ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

Chanakya Niti in Kannada
ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                                          ಡಿಗ್ರಿ ಮುಗಿದ ನಂತರ ಎಲ್ಲರು ಹೆಸರಿಗಷ್ಟೇ ಫ್ರೆಂಡ್ಸಾದರು. ಎಲ್ಲರು ಅವರವರ ಪರ್ಸನಲ್ ಲೈಫನ ಸೆಟ್ಲಮೆಂಟಲ್ಲಿ ಬ್ಯುಸಿಯಾದರು. ಆದರೆ ಸಂದೀಪನಿಗೆ ಅವಳದ್ದೇ ಚಿಂತೆಯಾಗಿತ್ತು. "ಅವಳು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ..?" ಎಂಬುದೇ ಒಂದು ದೊಡ್ಡ ಚಿಂತೆಯಾಗಿತ್ತು. ಕಾಲೇಜಿನಲ್ಲಿರುವಾಗಲೂ ಆತ ಅವಳದ್ದೇ ಗುಂಗಿನಲ್ಲಿರುತ್ತಿದ್ದನು. ಈಗಲೂ ಆತ ಅವಳದ್ದೇ ಗುಂಗಿನಲ್ಲಿದ್ದಾನೆ. ಅವಳ ಪ್ರತಿಯೊಂದು ಮಾತಿಗೂ ಆತ ಮನಸೋತಿದ್ದನು. ಅವಳ ಮುದ್ದು ಮುಖಕ್ಕೆ ಆತ ಪೆದ್ದನಾಗಿದ್ದನು. ಆತ ಅವಳಿಗಾಗಿ ಹಂಬಲಿಸುತ್ತಿದ್ದನು. ಅವಳ ಜೊತೆ ಕಾಲ ಕಳೆಯಬೇಕು ಎಂದೆಲ್ಲ ನೀಲಿ ಕನಸುಗಳನ್ನು ಕಾಣುತ್ತಿದ್ದನು. ಕಾಲೇಜಿನಲ್ಲಿ ಅವಳ ಗಮನವನ್ನು ಸೆಳೆಯುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಿ ಎಲ್ಲರೆದುರು ಜೋಕರ ಆಗುತ್ತಿದ್ದನು.

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

              ಯಾರು ಏನೆಂದುಕೊಂಡರು ಸಂದೀಪನಿಗೆ ವ್ಯತ್ಯಾಸವಾಗುತ್ತಿರಲಿಲ್ಲ. ಅವನಿಗೆ ಅವಳಷ್ಟೇ ಮುಖ್ಯವಾಗಿದ್ದಳು. ಆತ ಅವಳ ಪ್ರೀತಿ ಬಯಸುತ್ತಿದ್ದನು. ಅದಕ್ಕಾಗಿ ಸ್ನೇಹದ ಸೋಗು ಧರಿಸಿ ಅವಳಿಗೆ ಹತ್ತಿರವಾಗಲು ಪ್ರಯತ್ನಿಸಿದನು. ಆದರೆ ಅವನ ಹುಚ್ಚು ಪ್ರಯತ್ನಗಳು ಅವನಿಗೆ ಫಲ ಕೊಡಲಿಲ್ಲ. ನಂತರ ಆತ ಬೇಜಾರಾಗಿ ಅವಳನ್ನು ಬಿಟ್ಟು ಬೇರೆ ಹುಡುಗಿಯರ ಸ್ನೇಹಕ್ಕಾಗಿ ಹೊಸ ಬಲೆಯನ್ನು ಹೆಣೆದು ಹೊಸಹೊಸ ಪ್ರಯತ್ನಗಳನ್ನು ಮಾಡಿದನು. ಅವನ ಈ ಪ್ರಯತ್ನಗಳಿಗೆ ಹೊಸ ಹುಡುಗಿಯರು ಮರುಳಾಗಲಿಲ್ಲ. ಆದರೆ ಅವನ ಹಳೇ ಹುಡುಗಿ ಬೇರೆ ಹುಡುಗಿಯರ ಮೇಲಿನ ಹೊಟ್ಟೆ ಕಿಚ್ಚಿಗೆ ಇವನ ಬಲೆಗೆ ಬಿದ್ದಳು. ಕ್ಲಾಸಲ್ಲಿರೋ ಮಾಸ್ ಹುಡುಗಿ ಅವಳೊಬ್ಬಳೇ ಎಂದರೂ ತಪ್ಪಿರಲಿಲ್ಲ. ಕಾಲೇಜು ತುಂಬೆಲ್ಲ ಅವಳ ನಗುವಿನ ಸದ್ದಾಗುತ್ತಿತ್ತು. ಅವಳು ನಾಚಿಕೊಂಡು ನಡೆದು ಬರುವಾಗ ಹುಡುಗರೆದೆಯಲ್ಲಿ ಅವಳ ಕಾಲ್ಗೆಜ್ಜೆ ಶಬ್ದ ಪ್ರತಿಧ್ವನಿಸುತ್ತಿತ್ತು. ಅಂಥ ಅಪರೂಪದ ರೂಪಸಿ ಪ್ರೇಮದ ಪರದೆಯಲ್ಲಿ ಅಡಗಿದ ಸಂದೀಪನ ಸ್ನೇಹದ ಸುಳಿಯಲ್ಲಿ ಸಿಲುಕಿದಳು.

