ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

Chanakya Niti in Kannada
ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Kannada Stories

                           ಸುಮಾಳಿಗೆ ಅವಳ ಸೌಂದರ್ಯವೇ ಒಂದು ಶಾಪವಾಗಿತ್ತು. ಏಕೆಂದರೆ ಅವಳ ಸೌಂದರ್ಯ ಎಲ್ಲರನ್ನು ಆಯಸ್ಕಾಂತದಂತೆ ಸೆಳೆಯುತ್ತಿತ್ತು. ಪ್ರತಿದಿನ ಅವಳು ಕನ್ನಡಿ ಎದುರು ನಿಂತುಕೊಂಡು ತನ್ನ ಅಂದವನ್ನು ನೋಡುತ್ತಾ ಮೈಮರೆಯುತ್ತಿದ್ದಳು. "ತಾನೆಷ್ಟು ಮುದ್ದಾಗಿರುವೆ..." ಎಂದು ಹೆಮ್ಮೆಪಡುತ್ತಿದ್ದಳು. ಆದರೆ ಕಾಲೇಜಿನಲ್ಲಿ ಎಲ್ಲರ ಕಣ್ಣುಗಳು ಅವಳ ಮೇಲೆ ನೆಟ್ಟಿರುವಾಗ ಅವಳು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದಳು. ಕೆಟ್ಟ ದೃಷ್ಟಿಗಳನ್ನು ಎದುರಿಸಲಾಗದೆ "ನಾನು ಸುಂದರವಾಗಿರದಿದ್ದರೆ ಚೆನ್ನಾಗಿತ್ತು..." ಎಂದವಳು ಎಷ್ಟೋ ಸಲ ಕೊರಗಿದ್ದಳು. ಎಲ್ಲರು ಅವಳನ್ನು ಪ್ರೀತಿಸುತ್ತಿದ್ದರು. ಅವಳನ್ನು ಪಡೆದುಕೊಳ್ಳಲು ಹಂಬಲಿಸುತ್ತಿದ್ದರು. ಆದರೆ ಅವಳು ಯಾರ ಮೋಡಿಗೂ ಮರುಳಾಗಿರಲಿಲ್ಲ. ಅವಳು ತನ್ನನ್ನು ಮಾತ್ರ ಪ್ರೀತಿಸುತ್ತಿದ್ದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Kannada Stories

                       ಸುಮಾಳಿಗೆ ತನ್ನ ಜೀವನದಲ್ಲಿ ಮಹತ್ತರವಾದ ಆಸೆ ಆಕಾಂಕ್ಷೆಗಳೇನು ಇರಲಿಲ್ಲ. ಆದರೆ ಅವಳಿಗೆ ಈ ಜಗತ್ತನ್ನೊಮ್ಮೆ ಸುತ್ತಬೇಕು, ಕಣ್ಮುಚ್ಚುವ ಮುಂಚೆ ಈ ಭೂಮಿ ಮೇಲಿರುವ ಎಲ್ಲ ಸುಂದರ ತಾಣಗಳನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು ಎಂಬ ಮಹದಾಸೆಯಿತ್ತು. ಅವಳಿಗೆ ಅವಳ ಮಹದಾಸೆ ಸಣ್ಣದಾಗಿ ಕಾಣುತ್ತಿತ್ತು. ಆದರೆ ಅವಳ ಆಸೆ ಎಲ್ಲರಿಗೆ ಅಸಾಧ್ಯವೆಂಬಂತೆ ತೋರುತ್ತಿತ್ತು. ಎಲ್ಲರು ಅವಳನ್ನು ಅಪಹಾಸ್ಯ ಮಾಡಿಕೊಂಡು ನಗುತ್ತಿದ್ದರು. ಅದಕ್ಕಾಗಿ ಅವಳು ತನ್ನ ವಿಶ್ವ ಪರ್ಯಟನೆಯ ಕನಸನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅವಳ ಮನಸ್ಸನ್ನು ಗೆದ್ದ ಮಹಾಶೂರನಿಗೆ ಅವಳು ತನ್ನ ಕನಸನ್ನು ಹೇಳಬೇಕು, ಅವನಿಂದ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಬೇಕೆಂದು ಆಕೆ ಸುಮ್ಮನಿದ್ದಳು. ಎಲ್ಲ ಹುಡುಗರು ಸುಮಾಳ ಸೌಂದರ್ಯಕ್ಕೆ ಜೊಲ್ಲು ಸುರಿಸಿ ಅವಳನ್ನು ಪಟಾಯಿಸಲು ಪರದಾಡುತ್ತಿದ್ದರು. ಸ್ಕರ್ಟ ಚೇಸರಗಳಿಗೆ ಫ್ಲ್ಯಾಟ್ ಆಗುವಂತ ಪೆದ್ದಿ ಅವಳಾಗಿರಲಿಲ್ಲ. ಅದಕ್ಕಾಗಿ ಅವಳು ತನ್ನ ಕಾಲೇಜ ಲೈಫನ್ನು ಪತಿವ್ರತೆಯಂತೆ ನೀರಸವಾಗಿ  ಕಳೆದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Kannada Stories

            ಓದು ಮುಗಿಯುತ್ತಿದ್ದಂತೆಯೇ ಅವಳ ಮದುವೆ ಓಲಗ ಉದಿಸಲು ಮನೆಯಲ್ಲಿ ಎಲ್ಲರು ತುದಿಗಾಲ ಮೇಲೆ ನಿಂತಿದ್ದರು. ಸುಮಾಳಿಗೆ ಆದಷ್ಟು ಬೇಗನೆ ಜಗತ್ತನ್ನು ಸುತ್ತಲು ಪ್ರಾರಂಭಿಸಬೇಕು ಎಂಬ ತವಕ ಶುರುವಾಗಿತ್ತು. ಅದಕ್ಕಾಗಿ ಆಕೆ ಮದುವೆಗೆ ಮೌನ ಸಮ್ಮತಿ ಸೂಚಿಸಿದಳು. ತನ್ನನ್ನು ನೋಡಲು ಬರುವ ಗಂಡುಗಳನ್ನು ಸುಮಾ ತುಂಬಾ ಜಾಣ್ಮೆಯಿಂದ ಪರೀಕ್ಷಿಸಲು ಪ್ರಾರಂಭಿಸಿದಳು. ತನ್ನ ವಿಶ್ವ ಪರ್ಯಟನೆಯ ಕನಸನ್ನು ನನಸಾಗಿಸುವಂಥ ಗಂಡನನ್ನು ಆಯ್ದುಕೊಳ್ಳಲು ಆಕೆ ಉತ್ಸುಕಳಾಗಿದ್ದಳು. ಆದರೆ ಬರುವ ಗಂಡುಗಳೆಲ್ಲ ಅವಳ ಕನಸನ್ನು ನನಸಾಗಿಸುವಷ್ಟು ಶ್ರೀಮಂತರಾಗಿರಲಿಲ್ಲ. ಅದಕ್ಕಾಗಿ ಬಂದ ಗಂಡುಗಳನ್ನೆಲ್ಲ ಏನಾದರೂ ಒಂದು ನೆಪ ಹೇಳಿ ದೂರ ತಳ್ಳುತ್ತಿದ್ದಳು. ಆದರೆ ಬಂದ ಗಂಡುಗಳು ಅವಳಂದಕ್ಕೆ ಮನಸೋತು ಅವಳನ್ನೇ ಮದುವೆಯಾಗುತ್ತೇನೆಂದು ಹಟ ಮಾಡುತ್ತಿದ್ದರು. ಆಗ ಸುಮಾ ಮನೆಯವರ ಬುದ್ಧಿವಾದಗಳಿಗೆ ಧರ್ಮ ಸಂಕಟ ಅನುಭವಿಸುತ್ತಿದ್ದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Kannada Stories

