ನನಗೆ ಷೇಕ್ಸಪಿಯರನನ್ನು ಕಂಡರೆ ತುಂಬಾ ಪ್ರೀತಿ. ಏಕೆಂದರೆ ಅವನು ಸತ್ತ ಮೇಲು ಬದುಕಿದ್ದಾನೆ. ಅವನ ಮಹಾನ ನಾಟಕಗಳಂತೆ ಅವನು ಸಹ ಅಜರಾಮರವಾಗಿದ್ದಾನೆ. ಅವನು ತನ್ನ ವಿಭಿನ್ನ ಆಲೋಚನೆಗಳ ಮೂಲಕ ಬಹುಬೇಗನೆ ಓದುಗನನ್ನು ಆವರಿಸಿಕೊಂಡು ಬಿಡುತ್ತಾನೆ. ಆದ್ದರಿಂದ ಷೇಕ್ಸಪಿಯರನನ್ನು ಕಂಡರೆ ನನಗೆ ತುಂಬಾ ಪ್ರೀತಿ. ಅವನು ಹೇಳಿದ ಕೆಲವು ಸತ್ಯ ಸಂಗತಿಗಳು ಇಂತಿವೆ...
೧ ಪ್ರೀತಿ ಕಣ್ಣಿಗೆ ಕಾಣಿಸಲ್ಲ. ಆದರೆ ಮನಸ್ಸಿಗೆ ಕಾಣಿಸುತ್ತೆ...

೨) ಎಲ್ಲರನ್ನು ಪ್ರೀತಿಸಿ, ಆದರೆ ಕೆಲವರನ್ನು ಮಾತ್ರ ನಂಬಿ. ಯಾರಿಗೂ ಕೆಟ್ಟದ್ದನ್ನು ಮಾಡದಿರಿ...

೩) ಒಂದು ನಿಮಿಷ ತಡವಾಗಿ ಹೋಗುವುದಕ್ಕಿಂತ ಮೂರು ಗಂಟೆ ಮುಂಚಿತವಾಗಿ ಹೋಗುವುದು ಒಳ್ಳೆಯದು...

೪) ನಾವು ಕೇವಲ ದಯೆಯಿಂದ ಮಾತ್ರ ಕ್ರೂರವಾಗಿರಬೇಕು...

೫) ಮುಗಿದು ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ...

೬) ಜಾಣ ಪೆದ್ದನಾಗಿರುವುದಕ್ಕಿಂತ ಬರೀ ಪೆದ್ದನಾಗಿರುವುದೇ ಒಳ್ಳೆಯದು...

೭) ಉದಾತ್ತ ಕರುಣೆಯು ನೈತಿಕತೆಯ ಕಿರೀಟವಾಗಿದೆ...

೮) ದೇವರು ನಮಗೆ ಬರೀ ಒಂದು ಮುಖವನ್ನಷ್ಟೇ ಕೊಟ್ಟಿದ್ದಾನೆ. ಆದರೆ ನಾವೇ ಇನ್ನೊಂದು ಮುಖವನ್ನು ಸೃಷ್ಟಿಸಿಕೊಂಡಿದ್ದೇವೆ...

೯) ಒಬ್ಬ ಮೂರ್ಖ ತನ್ನನ್ನು ತಾನೇ ಬುದ್ಧಿವಂತನೆಂದು ಕೊಂಡಿರುತ್ತಾನೆ. ಆದರೆ ಒಬ್ಬ ನಿಜವಾದ ಬುದ್ಧಿವಂತ ತನ್ನನ್ನು ದಡ್ಡನೆಂದುಕೊಂಡಿರುತ್ತಾನೆ...

೧೦) ಈ ಜಗತ್ತಿನಲ್ಲಿ ಒಳ್ಳೆಯದ್ದು, ಕೆಟ್ಟದ್ದು ಅಂತೇನಿಲ್ಲ. ಎಲ್ಲವು ನಮ್ಮ ಚಿಂತನೆಗಳ ಮೇಲಿದೆ...

