ದೇವಲೋಕದಲ್ಲಿ ತಾನೇ ಬಹು ಸುಂದರಿ ಎಂಬ ಅಹಂ ಊರ್ವಶಿಯ ತಲೆ ಸೇರಿತ್ತು. ಅವಳ ಸೊಕ್ಕನ್ನು ಅಡಗಿಸುವುದಕ್ಕಾಗಿ ಬ್ರಹ್ಮ ಓರ್ವ ಅಪರೂಪದ ಸುಂದರಿಯನ್ನು ಸೃಷ್ಟಿಸಲು ಮುಂದಾದನು. ಬ್ರಹ್ಮ ಬಹಳಷ್ಟು ತಲೆ ಉಪಯೋಗಿಸಿ ನೀರಿನಿಂದ ಓರ್ವ ಸುಂದರಿಯನ್ನು ಸೃಷ್ಟಿಸಿದನು. ಜಗತ್ತಿನಲ್ಲಿರುವ ಎಲ್ಲ ಸುಂದರ ವಸ್ತುಗಳ ಸೌಂದರ್ಯವನ್ನು ಹೊಸೆದು ಆ ಸುಂದರಿಯ ದೇಹದ ಪ್ರತಿಯೊಂದು ಅಂಗ ಅಂಗಗಳಲ್ಲಿ ಸೇರಿಸಿದನು. ಅವಳಲ್ಲಿ ಕುರೂಪತನದ ಒಂದು ಕಳೆಯೂ ಇರಲಿಲ್ಲ. ಅದಕ್ಕಾಗಿ ಅವಳಿಗೆ ಅಹಲ್ಯ ಎಂದು ಹೆಸರಿಟ್ಟನು. ಅಹಲ್ಯ ನಿಜಕ್ಕೂ ಮನಮೋಹಕ ಸುಂದರಿಯಾಗಿದ್ದಳು. ಅದಕ್ಕಾಗಿ ಬ್ರಹ್ಮ ಅವಳು ತಾರುಣ್ಯ ತಲುಪುವವರೆಗೆ ಅವಳನ್ನು ಗೌತಮ ಮಹರ್ಷಿಯ ಆಶ್ರಮಲ್ಲಿರಿಸಿದನು.
ಅಹಲ್ಯ ಗೌತಮ ಮಹರ್ಷಿಯ ಸುಂದರವಾದ ಆಶ್ರಮದಲ್ಲಿ ಹಾಡಿ ನಲಿಯುತ್ತಾ ತಾರುಣ್ಯ ತಲುಪಿದಳು. ಅವಳು ಋತುಮತಿಯಾದಾಗ ಗೌತಮ ಮಹರ್ಷಿ ಅವಳನ್ನು ಬ್ರಹ್ಮನ ವಶಕ್ಕೊಪ್ಪಿಸಿ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದನು. ಗೌತಮನ ನಿಯತ್ತಿಗೆ ಬ್ರಹ್ಮ ಮನಸೋತನು. ಅಹಲ್ಯಳಂಥ ಸುಂದರಿಯನ್ನು ಸಂರಕ್ಷಿಸಿ ಸುರಕ್ಷಿತವಾಗಿ ತನ್ನ ಬಳಿ ಮರಳಿ ಕರತಂದಿದ್ದಕ್ಕೆ ಬ್ರಹ್ಮ ಗೌತಮ ಮಹರ್ಷಿಯನ್ನು ಹಾಡಿ ಹೊಗಳಿದನು. ಅವನ ಪ್ರಾಮಾಣಿಕತೆಯನ್ನು ಮೆಚ್ಚಿ ಅಹಲ್ಯಳನ್ನು ಅವನಿಗೆ ಕಾಣಿಕೆಯಾಗಿ ನೀಡಿದನು. ಆದರೆ ಬ್ರಹ್ಮನ ಈ ನಿರ್ಧಾರಕ್ಕೆ ದೇವತೆಗಳ ರಾಜ ದೇವೇಂದ್ರ ಸಮ್ಮತಿಸಲಿಲ್ಲ. ಜಗತ್ತಿನಲ್ಲಿರುವ ಪ್ರತಿಯೊರ್ವ ಸುಂದರ ಹೆಣ್ಣು ಬರೀ ನನ್ನ ಸೊತ್ತು ಎಂಬುದು ದೇವೇಂದ್ರನ ವಾದವಾಗಿತ್ತು. ಅವನ ಮೊಂಡುವಾದದಿಂದಾಗಿ ಬ್ರಹ್ಮ ಅಹಲ್ಯಳ ಸ್ವಯಂವರವನ್ನು ಏರ್ಪಡಿಸಿದನು.
