ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

Chanakya Niti in Kannada
ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                                   ಇಡೀ ಕಾಲೇಜ ಸಂತೋಷದ ಅಮಲಿನಲ್ಲಿತ್ತು. ಇನ್ನು ಒಂದು ತಿಂಗಳು ಕಳೆದರೆ ಕಾಲೇಜ ಲೈಫ್ ಮುಗಿಯುತ್ತೆ, ಕಾಟಾಚಾರಕ್ಕೆ ಓದೋದು ತಪ್ಪುತ್ತೆ ಎಂಬ ಖುಷಿಯಲ್ಲಿ ಫೇರವೆಲ್ ಪಾರ್ಟಿಯಲ್ಲಿ ಕಾಲೇಜ ಹುಡುಗ ಹುಡುಗಿಯರೆಲ್ಲ ಸ್ವಲ್ಪ ಲೈಟಾಗಿ ಕುಡಿದು ಹೆವ್ವಿವಾಗಿ ಕುಣಿದು ಸಂಭ್ರಮಿಸುತ್ತಿದ್ದರು. ಆದರೆ ಸತ್ಯ ಮಾತ್ರ ಮಂಕಾಗಿದ್ದನು. ಅವನ ಮೌನದ ಹಿಂದೆ ಒಬ್ಬಳು ಮಹಾ ಮಾತಿನ ಮಲ್ಲಿ ಇದ್ದಳು. ಅವಳೇ ಸುಜಿ. ಅವಳ ಹೆಸರು ಸುಜಾತಾ ಅಂತಾ. ಆದರೆ ಎಲ್ಲರೂ ಅವಳನ್ನು ಪ್ರೀತಿಯಿಂದ ಸುಜಿ ಎಂದು ಕರೆಯುತ್ತಿದ್ದರು. ಕಾಲೇಜಿನಲ್ಲಿ ಎಲ್ಲರೂ ಅವಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಅವಳೇ ಎಲ್ಲರ ಕಾಲೆಳೆಯುತ್ತಾ ಕೋಳಿ ಜಗಳ ಆಡುತ್ತಾ ಎಲ್ಲರ ಮೇಲೆ ರೇಗುತ್ತಿದ್ದಳು. ದಿನಕ್ಕೆ ಒಬ್ಬರನ್ನಾದರೂ ಗೇಲಿ ಮಾಡಿ ಅವರ ಕಾಲೆಳೆಯದಿದ್ದರೆ ಅವಳಿಗೆ ಸಮಾಧಾನವಾಗುತ್ತಿರಲಿಲ್ಲ. ಟೈಮ್ ಸಿಕ್ಕಾಗ ಆಕೆ ಅಲ್ಲಿಇಲ್ಲಿ ಕಾಮಿಡಿ ಶೋಗಳನ್ನು ಮಾಡುತ್ತಿದ್ದಳು. ಕೆಲವು ಸಲ ಆಕೆ ಲೆಕ್ಚರರಗಳನ್ನು ಸಹ ಕಾಲೆಳೆಯದೆ ಬಿಡುತ್ತಿರಲಿಲ್ಲ. ಅವಳ ಮುದ್ದಾದ ಮುಖ ನೋಡಿದ ಮೇಲೆ ಯಾರಿಗೂ ಅವಳನ್ನು ಬೈಯ್ಯುವ ಮನಸ್ಸಾಗುತ್ತಿರಲಿಲ್ಲ. ಅದಕ್ಕಾಗಿ ಆಕೆ ಮಾತಿನಲ್ಲಿಯೇ ಎಲ್ಲರಿಗೆ ಸೈಲೆಂಟಾಗಿ ಮೊಳೆ ಹೊಡೆಯುತ್ತಿದ್ದಳು.  ಆದರೆ ಸತ್ಯನನ್ನು ಕಂಡರೆ ಆಕೆ ಸುಮ್ಮನಾಗುತ್ತಿದ್ದಳು. ಯಾರ ಮುಂದೆಯು ನಾಚಿಕೊಳ್ಳದ ಅವಳು ಸತ್ಯನೆದುರು ನಾಚಿ ನೀರಾಗುತ್ತಿದ್ದಳು. ಸತ್ಯ ಬರೆಯುತ್ತಿದ್ದ ಕಥೆ, ಕವನಗಳಿಗೆ ಸ್ಪೂರ್ತಿ ಅವಳಾಗಿರಲಿಲ್ಲ. ಆತ ಬರೆಯುತ್ತಿದ್ದ ಕಥೆ ಕವನಗಳಿಗೆ ಆಕೆ ಕಲ್ಪನೆಯೂ ಆಗಿರಲಿಲ್ಲ. ತನ್ನ ಕನಸುಗಳ ನನಸಿಗಾಗಿ ಎಲ್ಲರನ್ನು ಅವೈಡ್ ಮಾಡುತ್ತಿದ್ದ ಸತ್ಯ ಸುಜಿಗಾಗಿ ಎಂಥ ಬ್ಯುಸಿ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಫ್ರಿಯಾಗಿ ಅವಳ ಮುಂದೆ ಹಾಜರಾಗುತ್ತಿದ್ದನು. ಅವರಿಬ್ಬರೂ ಪ್ರೇಮಿಗಳೆಂಬ ಗುಸುಗುಸು ಕಾಲೇಜ ಕ್ಯಾಂಪಸ್ ತುಂಬ ಹಬ್ಬಿತ್ತು. ಆದರೆ ಅವರಿಬ್ಬರ ಮಧ್ಯೆ ಏನಿದೆ ಎಂಬುದು ಅವರಿಗಷ್ಟೇ ಗೊತ್ತಿತ್ತು.


ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                                          ಕಾಲೇಜು ಫೇರವೆಲ್ ಪಾರ್ಟಿಯಲ್ಲಿ ಮುಳುಗಿತ್ತು. ಸತ್ಯ ಹಾಗೂ ಸುಮಾ ಇಬ್ಬರು ಕಾಲೇಜ ಸ್ಟೇಡಿಯಂನಲ್ಲಿ ಕುಳಿತು ಘಾಡವಾಗಿ ಏನನ್ನೋ ಮಾತನಾಡುತ್ತಿದ್ದರು. ಸ್ಟೇಡಿಯಮ್ಮಿನ ಒಂಟಿ ದೀಪವನ್ನು ಬಿಟ್ಟರೆ ಸುತ್ತಲೂ ಕತ್ತಲು. ಅವರಿಬ್ಬರೂ ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಒಬ್ಬಳು ಹುಡುಗಿ ಕದ್ದು ಕೇಳಿಸಿಕೊಂಡು ಹೋದಳು. ಅಷ್ಟರಲ್ಲಿ ಸುಜಿ ಸತ್ಯನ ಕೆನ್ನೆಗೆ ಜೋರಾಗಿ ಬಾರಿಸಿದಳು. ಅವಳ ಕೋಪಕ್ಕೂ ಒಂದು ಬಲವಾದ ಕಾರಣವಿತ್ತು. ಅವತ್ತು ಸತ್ಯ ಆಡಿದ ಮಾತಿಗೆ ಅವಳು ಕೆರಳಿ ಕೆಂಡಾಮಂಡಲವಾಗಿದ್ದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

ಸತ್ಯ : ಸುಜಾತಾ, I want to tell you something. Can i......?

ಸುಜಿ : ವ್ಹಾ ವ್ಹಾ ಕನ್ನಡ ಕವಿರತ್ನನ ಬಾಯಲ್ಲಿ ಇಂಗ್ಲೀಷ ಪದ. ಜೊತೆಗೆ ಸುಜಾತಾ ಎಂಬ ಅತಿಯಾದ ಗೌರವ. ಯಾಕೋ ಇಷ್ಟೊಂದು ದೂರ ಆಗ್ತಿದೀಯಾ?

ಸತ್ಯ : ಸುಜಿ I am serious. I have to tell you something. Please...

ಸುಜಿ : ಅದೇನ ಹೇಳ್ತಿಯೋ ಹೇಳು ಗುರುವೇ. ಚಂದ್ರನ ಮೇಲೆ ಕುಂತು ಕವಿತೆ ಬರೆದು ಮಂಗಳ ಗ್ರಹದಲ್ಲಿ ಬುಕ್ ರಿಲೀಸ್ ಮಾಡೋ ಪ್ಲ್ಯಾನ್ ಏನಾದ್ರೂ ಇದೆಯಾ ಕವಿರತ್ನ?

ಸತ್ಯ : ಆ ಥರಾ ಏನು ಇಲ್ಲ. ಇದು ಹೃದಯಗಳ ವಿಷಯ.

ಸುಜಿ : ನೋಡು ಗುರುವೇ, ಈಗ ನೇರವಾಗಿ ವಿಷಯಕ ಬಾ. ಕವನ ಗೀವನ ಹೇಳೊ ಹಂಗಿದ್ರೆ ಹೇಳಬೇಡ. ನಾನು ಕೇಳೋ ಮೂಡಲ್ಲಿಲ್ಲ...

ಸತ್ಯ : ನಾನೀಗ ಕವನ ಹೇಳಲ್ಲ. ಕವನಗಳಿಗೆ ಕಾರಣವಾಗಿರೋ ಕಲ್ಪನೆಯ ಬಗ್ಗೆ ಹೇಳ್ತೀನಿ.

ಸುಜಿ : ಜಾಸ್ತಿ ವರ್ಣನೆ ಬೇಡ. ಸುಮ್ನೆ ಏನ ಹೇಳಬೇಕೋ ಅದನ್ನು ಹೇಳು. ನಾನು ಕಿವಿ ಮುಚ್ಚಿ ಕೇಳಿಸಿಕೊಳ್ತೀನಿ.

(ಸುಜಿ ನಿಜವಾಗಿಯೂ ತನ್ನ ಕೈಗಳಿಂದ ಕಿವಿ ಮುಚ್ಚಿಕೊಂಡಳು. ಆದರೆ ಅವಳು ಸತ್ಯನ ಮಾತುಗಳನ್ನು ಕೇಳುತ್ತಿದ್ದಳು.)

ಸತ್ಯ : ಸುಜಿ, I want to marry you. Will you marry me?

(ಸತ್ಯನ ಮಾತನ್ನು ಕೇಳಿ ಸುಜಿಗೆ ಆಶ್ಚರ್ಯವಾಯಿತು. ಮತ್ತಾಕೆ ಜೋರಾಗಿ ನಗಲು ಪ್ರಾರಂಭಿಸಿದಳು)

ಸುಜಿ : ಸತ್ಯ, ಶಾಕ್ ಕೊಡಬೇಡಪ್ಪ. ನೀನು ಬರೀ ಕವಿಯಾಗೇ ಇರು. ಸ್ಟ್ಯಾಂಡಪ್ ಕಾಮೆಡಿಯನ್ ಆಗೋಕೆ ಟ್ರಾಯ್ ಮಾಡಬೇಡ. ನನಗಂತು ನಗು ತಡ್ಕೊಳೊಕೆ ಆಗ್ತಿಲ್ಲ...

ಸತ್ಯ : ಸುಜಿ ನಾನೀಗ್ ಜೋಕ ಮಾಡ್ತಿಲ್ಲ. I am serious. I am telling the truth and I want to marry you.

ಸುಜಿ : Shut up ಸತ್ಯ. ಏನ್ ಮಾತಾಡ್ತಿದಿಯಾ ಅನ್ನೋದು ಗೊತ್ತಾ? ಕಾಲೇಜನಲ್ಲಿರೋ ಹುಡುಗರು ಪ್ರೀತಿ ಪ್ರೇಮ ಅಂತಾ ನನ್ನಿಂದೆ ಬಿದ್ರೆ, ನೀನು ನೇರವಾಗಿ ಮದುವೆಗೆ ಹೋಗಿರುವೆಯಲ್ಲ?. ಸತ್ಯ, ನಂಗೊತ್ತು ನೀನು ಜೋಕ ಮಾಡ್ತಿರುವೆ ಅಂತಾ. ಪ್ಲೀಸ್ ಸ್ಟಾಪ್ ಇಟ್.

ಸತ್ಯ : ಇಲ್ಲ ಸುಜಿ, ನಾನ್ ಜೋಕ ಮಾಡ್ತಿಲ್ಲ. ನೀನಂದ್ರೆ ನಂಗಿಷ್ಟ. ಜೀವನಪೂರ್ತಿ ನಾನ್ ನಿಂಜೊತೆ ಇರೋಕೆ ಇಷ್ಟ ಪಡ್ತೀನಿ. ಅವಕಾಶ ಕೊಡ್ತಿಯಾ?

ಸುಜಿ : ಸತ್ಯ, ನನಗೆ ನೀನಂದ್ರೆ ತುಂಬಾ ಇಷ್ಟ. ನನಗೆ ನೀನು ಬರೆಯೋ ಕಥೆ ಕವನಗಳಿಷ್ಟ. ಆದರೆ ಈ ಪ್ರೇಮ ಮದುವೆ ಎಲ್ಲ. I can't imagine it with you... ಏ ನೀನಿ ಮಾತನ್ನ ಹೇಳ್ತಿದಿಯಾ ಅಂದ್ರೆ ನಂಬಕ್ಕಾಗ್ತಿಲ್ಲ. ಪ್ಲೀಸ್ ಇದು ಜಸ್ಟ್ ಜೋಕ್ ಅಂತಾ ಹೇಳೊ...

ಸತ್ಯ : ಇಲ್ಲ ಸುಜಿ, ಇದು ಜೋಕಲ್ಲ. ನಿಜವಾಗ್ಲೂ ನಾನಿನ್ನ ಇಷ್ಟ ಪಡ್ತಿದೀನಿ. Really I like you...

ಸುಜಿ : ಸತ್ಯ ನೀನು ಕಾಲೇಜ್ನಲ್ಲಿರೋ ಎಲ್ಲ ಹುಡುಗರ ಥರ ಅಂತಾ ನಾನು ಅನ್ಕೊಂಡಿರಲಿಲ್ಲ. ಹುಡುಗರಿಗೆ ಸ್ವಲ್ಪ ಸಲಿಗೆ ಕೊಟ್ರೆ ಸಾಕು ಸೆರಗಿಗೆ ವಾರಸುದಾರರಾಗೋಕೆ ಸಾಯ್ತಾರೆ ಅಂತಾ ನಾನು ಯಾರಿಗೂ ಸನಿಹ ಬರೋಕೆ ಬಿಟ್ಟಿಲ್ಲ. ಆದರೆ ನಿಂಜೊತೆ ಮೂರಹೊತ್ತು ಸುತ್ತಿದೆ. ಅದೇ ನಾನ ಮಾಡಿದ ದೊಡ್ಡ ತಪ್ಪು ಅಂತಾ ಅನಿಸುತ್ತೆ. ನೀನು ಎಲ್ಲ ಹುಡುಗರ ಥರ ಚೂಡಿದಾರಗೋಸ್ಕರ ಉಡದಾರ ಮಾರಿಕೊಳ್ಳೋ ಜಾತಿ ಅಂತಾ ಪ್ರೂವ್ ಮಾಡಿಬಿಟ್ಟೆಯಲ್ಲ ಶಬ್ಬಾಸ್. ನಿಂಜೊತೆ ಫ್ರೆಂಡಶಿಪ್ ಮಾಡಿದ್ದಕ್ಕೆ ನಾನೇ ಹೊಡ್ಕೊಬೇಕು...