೧೧) ಈ ಜಗತ್ತು ಅತೀ ದೊಡ್ಡ ನಾಟಕ ರಂಗವಾಗಿದೆ. ಎಲ್ಲರಿಗೂ ಒಂದೊಂದು ಪಾತ್ರಗಳಿವೆ. ಎಲ್ಲರು ಅವರವರ ಪಾತ್ರಗಳನ್ನು ಸಮಯಾನುಸಾರವಾಗಿ ನಿಭಾಯಿಸುತ್ತಾರೆ...

೧೨) ಹೇಡಿಗಳು ಪದೇಪದೇ ಸಾಯುತ್ತಾರೆ. ಆದರೆ ಶೂರರು ಒಂದೇ ಸಲ ಸಾಯುತ್ತಾರೆ...

೧೩) ಅತಿಯಾದರೆ ಅಮೃತವು ವಿಷವಾಗುತ್ತದೆ...

೧೪) ಅಜ್ಞಾನವು ಆ ದೇವರ ಶಾಪವಾಗಿದೆ. ಆದರೆ ಜ್ಞಾನದ ರೆಕ್ಕೆಗಳನ್ನು ಕಟ್ಟಿಕೊಂಡು ನಾವು ಸ್ವರ್ಗಕ್ಕೆ ಹಾರಬಹುದು...

೧೫) ಹಲವರ ಮಾತುಗಳನ್ನು ಆಲಿಸಿ. ಆದರೆ ಕೆಲವರೊಂದಿಗೆ ಮಾತ್ರ ಮಾತನಾಡಿ...

೧೬) ಪ್ರಾಮಾಣಿಕತೆಗಿಂತ ಮಹತ್ತರವಾದ ಆಸ್ತಿ ಬೇರೊಂದಿಲ್ಲ...

೧೭) ನಿಸರ್ಗದ ಒಂದು ಸ್ಪರ್ಶ ಇಡೀ ವಿಶ್ವವನ್ನು ಸಂಬಂಧಿಯನ್ನಾಗಿಸುತ್ತದೆ...

೧೮) ಸಂಗೀತವು ಪ್ರೀತಿಯ ರಾಯಭಾರಿಯಾಗಿದೆ...

೧೯) ಸದ್ಯಕ್ಕೆ ನರಕವೂ ಪಾಪಿಗಳಿಲ್ಲದೆ ಖಾಲಿ ಹೊಡೆಯುತ್ತಿದೆ. ಏಕೆಂದರೆ ಎಲ್ಲ ಪಾಪಿಗಳು ಭೂಮಿಯ ಮೇಲಿದ್ದಾರೆ...

೨೦) ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ. ಅದು ನಮ್ಮ ಮೇಲಿದೆ...

೨೧) ನಾವು ಏನು ಎಂಬುದು ನಮಗೆ ತಿಳಿದಿದೆ. ಆದರೆ ಮನಸ್ಸು ಮಾಡಿದರೆ ನಾವು ಏನಾಗಬಲ್ಲೆವು ಎಂಬುದು ನಮಗೆ ತಿಳಿದಿಲ್ಲ...

೨೨) ನಾನು ಯಾವಾಗಲೂ ಸಂತೋಷವಾಗಿರುತ್ತೇನೆ, ಯಾಕೆ ಗೊತ್ತಾ? ಏಕೆಂದರೆ ನಾನು ಯಾರಿಂದಲೂ ಏನನ್ನು ಬಯಸುವುದಿಲ್ಲ. ನಮ್ಮ ನಿರೀಕ್ಷೆಗಳು ನಮ್ಮನ್ನು ಸದಾ ನೋಯಿಸುತ್ತವೆ. ಜೀವನ ಚಿಕ್ಕದಾಗಿದೆ. ನಿಮ್ಮ ಜೀವನವನ್ನು ಪ್ರೀತಿಸಿ. ಸದಾ ಸಂತೋಷವಾಗಿರಿ ಮತ್ತು ಸದಾ ನಗುತ್ತೀರಿ...