ದೇವಲೋಕದ ಸುರ ಅಸುರರು ಅಹಲ್ಯಳಿಗಾಗಿ ಪರಿತಪಿಸುತ್ತಿದ್ದರು. ಏಕೆಂದರೆ ಅವಳು ಸುರಸುಂದರಿಯರಿಗಿಂತಲೂ ಸುಂದರವಾಗಿದ್ದಳು. ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಹಗಲು ರಾತ್ರಿ ಹಂಬಲಿಸುತ್ತಿದ್ದನು. ಅವಳನ್ನು ಮನಸೋಯಿಚ್ಛೆ ಅನುಭವಿಸಲು ಪ್ರತಿಕ್ಷಣ ಚಟಪಡಿಸುತ್ತಿದ್ದನು. ದೇವೇಂದ್ರನ ಸಮೇತ ಎಲ್ಲರ ಕಣ್ಣುಗಳು ಅಹಲ್ಯಳ ಮೇಲಿದ್ದವು. ಒಂದಿನ ಬ್ರಹ್ಮ ಅವಳ ಸ್ವಯಂವರವನ್ನು ಏರ್ಪಡಿಸಿದನು. ಯಾರು ಮೊದಲು ಮೂರು ಲೋಕಗಳನ್ನು ಪ್ರದಕ್ಷಿಣೆ ಹಾಕಿ ಮರಳಿ ಬರುವರೋ ಅಹಲ್ಯ ಅವರ ಸ್ವತ್ತಾಗುತ್ತಾಳೆಂದು ಘೋಷಿಸಿದನು. ಇಂದ್ರ ತ್ರಿಲೋಕ ಪ್ರದಕ್ಷಿಣೆಗೆ ಹೊರಟು ಹೋದ ನಂತರ ಗೌತಮ ಮಹರ್ಷಿಯು ಕರುವಿಗೆ ಜನ್ಮ ನೀಡುತ್ತಿದ್ದ ಕಾಮಧೇನುವಿಗೆ ಪ್ರದಕ್ಷಿಣೆ ಹಾಕಿ ಸ್ವಯಂವರದಲ್ಲಿ ಗೆದ್ದು ಅಹಲ್ಯಯನ್ನು ವರಿಸಿದನು. ಏಕೆಂದರೆ ವೇದಗಳ ಪ್ರಕಾರ ಕಾಮಧೇನು ಮೂರು ಲೋಕಗಳಿಗೆ ಸಮವಾಗಿತ್ತು.
