ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                      ಮೇನಕೆಯು ದೇವೇಂದ್ರನ ಆದೇಶದ ಮೇರೆಗೆ ನನ್ನ ಮಹಾ ತಪಸ್ಸನ್ನು ಮುರಿಯಲು ಬಂದಿದ್ದಾಳೆ ಅಷ್ಟೇ, ಅವಳ ಪ್ರೀತಿ ಪ್ರೇಮವೆಲ್ಲ ನಾಟಕವೆಂದು ಗೊತ್ತಾದಾಗ ವಿಶ್ವಾಮಿತ್ರ ಮುನಿ ಅವಳನ್ನು ಶಪಿಸಿ ಕಾಡಿಗೆ ತೆರಳಿ ಮತ್ತೆ ತಪಸ್ಸನ್ನು ಪ್ರಾರಂಭಿಸಿದನು. ಮೇನಕೆ ತನ್ನ ಹಾಗೂ ವಿಶ್ವಾಮಿತ್ರರ ಪ್ರೇಮದ ಫಲವಾಗಿ ಜನಿಸಿದ ಹೆಣ್ಣು ಮಗುವನ್ನು ಕಣ್ವ ಮಹರ್ಷಿಗಳ ಕೈಗಿಟ್ಟು ಸ್ವರ್ಗಕ್ಕೆ ಹಿಂತಿರುಗಿದಳು. ಕಣ್ವರು ಆ ಮಗುವನ್ನು ಅತ್ಯಂತ ಮುದ್ದಿನಿಂದ ಸಾಕಿ ಸಲುಹಿದರು. ಅವರ ಸಾಕು ಮಗಳೇ ಶಕುಂತಲೆ. ಅವಳು ಅತ್ಯಂತ ಸುಂದರಿಯಾಗಿದ್ದಳು. ಬೆಳದಿಂಗಳ ಬೆಳಕನ್ನು ಸಹಿಸದಷ್ಟು ಕೋಮಲೆ ಅವಳಾಗಿದ್ದಳು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                 ಪೌರವ ಸಾಮ್ರಾಜ್ಯವನ್ನು ದುಷ್ಯಂತನೆಂಬ ರಾಜ ಆಳಿಕೊಂಡಿದ್ದನು. ಅವನು ತನ್ನ ಆಕರ್ಷಕ ಮೈಕಟ್ಟು, ದಕ್ಷ ಆಡಳಿತ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದನು. ಒಮ್ಮೆ ಆಶ್ರಮವಾಸಿಗಳು ಕಾಡಿನಲ್ಲಿ ಕ್ರೂರ ಮೃಗಗಳ ಹಾವಳಿ ಹೆಚ್ಚಾಗಿದೆ ಎಂದು ರಾಜ ದುಷ್ಯಂತನ ಬಳಿ ದೂರು ನೀಡಿದರು. ಅವರ ದೂರಿಗೆ ಸ್ಪಂದಿಸಿ ಪ್ರಜಾಪ್ರಿಯ ರಾಜನಾದ ದುಷ್ಯಂತ ಆ ಕ್ರೂರ ಮೃಗಗಳನ್ನು ಬೇಟೆಯಾಡಲು ಕಾಡಿಗೆ ಹೋದನು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                ರಾಜಾ ದುಷ್ಯಂತ ತನ್ನ ಅಂಗರಕ್ಷಕರೊಂದಿಗೆ ಕಾಡಿನಲ್ಲಿ ಆಶ್ರಮವಾಸಿಗಳಿಗೆ ತೊಂದರೆ ಕೊಡುತ್ತಿದ್ದ ಕ್ರೂರ ಮೃಗಗಳನ್ನು ಬೇಟೆಯಾಡಲು ಪ್ರಾರಂಭಿಸಿದನು. ಆಗ ಅವನ ಕಣ್ಣಿಗೊಂದು ಸುಂದರವಾದ ಜಿಂಕೆ ಕಂಡಿತು. ರಾಜಾ ದುಷ್ಯಂತ ಕ್ರೂರ ಮೃಗಗಳನ್ನು ಮರೆತು ಆ ಸುಂದರವಾದ ಜಿಂಕೆಯ ಬೆನ್ನಟ್ಟಿದನು. ಅದರ ಮೀನಿನ ಹೆಜ್ಜೆಗಳನ್ನು ಹದ್ದಿನಂತೆ ಹಿಂಬಾಲಿಸಿದನು. ಕಾಡಿನಲ್ಲಿ ಆ ಜಿಂಕೆ ವೇಗವಾಗಿ ಓಡಿದಂತೆ ಆತನು ಸಹ ಅದನ್ನು ರಥದಲ್ಲಿ ಕುಳಿತುಕೊಂಡು ವೇಗವಾಗಿ ಹಿಂಬಾಲಿಸಿದನು. ಸ್ವಲ್ಪ ಸಮಯದಲ್ಲಿ ಅವನ ರಥಕ್ಕೆ ಅಡ್ಡಲಾಗಿ ಕೆಲವು ತಪಸ್ವಿಗಳು ಎದುರಾದರು. ಆ ತಪಸ್ವಿಗಳು ದುಷ್ಯಂತ ರಾಜನಿಗೆ "ಮಹಾರಾಜನೇ, ಇದು ಆಶ್ರಮದ ಜಿಂಕೆ, ಇದನ್ನು ಕೊಲ್ಲದಿರು..." ಎಂದು ಆಜ್ಞಾಪಿಸಿದರು. ಅವರ ಮಾತನ್ನು ಗೌರವಿಸಿ ದುಷ್ಯಂತ ತನ್ನ ಬಿಲ್ಲು ಬಾಣಗಳನ್ನು ಪುನ: ರಥದಲ್ಲಿಟ್ಟು ಅವರಿಗೆ ನಮಸ್ಕರಿಸಿದನು. ಅವನ ನಯವಿನಯತೆಯನ್ನು ಮೆಚ್ಚಿ ಆ ತಪಸ್ವಿಗಳು ಅವನಿಗೆ "ದು:ಖಿತರಾದ ಆಶ್ರಮವಾಸಿಗಳನ್ನು ರಕ್ಷಿಸಲು ಬಂದ ನಿನ್ನಿಂದ ಅಪಚಾರವಾಗುವುದು ತಪ್ಪಿತು. ನಿನ್ನ ನಡೆನುಡಿಯಿಂದ ನಮಗೆ ಸಂತೋಷವಾಗಿದೆ. ನೀನು ಚಕ್ರವರ್ತಿಯಾಗುವಂಥ ಸಂತಾನವನ್ನು ಪಡೆಯುವೆ. ನಿನಗೆ ಶುಭವಾಗಲಿ..." ಎಂದು ಹಾರೈಸಿದರು. ಜೊತೆಗೆ "ಇಲ್ಲಿಯೇ ಸನಿಹದಲ್ಲಿ ಕಣ್ವ ಮಹರ್ಷಿಗಳ ಆಶ್ರಮವಿದೆ. ನೀನು ವಿಶ್ರಾಂತಿಯ ಸಮಯದಲ್ಲಿ ಆಶ್ರಮಕ್ಕೆ ಭೇಟಿ ನೀಡಿದರೆ ಅವರ ಆಶೀರ್ವಾದವು ಸಿಗುವುದು" ಎಂದೇಳಿ ಹೊರಟು ಹೋದರು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                     ದುಷ್ಯಂತ ರಾಜ ಬೇಟೆಗಾಗಿ ಹಾಕಿಕೊಂಡ ರಕ್ಷಾ ಕವಚಗಳನ್ನು ಕಳಚಿಟ್ಟು ಕಣ್ವರ ದರ್ಶನಕ್ಕಾಗಿ ಆಶ್ರಮದ ಕಡೆಗೆ ಹೊರಟನು. ಅನುಮಾಲಿನಿ ನದಿ ತೀರದಲ್ಲಿರುವ ಕಣ್ವರ ಆಶ್ರಮವನ್ನು ದೂರದಿಂದಲೇ ಕಂಡು ರಾಜಾ ದುಷ್ಯಂತ ರಥದಿಂದ ಇಳಿದು ವಿನಯಪೂರ್ವಕವಾಗಿ ಆಶ್ರಮವನ್ನು ಪ್ರವೇಶಿಸಿದನು. ಸುಂದರವಾದ ಹೂಗಿಡಗಳು, ಹಣ್ಣು ಹಂಪಲುಗಳ ಮರಗಳು ಆಶ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು. ಶಕುಂತಲೆ ಸೇರಿ ಆಶ್ರಮದ ತಪಸ್ವಿ ಕನ್ನಿಕೆಯರೆಲ್ಲ ನೀರಿನ ಕೊಡಗಳನ್ನು ಹಿಡಿದುಕೊಂಡು ಗಿಡ ಮರಗಳಿಗೆ ನೀರಾಕುತ್ತಿದ್ದರು. ಗಿಡಮರ ಬಳ್ಳಿಗಳನ್ನು ಪ್ರೀತಿಯಿಂದ ಬೆಳೆಸುವ ಅವರ ಪರಿಯನ್ನು ನೋಡಿ ರಾಜಾ ದುಷ್ಯಂತ ಮಂತ್ರಮುಗ್ಧನಾದನು. ಅವನ ದೃಷ್ಟಿ ಗಾಳಿಯ ರಭಸಕ್ಕೆ ಬಳಕುವ ಬಳ್ಳಿಗಿಂತಲೂ  ಕೋಮಲೆಯಾದ ಶಕುಂತಲೆಯ ಕಡೆಗೆ ಹರಿಯಿತು. ಆತ ಮರೆಯಲ್ಲಿದ್ದುಕೊಂಡು ಅವಳ ಚಟುವಟಿಕೆಗಳನ್ನು ಗಮನಿಸುತ್ತಾ ನಿಂತನು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                         ಶಕುಂತಲೆ ಗಿಡಗಳಿಗೆ ಪ್ರೀತಿಯಿಂದ ನೀರೆರೆಯುತ್ತಿದ್ದಳು. ಅಷ್ಟರಲ್ಲಿ ಒಂದು ದುಂಬಿ ಬಂದು ಅವಳನ್ನು ಕಾಡತೊಡಗಿತು. ಆಕೆ ಆ ದುಂಬಿಯನ್ನು ದೂರ ಓಡಿಸಿದಷ್ಟು ಅದು ಮತ್ತೆ ಅವಳ ಸಮೀಪಕ್ಕೆ ಸುಳಿಯತೊಡಗಿತು. ಕೊನೆಗೆ ಅದನ್ನು ಹೆದರಿಸಲಾಗದೆ ಶಕುಂತಲೆ ಅವಳ ಗೆಳತಿಯರ ಸಹಾಯವನ್ನು ಕೇಳಿದಳು. ಆಗ ಅವರು "ನಿನ್ನನ್ನು ಆ ದೇವರೇ ರಕ್ಷಿಸಬೇಕು ಇಲ್ಲ ಈ ದೇಶದ ರಾಜ ದುಷ್ಯಂತನೇ ಕಾಪಾಡಬೇಕು..." ಎಂದು ಅವಳನ್ನು ಛೇಡಿಸಿದರು. ಆಗ ಮರದ ಮರೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದ ದುಷ್ಯಂತ ಶಕುಂತಲೆಯ ಬಳಿ ಬಂದು "ನನ್ನ ರಾಜ್ಯದಲ್ಲಿ ನನ್ನ ಪ್ರೀತಿಯ ಪ್ರಜೆಗಳಿಗೆ ತೊಂದರೆ ಕೊಡುತ್ತಿರುವವರು ಯಾರು?" ಎಂದೇಳಿ ಅವಳಿಗೆ ತೊಂದರೆ ಕೊಡುತ್ತಿದ್ದ ದುಂಬಿಯನ್ನು ಹೊಡೆದು ದೂರ ಓಡಿಸಿದನು. ಆಕೆ ಅವನನ್ನು ನೋಡಿ ಆಶ್ಚರ್ಯಚಕಿತಳಾದಳು. ನಂತರ ಅವನನ್ನು ಆಶ್ರಮಕ್ಕೆ ಆಮಂತ್ರಿಸಿ ಅತಿಥಿ ಸತ್ಕಾರ ಮಾಡಿದಳು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                                 ಶಕುಂತಲೆಯ ಗೆಳತಿಯರಾದ ಪ್ರಿಯವಂದಾ ಹಾಗೂ ಅನುಸೂಯಾರಿಂದ ರಾಜಾ ದುಷ್ಯಂತ ಶಕುಂತಲೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡನು. ಆಕೆ ಕಣ್ವರ ಸಾಕು ಮಗಳೆಂದು ತಿಳಿದ ನಂತರ ಅವಳನ್ನು ಗಂಧರ್ವ ವಿವಾಹವಾಗಿ ಅವಳೊಂದಿಗೆ ಅಲ್ಲಿಯೇ ಉಳಿದನು. ಕೆಲವು ದಿನಗಳ ಕಾಲ ಅವಳೊಂದಿಗೆ ಹಾಯಾಗಿ ಕಳೆದು, ನಂತರ ಆಶ್ರಮವಾಸಿಗಳಿಗೆ ಕಾಟ ಕೊಡುತ್ತಿದ್ದ ಕ್ರೂರ ಮೃಗಗಳನ್ನು ಬೇಟೆಯಾಡಿ ಮುಗಿಸಿದನು. ಕೆಲವು ದಿನಗಳ ನಂತರ ರಾಜ ಮರ್ಯಾದೆಯೊಂದಿಗೆ ಶಕುಂತಲೆಯನ್ನು ಅರಮನೆಗೆ ಕರೆಸಿಕೊಳ್ಳುವೆ ಎಂದೇಳಿ ರಾಜ ದುಷ್ಯಂತ ಅರಮನೆಗೆ ಮರಳಿದನು. ಶಕುಂತಲೆ ಅವನ ಕರೆಯುವಿಕೆಗೆ ಕಾಯುತ್ತಾ ಅವನ ಸವಿ ನೆನಪುಗಳಿಗೆ ಶರಣಾದಳು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                      ಕಣ್ವ ಮಹರ್ಷಿಗಳು ಸೋಮನಾಥ ತೀರ್ಥಯಾತ್ರೆಯಿಂದ ಮರಳಿ ಆಶ್ರಮಕ್ಕೆ ಬಂದಾಗ ಶಕುಂತಲೆ ತಾನು ದುಷ್ಯಂತ ರಾಜನೊಂದಿಗೆ ಗಂಧರ್ವ ವಿವಾಹವಾಗಿರುವುದನ್ನು ತಿಳಿಸಿದಳು. ಅವಳನ್ನು ಹರಿಸಿ ಕಣ್ವರು ತಮ್ಮ ಪೂಜಾ ಪಾಠಗಳಲ್ಲಿ ನಿರತರಾದರು. ಆದರೆ ಶಕುಂತಲೆ ಯಾವಾಗಲೂ ದುಷ್ಯಂತನ ನೆನಪುಗಳಲ್ಲಿಯೇ ಕಳೆದು ಹೋಗುತ್ತಿದ್ದಳು. ಹೀಗೆ ಒಂದಿನ ಆಕೆ ನೀರಿನ ಅಲೆಗಳಲ್ಲಿ ದುಷ್ಯಂತನ ಪ್ರತಿಬಿಂಬವನ್ನು ಕಲ್ಪಿಸಿಕೊಂಡು ಮೈಮರೆತ್ತಿದ್ದಳು. ಅದೇ ಸಮಯಕ್ಕೆ ಕಣ್ವರು ಅವಳ ಬಳಿ ಬಂದರು. ಅವಳ ಎಲ್ಲ ಸಖಿಯರು ಕಣ್ವರಿಗೆ ನಮಸ್ಕರಿಸಿದರು. ಆದರೆ ಶಕುಂತಲೆ ದುಷ್ಯಂತನ ನೆನಪುಗಳಲ್ಲಿ ಅವರನ್ನು ನಿರ್ಲಕ್ಷಿಸಿದಳು. ಆಗ ಕಣ್ವರು ಕೋಪದಲ್ಲಿ ಅವಳಿಗೆ "ನೀನು ಯಾರ ನೆನಪುಗಳಲ್ಲಿ ಕಳೆದು ಹೋಗಿರುವೆಯೋ ಅವನು ನಿನ್ನನ್ನು ಮರೆತು ಬಿಡಲಿ..." ಎಂದು ಶಾಪವಿಟ್ಟರು. ಅವರ ಶಾಪದಿಂದಾಗಿ ದುಷ್ಯಂತ ಶಕುಂತಲೆಯನ್ನು ಮರೆತು ಬಿಟ್ಟನು.

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                       ದುಷ್ಯಂತ ಶಕುಂತಲೆಯನ್ನು ಮದುವೆಯಾಗಿ ಒಂದು ವರ್ಷ ಕಳೆದು ಹೋದರೂ ಆತ ಅವಳನ್ನು ತನ್ನ ಅರಮನೆಗೆ ಕರೆಯಿಸಿಕೊಳ್ಳಲಿಲ್ಲ. ಏಕೆಂದರೆ ಕಣ್ವರ ಶಾಪದ ಪ್ರಭಾವದಿಂದಾಗಿ ಆತ ಅವಳನ್ನು ಮರೆತಿದ್ದನು. ಈ ಸಮಯದಲ್ಲಿ ಶಕುಂತಲೆ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಳು. ಆ ಮಗುವಿಗೆ ಕಣ್ವ ಮಹರ್ಷಿಗಳು ಸರ್ವದಮನ ಎಂದು ಹೆಸರಿಟ್ಟರು. ಶಕುಂತಲೆಯನ್ನು ಮತ್ತು ಮಗುವನ್ನು ದುಷ್ಯಂತನ ಅರಮನೆಗೆ ಬಿಟ್ಟು ಬರಲು ಕಣ್ವರು ತಮ್ಮ ಶಿಷ್ಯೆ ತಾಪಸಿಯನ್ನು ಕಳುಹಿಸಿದರು. ಆದರೆ ಶಕುಂತಲೆ ಮಗನೊಂದಿಗೆ ದುಷ್ಯಂತನ ಎದುರಿಗೆ ಬಂದಾಗ ಆತ ಅವರನ್ನು ಗುರ್ತಿಸಲೇ ಇಲ್ಲ. ಆತ ಅವಳೊಂದಿಗೆ ಅಪರಿಚಿತನಂತೆ ವರ್ತಿಸಿದನು. 

