ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                    ನಮ್ಮ ಹಿಂದು ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಅಸಂಖ್ಯ ರೋಚಕ ಕಥೆಗಳಿವೆ. ಇವೆರಡು ಗ್ರಂಥಗಳು ಯಾವುದೇ ಕಮರ್ಷಿಯಲ್ ಮೂವಿಗೆ ಕಮ್ಮಿಯಿಲ್ಲ. ಒಂದು ಮನರಂಜನಾತ್ಮಕ ಮೂವಿಯಲ್ಲಿರಬೇಕಾದ ಎಲ್ಲ ಮಸಾಲೆ ಪದಾರ್ಥಗಳು ಇವೆರಡು ಗ್ರಂಥಗಳಲ್ಲಿವೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಪತಿ ಸೇವೆ ಮಾಡಿ ಪ್ರಖ್ಯಾತಿ ಪಡೆದ ಐವರು ಪವಿತ್ರ ಸ್ತ್ರೀಯರನ್ನು ಪತಿವ್ರತೆಯರೆಂದು ಪಟ್ಟಿ ಮಾಡಿದ್ದಾರೆ. ಸೀತಾ, ಮಂಡೋದರಿ, ದ್ರೌಪದಿ, ತಾರಾ ಮತ್ತು ಅಹಲ್ಯ ಇವರೇ ಆ ಪಂಚ ಪತಿವ್ರತೆಯರು. ಅವರ ಕಥೆಗಳು ಸಂಕ್ಷಿಪ್ತ ರೂಪದಲ್ಲಿ ಇಲ್ಲಿವೆ :

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

೧) ಸೀತೆಯ ಕಥೆ :

                             ರಾಕ್ಷಸರ ರಾಜ ರಾವಣನ ಅತ್ಯಾಚಾರಗಳು ಅಧಿಕವಾಗುತ್ತಾ ಸಾಗಿದ್ದವು. ಆತ ಒಮ್ಮೆ ಮಹಾವಿಷ್ಣುವಿನ ಪರಮಭಕ್ತೆಯಾದ ವೇದವತಿಯನ್ನು ಬಲವಂತವಾಗಿ ಬಳಸಿಕೊಳ್ಳಲು ಮುಂದಾಗಿ ಅವಳನ್ನು ಅತಿಯಾಗಿ ಗೋಳಿಡಿದುಕೊಂಡು ತನ್ನಾಸೆಯನ್ನು ತೀರಿಸಿಕೊಂಡನು. ಅವನ ಅತ್ಯಾಚಾರವನ್ನು ಕಂಡು ಕೋಪಗೊಂಡ ಲಕ್ಷ್ಮೀದೇವಿ ರಾವಣನ ಅಂತ್ಯಕ್ಕೆ ಮುಂದಾದಳು. ಆದರೆ ಮಹಾವಿಷ್ಣು ಬ್ರಹ್ಮನಿಂದ ಈಗಾಗಲೇ ಸಿದ್ಧವಾದ ರಾವಣನ ಅಂತ್ಯದ ಯೋಜನೆಯನ್ನು ವಿವರಿಸಿದನು. ಆ ಯೋಜನೆಯ ಅನುಸಾರವಾಗಿ ಮಹಾವಿಷ್ಣು ರಾಮನ ಅವತಾರದಲ್ಲಿ ಭೂಮಿಗೆ ಬಂದನು. ಅದೇ ರೀತಿ ಲಕ್ಷ್ಮೀದೇವಿ ಸೀತೆಯ ಅವತಾರದಲ್ಲಿ ಭೂಮಿಗೆ ಬಂದಳು.
ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

               ವೇದವತಿ ತನ್ನ ಮೇಲೆ ಅತ್ಯಾಚಾರವೆಸಗಿದ ರಾವಣನಿಗೆ ಶಾಪ ನೀಡಿದ್ದಳು. ಅವಳ ಶಾಪವನ್ನು ನಿಜವಾಗಿಸಲು ಮತ್ತು ರಾವಣನ ಅಂತ್ಯಕ್ಕೆ ನಾಂದಿ ಹಾಡಲು ಲಕ್ಷ್ಮೀದೇವಿ ಲಂಕೆಯ ಕೊಳದಲ್ಲಿ ಬಂಗಾರದ ಕಮಲದಲ್ಲಿ ಜನಿಸಿದಳು. ರಾವಣನ ಸಮೇತ ಸಮಸ್ತ ರಾಕ್ಷಸ ಕುಲವನ್ನು ಸರ್ವನಾಶ ಮಾಡಲು ಲಕ್ಷ್ಮೀದೇವಿ ಈ ಅವತಾರವೆತ್ತಿದ್ದಳು. ಈ ವಿಷಯ ತಿಳಿದ ನಂತರ ರಾವಣ ಬಂಗಾರದ ಕಮಲದಲ್ಲಿ ಜನಿಸಿದ ಹೆಣ್ಣು ಮಗುವನ್ನು ಒಂದು ಬಂಗಾರದ ಪೆಟ್ಟಿಗೆಯಲ್ಲಿ ಹಾಕಿ ದೂರ ದೇಶದಲ್ಲಿ ಹೂತು ಬರಲು ಆದೇಶಿಸಿದನು. ಅವನ ಆಜ್ಞೆಯಂತೆ ಅವನ ಸೈನಿಕರು ಆ ಹೆಣ್ಣು ಮಗುವಿರುವ ಪೆಟ್ಟಿಗೆಯನ್ನು ಬೇರೆ ದೇಶದಲ್ಲಿ ಹೂತು ಬಂದರು.


ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

            ರಾವಣನ ಸೈನಿಕರು ಹೆಣ್ಣು ಮಗುವಿರುವ ಬಂಗಾರದ ಪೆಟ್ಟಿಗೆಯನ್ನು ಮಿಥಿಲಾ ದೇಶದಲ್ಲಿ ಹೂತು ಬಂದಿದ್ದರು. ಆ ದೇಶದಲ್ಲಿ ಭೀಕರ ಬರಗಾಲ ಬಿದ್ದಿದ್ದರಿಂದ ಆ ದೇಶದ ರಾಜ ಜನಕರಾಜ ಸ್ವತಃ ತಾನೇ ನೇಗಿಲು ಹಿಡಿದು ಉಳುಮೆ ಮಾಡಿ ಯಜ್ಞದ ಸಿದ್ಧತೆಗಳನ್ನು ಮಾಡುತ್ತಿದ್ದನು. ಆ ಸಮಯದಲ್ಲಿ ರಾವಣನ ಸೈನಿಕರು ಹೂತು ಹೋಗಿದ್ದ ಬಂಗಾರದ ಪೆಟ್ಟಿಗೆ ಅವರ ನೇಗಿಲನ್ನು ತಡೆಯಿತು. ಅವರು ಭೂಮಿಯನ್ನು ಅಗೆದಾಗ ಅವರಿಗೆ ಆ ಬಂಗಾರದ ಪೆಟ್ಟಿಗೆ ಸಿಕ್ಕಿತು. ಅದನ್ನು ತೆರೆದು ನೋಡಿದಾಗ ಜನಕ ರಾಜನ ಸಮೇತ ಸರ್ವರು ಆಶ್ಚರ್ಯ ಚಕಿತರಾದರು. ಜನಕರಾಜ ಸಂತಾನಕ್ಕಾಗಿ ಹಲವಾರು ಯಜ್ಞಯಾಗಾದಿಗಳನ್ನು ಮಾಡಿದ್ದನು. ಹೀಗಾಗಿ ಆತ ಭೂಮಿಯಲ್ಲಿ ಸಿಕ್ಕ ಹೆಣ್ಣು ಮಗುವನ್ನು ಪ್ರೀತಿಯಿಂದ ಎತ್ತಿಕೊಂಡು ತನ್ನ ಮಗಳಂತೆ ಸ್ವೀಕರಿಸಲು ನಿರ್ಧರಿಸಿದನು. ಜನಕರಾಜ ಹಾಗೂ ಅವನ ಮಡದಿ ಸುನೈನಾಳ ಸಾಕು ಮಗಳೇ ಸೀತೆಯಾದಳು. ಅವಳನ್ನು ಜಾನಕಿಯೆಂತಲೂ ಕರೆಯುತ್ತಾರೆ.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                  ಒಂದಿನ ಜನಕರಾಜ ತಮ್ಮ ಕುಲಗುರು ವಶಿಷ್ಟರೊಂದಿಗೆ ಆಪ್ತ ಸಮಾಲೋಚನೆಯಲ್ಲಿದ್ದಾಗ ಸೀತೆ ಸುಲಭವಾಗಿ ಶಿವ ಧನಸ್ಸನ್ನು ಎತ್ತಿ ಆಟವಾಡುತ್ತಿದ್ದಳು. ಇದನ್ನು ಗಮನಿಸಿದ ವಶಿಷ್ಟರು ಸೀತೆ ಸಾಮಾನ್ಯದವಳಲ್ಲ, ಅವಳು ದೈವಮಾನವಳು ಎಂಬ ಸತ್ಯವನ್ನು ವಿವರಿಸಿ ಆ ಶಿವಧನಸ್ಸನ್ನು ಎತ್ತಿ ಮೀಟಿದ ಶೂರನೊಂದಿಗೆ ಅವಳ ವಿವಾಹ ಮಾಡು ಎಂದು ಜನಕರಾಜನಿಗೆ ಹೇಳಿದರು. ಅದೇ ರೀತಿ ಜನಕರಾಜ ಸೀತೆ ತಾರುಣ್ಯಕ್ಕೆ ತಲುಪಿದಾಗ ಅವಳ ಸ್ವಯಂವರ ಏರ್ಪಡಿಸಿದನು. ಶ್ರೀರಾಮಚಂದ್ರ ಆ ಸ್ವಯಂವರದಲ್ಲಿ ಭಾಗವಹಿಸಿ ಆ ಬಲಿಷ್ಟವಾದ ಶಿವಧನಸ್ಸನ್ನು ಹೆದೆಯೇರಿಸಿ ಸೀತೆಯನ್ನು ವಿವಾಹವಾದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