ಅಹಲ್ಯ ಗೌತಮನ ಕೈಹಿಡಿದು ಮಿಥಿಲೆಯಲ್ಲಿರುವ ಅವನಾಶ್ರಮಕ್ಕೆ ಬಂದಳು. ಗೋದಾವರಿ ನದಿ ತಟದಲ್ಲಿದ್ದ ಆ ಆಶ್ರಮ ಅಹಲ್ಯಳ ಪಾದಸ್ಪರ್ಶದಿಂದ ಪಾವನವಾಯಿತು. ಅಹಲ್ಯಳಂಥ ಸುಂದರಿ ಗೌತಮನ ಸತಿಯಾಗಿ ಬಂದಿದ್ದರಿಂದ ಆಶ್ರಮದ ಸೌಂದರ್ಯ ಮತ್ತಷ್ಟು ಹೆಚ್ಚಾಯಿತು. ತನಗಿಂತಲೂ ವಯಸ್ಸಿನಲ್ಲಿ ಎಷ್ಟೋ ವರ್ಷ ಹಿರಿಯನಾಗಿರುವ ಗೌತಮನನ್ನು ಅಹಲ್ಯ ಮನಸ್ಸಪೂರ್ವಕವಾಗಿ ಒಪ್ಪಿಕೊಂಡು ತನ್ನನ್ನು ಸಂಪೂರ್ಣವಾಗಿ ಅವನಿಗೆ ಸಮರ್ಪಿಸಿಕೊಂಡಳು. ಸ್ವಚ್ಛ ಮನಸ್ಸಿನಿಂದ ತನ್ನ ಸತಿಧರ್ಮವನ್ನು ನಿಭಾಯಿಸಿ ಪಂಚ ಪತಿವ್ರತೆಯರಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದಳು. ಆಕೆ ಕಾಯಾ ವಾಚಾ ಮನಸಾ ತನ್ನ ಪತಿಯನ್ನು ಆದರಿಸುತ್ತಿದ್ದಳು. ಆದರೆ ದೇವೇಂದ್ರನ ವಕ್ರದೃಷ್ಟಿ ಇನ್ನು ಅವಳ ಮೇಲೆಯೇ ನೆಟ್ಟಿತ್ತು. ಏನಾದರೂ ಅಹಲ್ಯಳನ್ನು ಒಂದು ಸಲ ಅನುಭವಿಸಲೇಬೇಕು ಎಂಬ ಹಠದಲ್ಲಿ ಅವನಿದ್ದನು.
ದೇವೇಂದ್ರನಲ್ಲಿ ಕಪಟತನಕ್ಕೇನು ಕೊರತೆಯಿರಲಿಲ್ಲ. ಆತ ಗೌತಮನ ದಿನಚರಿಯನ್ನು ಅಧ್ಯಯನ ಮಾಡಿ ಗೌತಮ ದಿನನಿತ್ಯ ಮುಂಜಾನೆ ಸುರ್ಯೋದಯಕ್ಕಿಂತ ಮುಂಚೆ ಸಂಧ್ಯಾವಂದನೆಗಾಗಿ ನದಿಗೆ ತೆರಳುತ್ತಾನೆ, ಆ ಸಮಯದಲ್ಲಿ ಆಶ್ರಮದಲ್ಲಿ ಅಹಲ್ಯ ಒಬ್ಬಳೇ ಇರುತ್ತಾಳೆ ಎಂಬುದನ್ನು ಕಂಡುಕೊಂಡನು. ತನ್ನ ಕಪಟ ಯೋಜನೆಯಂತೆ ದೇವೇಂದ್ರ ಮಧ್ಯರಾತ್ರಿ ಕೋಳಿಯನ್ನು ಕೂಗಿಸಿ ಗೌತಮನನ್ನು ನದಿಯೆಡೆಗೆ ಹೋಗುವಂತೆ ಮಾಡಿದನು. ನಂತರ ಚಂದ್ರನಿಗೆ ಮುಂಜಾನೆಯ ತನಕ ಮರೆಯಲ್ಲಿರಲು ಕೇಳಿಕೊಂಡು ಆಶ್ರಮಕ್ಕೆ ಕಾಲಿಟ್ಟನು. ಆಶ್ರಮದಲ್ಲಿ ಗೌತಮನಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ತನ್ನ ಮಾಯಾಶಕ್ತಿಯನ್ನು ಬಳಸಿಕೊಂಡು ಗೌತಮನ ಮಾರುವೇಷ ಧರಿಸಿ ಅಹಲ್ಯಳ ಕೋಣೆ ಸೇರಿದನು.