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

ಸತ್ಯ : ಸುಜಿ, ನಿನಗೆ ಹರ್ಟಾಗಿದ್ದರೆ ಸ್ವಾರಿ. ನನಗೆ ನೀನಂದ್ರೆ ಇಷ್ಟ. ನಿನಗಿಷ್ಟ ಇಲ್ಲ ಅಂದ್ರೆ ನೀನು ನನ್ನ ರಿಜೇಕ್ಟ ಮಾಡು ಅಷ್ಟೇ.

ಸುಜಿ : ಏ ನನ್ ಕೈಯ್ಯಿಂದ ನಿನಗೆ ಬೈಯ್ಯೊಕೆ ಆಗ್ತಿಲ್ಲ ಕಣೋ. ನನಗಿಷ್ಟ ಆಗಿರೋ ಏಕೈಕ ಹುಡುಗ ನೀನಷ್ಟೆ. ಅದಕ್ಕೆ ನಾ ನಿಂಜೊತೆ ಮೂರ ವರ್ಷದಿಂದ ಧೈರ್ಯವಾಗಿ ಓಪನ ಫ್ರೆಂಡಶೀಪ್ ಮಾಡಿದ್ದು. ಆದ್ರೆ ನೀನೀಗ? ನನಗೆ ನೀನಿಷ್ಟ. ನನಗೂ ನಿಂಜೊತೆ ಲೈಫಲಾಂಗ್ ಇರೋ ಇಷ್ಟ. ಆದರೆ ಜಸ್ಟ್ ಫ್ರೆಂಡ್ಸಾಗಿ ಅಷ್ಟೇ.

ಸತ್ಯ : ಸುಜಿ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಬೇಡ. ನೇರವಾಗಿ ನಿನ್ನ ನಿರ್ಧಾರವನ್ನು ತಿಳಿಸು.

ಸುಜಿ : Ok fine. ನನ್ನಲ್ಲಿ ಅಂಥದ್ದೇನಿದೆ ಅಂತಾ ನೀ ನನ್ನ ಇಷ್ಟಾಪಟ್ಟೆ? ಯಾಕೆ ನೀ ನನ್ನ ಲೈಕ್ ಮಾಡ್ತಿದಿಯಾ?

ಸತ್ಯ : ಸುಜಿ, ನಿನ್ನತ್ರ ಮಾತಾಡೋಕೆ ನನಗ್ಯಾವ ಮುಜುಗುರವಿಲ್ಲ. ನೀನು ನೋಡೊಕೆ ಸುಂದರವಾಗಿದೀಯಾ. ಅದಕ್ಕೆ ನೀನಂದ್ರೆ ನಂಗೀಷ್ಟ.

ಸುಜಿ : ಅಂದ್ರೆ ನೀನು ನನ್ನ ಇಷ್ಟ ಪಡ್ತಿಲ್ಲ. ನನ್ನೀ ದೇಹಾನಾ ಇಷ್ಟ ಪಡ್ತಿದೀಯಾ?

ಸತ್ಯ : Yes, ನಾನು ನಿನ್ನ ಸೌಂದರ್ಯವನ್ನು ಇಷ್ಟ ಪಡ್ತಿದೀನಿ...

(ಸತ್ಯ ಮಾತು ಮುಗಿಸುವುದಕ್ಕಿಂತ ಮುಂಚೆನೇ ಸುಜಿ ಅವನ ಕೆನ್ನೆಗೆ ಬಾರಿಸಿದಳು)

ಸುಜಿ : ಸತ್ಯ I can't believe it. ನೀನು ಈ ಮಾತನ್ನು ಹೇಳ್ತಿದೀಯಾ ಅಂದ್ರೆ ನನಗ ನಂಬಕ್ಕಾತ್ತಿಲ್ಲ. ನಿನ್ನ ಕವನಗಳಲ್ಲಿ ನೀನು ಹೆಣ್ಣನ್ನು ವರ್ಣಿಸುವುದನ್ನು, ಗೌರವಿಸುವುದನ್ನು ನೋಡಿ ಲಕ್ಷಾಂತರ ಹುಡುಗಿಯರು ನಿನ್ನ ಮುಖ ನೋಡದೆ ಪ್ರೀತಿಸುತ್ತಿದ್ದಾರೆ. ಆದರೆ ನೀನು ನನ್ನ ಮೈ ನೋಡಿ ಇಷ್ಟ ಪಡ್ತಿದಿಯಲ್ಲ? ನೀನು ಈ ಮಾತನ್ನು ಮನಸ್ಸನಿಂದ ಹೇಳ್ತಿದೀಯಾ ಅಂತ ನನಗನ್ನಿಸತ್ತಿಲ್ಲ.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                 ಸುಜಿ ಸತ್ಯನಿಗೆ ಮತ್ತೆರಡು ಹೊಡೆದಳು. ಅವನ ಎದೆ ಮೇಲೆ ಮುದ್ದಾಗಿ ಹೊಡೆದಳು. ಸ್ವಲ್ಪ ಅಳುತ್ತಾ ಅವನನ್ನು ಸಮಾಧಾನ ಮಾಡುತ್ತಾ ಅವನನ್ನು ಅಪ್ಪಿಕೊಂಡಳು. ನಂತರ "ಸತ್ಯ ನನಗೆ ನೀನು ಏನು ಅಂತಾ ಚೆನ್ನಾಗಿ ಗೊತ್ತು. ನಿನ್ನ ಮನಸ್ಸು ಪವಿತ್ರವಾದದ್ದು. ನೀನು ಏನೇ ಹೇಳಿದ್ರು ನಾನು ನಂಬಲ್ಲ... ನನಗೆ ನಿನ್ಮೇಲೆ ಸಂಪೂರ್ಣ ನಂಬಿಕೆ ಇದೆ. ನೀನು ಫ್ರೆಂಡಾಗಿ ಇರೋ ಹಂಗಿಂದ್ರೆ ಮಾತ್ರ ನಾಳೆಯಿಂದ ನೀ ನನಗೆ ನಿನ್ನ ಮುಖಾನಾ ತೋರಿಸು..." ಎಂದೇಳಿ ಸುಜಿ ಅವನಿಂದ ದೂರ ನಡೆದಳು. ಸತ್ಯ ಬೇಜಾರಲ್ಲಿ ಅವಳೆಡೆಗೆ ಬೆನ್ನು ಮಾಡಿ ನಿಂತನು. ಸುಜಿ ಅರ್ಧ ದಾರಿಯಿಂದ ಮತ್ತೆ ಓಡಿ ಬಂದು ಅವನನ್ನು ತಬ್ಬಿಕೊಂಡು "ಸತ್ಯ ನನಗೆ ನಿನಗಿಂತ ಒಳ್ಳೆ ಫ್ರೆಂಡ್ ಸಿಗೋಕೆ ಚಾನ್ಸ್ ಇಲ್ಲ. ನನಗೆ ನಿನ್ನ ಕಳ್ಕೊಳೊಕೆ ಇಷ್ಟಾ ಇಲ್ಲ. ಪ್ಲೀಸ್ ನಾಳೆ ಫ್ರೆಂಡಾಗಿ ನನ್ನ ಮಾತಾಡಿಸು..." ಅಂತೇಳಿ ಅಳುತ್ತಾ ಹೋದಳು. ಸತ್ಯ ಅವಳು ಹೋದ ಅಳಲು ಪ್ರಾರಂಭಿಸಿದನು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                             ಸತ್ಯ ಸಹ ಸುಜಿಯಂತೆ ಅವಳನ್ನು ಫ್ರೆಂಡ್ ಥರಾನೇ ನೋಡುತ್ತಿದ್ದನು. ಅವನ ಮನಸ್ಸಲ್ಲಿ ಅವಳ ಮೇಲೆ ಯಾವುದೇ ಕೆಟ್ಟ ಅಭಿಪ್ರಾಯವಿರಲಿಲ್ಲ. ಆದರೆ ಅವರಿಬ್ಬರ ಘಾಡವಾದ ಸ್ನೇಹ ಎಲ್ಲರ ನೀಲಿ ಕಣ್ಣುಗಳಿಗೆ ಪ್ರೇಮವಾಗಿ ಕಾಣಿಸುತ್ತಿತ್ತು. ಈ ವಿಷಯ ಸುಜಿಯ ಮನೆ ತಲುಪಿ ಅವಳ ತಂದೆತಾಯಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಅವಳ ತಾಯಿಯ ಮನಸ್ಸಲ್ಲಿ ತಮ್ಮ ಹರೆಯದ ಮಗಳು ಹಾದಿ ತಪ್ಪಿದ್ದಾಳೆಂಬ ತಪ್ಪು ಕಲ್ಪನೆ ಮನೆ ಮಾಡಿತ್ತು. ಅದಕ್ಕಾಗಿ ಅವರು ನೇರವಾಗಿ ಸತ್ಯನನ್ನು ಭೇಟಿಯಾಗಿ ಸುಜಿಯಿಂದ ಶಾಶ್ವತವಾಗಿ ದೂರವಿರುವಂತೆ ಅಳುತ್ತಾ ಕೇಳಿಕೊಂಡರು. ಅವರ ಕಣ್ಣೀರಿಗೆ ತಾನು ಕಾರಣನಾದೆನಲ್ಲ ಎಂಬ ಕೊರಗಲ್ಲಿ ಸತ್ಯ ಅವಳಿಂದ ದೂರಾಗುವ ವಚನ ಕೊಟ್ಟನು. ಅದಕ್ಕಾಗಿ ಆತ ಅವಳೊಂದಿಗೆ ಇಷ್ಟೆಲ್ಲ ಮಾತಾಡಿ ಅವಳ ಮನ ನೋಯಿಸಿ ಅವಳಿಂದ ದೂರಾಗಲು ಪ್ರಯತ್ನಿಸಿದನು. ಅವನು ಈ ಪ್ರಯತ್ನದಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದನು. ಆದರೆ ಸುಜಿ ಅವನಿಗೆ ಮಧ್ಯರಾತ್ರಿ ಕಾಲ್ ಮಾಡಿ ಸ್ವಾರಿ ಕೇಳಿದಳು. ಆದರೆ ಸತ್ಯ ಅವಳ ಕಾಲನ್ನು ಕಟ್ ಮಾಡಿದನು. ನಂತರ "I like your beautiful body, not you" ಎಂದೇಳಿ ವಾಟ್ಸಾಪ್ ಮಾಡಿದನು. ಅದಕ್ಕಾಕೆ "Don't show your face to me never..." ಎಂದೆಲ್ಲ ರಿಪ್ಲೆ ಮಾಡಿ ಅವನಿಂದ ಶಾಶ್ವತವಾಗಿ ದೂರಾಗುವ ದಿಟ್ಟ ನಿರ್ಧಾರ ಮಾಡಿದಳು. ಆಕೆ ತನ್ನಿಂದ ದೂರಾಗುತ್ತಿದ್ದಾಳಲ್ಲ ಎಂಬ ದು:ಖವಿದ್ದರೂ ಅವಳ ತಾಯಿ ನಿಶ್ಚಿಂತೆಯಿಂದ ಇರುತ್ತಾರಲ್ಲ ಎಂಬ ಖುಷಿಯಲ್ಲಿ ಆತ ನಸು ನಕ್ಕು ಹಾಸಿಗೆಯಲ್ಲಿ ಅಳುತ್ತಾ ಮಲಗಿಕೊಂಡನು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                       ಮಾರನೇ ದಿನ ಸುಜಿ ಕಾಲೇಜಿಗೆ ಬಂದಾಗ ಎಲ್ಲರೂ ಅವಳನ್ನು ನೋಡಿ ಅಚ್ಚರಿಗೆ ಒಳಗಾದರು. ದಿನಾಲು ಎಲ್ಲರ ಕಾಲೆಳೆದು ಕೀಟಲೆ ಮಾಡಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವಳ ಮುಖದಲ್ಲಿಗ ನಗುವಿರಲಿಲ್ಲ. ಅವಳನ್ನು ನೋಡಿ ಎಲ್ಲರ ಮನಸ್ಸಲ್ಲು ಬೇಜಾರಿನ ಬಾಣ ನಾಟಿತ್ತು. ಸತ್ಯನನ್ನು ನೋಡಿದ ಮೇಲೆಯು ಎಲ್ಲರಿಗೂ ಹಾಗೆಯೇ ಅನಿಸಿತು. ಆದರೆ ಎಲ್ಲರಿಗೆ ಅವರಿಬ್ಬರ ಅನ್ಯೋನ್ಯತೆಯ ಮೇಲೆ ಜಲಸಿಯಿತ್ತು. ಅದಕ್ಕಾಗಿ ಯಾರು ಸಹ ಅವರಿಬ್ಬರನ್ನು ಒಂದಾಗಿಸುವ ಪ್ರಯತ್ನ ಮಾಡಲಿಲ್ಲ. ಅವರಿಬ್ಬರ ಮಧ್ಯೆ ಏನಾಗಿದೆ? ಯಾಕೆ ಅವರಿಬ್ಬರೂ ಇಷ್ಟೊಂದು ಮಂಕಾಗಿದ್ದಾರೆ? ಎಂಬುದು ಒಬ್ಬಳನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ. ಆವತ್ತು ರಾತ್ರಿ ಸುಜಿ ಹಾಗೂ ಸತ್ಯ ಮಾತಾಡುವುದನ್ನೆಲ್ಲ ಸತ್ಯನ ಫ್ರೆಂಡ್ ಜ್ಯೋತಿ ಕದ್ದು ಕೇಳಿಸಿಕೊಂಡಿದ್ದಳು. ಅವಳಿಗೆ ಮಾತ್ರ ಅವರಿಬ್ಬರು ಯಾಕೆ ದೂರಾಗಿದ್ದಾರೆ ಎಂಬುದು ಗೊತ್ತಿತ್ತು. ಜ್ಯೋತಿ ಮೂರ ವರ್ಷದಿಂದ ಸತ್ಯನನ್ನು ಇಷ್ಟಪಡುತ್ತಿದ್ದಳು. ಆದರೆ ಸುಜಿ ಯಾವಾಗಲೂ ಅವನಿಗಂಟಿಕೊಂಡೆ ಇರುತ್ತಿದ್ದರಿಂದ ಆಕೆ ಅವನೊಂದಿಗೆ ಫ್ರೆಂಡಾಗಿ ನಟಿಸುತ್ತಾ ಅವನೊಂದಿಗೆ ಕ್ಲೋಸಾಗಿದ್ದಳು. ಆಕೆ ಅವನನ್ನು ಇಷ್ಟಪಡುತ್ತಿದ್ದಳು. ಆದರೆ ಅವಳಿಗೆ ಬಾಯಿಬಿಟ್ಟು ಹೇಳುವ ಧೈರ್ಯವಿರಲಿಲ್ಲ. ಅವಳ ಮನಸ್ಸಿನ ಮಾತು ಅವಳ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಅದನ್ನು ಗಮನಿಸಿದ ಸುಜಿ ಎಷ್ಟೋ ಸಲ ಸತ್ಯನಿಗೆ ಅವಳ ಬಗ್ಗೆ ಹೇಳಿದ್ದಳು. ಆದರೆ  ಆತ ಅವಳ ಮಾತನ್ನು ತಳ್ಳಿ ಹಾಕಿದ್ದನು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                     ಸುಜಿ ಹೇಳಿದಂತೆ ಜ್ಯೋತಿ ನಿಜವಾಗಿಯೂ ಸತ್ಯನನ್ನು ಇಷ್ಟಪಡುತ್ತಿದ್ದಳು. ಈಗ ಸುಜಿ ಅವನಿಂದ ದೂರಾಗಿರುವುದರಿಂದ ಆಕೆ ಅವನಿಗೆ ತನ್ನ ಮನಸ್ಸಲ್ಲಿರುವ ಮಾತನ್ನು ಹೇಳುವ ಧೈರ್ಯ ಮಾಡಿದಳು. ಆಕೆ ಅವನನ್ನು ಪರ್ಸನಲ್ಲಾಗಿ ಭೇಟಿಯಾಗಿ ತನ್ನ ಪ್ರೀತಿಯನ್ನು ಅವನಿಗೆ ಹೇಳಿದಳು. ಆದರಾತ ಅವಳ ಪ್ರೀತಿಯನ್ನು ಪ್ರೀತಿಯಿಂದ ನಿರಾಕರಿಸಿ ಒಳ್ಳೇ ಫ್ರೆಂಡ್ಸಾಗಿರಲು ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದನು. ಆವಾಗಾಕೆ "ಸತ್ಯ, ನನಗೆ ನೀನಿಷ್ಟ. ನಾನು ನಿನ್ನೊಡನೆ ಜೀವನಪೂರ್ತಿ ಜೊತೆಗಿರೋಕೆ ಆಸೆ ಪಡ್ತೀನಿ. ನಿನಗಾಗಿ ನಾನು ನನ್ನ ತನುಮನವನ್ನು ಮೀಸಲಾಗಿಡ್ತೀನಿ. ನನ್ನ ಸೌಂದರ್ಯದ ಮೇಲೆ, ನನ್ನೀ ಶರೀರದ ಮೇಲೆ ನಿನಗೆ ಸಂಪೂರ್ಣ ಅಧಿಕಾರವಿದೆ. ನೀನು ಬಯಸಿದರೆ ಈಗಲೇ ನೀನು ನಿನ್ನ ಅಧಿಕಾರವನ್ನು ಚಲಾಯಿಸಬಹುದು..." ಎಂದೇಳಿ ಅವನ ತೋಳಲ್ಲಿ ಬಂಧಿಯಾದಳು. ಆದರೆ ಸತ್ಯನಿಗೆ ಅವಳ ಮೇಲೆ ಯಾವುದೇ ಭಾವನೆಗಳಿರಲಿಲ್ಲ. ಅದಕ್ಕಾಗಿ ಆತ ಅವಳನ್ನು ನಯವಾಗಿ ತಿರಸ್ಕರಿಸಿ ಅವಳಿಂದ ದೂರಾದನು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                       ಸತ್ಯ ಜ್ಯೋತಿಯಿಂದ ದೂರಾದನು. ಆದರೆ ಜ್ಯೋತಿ ಅವನಿಂದ ದೂರಾಗದೆ ಅವನಿಗೆ ಹತ್ತಿರವಾಗುವ ಪ್ರಯತ್ನಗಳನ್ನು ಮಾಡಿದಳು. ಆಕೆ ಸತ್ಯನೊಂದಿಗೆ ನಡೆಸಿದ ಗುಪ್ತ ಮಾತುಕತೆಯನ್ನು ಸುಜಿಗೆ ಹೇಳಿದಳು. ಆದರೆ ಸುಜಿಗೆ ಸತ್ಯ ಅಪರಂಜಿ ಎಂಬುದು ಮೊದಲೇ ಗೊತ್ತಿತ್ತು. ಸತ್ಯ ತಾನಾಗಿಯೇ ತನ್ನೊಂದಿಗೆ ಮಾತಾಡಲಿ ಎಂಬ ಜಂಭದಲ್ಲಿ ಸುಜಿ ಅವನಿಂದ ದೂರ ಉಳಿದು ಅವನನ್ನು ಕಳೆದುಕೊಂಡಳು. ಕಾಲೇಜಿನ ಫೇರವೆಲ್ ಪಾರ್ಟಿ ಮುಗಿಸಿದ ಖುಷಿ ಮರೆಯುವ ಮುಂಚೆಯೇ ಎಲ್ಲರ ಎದೆ ಮೇಲೆ ಬರೆ ಎಳೆದಂತೆ ಎಕ್ಸಾಮಗಳು ಬಂದವು. ಸತ್ಯ ಎಲ್ಲವನ್ನು ಮರೆತು ಎಕ್ಸಾಮ ಬರೆದು ಮನೆಯಲ್ಲಿ ಕುಳಿತನು. ಎಕ್ಸಾಮ್ ರಿಸಲ್ಟ ಬಂತು ಆತ 82% ಪರ್ಸೆಂಟ್ ಮಾರ್ಕ್ಸನೊಂದಿಗೆ ಡಿಗ್ರಿ ಪಾಸಾಗಿದ್ದನು.  ಮುಂದಕ್ಕೆ ಓದುವ ಮನಸ್ಸು ಅವನಿಗಿರಲಿಲ್ಲ. ಅದಕ್ಕಾಗಿ ಆತ ತನ್ನ ಕಲೆಯನ್ನೇ ಕೆಲಸವನ್ನಾಗಿಸಿಕೊಳ್ಳಲು ಬೆಂಗಳೂರಿಗೆ ಬಂದನು. ಆದರೆ ಬೇರೆ ಭಾಷಿಗರಲ್ಲಿ ಹಂಚಿ ಹೋಗಿದ್ದ  ಬೆಂಗಳೂರು ಅವನಿಗೆ ಬೇಸರವನ್ನುಂಟು ಮಾಡಿತು. ನೋಡೊಕೆ ಮಂಗನಂತಿರುವ ತಮ್ಮ ಮಕ್ಕಳ ಸಿನಿಮಾಗಳಿಗಾಗಿ ನೂರಾರು ಕೋಟಿ ಸುರಿಯುವ ರಾಜಕಾರಣಿಗಳನ್ನು, ರಾಜಕೀಯ ಪಕ್ಷಗಳ ಹಮಾಲಿ ಮಾಡುವ ಸುದ್ದಿವಾಹಿನಿಗಳನ್ನು ನೋಡಿ ನೋಡಿ ಬೇಸತ್ತು ಆತ ಬೆಂಗಳೂರಿಗೆ ಬಾಯ ಹೇಳಿದನು. ಏನನ್ನೂ ಸಾಧಿಸದೇ ಹುಟ್ಟೂರಿಗೆ ವಾಪಸು ಬಂದ ಅವನನ್ನು ನೋಡಿ ಊರು ಕೇಕೇ ಹಾಕಿಕೊಂಡು ನಕ್ಕಿತು. ಅದಕ್ಕಾಗಿ ಆತ ಊರು ಬಿಟ್ಟು ಮುಂಬೈ ಮಹಾನಗರವನ್ನು ಸೇರಿದನು. ಅವನಲ್ಲಿ ಕಲೆಯ ಖನಿಯಿರುವುದರಿಂದ ಮಾಯಾನಗರಿ ಅವನನ್ನು ಪ್ರೀತಿಯಿಂದ ಬರ ಮಾಡಿಕೊಂಡು ತನ್ನವನಾಗಿಸಿಕೊಂಡಿತು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                              ಮೊದ ಮೊದಲು ಮುಂಬೈ ಸತ್ಯನಿಗೆ ತುಂಬಾನೆ ಸತಾಯಿಸಿತು. ಅವನನ್ನು ಮತ್ತು ಅವನ ಕಲೆಯನ್ನು ಬಹಳಷ್ಟು ಸಲ ಪರೀಕ್ಷಿಸಿ ನಂತರ ಅವನಿಗೆ ಅವಕಾಶ ಕೊಟ್ಟಿತು. ಆದರೆ ಬೇರೆಯವರ ಕೈಕೆಳಗೆ ಪುಡಿಗಾಸಿಗೆ ಕೆಲಸ ಮಾಡಲು ಸತ್ಯನ ಮನಸಾಕ್ಷಿ ಒಂಚೂರು ಒಪ್ಪಲಿಲ್ಲ. ಅದಕ್ಕಾಗಿ ಆತ ಮುಂಬೈಗೆ ಬಾಯ ಹೇಳಿ ಪುಣೆಗೆ ಆಗಮಿಸಿದನು. ಪುಣೆಯ ಶಾಂತ ಹಾಗೂ ಸ್ವಚ್ಛ ವಾತಾವರಣ ಅವನಿಗೆ ತುಂಬಾನೇ ಹಿಡಿಸಿತು. ಆತ ತನ್ನದೇ ಆದ ಒಂದು ಮೀಡಿಯಾ ಕಂಪನಿ ಪ್ರಾರಂಭಿಸಿದನು. ಅವನ ಬಳಿ ಅಷ್ಟೊಂದು ದುಡ್ಡಿರಲಿಲ್ಲ. ಅದಕ್ಕಾಗಿ ಆತ ಹಿಂದಿ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆಯಲು ಪ್ರಾರಂಭಿಸಿದನು. ಅಲ್ಲಿಂದ ಬಂದ ಹಣವನ್ನು ಆತ ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಿ ಒಂದು ಮಟ್ಟಕ್ಕೆ ಬಂದನು. ಸಿನಿಮಾ ಡೈರೆಕ್ಟರಗಳು ಮಾಡುವ ತಾತ್ಸಾರದಿಂದ ಆತ ಬೇಸತ್ತು ಹೋದನು. ಆತ ಬರೆದ ಸ್ಕ್ರಿಪ್ಟ್ ಇಟ್ಟುಕೊಂಡು ಸಿನಿಮಾ ಮಾಡಿ ನೂರಾರು ಕೋಟಿ ಗಳಿಸುವ ಡೈರಕ್ಟರಗಳು ಅವನಿಗೆ ಕೇವಲ ಲಕ್ಷಕ್ಕಿಂತ ಕಡಿಮೆ ಸಂಭಾವನೆ ಕೊಡುತ್ತಿದ್ದರು. ಹೀಗಾಗಿ ಆತ ನೇರವಾಗಿ ಓದುಗರನ್ನು ತಲುಪಲು ನಿರ್ಧರಿಸಿದನು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                                         ಸತ್ಯ ತನ್ನೆಲ್ಲ ಕಥೆ, ಕವನಗಳನ್ನು ತನ್ನ ಆಫೀಸಿಯಲ್ ವೆಬಸೈಟನಲ್ಲಿ ಪ್ರಕಟಿಸಿ ಏಕಕಾಲಕ್ಕೆ ಕೋಟ್ಯಾಂತರ ಓದುಗರನ್ನು ತಲುಪಿದನು. ಆತ ಹಿಂದಿ ಹಾಗೂ ಇಂಗ್ಲೀಷ ಭಾಷೆಗಳಲ್ಲಿ ಬರೆಯುತ್ತಿದ್ದರಿಂದ  ಅವನಿಗೆ ಜಗತ್ತಿನ ಮೂಲೆ ಮೂಲೆಗಳಿಂದ ಓದುಗರಿದ್ದರು. ಆದರೆ ಅವನಿಗೆ ಅವನ ಮಾತೃ ಭಾಷೆ ಕನ್ನಡದಲ್ಲಿ ಓದುಗರಿರಲಿಲ್ಲ. ಅದಕ್ಕಾಗಿ ಆತ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದನು. ಕನ್ನಡದಲ್ಲಿಯೂ ಅವನಿಗೊಂದು ಓದುಗ ಬಳಗ ಸೃಷ್ಟಿಯಾಯಿತು. ನೋಡು ನೋಡುತ್ತಿದ್ದಂತೆ ಆತ ಮುಗಿಲೆತ್ತರಕ್ಕೆ ಬೆಳೆದು ನಿಂತನು. ಆತ ಪುಣೆಯ ಹೊರವಲಯದಲ್ಲಿ ಎಕರೆ ಜಾಗ ಖರೀದಿಸಿ ಸ್ವಂತ ಸ್ಟುಡಿಯೋ ನಿರ್ಮಿಸಿ ತಾನು ಬರೆದ ಕಥೆಗಳನ್ನೆಲ್ಲ ಸಿನಿಮಾ ಮಾಡುವ ಕಾರ್ಯಕ್ಕೆ ಕೈ ಹಾಕಿದನು. ಆದರೆ ಅವನು ಭ್ರಷ್ಟ ರಾಜಕಾರಣಿಗಳ ಬಗ್ಗೆ, ದೇಶದ್ರೋಹಿಗಳ ಬಗ್ಗೆ ರಾಜಾರೋಷವಾಗಿ ಬರೆಯುತ್ತಿದ್ದರಿಂದ ಅವನಿಗೆ ಒಂದು ಶತ್ರುಬಣವು ಸಿದ್ಧವಾಗಿತ್ತು. ಅದಕ್ಕಾಗಿ ಆತನಿಗೆ ಸೇಫ್ಟಿಗಾಗಿ ಒಂದು ರಿವಾಲ್ವರನ್ನು ಸಹ ಇಟ್ಟುಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು. ಆದರೆ ಆತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ತಾನು ಮಾಡುತ್ತಾ ಮುಂದೆ ಸಾಗಿದನು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                       ಕೋಟ್ಯಾಂತರ ರೂಪಾಯಿ ಆಸ್ತಿ, ಅಂತಸ್ತು, ಜನಪ್ರಿಯತೆ ಬಂದರೂ ಸತ್ಯ ಒಂಚೂರು ಬದಲಾಗಿರಲಿಲ್ಲ. ಆದರೆ ಸುಜಿ ಸಾಕಷ್ಟು ಬದಲಾಗಿದ್ದಳು. ಆಕೆ ಕಾಲೇಜ ಮುಗಿದ ನಂತರ ಅವನನ್ನು ಮರೆತು ಮನೆಯವರು ತೋರಿಸಿದ ಹುಡುಗನನ್ನು ಪ್ರೀತಿಸಿ ಮದುವೆಯಾಗಿ ಹಳ್ಳಕ್ಕೆ ಬಿದ್ದಳು. ಒಂದಿನ ಅವಳನ್ನು ನೋಡುವುದಕ್ಕಾಗಿ ಅವಳ ಮನೆಗೆ ಗಂಡಿನ ಕಡೆಯವರು ಬಂದಿದ್ದರು. ಆಗ ಆಕೆ ತನ್ನನ್ನು ನೋಡಲು ಬಂದ ಹುಡುಗನ ಜೊತೆಯಲ್ಲಿ ಪರ್ಸನಲ್ಲಾಗಿ ಮಾಡನಾಡಿದಳು. ಆಗ ಆತ ಅವಳ ಸೌಂದರ್ಯಕ್ಕೆ ಜೊಲ್ಲು ಸುರಿಸಿ ಮದುವೆ ಅಂತ ಆದರೆ ಅವಳನ್ನೇ ಆಗಬೇಕು ಎಂಬ ಯೋಜನೆಯಲ್ಲಿ ಏನೇನೋ ಸುಳ್ಳೇಳಿದನು. ಅವಳ ಮನಸ್ಸು ಹಾಗೆ ಹೀಗೆ ಎಂದೆಲ್ಲ ಹೊಗಳಿ ಅವಳನ್ನು ಅಟ್ಟಕ್ಕೇರಿಸಿದನು. ಆಕೆ ಅವನ ಡೈಲಾಗಗಳನ್ನು ನಿಜವೆಂದು ನಂಬಿ ಅವನೊಂದಿಗೆ ಮದುವೆಯಾಗಲು ಒಪ್ಪಿ ಅವನನ್ನು ಪ್ರೀತಿಸಲು ಪ್ರಾರಂಭಿಸಿದಳು. ಆತ ತನ್ನನ್ನು ಮನಸ್ಸು ನೋಡಿ ಪ್ರೀತಿಸುತ್ತಿದ್ದಾನೆಂದು ಭಾವಿಸಿ ಅವನಿಗೆ ಮನಸ್ಸು ಕೊಟ್ಟು ಮೋಸ ಹೋದಳು. ಜೊತೆಗೆ  ಆಕೆ ಸತ್ಯನನ್ನು ದ್ವೇಷಿಸಲು ಪ್ರಾರಂಭಿಸಿದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                    ಹುಡುಗ ಬ್ಯಾಂಕಲ್ಲಿ ಕೆಲಸ ಮಾಡುತ್ತಾನೆಂಬ ಜೋಷಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ಸುಜಿಯ ಮದುವೆ ಅದ್ದೂರಿಯಾಗಿ ನಡೆಯಿತು. ಆಕೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಗಂಡನ ಮನೆಗೆ ಕಾಲಿಟ್ಟಳು. ಆದರೆ ಅವಳ ಕನಸುಗಳೆಲ್ಲ ಹಂತಹಂತವಾಗಿ ನಾಶವಾದವು. ಏಕೆಂದರೆ ಮದುವೆಗೂ ಮುಂಚೆ ಅವಳ ಗಂಡ ಹೇಳಿದ ಸುಳ್ಳುಗಳು ಒಂದೊಂದಾಗಿ ಹೊರಬರಲು ಆರಂಭಿಸಿದವು. ಆತ ಹೇಳಿದಂತೆ ಆತ ನಡೆದುಕೊಳ್ಳಲಿಲ್ಲ. ಆತ ಅವಳನ್ನು ಪ್ರೀತಿಯಿಂದ ನಡೆಸಿಕೊಳ್ಳಲಿಲ್ಲ. ಗಂಡನೆಂಬ ದರ್ಪದಲ್ಲಿ ಅವಳ ಮೈಮನಸ್ಸಿನ ಮೇಲೆ ದಬ್ಬಾಳಿಕೆ ಮಾಡಲು ಪ್ರಾರಂಭಿಸಿದನು. ಆತ ಅವಳನ್ನು ಮುಖ ನೋಡಿ ಪ್ರೀತಿಸಿಲ್ಲ, ಬರೀ ಮೈ ನೋಡಿ ಮದುವೆಯಾಗಿದ್ದಾನೆಂಬುದು ಅವನ ವರ್ತನೆಗಳಿಂದ ಅವಳಿಗೆ ಖಾತ್ರಿಯಾಗಿತ್ತು. ಅವಳ ಗಂಡ ದಿನವಿಡೀ ಬೇರೆಯವರ ದುಡ್ಡನ್ನು ಎಣಿಸಿ ತನ್ನತ್ರ ಅಷ್ಟೊಂದು ದುಡ್ಡಿಲ್ಲವಲ್ಲ ಎಂದು ಅಪಸೆಟ ಆಗುತ್ತಿದ್ದನು. ಬ್ಯಾಂಕ ಕೆಲಸದ ಮೇಲಿನ ಸಿಟ್ಟನ್ನು ಆತ ಮನೆಗೆ ಬಂದು ಸುಜಿಯ ಮೇಲೆ ತೀರಿಸಿಕೊಳ್ಳುತ್ತಿದ್ದನು. ಅವಳಿಗೆ ಏನಾದರೂ ಒಂದನ್ನು ಬೈಯ್ಯದಿದ್ದರೆ ಅವನಿಗೆ ತಿಂದ ಅನ್ನ ಜೀರ್ಣವಾಗುತ್ತಿರಲಿಲ್ಲ. ಆಕೆ ಎಷ್ಟೊಂದು ರೊಮ್ಯಾಂಟಿಕ್ ಕನಸುಗಳನ್ನು ಕಟ್ಟಿಕೊಂಡು ಅವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಆತ ಅವಳ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾದನು. ಅವನಿಗೆ ಸುಜಿಯ ಸೌಂದರ್ಯದ ಮೇಲೆ ವಿಪರೀತ ವ್ಯಾಮೋಹವಿತ್ತು. ಆತ ಅವಳ ಸೌಂದರ್ಯದ ಶಿಖಾರಿಗಾಗಿ ಪ್ರತಿಕ್ಷಣ ಹಂಬಲಿಸುತ್ತಿದ್ದನು. ಬಾಥರೂಮಿನಿಂದ ಬೆಡ್ರೂಮ ತನಕವೂ ಆತ ಅವಳ ಬೆನ್ನು ಕಾಯುತ್ತಿದ್ದನು. ಆಕೆ ನಿಸ್ಸಾಹಯಕಳಾಗಿ ಎಲ್ಲವನ್ನೂ ಮೌನದಿಂದ ಸಹಿಸಿಕೊಂಡು ಮುಂದೆ ಸಾಗಿದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                                               ತಾನು ಪ್ರೀತಿಸಿ ಮದುವೆಯಾದ ಗಂಡ ತನ್ನ ಹೃದಯದ ಆರಾಧಕನಾಗುವ ಬದಲು ಸೌಂದರ್ಯದ ಲೂಟಿಕೋರನಾದಾಗ ಸುಜಿಗೆ ಮೂರು ವರ್ಷದ ನಂತರ ಮೊದಲ ಸಲ ಸತ್ಯನ ನೆನಪಾಯಿತು. ಆಕೆಗೆ ಸತ್ಯ ಮುಂಬೈಯಲ್ಲಿದ್ದಾನೆ ಎಂಬುದಷ್ಟೇ ಗೊತ್ತಿತ್ತು. ಆದರೆ ಆತ ಏನು ಮಾಡುತ್ತಿದ್ದಾನೆ ಹೇಗಿದಾನೆ ಎಂಬುದೇನು ಗೊತ್ತಿರಲಿಲ್ಲ. ಆಕೆ ಅವನ ಸಮಾಚಾರವನ್ನು ತಿಳಿದುಕೊಳ್ಳಲು ತನ್ನ ಕಾಲೇಜ ಫ್ರೆಂಡ್ಸಗಳಿಗೆ ಫೋನ್ ಮಾಡಿ ಕೇಳಿದಳು. ಆಗವಳಿಗೆ ಸತ್ಯ ತಕ್ಕ ಮಟ್ಟಿಗೆ ಸೆಲೆಬ್ರಿಟಿಯಾಗಿದ್ದಾನೆ ಎಂಬುದು ಗೊತ್ತಾಯಿತು. ಆಕೆ ಅವನ ಆಫೀಸಿಯಲ್ ವೆಬಸೈಟ್ www.skkannada.comಗೆ ಭೇಟಿ ನೀಡಿ ಅವನು ಬರೆದ ಕಥೆ ಕವನಗಳನ್ನು ಓದಿದಳು. ಜೊತೆಗೆ ಅವನ ಕಂಪನಿ ವೆಬಸೈಟ್ www.Roaringcreationsfilms.comಗೆ ಭೇಟಿ ನೀಡಿ ಅವನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಳು. ಅಲ್ಲದೆ ಅವನ ಕಂಪನಿಯ ಯ್ಯುಟ್ಯೂಬ ಚಾನಲಗೆ ಭೇಟಿ ನೀಡಿ ಅವನು ಮಾಡಿದ್ದ ವಿಡಿಯೋಗಳನ್ನೆಲ್ಲ ನೋಡಿ ಭಾವುಕಳಾದಳು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                                     ಕೋಟ್ಯಾಂತರ ಜನ ಸತ್ಯನನ್ನು ಕಣ್ಮುಚ್ಚಿ ಫಾಲೋ ಮಾಡಿರೊದನ್ನ ನೋಡಿ ಅವಳು ಸ್ವಲ್ಪ ಅಸೂಯೆ ಪಟ್ಟಳು. ಏಕೆಂದರೆ ಆತ ಮಾಮೂಲಿ ಕಥೆ ಕವನ ಬರೆಯುತ್ತಾ ಯಾವುದಾದರೂ ಕ್ಲರ್ಕ್ ಕೆಲಸ ಮಾಡಿಕೊಂಡು ಬರಿಗೈ ಫಕೀರನಂತೆ ಜೀವನ ತಳ್ಳುತ್ತಾನೆಂದು ಅವಳು ಭಾವಿಸಿದ್ದಳು. ಆದರೆ ಸತ್ಯ ಕೋಟ್ಯಾಂತರ ರೂಪಾಯಿ ಗಳಿಸುವ ಕಂಪನಿಯ ವಾರಸುದಾರನಾಗಿದ್ದನು. ಜೊತೆಗೆ ಕೋಟ್ಯಾಂತರ ಜನರನ್ನು ಸಂಪಾದಿಸಿದ್ದನು. ಸದ್ಯಕ್ಕೆ ಸುಜಿಗೆ ಸತ್ಯನ ಲವ್ ಪ್ರಪೋಸನ್ನು ಒಪ್ಪಿಕೊಂಡು ಅವನನ್ನೇ ಮದುವೆಯಾಗಿದ್ದರೆ ನನ್ನ ಬಾಳು ಚೆನ್ನಾಗಿರುತ್ತಿತ್ತು ಎಂದೆನಿಸತೊಡಗಿತು. ಆದರೆ ಸತ್ಯ ಆಗಸದಲ್ಲಿರುವ ಚಂದ್ರ, ಆತ ತನಗೆ ಸಿಗಲ್ಲ ಎಂದು ಗೊತ್ತಾದಾಗ ಆಕೆ ಅವನನ್ನು ಬಲವಾಗಿ ದ್ವೇಷಿಸಲು ಪ್ರಾರಂಭಿಸಿದಳು. ಆತ ಬರಿ ತನ್ನ ಕವನಗಳಲ್ಲಿ ಮಾತ್ರ ಹೆಣ್ಣನ್ನು ಪೂಜಿಸುತ್ತಾನೆ, ಪ್ರೀತಿಸುತ್ತಾನೆ. ಆದರೆ ನಿಜ ಜೀವನದಲ್ಲಿ ಆತ ಹೆಣ್ಣಿನ ಸೌಂದರ್ಯದ ದಾಸ ಎಂದೆಲ್ಲ ಆಕೆ ಅವನ ಬಗ್ಗೆ ಕೆಟ್ಟದಾಗಿ ಯೋಚಿಸಿದಳು. ದಿನದಿಂದ ದಿನಕ್ಕೆ ಅವನ ಕಥೆಗಳನ್ನು ಓದುತ್ತಾ, ಕವನಗಳ ಮೇಲೆ ಕಣ್ಣಾಡಿಸುತ್ತಾ ಅವನನ್ನು ಪ್ರೀತಿಸತೊಡಗಿದಳು. ಆದರೆ ಆತ ಕೈಗೆ ಸಿಗದ ಮಾಣಿಕ್ಯವೆಂದು ಅವನನ್ನು ದ್ವೇಷಿಸುತ್ತಾ ಪ್ರೀತಿಯಲ್ಲಿನ ಹುಚ್ಚಿಯಾದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                           ಸುಜಿಯ ಗಂಡ ಬ್ಯಾಂಕಿನ ಕೆಲಸದ ನೆಪ ಮಾಡಿಕೊಂಡು ಒಂದು ವಾರ ಬೇರೆ ಎಲ್ಲೋ ಹೋಗಿದ್ದರಿಂದ ಸುಜಿ ತನ್ನ ತವರು ಮನೆಗೆ ಮರಳಿದಳು. ಅಪ್ಪ ಅಮ್ಮನ ಜೊತೆ ಹರಟುತ್ತಾ ನಗುನಗುತ್ತಾ ಕುಳಿತ್ತಿದ್ದಳು. ಅಷ್ಟರಲ್ಲಿ ಹಿಂದಿ ನ್ಯೂಸ್ ಚಾನೆಲನಲ್ಲಿ ಒಂದು ಸುದ್ದಿ ಜೋರಾಗಿ ಪ್ರಸಾರವಾಗುತ್ತಿತ್ತು. ಅದರಲ್ಲಿ "ಖ್ಯಾತ ಲೇಖಕ, ಬ್ಯುಸಿನೆಸ್ ಮ್ಯಾನ ಸತ್ಯ ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾನೆ..." ಎಂಬೆಲ್ಲ ಸುದ್ದಿ ಪ್ರಸಾರವಾಗುತ್ತಿತ್ತು. ಅದನ್ನು ನೋಡಿ ಸುಜಿ ಅವನ ಮೇಲೆ ಕೆಟ್ಟ ಆರೋಪಗಳ ಸುರಿಮಳೆ ಗೈದಳು. ಆಗ ಅವಳ ತಾಯಿ "ಆತ ಬಂಗಾರಕ್ಕಿಂತಲೂ ಶುದ್ಧವಾದ ಹುಡುಗ. ಅವನ ಬಗ್ಗೆ ಹಾಗೆಲ್ಲ ಹುಗುರವಾಗಿ ಮಾತಾಡಬೇಡ" ಎಂದೇಳಿದರು. ಅವಳಪ್ಪ "ಆತ ಕ್ರೈಮಸ್ಟೋರಿ ಬರಿತಾನೆ ಎಂದ ಮಾತ್ರಕ್ಕೆ ಆತ ಕೆಟ್ಟವನಲ್ಲ. ಅವನು ಪ್ರೇಮಕಥೆ ಕವನಗಳನ್ನು ಬರಿತಾನಲ್ಲ? ಕೆಟ್ಟವರ ಹಗರಣಗಳನ್ನು, ರಾಜಕಾರಣಿಗಳ ವಂಚನೆಗಳನ್ನು ಹೆದರದೆ ಬರೆಯುವ ಧೈರ್ಯ ಅವನಿಗಷ್ಟೇ ಇರೋದು..." ಎಂದೆಲ್ಲ ಹೇಳಿ ಸತ್ಯನ ಗುಣಗಾನ ಮಾಡಿದರು. ಅವನ ಗುಣಗಾನ ಕೇಳಿ ಸುಜಿ ಸಿಡಿದೆದ್ದಳು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