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                   ಗರ್ಲಫ್ರೆಂಡಗಳಿಲ್ಲದೆ ಎರಡು ವರ್ಷ ಸಂನ್ಯಾಸಿಯಂತೆ ಕಾಲೇಜು ಲೈಫನ್ನು ಕಳೆದ ಸಂದೀಪನ ವನವಾಸ ಅವಳಿಂದ ಕೊನೆಯಾಗಿತ್ತು. ಅವಳಂಥ ಸುಂದರಿ ನನ್ನ ಸ್ನೇಹಿತೆಯೆಂಬ ಒಣಜಂಭ ಅವನ ತಲೆ ಸೇರಿದ್ದರಿಂದ ಆತ ಮತ್ತಷ್ಟು ಪೆದ್ದುಪೆದ್ದಾಗಿ ಆಡುತ್ತಿದ್ದನು. ಅವಳೊಂದಿಗೆ ಅತ್ಯಂತ ಆತ್ಮೀಯವಾಗಿ ನಡೆದುಕೊಳ್ಳುತ್ತಾ ಬೇರೆ ಹುಡುಗರ ಹೊಟ್ಟೆ ಉರಿಸುತ್ತಿದ್ದನು. ಅವರಿಬ್ಬರು ಒಂದೇ ಊರಿನವರಾಗಿದ್ದರಿಂದ ಒಂದೇ ಬಸ್ಸಲ್ಲಿ ಹೋಗಿಬರುವಾಗ ಅವರು ಮತ್ತಷ್ಟು ಹತ್ತಿರವಾದರು. ಸಮಯ ಸರಿದಂತೆ ಅವಳು ಅವನಿಗೆ ಅತಿಯಾದ ಸಲುಗೆಯನ್ನು ಕೊಟ್ಟಳು. ಅವಳೊಂದಿಗೆ ಕೈಕುಲುಕಲು ಹೆದರುತ್ತಿದ್ದ ಸಂದೀಪ ಅನುಮತಿಯಿಲ್ಲದೆ ಅವಳ ಕೆನ್ನೆ ಕಚ್ಚುವಷ್ಟು ಧೈರ್ಯಶಾಲಿಯಾದನು. ಅವಕಾಶ ಸಿಕ್ಕಾಗಲೆಲ್ಲ ಅವಳ ಕೆನ್ನೆ ಕಚ್ಚಿ ಅವಳ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದನು. 

