ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ 4 ವಿಧಾನಗಳು - How to become Rich without Working in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ 4 ವಿಧಾನಗಳು - How to become Rich without Working in Kannada

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

                 ಬಡವರು ದುಡ್ಡಿಗಾಗಿ ದುಡಿಯುತ್ತಾರೆ. ಆದರೆ ಶ್ರೀಮಂತರು ದುಡ್ಡನ್ನು ದುಡಿಸುತ್ತಾರೆ. ದುಡ್ಡನ್ನು ದುಡಿಸುವುದು ಒಂದು ಕಲೆ. ನಿಮ್ಮ ಬಳಿಯಿರುವ ದುಡ್ಡು ಅಲ್ಲಿಇಲ್ಲಿ ಬಿದ್ದು ಕೊಳೆಯದೇ, ದುಡಿಯಲು ಪ್ರಾರಂಭಿಸಿದರೆ ನೀವು ಬಹುಬೇಗನೆ ಶ್ರೀಮಂತರಾಗುತ್ತೀರಿ. ಈ ಮಾತು ನಿಮಗೆ ಕೇಳಲು ವಿಚಿತ್ರವೆನಿಸಿದರೂ ಇದು ಸತ್ಯ. ದೊಡ್ಡ ದೊಡ್ಡ ಶ್ರೀಮಂತರೆಲ್ಲರೂ ತಾವು ದುಡಿಯುವುದಕ್ಕಿಂತ ಹೆಚ್ಚಾಗಿ ತಮ್ಮ ಬಳಿಯಿರುವ ದುಡ್ಡನ್ನೇ ದುಡಿಸುತ್ತಾರೆ. ಅದಕ್ಕೆ ಅವರು ಕೆಲವೇ ಕೆಲವು ವರ್ಷಗಳಲ್ಲಿ ಬಿಲೆನಿಯರಗಳಾಗುತ್ತಾರೆ. ನೀವು ನಿಮ್ಮ ಬಳಿಯಿರುವ ದುಡ್ಡನ್ನು ದುಡಿಸಿದರೆ ನೀವು ಸಹ ಅವರಂತೆ ಬೇಗನೆ ಬಿಲೆನಿಯರಗಳಾಗಬಹುದು. ದುಡ್ಡನ್ನು ದುಡಿಸುವ ಕೆಲವು ವಿಧಾನಗಳು ಇಲ್ಲಿವೆ ;

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

1) ಸಾಧ್ಯವಾದಷ್ಟು ಅಸೆಟ್ಸಗಳನ್ನು (Assets) ಮಾಡಿ. ಲೈಯಾಬಿಲಿಟಿಗಳನ್ನು (Liabilities) ಕಡಿಮೆ ಮಾಡಿ. ನಿಮಗೆ ದುಡ್ಡನ್ನು ತಂದು ಕೊಡುವ ವಸ್ತುಗಳೆಲ್ಲವು ನಿಮಗೆ ಅಸೆಟ್ಸಗಳಾದರೆ, ನಿಮ್ಮಿಂದ ದುಡ್ಡು ಕಿತ್ತು ಕೊಳ್ಳುವ ವಸ್ತುಗಳು ಲೈಯಾಬಿಲಿಟಿಗಳಾಗುತ್ತವೆ.

ಉದಾ : ನೀವು ನಿಮ್ಮ ಸಂಬಳ ಬಂದ ನಂತರ ಮೊಬೈಲ್, ಬೈಕ್ ಇತ್ಯಾದಿಗಳನ್ನು ಖರೀದಿಸಿದರೆ ಅವು ನಿಮ್ಮ ಲೈಯಾಬಿಲಿಟಿಗಳಾಗುತ್ತವೆ. ಅವು ನಿಮಗೆ ದುಡ್ಡು ತಂದು ಕೊಡುವ ಬದಲು ಸಮಯಾನುಸಾರವಾಗಿ ನಿಮ್ಮ ದುಡ್ಡನ್ನು ನುಂಗುತ್ತವೆ. ಮೊಬೈಲ್, ಬೈಕ್ ತೆಗೆದುಕೊಳ್ಳುವ ಬದಲು ನೀವು ಒಂದು ಲ್ಯಾಪಟಾಪ ತೆಗದುಕೊಂಡರೆ ಅದು ನಿಮ್ಮ ಅಸೆಟ್ ಆಗುತ್ತದೆ. ಏಕೆಂದರೆ ಲ್ಯಾಪಟಾಪನಿಂದ ನೀವು ಬೇಕಾದ ಕೆಲಸ ಮಾಡಿ ದುಡ್ಡು ಸಂಪಾದಿಸಬಹುದು.