              "ಒಂದು ಕಾಲದಲ್ಲಿ  ಸತ್ಯ ನನ್ನ ಬೆಸ್ಟ ಫ್ರೆಂಡಾಗಿದ್ದ, ಅವನ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು" ಎಂದು ಕೂಗಾಡಿದಳು. ಆಗ ಅವಳಮ್ಮ "ಸತ್ಯ ಒಳ್ಳೆ ಹುಡುಗ ಕಣಮ್ಮ. ನಾನು ಒಂದು ಮಾತು ಹೇಳಿದಕ್ಕೆ ಆತ ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿ ನಿನ್ನಿಂದ ದೂರಾದ. ನೀನು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಆತ ನಮ್ಮನೆಗೆ ಬಂದು ನಿನ್ನ ಮತ್ತು ಅವನ ಸ್ನೇಹದ ಬಗ್ಗೆ ವಿವರಿಸಿ ಹೋದ. ಈಗಿನ ಕಾಲದಲ್ಲಿ ಹಿರಿಯರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಯುವಕರು ಸಿಗ್ತಾರಾ?" ಎಂದು ಕೇಳಿದರು. ಅಮ್ಮನ ಮಾತುಗಳನ್ನು ಕೇಳಿದ ನಂತರ ಸುಜಿಗೆ ಸತ್ಯ ಅವತ್ತು ಯಾಕ ಆ ರೀತಿ ನಡೆದುಕೊಂಡನು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿತು. ಆಕೆ ಅದೇ ನೆಪವಿಟ್ಟುಕೊಂಡು ಅವನನ್ನು ದ್ವೇಷಿಸುತ್ತಿದ್ದಳು. ಅವಳ ದ್ವೇಷ ಈಗ ಹುಚ್ಚು ಪ್ರೀತಿಯಾಗಿ ಬದಲಾಯಿತು. ಆಕೆಗೆ ಅವನನ್ನು ಭೇಟಿಯಾಗಬೇಕು, ಅವನೊಂದಿಗೆ ಮಾತನಾಡಬೇಕು ಎಂಬಾಸೆಗಿಂತ ಅವನನ್ನು ಮತ್ತು ಅವನ ಗುಣವನ್ನು ಪರೀಕ್ಷಿಸಬೇಕು ಎಂಬ ಹುಚ್ಚು ಆಸೆ ಹೆಚ್ಚಾಯಿತು. ಅದಕ್ಕಾಗಿ ಆಕೆ ರಾತ್ರಿಯ ಟ್ರೈನ್ ಹಿಡಿದು ಅವನನ್ನು ಕಾಣುವುದಕ್ಕಾಗಿ ಪುಣೆಗೆ ತೆರಳಿದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                 ಟ್ರೈನಿನಲ್ಲಿ ಟೈಮಪಾಸಿಗಂತ ಸುಜಿ ಏನೇನೋ ಗೀಜಲು ಪ್ರಯತ್ನಿಸಿದಳು. ಆದರೆ ಎಲ್ಲರು ಕವಿಯಾಗಬಹುದೆ ಎಂದು ಸುಮ್ಮನಾದಳು. ಸತ್ಯನ ಫೋನ್ ನಂಬರಗೋಸ್ಕರ ತನ್ನ ಎಲ್ಲ ಫ್ರೆಂಡ್ಸಗಳಿಗೆ ಫೋನ್ ಮಾಡಿ ಕೇಳಿದಳು. ಆದರೆ ಆತ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಕೆಲ ಗಂಟೆ ಕಳೆದ ನಂತರ ಅವಳಿಗೆ ಒಂದು ಉಪಾಯ ಹೊಳೆಯಿತು. ಆಕೆ ಸತ್ಯನ ಕಂಪನಿ ವೆಬಸೈಟನಿಂದ ಫೋನ್ ನಂಬರ ತೆಗದುಕೊಂಡು ಫೋನ್ ಮಾಡಿದಳು. ಆದರೆ ರಾತ್ರಿಯಾಗಿರುವುದರಿಂದ ಅವಳ ಫೋನ್ ಕರೆಯನ್ನು ತೆಗೆದುಕೊಳ್ಳಲು ಆಫೀಸಿನಲ್ಲಿ ಯಾರು ಇರಲಿಲ್ಲ. ಆಕೆ ಇಂಟರನೆಟ್ಟಲ್ಲಿ ಹುಡುಕಾಡಿ ಸತ್ಯನ ಪರ್ಸನಲ್ ಸೆಕ್ರೆಟರಿ ನಂಬರನ್ನು ಪಡೆದುಕೊಂಡಳು. ಆದರೆ ಪರ್ಸನಲ್ ಸೆಕ್ರೆಟರಿ ಸುಜಿಯ ಕೋರಿಕೆಯನ್ನು ತಳ್ಳಿ ಹಾಕಿ ಅವಳ ಹಾಗೂ ಸತ್ಯನ ನಡುವೆ ಅಡ್ಡ ಗೋಡೆಯಾದನು. ಟ್ರೈನ್ ವೇಗವಾಗಿ ಚಲಿಸುತ್ತಿತ್ತು. ಸುಜಿಗೆ ಸತ್ಯನ ಬಗ್ಗೆ ತುಂಬಾ ಪ್ರಶ್ನೆಗಳು ಹುಟ್ಟಿಕೊಂಡವು. "ಸತ್ಯ ಹೆದರದೆ ಭ್ರಷ್ಟರ ಬಗ್ಗೆ, ದೇಶದ್ರೋಹಿಗಳ ಬಗ್ಗೆ, ಪಾತಕಿಗಳ ಬಗ್ಗೆ ಬರೆಯುತ್ತಾನಲ್ಲ ಅವನ ಭದ್ರತೆ ಹೇಗೆ? ಆತ ಪ್ರೇಮಕಥೆ ಪ್ರೇಮ ಕವನಗಳ ಜೊತೆಗೆ ಕ್ರೈಂ ಕಥೆಗಳನ್ನು ಸಹ ಬರೆಯುತ್ತಾನಲ್ಲ? ಅವನು ನಿಜವಾಗಿಯೂ ಪ್ರೇಮಾತ್ಮನೇ?" ಎಂಬೆಲ್ಲ ಅನುಮಾನಗಳು ಸುಜಿಯ ತಲೆಯಲ್ಲಿ ಓಡಾದಿದವು. ಆಕೆ ತನಗರಿವಿಲ್ಲದಂತೆಯೇ ನಿದ್ರೆಗೆ ಜಾರಿದಳು. ಬೆಳಿಗ್ಗೆ ಆಕೆ ಕಣ್ಣು ಬಿಟ್ಟಾಗ ಅವಳು ಪುಣೆಯ ಶಿವಾಜಿನಗರ ರೈಲು ನಿಲ್ದಾಣದಲ್ಲಿದ್ದಳು. ಇನ್ನೇನು ಟ್ರೈನ್ ಪುಣೆಯಿಂದ ನಿರ್ಗಮಿಸಿ ಮುಂಬೈ ದಾರಿ ತುಳಿಯುವ ತವಕದಲ್ಲಿತ್ತು. ಅಷ್ಟರಲ್ಲಿ ಸುಜಿ ಎಚ್ಚರವಾಗಿ ರೈಲಿನಿಂದ ಇಳಿದಳು. ಅವಳಿಗಾಗಿ ಅವಳ ಸಂಬಂಧಿಕರ ಹುಡುಗಿಯೊಬ್ಬಳ ಕಾಯುತ್ತಾ ನಿಂತಿದ್ದಳು. ಸುಜಿ ಅವಳೊಂದಿಗೆ ಅವರ ಮನೆಗೆ ಹೋಗಿ ಫ್ರೆಶ್ಶಾಗಿ ಸತ್ಯನನ್ನು ಕಾಣಲು ಅವಸರದಿಂದ ಹೊರಟಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                    ಸುಜಿ ಗೂಗಲ್ ಮ್ಯಾಪ್ ಹಾಗೂ ಆಟೋದವನ ಕೃಪೆಯಿಂದ ನೇರವಾಗಿ ಸತ್ಯನ ಕಂಪನಿಗೆ ಹೋದಳು. ಆದರೆ ನಿನ್ನೆ ಫೋನಿನಲ್ಲಿ ಅಡ್ಡಗೋಡೆಯಾಗಿದ್ದ ಸೆಕ್ರೆಟರಿ ಇವತ್ತು ನೇರವಾಗಿ ಅಡ್ಡಗೋಡೆಯಾದನು. ಆಕೆ ಬಹಳಷ್ಟು ಕೇಳಿಕೊಂಡಾಗ ಆತ ಸತ್ಯನಿಗೆ ಅವಳ ಬಗ್ಗೆ ಹೇಳಿದನು. ಸತ್ಯ ಸರ್ಪರೈಸಾಗಿ ಸ್ವತಃ ತಾನೇ ಬಂದು ಅವಳನ್ನು ತನ್ನ ಛೇಂಬರಿಗೆ ಕರೆದುಕೊಂಡು ಹೋದನು. ಕಾಫೀ ಆಫರ್ ಮಾಡಿ ಅವಳ ಯೋಗಕ್ಷೇಮ ವಿಚಾರಿಸಿದನು. ಆತ ಹಳೆಯದ್ದನ್ನೆಲ್ಲ ಮರೆತು ಹೊಸ ಮನುಷ್ಯನಾಗಿದ್ದನು. ಅವನ ಸರಳತೆ, ನೇರ ಮಾತು, ಪ್ರಶಾಂತ ಕಣ್ಣುಗಳು, ನಿರ್ಮಲ ಮನಸ್ಸು ಅವಳನ್ನು ಬಲವಾಗಿ ಸೆಳೆಯಿತು. ಆದರೆ ಆಕೆ ಅವನ ಚಾರಿತ್ರ್ಯವನ್ನು ಪರೀಕ್ಷಿಸುವುದಕ್ಕಾಗಿ ಅಲ್ಲಿಗೆ ಬಂದಿದ್ದಳು. ಅವಳೊಂಥರಾ ಹಠವಾದಿ ಹುಚ್ಚಿಯಾಗಿದ್ದಳು. ಆಕೆ ಸತ್ಯನಿಗೆ "ನಾನು ನಿನ್ನೊಂದಿಗೆ ತುಂಬಾ ಪರ್ಸನಲ್ಲಾಗಿ ಮಾತಾಡಬೇಕು, ಆಗುತ್ತಾ? ಪ್ಲೀಸ್ ಇಲ್ಲ ಅನಬೇಡ" ಎಂದಳು. ಆದರೆ ಸತ್ಯನಿಗೆ ಒಂದು ಮುಖ್ಯವಾದ ಕೆಲಸದ ಮೇಲೆ ಪುಣೆಯಿಂದ ಮುಂಬೈಗೆ ಹೋಗಬೇಕಿತ್ತು. ಅದಕ್ಕಾಗಿ ಆತ ಅವಳಿಗೆ "ನಾಳೆ ಖಂಡಿತ ಮಾತಾಡೋಣಾ" ಎಂದನು. ಆದರೆ ಸುಜಿ ಹಠ ಹಿಡಿದು ಅವನೊಂದಿಗೆ ಮುಂಬೈಗೆ ತೆರಳಲು ಸಿದ್ಧಳಾದಳು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                 ಸುಜಿಯನ್ನು ಹರ್ಟ ಮಾಡುವ ಮನಸ್ಸಿಲ್ಲದೆ ಆತ ಅವಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದನು. ಆಕೆಯ ಏಕಾಂತವನ್ನು ಹಾಳು ಮಾಡಬಾರದೆಂದು ಡ್ರೈವರಗೆ ರಜೆ ನೀಡಿ ತಾನೇ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟನು. ಅವರಿಬ್ಬರು ತಮಾಷೆಯಾಗಿ ಮಾತಾಡುತ್ತಾ ಹೊರಟಿದ್ದರು. ಆದರೆ ಮುಂದೆ ಟೋಲ ಗೇಟ ಬಳಿ ಪೊಲೀಸರು ನಿಂತಿದ್ದರು. ಸತ್ಯ ಅವರ ಸಮಾಧಾನಕ್ಕಾಗಿ ಸೀಟ್ ಬೆಲ್ಟ ಹಾಕಿಕೊಂಡನು. ಏಕೆಂದರೆ ಅವನನ್ನು ಅಲ್ಲಿನ ಎಲ್ಲ ಪೋಲೀಸರು ಪ್ರೀತಿಯಿಂದ ಕಾಣುತ್ತಿದ್ದರು. ಅದಕ್ಕಾಗಿ ಆತ ಅವರನ್ನು, ಅವರ ನಿಯಮಗಳನ್ನು ಆದರಿಸುತ್ತಿದ್ದನು. ಅದಕ್ಕಾಗಿ ಆತ ಆತುರದಲ್ಲಿ ಸೀಟ್ ಬೆಲ್ಟ ಹಾಕಿಕೊಂಡನು. ಸುಜಿಗೂ ಸಹ ಆತ ಸೀಟ ಬೆಲ್ಟ ಹಾಕಿಕೊಳ್ಳಲು ಹೇಳಿದನು. ಆದರೆ ಸುಜಿಗೆ ಕಾರಲ್ಲಿ ಕುಳಿತು ಪ್ರಯಾಣ ಮಾಡಿದ ಅನುಭವವಿರಲಿಲ್ಲ. ಆಕೆ ಪೆದ್ದಿಯಂತಾಡುವುದನ್ನು ನೋಡಿ ಸತ್ಯನೇ ಅವಳ ಸಿಟ ಬೆಲ್ಟ್ ಹಾಕಿದನು. ಆದರೆ ಅವಸರದಲ್ಲಿ ಅವನ ಕೈ ಅವಳ ಸೊಂಟಕ್ಕೆ ತಾಗಿತು. ಆಕೆ ಅದನ್ನು ಅಪಾರ್ಥ ಮಾಡಿಕೊಳ್ಳಲಿಲ್ಲ. ಆದರೆ ಆಕೆ ಏನಾದರೂ ಸರಿ ಸತ್ಯನ ಚಾರಿತ್ರ್ಯ ಪರೀಕ್ಷೆ ಮಾಡಲೇಬೇಕು ಎಂಬ ಹಠಕ್ಕೆ ಮತ್ತಷ್ಟು ಬದ್ದಳಾದಳು. ಸದ್ಯಕ್ಕೆ ಆಕೆ ಅಕ್ಷರಶಃ ಹುಚ್ಚಿಯಂತೆ ಯೋಚಿಸುತ್ತಿದ್ದಳು. ಮುಂಬೈ ತಲುಪಿದ ನಂತರ ಸತ್ಯ ಅವಳಿಗೆ ಕಾರಲ್ಲೇ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ತನ್ನ ಕೆಲಸಕ್ಕೆ ಹೋದನು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                  ಸತ್ಯ ತನ್ನ ಮೀಟಿಂಗ್ ಮುಗಿಸಿಕೊಂಡು ಬರಲು ಎರಡು ಗಂಟೆಯಾಯಿತು. ಆಕೆ ಅವನು ಬರುವ ದಾರಿಯನ್ನೇ ಕಾಯುತ್ತಿದ್ದಳು. ಆತ ಬರುವುದನ್ನು ಕಂಡ ಆಕೆ ನಿದ್ರಿಸುವಂತೆ ನಾಟಕವಾಡತೊಡಗಿದಳು. ಬೇಕಂತಲೆ ತನ್ನ ಮೈಮೇಲಿನ ಸೀರೆಯನ್ನು ಜಾರಿಸಿ ಕಣ್ಮುಚ್ಚಿ ಸೀಟಿಗೆ ಆಧಾರವಾಗಿ ಒರಗಿದಳು. ಮೂರು ವರ್ಷದ ನಂತರ ಸತ್ಯ ಅವಳನ್ನು ನೋಡಿದಾಗ ಅವಳ ಮಾದಕವಾದ ಮೈಮಾಟಕ್ಕೆ ಮಂತ್ರಮುಗ್ಧನಾಗಿದ್ದನು. ಆಕೆ ಬೇರೆಯವರ ಕಾಲೆಳೆಯುವ ಹುಡುಗಾಟಿಕೆಗಳನ್ನು ಬಿಟ್ಟು ಸಭ್ಯ ಗ್ರಹಸ್ಥೆಯಾಗಿದ್ದಾಳೆ ಎಂಬುದನ್ನು ಕೇಳಿ ಆತ ಖುಷಿಯಾಗಿದ್ದನು. ಅವನಿಗೆ ಅವಳ ಮೇಲೆ ಯಾವುದೇ ತರಹದ ಫೀಲಿಂಗ್ಸ ಇರಲಿಲ್ಲ. ಆತ ಅವಳನ್ನು ಬೆಸ್ಟ್ ಫ್ರೆಂಡ್ ಥರವೇ ನೋಡುತ್ತಿದ್ದನು. ಆಕೆ ಸೆರಗು ಜಾರಿಸಿ ನಾಟಕವಾಡುತ್ತಾ ಮಲಗಿದ ಪರಿಗೆ ಯಾವ ಗಂಡಸಾದರೂ ಜೊಲ್ಲು ಸುರಿಸುತ್ತಾ ಅವಳ ಖಾಸಗಿ ಅಂಗಾಂಗಗಳನ್ನು ನೋಡುತ್ತಾ ನಿಲ್ಲುತ್ತಿದ್ದನು. ಆದರೆ ಆತ ಕೂಡಲೇ ಕಾರಲ್ಲಿನ AC ಆನ ಮಾಡಿದನು. ತಂಪಾದ ಗಾಳಿಯ ರಭಸಕ್ಕೆ ಆಕೆ ನಿದ್ದೆಯಿಂದ ಎದ್ದಂತೆ ನಾಟಕವಾಡುತ್ತಾ ನಾಚುತ್ತಾ ತನ್ನ ಸೀರೆಯನ್ನು ಸರಿಮಾಡಿಕೊಂಡಳು. ಆಗಾತ ಅವಳಿಗೆ "ಸ್ವಾರಿ, ನಾನು ಹೋಗೋ ಅವಸರದಲ್ಲಿ  AC ಆನ ಮಾಡುವುದನ್ನು ಮರೆತು ಬಿಟ್ಟೆ..." ಎಂದನು. ಅದಕ್ಕಾಕೆ "No Problem, Its ok" ಎಂದೇಳಿ ನಸು ನಕ್ಕಳು. ಅವರಿಬ್ಬರು ಹೆದ್ದಾರಿ ಪಕ್ಕದ ಚಾಯ್ ಗಾಡಿಯ ಮೇಲೆ ಖಡಕಾದ ಚಾಯ್ ಕುಡಿದು ಪುಣೆಗೆ ಮರಳಿದರು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                           ಸತ್ಯ ಹಾಗೂ ಸುಜಿ ವಾಪಸ್ಸು ಪುಣೆಗೆ ಮರಳಿದಾಗ ಸಂಜೆಯಾಗಿತ್ತು. ಅದಕ್ಕಾಗಿ ಆತ ಅವಳಿಗೆ "ನಾಳೆ ಸಿಗೋಣ ಮತ್ತು ಮಾತಾಡೋಣ" ಎಂದೇಳಿ "ನಿನ್ನನ್ನು ಈಗ ಎಲ್ಲಿ ಡ್ರಾಪ್ ಮಾಡಲಿ? ನಿಮ್ಮ ಸಂಬಂಧಿಕರ ಮನೆ ಎಲ್ಲಿದೆ?" ಎಂದು ಕೇಳಿದನು. ಅದಕ್ಕಾಕೆ "ನನಗೆ ನಿನ್ನೊಂದಿಗೆ ತುಂಬಾ ಮಾತನಾಡೊದಿದೆ. ನಾನು ನಿನಗೆ ಭಾರಾನಾ? ನನ್ನನ್ನು ನಿನ್ನ ಮನೆಗೆ ಇನ್ವೈಟ್ ಮಾಡಲ್ವಾ?" ಎಂದು ಕೇಳಿದಳು. ಅದಕ್ಕಾತ "ಹಾಗೇನಿಲ್ಲ, ಸದ್ಯಕ್ಕೆ ಮನೆಯಲ್ಲಿ ಯಾರಿಲ್ಲ. ಅದಕ್ಕೆ ನಿನ್ನ ಇನ್ವೈಟ್ ಮಾಡಲಿಲ್ಲ. ನಾಳೆ ಖಂಡಿತ ಇನ್ವೈಟ ಮಾಡ್ತೀನಿ" ಎಂದನು. ಆಗ ಸುಜಿ ಇದೇ ಸರಿಯಾದ ಸಮಯವೆಂದು ನೆಪ ಮಾಡಿಕೊಂಡು ಅವನ ಮನೆಗೆ ಹೋದಳು. ಅವಳಿಗೆ "ಮಹಾರಾಣಿಯಿಲ್ಲದೆ ಈ ಮನೆ ಇಷ್ಟೊಂದು ಅಚ್ಚುಕಟ್ಟಾಗಿದೆ ಹೇಗೆ?" ಎಂಬ ಪ್ರಶ್ನೆ ಎದುರಾಗಿ ಮರೆಯಾಯಿತು. ಆಕೆ ಅವನೊಂದಿಗೆ ಕಾಲೇಜಿನ ದಿನಗಳ ಬಗ್ಗೆ ಹರಟುತ್ತಾ ಸಮಯ ಕಳೆದಳು. ನಂತರ ಊಟವಾದ ಮೇಲೆ ಅವನೊಂದಿಗೆ ಟೆರೆಸ್ ಮೇಲೆ ಸ್ವಲ್ಪ ಹೊತ್ತು ವಾಕ್ ಮಾಡಿದಳು. ನಂತರ ಒಬ್ಬಳೇ ಮಲಗಲು ಭಯವಾಗುತ್ತಂತಾ ಹೇಳಿ ಅವನೊಂದಿಗೆ ಅವನ ಬೆಡ್ರೂಮ ಹೊಕ್ಕಳು. ಆಕೆಗೆ ಅವನ ಚಾರಿತ್ರ್ಯವನ್ನು ಪರೀಕ್ಷೆ ಮಾಡಬೇಕೆಂಬ ಹುಚ್ಚಿನ್ನು ಬಿಟ್ಟಿರಲಿಲ್ಲ. ಅದಕ್ಕಾಗಿ ಆಕೆ ಅವನನ್ನು ಪರೀಕ್ಷಿಸುವುದಕ್ಕಾಗಿ ಕಾಲೇಜಿನಲ್ಲಿರುವಾಗ ಅವನ ಪ್ರೀತಿಗಾಗಿ ಅವನ ಜೊತೆ ಮಲಗಲು ಸಹ ಸಿದ್ಧಳಿದ್ದ ಜ್ಯೋತಿಯ ವಿಷಯ ಕೆದಳಿದಳು. ತನಗಿಂತ ಸುಂದರವಾದ ಅವಳೊಂದಿಗೆ ಮದುವೆಯಾಗಬಹುದಿತ್ತಲ್ಲ ಎಂದು ಕೀಚಾಯಿಸಿದಳು. ಆತ ಬಾಯಿ ಬಿಡದಿದ್ದಾಗ ಆಕೆ ತನ್ನ ಸೌಂದರ್ಯದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