                           ಒಂದಿನ ಸುಮಾ ಆಸೆಪಟ್ಟಂತೆ ಅದೃಷ್ಟವೊಂದು ಅವಳನ್ನು ಹುಡುಕಿಕೊಂಡು ಮನೆಯವರೆಗೆ ಬಂದಿತು. ಸುಮಾಳನ್ನು ತಮ್ಮ ಮನೆ ಸೊಸೆಯಾಗಿಸಿಕೊಳ್ಳಲು ಒಬ್ಬ ಬ್ಯುಸಿನೆಸಮ್ಯಾನನ ತಾಯಿ ಬಹಳ ಉತ್ಸುಕತೆಯಿಂದ ಅವಳ ಮನೆಯವರೆಗೂ ಹೆಣ್ಣು ಕೇಳಲು ಬಂದಿದ್ದರು. ಆದರೆ ಸುಮಾಳ ತಂದೆಗೆ ತಮ್ಮ ಮಗಳನ್ನು ಒಬ್ಬ ಪ್ರಥಮ ದರ್ಜೆ ಸರ್ಕಾರಿ ನೌಕರನಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಕನಸಿತ್ತು. ಅದಕ್ಕಾಗಿ ಅವರು ಬಂದ ಬ್ಯುಸಿನೆಸಮ್ಯಾನನನ್ನು ನಿರಾಕರಿಸಿದರು. ಆದರೆ ಆ ಬ್ಯುಸಿನೆಸಮ್ಯಾನನನ್ನು ಮದುವೆಯಾಗಿ ತನ್ನ ಕನಸನ್ನು ಈಡೇರಿಸಿಕೊಳ್ಳಬೇಕು ಎಂಬ ದುರಾಸೆ ಸುಮಾಳ ಮನಸ್ಸಲ್ಲಿ ಮೊಳಕೆ ಒಡೆದಿತ್ತು. ಅದಕ್ಕಾಗಿ ಅವಳು ಮುಖ ನೋಡದೆ ಆ ಬ್ಯುಸಿನೆಸಮ್ಯಾನನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದು ಕುಂತಳು. ಆದರೆ ಮನೆಯವರೆಲ್ಲ ಸೇರಿ ಅವಳ ಬ್ರೇನವಾಷ ಮಾಡಿ ಒಬ್ಬ ಸರ್ಕಾರಿ ನೌಕರನೊಂದಿಗೆ ಅವಳ ಮದುವೆ ಮಾಡಿಸಿ ನಿಟ್ಟುಸಿರು ಬಿಟ್ಟರು. ತಮ್ಮ ಮಗಳು ಒಂದು ಒಳ್ಳೇ ಕುಟುಂಬವನ್ನು ಸೇರಿದಳಲ್ಲ ಎಂಬ ಸಂತೋಷ ಸುಮಾಳ ಮನೆಯವರದಾಗಿತ್ತು. ಆದರೆ ನನ್ನ ಮನೆಯವರೇ ನನ್ನ ಕನಸಿಗೆ ಕೊಳ್ಳಿ ಇಟ್ಟರಲ್ಲ ಎಂಬ ಕೊರಗು ಅವಳಿಗೆ ತವರು ಮನೆಯ ಮರೆಯಲಾಗದ ಉಡುಗೊರೆಯಾಗಿತ್ತು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                   ಮನಸ್ಸಿಲ್ಲದ ಮನಸ್ಸಿನಿಂದ ಸುಮಾ ಒಬ್ಬ ಸರ್ಕಾರಿ ಗುಲಾಮನ ಮಡದಿಯಾದಳು. ಅವನಿಗೆ ಮನಸಾಕ್ಷಿ ಎಂಬುದು ಒಂಚೂರು ಇರಲಿಲ್ಲ. ರಾಜಕಾರಣಿಗಳ ಕೈಕೆಳಗೆ ಕೆಲಸ ಮಾಡಿ ಅವನಿಗೂ ಅವರ ಕಂತ್ರಿ ಬುದ್ಧಿ ಬಂದಿತ್ತು. ಲಂಚ ಮುಟ್ಟದೆ ಅವನು ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಸರ್ಕಾರಿ ನೌಕರನನ್ನು ಮದುವೆಯಾದರೆ ಯಾವ ಸುಖವು ಇಲ್ಲ ಎಂಬ ಸತ್ಯ ಸುಮಾಳಿಗೆ ಮೊದಲೇ ತಿಳಿದಿತ್ತು. ಆದರೆ ಅವಳೇನು ಮಾಡುವ, ಮಾತಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಮನೆಯವರ ಖುಷಿಗೆ ಅವಳು ಬಲಿಪಶುವಾಗಿದ್ದಳು ಅಷ್ಟೇ. ಮನಸ್ಸಿಲ್ಲದ ಮದುವೆಯಿಂದ ಸುಮಾ ಮಾನಸಿಕವಾಗಿ ನೊಂದಿದ್ದಳು. ಅದಕ್ಕಾಗಿ ಮೊದಲ ರಾತ್ರಿಯಲ್ಲಿ ಅವಳು ತನ್ನನ್ನು ಅವನಿಗೆ ಸಮರ್ಪಿಸಿಕೊಳ್ಳಲು ಹಿಂದೇಟು ಹಾಕಿದಳು. ಅವಳ ಸೌಂದರ್ಯಕ್ಕೆ ಅವನು ತಕ್ಕದಾದ ವರನಾಗಿರಲಿಲ್ಲ. ಸರ್ಕಾರಿ ನೌಕರಿ ಇದೆಯಂಬ ಒಂದೇ ಕಾರಣಕ್ಕೆ ಸುಮಾಳಂಥ ಸುಂದರಿಯನ್ನು ಅವನಿಗೊಪ್ಪಿಸಿದ್ದರು. ಮೊದಲ ರಾತ್ರಿಯಂದೆ ಮಂಚದ ಮೇಲೆ ಆತ ತನ್ನ ಲಂಚದ ಬುದ್ಧಿಯನ್ನು ತೋರಿಸಿದನು. ಸುಮಾ ಅವನ ಸುಖಕ್ಕೆ ಸಹಕರಿಸದಿದ್ದಾಗ "ನಿನ್ನನ್ನು ಶೋ ಕೇಸಿನಲ್ಲಿಟ್ಟು ಪ್ರದರ್ಶನ ಮಾಡಲು ನಿನ್ನನ್ನು ನಾನು ಮದುವೆಯಾಗಿಲ್ಲ. ನಿನ್ನನು ನಾನು ಸುಮ್ಮನೆ ಮದುವೆಯಾಗಿಲ್ಲ. ೧೦ ತೊಲೆ ಚಿನ್ನ ಹಾಕಿ ನಿನ್ನನ್ನು ಮದುವೆಯಾಗಿರುವೆ. ನಿಮ್ಮ ಮನೆಯವರು ನಾನು ಸರ್ಕಾರಿ ಕೆಲಸದಲ್ಲಿರುವೆ ಎಂಬ ಕಾರಣಕ್ಕೆ ನಿನ್ನನ್ನು ನನಗೆ ಕೊಟ್ಟಿದ್ದಾರೆ..." ಎಂದೆಲ್ಲ ಮಾತಾಡಿ ಅವಳ ಸೆರಗಿಗೆ ಕೈಹಾಕಿದನು. ಅವನೇಷ್ಟೆ ಬಲವಂತ ಮಾಡಿದರೂ ಸಹ ಸುಮಾ ಅವನಿಗೆ ಸಹಕರಿಸದೇ ತನ್ನ ಹಟವನ್ನು ಸಾಧಿಸಿದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                         ಹರೆಯದ ಹೆಂಡತಿಯ ಎದುರು ತನ್ನ ಗಂಡಸುತನ ಉಡುಗಿ ಹೋಯಿತಲ್ಲ ಎಂಬ ಸಿಟ್ಟಲ್ಲಿ ಸುಮಾಳ ಗಂಡ ಅವಳ ಮೇಲೆ ಸುಮ್ಮನೆ ಸಿಡುಕುತ್ತಿದ್ದನು. ಅವಳನ್ನು ಹೇಗಾದರೂ ಮಾಡಿ ಅನುಭವಿಸಬೇಕೆಂದು ಹೊಂಚು ಹಾಕುತ್ತಿದ್ದನು. ಪ್ರತಿಕ್ಷಣ ಅವಳನ್ನು ಕಾಮದ ಕಣ್ಣುಗಳಿಂದ ನೋಡುತ್ತಿದ್ದನು. ಅವಳನ್ನು ಅಪ್ಪಿಕೊಂಡು ಮುದ್ದಾಡಲು ಕಾತರಿಸುತ್ತಿದ್ದನು. ಅವಳು ರೂಮಲ್ಲಿ ಒಂಟಿಯಾಗಿರುವಾಗ ಅವಳ ಮೇಲೆ ದಾಳಿ ಮಾಡಲು ಹಂಬಲಿಸುತ್ತಿದ್ದನು. ಅವನಿಗೆ ಅವಳ ಮನಕ್ಕಿಂತ ಮೊದಲು ಸ್ತನ ಕಾಣಿಸುತ್ತಿದ್ದವು. ಆತ ಸಂದರ್ಭ ಸಿಕ್ಕಾಗಲೆಲ್ಲ ಅವಳನ್ನು ಅನುಮತಿಯಿಲ್ಲದೆ ಬಲವಾಗಿ ಅಪ್ಪಿಕೊಂಡು ಚುಂಬಿಸುತ್ತಿದ್ದನು. ಅವಳು ಅಡುಗೆ ಮನೆಯಲ್ಲಿರುವಾಗ ಅವಳನ್ನು ಹಿಂದಿನಿಂದ ತಬ್ಬಿಕೊಂಡು ತನ್ನ ಒರಟಾದ ಕೈಬೆರಳುಗಳಿಂದ ಅವಳ ಸಪೂರ ಸೊಂಟವನ್ನು ಸವರುತ್ತಿದ್ದನು. ಅವನಿಂದ ತಪ್ಪಿಸಿಕೊಂಡು ದೂರವುಳಿಯಲು ಅವಳು ಪ್ರತಿಕ್ಷಣ ಪರದಾಡುತ್ತಿದ್ದಳು.  ಅಂಥದರಲ್ಲಿ ಮದುವೆ ಮನೆಯಲ್ಲಿ ಸುಮಾಳನ್ನು ನೋಡಿದ ಅವನ ಗೆಳೆಯರೆಲ್ಲ ಅವನಿಗೆ ಕರೆ ಮಾಡಿ "ನೀನು ಸುಮಾಳಂಥ ಸುಂದರಿಯನ್ನು ಪಡೆಯಲು ಎಂಥ ಅದೃಷ್ಟ ಮಾಡಿದ್ದೇ ಕಣೋ..." ಎಂದೇಳಿ ಸುಮಾಳಂಥ ಸುಂದರಿ ತಮ್ಮ ಸ್ವತ್ತಾಗಿಲ್ಲವಲ್ಲವೆಂಬ ಕೊರಗನ್ನು ಹೊರ ಹಾಕುತ್ತಿದ್ದರು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                                        ಮನೆಯಲ್ಲಿ ಯಾರು ಇಲ್ಲದ ಸಂದರ್ಭಕ್ಕಾಗಿ ಅವನು ಕಾಯುತ್ತಿದ್ದನು. ಕಾಕತಾಳೀಯವೆಂಬಂತೆ ಆ ಸುಸಂದರ್ಭ ಅವನಿಗೆ ಒದಗಿ ಬಂದಿತು. ಮನೆಯಲ್ಲಿ ಅವತ್ತು ಸುಮಾಳನ್ನು ಬಿಟ್ಟರೆ ಬೇರೆ  ಯಾರು ಇರಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಸುಮಾಳನ್ನು ಅನುಭವಿಸಲು ಅವಳ ಕಾಮುಕ ಗಂಡ ಮುಂದಾದನು. ಮನೆಯಲ್ಲಿ ಯಾರು ಇರಲಿಲ್ಲ. ಆದರೆ ಮನೆಯಲ್ಲಿ ಸಾಕಷ್ಟು ಕೆಲಸವಿತ್ತು. ಮುಂಜಾನೆಯಿಂದ ಕೆಲಸ ಮಾಡಿ ಆಕೆ ಸುಸ್ತಾಗಿದ್ದಳು. ಅದಕ್ಕಾಗಿ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಲು ಆಕೆ ತನ್ನ ರೂಮಲ್ಲಿ ಮೈಮರೆತು ನಿದ್ರಿಸುತ್ತಿದ್ದಳು. ಅವಳು ನಿದ್ರಿಸುತ್ತಿರುವಾಗ ಅವಳ ಗಂಡ ಅವಳ ರೂಮಿಗೆ ಬಂದು ಭದ್ರವಾಗಿ ಚೀಲಕ ಹಾಕಿದನು. ಫ್ಯಾನಿನ ಬಿಸಿಗಾಳಿನಲ್ಲಿ ಬೆವರುತ್ತಾ ಮಲಗಿದ್ದ ಅವಳನ್ನು ನೋಡಿ ಅವನ ವಿಕೃತ ಮನಸ್ಸು ಮತ್ತಷ್ಟು ವಿಕೃತವಾಯಿತು. ಆತ ಅವಳನ್ನೇ ನೋಡುತ್ತಾ ನಿಂತನು. ಫ್ಯಾನ್ ಗಾಳಿಗೆ ಅವಳ ಸೀರೆ ಸ್ವಲ್ಪ ಜಾರಿತ್ತು. ತಂಗಾಳಿಯ ಕೊರತೆಯಿಂದ ಜೋರಾಗಿ ಬಡಿದುಕೊಳ್ಳುತ್ತಿದ್ದ ಅವಳೆದೆ ಅವನನ್ನು ಆಹ್ವಾನಿಸಿತು. ಎದೆಬಡಿತಕ್ಕೆ ತಲ್ಲಣಿಸುತ್ತಿದ್ದ ಅವಳೆದೆ ಉಬ್ಬುಗಳು ಅವನ ತಲೆ ಕೆಡಿಸಿದವು. ಆತ ಅವಳ ಮೇಲೆ ಎಗರುವ ಮುನ್ನವೇ ಆಕೆ ಎಚ್ಚರಗೊಂಡಳು. ಆತ ಅವಳನ್ನು ಬಳಿಸೆಳೆದು ಅಪ್ಪಿಕೊಳ್ಳಲು ಮುಂದಾದನು. ಆದರೆ ಆಕೆ ತನ್ನ ಸೀರೆಯ ಸೇಫ್ಟಿ ಪಿನ್ನನ್ನು ಅವನಿಗೆ ಚುಚ್ಚಿ ಅಲ್ಲಿಂದ ಪರಾರಿಯಾದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                                  ಮನಸ್ಸಿಲ್ಲದ ಮದುವೆಯ ಕಹಿ ಉಡುಗೊರೆಯಾಗಿ ಸಿಕ್ಕಿದ್ದ ಗಂಡನ ಬಾಹು ಬಂಧನದಿಂದ ತಪ್ಪಿಸಿಕೊಂಡು ಸುಮಾ ದಾರಿ ಕಂಡ ಕಡೆಗೆ ಚಲಿಸಿದಳು. ಮನೆ ಬಿಟ್ಟು ಬಂದಿದ್ದಕ್ಕೆ ಅವಳಲ್ಲೇನು ವಿಷಾದವಿರಲಿಲ್ಲ. ಬದಲಿಗೆ ಅವಳಿಗೆ ಸಾಕಷ್ಟು ಖುಷಿಯಾಗಿತ್ತು. ಅವಳ ರೆಕ್ಕೆ ಮುರಿದ ಕನಸು ಮತ್ತೆ ಚಿಗುರೊಡೆಯಿತು. ಪ್ರಪಂಚವನ್ನು ಸುತ್ತುವ ಕನಸು ಮತ್ತೆ ಅವಳ ತಲೆ ಸೇರಿತು. ತನ್ನ ಕನಸನ್ನು ನನಸಾಗಿಸುವುದಕ್ಕಾಗಿ ಅವಳು ಮನೆಯ ಚಿಂತೆಯನ್ನು ಮರೆತಳು. ಕತ್ತಲ್ಲಿ ತೂಗುಗತ್ತಿಯಾಗಿದ್ದ ತಾಳಿಯನ್ನು ಅವಳು ತೆಗೆದು ಕಸದ ತೊಟ್ಟಿಗೆ ಬೀಸಾಕಲು ಮುಂದಾಗಿದ್ದಳು. ಆದರೆ ಆ ತಾಳಿ ಅವಳಿಗೆ ಪೋಲಿಗಳಿಂದ ತಪ್ಪಿಸಿಕೊಳ್ಳಲು ರಕ್ಷಾಕವಚವಾಗಬಹುದು ಎಂಬ ಕಾರಣಕ್ಕೆ ಅದನ್ನು ಜೊತೆಗಿಟ್ಟುಕೊಂಡಳು. ಆದರೆ ಆ ತಾಳಿ ಅವಳಿಗೆ ರಕ್ಷಣೆ ನೀಡಲಿಲ್ಲ. ಅವಳು ಪೋಲಿಗಳ ಕಿರುಕುಳಕ್ಕೆ ತುತ್ತಾದಳು. ಅವಳು ತಾಳಿಯ ಜೊತೆಗೆ ಮೈಮೇಲಿದ್ದ ನಾಲ್ಕು ತೊಲೆ ಬಂಗಾರವನ್ನು ಮಾರಿ ದುಡ್ಡನ್ನು ತೆಗೆದುಕೊಂಡಳು. ಅಷ್ಟರಲ್ಲಿ ಅವಳಿಗೆ ಮನೆಯಿಂದ ಫೋನ್ ಕರೆಗಳು ಬರಲು ಪ್ರಾರಂಭಿಸಿದವು. ಅದಕ್ಕಾಗಿ ಅವಳು ತನ್ನ ಮೊಬೈಲನಲ್ಲಿರುವ ಸಿಮಕಾರ್ಡನ್ನು ತೆಗೆದು ಬೀಸಾಕಿ ಹೊಸ ಸಿಮಕಾರ್ಡನ್ನು ಖರೀದಿಸಿದಳು. ಅವಳು