ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

Chanakya Niti in Kannada
ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                    ಸಿದ್ಧನ ಓದು ಮುಗಿಯಿತು. ಮನೆಯಲ್ಲಿ ಸರ್ಕಾರಿ ನೌಕರಿ ಹಿಡಿ ಎಂಬ ಒತ್ತಡ ಶುರುವಾಯಿತು. ಅದಕ್ಕಾಗಿ ಸಿದ್ಧ ತನ್ನೂರನ್ನು ಬಿಟ್ಟು ದೂರದ ಸೀಟಿಗಳಲ್ಲಿ ಸಮೀಪವಿರುವ ಧಾರವಾಡಕ್ಕೆ ಬಂದನು. ಧಾರವಾಡ ವಿದ್ಯಾಕಾಶಿ ಎಂದು ಹೆಸರಾದ ನಗರ. ಅಲ್ಲಿ ಕ್ಲಾಸು, ಕಾಲೇಜು, ಟ್ಯೂಶನ್ಸು, ಊಟದ ಮೆಸ್ಸುಗಳನ್ನು ಬಿಟ್ಟರೆ ಬೇರೆನು ವಿಶೇಷವಿಲ್ಲ. ಸಿದ್ಧ ಸಹ ಒಂದೊಳ್ಳೆ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗೆ ಸೇರಿಕೊಂಡನು. ಅವನಿಗೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕೆನಿಸಿತು. ಆತ ಸ್ಪರ್ಧಾತ್ಮಕ ಪರೀಕ್ಷೆಗೆ ನಿಯತ್ತಾಗಿ ಓದಲು ಪ್ರಾರಂಭಿಸಿದನು. ಆದರೆ ಮೇನಕೆಯರು ಅವನನ್ನು ಸುಮ್ಮನೆ ಬಿಡಬೇಕಲ್ಲ. ಊರು ಬಿಟ್ಟ ನಂತರ ಎಲ್ಲರೂ ಹದ್ದು ಮೀರಿ ಹಾರಾಡುತ್ತಾರೆ. ಮನೆ ಬಿಟ್ಟು ಬೇರೆಡೆಗೆ ಸ್ವತಂತ್ರವಾಗಿ ಇರತೊಡಗಿದಾಗ ಎಲ್ಲರಿಗೂ  ಮನೆ ಜೈಲು ಎಂಬ ಭಾವನೆ ಬಂದೇ ಬರುತ್ತದೆ. ಸಿದ್ಧನಿಗೂ ಅದೇ ರೀತಿ ಅನಿಸಿತ್ತು. ಕಾಲೇಜಿನಲ್ಲಿರುವಾಗ ಫಸ್ಟ್ ಬೆಂಚರರಾಗಿರುವುದರಿಂದ ಸಿದ್ಧನಿಗೆ ಗರ್ಲಫ್ರೆಂಡಗಳ ಕೊರತೆಯಿರಲಿಲ್ಲ. ಆದರೆ ಓದು ಮುಗಿದ ನಂತರ ಗರ್ಲಫ್ರೆಂಡಗಳೆಲ್ಲ ಮದುವೆಯಾಗಿ ಗಂಡನ ಮನೆ ಸೇರಿದಾಗ ಸಿದ್ಧ ಸಿಂಗಲಾದನು. ಒಂಟಿತನ ಅವನನ್ನು ಹಿಂಸಿಸಿತು. ಅಂಥದರಲ್ಲಿ ಧಾರವಾಡದಂಥ ನಗರದಲ್ಲಿ ನಾಚಿಕೆಯಿಲ್ಲದೆ ಕೈಕೈಹಿಡಿದು ಪಾರ್ಕಗಳನ್ನು ಸುತ್ತುವ ಪ್ರೇಮಪಕ್ಷಿಗಳನ್ನು ಕಂಡ ನಂತರ ಅವನ ಒಂಟಿತನ ಅವನನ್ನು ಮತ್ತಷ್ಟು ನೋಯಿಸಿತು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                           ಸಿಂಗಲ್ ಸಿದ್ಧ ಬುದ್ಧನಾಗುವ ಹಂತಕ್ಕೆ ತಲುಪಿದ್ದನು. ಆದರೆ ಎಲ್ಲ ಬಿಟ್ಟು ಬುದ್ಧನಾಗಲು ಗಟ್ಟಿ ಗುಂಡಿಗೆ ಬೇಕಲ್ಲವೇ? ಮಧುಮಗನಂತೆ ತಯಾರಾಗಿ ಸಿದ್ಧ ತನ್ನ ಕೋಚಿಂಗ್ ಸೆಂಟರಗೆ ಕಾಲಿಟ್ಟನು. ಅಲ್ಲಿ ಬಂದಿದ್ದವರೆಲ್ಲ ಫಸ್ಟ್ ಬೆಂಚ್ ಪಂಡಿತರೇ. ಎಲ್ಲರೂ ಪುಸ್ತಕದ ಹುಳುಗಳೇ. ಅವರ ಮೊದಲ ದಿನದ ತರಬೇತಿ ಶುರುವಾಯಿತು. ಮೊದಲೇ ದಿನವೇ ಒಬ್ಬರು ಖಡಕ್ ಟೀಚರ್ ಬಂದು ಕೆಲವೊಂದಿಷ್ಟು ಬೇಸಿಕ್ ಪ್ರಶ್ನೆಗಳನ್ನು ಕೇಳಿ ಎಲ್ಲರ ಬೆವರಿಳಿಸಿದರು. ಆದರೆ ಸಿದ್ಧ ಓದಿನಲ್ಲಿ ಸ್ವಲ್ಪ ಸ್ಮಾರ್ಟಾಗಿರುವುದರಿಂದ ಟೀಚರ್ ಎಸೆದ ಪ್ರಶ್ನೆಗಳಿಂದ ಸಲೀಸಾಗಿ ತಪ್ಪಿಸಿಕೊಂಡನು. ಕಾನ್ಫಿಡೆಂಟಾಗಿ ಮತ್ತು ಕರೆಕ್ಟಾಗಿ ಉತ್ತರಗಳನ್ನು ನೀಡುತ್ತಿದ್ದ ಸಿದ್ಧನನ್ನು ನೋಡಿ ಕ್ಲಾಸಲ್ಲಿದ್ದ ಹುಡುಗ-ಹುಡುಗಿಯರೆಲ್ಲ ದಂಗಾದರು. ಟೀಚರ್ ಕ್ಲಾಸ್ ಮುಗಿಸಿ ಹೊರ ಹೋದ ನಂತರ ಎಲ್ಲರೂ  ಸಿದ್ಧನನ್ನು ಪರಿಚಯ ಮಾಡಿಕೊಳ್ಳಲು ಮುಗಿಬಿದ್ದರು. ಕೆಲವರು ಕಾಡಿಬೇಡಿ ಅವನ ಫೋನ್ ನಂಬರನ್ನು ಪಡೆದುಕೊಂಡರು. ಮೊದಲ ದಿನವೇ ಸಾಕಷ್ಟು ಹೊಸ ಗೆಳೆಯರು ಸಿಕ್ಕಿದ್ದರಿಂದ ಸಿದ್ಧ ಸಿಕ್ಕಾಪಟ್ಟೆ ಖುಷಿಪಟ್ಟು ತಾನೇ ಸರ್ವಜ್ಞ ಎಂಬಂತೆ ಗಾಳಿಯಲ್ಲಿ ತೇಲಾಡಿದನು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                                   ಕ್ಲಾಸ್ ಮುಗಿಸಿಕೊಂಡು ರೂಮಿಗೆ ಹೋಗುವಾಗ ಸಿದ್ಧನನ್ನು ಯಾರೋ ಕರೆದಂತಾಯಿತು. ಹೆಣ್ಣು ಧ್ವನಿಯಾಗಿದ್ದರಿಂದ ಸಿದ್ಧ ಸೂಪರ ಫಾಸ್ಟಾಗಿ ತಿರುಗಿ ನಿಂತನು. ಅವನಿಗೆ ಅಚ್ಚರಿ ಕಾದಿತ್ತು. ಅವನ ಕ್ಲಾಸಲ್ಲಿನ ಒಬ್ಬಳು ಹುಡುಗಿ ಅವನನ್ನು ಕರೆದು ಕಾಲಿನಿಂದ ನೆಲ ಕೆರೆಯುತ್ತಾ ನಿಂತಿದ್ದಳು. ಆತ ಅವಳನ್ನು ಮಾತಾಡಿಸಿ ವಿಷಯ ಏನೆಂದು ವಿಚಾರಿಸಿದನು. ಆಕೆ ನಾಚುತ್ತಾ ಅವನ ಫೋನ್ ನಂಬರನ್ನು ಕೇಳಿದಳು. ಆತ ಅವಳಿಗೆ ಫೋನ್ ನಂಬರನ್ನು ನೀಡಿ ಕುಣಿಯುತ್ತಾ ರೂಮಿಗೆ ಹೋದನು. ಸೀಟಿ ಸುಂದರಿ ತಾನಾಗಿಯೇ ಬಂದು ಫೋನ್ ನಂಬರನ್ನು ತೆಗೆದುಕೊಂಡು ಹೋಗಿದ್ದರಿಂದ ಸಿದ್ಧ ಸಿಕ್ಕಾಪಟ್ಟೆ ಖುಷಿಯಲ್ಲಿದ್ದನು. ನನಗಾಗಿ ಹುಡುಗಿಯರು ಸಾಯ್ತಾರೆ ಎಂದೆಲ್ಲ ಯೋಚಿಸತೊಡಗಿದನು. ಆದರೆ ಫಸ್ಟ್ ಬೆಂಚ್ ಪಂಡಿತರಿಗೆ ಹುಡುಗಿಯರು ಸಹಜವಾಗಿಯೇ ಕಾಳಾಕುತ್ತಾರೆ ಎಂಬುದು ಅವನಿಗೆ ಗೊತ್ತಿರಲಿಲ್ಲ. ಏಕೆಂದರೆ ಅವನೊಬ್ಬ ಪುಸ್ತಕದ ಹುಳುವಷ್ಟೇ. ಸಮಾಜದ ಜ್ಞಾನ ಸ್ವಲ್ಪವೂ ಇರದ ಜಾಣಕೋಣನಾತ. ಅವನು ಖುಷಿಯಲ್ಲಿ ಶರ್ಟ ಬಿಚ್ಚಿ ಕುಣಿಯುತ್ತಿದ್ದನು. ಅಷ್ಟರಲ್ಲಿ ಸೀಟಿ ಸುಂದರಿಯ ಫೋನಕರೆ ಬಂದಿತು. ಸಿದ್ಧ ಬ್ಯುಸಿ ಎಂಬಂತೆ ತೋರಿಸಿಕೊಳ್ಳಲು ಸ್ವಲ್ಪ ಲೇಟಾಗಿಯೇ ಫೋನ್ ರಿಸೀವ್ ಮಾಡಿ ಹುಡುಗಿ ಮುಂದೆ ಬಿಲ್ಡಪಗಳ ಸುರಿಮಳೆಗೈದನು. ಅವನ ಮಾತುಗಳಿಗೆ ಮರುಳಾಗಿ ಸೀಟಿ ಸುಂದರಿ ಅವನೊಂದಿಗೆ ಲವ್ ರಿಲೇಷನಶೀಪಗೆ ನಾಂದಿ ಹಾಡಿದಳು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                             ಸೀಟಿ ಸುಂದರಿಯ ಲವ್ ಆಫರನ್ನು ಒಪ್ಪಿಕೊಂಡು ಸಿಂಗಲ್ ಸಿದ್ಧ ಮಿಂಗಲಾದನು. ತನ್ನ ಒಂಟಿತನ ಅವಳಿಂದ ದೂರಾಗುತ್ತೆ ಎಂಬ ನಿರೀಕ್ಷೆಯಲ್ಲಿ ಸಿದ್ಧ ಅವಳ ಜೊತೆ ಸುತ್ತುತ್ತಿದ್ದನು. ಅವಳೊಂದಿಗೆ ಗಂಟೆಗಟ್ಟಲೆ ಮಾತಾಡುತ್ತಾ, ಅವಳೊಂದಿಗೆ ಬೀದಿಬೀದಿ ಸುತ್ತುತ್ತಾ, ಅವಕಾಶ ಸಿಕ್ಕರೆ ಒಂದೆರಡು ಮುತ್ತುಗಳನ್ನು ಬಾಚುತ್ತಾ ಸ್ವಲ್ಪ ಮಜಾ ಮಾಡಬೇಕು ಎಂಬುದು ಅವನ ಉದ್ದೇಶವಾಗಿತ್ತು. ಆದರೆ ಸೀಟಿ ಸುಂದರಿಯ ವ್ಯಥೆಯೇ ಬೇರೆಯಾಗಿತ್ತು. ಅವಳೊಬ್ಬಳು ಕ್ರೂರ ಕಥೆಗಾರ್ತಿಯಾಗಿದ್ದಳು. ಯಾವಾಗಲೂ ಕಥೆಗಳನ್ನು ಹೆಣೆಯುತ್ತಲೇ ಇದ್ದಳು. ಆ ಕಥೆಗಳೆಲ್ಲ ನೈಜವೆಂಬಂತೆ ಬಣ್ಣಿಸುತ್ತಿದ್ದಳು. ಅವಳು ಪ್ರತಿಕ್ಷಣ ಅವನಿಗೆ ಕಥೆಗಳನ್ನು ಹೇಳಿ ಅವನ ಪ್ರಾಣ ಹಿಂಡತೊಡಗಿದಳು. ಅವಳ ಪ್ರತಿ ಕಥೆಯ ನಾಯಕಿ ಅವಳೇ ಆಗಿರುತ್ತಿದ್ದಳು. ಆಕೆ ಹೇಳುವ ಕಥೆಯಲ್ಲಿ ಆಕೆ ಎಲ್ಲರನ್ನೂ ತಪ್ಪಿತಸ್ಥರನ್ನಾಗಿಸುತ್ತಿದ್ದಳು. ತಾ ಮಾತ್ರ ಸರಿ ಎಂಬಂತೆ ಬಿಂಬಿಸುತ್ತಿದ್ದಳು. ಅವಳ ಕಣ್ಣಿಗೆ ಉಳಿದವರೆಲ್ಲರೂ ಅಪರಾಧಿಗಳಂತೆ ಕಾಣುತ್ತಿದ್ದರು. ಆಕೆ ಪ್ರತಿಕ್ಷಣ ಏನಾದರೂ ಒಂದನ್ನು ದೂರುತ್ತಲೇ ಇರುತ್ತಿದ್ದಳು.  ಆಕೆಗೆ ತೃಪ್ತಿಯೆಂಬುದೇ ಇರಲಿಲ್ಲ. ಆಕೆ ಎಲ್ಲವನ್ನೂ ನೆಗೆಟಿವವಾಗಿಯೇ ನೋಡುತ್ತಿದ್ದಳು. ಆತ ಅವಳನ್ನು ಬದಲಾಯಿಸಲು ಬಹಳಷ್ಟು ಪ್ರಯತ್ನ ಪಟ್ಟನು. ಆದರೆ ಅವಳು ಬದಲಾಗುವ ಲಕ್ಷಣಗಳು ಗೋಚರಿಸಲಿಲ್ಲ. ಅದಕ್ಕಾಗಿ ಆತ ಅವಳನ್ನೇ ಬದಲಾಯಿಸಿದನು.
ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                     ಸೀಟಿ ಸುಂದರಿಯೊಂದಿಗೆ ಸ್ವಲ್ಪ ದಿನದಲ್ಲಿಯೇ ಬ್ರೇಕಪ್ ಆಗಿದ್ದರಿಂದ ಸಿದ್ಧನಿಗೆ ಬಹಳಷ್ಟು ಬೇಜಾರಾಯಿತು. ಆತ ದೊಡ್ಡ ತಲೆನೋವು ಪಾರ್ಟಿಯಿಂದ ದೂರಾದೆನಲ್ಲ ಎಂದು ಸಮಾಧಾನ ಮಾಡಿಕೊಂಡು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದನು. ಆದರೆ ಸೀಟಿ ಸುಂದರಿ ಸುಮ್ಮನಿರಬೇಕಲ್ಲವೇ. ಆಕೆ ಎಲ್ಲರೆದುರು ಸಿದ್ಧ ಸರಿಯಿಲ್ಲವೆಂದು ಬಾಯಿ ಬಡಿದುಕೊಂಡು ತಿರುಗಾಡಿದಳು. ಅದು ಅವಳ ಹುಟ್ಟುಗುಣವಾಗಿತ್ತು. ಹುಟ್ಟುಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲದ್ದರಿಂದಲೇ ಸಿದ್ಧ ಅವಳಿಂದ ದೂರಾಗಿದ್ದನು. ಆದರೆ ಆಕೆ ಅವನನ್ನೇ ದೂರಿದಾಗ ಆತನಿಗೆ ಕೋಪ ಉಕ್ಕಿ ಬಂದಿತು. ಆತ ಮತ್ತೊಂದು ಹುಡುಗಿಯನ್ನು ಪಟಾಯಿಸಿ ಅವಳೊಂದಿಗೆ ಸುತ್ತಾಡಿ ಸೀಟಿ ಸುಂದರಿಯ ಬಾಯಿಗೆ ಬೀಗ ಜಡಿಯಲು ನಿರ್ಧರಿಸಿದನು. ಆದರೆ ತಕ್ಷಣವೇ ಬೇರೆ ಹುಡುಗಿ ಬಲೆಗೆ ಬೀಳುವುದು ಸುಲಭದ ಮಾತಾಗಿರಲಿಲ್ಲ. ಅದು ಸಿದ್ಧನಿಗೂ ಗೊತ್ತಿತ್ತು. ಆದರೆ ಕ್ಲಾಸಲ್ಲಿ ಮತ್ತಷ್ಟು ಹವಾ ಮೆಂಟೆನ್ ಮಾಡಿದರೆ ಮತ್ತೊಂದಿಷ್ಟು ಹುಡುಗಿಯರು ಮಾತನಾಡಿಸುತ್ತಾರೆ ಎಂಬ ನಂಬಿಕೆ ಅವನಿಗಿತ್ತು. ಆತ ಬೆಳಿಗ್ಗೆ ಬೇಗನೆದ್ದು ಎಲ್ಲ ವಿಷಯಗಳನ್ನು ಬಾಯಿಪಾಠ ಮಾಡಲು ಪ್ರಾರಂಭಿಸಿದನು. ಎಲ್ಲ ವಿಷಯಗಳನ್ನು ಸರಿಯಾಗಿ ಮನನ ಮಾಡಿಕೊಂಡನು. ಹೀಗಾಗಿ ಅವನೆಂದುಕೊಂಡಂತೆ ಕ್ಲಾಸಲ್ಲಿ ಹವಾ ಮಾಡುವುದರಲ್ಲಿ ಆತ ಯಶಸ್ವಿಯಾದನು. ಅವನಾಸೆಯಂತೆ ಅವನ ಬಲೆಯಲ್ಲಿ ಹೊಸ ಹುಡುಗಿ ತಾನಾಗಿಯೇ ಬಂದು ಬಿದ್ದಳು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                           ಸಿದ್ಧನ ಎರಡನೇ ಪ್ರೇಯಸಿಯೇನು ಸಾಮಾನ್ಯವಾಗಿರಲಿಲ್ಲ. ಅವಳು ಸುಂದರವಾಗೇ ಇದ್ದಳು. ಫಸ್ಟ್ ಬೆಂಚ್ ಗೂಬೆಗಳಿಗೆ ಈ ಹುಡುಗಿಯರು ಬೇಗನೆ ಬೀಳುತ್ತಾರೆ ಎಂಬುದೇ ದೊಡ್ಡ ಬೇಜಾರು. ಆತ ಅವಳೊಂದಿಗೆ ಬೀದಿಬೀದಿ ಸುತ್ತಾಡಲು ಪ್ರಾರಂಭಿಸಿದನು. ಆದರೆ ಅಷ್ಟರಲ್ಲಿ ಮನೆಯವರು ಫೋನ್ ಮಾಡಿ ಅವನಿಗೆ ಮನೆಯ ಪರಿಸ್ಥಿತಿಯನ್ನು ವಿವರಿಸಿ ಬೇಗನೆ ನೌಕರಿ ಹಿಡಿದು ಸಂಪಾದಿಸುವಂತೆ ಬುದ್ಧಿವಾದ ಹೇಳಿದರು. ಸುಂದರಿಯೊಂದಿಗೆ ಸುತ್ತಾಡಿ ದಾರಿ ತಪ್ಪುತ್ತಿದ್ದ ಸಿದ್ಧ ಮನೆಯವರ ಮಾತುಗಳಿಂದ ಸರಿದಾರಿಗೆ ಬಂದನು. ತನ್ನ ಪ್ರೇಯಸಿಯನ್ನು ಪಾರ್ಕಿಗೆ ಕರೆದುಕೊಂಡೊಗಿ ಅವಳ ಕೈಯ್ಯಿಡಿದು ಅವನ ಮನೆಯ ಪರಿಸ್ಥಿತಿಯನ್ನು ಮನಮುಟ್ಟುವಂತೆ ವಿವರಿಸಿದನು. ನಾವಿಬ್ಬರೂ ಚೆನ್ನಾಗಿ ಓದಿ ಬೇಗನೆ ಕೆಲಸ ಗಿಟ್ಟಿಸಿಕೊಂಡು ಹಣ ಸಂಪಾದಿಸಬೇಕು ಎಂದೆಲ್ಲ ಹೇಳಿದನು. ಅವನ ಮಾತಿಗೆ ಆಕೆ ತಲೆಯಲ್ಲಾಡಿಸಿ ಮೂಗು ಮೂರಿಯುತ್ತಾ ಮನೆಗೆ ಹೋದಳು. 

