ಇವತ್ತು ಸಾಮಾಜಿಕ ಜಾಲತಾಣಗಳು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ನಮ್ಮ ಹೆಚ್ಚಿನ ಸಮಯ ಫೇಸ್ಬುಕ್ ಮತ್ತು ಯ್ಯುಟ್ಯೂಬಗಳಲ್ಲಿ ಕಳೆದು ಹೋಗುತ್ತದೆ. ನಾವು ಫೇಸ್ಬುಕ್ ಮತ್ತು ಯ್ಯುಟ್ಯೂಬಗಳಿಗೆ ಅಂಟಿಕೊಂಡಿದ್ದೇವೆ. ಸಾಮಾಜಿಕ ಜಾಲತಾಣಗಳನ್ನು ಬಳಸದೇ ನಮ್ಮಿಂದಿರಲು ಸಾಧ್ಯವಿಲ್ಲ. ಈ ಸಾಮಾಜಿಕ ಜಾಲತಾಣಗಳ ಮಾಲೀಕರು ಬಿಲೆನಿಯರಗಳಾಗುತ್ತಿದ್ದಾರೆ. ಆದರೆ ಅವುಗಳನ್ನು ಹುಚ್ಚರಂತೆ ಬಳಸುವ ನಮ್ಮ ಜನ ಮತ್ತಷ್ಟು ಬಡವರಾಗುತ್ತಿದ್ದಾರೆ. ಬಾರ್ ಓನರಗಳೆಲ್ಲ ಬಿಲಗೇಟ್ಸ ಆದರೂ ಬುದ್ಧಿ ಕಲಿಯದ ನಮ್ಮ ಜನ, ಇನ್ನೂ ಯಾರು ಬಿಲೆನಿಯರ ಆದರೆ ನಮಗೇನಂತೆ ಎನ್ನುತ್ತಾ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅದೇನೆ ಇರಲಿ ಈಗ ಈ ಯ್ಯುಟ್ಯೂಬ (YouTube) ಜನಿಸಿದ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ...
ಪೇ-ಪಾಲ (Pay-Pal) ಕಂಪನಿಯನ್ನು ಈ-ಬೇ (e-Bay) ಕಂಪನಿ ಖರೀದಿಸಿದ ನಂತರ ಸ್ಟಿವ್ ಚೇನ್ (Steve Chen), ಚಾಡ್ ಹರ್ಲಿ (Chad Hurley) ಮತ್ತು ಜಾವೆದ ಕರಿಮ (Jawed Karim) ಎಂಬ ಮೂವರು ನವ ತರುಣರು ತಮ್ಮ ಕೆಲಸವನ್ನು ಕಳೆದುಕೊಂಡರು. ಮೂವರಿಗೂ ಕೆಲಸವನ್ನು ಕಳೆದುಕೊಂಡಿದ್ದಕ್ಕೆ ಸ್ವಲ್ಪ ಬೇಜಾರಿತ್ತು. ಈ ಬೇಜಾರಿನ ಮಧ್ಯೆಯೇ ಸ್ಟೀವ್ ಚೆನನ ಬರ್ಥಡೇ ಪಾರ್ಟಿ ಸಂತೋಷದಿಂದ ಸಾಗಿತು. ಆದರೆ ಜೀವದ ಗೆಳೆಯ ಜಾವೆದ ಕರಿಮನಿಗೆ ಅವನ ಬರ್ಥಡೇ ಪಾರ್ಟಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಸ್ಟೀವ್ ತನ್ನ ಗೆಳೆಯ ಜಾವೆದ್ ಕರಿಮನಿಗೆ ತನ್ನ ಬರ್ಥ್ ಡೇ ಪಾರ್ಟಿಯ ವಿಡಿಯೋವನ್ನು ಈ-ಮೇಲ್ (E-Mail) ಮೂಲಕ ಕಳುಹಿಸಲು ಪ್ರಯತ್ನಿಸಿದನು. ಆದರೆ ಕಳುಹಿಸಲು ಸಾಧ್ಯವಾಗಲಿಲ್ಲ. ಆವಾಗಿನ ಸಮಯದಲ್ಲಿ ಈಗಿನಂತೆ ವಿಡಿಯೋ ಶೇರ್ ಮಾಡಲು ಸೂಕ್ತ ಸಾಧನಗಳಿರಲಿಲ್ಲ. ವಿಡಿಯೋ ಕಳುಹಿಸಲು ಸಾಧ್ಯವಾಗದೆ ಸ್ಟೀವ್ ಬೇಜಾರುಪಟ್ಟುಕೊಂಡು ಸುಮ್ಮನಾದನು. ಆದರೆ ಜಾವೆದ್ ಕರಿಮ ಸುಮ್ಮನಾಗಲಿಲ್ಲ. ಜಾವೆದನಿಗೆ ಗೆಳೆಯನ ಬರ್ಥಡೇ ಪಾರ್ಟಿಯನ್ನು ಮಿಸ್ ಮಾಡಿಕೊಂಡೆನಲ್ಲ ಎಂಬ ಕೊರಗಿಗಿಂತ ವಿಡಿಯೋಗಳನ್ನು ಶೇರ್ ಮಾಡಲು ಸಮರ್ಪಕ ಸಾಧನಗಳಿಲ್ಲವಲ್ಲ ಎಂಬ ಕೊರಗೇ ಹೆಚ್ಚಾಗಿತ್ತು. ಅವನ ಈ ಕೊರಗು ಯ್ಯುಟ್ಯೂಬನ ಜನನಕ್ಕೆ ಬುನಾದಿ ಹಾಕಿತು.
ಜಾವೆದ ಕರಿಮ ವಿಡಿಯೋ ಶೇರಿಂಗಗಾಗಿ ಸಮರ್ಪಕವಾದ ಸಾಧನವನ್ನು ಸೃಷ್ಟಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದನು. ಅದೇ ಸಮಯದಲ್ಲಿ ಹೊರ ಜಗತ್ತಿನಲ್ಲಿ ಒಂದು ದೊಡ್ಡ ರಾದ್ಧಾಂತ ನಡೆದು ಹೋಗಿತ್ತು. 2004ರಲ್ಲಿ ಜಸ್ಟಿನ್ ಟಿಂಬರಲೇಕ್ (Justin Timberlake) ಎಂಬ ಕಲಾವಿದ ರಾತ್ರಿ ಒಂದು ಲೈವ್ ಮ್ಯುಸಿಕ್ ಶೋವನ್ನು ನಡೆಸಿ ಕೊಡುವಾಗ ಹಾಡು ಮತ್ತು ಸಂಗೀತದ ಮತ್ತಲ್ಲಿ ತನ್ನ ಸಹ ಕಲಾವಿದೆ ಜಾನೆಟ್ ಜಾಕ್ಸನಳ (Janet Jackson) ಎದೆಭಾಗದ ಬಟ್ಟೆಯನ್ನು ಎಳೆದಿದ್ದನು. ಅಚಾನಕ್ಕಾಗಿ ನಡೆದ ಈ ಘಟನೆಯಲ್ಲಿ ಅವಳ ಬಟ್ಟೆ ಹರಿದು ಅವಳ ಸ್ತನಗಳು ಸಾವಿರಾರು ಪ್ರೇಕ್ಷಕರ ಕಣ್ಣೆದುರಿಗೆ ನಗ್ನವಾಗಿ ಪ್ರದರ್ಶನಗೊಂಡವು. ಕೂಡಲೇ ಜನೆಟ್ ಜಾಕ್ಸನ್ ತನ್ನ ಸ್ತನಗಳನ್ನು ತನ್ನ ಕೈಗಳಿಂದ ಮುಚ್ಚಿಕೊಂಡು ವೇದಿಕೆಯಿಂದ ತೆರಳಿದಳು. ಸ್ವಲ್ಪವೂ ನಾಚಿಕೆ, ಮಾನ, ಮರ್ಯಾದೆಯಿಲ್ಲದ ಟಿವಿ ಚಾನೆಲಗಳು T.R.P.ಗೋಸ್ಕರ ಈ ರಾದ್ಧಾಂತವನ್ನು ಪದೇಪದೇ ತೋರಿಸಿ ಇದನ್ನು ಒಂದು ದೊಡ್ಡ ವಿವಾದವನ್ನಾಗಿಸಿದವು. ಈ ಸುದ್ದಿ ಜಗತ್ತನ್ನು ತಲ್ಲಣಗೊಳಿಸಿತು. ಈ ವಿವಾದ ಮತ್ತಷ್ಟು ವೈರಲ ಆದಾಗ ಜನೆಟ್ ಜಾಕ್ಸನಳ ಈ ವಿಡಿಯೋವನ್ನು ಎಲ್ಲ ಟಿವಿ ಚಾನೆಲಗಳಲ್ಲಿ ಬ್ಯಾನ್ ಮಾಡಲಾಯಿತು.