ಯಾವ ಊರಲ್ಲಿದ್ದಾಳೆ ಎಂಬುದು ಅವಳಿಗೆ ಗೊತ್ತಿರಲಿಲ್ಲ. ಅವಳು ಒಂದು ಅಪರಿಚಿತ ಊರಿನ ರೈಲ್ವೆ ನಿಲ್ದಾಣದ ಬಳಿಯಿದ್ದಳು. ಅವಳಿಗೆ ರೈಲು ಬರುವ ಸೈರನಿನ ಸದ್ದು ಕೇಳಿಸಿತು. ಅವಳು ಅವಸರದಿಂದ ರೈಲ್ವೆ ನಿಲ್ದಾಣವನ್ನು ಪ್ರವೇಶಿಸಿದಳು. ಆಗ ತಾನೇ ಬಂದು ಹೊರಡಲು ಸಿದ್ಧವಾಗಿದ್ದ ಗೋವಾ ಎಕ್ಸಪ್ರೆಸ್ ರೈಲನ್ನು ಅವಳು ಹತ್ತಿ ಹೊರಟಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                  ಮೊದಲ ಸಲ ಅವಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಅವಳು ಕಾಲೇಜು ಮತ್ತು ಮನೆ ಮಧ್ಯೆದಲ್ಲೇ ಓಡಾಡಿ ತನ್ನ ಜೀವನದ ಬಹುಪಾಲನ್ನು ಅದೇ ಬಸ್ಸಿನ ಪ್ರಯಾಣದಲ್ಲಿ ಕಳೆದಿದ್ದಳು. ಮೊದಲ ಸಲ ಅವಳಿಗೆ ರೈಲಿನ ಪ್ರಯಾಣ ಸ್ವಲ್ಪ ಭಯದ ಜೊತೆಗೆ ಸೊಗಸಾದ ಹೊಸ ಅನುಭವವನ್ನು ನೀಡಿತು. ನೋಡುನೋಡುತ್ತಿದ್ದಂತೆಯೆ ರಾತ್ರಿಯಾಯಿತು. ಅವಳು ಹೆದರಿದಳು.  ಅವಳಿಗೆ ತನ್ನ ತಂದೆತಾಯಿಗಳು ನೆನಪಿಗೆ ಬಂದರು. ಉಕ್ಕಿ ಬರುವ ಕಣ್ಣೀರನ್ನು ಬಚ್ಚಿಡಲಾಗದೆ ಅವಳು ಬಿಕ್ಕಿ ಬಿಕ್ಕಿ ಅತ್ತಳು. ಈಗ ಅವಳಿಗೆ ಎಲ್ಲರ ಮೇಲೂ ದ್ವೇಷವಿತ್ತು. ಅದಕ್ಕಾಗಿ ಅವಳು ಯಾರ ಬಗ್ಗೆಯೂ ಅತಿಯಾಗಿ ಚಿಂತಿಸದೆ ತನ್ನನ್ನು ತಾನು ಸಮಾಧಾನ ಮಾಡಿಕೊಂಡಳು. ಅವಳಿಗೆ ಆತ್ಮಹತ್ಯೆ ಮಾಡಿಕೊಂಡು ಸಾಯಬೇಕು ಎಂಬ ನೆಗೆಟಿವ್ ಆಲೋಚನೆಯೂ ಸಹ ಬಂದೊಯಿತು. ಆದರೆ ಅವಳಿಗೆ ತನ್ನ ಕನಸ್ಸನ್ನು ನನಸಾಗಿಸದೇ ಸಾಯುವ ಮನಸ್ಸಿರಲಿಲ್ಲ. ಅದಕ್ಕಾಗಿ ಅವಳು ತನ್ನ ವಿಶ್ವ ಪರ್ಯಟಣೆಯ ಕನಸ್ಸನ್ನು ನನಸಾಗಿಸಿಕೊಳ್ಳುವುದಕ್ಕಾಗಿ ನಿರ್ಧರಿಸಿ ಮುಗುಳ್ನಕ್ಕಳು. ಅವಳ ತಲೆಯಲ್ಲಿ ನೂರೆಂಟು ಯೋಚನೆಗಳು ಓಡುತ್ತಿದ್ದರೂ ಅವಳು ನಿದ್ರೆಗೆ ಜಾರಿ ಕನಸುಗಳಲ್ಲಿ ಕಳೆದು ಹೋದಳು. 

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                   ಸುಮಾ ಬೆಳಿಗ್ಗೆ ಕಣ್ಣು ಬಿಡುತ್ತಿರುವಾಗ ಅವಳು ಪ್ರಯಾಣಿಸುತ್ತಿದ್ದ ರೈಲು ಗೋವಾದ ದೂಧಸಾಗರ ಜಲಪಾತದ ಎದುರಿನಿಂದ ಸಾಗುತ್ತಿತ್ತು. ಅವಳು ಒಮ್ಮೆಲೇ ನಿದ್ದೆಯಿಂದೆದ್ದು ಆ ಜಲಪಾತದ ಸೊಬಗನ್ನು ಸವಿದಳು. ಅವಳಿಗೆ ಆ ಜಲಪಾತವನ್ನು ಸಮೀಪದಿಂದ ನೋಡಬೇಕೆಂಬ ಆಸೆಯಾಯಿತು. ಅದಕ್ಕಾಗಿ ಅವಳು ಅಲ್ಲೇ ಇಳಿದುಕೊಂಡಳು. ಪಶ್ಚಿಮ ಘಟ್ಟಗಳ ಮಡಿಲಿನಿಂದ ಹರಿದು ಬರುವ ಮಾಂಡೋವಿ ನದಿಯಿಂದ ನಿರ್ಮಾಣವಾದ ದೂಧಸಾಗರ ಜಲಪಾತವನ್ನು ನೋಡುತ್ತಾ ಅವಳು ನಿಬ್ಬೆರಗಾಗಿ ನಿಂತಳು. "ದೂಧಸಾಗರ ಎಂದರೆ ಹಾಲಿನ ಸಮುದ್ರ ಎಂದರ್ಥ. ಮಾಂಡೋವಿ ನದಿ ನೀರು ಹಾಲಿನಂತೆ ಕಾಣುವುದರಿಂದ ಆ ಜಲಪಾತಕ್ಕೆ ದೂಧಸಾಗರ ಎಂಬ ಹೆಸರು ಬಂದಿದೆ..." ಎಂದು ಎಲ್ಲೋ ಓದಿದ್ದನ್ನು ಆಕೆ ನೆನಪಿಸಿಕೊಂಡಳು. ಅವಳು ಜಲಪಾತವನ್ನು ನೋಡುತ್ತಾ ಆಶ್ಚರ್ಯಚಕಿತಳಾಗಿ ನಿಂತಿದ್ದಳು. ಆಗ ಅವಳ ಕಣ್ಣಿಗೆ ಜಲಪಾತದ ಪಕ್ಕ ಅಳುತ್ತಾ ನಿಂತಿದ್ದ ಒಬ್ಬ ನವ ತರುಣ ಕಂಡನು. ದೂಧಸಾಗರ ಜಲಪಾತದ ಸೊಬಗನ್ನು ನೋಡಿ ಸಂತೋಷದಲ್ಲಿ ತೇಲಾಡುತ್ತಿದ್ದ ಅವಳ ಮನಸ್ಸು ಆ ಹುಡುಗನ ಕಣ್ಣೀರ ಪಾತವನ್ನು ಕಂಡಾಗ ಸಂತಾಪಕ್ಕೆ ತಿರುಗಿತು. ಅವಳು ಧೈರ್ಯ ಮಾಡಿ ಅವನನ್ನು ಕೂಗಿ ಕರೆದಳು. ಆದರೆ ಅವನು ಕೆಲವು ಪತ್ರಗಳನ್ನು, ಗಿಫ್ಟಗಳನ್ನು ಜಲಪಾತದಲ್ಲಿ ಎಸೆಯುವುದರಲ್ಲಿ ಮಗ್ನನಾಗಿದ್ದನು. ಅವನಿಗೆ ಅವಳ ಕೂಗು ಕೇಳಿಸಲಿಲ್ಲ. ಆಕೆ ಅವನನ್ನೇ ನೋಡುತ್ತಾ ನಿಂತಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                                          ಕೆಲ ಸಮಯದ ನಂತರ ಆ ಹುಡುಗ ಎಲ್ಲ ಪತ್ರಗಳನ್ನು, ಗಿಫ್ಟಗಳನ್ನು ಜಲಪಾತಕ್ಕೆ ಎಸೆದು ಬಂದನು. ಸುಮಾ ಅವನನ್ನು ನೋಡಿ ಮುಗುಳ್ನಕ್ಕಳು. ಆದರೆ ಆತ ನಗುವ ಪರಿಸ್ಥಿತಿಯಲ್ಲಿರಲಿಲ್ಲ. ಅವನ ಪ್ರೇಯಸಿ ಅವನಿಗೆ ಕೈಕೊಟ್ಟು ಬೇರೆಯವನನ್ನು ಮದುವೆಯಾಗಿ ಹೋಗಿದ್ದರಿಂದ ಅವನು ಅಲ್ಲಿಗೆ ಅವಳ ನೆನಪುಗಳನ್ನು ಮರೆಯಲು