        ರಾಮನನ್ನು ಮದುವೆಯಾಗಿ ಸೀತೆ ನೂರಾರು ಕನಸುಗಳನ್ನು ಹೊತ್ತು ಅಯೋಧ್ಯೆಗೆ ಬಂದಳು. ಆದರೆ ಮಂಥರೆಯ ಮಾತು ಕೇಳಿ ಕೈಕೆ ದಶರಥನಿಗೆ ಕೇಳಿದ ವರದಿಂದಾಗಿ ರಾಮ ಪಟ್ಟದ ರಾಜನಾಗುವ ಬದಲು ಕಾಡು ಸೇರಬೇಕಾಯಿತು. ಆದರೂ ಸೀತೆ ಖುಷಿಯಿಂದ 14 ವರ್ಷ ವನವಾಸವನ್ನು ಅನುಭವಿಸಲು ಅವನೊಂದಿಗೆ ಹೆಜ್ಜೆ ಹಾಕಿದಳು. ಆದರೆ ರಾವಣನಿಂದ ಅಪಹರಿತಳಾಗಿ ಲಂಕೆಯ ಅಶೋಕ ವನ ಸೇರಿದಳು. ಮುಂದೆ ರಾಮ ವಾನರ ಸೈನ್ಯದೊಂದಿಗೆ ಲಂಕೆಗೆ ಬಂದು ರಾವಣನನ್ನು ಸಂಹರಿಸಿ ಅವಳನ್ನು ಬಂಧಮುಕ್ತಗೊಳಿಸಿದನು. ಸೀತೆ ರಾಮನನ್ನು ಸೇರಲು ಹಂಬಲಿಸುತ್ತಿದ್ದಳು. ಆದರೆ ರಾಮ ಅವಳ ಚಾರಿತ್ರ್ಯದ ಮೇಲೆ ಸವಾಲಗಳು ಏಳಬಾರದು ಎಂಬ ಕಾರಣಕ್ಕೆ ಅವಳನ್ನು ಅಗ್ನಿ ಪರೀಕ್ಷೆಗೆ ನೂಕಿದನು. ಸಹನಾಮಯಿ, ಸದ್ಗುಣಿ ಸೀತೆ ಆ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದು ರಾಮನ ತೋಳು ಸೇರಿದಳು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

            14 ವರ್ಷ ವನವಾಸ ಮುಗಿಸಿ ಸೀತೆ ರಾಮನೊಂದಿಗೆ ಮತ್ತೆ ಅಯೋಧ್ಯೆ ಸೇರಿದಳು. ಈಗಲಾದರೂ ಸೀತೆಗೆ ಸಂತೋಷದ ಕ್ಷಣಗಳು ಸಿಕ್ಕವು ಎಂದೆನ್ನುವಷ್ಟರಲ್ಲಿ ವಿಧಿ ಮತ್ತೆ ಅವಳ ಬಾಳಲ್ಲಿ ಆಟವಾಡಿತು. ಲೋಕ ನಿಂದನೆಯನ್ನು ಕೇಳಲಾಗದೆ ರಾಮ ಮತ್ತೆ ಸೀತೆಯನ್ನು ಕಾಡು ಪಾಲು ಮಾಡಿದನು. ಸೀತೆ ಮತ್ತೆ ವನವಾಸವನ್ನು ಅನುಭವಿಸುವಂತಾಯಿತು. ರಾಮ ಅವಳನ್ನು ಕಾಡಿಗಟ್ಟಿದಾಗ ಅವಳು ಗರ್ಭಿಣಿಯಾಗಿದ್ದಳು. ಅವಳು ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ಆಶ್ರಯ ಪಡೆದಳು. ಅವಳಿಗೆ ಲವಕುಶ ಎಂಬ ಮಕ್ಕಳಾದರು. ಲವಕುಶರು ಬಾಲ್ಯದಲ್ಲಿಯೇ ಬಿಲ್ವಿದ್ಯೆಯನ್ನು ಕಲಿತು ಮಹಾನ್ ಪರಾಕ್ರಮಿಗಳಾದರು.  

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada
       
     ಶ್ರೀರಾಮಚಂದ್ರ ಅಶ್ವಮೇಧಯಾಗ ಮಾಡಲು ಒಂದು ಕುದುರೆಯನ್ನು ಬಿಟ್ಟಿದ್ದನು. ಆ ಕುದುರೆಗೆ ನಮಸ್ಕರಿಸಿ ಎಲ್ಲ ರಾಜರು ಕಪ್ಪು ಕಾಣಿಕೆಗಳನ್ನು ಕೊಟ್ಟು ರಾಮನಿಗೆ ಶರಣಾಗಿದ್ದರು. ಆದರೆ ಲವಕುಶರು ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದರು. ಸೀತೆ ಆ ಕುದುರೆಯನ್ನು ಬಿಡಲು ಹೇಳಿದರೂ ಸಹ ಅವರು ಬಿಡಲಿಲ್ಲ. ಆ ಕುದುರೆಯನ್ನು ಬಿಡಿಸಿಕೊಳ್ಳಲು ಬಂದ ಭರತ ಶತ್ರುಘ್ನರು ಲವಕುಶರಂಥ ಬಾಲಕರಿಂದ ಸೋತಾಗ ಸ್ವತಃ ರಾಮನೇ ಅಶ್ವಮೇಧಯಾಗದ ಕುದುರೆಯನ್ನು ಬಿಡಿಸಿಕೊಳ್ಳಲು ಬರಬೇಕಾಯಿತು. ತಂದೆ ಹಾಗೂ ಮಕ್ಕಳ ಯುದ್ಧವನ್ನು ನೋಡುವಷ್ಟು ಗಟ್ಟಿ ಗುಂಡಿಗೆ ಸೀತೆಗೆ ಇರಲಿಲ್ಲ. ಲವಕುಶರಿಂದಾಗಿ ರಾಮ ಕಾಡಿಗೆ ಬರುವಂತಾಯಿತು. ಅವನಿಗೆ ಲವಕುಶರು ತಮ್ಮ ಮಕ್ಕಳೆಂಬುದು ತಿಳಿಯಿತು. ಆಗ ರಾಮ ಸೀತೆಯನ್ನು ನೋಡಲು ಬಯಸಿ ಅವಳ ಕುಟೀರಕ್ಕೆ ಬಂದಾಗ ಒಮ್ಮೆಲೇ ಭೂಮಿ ಬೀರಿಯಿತು. ಭೂಮಿಯಿಂದ ಬಂದ ಸೀತೆ ಮತ್ತೆ ಭೂಮಿ ಸೇರಿದಳು...


ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

೨) ದ್ರೌಪದಿಯ ಕಥೆ : 

                       ರಾಜಾ ದ್ರುಪದನು ದ್ರೋಣಾಚಾರ್ಯರನ್ನು ಅವಮಾನಿಸಿ ದೊಡ್ಡ ಯಡವಟ್ಟನ್ನು ಮಾಡಿಕೊಂಡಿದ್ದನು. ಅದಕ್ಕಾಗಿ ಗುರು ದ್ರೋಣಾಚಾರ್ಯರು ದ್ರುಪದ ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಸದಾ ಕಾಯುತ್ತಿದ್ದರು. ಅದೇ ಸಮಯದಲ್ಲಿ ಶಿಕ್ಷಣ ಪೂರ್ಣವಾದ ಮೇಲೆ ಕೌರವರು ಮತ್ತು ಪಾಂಡವರು ಗುರು ದ್ರೋಣಾಚಾರ್ಯರಿಗೆ "ಏನು ಗುರುದಕ್ಷಿಣೆ ಕೊಡಬೇಕೆಂದು" ಕೇಳಿದರು. ಆಗವರು "ರಾಜಾ ದ್ರುಪದನನ್ನು ಹೆಡೆಮೂರಿ ಕಟ್ಟಿ ನನ್ನ ಬಳಿಗೆ ತನ್ನಿ, ಅದೇ ನೀವು ಕೊಡುವ ಗುರುದಕ್ಷಿಣೆ..." ಎಂದು ಹೇಳಿದರು. ಆಗ ಕೌರವರು ದ್ರುಪದ ರಾಜನನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದರು. ಆದರೆ ಪಾಂಡವರು ಅವನೊಂದಿಗೆ ಹೋರಾಡಿ ದ್ರುಪದರಾಜನನ್ನು ಹೇಡೆಮೂರಿ ಕಟ್ಟಿಕೊಂಡು ಕರೆ ತಂದರು. ಆಗ ಗುರು ದ್ರೋಣಾಚಾರ್ಯರು ತಮ್ಮ ಅಪಮಾನದ ಬದಲಾಗಿ ದ್ರುಪದನ ಅರ್ಧ ರಾಜ್ಯವನ್ನು ಕಿತ್ತುಕೊಂಡು ಕಳುಹಿಸಿ ತಮ್ಮ ಸೇಡನ್ನು ತೀರಿಸಿಕೊಂಡರು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                                 ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವ ಬದಲು ರಾಜಾ ದ್ರುಪದ ಅರ್ಧ ರಾಜ್ಯವನ್ನು ಕಿತ್ತುಕೊಂಡ ದ್ರೋಣಾಚಾರ್ಯರ ಮೇಲೆ ಹಲ್ಲು ಕಡೆಯಲು ಪ್ರಾರಂಭಿಸಿದನು. ಹೇಗಾದರೂ ಮಾಡಿ ಮತ್ತೆ ಗುರು ದ್ರೋಣಾಚಾರ್ಯರನ್ನು ಅವಮಾನಕ್ಕೀಡು ಮಾಡಬೇಕು, ಅವರಿಂದ ಮತ್ತೆ ತನ್ನ ಅರ್ಧ ರಾಜ್ಯವನ್ನು ಕಿತ್ತುಕೊಳ್ಳಬೇಕು ಎಂದು ಕುದಿಯತೊಡಗಿದನು. ಅದಕ್ಕಾಗಿ ಆತ ಮತ್ತಷ್ಟು ಬಲಿಷ್ಟನಾಗಲು ಯಜ್ಞ ಯಾಗಾದಿಗಳನ್ನು ಮಾಡಿದನು. ಜೊತೆಗೆ ಅಗ್ನಿದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಒಂದು ದೊಡ್ಡ ಹೋಮವನ್ನು ಆಯೋಜಿಸಿದನು. ಆಗ ಮೊದಲು ಆ ಹೋಮಕುಂಡದಿಂದ ಪರಾಕ್ರಮಶಾಲಿಯಾದ ದುಷ್ಟದುಮ್ನ ಹೊರ ಬಂದನು. ನಂತರ ಅದೇ ಹೋಮಕುಂಡದಿಂದ ಕಮಲ ನೇತ್ರದ, ಚಂದ್ರನ ಮೈಬಣ್ಣ ಹೊಂದಿದ ಸುಂದರಿ ಕ್ರಷ್ಣೆ ಹೊರ ಬಂದಳು. ಅವಳ ಸೌಂದರ್ಯ ಎಲ್ಲರನ್ನೂ ಆಯಸ್ಕಾಂತದಂತೆ ಸೆಳೆಯುತ್ತಿತ್ತು. ಆ ಕ್ರಷ್ಣೆಯೇ ಮುಂದೆ  ದ್ರೌಪದಿಯೆಂದು ಹೆಸರುವಾಸಿಯಾದಳು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                 ದ್ರೌಪದಿ ದೊಡ್ಡವಳಾದಾಗ ದ್ರುಪದ ರಾಜ ಅವಳ ಸ್ವಯಂವರವನ್ನು ಏರ್ಪಡಿಸಿದನು. ದ್ರೌಪದಿ ಕರ್ಣನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಸೂತಪುತ್ರನೆಂಬ ಅಪವಾದದಿಂದಾಗಿ ಅವನಿಗೆ ಸ್ವಯಂವರದಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಅದೇ ಸಂದರ್ಭದಲ್ಲಿ ಅಜ್ಞಾತ ವಾಸದಲ್ಲಿದ್ದ ಪಾಂಡವರು ಅವಳ ಸ್ವಯಂವರದಲ್ಲಿ ಭಾಗವಹಿಸಿದರು. ಅರ್ಜುನ   ಕೆಳಗಿಟ್ಟಿರುವ ತೈಲದಲ್ಲಿ ನೋಡಿ ಮೇಲೆ ತಿರುಗುತ್ತಿರುವ ಮೀನಿನ ಕಣ್ಣಿಗೆ ಗುರಿಯಿಟ್ಟು ಹೊಡೆದು ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದನು. ನಂತರ ದ್ರೌಪದಿ ಪಾಂಡವರೊಂದಿಗೆ ಕುಂತಿಯನ್ನು ಭೇಟಿಯಾಗಲು ಹೋದಾಗ ಆದ ಒಂದು ಸಣ್ಣ ಯಡವಟ್ಟಿನಿಂದಾಗಿ ಆಕೆ ಪಂಚ ಪಾಂಡವರನ್ನು ಮದುವೆಯಾಗಬೇಕಾಯಿತು. ಅಲ್ಲದೆ ಆಕೆ ಪೂರ್ವ ಜನ್ಮದಲ್ಲಿ ಮಾಡಿದ ಪಾಪದಿಂದಾಗಿ ಆಕೆ ಪಂಚ ಪತಿಯರನ್ನು ಮದುವೆಯಾಗಿ ಪಾಂಚಾಲಿಯಾಗಬೇಕಾಯಿತು. ಪೂರ್ವ ಜನ್ಮದಲ್ಲಿ ಆಕೆ ಸರ್ವಗುಣಗಳಿರುವ ಪತಿ ಬೇಕೆಂದು ಶಿವನನ್ನು ಕುರಿತು ತಪಸ್ಸು ಮಾಡಿದ್ದಳು. ಆದರೆ ಸರ್ವಗುಣಗಳು ಒಬ್ಬನಲ್ಲಿರುವ ಸಾಧ್ಯವಿಲ್ಲ. ಆದ್ದರಿಂದ ಆಕೆ ಸರ್ವಗುಣಗಳನ್ನು ಹೊಂದಿರುವ ಪಂಚ ಪಾಂಡವರ ಪತ್ನಿಯಾಗಬೇಕಾಯಿತು. ಅದಕ್ಕಾಗಿ ಶಿವ ಆಕೆಗೆ ಪವಿತ್ರವಾಗಿದ್ದುಕೊಂಡು ಸಂಸಾರ ಸಾಗಿಸಲು ಶಾಶ್ವತವಾಗಿ ಕಳೆದು ಹೋಗದ ಕನ್ಯತ್ವದ ವರ ನೀಡಿದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                             ದ್ರೌಪದಿ ಪಂಚ ಪಾಂಡವರ ಮುದ್ದಿನ ಪತ್ನಿಯಾಗಿ ಸಂತೋಷವಾಗಿದ್ದಳು. ಆದರೆ ಆಕೆ ಇಂದ್ರಪ್ರಸ್ಥದ ಅರಮನೆಯಲ್ಲಿ ಅನಾವಶ್ಯಕವಾಗಿ ದುರ್ಯೋಧನನನ್ನು ಕುರುಡು ತಂದೆಯ ಕುರುಡು ಮಗನೆಂದು ಅವಮಾನಿಸಿ ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಿದಳು. ದ್ರೌಪದಿಯ ಕೊಂಕು ನಗುವಿನಿಂದಾಗಿ ದುರ್ಯೋಧನ ದುಷ್ಟನಾದನು. ಮುಂದೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದುಶ್ಯಾಸನ ತುಂಬಿದ ಸಭೆಯಲ್ಲಿ ಅವಳ ಸೀರೆಯನ್ನು ಸೆಳೆಯಲು ಹೆಣಗಿ ಸೋತನು. ನಂತರ ದ್ರೌಪದಿ ದುಶ್ಯಾಸನನ ಎದೆಬಗೆದ ರಕ್ತವನ್ನು ನೋಡುವ ತನಕ ಮೂಡಿ ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಮಹಾಭಾರತ ಯುದ್ಧಕ್ಕೆ ತುಪ್ಪ ಸುರಿದಳು. ಪಾಂಡವರ ಮತ್ತು ಕೌರವರ ಮಧ್ಯೆ ಇದೇ ರೀತಿ ವೈಷಮ್ಯಗಳು ಮುಂದುವರೆದು ಒಂದಿನ ಕುರುಕ್ಷೇತ್ರದಲ್ಲಿ ಮಹಾಭಾರತ ಯುದ್ಧ ಘೋಷಣೆಯಾಯಿತು. 18 ದಿನ ನಡೆದ ಮಹಾಭಾರತ ಯುದ್ಧದಲ್ಲಿ ಕೌರವರು ಮಣ್ಣು ಪಾಲಾಗಿದ್ದನ್ನು ನೋಡಿ ದ್ರೌಪದಿ ಖುಷಿಪಟ್ಟಳು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                   ಮಹಾಭಾರತ ಯುದ್ಧ ಮುಗಿದ ನಂತರ ಕೆಲವು ವರ್ಷಗಳ ಕಾಲ ರಾಜ್ಯಭಾರ ಮಾಡಿ ಪಾಂಡವರು ದೇಹ ಸಮೇತ ಸ್ವರ್ಗಕ್ಕೆ ತೆರಳಲು ಸಿದ್ಧರಾದರು. ಪಾಂಡವರು ಎಲ್ಲ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಸ್ವರ್ಗಕ್ಕೆ ಪ್ರವೇಶಿಸಲು ಕೈಲಾಸ ಪರ್ವತವನ್ನು ಹತ್ತುವಾಗ ಮೊದಲು ದ್ರೌಪದಿಯ ಪ್ರಾಣ ಹೋಯಿತು. ಏಕೆಂದರೆ ಆಕೆ ಪಂಚ ಪತಿಯರಲ್ಲಿ ಅರ್ಜುನನನ್ನು ಹೆಚ್ಚಾಗಿ ಪ್ರೀತಿಸಿದ್ದಳು ಮತ್ತು ಕರ್ಣನನ್ನು ಗುಟ್ಟಾಗಿ ಬಯಸಿದ್ದಳು. ಅಲ್ಲದೆ ಮುತ್ತೈದೆಯಾಗಿ ಸಾಯುವ ಸೌಭಾಗ್ಯ ಬಯಸಿದ್ದರಿಂದ ಯಮ ಮೊದಲು ಆಕೆಯ ಪ್ರಾಣವನ್ನು ತೆಗೆದುಕೊಂಡನು. ಮುಂದೆ ಒಂದೊಂದು ಕಾರಣಗಳಿಗಾಗಿ ಎಲ್ಲರ ಪ್ರಾಣಗಳು ಯಮನಿಗೆ ಆಹುತಿಯಾದವು. ಧರ್ಮರಾಜ ಮಾತ್ರ ದೇಹ ಸಮೇತ ಸ್ವರ್ಗಕ್ಕೆ ಹೋದನು. ಈ ರೀತಿ ದ್ರೌಪದಿಯಿಂದಾಗಿ ಮಹಾಭಾರತ ಯುದ್ಧವಾಗಿ ಎಲ್ಲರಿಗೂ ಒಂದು ಜೀವನ ಪಾಠ ಕಲಿಯುವಂತಾಯಿತು...