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

೨) ನಿಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಕೂಡಿಟ್ಟುಕೊಂಡು ಅದನ್ನು ಸರಿಯಾಗಿ ಹೂಡಿಕೆ ಮಾಡಿ. ಒಬ್ಬ ಬಡವ ತನ್ನ ಸಂಪಾದನೆಯನ್ನೆಲ್ಲ ಮನೆ ಖರ್ಚಿನಲ್ಲಿ ಕಳೆಯುತ್ತಾನೆ. ಒಬ್ಬ ಮಿಡಲ್ ಕ್ಲಾಸ್ ವ್ಯಕ್ತಿ ತನ್ನ ಸಂಪಾದನೆಯಿಂದ ಮನೆ ಖರ್ಚನ್ನು ನಿಭಾಯಿಸಿ ಮಿಕ್ಕಿದ ಹಣವನ್ನು ಮೊಬೈಲ್, ಟಿವಿ, ಬೈಕ್ ಇತ್ಯಾದಿಗಳನ್ನು ಖರೀದಿಸುವಲ್ಲಿ ವ್ಯರ್ಥ ಮಾಡುತ್ತಾನೆ. ಆದರೆ ಒಬ್ಬ ಶ್ರೀಮಂತ ವ್ಯಕ್ತಿ ತನ್ನ ಸಂಪಾದನೆಯ 10ರಿಂದ 30% ವರೆಗಿನ ಹಣವನ್ನು ತನ್ನ ಅಸೆಟನ್ನಾಗಿ ಮಾಡಿಕೊಳ್ಳುತ್ತಾನೆ.

ಉದಾ : ಶ್ರೀಮಂತ ವ್ಯಕ್ತಿ ತನ್ನ ಸಂಪಾದನೆಯ 30% ಹಣವನ್ನು ದುಡಿಸುತ್ತಾನೆ. ಆತ ತನ್ನ ಬಳಿ ಉಳಿದ ಹಣವನ್ನು ಸರಿಯಾದ ಜಾಗಗಳಲ್ಲಿ ಹೂಡಿಕೆ ಮಾಡುತ್ತಾನೆ. ಆತ ತನ್ನ ಹಣವನ್ನು FD ಅಕೌಂಟ್ಸ, ಮ್ಯುಚುವಲ್ ಫಂಡ್ಸ್ ಅಥವಾ ಸ್ಟಾಕ್ ಮಾರ್ಕೆಟಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣ ಸಂಪಾದಿಸುತ್ತಾನೆ. ಆತ ತನ್ನ ಇನಕಮನಿಂದ ಅನಾಯಾಸವಾಗಿ ಹೊಸ ಇನಕಮನ್ನು ಪ್ರಾರಂಭಿಸುತ್ತಾನೆ.