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                       ಅವಳು ಸಂದೀಪನನ್ನು ಅತಿಯಾಗಿ ನಂಬಿದ್ದಳು. ಅದಕ್ಕಾಗಿ ಅವನ ಕುಚೇಷ್ಟೆಗಳನ್ನು ಅಲ್ಲಗಳೆಯುವ ಧೈರ್ಯ ಅವಳಲ್ಲಿರಲಿಲ್ಲ. ಒಂದಿನ ಕಾಲೇಜಿಗೆ ಚಕ್ಕರ ಹಾಕಿ ಅವರಿಬ್ಬರು ಸಮೀಪದ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋದರು. ಸಂದೀಪ ಸಿಕ್ಕಿರುವ ಸಂದರ್ಭವನ್ನು ಸರಿಯಾಗಿ ದುರುಪಯೋಗಪಡಿಸಿಕೊಂಡು ಮತ್ತೆ ಅವಳ ಕೆನ್ನೆ ಕಚ್ಚಿದನು. ಅವನಾಸೆಗೆ ವಿರೋಧಿಸುವ ವೀರತನ ಅವಳಲ್ಲಿಗ ಇರಲಿಲ್ಲ. ಅವಳು ಕಣ್ಮುಚ್ಚಿ ಸುಮ್ಮನೆ ಅವನಿಗೆ ಸಹಕರಿಸಿದಳು. ನಾಲ್ಕು ಮುತ್ತುಗಳನ್ನು ಮೀರಿ ಮುಂದುವರೆಯುವ ಭಂಡ ಧೈರ್ಯ ಅವನಲ್ಲಿಯೂ ಇರಲಿಲ್ಲ. ಸಂಜೆಯಾಗುವಷ್ಟರಲ್ಲಿ ಅವನ ಸಲ್ಲಾಪ ಬರೀ ಮುತ್ತುಗಳಲ್ಲೇ ಮುಗಿಯಿತು.

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

             ಸಂದೀಪನ ಕಳ್ಳ ಸ್ನೇಹದ ಪರದೆಯಲ್ಲಿ ಅವನ ಗುಪ್ತ ಪ್ರೀತಿ ಗರಿಗೆದರಲು ಪ್ರಾರಂಭಿಸಿತ್ತು. ಅವನು ಕರೆದಾಗಲೆಲ್ಲ ಕರೆದ ಕಡೆಗೆ ಬರಲು ಅವಳು ಸದಾ ಸಿದ್ಧಳಿದ್ದಳು. ಅವನ ಸರಸ ಸಲ್ಲಾಪಗಳಿಗೆಲ್ಲ ಅವಳು ಸಂಪೂರ್ಣವಾಗಿ ಸಹಕರಿಸುತ್ತಿದ್ದಳು. ಆದರೆ ಅವಳ ಸ್ವಾತಂತ್ರ್ಯವನ್ನು ಅವಳ ಮನೆಯವರು ಮದುವೆಯೆಂಬ ಮೂಗುದಾರ ಪ್ರಯೋಗಿಸಿ ಕಿತ್ತುಕೊಂಡರು. ಅವಳು ಕೊನೆಯ ಸಲ ಅವನೊಂದಿಗೆ ಸಮೀಪದ ಒಂದು ಪ್ರಶಾಂತವಾದ ಸ್ಥಳಕ್ಕೆ ತೆರಳಿ ಅವನ ಸ್ನೇಹಕ್ಕೆ ಅಂತ್ಯ ಹಾಡಿದಳು. ಅವತ್ತು ಅವಳಾಗೇ ಅವನಿಗೆ ಯಾಕೆ ಮುತ್ತಿಟ್ಟಳು ಎಂಬುದು ಅವನಿಗೆ ಅವಳು ಮದುವೆಯಾಗಿ ಗಂಡನ ಮನೆ ಸೇರಿದಾಗ ಅರ್ಥವಾಯಿತು. ಅವಳು ಮುತ್ತು ಕೊಟ್ಟ ಕೆನ್ನೆ ಮೇಲೆ ಅವಳ ನೆನಪುಗಳ ಕಣ್ಣೀರ ಮಾಲೆ ಅವನ ಕನಸುಗಳನ್ನು ಕಿತ್ತುಕೊಂಡಿತು. ಅವನು ತನ್ನ ಪ್ರೀತಿಯನ್ನು ವ್ಯಕ್ತಪಡಿಸುವಷ್ಟರಲ್ಲಿ ಅವಳು ಪರರ ಸ್ವತ್ತಾಗಿದ್ದಳು. ಅವನು ಒಂದೆರಡು ತಿಂಗಳುಗಳ ಕಾಲ ಅವಳ ನೆನಪಲ್ಲಿ ಕೊರಗಿ ಕರಗಿದನು. ಆದರೆ ಅವನಿಂದ ಅವಳ ಸವಿ ನೆನಪುಗಳನ್ನು ಮರೆಯಲಾಗಲಿಲ್ಲ. ಕೊನೆಯ ಸಲ ಅವಳು ಸಿಕ್ಕಾಗ ಕೊಟ್ಟ ಸಿಹಿಮುತ್ತನ್ನು ನೆನೆಪಿಸಿಕೊಂಡು ಆತ ಅವಳ ನೀಲಿ ಕನಸುಗಳ ದಾಸನಾದನು.