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

೩) ಮಂಡೋದರಿಯ ಕಥೆ :

   ಮಧುರಾ ಎಂಬ ಸುಂದರವಾದ ಅಪ್ಸರೆಯಿದ್ದಳು. ಅವಳು ಶಿವನ ಮೇಲೆ ಮೋಹಿತಳಾಗಿ ಶಿವನನ್ನೇ ಮದುವೆಯಾಗುವ ಮನಸ್ಸು ಮಾಡಿದಳು. ಅದಕ್ಕಾಗಿ 16 ಸೋಮವಾರ ವ್ರತವನ್ನು ಮಾಡಿ ಶಿವನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ವ್ರತ ಅವಳಿಗೆ ಫಲ ಕೊಡದಿದ್ದಾಗ ಆಕೆ ಕೈಲಾಸ ಪರ್ವತಕ್ಕೆ ಹೋದಳು. ಪಾರ್ವತಿ ಇಲ್ಲದ ಸಮಯವನ್ನು ನೋಡಿಕೊಂಡು ಶಿವನನ್ನು ತನ್ನೆಡೆಗೆ ಸೆಳೆಯಲು ಮುಂದಾದಳು. ಆದರೆ ಅವಳ ದುರಾದೃಷ್ಟಕ್ಕೆ ಪಾರ್ವತಿ ದೇವಿ ಅಲ್ಲಿಗೆ ಬಂದಳು. ತನ್ನ ಗಂಡನನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಮೂರ್ಖ ಅಪ್ಸರೆಯನ್ನು ಕಂಡು ಕೆರಳಿ ಕೆಂಡಾಮಂಡಲವಾದಳು. ಕೋಪದಲ್ಲಿ ಆ ಅಪ್ಸರೆಗೆ ಕಪ್ಪೆಯಾಗಿರುವಂತೆ ಶಾಪವಿಟ್ಟಳು. ಶಿವ ಪಾರ್ವತಿಯ ಕೋಪವನ್ನು ಕಡಿಮೆ ಮಾಡಿ ಅಪ್ಸರೆ ಮಧುರಾಗೆ "ನೀನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ನೀನು ಮತ್ತೆ ಮೊದಲಿನಂತೆ ಸುಂದರವಾದ ಹೆಣ್ಣಾಗುವೆ ಮತ್ತು ಅತ್ಯಂತ ಪರಾಕ್ರಮಿಶಾಲಿಯಾದ ರಾಜನನ್ನು ಮದುವೆಯಾಗುವೆ..." ಎಂಬ ವರವನ್ನು ನೀಡಿ ಕಳುಹಿಸಿದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