               ಸುಜಿ ತನ್ನ ಮಾದಕವಾದ ಮೈಮಾಟದಿಂದ ಸತ್ಯನನ್ನು ಉದ್ರೇಕಿಸಲು ಮುಂದಾದಳು. ಸುಜಿ ತನ್ನ ಸೀರೆಯ ಸೆರಗನ್ನು ಸ್ವಲ್ಪ ಜಾರಿಸಿ ಅವನನ್ನು ಸೆಳೆಯಲು ಪ್ರಯತ್ನಿಸಿ ಸೋತಳು. ನಂತರ  ಅವನನ್ನು ಅಪ್ಪಿಕೊಂಡು ಅವನ ಕೈಗಳನ್ನು ನಿಧಾನವಾಗಿ ತನ್ನ ಸಪೂರ ಸೊಂಟದ ಮೇಲಿಟ್ಟುಕೊಂಡಳು. ಆತ ಅವಳನ್ನು ದೂರ ತಳ್ಳಿ ದೂರ ನಿಂತಾಗ "ಆವತ್ತು ನೀ ನನ್ನನ್ನು ಬಯಸಿದಾಗ ನಾ ನಿನ್ನಿಂದ ದೂರಾಗಿ ಮೂರು ವರ್ಷ ನೀನಿಲ್ಲದೆ ನರಳಿರುವೆ. ನೀನಿಗ ಮತ್ತೆ ಸಿಕ್ಕಿರುವೆ. ನಿನ್ನನ್ನು ಕಳೆದುಕೊಳ್ಳಲು ನನಗಿಷ್ಟವಿಲ್ಲ. ಸದ್ಯಕ್ಕೆ ನನ್ನ ಮೈಮನಸ್ಸು ನಿನ್ನ ಸ್ವತ್ತು. ಪ್ಲೀಸ್ ನನ್ನ ಸ್ವೀಕರಿಸಿ ನನ್ನಾಸೆಯನ್ನು ಪೂರೈಸು" ಎಂದೇಳಿ ಆಕೆ ತನ್ನ ಸೆರಗನ್ನು ಸಂಪೂರ್ಣವಾಗಿ ಜಾರಿಸಿ ಅವನೆದುರು ಶಿಲಾಬಾಲಿಕೆಯಂತೆ ಅರೆಬೆತ್ತಲಾಗಿ ನಿಂತಳು. ಮದುವೆಯಾದ ಮೇಲೆ ಹುಡುಗಿಯರು ಮುಂಚೆಗಿಂತಲೂ ಸೂಪರ ಸುಂದರಿಯರಾಗುತ್ತಾರೆ ಎಂದಾತ ಎಷ್ಟೋ ಸಲ ಬರೆದಿದ್ದನು. ಈಗ ಅದನ್ನು ನೋಡಿ ಮುಜುಗುರಕ್ಕೊಳಗಾದನು. ಮದುವೆಯಾಗಿ ಗಂಡನ ನಿರಂತರ ಸೌಂದರ್ಯದ ಶಿಖಾರಿಗೆ ತುತ್ತಾದರೂ ಅವಳ ಸೌಂದರ್ಯ ಸ್ವಲ್ಪವೂ ಮಾಸಿರಲಿಲ್ಲ. ಕಾಲೇಜಿನಲ್ಲಿರುವುದಕ್ಕಿಂತಲೂ ಈಗಾಕೆ ಸುಂದರವಾಗಿದ್ದಳು. ತನ್ನ ಸುಂದರವಾದ ಶರೀರವನ್ನು ನೋಡಿ, ಬಿಲ್ಲಿನಂತೆ ಬಾಗಿದ ಎದೆಯುಬ್ಬನ್ನು ನೋಡಿ, ಸ್ಪರ್ಶಿಸಿ ಮುದ್ದಾಡಬೇಕೆನಿಸುವ ಸಪೂರ ಸೊಂಟವನ್ನು ನೋಡಿ ಆತ ತನಗೆ ಶರಣಾಗುತ್ತಾನೆ ಎಂಬ ಹುಚ್ಚು ಕಲ್ಪನೆಯಲ್ಲಿ ಅವಳಿದ್ದಳು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                    ಬಿಗಿಯಾದ ಬಟ್ಟೆಗಳಲ್ಲಿ ಬಂಧಿಯಾಗಿ ಸೀಳಿಕೊಂಡು ಹೊರಬರಲು ಹಂಬಲಿಸುತ್ತಿದ್ದ ಸುಜಿಯ ದೇಹಸಿರಿಯ ಸೌಂದರ್ಯ ಸತ್ಯನ ನಿಯತ್ತಿಗೆ ನೇರ ಸವಾಲೆಸೆಯಿತು. ಆದರೆ ಆತ ಅವಳ ದೇಹಸಿರಿಗೆ ಜೊಲ್ಲು ಸುರಿಸದೇ ಅವಳ ಸೆರಗನ್ನು ಎತ್ತಿ ಅವಳಿಗೆ ಹೊದಿಸಿದನು. ಆದರೆ ಆಕೆ ಅವನನ್ನು ತನ್ನೆಡೆಗೆ ಎಳೆದುಕೊಂಡು ಮಂಚದ ಮೇಲೆ ಬಿದ್ದಳು. ಇಷ್ಟಾದರೂ ಅವನ ನೋಟ ಪವಿತ್ರವಾಗಿತ್ತು. ಮನಸ್ಸು ಪ್ರಶಾಂತವಾಗಿತ್ತು. ಆದರೆ ಅವಳೆದೆ ಜೋರಾಗಿ ಕಂಪಿಸುತ್ತಿತ್ತು. ಅವಳೆದೆಯ ಕಂಪನ ಅವನಿಗೆ ಎಲ್ಲವನ್ನೂ ವಿವರಿಸಿತು. ಲಕ್ಷಾಂತರ ಹುಡುಗಿಯರ ಮನಕದ್ದವನಿಗೆ ಸುಜಿಯಂಥ ದುರ್ಬಲ ಮನಸ್ಸಿನ ಹೆಣ್ಣಿನ ಅಂತರಾಳವನ್ನು ಅರ್ಥಮಾಡಿಕೊಳ್ಳುವುದೇನು ಹೊಸದಾಗಿರಲಿಲ್ಲ. ಆತ ಅವಳಿಗೆ "ಸುಜಿ ಸಾಕು ಮಾಡು ನಿನ್ನ ನಾಟಕ. ಇನ್ನು ಎಷ್ಟಂತ ಪರೀಕ್ಷಿಸುವೆ?" ಎಂದು ಕೇಳಿದಾಗ ಆಗಾಕೆ ನಾಚಿ ಎದ್ದು ತನ್ನ ಸೆರಗನ್ನು ಸರಿ ಮಾಡಿಕೊಳ್ಳುತ್ತಿದ್ದಳು. ಅಷ್ಟರಲ್ಲಿ "Super shot, Don't cut it" ಎನ್ನುತ್ತಾ ಒಬ್ಬಳು ಚೆಲುವೆ ಅವರಿದ್ದ ಕೋಣೆಗೆ ಬಂದಳು. ಅವಳನ್ನು ನೋಡಿ ಸುಜಿ ಕಕ್ಕಾಬಿಕ್ಕಿಯಾದಳು. ಏಕೆಂದರೆ ಅಲ್ಲಿಗೆ ಈಗ ಬಂದವಳೇ ಜ್ಯೋತಿ. ಸುಜಿಗೆ ಈಗ ಏನು ಮಾತಾಡಬೇಕು ಎಂದು ತೋಚದಾಯಿತು. ಆಕೆ ಭಾವುಕಳಾಗಿ "ಸತ್ಯ ನನ್ನ ಕ್ಷಮಿಸಿ ಬಿಡು. ನಿನ್ನ ಚಾರಿತ್ರ್ಯವನ್ನು ಪರೀಕ್ಷಿಸುವುದಕ್ಕಾಗಿ ನಾನಿ ನಾಟಕವಾಡಿದೆ..." ಎನ್ನುತ್ತಿದ್ದಳು ಅಷ್ಟರಲ್ಲಿ ಜ್ಯೋತಿ ಅವಳನ್ನು ಒಂದು ಬೇರೆ ಕೋಣೆಗೆ ಕರೆದುಕೊಂಡೋಗಿ "ಈಗ ಹಾಯಾಗಿ ಮಲಗಿ ವಿಶ್ರಾಂತಿ ತೆಗದುಕೋ, ನಾಳೆ ಮಾತಾಡೋಣ" ಎಂದೇಳಿ ಅವಳನ್ನು ಮಲಗಿಸಿ ಸತ್ಯನ ಕೋಣೆಗೆ ಮರಳಿ ಬಂದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                 "ಸುಜಿಯನ್ನು ಆ ಸ್ಥಿತಿಯಲ್ಲಿ ನನ್ನೊಂದಿಗೆ ನೋಡಿ ಜ್ಯೋತಿ ಏನೆಂದುಕೊಂಡಳೊ" ಎಂಬ ಭಯದಲ್ಲಿ ಸತ್ಯ ಕಿಟಕಿ ಪಕ್ಕದಲ್ಲಿ ನಿಂತು ಆಕಾಶವನ್ನು ನೋಡುತ್ತಾ ನಿಂತಿದ್ದನು. ಜ್ಯೋತಿ ನೇರವಾಗಿ ಬೆಡ್ರೂಮಿಗೆ ಬಂದು ಚಿಲಕ ಹಾಕಿ ಸತ್ಯನನ್ನು ಹಿಂದಿನಿಂದ ತಬ್ಬಿಕೊಂಡು "ಯಾಕೋ ನನ್ನ ಕರೆದುಕೊಂಡು ಬರಲು ಏರಪೋರ್ಟಿಗೆ ಬರಲಿಲ್ಲ? ನೀನ ಬರ್ತಿಯಾ ಅಂತಾ ನಾನು ಅನ್ಕೊಂಡಿದ್ದೆ ಗೊತ್ತಾ?" ಎಂದಳು. ಆಗ ಸತ್ಯ "ಸ್ವಾರಿ ಜ್ಯೋತಿ, ನೀನೆಂದು ಕೊಂಡಂತೆ ನನ್ನ ಮತ್ತು ಸುಜಿ ಮಧ್ಯೆ ಏನು ನಡೆದಿಲ್ಲ..." ಎನ್ನುತ್ತಿದ್ದನು ಅಷ್ಟರಲ್ಲಿ ಆಕೆ ಅವನ ಬಾಯ್ಮುಚ್ಚಿ ಅವನನ್ನು ಮಂಚದ ಮೇಲೆ ತಳ್ಳಿ ಅವನೆದೆ ಮೇಲೆ ಮಲಗಿ "ನಾನು ಅವಳ ಬಗ್ಗೆ ಏನಾದರೂ ಕೇಳಿದ್ನಾ? ಯಾಕೋ ಏನೇನೋ ಯೋಚ್ನೆ ಮಾಡ್ತೀಯಾ? ಸುಜಿ ಕಾಲೇಜಿನಲ್ಲಿದ್ದಾಗ ಬೇರೆಯವರ ಕಾಲೆಳೆಯುತ್ತಿದ್ದಳು. ಈಗ ನಿನ್ನ ಟೆಸ್ಟ್ ಮಾಡೋಕ್ಕೊಗಿ ಅವಳ ಕಾಲನ್ನು ಅವಳೆ ಎಳೆದುಕೊಳ್ಳುವ ಹುಚ್ತನ ಮಾಡಿದ್ದಾಳೆ. ಅವಳು ಒಂಥರಾ ಹುಚ್ಚಿನೇ. ಅವಳ ವಿಷಯ ಬಿಡು" ಎಂದಳು. ಅದಕ್ಕಾತ "ನನ್ನ ಬೆಸ್ಟ ಫ್ರೆಂಡಗೆ ನನ್ನ ಕ್ಯಾರೆಕ್ಟರ್ ಮೇಲೆ ಸಂದೇಹವಿದೆಯೆಂದರೆ ಇನ್ನು ಬೇರೆಯವರ ಕತೆ ಏನೋ?" ಎಂದನು. ಆಗಾಕೆ "ಬೇರೆಯವರ ಅಂತೆಕಂತೆಗಳೆಲ್ಲ ನಿನಗೆ ಬೇಡ. ಯಾಕಿಷ್ಟು ಯೋಚ್ನೆ ಮಾಡ್ತಿಯಾ? ನೀನು ಕ್ರೈಂ ಸ್ಟೋರಿ ಬರೆದ ಮಾತ್ರಕ್ಕೆ ನೀನು ಕೆಟ್ಟವನಾಗಲ್ಲ. ರೊಮ್ಯಾಂಟಿಕ್ ಕಥೆಗಳನ್ನು ಬರೆದ ಮಾತ್ರ ರಸಿಕ ಎಂದರ್ಥವಲ್ಲ. ಇರೋದನ್ನು ಹೆದರದೆ ಬರೆಯೋದು ಲೇಖಕನ ಕರ್ತವ್ಯ. ಅದನ್ನ ನೀನು ಸರಿಯಾಗೇ ಮಾಡ್ತಿದೀಯಾ. ಅಂದ್ಮೇಲೆ ಯಾಕೆ ಸುಮ್ನೆ ಯೋಚ್ನೆ ಮಾಡ್ತಿಯಾ ಅದ್ನ ಬಿಡು. ನಾನೀಗ ಫುಲ್ ರೊಮ್ಯಾಂಟಿಕ್ ಮೂಡಲ್ಲಿದಿನಿ ನನ್ನ ಮೂಡ ಹಾಳ ಮಾಡಬೇಡ" ಎಂದಳು. ಆಗಾತ "ಆದರೂ.... " ಎಂದು ರಾಗವೇಳೆಯುತ್ತಿದ್ದನು. ಅಷ್ಟರಲ್ಲಿ ಆಕೆ ಅವನ ಬಾಯ್ಮುಚ್ಚಿ "ನೀನು ಅಪ್ಪಟ ಅಪರಂಜಿ. ನಿನ್ನನ್ನು ಯಾವ ಹುಡುಗಿಯು ದ್ವೇಷಿಸಲ್ಲ. ನಿನ್ನನ್ನು ದ್ವೇಷಿಸುವವರು ಕಲ್ಲು ಹೃದಯದವರು ಅಷ್ಟೇ." ಎಂದೇಳಿ ಅವನ ತುಟಿಗೆ ತುಟಿ ಸೇರಿಸಿದಳು. ಸುಜಿಯ ಹುಚ್ಚು ವರ್ತನೆಯಿಂದ ಗಾಯಗೊಂಡಿದ್ದ ಸತ್ಯ ಮುದ್ದಿನ ಮಡದಿಯ ಮಿಲನದಲ್ಲಿ ಗುಣಮುಖನಾಗಿ ತನ್ನ ಮೈದಣಿವನ್ನು ಆರಿಸಿಕೊಂಡನು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                                   ತಡರಾತ್ರಿ ಎಷ್ಟೇ ಲೇಟಾಗಿ ಮಲಗಿದರೂ ಸಹ ಸತ್ಯ ಸುರ್ಯೋದಯಕ್ಕಿಂತ ಮುಂಚಿತವಾಗಿ ಹಾಸಿಗೆಯಿಂದೆದ್ದು ಫ್ರೆಶ್ಶಾಗಿ ತಪ್ಪದೆ ಜಾಗಿಂಗಗೆ ಹೋಗುತ್ತಿದ್ದನು. ಇವತ್ತು ಅಷ್ಟೇ, ಆತ ಕಣ್ತೆರೆದು ಹಾಸಿಗೆಯಿಂದ ಏಳಲು ಮುಂದಾದನು. ಆದರೆ ಅವನ ಮಡದಿ ಅವನನ್ನು ಮತ್ತಷ್ಟು ಬಿಗಿದಪ್ಪಿಕೊಂಡು ಮಲಗಿದಳು. ಕೊರೆಯುವ ಚಳಿಯಲ್ಲಿ ಮೈಮೇಲೆ ಒಂಚೂರು ಬಟ್ಟೆಯಿಲ್ಲದೆ ಮಲಗಿದವಳಿಗೆ ಅವನ ಅಪ್ಪುಗೆಯೊಂದೆ ಆಸರೆಯಾಗಿತ್ತು. ಆದರೂ ಆತ ನಯವಾಗಿ ಅವಳ ಬಂಧದಿಂದ ತಪ್ಪಿಸಿಕೊಂಡು ಅವಳ ಮೇಲೆ ಎರಡೆರಡು ಬೆಡಶೀಟಗಳನ್ನು ಹೊದಿಸಿ ತನ್ನ ದಿನನಿತ್ಯದ ಚಟುವಟಿಕೆಯಲ್ಲಿ ನಿರತನಾದನು. ಜ್ಯೋತಿ ಯಾವುದೇ ಚಿಂತೆಯಿಲ್ಲದೆ ಸತ್ಯನ ತೋಳಲ್ಲಿ ಸ್ವರ್ಗಸುಖವನ್ನು ಅನುಭವಿಸಿ ಹಾಯಾಗಿ ನಿದ್ದೆ ಮಾಡುತ್ತಿದ್ದಳು. ಆದರೆ ಸುಜಿ ಮಾತ್ರ "ಜ್ಯೋತಿ ಹೇಗೆ ಸತ್ಯನ ಮನೆಯಲ್ಲಿ? ಅವನಿಗೂ ಅವಳಿಗೂ ಏನ ಸಂಬಂಧ?" ಎಂಬ ಚಿಂತೆಗಳಲ್ಲಿ ನಿದ್ರೆ ಬಾರದೆ ಸುಮ್ಮನೆ ಹೊರಳಾಡಿ ರಾತ್ರಿ ಕಳೆದಳು. ಬೆಳಿಗ್ಗೆಯಾಗುತ್ತಿದ್ದಂತೆಯೆ ಸತ್ಯನಿಗೆ ಜ್ಯೋತಿಯ ಬಗ್ಗೆ ಕೇಳಬೇಕು ಎಂಬ ಕಾತುರದಲ್ಲಿ ಸುಜಿಯಿದ್ದಳು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                              ಸುಜಿ ಎದ್ದು ಮುಂಜಾನೆಯ ಕ್ರಿಯೆಗಳನ್ನೆಲ್ಲ ಮುಗಿಸಿದರೂ ಸತ್ಯ ಇನ್ನು ಮರಳಿರಲಿಲ್ಲ. ಮುಂಜಾನೆ 7 ಗಂಟೆಯಾಗಿತ್ತು. ಸುಜಿ ಸತ್ಯನ ಬೆಡ್ರೂಮಿಗೆ ಹೋದಳು. ಬಾಗಿಲು ಅರ್ಧ ಮುಚ್ಚಿತ್ತು. ಆಕೆ ಬಾಗಿಲನ್ನು ತೆರೆದು ಒಳ ಹೋದಳು. ಸತ್ಯನೇ ಇನ್ನು ಮಲಗಿದ್ದಾನೆಂದು ಭಾವಿಸಿ ಆಕೆ ಬೆಡಶೀಟನ್ನು ಎಳೆದಳು. ಆದರೆ ಅದರೊಳಗೆ ಜ್ಯೋತಿ ನಗ್ನಾವಸ್ಥೆಯಲ್ಲಿದ್ದಳು. ಚಳಿಯಿಂದ ಆಕೆ ನಿದ್ರೆಯಿಂದೆದ್ದು ಸುಜಿಯನ್ನು ನೋಡಿ ನಾಚಿಕೊಂಡು ಬೆಡಶೀಟನಿಂದ ತನ್ನ ಮೈಮುಚ್ಚಿಕೊಂಡಳು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಜಿ ಬಾಗಿಲಿನ ಚಿಲಕ ಹಾಕಿ AC ಆರಿಸಿದಳು. ನಂತರ ಅವಳ ಮೇಲೆ ಪ್ರಶ್ನೆಗಳ ಮಳೆಗೈದಳು. "ನೀನೆಗೆ ಇಲ್ಲಿ? ಅದು ಈ ಸ್ಥಿತಿಯಲ್ಲಿ? ನಿನಗೂ ಸತ್ಯನಿಗೂ ಏನ ಸಂಬಂಧ?" ಎಂದು ಒಂದೇ ಉಸಿರಿನಿಂದ ಕೇಳಿದಳು. ಅದಕ್ಕೆ ಜ್ಯೋತಿ ಸ್ವಲ್ಪ ಸುಧಾರಿಸಿಕೊಂಡು ಶಾಂತಚಿತ್ತದಿಂದ "ನಾನು ಕಾಲೇಜಿನಲ್ಲಿರುವಾಗ ಮೂರು ವರ್ಷ, ನಂತರ ಪುಣೆಯಲ್ಲಿ ಎರಡು ವರ್ಷ, ಒಟ್ನಲ್ಲಿ ಐದು ವರ್ಷ ಅವನಿಗಾಗಿ ಪ್ರೇಮ ತಪಸ್ಸು ಮಾಡಿ, ಅವನ ಮನಗೆದ್ದು ಕಳೆದ ವರ್ಷ ಅವನೊಂದಿಗೆ ಮದುವೆಯಾಗಿರುವೆ. ನಾವಿಬ್ಬರೂ ಈಗ ಗಂಡಹೆಂಡತಿಯರು..." ಎಂದಳು. ಅವಳ ಮಾತುಗಳನ್ನು ಕೇಳಿ ಸುಜಿ ದಂಗಾದಳು. ಇವಳು ಕೊನೆಗೂ ಸತ್ಯನನ್ನು ತನ್ನ ಸ್ವತ್ತಾಗಿಸಿಕೊಂಡಳಲ್ಲ ಎಂದವಳು ಜಲಸಿಯಾದಳು. ಏನು ಮಾತಾಡಬೇಕೆಂದು ತೋಚದೆ ಸುಜಿ ಅವಳಿಗೆ "ನೀನು ತುಂಬಾ ಲಕ್ಕಿ, ನಿನಗೆ ಸತ್ಯನಂಥ ಸಂಗಾತಿ ಸಿಕ್ಕಿದ್ದಾನೆ.." ಎಂದಳು. ಅದಕ್ಕಾಕೆ "ಅವನನ್ನು ನನಗೆ ಬಿಟ್ಟು ಕೊಟ್ಟು ಕೊಟ್ಟಿದ್ದಕ್ಕೆ ಥ್ಯಾಂಕ್ಸ್..." ಅಂತೇಳಿ ಅವಳೆದೆ ಮೇಲೆ ಹೊಡೆದಳು.