೨೩) ನೀವು ತೋರಿಸುವುದಕ್ಕಿಂತ ಹೆಚ್ಚಿಗೆ ನಿಮ್ಮ ಬಳಿ ಇರಬೇಕು. ನಿಮಗೆ ಗೊತ್ತಿರುವುದಕ್ಕಿಂತ ಕಡಿಮೆ ನೀವು ಮಾತಾಡಬೇಕು...

೨೪) ಮೊದಲು ನಿಮ್ಮಷ್ಟಕ್ಕೆ ನೀವು ಬದುಕಿ.
ಮಾತನಾಡುವ ಮೊದಲು, ಆಲಿಸಿ.
ಬರೆಯುವ ಮೊದಲು, ಯೋಚಿಸಿ.
ಖರ್ಚು ಮಾಡುವ ಮೊದಲು, ಸಂಪಾದಿಸಿ.
ಪ್ರಾರ್ಥಿಸುವ ಮೊದಲು, ಕ್ಷಮಿಸಿ.
ನೋಯಿಸುವ ಮೊದಲು, ನೋವನ್ನು ಅನುಭವಿಸಿ.
ದ್ವೇಷಿಸುವ ಮೊದಲು, ಪ್ರೀತಿಸಿ.
ಕೈ ಬಿಡುವ ಮೊದಲು, ಮತ್ತೊಮ್ಮೆ ಪ್ರಯತ್ನಿಸಿ...
ಸಾಯುವುದಕ್ಕಿಂತ ಮೊದಲು, ಚೆನ್ನಾಗಿ ಬದುಕಿ...

೨೫) ಶ್ರೇಷ್ಠತೆಯನ್ನು ಸಾಧಿಸಬೇಕಾದರೆ ಸ್ವಲ್ಪವೇ ತಪ್ಪುಗಳನ್ನು ಮಾಡಿ...

೨೬) ನಮ್ಮ ಜೀವನದಲ್ಲಿ ಯಾವಾಗಲೂ ತಪ್ಪಾದ ವ್ಯಕ್ತಿಯೇ ಸರಿಯಾದ ಜೀವನ ಪಾಠವನ್ನು ಕಲಿಸುತ್ತಾನೆ...

೨೭) ಶಬ್ದಗಳು ಗಾಳಿಯಂತೆ ಸುಲಭವಾಗಿವೆ. ಆದರೆ ನಂಬಿಗಸ್ಥ ಸ್ನೇಹಿತರು ಸಿಗುವುದು ದುರ್ಲಭವಾಗಿದೆ...

೨೮) ಕಾಯುತ್ತಾ ಕುಂತವರಿಗೆ ಕಾಲ ತುಂಬಾ ನಿಧಾನವಾಗಿದೆ. ಹೆದರುವವರಿಗೆ ಅತ್ಯಂತ ವೇಗವಾಗಿದೆ. ಸಮಯವನ್ನು ಪ್ರೀತಿಸಿ ಆದರಿಸುವವರಿಗೆ ಸಮಯ ಅನಂತವಾಗಿದೆ...

೨೯) ನಿಮ್ಮ ಬಗ್ಗೆ ಎಲ್ಲವನ್ನು ತಿಳಿದುಕೊಂಡು, ನೀವು ಹೇಗಿದ್ದೀರೋ ಹಾಗೇ ನಿಮ್ಮನ್ನು ಒಪ್ಪಿಕೊಂಡು, ನಿಮ್ಮ ಬೆಳೆವಣಿಗೆಗೆ ಹೆಗಲು ಕೊಟ್ಟು ನಿಲ್ಲುವವನೇ ನಿಜವಾದ ಗೆಳೆಯ...

೩೦) ಕೆಲವರು ಹುಟ್ಟಿನಿಂದಲೇ ಶ್ರೇಷ್ಠವಾಗಿದ್ದರೆ, ಇನ್ನು ಕೆಲವರು ಹುಟ್ಟಿದ ನಂತರ ಶ್ರೇಷ್ಠತೆಯನ್ನು ಕಷ್ಟಬಿದ್ದು ಸಂಪಾದಿಸುತ್ತಾರೆ...