    ಪಾರ್ವತಿಯ ಶಾಪದಿಂದಾಗಿ ಮಧುರಾ 12 ವರ್ಷಗಳ ಕಾಲ ಕಾಡಿನ ಬಾವಿಯಲ್ಲಿ ಕಪ್ಪೆಯಾಗಿರಬೇಕು. ಅಸುರರ ರಾಜನಾದ ಮಾಯಾಸುರನು ತನ್ನ ಪತ್ನಿಯಾದ ಹೇಮಾಳೊಡನೆ ಹೆಣ್ಣು ಸಂತಾನಕ್ಕಾಗಿ ಶಿವ ಪೂಜೆ ಮಾಡುತ್ತಿದ್ದನು. ಒಂದಿನ ಆತ ಶಿವಪೂಜೆ ಮಾಡುವುದಕ್ಕಾಗಿ ಬಾವಿನಿಂದ ನೀರನ್ನು ತಂದು ಶಿವಲಿಂಗದ ಮೇಲೆ ಹಾಕುವಾಗ ಕಪ್ಪೆಯ ರೂಪದಲ್ಲಿದ್ದ ಮಧುರಾ ಸುಂದರ ಹೆಣ್ಣಾಗಿ ಜನ್ಮ ತಾಳಿದಳು. ಶಿವನ ವರಪ್ರಸಾದವೆಂದು ತಿಳಿದು ಮಾಯಾಸುರ ಹಾಗೂ ಹೇಮಾ ಆ ಹೆಣ್ಣನ್ನು ತಮ್ಮ ಮಗಳಾಗಿ ಸ್ವೀಕರಿಸಿದರು. ಕಪ್ಪೆಯ ಜನ್ಮದಿಂದ ಮುಕ್ತಳಾಗಿ ಮಾಯಾಸುರನ ಮಗಳಾದಾಗ ಮಧುರಾ ಮಂಡೋಧರಿಯಾದಳು. ಒಂದಿನ ರಾವಣ ಮಾಯಾಸುರನ ಅರಮನೆಗೆ ಬಂದಾಗ ಆತ ಮಂಡೋಧರಿಯ ಸೌಂದರ್ಯಕ್ಕೆ ಸೋತು ಅವಳನ್ನು ಮದುವೆಯಾಗಲು ನಿರ್ಧರಿಸಿದನು. ಆದರೆ ಅವನ ಅವಗುಣಗಳ ಬಗ್ಗೆ ತಿಳಿದಿದ್ದ ಮಂಡೋದರಿ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಆದರೆ ರಾಕ್ಷಸ ರಾವಣ ಮಂಡೋಧರಿಯನ್ನು ಬಲವಂತವಾಗಿ ವಿವಾಹವಾದನು. 

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                 ರಾಕ್ಷಸರ ರಾಜ ರಾವಣನನ್ನು ಮದುವೆಯಾದಾಗ ಮಂಡೋದರಿ ಬಂಗಾರದ ಲಂಕೆಗೆ ರಾಣಿಯಾದಳು. ಆಕೆ ರಾವಣನನ್ನು ಹೆಜ್ಜೆಹೆಜ್ಜೆಗೂ ತಿದ್ದಲು ಪ್ರಯತ್ನಿಸಿದಳು. ಆದರೆ ರಾವಣ ಅವಳ ಮಾತಿಗೆ ಕಿವಿ ಕೊಡದೆ ಸೀತೆಯನ್ನು ಅಪಹರಿಸಿ ರಾಮನಿಂದ ಮಡಿದು ಮಣ್ಣು ಸೇರಿದನು. ರಾವಣನ ನಿಧನದ ನಂತರ ಮಂಡೋಧರಿ ರಾಮನ ಸಲಹೆಯ ಮೇರೆಗೆ ವಿಭಿಷಣನನ್ನು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಿದಳು. ರಾವಣನಿಂದ ನರಕವಾಗಿದ್ದ ಲಂಕೆ ಕೊನೆಗಾಲದಲ್ಲಿ ಮಂಡೋಧರಿಯಿಂದಾಗಿ ಸ್ವರ್ಗವಾಯಿತು...


ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

೪) ತಾರೆಯ ಕಥೆ : 


   ಬ್ರಹ್ಮನ ಮಗನಾದ ಅತ್ರಿಮುನಿಯ ಕಣ್ಣುಗಳಿಂದ ಹಾಲಿನಂಥ ಮೈಬಣ್ಣ ಹೊಂದಿದ ಚಂದ್ರ ಜನಿಸಿದನು. ಆತ ಪರಾಕ್ರಮಿಯಾಗಿರುವುದರಿಂದ ಬ್ರಹ್ಮ ಚಂದ್ರನನ್ನು ಗ್ರಹಗಳ ಹಾಗೂ ನಕ್ಷತ್ರಗಳ ರಾಜನನ್ನಾಗಿ ನೇಮಿಸಿದನು. ಆದರೆ ಪರಾಕ್ರಮಿಯಾದ ಚಂದ್ರ ಮೂರು ಲೋಕಗಳನ್ನು ಜಯಿಸಿ ರಾಜಸೂಯ ಯಾಗವನ್ನು ಮಾಡಿದನು. ಮೂರು ಲೋಕಗಳ ಮೇಲೆ ಹಿಡಿತ ಸಾಧಿಸಿರುವುದರಿಂದ ಚಂದ್ರನಲ್ಲಿ ಒಣ ಅಹಂಕಾರ ಹೆಚ್ಚಾಗಿತ್ತು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಯಾರಿಲ್ಲವೆಂದು ಆತ ಮೆರೆಯುತ್ತಿದ್ದನು. ಅಲ್ಲದೇ ಚಂದ್ರನಲ್ಲಿ ಪ್ರೇಮ ಕಾಮಗಳ ಪ್ರಖರತೆ ಮೊದಲಿನಿಂದಲೂ ಅತ್ಯಧಿಕವಾಗಿತ್ತು. ಆತನ ಹೊಳೆಯುವ ಕಂಗಳು, ಹಾಲಿನಂಥ ಮೈಬಣ್ಣ, ಕ್ಷಾತ್ರ ತೇಜಸ್ಸಿಗೆ ಯಾವ ಸ್ತ್ರೀಯಾದರೂ ಸುಲಭವಾಗಿ ಸೋಲುತ್ತಿದ್ದಳು. ಆತ 27 ನಕ್ಷತ್ರಗಳನ್ನು ವಿವಾಹವಾದನು. 27 ಜನ ಮಡದಿಯರಲ್ಲಿ ರೋಹಿನಿ ಅವನಿಗೆ ಹೆಚ್ಚು ಮುದ್ದಿನವಳಾಗಿದ್ದಳು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                        ದಿನ ಕಳೆದಂತೆ ಚಂದ್ರನ ಅಹಂಕಾರ ಹೆಚ್ಚಾಗುತ್ತಲೇ ಹೋಯಿತು. ಆತ ದೇವತೆಗಳ ಗುರುವಾದ ಬ್ರಹಸ್ಪತಿಯ ಹೆಂಡತಿ ತಾರೆಯ ಮೇಲೆ ಮೋಹಿತನಾದನು. ಅವಳಂದಕ್ಕೆ ಆಕರ್ಷಿತನಾಗಿ ಆತ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಈ ಮೂರು ಲೋಕಗಳಲ್ಲಿ ಯಾರು ಇಲ್ಲ ಎಂಬ ಮೊಂಡು ಧೈರ್ಯದ ಮೇಲೆ ಚಂದ್ರ ತಾರೆಯನ್ನು ಬಲವಂತವಾಗಿ ಹೊತ್ತುಕೊಂಡು ಹೋದನು. ಬ್ರಹಸ್ಪತಿ ನಾನಾ ರೀತಿಯಲ್ಲಿ ತನ್ನ ಹೆಂಡತಿಯನ್ನು ಮರಳಿ ಕೊಡುವಂತೆ ಎಷ್ಟೇ ಕೇಳಿಕೊಂಡರು ಸಹ ಚಂದ್ರ ತಾರೆಯನ್ನು ಬಿಟ್ಟು ಕೊಡಲಿಲ್ಲ. ಆತ ತಾರೆಯನ್ನು ತನ್ನ ವಶದಲ್ಲೇ ಇಟ್ಟುಕೊಂಡನು. ಇದರಿಂದಾಗಿ ಗುರು ಮತ್ತು ಚಂದ್ರರ ನಡುವೆ ವೈಷಮ್ಯ ಬೆಳೆಯಿತು. ಶಿವನ ಸಹಿತ ದೇವತೆಗಳೆಲ್ಲರು ಗುರುವಿನ ಬೆಂಬಲಕ್ಕೆ ನಿಂತರು. ತಮ್ಮ ಗುರು ಶುಕ್ರಾಚಾರ್ಯರೊಂದಿಗೆ ರಾಕ್ಷಸರೆಲ್ಲ ಚಂದ್ರನ ಬೆಂಬಲಕ್ಕೆ ನಿಂತರು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                  ತಾರೆಗಾಗಿ ಗುರು ಹಾಗೂ ಚಂದ್ರನ ನೇತ್ರತ್ವದಲ್ಲಿ ದೇವ ದಾನವರ ನಡುವೆ ಭಯಂಕರ ಯುದ್ಧ ಪ್ರಾರಂಭವಾಯಿತು. ಈ ಯುದ್ಧದ ಭೀಕರ ಪರಿಣಾಮವನ್ನು ನೋಡಲಾಗದೆ ಗುರುವಿನ ತಂದೆಯಾದ ಅಂಗೀರಸ ಮುನಿಗಳು ಬ್ರಹ್ಮನ ಬಳಿ ಹೋಗಿ ಹೇಗಾದರೂ ಮಾಡಿ ದೇವ ದಾನವರ ಯುದ್ಧವನ್ನು ನಿಲ್ಲಿಸಲು ಸೂಚಿಸಿದನು. ಆಗ ಸ್ವತಃ ಬ್ರಹ್ಮನೇ ಖುದ್ದಾಗಿ ಯುದ್ಧಭೂಮಿಗೆ ಬಂದು ಚಂದ್ರನಿಗೆ ಧಿಕ್ಕಾರ ಹಾಕಿ ತಾರೆಯನ್ನು ಬ್ರಹಸ್ಪತಿಯ ವಶಕ್ಕೆ ಒಪ್ಪಿಸಿದನು. ಆದರೆ ಅಷ್ಟೊತ್ತಿಗೆ ತಾರೆ ಗರ್ಭವತಿಯಾಗಿದ್ದಳು. ಈ ವಿಷಯ ತಿಳಿದು ಗುರು ಕೆರಳಿ ಕೆಂಡಾಮಂಡಲವಾದನು. "ನೀನು ಈ ಕ್ಷಣವೇ ಗರ್ಭಪಾತ ಮಾಡಿಕೋ ಇಲ್ಲವಾದರೆ ನಿನ್ನನ್ನು ಸುಟ್ಟು ಬಿಡುವೆ..." ಎಂದು ಗುರು ಗುಡುಗಿದನು. ಆದರೆ ಸ್ವಲ್ಪ ಸಮಯದ ನಂತರ ಗುರುವಿನ ಕೋಪ ತಣ್ಣಗಾದಾಗ "ಗಂಡು ಮಗುವಾದರೆ ನಿನ್ನನ್ನು ಕ್ಷಮಿಸುವೆ..." ಎಂದೇಳಿ ಶಾಂತನಾದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                   ತಾರೆಯ ಮಹಾಮೌನ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಆಗ ಆಗತಾನೇ ಜನಿಸಿದ ಮಗು ತಾರೆಗೆ "ಏ ನಡತೆ ಗೆಟ್ಟವಳೇ, ನಡೆದಿರುವುದನ್ನು ನಡೆದಂತೆ ಹೇಳು. ಯಾಕೆ ಸುಮ್ಮನಿರುವೆ?" ಎಂದು ಗದರಿಸಿತು. ಆ ಮಗುವಿನ ಮಾತಿನಿಂದ ತಾರೆಗೆ ಕೋಪ ಉಕ್ಕಿ ಬಂತು. ಆಗ ತಾರೆ ಕೋಪದಲ್ಲಿ ಚಂದ್ರನೇ ಆ ಮಗುವಿನ ತಂದೆ ಎಂದೇಳಿ ತನ್ನ ತಪ್ಪನ್ನು ಒಪ್ಪಿಕೊಂಡಳು. ತಾರೆ ಚಂದ್ರನ ಪ್ರೇಮ ಬಾಣಗಳಿಗೆ ವಿರುದ್ಧವಾಗಿ ಹೋರಾಡಲಾಗದೆ ತನ್ನ ಮೈಯೊಪ್ಪಿಸಿ ಶರಣಾಗಿದ್ದಳು. ಕೊನೆಗೆ ಬ್ರಹ್ಮ, ತಾರೆ ಮತ್ತು ಚಂದ್ರನೇ ಆ ಬುದ್ಧಿವಂತ ಮಗುವಿನ ಜನಕರೆಂದು ಸಾರಿದನು. ನಂತರ ಆ ಬುದ್ಧಿವಂತ ಮಗುವಿಗೆ ಬುಧನೆಂದು ಹೆಸರಿಟ್ಟರು. ಮುಂದೆ ತಾರೆ ನಡೆದಿದ್ದನ್ನೆಲ್ಲ ಮರೆತು ಗಂಡನಾದ ಬ್ರಹಸ್ಪತಿಯ ಸೇವೆ ಮಾಡಿ ಪತಿವ್ರತೆ ಎಂಬ ಹೆಸರನ್ನು ಸಂಪಾದಿಸಿದಳು....