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                               ಸತ್ಯನ ಚಾರಿತ್ರ್ಯ ಪರೀಕ್ಷೆ ಮಾಡಬೇಕೆಂದು ಬಂದ ಸುಜಿ ಜ್ಯೋತಿಯ ಎದುರು ತನ್ನ ಚಾರಿತ್ರ್ಯವನ್ನು ಕಳೆದುಕೊಂಡಳು. ಸದ್ಯಕ್ಕೆ ಆಕೆಯ ಬಳಿ ಸತ್ಯನನ್ನು ದ್ವೇಷಿಸಲು ಯಾವ ಕಾರಣಗಳು ಇರಲಿಲ್ಲ. ಆದರೆ ಅವನನ್ನು ಪ್ರೀತಿಸಲು ಆಕೆಗೆ ನೂರಾರು ಕಾರಣಗಳಿದ್ದವು. ಆಕೆ ಅವನ ಮೇಲೆ ಮೋಹಿತಳಾಗಿದ್ದಳು. ಆದರೆ ಸತ್ಯ ಅವಳಾಸೆಗಳಿಗೆ ಸೊಪ್ಪಾಕ್ಕಲ್ಲವೆಂದು ಸುಮ್ಮನಾದಳು. ಸದ್ಯಕ್ಕವಳು ಪ್ರೀತಿಯಲ್ಲಿ ಹುಚ್ಚಳಾಗಿದ್ದಳು. ಅವಳ ಮನಸ್ಸಲ್ಲಿಗ ಏನೇನೋ ಹುಚ್ಚು ಆಲೋಚನೆಗಳು ಓಡಾಡುತ್ತಿದ್ದವು. ಅಷ್ಟರಲ್ಲಿ ಸತ್ಯ ಬಂದು ಅವಳನ್ನು ಮಾತನಾಡಿಸಿದನು. ಆದರೆ ಈಗ ಅವಳಿಗೆ ಅವನಿಗೆ ಮುಖ ಕೊಟ್ಟು ಮಾತನಾಡುವ ಧೈರ್ಯವಾಗಲಿಲ್ಲ. ಆಕೆ ಅವನೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡದೆ ಮಾತಾಡಿದರೂ ಮೌನವಾದಳು. ಅವಳ ಹುಚ್ತನದ ಅರಿವು ಅವನಿಗಿತ್ತು. ಅದಕ್ಕಾಗಿ ಆತ ಅವಳನ್ನು ಸಂತೈಸಿದನು. ಮುಂಜಾನೆಯ ಉಪಹಾರವಾಗುತ್ತಿದ್ದಂತೆಯೆ ಸುಜಿ ಊರಿಗೆ ಹೊರಡಲು ಸಿದ್ಧಳಾದಳು. ಸತ್ಯ ಹಾಗೂ ಜ್ಯೋತಿ ಅವಳಿಗೆ ಒಂದ್ನಾಲ್ಕು ದಿನ ನಿಲ್ಲುವಂತೆ ಹೇಳಿದರೂ ಅವಳು ಕೇಳಲಿಲ್ಲ. ಅವಳು ಹಠ ಹಿಡಿದು ಹೊರಡಲು ಸಿದ್ಧಳಾದಳು. ಸತ್ಯ ಹಾಗೂ ಜ್ಯೋತಿ ಅವಳನ್ನು ಬೀಳ್ಕೊಡಲು ರೈಲ್ವೆ ಸ್ಟೇಷನ್ನಿಗೆ ಹೋದರು. ಹೋಗುವಾಗ ಸುಜಿ  ಸತ್ಯನನ್ನು ಅಪ್ಪಿಕೊಂಡಳು. ಆದರೆ ಈಗವಳ ಮನಸ್ಸು ಹಗುರಾಗಿತ್ತು. ಅವಳ ಅಪ್ಪುಗೆಯಲ್ಲಿ ಯಾವುದೇ ಕೆಟ್ಟ ಯೋಚನೆಯಿರಲಿಲ್ಲ. ನಂತರ ಆಕೆ ಜ್ಯೋತಿಯನ್ನು ಅಪ್ಪಿಕೊಂಡು ಅವಳ ಕಿವಿಯಲ್ಲಿ  "ನನ್ನ ಗೆಳೆಯನನ್ನು ಚೆನ್ನಾಗಿ ನೋಡಿಕೋ. ಏಕೆಂದರೆ ಅವನ ಮೇಲೆ ತುಂಬಾ ಹುಡುಗಿಯರ ಕಣ್ಣಿದೆ" ಎಂದಳು. ಅದಕ್ಕೆ ಜ್ಯೋತಿ "ನನ್ನ ಗಂಡನನ್ನು ಬೇಕಾದರೂ ನೀನು ಬಾಡಿಗೆ ಒಯ್ಯಬಹುದು. ನನ್ನ ಗಂಡನನ್ನು ಯಾವ ಸ್ತ್ರೀಯು ದ್ವೇಷಿಸಬಾರದು ಎಂಬಾಸೆ ನನ್ನದು..." ಎಂದಳು. ಆಗ ಸುಜಿ ಅವಳ ಬೆನ್ನು ತಟ್ಟಿ ಸತ್ಯನೆಡಗೆ ನಗು ಬೀರುತ್ತಾ ಸ್ವಲ್ಪ ಕಣ್ಣೀರಾಕುತ್ತಾ ಟ್ರೈನ್ ಹತ್ತಿದಳು. ಅವಳನ್ನು ನೋಡುತ್ತಾ ಸತ್ಯ ಜ್ಯೋತಿ ಇಬ್ಬರು ಭಾವುಕರಾಗಿ ನಿಂತರು. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                            ಟ್ರೈನ್ ವೇಗವಾಗಿ ಓಡುತ್ತಿತ್ತು. ಅವಳ ಮನಸ್ಸಲ್ಲಿ ಮತ್ತೆ ಹುಚ್ಚು ಆಸೆಗಳು ಜನ್ಮ ತಾಳಿದವು. ಆಗ ಆಕೆ www.Roaringcreationsfilms.comನಲ್ಲಿ ಸತ್ಯ ಬರೆದ ಹಿಂದಿ ಕಥೆಯನ್ನು ಓದಿದಳು. ಅದನ್ನು ಓದಿದ ನಂತರ ಅವಳಿಗೆ
 "ತಾನು ಒಂದು ಬಿಡಿಗಾಸು ಸಂಪಾದನೆಯಿಲ್ಲದೆ ಸೋಮಾರಿಯಾಗಿರುವುದರಿಂದಲೇ ನನ್ನ ಗಂಡ ನನ್ನನ್ನು ದೈಹಿಕವಾಗಿ ಶೋಷಿಸುತ್ತಿದ್ದಾನೆ, ನಾನು ಆರ್ಥಿಕವಾಗಿ ಸ್ವತಂತ್ರವಾದರೆ ನನ್ನ ಅನುಮತಿಯಿಲ್ಲದೆ ಆತ ನನ್ನ ಸೆರಗಿಗೆ ಕೈ ಹಾಕುವುದಿಲ್ಲ" ಎಂಬ ನಿಜ ಅರಿವಾಯಿತು. ಅದಕ್ಕಾಗಿ ಆಕೆ ಸ್ವಂತ ಸಂಪಾದನೆ ಮಾಡಬೇಕೆಂದು ಪಣತೊಟ್ಟಳು. ಮನೆಗೆ ಹೋದ ನಂತರ ರಿಲ್ಯಾಕ್ಸ ಆಗಿ ಏನು ಮಾಡಬೇಕೆಂದು ಯೋಚಿಸಿದಳು. ಆದರೆ ಎಷ್ಟು ಯೋಚಿಸಿದರೂ, ರಾತ್ರಿ 11 ಗಂಟೆಯಾದರೂ ಅವಳಿಗೆ ಏನು ಮಾಡಬೇಕು ಎಂಬುದು ತೋಚಲಿಲ್ಲ. ಅದಕ್ಕಾಕೆ ಸತ್ಯನಿಗೆ ಫೋನ್ ಕಾಲ ಮಾಡಿದಳು. "ಸತ್ಯ ನನಗೂ ನಿನ್ನಂತೆ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುವಾಸೆ. ಆದರೆ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ..." ಎಂದಳು. ಆಗ ಫೋನಲ್ಲಿ ಆ ಕಡೆಯಿಂದ ಸತ್ಯ ಮತ್ತು ಜ್ಯೋತಿ ಇಬ್ಬರು ಒಕ್ಕೊರಲಿನಿಂದ "ಕಾಲೇಜಿನಲ್ಲಿದ್ದಾಗ ಮಾಡುತ್ತಿದ್ದ ಕಾಲೆಳೆಯುವ ಕೆಲಸವನ್ನು ಈಗ ಮತ್ತೆ ಮಾಡು" ಎಂದರು. ಆಕೆಗೆ ಅವರ ಮಾತಿನರ್ಥವಾಯಿತು. ಆಕೆಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ ಮತ್ತು ಪಬ್ಲಿಕ್ ಸ್ಪೀಕರ್ ಆಗಬೇಕು ಎಂಬಾಸೆ ಹುಟ್ಟಿತು. ಹುಚ್ಚಿಗೆ ಸಾಧಿಸುವ ಹುಚ್ಚನ್ನು ಹಿಡಿಸಿ ಸತ್ಯ ಜ್ಯೋತಿಯಿಬ್ಬರು ರಾತ್ರಿಗೆ ರಸಿಕ ಕಳೆ ತರಲು ಹಾಸಿಗೆ ಸೇರಿದರು. ಸುಜಿ ತನ್ನ ಮುಂದಿನ ಮೊದಲ ಸ್ಟ್ಯಾಂಡ್ ಅಪ್ ಕಾಮಿಡಿ ಶೋನ್ ಸಿದ್ಧತೆಯಲ್ಲಿ ತೊಡಗಿದಳು...