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                  ಸಂದೀಪನಿಗೆ ಅವಳನ್ನೊಮ್ಮೆ ನೋಡಬೇಕು ಎಂಬಾಸೆ ಪದೇಪದೇ ಆಗುತ್ತಿತ್ತು. ಆದರೆ ಅವಳು ತನ್ನನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬ ಭಯವಿತ್ತು. ಆತ ಪದವಿ ಮುಗಿಸಿ ಹೆಚ್ಚಿನ ಓದಿನ ನೆಪವೊಡ್ಡಿ ಅವಳೂರಿಗೆ ಹೋದನು. ಸಾಕಷ್ಟು ಹರಸಾಹಸ ಮಾಡಿ ಅವಳ ಮನೆ ಹುಡುಕಿ, ಅವಳ ಮನೆಯೆದುರೇ ಒಂದು ಬಾಡಿಗೆ ಮನೆಯನ್ನು ಮಾಡಿದನು. ಮೊದಲ ಸಲ ಅವಳನ್ನು ಸೀರೆಯಲ್ಲಿ ನೋಡಿದಾಗ ಆತ ಕಳೆದೋದನು. ಕಾಲೇಜಿನಲ್ಲಿ ಇರುವಾಗಿರುವಕ್ಕಿಂತಲೂ ಈಗಾಕೆ ಮತ್ತಷ್ಟು ಸುಂದರಿಯಾಗಿದ್ದಳು. ಅವಳ ಕೊಬ್ಬಿದ ಸೌಂದರ್ಯ ಅವನನ್ನು ಬಲವಾಗಿ ಸೆಳೆದು ಬಲಹೀನನನ್ನಾಗಿಸಿತು. ಪ್ರತಿದಿನ ಮುಂಜಾನೆ ಅವಳು ರಂಗೋಲಿ ಬಿಡಿಸಲು ಬರುವುದನ್ನು ಆತ ಕಾಯುತ್ತಿದ್ದನು. ಅವಳ ಮುಖ ದರ್ಶನಕ್ಕಾಗಿ ತಪಸ್ಸು ಮಾಡುತ್ತಿದ್ದನು. ಬಣ್ಣಬಣ್ಣದ ಸೀರೆಯಿಂದ ಹೊರಬರಲು ಸದಾ ಹಂಬಲಿಸುತ್ತಿದ್ದ ಅವಳ ಮೈಮಾಟಕ್ಕೆ ಆತ ಮಾರು ಹೋಗಿದ್ದನು. 