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

೫) ಅಹಲ್ಯಳ ಕಥೆ : 

        ದೇವಲೋಕದಲ್ಲಿ ತಾನೇ ಬಹು ಸುಂದರಿ ಎಂಬ ಅಹಂ ಊರ್ವಶಿಯ ತಲೆ ಸೇರಿತ್ತು. ಅವಳ ಸೊಕ್ಕನ್ನು ಅಡಗಿಸುವುದಕ್ಕಾಗಿ ಬ್ರಹ್ಮ ಓರ್ವ ಅಪರೂಪದ ಸುಂದರಿಯನ್ನು ಸೃಷ್ಟಿಸಲು ಮುಂದಾದನು. ಬ್ರಹ್ಮ ಬಹಳಷ್ಟು ತಲೆ ಉಪಯೋಗಿಸಿ ನೀರಿನಿಂದ ಓರ್ವ ಸುಂದರಿಯನ್ನು ಸೃಷ್ಟಿಸಿದನು. ಜಗತ್ತಿನಲ್ಲಿರುವ ಎಲ್ಲ ಸುಂದರ ವಸ್ತುಗಳ ಸೌಂದರ್ಯವನ್ನು ಹೊಸೆದು ಆ ಸುಂದರಿಯ ದೇಹದ ಪ್ರತಿಯೊಂದು ಅಂಗ ಅಂಗಗಳಲ್ಲಿ ಸೇರಿಸಿದನು. ಅವಳಲ್ಲಿ ಕುರೂಪತನದ ಒಂದು ಕಳೆಯೂ ಇರಲಿಲ್ಲ. ಅದಕ್ಕಾಗಿ ಅವಳಿಗೆ ಅಹಲ್ಯ ಎಂದು ಹೆಸರಿಟ್ಟನು. ಅಹಲ್ಯ ನಿಜಕ್ಕೂ ಮನಮೋಹಕ ಸುಂದರಿಯಾಗಿದ್ದಳು. ಅದಕ್ಕಾಗಿ ಬ್ರಹ್ಮ ಅವಳು ತಾರುಣ್ಯ ತಲುಪುವವರೆಗೆ ಅವಳನ್ನು ಗೌತಮ ಮಹರ್ಷಿಯ ಆಶ್ರಮಲ್ಲಿರಿಸಿದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

