ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada

                                      ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada

    ಈ ಜೀವನ ನಮ್ಮನ್ನು ಅಳಿಸಲು 100 ಸಂದರ್ಭಗಳನ್ನು ಸೃಷ್ಟಿಸಿದರೆ ನಾವು ನಗಲು ಸಾವಿರ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬೇಕು. ಜೀವನದಲ್ಲಿ ಸಂಕಷ್ಟಗಳು ಬಂದಾಗ ಜಿಗುಪ್ಸೆಪಡಬೇಕಾಗಿಲ್ಲ. ಅವುಗಳನ್ನು ದ್ವೇಷಿಸುವ ಅವಶ್ಯಕತೆಯೂ ಇಲ್ಲ. ಏಕೆಂದರೆ ಸಂಕಷ್ಟಗಳಿಂದಲೇ ನಾವು ಬಲಿಷ್ಠರಾಗುತ್ತೇವೆ. ಸಂಕಷ್ಟಗಳು ನಮಗೆ ಬದುಕುವುದನ್ನು ಕಲಿಸುತ್ತವೆ. ಜೊತೆಗೆ ನಮ್ಮ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಅಲ್ಲದೇ  ಅವು ನಮ್ಮಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಒಳ್ಳೆ ವೇದಿಕೆಯನ್ನು ಸೃಷ್ಟಿಸಿ ಕೊಡುತ್ತವೆ. ಸಂಕಷ್ಟಗಳಿಲ್ಲದ ವ್ಯಕ್ತಿ ಜೀವಂತವಾಗಿರಲು ಸಾಧ್ಯವೇ ಇಲ್ಲ. ಎಲ್ಲರಿಗು ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಇದ್ದೇ ಇರುತ್ತವೆ. ನಗುವವರಿಗೆ ಯಾವುದೇ ರೀತಿಯ ಸಂಕಷ್ಟಗಳಿಲ್ಲ ಎಂದುಕೊಂಡರೆ ಅದು ನಿಮ್ಮ ಮೂರ್ಖತನ. ನಗುವವರು ತಮ್ಮ ನಗೆಯಲ್ಲಿ ನೋವಿನ ಕಂತೆಗಳನ್ನು ಬಚ್ಚಿಟ್ಟುಕೊಂಡು ನಗುತ್ತಿರುತ್ತಾರೆ. ಸೊತ್ತಿದ್ದು ಸಾಕು, ಅತ್ತಿದ್ದು ಸಾಕು, ಸೋಲಿಗೆ ಹೆದರಿ ಸುಮ್ಮನಿದ್ದದ್ದು ಸಾಕು. ಏಳು, ಎದ್ದೇಳು, ಸೋಲನ್ನು ಮರೆತು ಸಿಡಿದೇಳು. ನಿನಗಾಗಿ ನಿನ್ನ ಗೆಲುವು ಕಾಯ್ತಿದೆ. ಈಗ ಸಿಡಿದೆದ್ದು ಏನಾದರೂ ಒಂದನ್ನು ಸಾಧಿಸುವ ಸಮಯ ಬಂದಿದೆ. ಜಗತ್ತು ನಿನ್ನ ಯಶಸ್ಸಿಗಾಗಿ ಎದುರು ನೋಡುತ್ತಿದೆ... Come On, Get ready to Fight and get whatever you want... 

ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada

     "ಯಾರು ತಡೆದಿರುವರು ಹೇಳು ನಿನ್ನ? 
     ನೀನೇ ಮುಚ್ಚಿ ಕುಂತಿರುವೆ ಕಣ್ಣ,
     ನಿನ್ನ ಆಲಸ್ಯವೇ ನಿನ್ನ ಶತ್ರು 
     ನಿನ್ನ ಹೊಟ್ಟೆ ಕಿಚ್ಚೇ ನಿನ್ನ ಕೊಲ್ಲೋ ಮಚ್ಚು... 

   ಜೀವನ ನೋವು ನಲಿವಿನ ಪಾಠಶಾಲೆ,
   ಏನಾದರು ನಗುತಾ ಸಾಗುವುದೊಂದು ಕಲೆ,
  ನಿನ್ನಿಂದಲೇ ಕೊಲೆಯಾಗದಿರಲಿ ನಿನ್ನ ಕಲೆ 
  ಸತ್ತ ಮೇಲಾದರೂ ಸಿಗಲಿ ನಿನ್ನ ತಲೆಗೆ ಬೆಲೆ..."

ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada
ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada Reviewed by Director Satishkumar on October 19, 2018 Rating: 4.5
Powered by Blogger.
close
skkkannada.com