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                ಸಂದೀಪ ಒಂದಿನ ಅವಳನ್ನು ಕದ್ದುಮುಚ್ಚಿ ನೋಡುತ್ತಿರುವಾಗ ಅವಳ ಕಣ್ಣಿಗೆ ಬಿದ್ದನು. ಅವಳು ಅವನನ್ನು ಕಂಡು ಭಾರವಾದ ನಗೆ ಬೀರಿದಳು. ಅವಳ ನಗು ಅವನ ಬತ್ತಿದ ಅವ್ಯಕ್ತ ಪ್ರೀತಿಗೆ ಹೊಸ ಮುನ್ನುಡಿ ಬರೆಯಿತು. ಅವಳೊಂದಿನ ಎಲ್ಲರ ಕಣ್ತಪ್ಪಿಸಿ ಅವನನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ತನ್ನ ಫೋನ್ ನಂಬರನ್ನು ಕೊಟ್ಟಳು. ಸಂದೀಪನಿಗೆ ಅವಳನ್ನು ಹುಡುಕಿಕೊಂಡು ಬಂದಿರುವುದಕ್ಕು ಸಾರ್ಥಕವಾಯಿತು ಎಂದೆನಿಸಿತು. ಅವರಿಬ್ಬರ ಕಣ್ಣಾಮುಚ್ಚಾಲೆ ಆಟ ಮತ್ತೆ ಪ್ರಾರಂಭವಾಯಿತು. ಆತ ಅವಳ ಸಲುಗೆಯನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಾರಂಭಿಸಿದನು. ಕಾಲೇಜಿನಲ್ಲಿರುವಾಗ ಬರೀ ಕೆನ್ನೆ ಕಚ್ಚುವ ಧೈರ್ಯ ಮಾಡುತ್ತಿದ್ದವನು ಈಗ ಅವಳ ತುಟಿಗೆ ತುಟಿ ಸೇರಿಸುವ ಸಾಹಸ ಮಾಡಿದನು. 

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                ಅವಳಿಗೆ ಆತ ಬಾಯ್ಚಿಚ್ಚಿ ಹೇಳದಿದ್ದರು ಸಂದೀಪ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂಬುದು ಗೊತ್ತಿತ್ತು. ಕಾಲೇಜಿನಲ್ಲಿರುವಾಗ ಆತ ಅತಿಯಾಗಿ ಅವಳ ಕಾಳಜಿಯನ್ನು ವಹಿಸುತ್ತಿದ್ದನು. ಅದಕ್ಕಾಗಿ ಆಕೆ ಅವನಿಗೆ ಅಷ್ಟೊಂದು ಸಲುಗೆಯನ್ನು ನೀಡಿದ್ದಳು. ಈಗಲೂ ಅಷ್ಟೇ ಅವಳು ತನ್ನನ್ನು ಪ್ರೀತಿಸುವವನಿಗೆ, ಕಾಳಜಿ ವಹಿಸುವವನಿಗೆ ಮತ್ತಷ್ಟು ಸಲುಗೆಯನ್ನು ಕೊಡಲು ಮುಂದಾಗಿದ್ದಳು. ಅವಳ ಗಂಡ ಅವಳನ್ನು ಪ್ರೀತಿಸುತ್ತಿರಲಿಲ್ಲ. ಅವಳನ್ನು ಮನೆಗೆಲಸದವಳಂತೆ ಕಾಣುತ್ತಿದ್ದನು. ಕಾಳಜಿ ವಹಿಸದ ಗಂಡನಿಗೆ ಕತ್ತಲಲ್ಲಿ ಸೆರಗು ಹಾಸಲು ಹಿಂಜರಿಯದವಳು ಕಾಳಜಿ ವಹಿಸುವ ಗುಪ್ತ ಪ್ರೇಮಿಗಾಗಿ ಮೈಯೊಪ್ಪಿಸಲು ಸದಾ ಸಿದ್ಧಳಿದ್ದಳು. ಸಮಯ ಸಿಕ್ಕಾಗಲೆಲ್ಲ ಅವಳು ಸಂದೀಪನ ರೂಮಿಗೆ ಬರುತ್ತಿದ್ದಳು. ಅವನ ಅಪರೂಪದ ಕಾಳಜಿಗೆ ಮತ್ತು ನಾಲ್ಕು ಹೊಗಳಿಕೆಯ ಮಾತುಗಳಿಗೆ ಆಕೆ ಮನಸೋತು  ತನ್ನ ಮೈಯನ್ನು ಮೆಲ್ಲನೆ ಅವನಿಗೊಪ್ಪಿಸುತ್ತಿದ್ದಳು. ಅವಳು ಅವನಿಗಾಗಿ ಪದೇಪದೇ ರುಚಿಯಾದ ತಿಂಡಿಗಳನ್ನು ಮಾಡಿಕೊಂಡು ಬರುತ್ತಿದ್ದಳು. ಅದಕ್ಕೆ ಉಡುಗೊರೆಯಾಗಿ ಆತ ಅವಳನ್ನು ನಾಲ್ಕು ಮುತ್ತುಗಳಿಂದ ಶೃಂಗರಿಸಿ ಬಿಳ್ಕೊಡುತ್ತಿದ್ದನು.