೩೧) ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಾಗಿವೆ...

೩೨) ಅತಿಯಾದ ನಿರೀಕ್ಷೆಗಳು ಎದೆನೋವಿನ ತಾಯಿಬೇರಾಗಿವೆ...

೩೩) ಉತ್ತಮವಾಗಿ ಕಾಳಜಿ ವಹಿಸಿ ಮಾಡಲ್ಪಟ್ಟ ಕೆಲಸಗಳು ಸೋಲಿನ ಭೀತಿಯಿಂದ ವಿನಾಯತಿ ಪಡೆಯುತ್ತವೆ...

೩೪) ಎಲ್ಲಿಯೂ ಅಂಧಕಾರವಿಲ್ಲ. ಆದರೆ ಅಜ್ಞಾನ ಸಾಕಷ್ಟಿದೆ...

೩೫) ಪ್ರೀತಿ ಯಾವಾಗಲೂ ಮಳೆಯಾದ ನಂತರ ಮೂಡುವ ಮಳೆಬಿಲ್ಲಿನಂತಿರುತ್ತದೆ...

೩೬) ಶ್ರೇಷ್ಠತೆಗೆ ಭಯಪಡಬೇಡಿ. ಕೆಲವರು ಹುಟ್ಟಿನಿಂದಲೇ ಶ್ರೇಷ್ಠರಾಗಿದ್ದರೆ, ಇನ್ನು ಕೆಲವರು ಸಾಧಿಸಿದ ನಂತರ ಶ್ರೇಷ್ಠವಾಗುತ್ತಾರೆ....

೩೭) ತಂದೆ ಮಗನಿಗೆ ಕೊಟ್ಟಾಗ ಇಬ್ಬರು ನಗುತ್ತಾರೆ. ಆದರೆ ಮಗ ತಂದೆಗೆ ಕೊಟ್ಟಾಗ ಇಬ್ಬರು ಅಳುತ್ತಾರೆ...

೩೮) ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಮಂಜು ಶೀಘ್ರದಲ್ಲೇ ನಂದಿಸುವಂತೆ, ಪ್ರೀತಿ ಕೆಟ್ಟ ಪದಗಳನ್ನು ಕರಗಿಸುತ್ತದೆ...

೩೯) ನಿಜವಾದ ಪ್ರೀತಿಯ ಶಾಪ ನಾಜೂಕಾಗಿರಲ್ಲ...

೪೦) ಅನುಮಾನ ಯಾವಾಗಲೂ ತಪ್ಪಿತಸ್ಥನ ಮನಸ್ಸನ್ನೇ ಬೇಟೆಯಾಡುತ್ತದೆ...

೪೧) ಪ್ರೀತಿ ಪ್ರೇಮಿಗಳ ನಿಟ್ಟುಸಿರಿನ ಹೊಗೆಯಾಗಿದೆ...

೪೨) ಪುರುಷರಲ್ಲಿ ಯಾವುದೇ ಶಕ್ತಿ ಇಲ್ಲದಿರುವಾಗಲೂ ಮಹಿಳೆಯರು ಮನಸೋಲಬಲ್ಲರು...

೪೩) ಖಾಲಿ ಪಾತ್ರೆಯೇ ಜೋರಾಗಿ ಸದ್ದು ಮಾಡುತ್ತದೆ.

೪೪) ಜೀವನವು ದು:ಖದಲ್ಲಿರುವ ಮನುಷ್ಯನ ಮಂದ ಕಿವಿಗಳಿಗೆ ಎರಡೆರಡು ಸಾರಿ ಹೇಳಲಾದ ಕಥೆಯಂತೆ ಪ್ರಯಾಸಕರವಾಗಿದೆ...

೪೫) ಯಾವುದೇ ಪ್ರೀತಿ ಸುವರ್ಣಾವಕಾಶ ಸಿಕ್ಕಂತೆ ಬಣ್ಣ ಬದಲಾಯಿಸಿದರೆ ಅದು ಪ್ರೀತಿಯೇ ಅಲ್ಲ...