ಸ್ವತಃ ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಸ್ವರ್ಗದಿಂದ ಧರೆಗಿಳಿದು ಬಂದಿದ್ದಕ್ಕೆ ಅವಳು ತನ್ನ ಮೇಲೆ ಅಭಿಮಾನಪಟ್ಟಳು. ದೇವೇಂದ್ರನ ಕಾಮದ ಕಳ್ಳ ಕೋರಿಕೆಯನ್ನು ಧಿಕ್ಕರಿಸುವ ಧೈರ್ಯ ಅಹಲ್ಯಳಲ್ಲಿರಲಿಲ್ಲ. ಅಲ್ಲದೆ ದೇವೇಂದ್ರ ದೇವತೆಗಳ ರಾಜನಾಗಿರುವುದರಿಂದ ಆತ ಗೌತಮನ ಕೋಪದಿಂದ ತನ್ನನ್ನು ಕಾಪಾಡಬಲ್ಲನು ಎಂಬ ಮೊಂಡು ಧೈರ್ಯದ ಮೇಲೆ ಅಹಲ್ಯ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. ಆತ ಮಧ್ಯರಾತ್ರಿಯಿಂದ ಮುಂಜಾನೆ ತನಕ ಅವಳನ್ನು ಮನಬಂದಂತೆ ಅನುಭವಿಸಿ ತನ್ನಾಸೆಯನ್ನು ತೀರಿಸಿಕೊಂಡನು. ಅವಳ ಪ್ರತಿ ಅಂಗಾಂಗಗಳಲ್ಲಿ ಸೌಂದರ್ಯ ಅಡಗಿತ್ತು. ಅವಳು ಪ್ರತಿ ಅಂಗದಿಂದಲೂ ಪರಮ ಸುಂದರಿಯಾಗಿದ್ದಳು. ಅವಳನ್ನು ಸಂತೃಪ್ತನಾಗುವ ತನಕ ಅನುಭವಿಸಿದ ದೇವೇಂದ್ರ ಮುಂಜಾನೆ ಅವಳನ್ನು ಹಾಗೆಯೇ ಬಿಟ್ಟು ಹೊರಡಲು ಸಿದ್ಧನಾದನು.
ಅಹಲ್ಯಳ ಸನ್ನೆಯ ಮೇರೆಗೆ ದೇವೇಂದ್ರ ಅವಸರದಿಂದ ಆಶ್ರಮದಿಂದ ಫರಾರಿಯಾಗುವಾಗ ಗೌತಮ ಮಹರ್ಷಿಯ ಕಣ್ಣಿಗೆ ಬಿದ್ದನು. ತನ್ನ ತಪಸ್ಸಶಕ್ತಿಯಿಂದ ಗೌತಮನಿಗೆ ಎಲ್ಲವೂ ಅರ್ಥವಾಯಿತು. ಆತ ಕೆರಳಿ ಕೆಂಡಾಮಂಡಲವಾದನು. ಅವನ ಕೂಗಾಟವನ್ನು ಕೇಳಿ ಅಹಲ್ಯ ಹೆದರುತ್ತಾ ಓಡೋಡಿ ಬಂದು ಅವನ ಕಾಲಿಗೆ ಬಿದ್ದು ಗೋಳಾಡಿ ಕ್ಷಮೆ ಕೇಳಿದಳು. ಆದರೆ ಗೌತಮನ ಕೋಪ ಅವಳ ಮೊಸಳೆ ಕಣ್ಣೀರಿಗೆ ಕರಗಲಿಲ್ಲ. ಅವನು ಅವಳಿಗೆ ಕಲ್ಲಾಗಿರುವಂತೆ ಶಾಪವಿಟ್ಟನು.