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

೩) ಇನ್ವೇಸ್ಟರ್ ಮೆಂಟಾಲಿಟಿಯನ್ನು (Investor Mentality) ಬೆಳೆಸಿಕೊಳ್ಳಿ. ಗೆಳೆಯರೇ, ಬಡತನವೆನ್ನುವುದು ನಿಮ್ಮ ಮೆಂಟಾಲಿಟಿಯಲ್ಲಿ ಮಾತ್ರವಿದೆ. ರಿಯಾಲಿಟಿಯಲ್ಲಿ ಬಡತನವಿಲ್ಲ. ನಿಮ್ಮ ಕಡಿಮೆ ಸಂಪಾದನೆ ನಿಮ್ಮ ಬಡತನಕ್ಕೆ ಕಾರಣವಲ್ಲ. ನಿಮ್ಮ ಕೆಳಮಟ್ಟದ ಮಾನಸಿಕತೆ ನಿಮ್ಮ ಬಡತನಕ್ಕೆ ಅಸಲಿ ಕಾರಣವಾಗುತ್ತದೆ. ನೀವು ನಿಮ್ಮ ಸಮಯವನ್ನು ಹಣದಂತೆ ಖರ್ಚು ಮಾಡಿ ಕೆಲಸ ಮಾಡಿದರೆ, ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನೀವು ಮೊದಲು ಇಂಪಾರಟಂಟ ಕೆಲಸಗಳನ್ನು ಮಾಡಿ. ದೊಡ್ಡ ವ್ಯಕ್ತಿಗಳು ಶೋಅಪ್ ಮಾಡುವುದಕ್ಕಾಗಿ ಕೆಲಸಗಾರರನ್ನು ನೇಮಿಸಿರುವುದಿಲ್ಲ. ಅವರು  ತಮ್ಮ ಅಮೂಲ್ಯವಾದ ಕೆಲಸಕ್ಕಾಗಿ ಸಮಯವನ್ನು ಉಳಿಸುವುದಕ್ಕಾಗಿ ಹಾಗೆ ಮಾಡುತ್ತಾರೆ. ಸಣ್ಣಪುಟ್ಟ ಕೆಲಸಗಳನ್ನು ಮನೆಗೆಲಸದವರಿಗೆ ವಹಿಸಿ ತಾವು ಅತ್ಯಮೂಲ್ಯ ಕೆಲಸಗಳನ್ನಷ್ಟೇ ಮಾಡುತ್ತಾರೆ. ನಿಮಗೂ ಶ್ರೀಮಂತರಾಗುವ ಆಸೆಯಿದ್ದರೆ ನೀವು ಸಹ ಇನ್ವೇಸ್ಟರ್ ಮೆಂಟಾಲಿಟಿಯನ್ನು ಬೆಳೆಸಿಕೊಳ್ಳಲೇಬೇಕು. ನಿಮ್ಮ ಸಮಯವನ್ನು ಅಮೂಲ್ಯವಾದ ಕೆಲಸಗಳಿಗೆ ಮೀಸಲಿಡಬೇಕು. ನಿಮ್ಮ ದುಡ್ಡನ್ನು ಬ್ಯಾಂಕಲಿಟ್ಟು ಕೊಳೆಯಿಸುವ ಬದಲು ನೀವು ಜಮೀನನ್ನು, ಪ್ಲಾಟಗಳನ್ನು, ಬಂಗಾರವನ್ನು ಖರೀದಿಸಬೇಕು.

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

೪) ನೀವು ಆಕ್ಟೀವ್ ಇನಕಮಗಿಂತ (Active Income) ಹೆಚ್ಚಾಗಿ ಪ್ಯಾಸೀವ ಇನಕಮ (Passive Income) ಮೇಲೆ ಹೆಚ್ಚಿನ ಗಮನ ಹರಿಸಬೇಕು.