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                   ಅವತ್ತಿನಿಂದಲೇ ಸಿದ್ಧ ಸೀರಿಯಸ್ಸಾಗಿ ಓದಲು ಪ್ರಾರಂಭಿಸಿದನು. ಆದರೆ ಅವನ ಪ್ರೇಯಸಿ ಅವನ ಓದನ್ನು ಭಂಗಗೊಳಿಸುವ ಮೇನಕೆಯಾದಳು. ಆಕೆ ಅವನಿಗೆ ಪದೇಪದೇ ಫೋನ್ ಮತ್ತು ಮೇಸೆಜುಗಳನ್ನು ಮಾಡಿ ಅವನ ಓದನ್ನು ಹಾಳು ಮಾಡಿದಳು. ಸಾಕಷ್ಟು ಸಲ ಸಿದ್ಧ ಅವಳಿಗೆ ಬುದ್ಧಿವಾದ ಹೇಳಿದನು. ಆದರೆ ಅವಳು ಅವನ ಮಾತನ್ನು ಮನ್ನಿಸಲಿಲ್ಲ. ಏಕೆಂದರೆ ಅವಳಿಗೆ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಗುರಿ ಇರಲಿಲ್ಲ. ಸಾಲದ್ದಕ್ಕೆ ಕೆಲಸಕ್ಕೆ ಸೇರಿ ಹಣ ಸಂಪಾದಿಸುವ ಅವಶ್ಯಕತೆ ಅವಳಿಗಿರಲಿಲ್ಲ. ಆಕೆ ಹಣವಂತರ ಮನೆ ಹುಡುಗಿ. ಅವಳಿಗೆ ದುಡ್ಡಿನ ಅವಶ್ಯಕತೆ ಇರಲಿಲ್ಲ. ಹೀಗಾಗಿ ಅವಳು ಸಿದ್ಧನೊಂದಿಗೆ ಟೈಮಪಾಸ್ ಮಾಡುತ್ತಿದ್ದಳು. ಅವಳಿಗೆ ಬೇಕಾಗಿರುವುದು ಬರೀ ಚಾಟಿಂಗ್ ಮತ್ತು ಡೇಟಿಂಗ್ ಅಷ್ಟೇ. ಆದರೆ ಸಿದ್ಧ ಅದಕ್ಕೆ ಸಿದ್ಧನಿರಲಿಲ್ಲ. ಆತ ಅವಳನ್ನು ಅವೈಡ್ ಮಾಡಿದನು. ಆಕೆ ಕೋಪದಲ್ಲಿ ಅವನೊಂದಿಗೆ ಬ್ರೇಕಪ್ ಮಾಡಿಕೊಂಡು ಬೇರೆ ಹುಡುಗನೊಂದಿಗೆ ಹೊಸ ಲವ್ ಅಫೇರ್ ಆರಂಭಿಸಿದಳು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

            ಸಿದ್ಧನ ಮೊದಲ ಪ್ರೇಯಸಿ ಸೀಟಿ ಸುಂದರಿ ಅವನನ್ನು ಸೇರಿ ಎಲ್ಲರನ್ನೂ ದೂರುತ್ತಲೇ ಇದ್ದಳು. ಎರಡನೇ ಪ್ರೇಯಸಿ ಬ್ರೇಕಪ್ ಮಾಡಿಕೊಂಡು ಬೇರೆ ಹುಡುಗನೊಂದಿಗೆ ಸುತ್ತುತ್ತಾ ಅವನ ಹೊಟ್ಟೆ ಉರಿಸುತ್ತಿದ್ದಳು. ಇಬ್ಬರು ಪ್ರೇಯಸಿಯರು ಕೊಟ್ಟ ಎದೆನೋವಿನಿಂದ ಸಿದ್ಧ ಸುಡುಗಾಡುವ ಸೇರುವ ಹಂತಕ್ಕೆ ಬಂದನು. ಮೊದಲೆರಡು ಪ್ರೇಯಸಿಯರಿಗೆ ಪಾಠ ಕಲಿಸಲು ಸಿದ್ಧ ಮೂರನೇಯ ಪ್ರೇಯಸಿಯ ಹುಡುಕಾಟದಲ್ಲಿ ಮಗ್ನನಾದನು. ಅದೇ ಹುಚ್ಚು ಪ್ರಯತ್ನದಲ್ಲಿ ಮನೆಯವರು ಹೇಳಿದ ಬುದ್ಧಿವಾದದ ಮಾತುಗಳನ್ನು ಮರೆತು ಬಿಟ್ಟನು. ಅವನ ದುರಾದೃಷ್ಟಕ್ಕೆ ಅವನಿಗೆ ಮೂರನೇಯ ಪ್ರೇಯಸಿ ಸಿಕ್ಕಳು. ಆತ ಕಾಡಿಬೇಡಿ ಅವಳಿಂದೆ ನಾಯಿಯಂತೆ ಅಲೆದು ಅವಳನ್ನು ಪಟಾಯಿಸಿದ್ದನು. ಆದರೆ ಆಕೆ ಅವನಿಗೆ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಆಕೆ ಅವನಿಗಿಂತಲೂ ದೊಡ್ಡ ಪುಸ್ತಕದ ಹುಳುವಾಗಿದ್ದಳು. ಆಕೆ ಅವನ ಫೋನ್ ಕರೆಗಳನ್ನು, ಮೆಸೇಜಗಳನ್ನು ನೋಡಿದರೂ ನಿರ್ಲಕ್ಷಿಸುತ್ತಿದ್ದಳು. ಏಕೆಂದರೆ ಅವಳಿಗೆ ಪ್ರೀತಿಪ್ರೇಮದ ಹುಚ್ಚಾಟಗಳಿಗಿಂತ ಓದು ಮುಖ್ಯವಾಗಿತ್ತು. ಆದರೆ ಅವನಿಗೆ ಈಗ ಓದಿಗಿಂತ ಮಾಜಿ ಪ್ರೇಯಸಿಯರಿಗೆ ಪಾಠ ಕಲಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ ಆತ ಮೂರನೇ ಪ್ರೇಯಸಿಗೆ ಪದೇಪದೇ ಫೋನ್ ಮಾಡಿ ಪಾರ್ಕಿಗೆ ಬರಲು ಹೇಳಿ ಪ್ರಾಣ ತಿಂದನು. ದಿನಾಲು ಹೊಸಹೊಸ ಬಟ್ಟೆಗಳನ್ನು ಹಾಕಿಕೊಂಡು ತನ್ನೊಂದಿಗೆ ಕೈಹಿಡಿದು ಊರ ಸುತ್ತುವಂತೆ ಬಲವಂತ ಮಾಡಿದನು. ಅದು ಅವನ ಪ್ರೇಯಸಿಗೆ ಹಿಡಿಸಲಿಲ್ಲ. ಆಕೆ ಅವನೊಂದಿಗೆ ಬ್ರೇಕಪ್ ಮಾಡಿಕೊಂಡು ತನ್ನ ಓದಿನಲ್ಲಿ ಮಗ್ನನಾದಳು. ಆದರೆ ಸಿದ್ಧ ಮಾತ್ರ ತನ್ನ ಹುಚ್ಚು ಹಠವನ್ನು ಹಾಗೆಯೇ ಮುಂದುವರೆಸಿದನು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                           ಏನಾದರೂ ಸರಿ ಹೊಸ ಪ್ರೇಯಸಿಯನ್ನು ಪಟಾಯಿಸಿ ಮೊದಲಿನ ಮೂವರು ಮಾಜಿ ಪ್ರೇಯಸಿಯರ ಹೊಟ್ಟೆ ಉರಿಸಲೇಬೇಕು ಎಂದು ಸಿದ್ಧ ಪಣತೊಟ್ಟನು. ಅದೇ ಆತುರದಲ್ಲಿ ಸಿಕ್ಕಸಿಕ್ಕ ಹುಡುಗಿಯರಿಗೆ ಸ್ಮೈಲ್ ಮಾಡಿ ಲವ್ ಪ್ರಪೋಸಲಗಳನ್ನು ನೀಡಿದನು. ಅವನ ಪೆದ್ದು ಪ್ರಪೋಸಲನ್ನು ಒಬ್ಬಳು ಮುದ್ದು ಹುಡುಗಿ ಒಪ್ಪಿಕೊಂಡಳು. ಸಿದ್ಧನಿಗೆ ಸ್ವಲ್ಪ ಸಮಾಧಾನವಾಯಿತು. ಆತ ಅವಳೊಂದಿಗೆ ಹಗಲುರಾತ್ರಿ ಚಾಟಿಂಗ್ ಮಾಡಿದನು. ಫೋನಲ್ಲಿ ಗಂಟೆಗಟ್ಟಲೆ ಮಾತಾಡಿದನು. ಆಕೆ ಅವನು ಹೇಳಿದಂತೆಲ್ಲ ಕೇಳುತ್ತಿದ್ದಳು. ಆಕೆಗೆ ಅವನ ಒಣಹವೆ ಬೋರಾಯಿತು. ಆಕೆ ಅವನನ್ನು ಡೇಟಿಂಗೆ ಕರೆದು ಅವನ ಪರ್ಸನ್ನು ಖಾಲಿ ಮಾಡಿದಳು. ಆಕೆ ಗಿಫ್ಟಗಳಿಗಾಗಿ ಅವನನ್ನು ಗೋಳಿಡಿದುಕೊಂಡಳು. ಅವನಿಗೆ ಕಿಸ್ ಮಾಡಿ ತನ್ನ ಕೆಲಸ ಸಾಧಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವನತ್ರ ನಿಜವಾಗಿಯೂ ದುಡ್ಡಿರಲಿಲ್ಲ. ಅವನ ನಾಲ್ಕನೆಯ ಪ್ರೇಯಸಿ ಚಾಲಾಕಿಯಾಗಿದ್ದಳು. ಆಕೆ ದುಡ್ಡಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು. ಆಕೆ ಹಣಕ್ಕಾಗಿ ಹಾಸಿಗೆ ಏರಲು ಸಹ ಸೈ ಎನ್ನುತ್ತಿದ್ದಳು. ಅವಳಿಗೆ ಸಾಕಷ್ಟು ಜನ ಬಾಯಫ್ರೆಂಡಗಳಿದ್ದರು. ಆಕೆ ಬಟ್ಟೆ ಬದಲಾಯಿಸಿದಂತೆ ಬಾಯಫ್ರೆಂಡಗಳನ್ನು ಬದಲಾಯಿಸುತ್ತಿದ್ದಳು. ಅಂಥವಳನ್ನು ಮೇಂಟೆನ ಮಾಡುವ ಯೋಗ್ಯತೆ ಸಿದ್ಧನಿಗಿರಲಿಲ್ಲ. ಆಕೆ ಅವನ ದಾರಿದ್ರ್ಯವನ್ನು ಸಮೀಪದಿಂದ ಕಂಡು ಅವನಿಂದ ಬಹಳಷ್ಟು ದೂರ ಹೋದಳು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                      ನಾಲ್ಕು ಜನ ಹುಡುಗಿಯರು ಕೊಟ್ಟ ಕಹಿ ನೆನಪುಗಳಿಂದ ಸಿದ್ಧನ ಹೃದಯ ಕಸದ ತೊಟ್ಟಿಯಂತಾಯಿತು. ಅವನಿಗೆ ಅವನ ಮೇಲೆಯೇ ನಾಚಿಕೆಯಾಯಿತು. ಆತ ಹುಡುಗಿಯರ ಸಹವಾಸವೇ ಬೇಡವೆಂದು ಸುಮ್ಮನಿದ್ದನು. ಆದರೆ ಒಬ್ಬಳು ಸುಂದರಿ ಬಯಸದೇ ಬಂದ ಭಾಗ್ಯದಂತೆ ಅವನ ಬೆನ್ನು ಬಿದ್ದಳು. ಆಕೆ ಬಲು ಬುದ್ಧಿಯಂತೆಯಾಗಿದ್ದಳು. ಅವಳಿಗೆ ಹಣದ ಅವಶ್ಯಕತೆ ಇರಲಿಲ್ಲ. ಅವನಿಗೆ ಒಬ್ಬ ಅಮಾಯಕ ಹುಡುಗ ಬೇಕಿದ್ದನಷ್ಟೇ. ಅದಕ್ಕಾಗಿ ಆಕೆ ಮುದ್ದಾಗಿ ಮಾತಾಡಿ ಸಿದ್ಧನನ್ನು ಕೈವಶ ಮಾಡಿಕೊಂಡಳು. ಆಕೆ ಅವನನ್ನು ಫ್ರೆಂಡಝೊನನಲ್ಲಿ ಬಂಧಿಸಿ ಅವನನ್ನು ಬೇಕಾದಂತೆ ಬಳಸಿಕೊಂಡಳು. ಅವನಿಂದ ತನ್ನೆಲ್ಲ ಕೆಲಸಗಳನ್ನು ಪುಕ್ಸಟ್ಟೆಯಾಗಿ ಮಾಡಿಸಿಕೊಂಡಳು. ಅವನನ್ನು ಒಬ್ಬ ಗುಲಾಮನಂತೆ ಆಕೆ ನಡೆಸಿಕೊಂಡಳು. ಅದಕ್ಕೆ ಕೂಲಿಯಾಗಿ ಒಂದೆರಡು ಸಲ ಅವನೊಂದಿಗೆ ಹಾಸಿಗೆಯನ್ನು ಹಂಚಿಕೊಂಡಳು. ಅವಳ ಹಮಾಲಿ ಮಾಡುತ್ತಾ ಸಿದ್ಧ ಅವಳ ತಾಳಕ್ಕೆ ತಕ್ಕಂತೆ ಕುಣಿಯುತ್ತ  ಓದನ್ನು ಸಂಪೂರ್ಣವಾಗಿ ಕಡೆಗಣಿಸಿದನು. ಆಕೆ ಅವಳಿಗೆ ಬೇಕಾದಾಗ ಮಾತ್ರ ಅವನೊಂದಿಗೆ ಮಲಗುತ್ತಿದ್ದಳು. ಆದರೆ ತಪ್ಪಿಯೂ ಅವನೊಂದಿಗೆ ಪ್ರೀತಿಪ್ರೇಮ ಅಂತೇಳಿ ಅವನನ್ನು ಪ್ರಿಯಕರನಂತೆ ನೋಡುತ್ತಿರಲಿಲ್ಲ. ಅವಳಿಗೆ ಅವನೊಬ್ಬ ಗುಲಾಮನಷ್ಟೇ. ಈ ಸತ್ಯ ಸಿದ್ಧನಿಗೆ ಅರಿವಾದಾಗ ಆತ ಹೇಳದೆ ಕೇಳದೆ ಅವಳಿಂದ ದೂರಾದನು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                           ಪಂಚ ಪ್ರೇಯಸಿಯರಿಂದ ಸಿಕ್ಕ ಪ್ರೇಮದ ಕಹಿ ನೆನಪುಗಳಿಂದ ಸಿದ್ಧನ ಮನ ಮಸಣವಾಗಿತ್ತು. ಅವನಿಗೆ ಜೀವನದ ಮೇಲೆ ಜಿಗುಪ್ಸೆ ಹುಟ್ಟಿಕೊಂಡಿತು. ಸಂಜೆಯಾಗುತ್ತಿದ್ದಂತೆಯೆ ಧಾರವಾಡದಲ್ಲಿ ಡ್ರಗ್ಸ ಮಾಫೀಯಾ ಸದ್ದಿಲ್ಲದೆ ತಲೆ ಎತ್ತುತ್ತಿತ್ತು. ಡ್ರಗ್ಸ ಮಾಫೀಯಾ ಅವನನ್ನು ಕೈಬೀಸಿ ಕರೆಯಿತು. ಆದರೆ ಹೋಗಲು ಅವನ ಬಳಿ ಹಣವಿರಲಿಲ್ಲ. ಹುಡುಗಿಯರ ಹಿಂದೆ ಹುಮ್ಮಸ್ಸಿನಿಂದ ಹೋಗಿದ್ದಾತ ಜೀವಂತ ಹೆಣವಾಗಿದ್ದನು. ಆತನಿಗೆ ಆತ್ಮಹತ್ಯೆ ಮಾಡಿಕೊಂಡು ಸಾಯಬೇಕು ಎಂದೆನಿಸಿತು. ಆದರೆ ಅಷ್ಟರಲ್ಲಿ ಮನೆಯಿಂದ ಬಂದ ಫೋನ್ ಕರೆ ಅವನ ಮನ ಬದಲಿಸಿತು. ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಸರ್ಕಾರಿ ನೌಕರಿ ಹಿಡಿಯಲು ಮನೆಯವರು ಅವನಿಗೆ ಒಂದು ವರ್ಷ ಸಮಯಾವಕಾಶವನ್ನು ಕೊಟ್ಟಿದ್ದರು. ಆದರೆ ಆತ ಓದುವುದನ್ನು ಬಿಟ್ಟು ಐವರು ಹುಡುಗಿಯರ ಹಿಂದೆ ಸುತ್ತಿ ಹಾಳಾಗಿದ್ದನು. ಎಲ್ಲರಂತೆ ಸಿದ್ಧನಿಗೂ ಕೆಟ್ಟ ಮೇಲೆ ಬುದ್ಧಿ ಬಂದಿತು. ಆತ ಮಾಡಿದ ತಪ್ಪನ್ನು ಒಪ್ಪಿಕೊಂಡು ಮನೆಗೆ ಮರಳಿದನು.

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

                    ತಾನು ಪದವಿ ಓದಿರುವೆ ಎಂಬುದನ್ನು ಮರೆತು ಕೃಷಿಯಲ್ಲಿ ಮೈಮುರಿದು ದುಡಿಯಲು ಪ್ರಾರಂಭಿಸಿದನು. ಹೆಣ್ಣನ್ನು ನಂಬಿ ಮೋಸ ಹೋದವನು ಈಗ ಮಣ್ಣನ್ನು ನಂಬಿದನು. ಈ ಭೂಮಿ ತಾಯಿಯ ಮಡಿಲಲ್ಲಿ ಬೆವರು ಸುರಿಸಿದರೆ ಒಂದಲ್ಲ ಒಂದಿನ ಆಕೆ ತನ್ನ ಬಾಳಲ್ಲಿ ಹೊನ್ನಿನ ಮಳೆ ಸುರಿಸುತ್ತಾಳೆ ಎಂಬ ಭರವಸೆಯ ಮೇಲೆ ಕಷ್ಟಪಟ್ಟು ದುಡಿಯಲು ಆರಂಭಿಸಿದನು. ಅವನೆಂದುಕೊಂಡಂತೆ ಮಳೆಬೆಳೆ ಎರಡು ಆಗಿದ್ದರಿಂದ ಅವನ ಆರ್ಥಿಕ ಸ್ಥಿತಿಗತಿ ಸ್ವಲ್ಪ ಸುಧಾರಿಸಿತು. ಮನೆಯವರು ಸಂಬಂಧಿಕರಲ್ಲಿಯೆ ಒಬ್ಬಳು ಸುಂದರಿಯನ್ನು ಅವನಿಗೆ ತಂದುಕೊಂಡರು. ಈಗ ಸಿದ್ಧ ಸೀಟಿ ಸುಂದರಿಯ ಸೆಂಟ್ ವಾಸನೆಗಿಂತ ಹಳ್ಳಿ ಹುಡುಗಿಯ ಮೈಬೆವರಿನ ಸುವಾಸನೆಯೇ ಸೊಗಸಾಗಿದೆ ಎಂದೇನುತಾ ಗರ್ವದಿಂದ ಬದುಕುತ್ತಿದ್ದಾನೆ...


ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada

  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 

ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada ಪಂಚ ಪ್ರೇಯಸಿಯರು : ಒಂದು ಲೈಫಸ್ಟೋರಿ Love Life story of a Indian Boy in Kannada Reviewed by Director Satishkumar on November 11, 2018 Rating: 4.5
Powered by Blogger.