಮಾಡಿ...

ಮ್ಯಾಚುರ್ ಆಗಲು 10 ಸಲಹೆಗಳು : 10 Tips to become Mature
Blogger ನಿಂದ ಸಾಮರ್ಥ್ಯಹೊಂದಿದೆ.