ಬಂದಿದ್ದನು. ಸುಮಾ ಮತ್ತೆ ಅವನನ್ನು ಕೂಗಿ ಕರೆದಳು. ಈ ಸಲ ಅವಳ ಕೂಗು ಅವನಿಗೆ ಕೇಳಿಸಿತು. ಆತ ತಿರುಗಿ ನೋಡಿದಾಗ ಆಕೆ ಅವನಿಗೆ ಯಾಕೆ ಅಳುತ್ತಿರುವೆ ಎಂದು ಕೇಳಿದಳು. ಆದರೆ ಅವನಿಗೆ ಅವಳ ಭಾಷೆ ಅರ್ಥವಾಗಲಿಲ್ಲ. ಆವಾಗಾಕೆ ''Why are you crying?" ಎಂದಾಗ ಅವನು ತನ್ನ ಹಳೇ ಪ್ರೇಮಪುರಾಣವನ್ನು ಅವಳೆದುರು ಬಿಚ್ಚಿಟ್ಟನು. ಅವನು ಬಲವಂತ ಮಾಡಿ ಕೇಳಿದ್ದಕ್ಕೆ ಸುಮಾ ತನ್ನ ಹರಿದ ಬದುಕನ್ನು ಅವನಿಗೆ ಬಣ್ಣಿಸಿ ಹೇಳಿದಳು. ಅವಳ ಕಣ್ಣೀರ ಕಥೆಗೆ ಅವನೇನು ಕರಗಲಿಲ್ಲ. ಆದರೆ ಅವಳ ಜಗತ್ತನ್ನು ಸುತ್ತುವ ಕನಸಿಗೆ ಅವನು ಇಂಪ್ರೆಸ್ ಆದನು. ಅದಕ್ಕಾಗಿ ಆತ ಅವಳೊಂದಿಗೆ ಭಾರತದಲ್ಲಿರುವ ಸುಂದರ ತಾಣಗಳನ್ನು ವೀಕ್ಷಿಸಲು ತಿರ್ಮಾನಿಸಿದನು. ಅವನಿಗೆ ಅವನ ಮಾಜಿ ಪ್ರೇಯಸಿಯನ್ನು ಮರೆಯಲು ಹೊಸಬಳ ಸ್ನೇಹ ಬೇಕಿತ್ತು. ಅದೇ ರೀತಿ ಸುಮಾಳಿಗೆ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಒಂದು ಗಂಡು ಜನ್ಮದ ಆಸರೆ ಬೇಕಿತ್ತು. ಅದಕ್ಕಾಗಿ ಅವರಿಬ್ಬರು ಕೆಲವು ಕಂಡಿಷನಗಳ ಅನ್ವಯ ಜೊತೆಯಲ್ಲಿ ಭಾರತ ಸುತ್ತಲು ನಿರ್ಧರಿಸಿದರು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                      ಪ್ರೀತಿಯಲ್ಲಿ ಮೋಸ ಹೋಗಿ ಹೃದಯ ಮುರಿದುಕೊಂಡು ಗಡ್ಡ ಬಿಟ್ಟಿರುವ ಹುಡುಗರು ಹುಡುಗಿಯರಿಗೆ ಬಹುಬೇಗನೆ ಇಷ್ಟವಾಗುತ್ತಾರೆ. ಅದೇ ರೀತಿ ಆ ಹುಡುಗ ಸುಮಾಳಿಗೆ ಇಷ್ಟವಾದನು. ಅವನೆಸರು ಶ್ರೀಧರ ಎಂದಿತ್ತು. ಸುಮಾ ಅವಳನ್ನು ಶ್ರೀ ಎಂದು ಕರೆಯಲು ಶುರು ಮಾಡಿದಳು. ದೂಧಸಾಗರದ ಕೆಲವು ಸುಂದರ ಚಿತ್ರಗಳನ್ನು ತನ್ನ ಮೊಬೈಲ ಕ್ಯಾಮರಾ ಕಣ್ಣುಗಳಲ್ಲಿ ಸುಮಾ ಸೆರೆ ಹಿಡಿದಳು. ನಂತರ ಶ್ರೀಯ ಜೊತೆ ಸುಮಾ ಕಾಡಿನ ಒಂದು ರೆಸಾರ್ಟಿನ ಕಡೆಗೆ ಹೆಜ್ಜೆ ಹಾಕಿದಳು. ದೂಧಸಾಗರಕ್ಕೆ ನೇರವಾಗಿ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಅಲ್ಲಿಗೆ ಹೋಗಲು ರೈಲೊಂದೆ ಆಸರೆ. ದಟ್ಟವಾದ ಕಾಡಿನಲ್ಲಿ ಹಾದು ಹೋಗಿದ್ದ ರೈಲ್ವೆ ಹಳಿಯ ಮೇಲೆ ಹೆಜ್ಜೆ ಹಾಕುತ್ತಾ ಅವರಿಬ್ಬರು ಸಾಗಿದರು. ದಾರಿ ಮಧ್ಯೆದಲ್ಲಿ ಸಿಕ್ಕ ಹಲಸು, ನೇರಳೆ, ಮಾವು ಮುಂತಾದ ಹಣ್ಣುಗಳಿಂದ ಅವರ ಹೊಟ್ಟೆ ಹಸಿವು ತಕ್ಕ ಮಟ್ಟಿಗೆ ನೀಗಿತು. ಇದ್ದಕ್ಕಿದ್ದಂತೆ ಮಳೆ ಬರಲು ಪ್ರಾರಂಭಿಸಿತು. ಕಾಡಿನ ದಾರಿಯಲ್ಲಿ ಅವರಿಗ್ಯಾವ ಆಸರೆಯು ಇರಲಿಲ್ಲ. ಶ್ರೀ ಮಳೆಗೆ ಹಿಡಿಶಾಪ ಹಾಕುತ್ತಾ ಮರದ ಕೆಳಗೆ ನಿಂತಿದ್ದರೆ ಸುಮಾ ಮಳೆಯಲ್ಲಿ ಕುಣಿದು ಕುಪ್ಪಳಿಸಿದಳು. ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಮಳೆಯಲ್ಲಿ ಕಾಣದಂತೆ ಕಣ್ಣೀರಾಕಿ ಮನಸ್ಸನ್ನು ಹಗುರಾಗಿಸಿಕೊಂಡಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                    ಮಳೆ ನಿಂತ ಮೇಲೆ ಮತ್ತೆ ಅವರಿಬ್ಬರು ರೈಲ್ವೆ ಹಳಿ ಹಿಡಿದು ಹೊರಟರು. ಮಾತಿನ ಭರಾಟೆಯಲ್ಲಿ ಹಳಿ ಮೇಲೆ ರೈಲು ಬರುತ್ತಿರುವುದು ಅವರಿಬ್ಬರ ಅರವಿಗೆ ಬಂದಿರಲಿಲ್ಲ. ಒಮ್ಮೆಲೇ ರೈಲು ಅವರಿಬ್ಬರ ಸಮೀಪಕ್ಕೆ ಬಂದಾಗ ಸುಮಾ ಶ್ರೀಯನ್ನು ಹಳಿಯಿಂದ ಪಕ್ಕಕ್ಕೆ ತಳ್ಳಿ ಅವನ ಮೇಲೆ ಬಿದ್ದಳು. ರೈಲಿನ ಸದ್ದಿಗೆ ಹೆದರಿ ಅವಳು ಶ್ರೀಯನ್ನು ಬಲವಾಗಿ ಅಪ್ಪಿಕೊಂಡಳು. ರೈಲು ಹೋದ ನಂತರ ಅವಳು ಚೇತರಿಸಿಕೊಂಡಳು. ಅವಳು ತನಗರಿವಿಲ್ಲದಂತೆಯೇ ಅವನ ಎದೆ ಮೇಲೆ ತಲೆಯಿಟ್ಟು ಮಲಗಿದ್ದಳು. ಜೋರಾಗಿ ಬಡಿದುಕೊಳ್ಳುತ್ತಿದ್ದ ಅವನೆದೆ ಅವಳನ್ನು ಎಚ್ಚರಿಸಿತು. ಅವಳು ಮೊದಲ ಸಲ ತಾನಾಗಿಯೇ ಒಬ್ಬ ಪುರುಷನನ್ನು ಸ್ಪರ್ಷಿಸಿದ್ದಳು. ಮಳೆಯಲ್ಲಿ ನೆನೆದಿದ್ದರಿಂದ ಅವಳ ಸೀರೆ ಒದ್ದೆಯಾಗಿತ್ತು. ಅವಳು ಚಳಿಯಿಂದ ನಡುಗುವ ಮುನ್ನವೇ ಅವನ ಬಿಸಿ ಉಸಿರು ಅವಳನ್ನು ಮೈಚಳಿಯಿಂದ ರಕ್ಷಿಸಿತ್ತು. ಆಕೆ ಅವನಿಗೆ ಸ್ವಾರಿ ಕೇಳಿ ನಾಚಿ ಮುನ್ನಡೆದಳು. ಶ್ರೀ ಅವಳ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿದನು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                                                 ಕಾಡಿನ ಒಂಟಿ ದಾರಿಯಲ್ಲಿ ನಡೆದುಕೊಂಡು ಅವರಿಬ್ಬರು ಒಂದು ರೆಸಾರ್ಟನ್ನು ತಲುಪಿದರು. ಅಲ್ಲಿ ಶ್ರೀ ತನ್ನ ಕಾರನ್ನು ಪಾರ್ಕ ಮಾಡಿದ್ದನು. ಅವನು ತನ್ನ ಮಾಜಿ ಪ್ರೇಯಸಿಯೊಂದಿಗೆ ಪದೇಪದೇ ಅಲ್ಲಿಗೆ ಬರುತ್ತಿದ್ದನು. ಅದು ಅವನಿಗೆ ಚೆನ್ನಾಗಿ ಗೊತ್ತಿರುವ ತಾಣವಾಗಿತ್ತು. ಆತ ತನ್ನೊಂದಿಗೆ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಪ್ರವಾಸಕ್ಕೆ ಬಂದಿದ್ದನು. ಆದರೆ ಸುಮಾ ಉಟ್ಟ ಬಟ್ಟೆಯಲ್ಲೇ ಗಂಡನ ಮನೆಯಿಂದ ಓಡಿ ಬಂದಿದ್ದಳು. ಅವಳತ್ರ ಒಂದು ಮೊಬೈಲಿನ ಜೊತೆಗೆ ತನ್ನ ಒಡವೆಗಳನ್ನು ಮಾರಿದಾಗ ಬಂದ ಹಣವನ್ನು ಬಿಟ್ಟರೆ ಬೇರೆನು ಇರಲಿಲ್ಲ. ಶ್ರೀ ವಾಷರೂಮಿಗೆ ಹೋಗಿ ಫ್ರೆಶ್ಶಾಗಿ ಹೊಸ ಬಟ್ಟೆಗಳನ್ನು ಧರಿಸಿದನು.  ಆದರೆ ಸುಮಾಳತ್ರ ಧರಿಸಲು ಬಟ್ಟೆಗಳಿರಲಿಲ್ಲ. ಅದಕ್ಕಾಗಿ ಆಕೆ ಫ್ರೆಶ್ಶಾಗಿ ಶ್ರೀಯ ಬಟ್ಟೆಗಳನ್ನು ಧರಿಸಿದಳು. ಅವಳ ಮುಖದಲ್ಲಿ ಏನೋ ಒಂದು ಆತಂಕವನ್ನು ಅವನು ಕಂಡನು. ಅದಕ್ಕಾಗಿ ಅವಳಿಗೆ ಆತ "ನೀನು ಸೀರೆಯಲ್ಲೇ ಸಖತ್ತಾಗಿ ಕಾಣುವೆ. ಈ ಡ್ರೆಸಲ್ಲಿ ನೀನು ಒಂಚೂರು ಚೆನ್ನಾಗಿ ಕಾಣಿಸಲ್ಲ" ಎಂದು ಕೀಚಾಯಿಸಿದನು. ಆಕೆ ಅಳೆದು ತೂಗಿ ತುಟಿಯಂಚಿನಲಿ ಭಾರವಾದ ನಗುವನ್ನು ಸೂಸಿ ಸುಮ್ಮನಾದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                       "ಶ್ರೀಗೆ ಈ ರೆಸಾರ್ಟ ಹೇಗೆ ಗೊತ್ತು? ಅವನ ಹಿನ್ನೆಲೆ ಏನು? " ಎಂಬ ಪ್ರಶ್ನೆಗಳು ಅವಳ ಮನಸ್ಸಲ್ಲಿ ಮೂಡಿದ್ದವು. ಆಕೆ ಅವನನ್ನು ಕೇಳಿಯೇ ಬಿಟ್ಟಳು. ಆಗ ಆತ "ನಾನು ಎರಡ್ಮೂರು ಸಲ ನನ್ನ ಮಾಜಿ ಪ್ರೇಯಸಿಯೊಂದಿಗೆ ಇಲ್ಲಿಗೆ ಬಂದಿದ್ದೆ. ಇದು ನಮ್ಮಿಬ್ಬರ ನೆಚ್ಚಿನ ತಾಣ. ಈ ಕೋಣೆಯ ಗೋಡೆಗಳು ನಮ್ಮಿಬ್ಬರನ್ನು ಬೆತ್ತಲೆ ನೋಡಿವೆ..." ಎಂದೇಳಿ ಅವಳ ಅನುಮಾನದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದನು. ಸ್ವಲ್ಪ ಸಮಯದ ನಂತರ ಆತ ಊಟ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ನಿದ್ರೆಗೆ ಜಾರಿದನು. ಸುಮಾ ನಿದ್ರೆ ಬರದೆ ಸುಮ್ಮನೆ ತಲೆದಿಂಬನ್ನು ತಬ್ಬಿಕೊಂಡು ಹೊರಳಾಡಿದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                               ಸುಮಾಳ ಕನಸು ಅವಳ ನಿದ್ರೆಯನ್ನು ಕಿತ್ತುಕೊಂಡಿತು. ಅವಳಿಗೆ ಹೇಗೆ ತನ್ನ ಕನಸ್ಸನ್ನು ನನಸಾಗಿಸೋದು ಎಂಬ ಚಿಂತೆ ಕಾಡತೊಡಗಿತು. ಅವಳು ರಾತ್ರಿಯೆಲ್ಲ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಳು. ಕೂಡಲೇ ಫೇಸ್ಬುಕನ್ನು ತೆರೆದು "ಹುಚ್ಚು ಹುಡುಗಿ" ಎಂಬ ಫೇಸ್ಬುಕ ಪೇಜನ್ನು ಕ್ರಿಯೆಟ್ ಮಾಡಿ ನಿದ್ರೆಗೆ ಜಾರಿದಳು. ಮುಂಜಾನೆ ಬೇಗನೆ ಎದ್ದು ಶ್ರೀ ತಯಾರಾಗಿದ್ದನು. ಜೊತೆಗೆ ಸುಮಾಳಿಗಾಗಿ ತಿಂಡಿಯನ್ನು ತಯಾರಿಸಿ ಕಾಯುತ್ತಿದ್ದನು. ಆದರೆ ಆಕೆ ಘಾಡವಾದ ನಿದ್ರೆಯಲ್ಲಿದ್ದಳು. ಆತ ಅವಳ ನಿದ್ರಾಭಂಗ ಮಾಡಲು ಅವಳು ಹೊದ್ದುಕೊಂಡಿದ್ದ ಬೆಡಶೀಟನ್ನು ಎಳೆದನು. ಆದರೆ ಅವಳು ಅರೆಬೆತ್ತಲೆ ಸ್ಥಿತಿಯಲ್ಲಿ ಮುದ್ದಾಗಿ ಮಲಗಿದ್ದಳು. ಕೂಡಲೇ ಆತ ಅವಳ ಮೇಲೆ ಬೆಡಶೀಟನ್ನು ಹೊದಿಸಿ ಅಲ್ಲಿಂದ ಕಾಲ್ಕಿತ್ತನು. ಆದರೆ ಅವಳನ್ನು ಅವಳ ಅನುಮತಿಯಿಲ್ಲದೆ ಆ ಸ್ಥಿತಿಯಲ್ಲಿ ನೋಡಿದ್ದು ತಪ್ಪು ಎಂಬ ಪಾಪಪ್ರಜ್ಞೆ ಅವನನ್ನು ಕಾಡಿತು. ಅದಕ್ಕಾಗಿ ಆತ ಅವಳು ಎಚ್ಚರಗೊಂಡಾಗ ನಡೆದ ಸಂಗತಿಯನ್ನು ಹೇಳಿ ಅವಳತ್ರ ಕ್ಷಮೆ ಕೇಳಿದನು. ಅವನು ಹೇಳಿದ್ದನು ಕೇಳಿ ಅವಳ ನಿದ್ರೆ ಒಮ್ಮೆಲೇ ಹಾರಿ ಹೋಯಿತು. ಆಕೆ ಅವನನ್ನು ಕೋಣೆಯಿಂದ ಹೊರತಳ್ಳಿ ಕನ್ನಡಿಯಲ್ಲೊಮ್ಮೆ ತನ್ನ ಸೌಂದರ್ಯವನ್ನು ನೋಡಿಕೊಂಡು ಖುಷಿಪಟ್ಟಳು. ನಂತರ ಅವನ ಪ್ರಾಮಾಣಿಕತೆಗೆ ಮನಸೋತಳು.  