    ಅಹಲ್ಯ ಗೌತಮ ಮಹರ್ಷಿಯ ಸುಂದರವಾದ ಆಶ್ರಮದಲ್ಲಿ ಹಾಡಿ ನಲಿಯುತ್ತಾ ತಾರುಣ್ಯ ತಲುಪಿದಳು. ಅವಳು ಋತುಮತಿಯಾದಾಗ ಗೌತಮ ಮಹರ್ಷಿ ಅವಳನ್ನು ಬ್ರಹ್ಮನ ವಶಕ್ಕೊಪ್ಪಿಸಿ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದನು. ಗೌತಮನ ನಿಯತ್ತಿಗೆ ಬ್ರಹ್ಮ ಮನಸೋತನು. ಅಹಲ್ಯಳಂಥ ಸುಂದರಿಯನ್ನು ಸಂರಕ್ಷಿಸಿ ಸುರಕ್ಷಿತವಾಗಿ ತನ್ನ ಬಳಿ ಮರಳಿ ಕರತಂದಿದ್ದಕ್ಕೆ ಬ್ರಹ್ಮ ಗೌತಮ ಮಹರ್ಷಿಯನ್ನು ಹಾಡಿ ಹೊಗಳಿದನು. ಅವನ ಪ್ರಾಮಾಣಿಕತೆಯನ್ನು ಮೆಚ್ಚಿ ಅಹಲ್ಯಳನ್ನು ಅವನಿಗೆ ಕಾಣಿಕೆಯಾಗಿ ನೀಡಿದನು. ಆದರೆ ಬ್ರಹ್ಮನ ಈ ನಿರ್ಧಾರಕ್ಕೆ ದೇವತೆಗಳ ರಾಜ ದೇವೇಂದ್ರ ಸಮ್ಮತಿಸಲಿಲ್ಲ. ಜಗತ್ತಿನಲ್ಲಿರುವ ಪ್ರತಿಯೊರ್ವ ಸುಂದರ ಹೆಣ್ಣು ಬರೀ ನನ್ನ ಸೊತ್ತು ಎಂಬುದು ದೇವೇಂದ್ರನ ವಾದವಾಗಿತ್ತು. ಅವನ ಮೊಂಡುವಾದದಿಂದಾಗಿ ಬ್ರಹ್ಮ ಅಹಲ್ಯಳ ಸ್ವಯಂವರವನ್ನು ಏರ್ಪಡಿಸಿದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                      ದೇವಲೋಕದ ಸುರ ಅಸುರರು ಅಹಲ್ಯಳಿಗಾಗಿ ಪರಿತಪಿಸುತ್ತಿದ್ದರು. ಏಕೆಂದರೆ ಅವಳು ಸುರಸುಂದರಿಯರಿಗಿಂತಲೂ ಸುಂದರವಾಗಿದ್ದಳು. ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಹಗಲು ರಾತ್ರಿ ಹಂಬಲಿಸುತ್ತಿದ್ದನು. ಅವಳನ್ನು ಮನಸೋಯಿಚ್ಛೆ ಅನುಭವಿಸಲು ಪ್ರತಿಕ್ಷಣ ಚಟಪಡಿಸುತ್ತಿದ್ದನು. ದೇವೇಂದ್ರನ ಸಮೇತ ಎಲ್ಲರ ಕಣ್ಣುಗಳು ಅಹಲ್ಯಳ ಮೇಲಿದ್ದವು. ಒಂದಿನ ಬ್ರಹ್ಮ ಅವಳ ಸ್ವಯಂವರವನ್ನು ಏರ್ಪಡಿಸಿದನು. ಯಾರು ಮೊದಲು ಮೂರು ಲೋಕಗಳನ್ನು ಪ್ರದಕ್ಷಿಣೆ ಹಾಕಿ ಮರಳಿ ಬರುವರೋ ಅಹಲ್ಯ ಅವರ ಸ್ವತ್ತಾಗುತ್ತಾಳೆಂದು ಘೋಷಿಸಿದನು. ಇಂದ್ರ ತ್ರಿಲೋಕ ಪ್ರದಕ್ಷಿಣೆಗೆ ಹೊರಟು ಹೋದ ನಂತರ ಗೌತಮ ಮಹರ್ಷಿಯು ಕರುವಿಗೆ ಜನ್ಮ ನೀಡುತ್ತಿದ್ದ ಕಾಮಧೇನುವಿಗೆ ಪ್ರದಕ್ಷಿಣೆ ಹಾಕಿ ಸ್ವಯಂವರದಲ್ಲಿ ಗೆದ್ದು ಅಹಲ್ಯಯನ್ನು ವರಿಸಿದನು. ಏಕೆಂದರೆ ವೇದಗಳ ಪ್ರಕಾರ ಕಾಮಧೇನು ಮೂರು ಲೋಕಗಳಿಗೆ ಸಮವಾಗಿತ್ತು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

     ಅಹಲ್ಯ ಗೌತಮನ ಕೈಹಿಡಿದು ಮಿಥಿಲೆಯಲ್ಲಿರುವ ಅವನಾಶ್ರಮಕ್ಕೆ ಬಂದಳು. ಗೋದಾವರಿ ನದಿ ತಟದಲ್ಲಿದ್ದ ಆ ಆಶ್ರಮ ಅಹಲ್ಯಳ ಪಾದಸ್ಪರ್ಶದಿಂದ ಪಾವನವಾಯಿತು. ಅಹಲ್ಯಳಂಥ ಸುಂದರಿ ಗೌತಮನ ಸತಿಯಾಗಿ ಬಂದಿದ್ದರಿಂದ ಆಶ್ರಮದ ಸೌಂದರ್ಯ ಮತ್ತಷ್ಟು ಹೆಚ್ಚಾಯಿತು. ತನಗಿಂತಲೂ ವಯಸ್ಸಿನಲ್ಲಿ ಎಷ್ಟೋ ವರ್ಷ ಹಿರಿಯನಾಗಿರುವ ಗೌತಮನನ್ನು ಅಹಲ್ಯ ಮನಸ್ಸಪೂರ್ವಕವಾಗಿ ಒಪ್ಪಿಕೊಂಡು ತನ್ನನ್ನು ಸಂಪೂರ್ಣವಾಗಿ ಅವನಿಗೆ ಸಮರ್ಪಿಸಿಕೊಂಡಳು. ಸ್ವಚ್ಛ ಮನಸ್ಸಿನಿಂದ ತನ್ನ ಸತಿಧರ್ಮವನ್ನು ನಿಭಾಯಿಸಿ ಪಂಚ ಪತಿವ್ರತೆಯರಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದಳು. ಆಕೆ ಕಾಯಾ ವಾಚಾ ಮನಸಾ ತನ್ನ ಪತಿಯನ್ನು ಆದರಿಸುತ್ತಿದ್ದಳು. ಆದರೆ ದೇವೇಂದ್ರನ ವಕ್ರದೃಷ್ಟಿ ಇನ್ನು ಅವಳ ಮೇಲೆಯೇ ನೆಟ್ಟಿತ್ತು. ಏನಾದರೂ ಅಹಲ್ಯಳನ್ನು ಒಂದು ಸಲ ಅನುಭವಿಸಲೇಬೇಕು ಎಂಬ ಹಠದಲ್ಲಿ ಅವನಿದ್ದನು. 

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

      ದೇವೇಂದ್ರನಲ್ಲಿ ಕಪಟತನಕ್ಕೇನು ಕೊರತೆಯಿರಲಿಲ್ಲ. ಆತ ಗೌತಮನ ದಿನಚರಿಯನ್ನು ಅಧ್ಯಯನ ಮಾಡಿ ಗೌತಮ ದಿನನಿತ್ಯ ಮುಂಜಾನೆ ಸುರ್ಯೋದಯಕ್ಕಿಂತ ಮುಂಚೆ ಸಂಧ್ಯಾವಂದನೆಗಾಗಿ ನದಿಗೆ ತೆರಳುತ್ತಾನೆ, ಆ ಸಮಯದಲ್ಲಿ ಆಶ್ರಮದಲ್ಲಿ ಅಹಲ್ಯ ಒಬ್ಬಳೇ ಇರುತ್ತಾಳೆ ಎಂಬುದನ್ನು ಕಂಡುಕೊಂಡನು. ತನ್ನ ಕಪಟ ಯೋಜನೆಯಂತೆ ದೇವೇಂದ್ರ ಮಧ್ಯರಾತ್ರಿ ಕೋಳಿಯನ್ನು ಕೂಗಿಸಿ ಗೌತಮನನ್ನು ನದಿಯೆಡೆಗೆ ಹೋಗುವಂತೆ ಮಾಡಿದನು. ನಂತರ ಚಂದ್ರನಿಗೆ  ಮುಂಜಾನೆಯ ತನಕ ಮರೆಯಲ್ಲಿರಲು ಕೇಳಿಕೊಂಡು ಆಶ್ರಮಕ್ಕೆ ಕಾಲಿಟ್ಟನು. ಆಶ್ರಮದಲ್ಲಿ ಗೌತಮನಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ತನ್ನ ಮಾಯಾಶಕ್ತಿಯನ್ನು ಬಳಸಿಕೊಂಡು ಗೌತಮನ ಮಾರುವೇಷ ಧರಿಸಿ ಅಹಲ್ಯಳ ಕೋಣೆ ಸೇರಿದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