ಜಾವೆದ ಕರಿಮನಿಗೆ ವೈರಲ್ ಆದ ಜನೆಟ್ ಜಾಕ್ಸನಳ ವಿಡಿಯೋವನ್ನು ಒಂದ್ಸಾರಿ ನೋಡುವ ಹಂಬಲ ಶುರುವಾಯಿತು. ಆದರೆ ಆ ವಿಡಿಯೋವನ್ನು ಎಲ್ಲ ಟಿವಿ ಚಾನೆಲಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಆತ ಎಲ್ಲೆಡೆಗೆ ಆ ವಿಡಿಯೋವನ್ನು ಹುಡುಕಾಡಿದನು. ಆದರೆ ಅವನಿಗೆ ಎಲ್ಲಿಯೂ ಆ ವಿಡಿಯೋ ಸಿಗಲಿಲ್ಲ. ಏನಾದರೂ ಅವಳ ವಿಡಿಯೋವನ್ನು ನೋಡಲೇಬೇಕೆಂಬ ನೀಲಿ ಆಸೆ ಅವನ ನಿದ್ದೆಗೆಡಿಸಿತು. ಎಷ್ಟೋ ಜನರಿಗೆ ವಿಡಿಯೋಗಳನ್ನು ಶೇರ್ ಮಾಡಲು ಯಾವುದೇ ಸಮರ್ಪಕ ಸಾಧನಗಳಿಲ್ಲ ಎಂಬುದು ಅವನಿಗೆ ಅರಿವಾಯಿತು. ಅದಕ್ಕಾಗಿ ಆತ ವಿಡಿಯೋ ಶೇರಿಂಗ್ ಅಪ್ಲಿಕೇಶನನ್ನು ರೂಪಿಸಲು ಪಣತೊಟ್ಟನು. ಅವನ ಈ ಹೊಸ ಪ್ರಯತ್ನಕ್ಕೆ ಅವನ ಗೆಳೆಯರಾದ ಸ್ಟೀವ್ ಚೆನ್ ಮತ್ತು ಚಾಡ್ ಹಾರ್ಲಿ ಕೈಜೋಡಿಸಿದರು.
ಮಾರ್ಕ ಜುಗರಬರ್ಗರ (Mark Zuckerberg) ಹಾಟ್/ನಾಟ್ (Hot/Not) ವೆಬಸೈಟನಿಂದ ಪ್ರಭಾವಿತರಾಗಿ ಚಾಡ್ ಹಾರ್ಲಿ, ಸ್ಟೀವ್ ಚೆನ್ ಮತ್ತು ಜಾವೆದ್ ಕರಿಮ ಒಂದು ಆನಲೈನ್ ಡೇಟಿಂಗ್ ಸೈಟನ್ನು ಸೃಷ್ಟಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಈಗ ಆ ವಿಫಲ ಪ್ರಯತ್ನವನ್ನೇ ವಿಡಿಯೋ ಶೇರಿಂಗ ಸಾಧನವನ್ನಾಗಿಸುವಲ್ಲಿ ಆ ಮೂವರು ಸತತ ಪರಿಶ್ರಮ ಪಟ್ಟರು. ಅವರ ಪರಿಶ್ರಮದ ಫಲವಾಗಿ 2005ರ ಫೆಬ್ರುವರಿ 14ರಂದು ಯ್ಯುಟ್ಯೂಬ ಜನ್ಮತಾಳಿತು. ಆರಂಭದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿ ಯಶಸ್ವಿನ ದಾರಿಯಲ್ಲಿ ಸಾಗುವಾಗ ಯ್ಯುಟ್ಯೂಬ ಗೂಗಲ್ ಕಂಪನಿಯ ಸ್ವಾಧೀನಕ್ಕೆ ಒಳಪಟ್ಟಿತು. ಈಗ ಯ್ಯುಟ್ಯೂಬ ಜಗತ್ತಿನ ಅತಿದೊಡ್ಡ ವಿಡಿಯೋ ಸ್ಟ್ರಿಮಿಂಗ್ ಫ್ಲ್ಯಾಟಫಾರ್ಮ (Video Streaming Platform) ಆಗಿದೆ. ಜೊತೆಗೆ ಗೂಗಲ್ (Google) ನಂತರ ಎರಡನೇ ಅತಿದೊಡ್ಡ ಸರ್ಚ ಇಂಜಿನನಾಗಿದೆ. ಇದೀಷ್ಟು ಯ್ಯುಟ್ಯೂಬ (YouTube) ಹಿಂದಿರುವ ರೋಚಕ ಕಥೆ...
ಸ್ನೇಹಿತರೇ, ನಮ್ಮ ಕಳ್ಳ ಆಸೆಗಳು ಸಹ ನಮ್ಮಿಂದ ಒಂದೊಳ್ಳೆ ಸಾಧನೆಯನ್ನು ಮಾಡಿಸುತ್ತವೆ ಎಂಬುದಕ್ಕೆ ಯ್ಯುಟ್ಯೂಬನ ಸಂಶೋಧಕರಲ್ಲಿ ಒಬ್ಬರಾದ ಜಾವೆದ ಕರಿಮರೇ ಸಾಕ್ಷಿ. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ. ಜೊತೆಗೆ ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ಲೈಕ್ ಮತ್ತು ಶೇರ್ ಮಾಡಿ...
ಕನ್ನಡ ಕಥೆ ಪುಸ್ತಕಗಳು - Kannada Story Books
ಕನ್ನಡ ಕಥೆ ಪುಸ್ತಕಗಳು - Kannada Story Books