ಗುಪ್ತ ಪ್ರೇಯಸಿ : ಕನ್ನಡ ಗುಪ್ತ ಪ್ರೇಮಕಥೆ Kannada Sad Love Story - kannada love story

Chanakya Niti in Kannada

                     ಅವರಿಬ್ಬರದು ಇತಿಹಾಸದ ಪುಟ ಸೇರುವಂಥ ಸ್ನೇಹ. ಇಬ್ಬರಿಗೂ ಪರಸ್ಪರರ ಮೇಲಿದ್ದ ನಂಬಿಕೆ ಮತ್ತು ಗೌರವ ಮೆಚ್ಚುವಂಥದ್ದು. ಅವನಿಗೆ ಅವಳೊಬ್ಬಳೇ ಬೆಸ್ಟ್ ಫ್ರೆಂಡ್. ಅವಳಿಗೂ ಅಷ್ಟೇ ಅವನೊಬ್ಬನೇ ಬೆಸ್ಟಫ್ರೆಂಡ್. ಎಲ್ಲರು ಹೊಟ್ಟೆಕಿಚ್ಚುಪಡುವಷ್ಟು ಅನ್ಯೋನ್ಯತೆ ಅವರಲ್ಲಿತ್ತು. ಎಲ್ಲರು ಅವರನ್ನು ಪ್ರೇಮಿಗಳೆಂದು ಕಾಲೆಳೆಯುತ್ತಿದ್ದರೂ ಸಹ ಅವರು ಕಿವಿಕೊಡದೆ ತಮ್ಮ ಪಾಡಿಗೆ ತಾವು ರಾಜಾರೋಷವಾಗಿ ಓಡಾಡಿಕೊಂಡಿದ್ದರು. ಏಕೆಂದರೆ ಅವರಿಗೆ ಅವರ ಸ್ನೇಹದ ಮೇಲೆ ಸಂಪೂರ್ಣವಾದ ನಂಬಿಕೆಯಿತ್ತು.

ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

                    ಅವಳಿಗೆ ಅವನನ್ನು ಬಿಟ್ಟಿರಲು ಸಾಧ್ಯವಿರಲಿಲ್ಲ. ಅವನಿಗೂ ಅಷ್ಟೇ ಅವಳಿಂದ ದೂರವಿರಲು ಮನಸ್ಸಾಗುತ್ತಿರಲಿಲ್ಲ. ಅವರಿಬ್ಬರು ಸದಾ ಅಂಟಿಕೊಂಡೇ ತಿರುಗಾಡುತ್ತಿದ್ದರು. ಪ್ರತಿಯೊಂದು ಕೆಲಸವನ್ನು ಜೊತೆಗೂಡಿಯೇ ಮಾಡುತ್ತಿದ್ದರು. ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರೂ ಸಹ ಒಂದೇ ಮನಸ್ಥಿತಿಯಲ್ಲಿ ಜೀವಿಸುತ್ತಿದ್ದರು. ಅವನಿಗೆ ಅವಳ ಮೇಲೆ ಅತಿಯಾದ ಕಾಳಜಿ. ಅವಳಿಗೆ ಅವನ ಮೇಲೆ ಅತಿಯಾದ ಕನಿಕರ. ಅವರಿಬ್ಬರು ಸ್ನೇಹಲೋಕದಲ್ಲಿ ಸುಖವಾಗಿದ್ದರು. ಅವರಿಗೆ ಈ ಪ್ರೀತಿಪ್ರೇಮದ ಹುಚ್ಚು ತಲೆ ಸೇರಿರಲಿಲ್ಲ. ಅವರ ಮೈಮನಸ್ಸುಗಳು ಪರಿಶುದ್ಧವಾಗಿದ್ದವು. ಅವರ ಪರಿಶುದ್ಧ ಸ್ನೇಹ ಅವಳ ಮನೆಯವರಿಗೆ ಅಪ್ರಬುದ್ಧ ಪ್ರೀತಿಯಂತೆ ಕಂಡಿತು. ಅದಕ್ಕಾಗಿ ಮನೆಯವರು ಅವಳ ಮದುವೆಗೆ ಸಿದ್ಧರಾದರು.


ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

                  ಅವಳಿಗೆ ತನ್ನ ಮದುವೆ ನಿಶ್ಚಯವಾಗಿರುವುದರ ಬಗ್ಗೆ ಅತಿಯಾದ ಸಂತಸವಿತ್ತು. ಅವನಿಗೂ ಅಷ್ಟೇ ಅವಳ ಮದುವೆಯಲ್ಲಿ ಓಡಾಡಬೇಕು, ಕುಣಿದು ಕುಪ್ಪಳಿಸಬೇಕು ಎಂಬ ಕಾತುರವಿತ್ತು. ಅವರಿಬ್ಬರ ಸ್ನೇಹ ಎಲ್ಲರ ಕಣ್ಣಿಗೆ ಪ್ರೀತಿಯಂತೆಯೆ ಕಾಣುತ್ತಿತ್ತು. ಅವರಿಬ್ಬರ ಸ್ನೇಹಕ್ಕೆ ಕೆಲವರ ಕೊಂಕು ಮಾತುಗಳು ಕಪ್ಪುಚುಕ್ಕೆಯನ್ನಿಟ್ಟವು. ಭಾವಿಗಂಡನ ಅನುಮಾನದ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವಿಲ್ಲದೆ ಅವಳು ಅವನಿಗೆ ಅವಮಾನ ಮಾಡಿ ಅವನಿಂದ ದೂರಾದಳು. ಜೀವದ ಗೆಳತಿ ಯಾಕೆ ಈ ರೀತಿ ಮಾಡಿದಳು ಎಂಬುದು ಗೊತ್ತಾಗದೆ ಆತ ಅವಳಿಂದ ಸುಮ್ಮನೆ ದೂರಾದನು. ಅವಳ ಮದುವೆಯಲ್ಲಿ ಕುಣಿದು ಕುಪ್ಪಳಿಸಬೇಕು ಎಂದು ಕನಸು ಕಂಡಿದ್ದ ಗೆಳೆಯನ ಕಣ್ಣಲ್ಲಿ ಕಣ್ಣೀರ ಧಾರೆ ಸುರಿದರೆ, ಕಾರಣವಿಲ್ಲದೆ ಅಮಾಯಕ ಗೆಳೆಯನನ್ನು ಅವಮಾನಿಸಿ ದೂರ ಮಾಡಿಕೊಂಡೆನಲ್ಲ ಎಂಬ ಕೊರಗು ಅವಳನ್ನು ಕಾಡಲು ಪ್ರಾರಂಭಿಸಿತು.

ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

                       ಮದುವೆ ಮನೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಅವಳ ಮನಸ್ಸಲ್ಲಿ ಸ್ಮಶಾನ ಮೌನ ಕವಿದಿತ್ತು. ಅವಳ ಮುಖದಲ್ಲಿ ಮದುವೆ ಹೆಣ್ಣಿನ ಕಳೆಯಿರಲಿಲ್ಲ. ಅವಳ ಮನಸ್ಸು ಗೆಳೆಯನಿಗಾಗಿ ಹಂಬಲಿಸುತ್ತಿತ್ತು. ಆದರೆ ಆತ ಮರಳಿ ಬರುವ ಸಾಧ್ಯತೆ ಇರಲಿಲ್ಲ. ಅವಳು ಬೇರೆ ದಾರಿಯಿಲ್ಲದೆ ಗಂಡನ ತಾಳಿಗೆ ಕೊರಳು ಚಾಚಿ ತನ್ನನ್ನು ಅವನಿಗೊಪ್ಪಿಸಿಕೊಂಡಳು. ಅವತ್ತಿನ ರಾತ್ರಿ ಕಣ್ಮುಂದೆ ಗಂಡನಿದ್ದರೂ ಅವಳ ಮನಸ್ಸು ಗೆಳೆಯನಿಗಾಗಿ ಹಂಬಲಿಸುತ್ತಿತ್ತು. ಅವಳಿಗೆ ಅವನೊಂದಿಗೆ ಒಂದು ಸಲ ಮಾತನಾಡಬೇಕು ಎಂಬ ಹಂಬಲ ಹೆಚ್ಚಾಯಿತು. ಆಕೆ ಗಂಡನ ಕಣ್ತಪ್ಪಿಸಿ ಅವನಿಗೆ ಕರೆ ಮಾಡಿದಳು. ಆದರೆ ಆತ ಅವಳ ಕರೆಯನ್ನು ಸ್ವೀಕರಿಸಲಿಲ್ಲ. ಅದಕ್ಕಾಗಿ ಆಕೆ ಅವನಿಗೆ "ನನ್ನ ನೋವಿಗೆ ನೀ ಕಣ್ಣೀರಾಕಿದೆ. ನನ್ನ ಸಮಸ್ಯೆಗಳನ್ನು ಪರಿಹರಿಸಲು ನೀ ಸಮಸ್ಯೆಗಳನ್ನು ಎದುರಿಸಿದೆ. ನನ್ನ ಯಶಸ್ಸಿಗಾಗಿ ನೀ ಹಗಲಿರುಳು ಶ್ರಮಿಸಿದೆ.  ಕೊನೆಗೆ ನನ್ನ ಯಶಸ್ಸಿನಲ್ಲಿ ದೂರ ನಿಂತೇ ಮುಗುಳ್ನಗೆ ಬೀರಿದೆ. ನೀ ನನಗಾಗಿ ಇಷ್ಟೆಲ್ಲ ಮಾಡಿದ್ದರೂ ಸಹ ನಾ ನಿನಗಾಗಿ ಏನು ಮಾಡಲಿಲ್ಲ. ಆದರೆ ನಿನ್ನ ತೋಳತೆಕ್ಕೆಯಲ್ಲಿ ನಾ ನಲಿದಾಡಲು ಬಯಸಿದ್ದೆ. ನಿನ್ನ ಖುಷಿಗಾಗಿ ನಾ ನೋವನ್ನು ಅನುಭವಿಸಿ ನಿನ್ನ ಮಕ್ಕಳಿಗೆ ತಾಯಿಯಾಗಿ ನಿನ್ನ ಜೊತೆ ಬಾಳಬೇಕೆಂದಿದ್ದೆ. ನಿನ್ನನ್ನು ಬೆಸ್ಟಫ್ರೆಂಡಾಗಿ ಪಡೆದ ನಾನು ನಿಜಕ್ಕೂ ಅದೃಷ್ಟವಂತೆಯಾಗಿದ್ದೆ. ಆದರೆ ಈಗ ನಿನ್ನನ್ನು ಶಾಶ್ವತವಾಗಿ ಕಳೆದುಕೊಂಡು ನತದೃಷ್ಟೆಯಾಗಿರುವೆ. ಸಾಧ್ಯವಾದರೆ ಕ್ಷಮಿಸಿ ಬಿಡು ಗೆಳೆಯ,,, ಬಾಯ್..." ಎಂದು ಮೆಸೇಜ್ ಕಳಿಸಿ ಸುಮ್ಮನಾದಳು.

ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

                    ಅವಳ ಈ ಮೆಸೇಜಿನಲ್ಲಿ ಅವಳ ಗುಪ್ತ ಪ್ರೀತಿ ಬಹಿರಂಗಗೊಂಡಿತ್ತು. ಅವನ ಮನಸ್ಸಲ್ಲಿ ಅವಳ ಮೇಲೆ ಈ ತರಹದ ಭಾವನೆಗಳಿರಲಿಲ್ಲ. ಆದರೆ ಅವಳ ಈ ತಡವಾದ ಪ್ರೇಮ ಸಂದೇಶ ಅವನ ಮನಸ್ಸನ್ನು ಕೆಡಿಸಿತು. ಕಾಲ ಮಿಂಚಿ ಹೋದ ಮೇಲೆ ವ್ಯಕ್ತವಾದ ಅವಳ ಗುಪ್ತ ಪ್ರೀತಿ ಅವನ ಗೋರಿ ಕಟ್ಟುವಲ್ಲಿ ಯಶಸ್ವಿಯಾಯಿತು. ಅತ್ತ ಕಡೆ ಮದುವೆ ಸೀರೆಯಲ್ಲಿ ಅವಳ ಸೌಂದರ್ಯ ಅವಳ ಗಂಡನನ್ನು ಮತ್ತಷ್ಟು ಮತ್ತೇರಿಸಿತ್ತು. ಅವಳಿಗೆ ಗಂಡನ ಗುಲಾಮಳಾಗದೆ ಬೇರೆ ದಾರಿಯಿರಲಿಲ್ಲ. ಗೆಳೆಯನ ತೋಳತೆಕ್ಕೆಯಲ್ಲಿ ನಲಿದಾಡಬೇಕು ಎಂದುಕೊಂಡವಳು ಗಂಡನ ತೋಳಲ್ಲಿ ರಾತ್ರಿಯಿಡೀ ನರಳಿದಳು. ಅವಳ ಕಾಣದ ಕಣ್ಣೀರಲ್ಲಿ ಅವನ ನೆನಪುಗಳು ಕೊಚ್ಚಿಕೊಂಡು ಹೋಗುತ್ತಿದ್ದವು. ಗಂಡನ ಪ್ರೀತಿ ಅವಳ ಗುಪ್ತ ಪ್ರೀತಿಯನ್ನು ಅಳಿಸಾಕುವಲ್ಲಿ ವಿಫಲವಾಯಿತು. ಗೆಳೆಯ ಗೋರಿ ಸೇರಿದರೂ, ಗೆಳೆಯನ ನೆನಪುಗಳು ಅವಳನ್ನು ಗೋಳಿಡಿದುಕೊಂಡವು. ಅವಳ ಹೃದಯ ಗೆಳೆಯನ ನೆನಪುಗಳ ನೆರಳಲ್ಲಿ ನೂಚ್ಚು ನೂರಾಯಿತು. ತನ್ನ ಗಂಡನಲ್ಲಿ ಅವಳು ತನ್ನ ಗೆಳೆಯನನ್ನು ಕಾಣಲು ಪ್ರಯತ್ನಿಸುತ್ತಿದ್ದಳು. ಆದರೆ ಅವಳ ಗಂಡ ಗೆಳೆಯನ ಸ್ಥಾನವನ್ನು ತುಂಬುವಷ್ಟು ಸಮರ್ಥನಾಗಿರಲಿಲ್ಲ. ಅದಕ್ಕಾಗಿ ಆಕೆ ಗಂಡನಿಗೆ ತನ್ನ ಮೈಯೊಪ್ಪಿಸಿ ಗೆಳೆಯನ ನೆನಪುಗಳಲ್ಲಿ ಕಳೆದೋಗುತ್ತಿದ್ದಳು. ಅದರ ಫಲವಾಗಿ ಎರಡು ಮಕ್ಕಳೊಂದಿಗೆ ಅವಳ ಹೊಸ ಜೀವನ ಹಳೇ ಸ್ಕೂಟರ್ ಮೇಲೆ ಕುಂಟುತ್ತಾ ಸಾಗಿದೆ....


ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಗುಪ್ತ ಪ್ರೇಯಸಿ : ಕನ್ನಡ ಗುಪ್ತ ಪ್ರೇಮಕಥೆ Kannada Sad Love Story - kannada love story ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story - kannada love story Reviewed by Director Satishkumar on August 19, 2018 Rating: 4.5
Powered by Blogger.