                      ಮಂದಸ್ಮಿತಳಾಗಿ ಮಲಗಿದ್ದ ಅಹಲ್ಯಳ ನಿದ್ರಾಭಂಗ ಮಾಡಿದ ದೇವೇಂದ್ರ ಅವಳಂದವನ್ನು ವರ್ಣಿಸಲು ಪ್ರಾರಂಭಿಸಿದನು. ಮೊದಮೊದಲು ಅವಳಿಗೆ ದೇವೇಂದ್ರನ ಕಪಟತನ ತಿಳಿಯಲಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಅವಳಿಗೆ ದೇವೇಂದ್ರನ ಸಂಚು ಅರ್ಥವಾಯಿತು. ಆದರೆ ದೇವೇಂದ್ರ ಅವಳನ್ನು ಹಾಗೆಯೇ ವರ್ಣಿಸುತ್ತಾ ಅವಳನ್ನು ಮರಳು ಮಾಡಿದನು. ಅಳತೆಕಟ್ಟಿನ ಶರೀರದ, ಸಪೂರ ಸೊಂಟದ ಸುಂದರಿ ನೀನೊಬ್ಬಳೇ ಎಂದು ವರ್ಣಿಸಿ ಅವಳನ್ನು ಸಂಪೂರ್ಣವಾಗಿ ತನ್ನ ಕೈವಶಮಾಡಿಕೊಂಡನು. ದೇವೇಂದ್ರ ಇಷ್ಟೆಲ್ಲ ಹರಸಾಹಸ ಮಾಡಿ ಅವಳನ್ನು ಹುಡುಕಿಕೊಂಡು ಬಂದಿದ್ದರಿಂದ ಅವಳಿಗೆ ತಾನೇ ವಿಶ್ವಸುಂದರಿಯೆಂಬ ಅಹಂ ತಲೆಸೇರಿತು. ಅವಳು ತನ್ನ ಸೌಂದರ್ಯದ ಮೇಲೆ ಒಣಜಂಭಪಟ್ಟುಕೊಂಡು ಗೌತಮನ ಮಾರುವೇಷದಲ್ಲಿದ್ದ ದೇವೇಂದ್ರನಿಗೆ ಶರಣಾದಳು. 

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

 ಸ್ವತಃ ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಸ್ವರ್ಗದಿಂದ ಧರೆಗಿಳಿದು ಬಂದಿದ್ದಕ್ಕೆ ಅವಳು ತನ್ನ ಮೇಲೆ ಅಭಿಮಾನಪಟ್ಟಳು. ದೇವೇಂದ್ರನ ಕಾಮದ ಕಳ್ಳ ಕೋರಿಕೆಯನ್ನು ಧಿಕ್ಕರಿಸುವ ಧೈರ್ಯ ಅಹಲ್ಯಳಲ್ಲಿರಲಿಲ್ಲ. ಅಲ್ಲದೆ ದೇವೇಂದ್ರ ದೇವತೆಗಳ ರಾಜನಾಗಿರುವುದರಿಂದ ಆತ ಗೌತಮನ ಕೋಪದಿಂದ ತನ್ನನ್ನು ಕಾಪಾಡಬಲ್ಲನು ಎಂಬ ಮೊಂಡು ಧೈರ್ಯದ ಮೇಲೆ ಅಹಲ್ಯ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. ಆತ ಮಧ್ಯರಾತ್ರಿಯಿಂದ ಮುಂಜಾನೆ ತನಕ ಅವಳನ್ನು ಮನಬಂದಂತೆ ಅನುಭವಿಸಿ ತನ್ನಾಸೆಯನ್ನು ತೀರಿಸಿಕೊಂಡನು. ಅವಳ ಪ್ರತಿ ಅಂಗಾಂಗಗಳಲ್ಲಿ ಸೌಂದರ್ಯ ಅಡಗಿತ್ತು. ಅವಳು ಪ್ರತಿ ಅಂಗದಿಂದಲೂ ಪರಮ ಸುಂದರಿಯಾಗಿದ್ದಳು. ಅವಳನ್ನು ಸಂತೃಪ್ತನಾಗುವ ತನಕ ಅನುಭವಿಸಿದ ದೇವೇಂದ್ರ ಮುಂಜಾನೆ ಅವಳನ್ನು ಹಾಗೆಯೇ ಬಿಟ್ಟು ಹೊರಡಲು ಸಿದ್ಧನಾದನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

          ಅಹಲ್ಯಳ ಸನ್ನೆಯ ಮೇರೆಗೆ ದೇವೇಂದ್ರ ಅವಸರದಿಂದ ಆಶ್ರಮದಿಂದ ಫರಾರಿಯಾಗುವಾಗ ಗೌತಮ ಮಹರ್ಷಿಯ ಕಣ್ಣಿಗೆ ಬಿದ್ದನು. ತನ್ನ ತಪಸ್ಸಶಕ್ತಿಯಿಂದ ಗೌತಮನಿಗೆ ಎಲ್ಲವೂ ಅರ್ಥವಾಯಿತು. ಆತ ಕೆರಳಿ ಕೆಂಡಾಮಂಡಲವಾದನು. ಅವನ ಕೂಗಾಟವನ್ನು ಕೇಳಿ ಅಹಲ್ಯ ಹೆದರುತ್ತಾ ಓಡೋಡಿ ಬಂದು ಅವನ ಕಾಲಿಗೆ ಬಿದ್ದು ಗೋಳಾಡಿ ಕ್ಷಮೆ ಕೇಳಿದಳು. ಆದರೆ ಗೌತಮನ ಕೋಪ ಅವಳ ಮೊಸಳೆ ಕಣ್ಣೀರಿಗೆ ಕರಗಲಿಲ್ಲ. ಅವನು ಅವಳಿಗೆ ಕಲ್ಲಾಗಿರುವಂತೆ ಶಾಪವಿಟ್ಟನು.

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

               ಗೌತಮನ ಕೋಪಕ್ಕೆ ಹೆದರಿ ದೇವೇಂದ್ರ ಮರದ ಹಿಂದೆ ಅಡಗಿ ನಿಂತಿದ್ದನು. ಅವನಿಗೂ ಸಹ ಗೌತಮ ಮಹರ್ಷಿ ಶಾಪವಿಟ್ಟು ಹಿಮಾಲಯಕ್ಕೆ ತೆರಳಿದನು. ಗೌತಮನ ಶಾಪದಿಂದ ದೇವೇಂದ್ರನ ಜನನಾಂಗಗಳು ಒಡೆದು ಸಾವಿರ ತುಂಡುಗಳಾದವು. ಅವನ ಮೈಮೇಲೆ ಸಾವಿರ ಜನನಾಂಗಗಳಾದವು. ನಂತರ ಆತ ಶಿವನ ಅನುಗ್ರಹದಿಂದ ಮೈಮೇಲಿದ್ದ ಸಾವಿರ ಜನನಾಂಗಗಳನ್ನು ಸಾವಿರ ಕಣ್ಣುಗಳಾಗಿ ಪರಿವರ್ತಿಸಿಕೊಂಡು ಶಾಪಮುಕ್ತನಾದನು. ಆದರೆ ಅಹಲ್ಯ ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮೋಡದ ಮರೆಯಲ್ಲಿರುವ ಸೂರ್ಯನಂತೆ, ಕಲೆಗಳಲ್ಲಿ ಮುಚ್ಚಿದ ಚಂದ್ರನ ಬೆಳದಿಂಗಳಂತೆ, ಹೊಗೆಯಲ್ಲಿ ಮರೆಯಾಗಿರುವ ಬೆಂಕಿಯಂತೆ ಅವಳು ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮುಂದೆ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ಪವಿತ್ರ ಪಾದ ಸ್ಪರ್ಶದಿಂದ ಅಹಲ್ಯ ಶಾಪಮುಕ್ತಳಾಗಿ ಸ್ವರ್ಗ ಸೇರಿದಳು. ಈ ರೀತಿ ಅಹಲ್ಯಳ ಅಮಾಯಕತೆ ಎಲ್ಲರಿಗೂ ಒಂದು ನೀತಿಪಾಠವಾಗಿದೆ... 

ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada

ಇವಿಷ್ಟು ಪಂಚ ಪತಿವೃತೆಯರ ಕಥೆಗಳು. ಇಷ್ಟ ಆದರೆ ಈ ಕಥೆಗಳನ್ನು ಲೈಕ್ ಮತ್ತು ಶೇರ್ ಮಾಡಿ... 

Blogger ನಿಂದ ಸಾಮರ್ಥ್ಯಹೊಂದಿದೆ.