೧) ಈ ಜಗತ್ತಿನಲ್ಲಿ ಯಾರು ಕೂಡ ನೈಜವಾಗಿಲ್ಲ. ಎಲ್ಲರಿಗು ಎರಡೆರಡು ಮುಖಗಳಿವೆ.
೨) ಜನ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆಯೇ ಹೊರತು ಜನಕ್ಕಲ್ಲ.
೩) ನೀವು ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿಯೇ ನಿಮಗೆ ಹೆಚ್ಚಿನ ನೋವನ್ನು ನೀಡುತ್ತಾರೆ.
೪) ಸಂತೋಷವಾಗಿದ್ದಾಗ ಹಾಡಿನ ಸಂಗೀತ ಇಷ್ಟವಾದರೆ, ಸಂಕಷ್ಟದಲ್ಲಿರುವಾಗ ಅದರ ಸಾಹಿತ್ಯ ಇಷ್ಟವಾಗುತ್ತದೆ.
೫) ಏನು ಇರದಿರುವಾಗ ಮತ್ತು ಎಲ್ಲವು ಇರುವಾಗ ನೀವು ವರ್ತಿಸುವ ರೀತಿ ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ.
೬) ಜನ ಉತ್ತಮ ನೋಟಗಳನ್ನು (Looks) ಇಷ್ಟಪಡುತ್ತಾರೆಯೇ ಹೊರತು ಉತ್ತಮ ಆಲೋಚನೆಗಳನಲ್ಲ.
೭) ಸೋಲು ಎಲ್ಲರೆದುರು ಕಪಾಳಕ್ಕೆ ಬಾರಿಸಿದರೆ ಗೆಲುವು ಗುಟ್ಟಾಗಿ ಬಂದು ಅಪ್ಪಿಕೊಳ್ಳುತ್ತದೆ.
೮) ಬಡ ವ್ಯಕ್ತಿಗೆ ಸ್ನೇಹಿತರಿರುವುದಿಲ್ಲ. ಒಂದು ವೇಳೆ ಇದ್ದರು ಸಹ ಅವರು ತೋರಿಕೆಯ ಗೆಳೆಯರಾಗಿರುವುದಿಲ್ಲ.
೯) ನಂಬಿಕೆ ಎಂಬ ಸೇತುವೆ ಕುಸಿದು ಬಿದ್ದ ಮೇಲೆ ಸ್ವಾರಿಗಳ ಸುರಿಮಳೆ ಸುರಿಸಿ ಏನು ಪ್ರಯೋಜನವಿಲ್ಲ.