೧) ಹುಚ್ಚರಂತೆ ಗೆಳತಿಯರನ್ನು (Girls) ಹಿಂಬಾಲಿಸುವುದರ ಬದಲು ನಿಮ್ಮ ಗುರಿಗಳನ್ನು (Goals) ಹಿಂಬಾಲಿಸಿ...
೨) ಓದುವ ವಯಸ್ಸಿನಲ್ಲಿ "ಪ್ರೀತಿ-ಗೀತಿ-ಪ್ರೇಮ-ಕಾಮ"ಗಳ ಅವಶ್ಯಕತೆಯಿಲ್ಲ. ಓದುವ ವಯಸ್ಸಿನಲ್ಲಿ ಏಕಾಗ್ರತೆಯಿಂದ ಓದಿದರೆ ಒಳ್ಳೆಯದು...
೩) ನೋವಿನಲ್ಲಿಯೂ ನಗುವವರನ್ನು ನೋಡಿ ನಾವು ನಮ್ಮ ನೋವುಗಳನ್ನು ಮರೆತು ನಗುವುದನ್ನು ಕಲಿಯಬೇಕು. ಎಲ್ಲ ಸಮಸ್ಯೆಗಳನ್ನು ನಗುವಿನಿಂದ ಗೆಲ್ಲಬಹುದು ಇಲ್ಲವೇ ಕೊಲ್ಲಬಹುದು...
೪) ಯಾವುದೇ ಕಾರಣಕ್ಕೂ ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ. ನೀವು ಅನುಪಯುಕ್ತವಲ್ಲ, ನಿಮ್ಮಿಂದ ಎಲ್ಲವೂ ಸಾಧ್ಯವಿದೆ ಎಂಬುದನ್ನು ಮರೆಯದಿರಿ.
೫) ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಪ್ರೇಮ-ಕಾಮಗಳನ್ನು ಪ್ರದರ್ಶಿಸುವ ಅವಶ್ಯಕತೆಯಿಲ್ಲ. ಸರಸದಿಂದ ಸಾವನ್ನು ಆಮಂತ್ರಿಸುವ ಸಾಹಸ ಬೇಕಿಲ್ಲ...
೬) ಎಲ್ಲೋ ಇರುವ ಫೇಸ್ಬುಕ್ ಗೆಳೆಯರಿಗಿಂತ ಪಕ್ಕದಲ್ಲೇ ಇರುವ ಲೈಫಬುಕ್ ಗೆಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ...
೭) ರಾತ್ರಿ ನಿಮಗೆ "ಬಾಯ್ (Bye) ಹೇಳಿ ಬೇರೆಯರೊಂದಿಗೆ ಮಧ್ಯರಾತ್ರಿಯವರೆಗೆ ಚಾಟ್ ಮಾಡುವವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಅವರನ್ನು ಮರೆತುಬಿಡಿ. ಸಿಗದವಳ ಮೆಸೇಜಗೆ ಕಾಯುವ ಬದಲು ನಿಮಗಾಗಿ ಕಾಯುವವರಿಗೆ ಬೆಲೆ ಕೊಡಿ...