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

             ಸುಮಾ ಬೇಗನೆ ತಯಾರಾಗಿ ಶ್ರೀಯ ಜೊತೆ ಗೋವಾದ ಸುಂದರ ತಾಣಗಳನ್ನು ಸುತ್ತಲು ಶುರುಮಾಡಿದಳು. ಸುಮಾ ತಾನು ನೋಡಿದ ಪ್ರತಿಯೊಂದು ಸುಂದರ ತಾಣದ ಫೋಟೋವನ್ನು ಸೆರೆಹಿಡಿದು ತನ್ನ "ಹುಚ್ಚು ಹುಡುಗಿ" ಫೇಸ್ಬುಕ್ ಪೇಜಲ್ಲಿ ಪೋಸ್ಟ ಮಾಡಲು ಪ್ರಾರಂಭಿಸಿದಳು. ಶ್ರೀಯ ಜೊತೆ ತರಲೆ ಮಾಡುತ್ತಾ ಆಕೆ ಒಂದು ತಿಂಗಳಲ್ಲಿ ಈಡಿ ಗೋವಾವನ್ನು ಸುತ್ತಿದಳು. ಗೋವಾದ ಮೂಲೆಮೂಲೆಗೂ ಸಂಚರಿಸಿದಳು. ತನ್ನ ಪ್ರವಾಸದ ಅನುಭವಗಳನ್ನು ಫೋಟೋ ಸಮೇತ ತನ್ನ ಫೇಸ್ಬುಕ್ ಪೇಜಲ್ಲಿ ಪ್ರಕಟಿಸಿದಳು. ಫೇಸ್ಬುಕಲ್ಲಿರುವ ಲಕ್ಷಾಂತರ ಜನ ಅವಳ "ಹುಚ್ಚು ಹುಡುಗಿ" ಫೇಸ್ಬುಕ್ ಪೇಜನ್ನು ಫಾಲೋ ಮಾಡಿ ಅವಳನ್ನು ತಮ್ಮ ಲೈಕು ಮತ್ತು ಕಮೆಂಟುಗಳಿಂದ ಪ್ರೋತ್ಸಾಹಿಸಿ ಬೆನ್ತಟ್ಟಿದರು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                    ಸುಮಾಳ ಕನಸಿನ್ನು ಸಂಪೂರ್ಣವಾಗಿ ನನಸಾಗಿರಲಿಲ್ಲ. ಭಾರತದ ಅತಿ ಚಿಕ್ಕ ರಾಜ್ಯ ಗೋವಾವನ್ನಷ್ಟೇ ಅವಳು ಕಣ್ತುಂಬಿಕೊಂಡಿದ್ದಳು. ವಿಶಾಲ ಭಾರತ ದೇಶವನ್ನು ಸುತ್ತುವುದು ಇನ್ನು ಬಾಕಿಯಿತ್ತು. ಆದರೆ ಗೋವಾದ ಗಡಿ ದಾಟುವ ಮುನ್ನವೇ ಸುಮಾ ಶ್ರೀಗೆ ಮನಸೋತಳು. ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಶ್ರೀಗೆ ಮನೆಯಿಂದ ಪದೇಪದೇ ಫೋನ್ ಕರೆಗಳು ಬರುತ್ತಿದ್ದವು. ಅವನಮ್ಮ ಮಾಜಿ ಪ್ರೇಯಸಿಯನ್ನು ಮರೆತು ಹೊಸ ಹುಡುಗಿಯನ್ನು ಮದುವೆಯಾಗುವಂತೆ ಅವನನ್ನು ಒತ್ತಾಯಿಸುತ್ತಿದ್ದರು. ಪ್ರತಿಸಲ ಆತ ಅಮ್ಮನಿಗೆ ನೆಪ ಹೇಳಿ ಜಾರಿಕೊಳ್ಳುತ್ತಿದ್ದನು. ಆದರೆ ಈ ಸಲ ಅಮ್ಮನಿಗೆ ಸುಮಾಳ ಫೋಟೋ ಕಳುಹಿಸಿ "ನಾನೀ ಹುಡುಗಿಯನ್ನು ಪ್ರೀತಿಸುತ್ತಿರುವೆ, ಇವಳನ್ನೇ ಮದುವೆಯಾಗುತ್ತೇನೆ" ಎಂದು ಹೇಳಿದನು. ಆದರೆ ಫೋನಲ್ಲಿ ಅವನಮ್ಮ "ಈ ಹುಡುಗಿಯನ್ನು ನನ್ನ ಸೊಸೆಯಾಗಿ ತಂದುಕೊಳ್ಳಲು ನಾನು ಅವಳ ಮನೆವರೆಗೂ ಹೋಗಿದ್ದೆ. ಆದರೆ ಅವಳ ಮನೆಯವರು ನಿರಾಕರಿಸಿ ಬೇರೆಯವರೊಂದಿಗೆ ಅವಳ ಮದುವೆ ಮಾಡಿಸಿದ್ದಾರೆ" ಎಂದೇಳಿದಾಗ ಶ್ರೀ ನಗುತ್ತಾ ಅಮ್ಮನಿಗೆ ನಡೆದ ಸಂಗತಿಯನ್ನೆಲ್ಲ ವಿವರಿಸಿ ಸುಮಾಳೊಂದಿಗೆ ಮಾತನಾಡಿಸಿದನು. ನಂತರ ವಿಡಿಯೋ ಕಾಲಿಂಗ ಮಾಡಿ ಅವಳನ್ನು ಅಮ್ಮನಿಗೆ ಪರಿಚಯಿಸಿದನು. ಸೊಸೆಯೊಂದಿಗೆ ಬೇಗನೆ ಮನೆಗೆ ಬರುವಂತೆ ಹೇಳಿ ಅಮ್ಮ ಫೋನಿಟ್ಟರು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

               ಶ್ರೀ ತಾನು ಡ್ರೈವರ್ ಎಂದು ಸುಮಾಳಿಗೆ ಸುಳ್ಳೇಳಿದ್ದನು. ಆದರೆ ಈಗ ಅಮ್ಮ ಇಷ್ಟಪಟ್ಟ ಹುಡುಗಿ ತನಗೂ ಇಷ್ಟವಾಗಿದ್ದಾಳೆ ಎಂಬುದು ಅವನಿಗೆ ಗೊತ್ತಾದಾಗ ಅವನು ಅವಳತ್ರ ಇರೋ ವಿಷಯವನ್ನು ಹೇಳಿ ಸ್ವಾರಿ ಕೇಳಿ ಅವಳನ್ನು ಪ್ರೀತಿಸುವುದನ್ನು ಹೇಳಿದನು. ಸುಮಾ ತನ್ನನ್ನು ತಾ ನಂಬದಾದಳು. ತಾನು ಮುಖ ನೋಡದೆ ಮದುವೆಯಾಗಲು ಮುಂದಾಗಿದ್ದ ಬ್ಯುಸಿನೆಸಮ್ಯಾನ ಹುಡುಗ ಶ್ರೀ ಎಂದು ಗೊತ್ತಾದಾಗ ಆಕೆ ಬಹಳಷ್ಟು ಖುಷಿಪಟ್ಟಳು. ಅವನ ಪ್ರೀತಿಯನ್ನು ಒಪ್ಪಿಕೊಂಡು ಅವನ ಆತಂಕವನ್ನು ದೂರಾಗಿಸಿದಳು. ಮರುದಿನ ಸುಮಾಳ ಬರ್ಥಡೇ ಇರುವುದರಿಂದ ಶ್ರೀ ಅವಳಿಗೆ ಸರಪ್ರೈಸ್ ಕೊಡಲು ಗುಟ್ಟಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದನು. ಅವಳು ಹಟ ಮಾಡಿ ಅವನ ಜೊತೆ ಹೋಗಿ ಒಂದು ಕೆಂಗುಲಾಬಿ ಸೀರೆಯನ್ನು ಖರೀದಿಸಿದಳು. ಅವಳ ಹುಟ್ಟು ಹಬ್ಬವನ್ನು ಆಚರಿಸಲು ಶ್ರೀ ಸುಮಾಳನ್ನು ದೂಧಸಾಗರನ ರೆಸಾರ್ಟಿಗೆ ಕರೆದುಕೊಂಡು ಹೋದನು. ಸುಮಾ ಉಟ್ಟಿದ್ದ ಕೆಂಗುಲಾಬಿ ಸೀರೆ ಅವನ ಮತ್ತೇರಿಸಿತ್ತು. ಆತ ಅವಳನ್ನು ಕದ್ದುಮುಚ್ಚಿ ನೋಡುತ್ತಾ ಕಾರ ಚಲಾಯಿಸಲು ಹೋಗಿ ಕೂದಲೆಳೆಯಿಂದ ಅಪಘಾತದಿಂದ ಪಾರಾದನು. ಹೇಗೋ ತನ್ನ ಮನಸ್ಸಿನ ಕಳ್ಳ ಆಸೆಗಳನ್ನು ಅದುಮಿಟ್ಟುಕೊಂಡು ಆತ ಸೇಫಾಗಿ ರೆಸಾರ್ಟ ತಲುಪಿದನು.  