ಗೌತಮನ ಕೋಪಕ್ಕೆ ಹೆದರಿ ದೇವೇಂದ್ರ ಮರದ ಹಿಂದೆ ಅಡಗಿ ನಿಂತಿದ್ದನು. ಅವನಿಗೂ ಸಹ ಗೌತಮ ಮಹರ್ಷಿ ಶಾಪವಿಟ್ಟು ಹಿಮಾಲಯಕ್ಕೆ ತೆರಳಿದನು. ಗೌತಮನ ಶಾಪದಿಂದ ದೇವೇಂದ್ರನ ಜನನಾಂಗಗಳು ಒಡೆದು ಸಾವಿರ ತುಂಡುಗಳಾದವು. ಅವನ ಮೈಮೇಲೆ ಸಾವಿರ ಜನನಾಂಗಗಳಾದವು. ನಂತರ ಆತ ಶಿವನ ಅನುಗ್ರಹದಿಂದ ಮೈಮೇಲಿದ್ದ ಸಾವಿರ ಜನನಾಂಗಗಳನ್ನು ಸಾವಿರ ಕಣ್ಣುಗಳಾಗಿ ಪರಿವರ್ತಿಸಿಕೊಂಡು ಶಾಪಮುಕ್ತನಾದನು. ಆದರೆ ಅಹಲ್ಯ ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮೋಡದ ಮರೆಯಲ್ಲಿರುವ ಸೂರ್ಯನಂತೆ, ಕಲೆಗಳಲ್ಲಿ ಮುಚ್ಚಿದ ಚಂದ್ರನ ಬೆಳದಿಂಗಳಂತೆ, ಹೊಗೆಯಲ್ಲಿ ಮರೆಯಾಗಿರುವ ಬೆಂಕಿಯಂತೆ ಅವಳು ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮುಂದೆ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ಪವಿತ್ರ ಪಾದ ಸ್ಪರ್ಶದಿಂದ ಅಹಲ್ಯ ಶಾಪಮುಕ್ತಳಾಗಿ ಸ್ವರ್ಗ ಸೇರಿದಳು. ಈ ರೀತಿ ಅಹಲ್ಯಳ ಅಮಾಯಕತೆ ಎಲ್ಲರಿಗೂ ಒಂದು ನೀತಿಪಾಠವಾಗಿದೆ. ಈ ಕಥೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...
ಗೌತಮನ ಕೋಪಕ್ಕೆ ಹೆದರಿ ದೇವೇಂದ್ರ ಮರದ ಹಿಂದೆ ಅಡಗಿ ನಿಂತಿದ್ದನು. ಅವನಿಗೂ ಸಹ ಗೌತಮ ಮಹರ್ಷಿ ಶಾಪವಿಟ್ಟು ಹಿಮಾಲಯಕ್ಕೆ ತೆರಳಿದನು. ಗೌತಮನ ಶಾಪದಿಂದ ದೇವೇಂದ್ರನ ಜನನಾಂಗಗಳು ಒಡೆದು ಸಾವಿರ ತುಂಡುಗಳಾದವು. ಅವನ ಮೈಮೇಲೆ ಸಾವಿರ ಜನನಾಂಗಗಳಾದವು. ನಂತರ ಆತ ಶಿವನ ಅನುಗ್ರಹದಿಂದ ಮೈಮೇಲಿದ್ದ ಸಾವಿರ ಜನನಾಂಗಗಳನ್ನು ಸಾವಿರ ಕಣ್ಣುಗಳಾಗಿ ಪರಿವರ್ತಿಸಿಕೊಂಡು ಶಾಪಮುಕ್ತನಾದನು. ಆದರೆ ಅಹಲ್ಯ ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮೋಡದ ಮರೆಯಲ್ಲಿರುವ ಸೂರ್ಯನಂತೆ, ಕಲೆಗಳಲ್ಲಿ ಮುಚ್ಚಿದ ಚಂದ್ರನ ಬೆಳದಿಂಗಳಂತೆ, ಹೊಗೆಯಲ್ಲಿ ಮರೆಯಾಗಿರುವ ಬೆಂಕಿಯಂತೆ ಅವಳು ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮುಂದೆ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ಪವಿತ್ರ ಪಾದ ಸ್ಪರ್ಶದಿಂದ ಅಹಲ್ಯ ಶಾಪಮುಕ್ತಳಾಗಿ ಸ್ವರ್ಗ ಸೇರಿದಳು. ಈ ರೀತಿ ಅಹಲ್ಯಳ ಅಮಾಯಕತೆ ಎಲ್ಲರಿಗೂ ಒಂದು ನೀತಿಪಾಠವಾಗಿದೆ. ಈ ಕಥೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...
Note : Story Source - Internet