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                       ಅವಳ ಗಂಡನೆನಿಸಿಕೊಂಡವನು ಅವಳ ಕಾಳಜಿ ವಹಿಸದಿದ್ದರೂ ಸಹ ಅವಳ ಸೌಂದರ್ಯದ ಆರಾಧಕನಾಗಿದ್ದನು. ಅವಳಿಗೆ ಗಂಡ ಮತ್ತು ಗೆಳೆಯರಲ್ಲಿ ಯಾರೊಬ್ಬರನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಅದಕ್ಕಾಗಿ ಆಕೆ ಇಬ್ಬರಿಗೂ ಸಮನಾಗಿ ಸಹಕರಿಸುತ್ತಿದ್ದಳು. ಸಾಮಾಜಿಕ  ಭದ್ರತೆಗಾಗಿ ಅವಳು ಗಂಡನ ಗುಲಾಮಳಾಗಿದ್ದರೆ ಮಾನಸಿಕ ಭದ್ರತೆಗಾಗಿ ಗೆಳೆಯನ ತೋಳಿನಾಸರೆಯನ್ನು ಪಡೆದುಕೊಂಡಿದ್ದಳು. ಆದರೆ ಒಂದಿನ ಸಂದೀಪ ಯಾವುದೋ ಒಂದು ವಾರ ಪತ್ರಿಕೆ ಓದುವಾಗ ಮದುವೆಯಾದರೂ ಮಾಜಿ ಪ್ರಿಯಕರನೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಕ್ಕಾಗಿ ಕೊಲೆಯಾದ ಯುವತಿಯೊಬ್ಬಳ ಸುದ್ದಿಯನ್ನು ಓದಿದನು. ಅವನೆದೆ ಕಂಪಿಸಲು ಪ್ರಾರಂಭಿಸಿತು. ಜೊತೆಗೆ  ಅವನಿಗೆ ತನ್ನ ತಪ್ಪಿನ ಅರಿವಾಯಿತು. ನಮ್ಮಂಥ ಗುಪ್ತ ಪ್ರಿಯಕರರಿಂದಲೇ ಎಷ್ಟೋ ಹುಡುಗಿಯರ ಬಾಳು ನರಕವಾಗಿದೆ. ನನ್ನವಳ ಬಾಳು ನನ್ನಿಂದಲೇ ನರಕವಾಗುವುದು ಬೇಡವೆಂದು ನಿರ್ಧರಿಸಿ ಆತ ಅಲ್ಲಿಂದ ತನ್ನೂರಿಗೆ ಮರಳಿ ಬಂದನು. ಅವಳನ್ನು ಸಂಪೂರ್ಣವಾಗಿ ಮರೆತು ತನ್ನ ಜೀವನದ ಸಾರ್ಥಕತೆಗಾಗಿ ಶ್ರಮಿಸಲು ಮುಂದಾದನು...

ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story

                            ಈ ಕಥೆ ಎಷ್ಟೋ ಜನರ ನಿದ್ದೆಗಳನ್ನು ಕದಿಯಬಹುದು. ಅದಕ್ಕಾಗಿ ಕ್ಷಮೆ ಇರಲಿ. ಈ  ಕಥೆ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್  ಮಾಡಿ... 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story ಗುಪ್ತ ಪ್ರೇಮಿ ; ಒಂದು ಅವ್ಯಕ್ತ ಪ್ರೇಮಕಥೆ - Kannada Moral Love Story Reviewed by Director Satishkumar on September 04, 2018 Rating: 4.5
Powered by Blogger.