ಉದಾ : ನೀವು ಜಾಬ್ ಮಾಡುತ್ತಿದ್ದರೆ ಅಥವಾ ಕಿರಾಣಿ ಅಂಗಡಿ ನಡೆಸುತ್ತಿದ್ದರೆ ಅದು ನಿಮ್ಮ ಆ್ಯಕ್ಟೀವ್ ಇನಕಮ ಆಗುತ್ತದೆ. ಏಕೆಂದರೆ ನೀವು ಕೆಲಸ ಮಾಡಿದರೆ ಮಾತ್ರ ನಿಮಗೆ ಹಣ ಸಿಗುತ್ತದೆ. ಆದರೆ ನೀವು ಬ್ಯುಸಿನೆಸ್ ಮಾಡುತ್ತಿದ್ದರೆ, ಕಂಪನಿ ನಡೆಸುತ್ತಿದ್ದರೆ, ಇನ್ವೇಸ್ಟರ್ ಆಗಿದ್ದರೆ, ಮನೆಗಳನ್ನು, ಕಾರಗಳನ್ನು ಬಾಡಿಗೆಗೆ ಬಿಟ್ಟಿದ್ದರೆ ಅದರಿಂದ ಬರುವ ಹಣ ನಿಮಗೆ ಪ್ಯಾಸೀವ್ ಇನಕಮ್ ಆಗುತ್ತದೆ. ಏಕೆಂದರೆ ಈ ಸಂದರ್ಭಗಳಲ್ಲಿ ನೀವು ಕೆಲಸ ಮಾಡದಿದ್ದರೂ ನಿಮಗೆ ಹಣ ಸಿಗುತ್ತದೆ. ನೀವಿಲ್ಲದಿದ್ದರೂ ಈ  ಕೆಲಸಗಳು ಸಾಗುತ್ತವೆ. ಉದಾಹರಣೆಗಾಗಿ ನಾನು ನನ್ನ ಕಂಪನಿಗೆ ಹೋಗದಿದ್ದರೂ ಎಲ್ಲ ಕೆಲಸಗಳು ನಡೆಯುತ್ತಲೇ ಇರುತ್ತವೆ. ನಾನು ಗೋವಾದಲ್ಲಿ ಮಜಾ ಮಾಡುತ್ತಿದ್ದರೂ ನನ್ನ ಅಕೌಂಟಿಗೆ ಹಣ ಹರಿದು ಬರುತ್ತಲೇ ಇರುತ್ತದೆ.

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

                         ನಿಮಗೂ ಸಹ ಪ್ಯಾಸೀವ್ ಇನಕಮ ಮಾಡಬೇಕಿದ್ದರೆ ನೀವು ನಿಮ್ಮ ಹಣವನ್ನು ಬೇರೆಡೆಗೆ ಇನ್ವೇಸ್ಟ ಮಾಡಿ ಇಲ್ಲವೇ ಬಡ್ಡಿಗೆ ಬಿಡಿ. ನಿಮ್ಮ ಬಳಿ ಪ್ಲಾಟಗಳಿದ್ದರೆ ಅವುಗಳಲ್ಲಿ ಮನೆಗಳನ್ನು, ವ್ಯಾಪಾರ ಮಳಿಗೆಗಳನ್ನು ಕಟ್ಟಿಸಿ ಬಾಡಿಗೆಗೆ ಕೊಡಿ. ಕಾರುಗಳನ್ನು ಖರೀದಿಸಿ ಬಾಡಿಗೆಗೆ ಬಿಡಿ. ಇತ್ಯಾದಿ

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

ಗೆಳೆಯರೇ, ಬಡತನ ರಿಯಾಲಿಟಿಯಲ್ಲಿ ಇಲ್ಲ, ನಿಮ್ಮ ಮೆಂಟ್ಯಾಲಿಟಿಯಲ್ಲಿದೆ. ನೀವು ನಿಮ್ಮ ದೇಹವನ್ನು ದುಡಿಸುವುದರ ಜೊತೆಗೆ ನಿಮ್ಮ ಮೆದುಳನ್ನು ದುಡಿಸಿದರೆ, ನಿಮ್ಮ ಬಳಿಯಿರುವ ದುಡ್ಡನ್ನು ದುಡಿಸಿದರೆ ನೀವು ಸಹ ಬೇಗನೆ ಶ್ರೀಮಂತರಾಗಬಹುದು. All the Best and Thanks you...

ನಿಮ್ಮ ದುಡ್ಡನ್ನು ದುಡಿಸಿ ಶ್ರೀಮಂತರಾಗುವುದು ಹೇಗೆ? ಕೆಲಸ ಮಾಡದೇ ಶ್ರೀಮಂತರಾಗುವ  4 ವಿಧಾನಗಳು - How to become Rich without Working in Kannada

Blogger ನಿಂದ ಸಾಮರ್ಥ್ಯಹೊಂದಿದೆ.