ಆತ ಬಹಳ ವಿಭಿನ್ನವಾಗಿ ಅವಳ ಬರ್ಥಡೇಯನ್ನು ಆಚರಿಸಿದನು. ಅವನ ಸರ್ಪರೈಸ್ ಗಿಫ್ಟಗೆ ಸುಮಾ ಮನಸೋತಳು. ಅವನನ್ನು ಅಪ್ಪಿಕೊಂಡು ಖುಷಿಯಿಂದ ಕಣ್ಣೀರಾಕಿದಳು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                          ಶ್ರೀ ತನ್ನನ್ನು ಕೆಂಗುಲಾಬಿ ಸೀರೆಯಲ್ಲಿ ನೋಡಿ ಡಿಸ್ಟರ್ಬ ಆಗಿರುವುದನ್ನು ಸುಮಾ ಗಮನಿಸಿದ್ದಳು. ಅದಕ್ಕಾಗಿ ಆಕೆ ತನ್ನ ಕನಸಿನ ನನಸಿಗೆ ಮುನ್ನುಡಿ ಬರೆದು ತನ್ನ ಮನಸ್ಸನ್ನು ಸಂತುಷ್ಟಗೊಳಿಸಿದ ಪ್ರಿಯತಮನನ್ನು ಸಂತುಷ್ಟಗೊಳಿಸಲು ಸಿದ್ಧಳಾಗಿದ್ದಳು. ಸುಮಾಳ ಸೌಂದರ್ಯದ ಸೆಳೆತಕ್ಕೆ ಶ್ರೀ ತನ್ನ ಮನಸ್ಸಿನ ಹಿಡಿತವನ್ನು ಕಳೆದುಕೊಂಡಿದ್ದನು. ಅವಳು ಅಷ್ಟೇ, ಹರೆಯದ ಹೊಳೆಯಲ್ಲಿ ತನ್ನ ದೇಹದ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಕಾತುರಳಾಗಿದ್ದಳು. ಶ್ರೀಗೆ ಸುಮಾಳ ಮೇಲೆ ಅತಿಯಾದ ಪ್ರೀತಿಯ ಜೊತೆಗೆ ಅಪಾರ ಗೌರವವೂ ಇತ್ತು. ಅದಕ್ಕಾಗಿ ಆತ ಅವಳನ್ನು ಮುಟ್ಟಲು ಹಿಂದೇಟು ಹಾಕಿದನು. ಅವನ ಸೂಕ್ಷ್ಮ ಸ್ವಭಾವಕ್ಕೆ ಸೋತು ಸುಮಾ ತಾನೇ ಮೊದಲು ಮುಂದುವರೆದು ಅವನನ್ನು ಚುಂಬಿಸಿದಳು. ಅವಳ ಕ್ರಿಯೆಗೆ ಪ್ರಚೋದಿತನಾಗಿ ಶ್ರೀ ಮುಂದುವರೆದನು. ಅವಳ ಹಸಿ ಮೈ ಅವನ ಬಿಸಿ ಉಸಿರಿಗೆ ಪಾವನವಾಯಿತು. ಮುದ್ದಾದ ಮಿಲನ ಕ್ರಿಯೆ ಅವರಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿತು. ಮರುದಿನ ಮತ್ತೆ ಅವರಿಬ್ಬರು ಪ್ರವಾಸಕ್ಕೆ ಸಿದ್ಧರಾಗಿ ಮುನ್ನಡೆದರು. ಎಷ್ಟೋ ರಾತ್ರಿಗಳು ಅವರಿಬ್ಬರ ಮಿಲನಕ್ಕೆ ನಾಚಿ ನೀರಾದವು. ಮೂರು ತಿಂಗಳ ನಂತರ ಸುಮಾ ಗರ್ಭಿಣಿ ಎಂಬ ವಿಷಯ ಶ್ರೀಗೆ ತಿಳಿದಾಗ ಆತ ಅವಳೊಂದಿಗೆ ಮನೆಗೆ ಮರಳಿ ಅವಳನ್ನು ಮದುವೆಯಾದನು. 

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

                     ಸುಮಾಳ ತಂದೆತಾಯಿಗಳು ತಮ್ಮ ಮಗಳು ಬದುಕಿರುವಳಲ್ಲ ಎಂಬ ಸಂತಸವನ್ನು ಬಚ್ಚಿಟ್ಟು ತಮ್ಮ ಮಾನವನ್ನು ಹರಾಜಾಕಿದ್ದಾಳೆಂದು ಅವಳನ್ನು ಶಪಿಸಿ ಹೋದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮಾ ಈಗ ತಾಯ್ತನದ ಸುಖವನ್ನು ಸವಿಯುತ್ತಿದ್ದಾಳೆ. ಅವಳ ಕನಸಿನ್ನು ಪೂರ್ತಿಯಾಗಿಲ್ಲ. ಇನ್ನೂ ಅರ್ಧಕ್ಕೆ ನಿಂತಿದೆ. ಶ್ರೀ ತನ್ನ ಬ್ಯುಸಿನೆಸ್ಸಲ್ಲಿ ಬ್ಯುಸಿಯಾಗಿದ್ದಾನೆ. ಪ್ರವಾಸ ಕಥನವನ್ನು ಬೇಗನೆ ಮುಂದುವರೆಸುವಂತೆ ಲಕ್ಷಾಂತರ ಜನ ಫೇಸ್ಬುಕ್ ಫಾಲೋವರ್ಸಗಳು ಅವಳನ್ನು ಕೇಳಿಕೊಳ್ಳುತ್ತಿದ್ದಾರೆ. ಆದರೆ ಸುಮಾ ಯಾವುದಕ್ಕೂ ಕೇರ ಮಾಡದೆ ತನ್ನ ಪುಟ್ಟ ಮಗನೊಂದಿಗೆ ಕಾಲ ಕಳೆಯುತ್ತಾ ಸುಮ್ಮನಿದ್ದಾಳೆ. ಅವಳು ಮತ್ತೆ ತನ್ನ ಪ್ರವಾಸವನ್ನು ಮುಂದುವರೆಸುತ್ತಾಳಾ? ಜಗತ್ತನ್ನು ಸುತ್ತುವ ಅವಳ ಕನಸು ಸಂಪೂರ್ಣವಾಗಿ ನನಸಾಗುತ್ತಾ? ಇಲ್ಲ ಹುಚ್ಚು ಹುಡುಗಿಯ ಕನಸು ಅಲ್ಲಿಗೆ ಕೊನೆಯಾಗುತ್ತಾ? ಎಂಬುದನ್ನು ಕಾದು ನೋಡಬೇಕು.

ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada

           ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ತಿಳಿಸಿ. ಜೊತೆಗೆ ಈ ಕಥೆಯನ್ನು ಲೈಕ್ ಮತ್ತು ಶೇರ್ ಮಾಡಿ. ಸುಮಾಳ ಕನಸು ಸಂಪೂರ್ಣವಾಗಿ ನನಸಾಗುತ್ತಾ? ಇಲ್ಲ ಅರ್ಧಕ್ಕೆ ಕೊನೆಯಾಗುತ್ತಾ? ಎಂಬುದನ್ನು ತಿಳಿಯಲು ಈ ಪೇಜನ್ನು ತಪ್ಪದೆ ಫಾಲೋ ಮಾಡಿ.


ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada
  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada ಹುಚ್ಚು ಹುಡುಗಿ : ಒಂದು ಲೈಫಕಥೆ - Kannada Life Love Story - Love Stories in Kannada Reviewed by Director Satishkumar on July 13, 2018 Rating: 4.5
Powered by Blogger.