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

                    ಶಕುಂತಲೆ ಕಣ್ಣೀರಾಕುತ್ತಾ ತಮ್ಮ ಪ್ರೇಮಕಥೆಯನ್ನು ಹೇಳಿದರೂ ಸಹ ದುಷ್ಯಂತ ಅವಳನ್ನು ಪತ್ನಿಯಾಗಿ ಸ್ವೀಕರಿಸಲಿಲ್ಲ. ಕೊನೆಗೆ ಆಕೆ ಅಳುತ್ತಾ ಅರಮನೆಯಿಂದ ಹೊರಬರುವಾಗ "ದುಷ್ಯಂತ, ನೀನು ತಪ್ಪು ಮಾಡುತ್ತಿರುವೆ. ಈಕೆ ಶಕುಂತಲೆ, ನಿನ್ನ ಧರ್ಮಪತ್ನಿ. ಈತ ನಿನ್ನ ಮಗ ಸರ್ವದಮನ. ನೀನು ಕಣ್ವರ ಶಾಪದಿಂದಾಗಿ ಇವರನ್ನು ಮರೆತಿರುವೆ..." ಎಂದು ಆಕಾಶವಾಣಿಯಾಯಿತು. ಆಕಾಶವಾಣಿಯನ್ನು ಕೇಳಿಸಿಕೊಂಡ ನಂತರ ದುಷ್ಯಂತನಿಗೆ ತನ್ನ ಹಾಗೂ ಶಕುಂತಲೆಯ ಪ್ರೇಮಕಥೆ ನೆನಪಾಯಿತು. ದುಷ್ಯಂತ ಶಕುಂತಲೆಗೆ ಕ್ಷಮೆ ಕೇಳಿ ಅವಳನ್ನು ಧರ್ಮಪತ್ನಿಯಾಗಿ ಸ್ವೀಕರಿಸಿದನು. ಅವರ ಮಗ ಸರ್ವದಮನ ಮುಂದೆ ಭರತ ಚಕ್ರವರ್ತಿಯಾದನು. ಅವನಿಂದಲೇ ನಮ್ಮ ದೇಶಕ್ಕೆ ಭಾರತವೆಂಬ ಹೆಸರು ಬಂದಿತು...

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

      ಈ ರೀತಿ ಶಕುಂತಲೆಯ ಪ್ರೇಮಕಥೆ ಸುಖಾಂತ್ಯ ಕಂಡಿತು.  ಆದರೆ ಕವಿರತ್ನ ಕಾಳಿದಾಸನು ತನ್ನ ಅಭಿಜ್ಞಾನ ಶಾಕುಂತಲೆ ನಾಟಕದಲ್ಲಿ "ದುಷ್ಯಂತ ರಾಜನು ಮುದ್ರೆಯುಂಗುರವನ್ನು ಕೊಡುವುದು, ಅದನ್ನು ಶಕುಂತಲೆ ಕಳೆದುಕೊಳ್ಳುವುದು, ನಂತರ ಅದು ಮೀನುಗಾರನ ಕೈಗೆ ಸಿಗುವುದು..." ಇಂಥ ಸಂಗತಿಗಳನ್ನು ಹೊಸದಾಗಿ ಸೃಷ್ಟಿಸಿದ್ದಾನೆ. ಮೂಲಕಥೆಯಲ್ಲಿ ಇವೆಲ್ಲ ಸಂಗತಿಗಳಿಲ್ಲ. ಆದರೆ ಕಾಳಿದಾಸನ ಕಲ್ಪನೆಗೆ ಸರಿಸಾಟಿ ಯಾರಿಲ್ಲ. I love his imagination. ನಾನು ಅವನ ಕಲ್ಪನೆಯನ್ನು ಪ್ರೀತಿಸುವೆ. ಈ ಪ್ರೇಮಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ಮತ್ತು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ...

ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada

Blogger ನಿಂದ ಸಾಮರ್ಥ್ಯಹೊಂದಿದೆ.