ಒಂದು ಕಾಲದಲ್ಲಿ - ಒಂದು ವಿರಹ ಕಾವ್ಯ - Kannada Sad Love Poem - Kannada Sad Love Kavanagalu - Viraha Kavya
ಒಂದು ಕಾಲದಲ್ಲಿ ನಾ ಹುಚ್ಚನಂತೆ ನಿನ್ನ ಹಿಂದೆ ಸುತ್ತುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನ ಹುಚ್ಚನಂತೆ ಪ್ರೀತಿಸುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನೊಡನೆ ಮಾತನಾಡಲು ಹುಚ್ಚನಂತೆ ಕಾಯುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನ ಮುಗುಳ್ನಗೆಯನ್ನು ನೋಡಲು ಹುಚ್ಚನಂತೆ ಕಾತರಿಸುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನ್ನ ಪೋನ ಕರೆಗೆ, ಮುದ್ದಾದ ಮೆಸೇಜಗಳಿಗೆ ರಾತ್ರಿಯೆಲ್ಲ ಗೂಬೆಯಂತೆ ಕಾಯುತ್ತಿದ್ದೆ...
ಒಂದು ಕಾಲದಲ್ಲಿ ನಾನು ನಿನ್ನನ್ನು ಊರ ತುಂಬ ಸುತ್ತಾಡಿಸಲು ಬಾಡಿಗೆ ಬೈಕನ್ನು ಸಾಲ ಮಾಡಿ ತರುತ್ತಿದ್ದೆ...
ಒಂದು ಕಾಲದಲ್ಲಿ ನಾ ನಿನಗೆ ಚೂಡಿದಾರವನ್ನು ಕೊಡಿಸಲು ನನ್ನ ಬೆಳ್ಳಿ ಉಡದಾರವನ್ನು ಮಾರಿಕೊಂಡಿದ್ದೆ...
ಒಂದು ಕಾಲದಲ್ಲಿ ನಾ ನಿನಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೆ...
ಒಂದು ಕಾಲದಲ್ಲಿ ನಾ ನೀನಿಲ್ಲದೆ ಬದುಕಲಾರೆನು ಎಂದುಕೊಂಡಿದ್ದೆ...
ಒಂದು ಕಾಲದಲ್ಲಿ ನಾನು ನಿದ್ರೆಯಲ್ಲಿಯೂ ನಿದ್ರೆ ಬಾರದೆ ನಿನ್ನ ಹೆಸರನ್ನೇ ಕನವರಿಸುತ್ತಿದ್ದೆ...
ಒಂದು ಕಾಲದಲ್ಲಿ ನಾ, ಪ್ರೀತಿಸಿ ಮೋಸ ಮಾಡಿ ಹೋದ ನೀ ಮರಳಿ ಬರುವೆ ಎಂದು ನಿದ್ದೆಗೆಟ್ಟು ಕಾಯುತ್ತಿದ್ದೆ...
ಒಂದು ಕಾಲದಲ್ಲಿ ನಾ, ನೀ ಮರಳಿ ಬರಲ್ಲ ಎಂಬುದು ಗೊತ್ತಾದಾಗ ಆತ್ಮಹತ್ಯೆ ಮಾಡಿಕೊಂಡು ಸಾಯಲು ಮುಂದಾಗಿದ್ದೆ...
ಒಂದು ಕಾಲದಲ್ಲಿ ನಾ ನಿನ್ನನ್ನು ಅಪರಿಚಿತ ಊರಲ್ಲಿ ಬೀದಿಬೀದಿ ಹುಡುಕಾಡಿದ್ದೆ...
ಒಂದು ಕಾಲದಲ್ಲಿ ನಾ, ನೀನೇ ನನ್ನ ಸರ್ವಸ್ವ ಎಂದುಕೊಂಡು ಜೀವಂತ ಶವದಂತೆ ಬದುಕುತ್ತಿದ್ದೆ...
ಒಂದು ಕಾಲದಲ್ಲಿ ಯಾವಾಗ ನೀನು ನಾನಿಲ್ಲದೆ ನಗುತ್ತಿರುವೆ ಎಂಬುದು ಗೊತ್ತಾಯಿತೋ ನಾನು ಬದಲಾದೆ. ಮೋಸ ಮಾಡಿ ಹೋದ ನಿನ್ನನ್ನು ಮರೆತು ನಾನು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದೆ...
ಒಂದು ಕಾಲದಲ್ಲಿ ನಾ ನಿನ್ನನ್ನು ಬಿಟ್ಟು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದ್ದರಿಂದ ನನ್ನ ಬಳಿ ಎಲ್ಲವೂ ಇದೆ...
ಒಂದು ಕಾಲದಲ್ಲಿ ನೀನು ನನ್ನನ್ನು ಪ್ರೀತಿಸಿ ವಂಚಿಸಿ ಹೋದದ್ದರ ಫಲವಾಗಿ ನಾನು ಅರಮನೆಯಂಥ ಮನೆಯಲ್ಲಿರುವೆ. ಆದರೆ ನೀನಿನ್ನೂ ಅದೇ ಬಾಡಿಗೆ ಮನೆಯಲ್ಲಿ ಗಂಡನ ಗುಲಾಮಗಿರಿ ಮಾಡಿಕೊಂಡು ಬಿದ್ದಿರುವೆ...
ಒಂದು ಕಾಲದಲ್ಲಿ ನೀ ನನ್ನನ್ನು ಅಳಿಸಿ ತಿರುಗಿ ನೋಡದಂತೆ ಹೋಗಿದ್ದೆ. ಅದಕ್ಕೆ ನಾನಿಂದು ನೀನು ತಲೆಯೆತ್ತಿ ನೋಡುವಷ್ಟು ಎತ್ತರಕ್ಕೆ ಬೆಳೆದು ನಿಂತಿರುವೆ...
ಒಂದು ಕಾಲದಲ್ಲಿ ನಾ ನಿನ್ನ ಮೊಸಳೆ ಕಣ್ಣೀರಿಗೆ ಕರಗುತ್ತಿದ್ದೆ. ಆದರೆ ಈಗ ನೀ ನಿಜವಾಗಿಯೂ ಕಣ್ಣೀರಾಕಿದರೂ ನಾ ಕರಗಲಾರೆ...
ಒಂದು ಕಾಲದಲ್ಲಿ ನಿನಗಾಗಿ, ನಿನ್ನೊಂದಿಗೆ, ನಿನ್ನಿಂದ ಇನ್ನೂ ಏನೇನೋ ಆಗಿವೆ. ಅವುಗಳಿಗೆಲ್ಲ ಅನಂತ ಧನ್ಯವಾದಗಳು...