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

                           ಈ ಕಥೆ ಯಾರಿಗೂ ಯಾವ ರೀತಿಯಲ್ಲಿಯೂ ಸಂಬಂಧಪಟ್ಟಿರುವುದಿಲ್ಲ. ಇದು ಕೇವಲ ಕಾಲ್ಪನಿಕ ಕಥೆಯಷ್ಟೇ. ಸದ್ಯಕ್ಕೆ ಸಾಧಿಸುವ ಹುಚ್ಚಲ್ಲಿರುವ ಸುಜಿಗೆ ಯಶಸ್ಸು ಸಿಗುತ್ತಾ? ಅವಳ ಕನಸಿಗೆ ಅವಳ ಗಂಡ ಸಪೋರ್ಟ್ ಮಾಡ್ತಾನಾ? ಎಂಬುದನ್ನು ಮುಂದಿನ ಭಾಗದಲ್ಲಿ ನೀರಿಕ್ಷಿಸಿ. ಅಲ್ಲಿ ತನಕ ಫೇಸ್ಬುಕ್, ಟ್ವಿಟರ್, ಇನಸ್ಟಾಗ್ರಾಮ್, ಯುಟ್ಯೂಬಗಳಲ್ಲಿ ನನ್ನನ್ನು (Search as Director Satishkumar) ತಪ್ಪದೆ ಫಾಲೋ ಮಾಡಿ. Thanks you...


ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story

  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 

ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story ಹುಚ್ಚಿ : ಪ್ರೀತಿಯ ದ್ವೇಷದ ಸುಳಿಯಲ್ಲಿ - #Kannada Love Story Reviewed by Director Satishkumar on February 27, 2019 Rating: 4.5
Powered by Blogger.