ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? : Why Class Toppers fail in Their Future Life in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? : Why Class Toppers fail in Their Future Life in Kannada

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

                  ಸಾಮಾನ್ಯವಾಗಿ ಎಲ್ಲರಿಗೂ ಕ್ಲಾಸ್ ಟಾಪರಗಳ್ಯಾರು ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ ಎಂಬುದು ಚೆನ್ನಾಗಿ ಗೊತ್ತಿದೆ. A ಗ್ರೇಡ್ ಸ್ಟೂಡೆಂಟಗಳು C ಗ್ರೇಡ್ ಅಥವಾ ಫೇಲಾದ ಸ್ಟೂಡೆಂಡಗಳ ಕೈಕೆಳಗೆ ಕೆಲಸ ಮಾಡುತ್ತಾರೆಂಬುದು ಜಗಜ್ಜಾಹೀರಾದ ವಿಷಯ. ಪಿವುನ್ ನೌಕರಿಗೆ PG, PGD ಮಾಡಿದವರು ಸಹ ಅಪ್ಲಾಯ್ ಮಾಡುತ್ತಾರೆಂದರೆ ಅಷ್ಟರಲ್ಲೇ ಟಾಪರಗಳ ಅಸಲಿ ಯೋಗ್ಯತೆ ಏನೆಂಬುದು ಅರ್ಥವಾಗುತ್ತದೆ. ಈ ಕ್ಲಾಸ್ ಟಾಪರಗಳು ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗುವುದಿಲ್ಲ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

೧) ಪ್ರ್ಯಾಕ್ಟಿಕಲ್ ಎಜುಕೇಶನಿನ ಕೊರತೆ : (Lack of Practical Education)

       ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪ್ರ್ಯಾಕ್ಟಿಕಲ್ ಎಜುಕೇಶನಗೆ ಅವಕಾಶವಿಲ್ಲ. ನಮ್ಮ ಸಿಲ್ಯಾಬಸ್ ಬರೀ ಥಿಯರಿಯನ್ನು ಮಾತ್ರ ಕಲಿಸುತ್ತದೆ. ಪ್ರ್ಯಾಕ್ಟಿಕಲ್ ವಿಷಯಗಳನ್ನು ಸಾಧ್ಯವಾದಷ್ಟು ಅವೈಡ್ ಮಾಡುತ್ತದೆ. ಟಾಪರಗಳು ಇಂಥ ಸಿಲ್ಯಾಬಸ್ ಇರೋ ವಿಷಯಗಳನ್ನು ಶ್ರದ್ಧೆಯಿಂದ ಓದುತ್ತಾರೆ. ಹೀಗಾಗಿ ಅವರಲ್ಲಿ ಯಾವುದೇ ಪ್ರ್ಯಾಕ್ಟಿಕಲ್ ನಾಲೇಡ್ಜ್ ಇರುವುದಿಲ್ಲ. ಅದಕ್ಕಾಗಿ ಅವರಿಗೆ ಸೂಕ್ತ ಕೆಲಸ ಸಿಗಲ್ಲ. ಮೇಲಾಗಿ ಅವರು ಕಲಿತಿರುವುದರಲ್ಲಿ ೯೦% ವಿಷಯಗಳು ನಿಜ ಜೀವನದಲ್ಲಿ ಎಲ್ಲಿಯೂ ಪ್ರಯೋಜನಕ್ಕೆ ಬರುವುದಿಲ್ಲ. 

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

೨) ಯೋಚನಾ ಶಕ್ತಿಯ ಕೊರತೆ (Lack of Thinking Ability)

        ಬಹಳಷ್ಟು ಜನ ಕ್ಲಾಸ್ ಟಾಪರಗಳಿಗೆ ಯೋಚನಾ ಶಕ್ತಿಯೇ ಇರುವುದಿಲ್ಲ. ಅವರು ಬರೀ ಥಿಯರಿ ಮೇಲೆ ಹೆಚ್ಚಿನ ಗಮನ ಹರಿಸಿರುತ್ತಾರೆ. ಅವರು ಹೆಚ್ಚಿಗೆ ಯಾವುದರ ಬಗ್ಗೆಯೂ ಪ್ರ್ಯಾಕ್ಟಿಕಲ್ಲಾಗಿ ಯೋಚಿಸಲ್ಲ. ಅದಕ್ಕಾಗಿ ಅವರಲ್ಲಿ ಯಾವುದೇ ಹೊಸ ಐಡಿಯಾಗಳು ಹುಟ್ಟಲ್ಲ. ಅವರು ಬರೀ ವೆಲ್ ಟ್ರೇನ್ಡ (Well Trained) ಆಗಿರುತ್ತಾರೆಯೇ ವಿನ: ವೆಲ್ ಎಜುಕೇಟೆಡ್ (Well Educated ) ಆಗಿರುವುದಿಲ್ಲ.

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

೩) ಶಿಕ್ಷಕರ ಚಮಚಾಗಿರಿ ಮತ್ತು ಒಣಜಂಭ (Teachers Slavery and Ego)

                    ಈ ಕ್ಲಾಸ್ ಟಾಪರಗಳು ಯಾವಾಗಲೂ ಶಿಕ್ಷಕರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಾರೆ. ಇಂಟರನಲ್ ಹಾಗೂ ಪ್ರ್ಯಾಕ್ಟಿಕಲ್ ಮಾರ್ಕ್ಸಗಳಿಗಾಗಿ ಲೆಕ್ಚರರಗಳ ಚಮಚಾಗಿರಿ ಮಾಡುತ್ತಾರೆ. ತೋರಿಕೆಯ ಗೌರವವನ್ನು ಕೊಡುತ್ತಾರೆ. ಅವರನ್ನು ನೈಸ್ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. "ಅತೀ ವಿನಯಂ ಚೋರ್ ಲಕ್ಷಣಂ" ಎಂಬ ಮಾತು ಅವರಿಗೆ ಸರಿಯಾಗಿ ಒಪ್ಪುತ್ತದೆ. ಈ ಅತೀ ವಿಧೇಯತೆಯಿಂದಾಗಿ ಶಿಕ್ಷಕರು ಅವರಿಗೆ ತುಂಬಾ ಸಲುಗೆ ಕೊಡುತ್ತಾರೆ. ಅವರನ್ನು ಹಾಡಿ ಹೊಗಳುತ್ತಾರೆ. ಶಿಕ್ಷಕರ ಹೊಗಳಿಕೆ ಸಿಕ್ಕ ಮೇಲೆ ಇವರು ಗಾಳಿಯಲ್ಲಿ ಹಾರಾಡಲು ಶುರು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲ ಹುಡುಗಿಯರು ಕ್ಲಾಸ್ ಟಾಪರಗಳ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಹೀಗಾಗಿ ಅವರು "ನಾನೇ ಜಾಣ, ನಾನೇ ಬುದ್ಧಿವಂತ" ಎಂಬ ಒಣಜಂಭದಲ್ಲಿ ಮುಳುಗುತ್ತಾರೆ. 

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

           ಬಹಳಷ್ಟು ಶಿಕ್ಷಕರಿಗೆ ಪ್ರಪಂಚದ ಅಸಲಿ ಟ್ಯಾಲೆಂಟ್ ಲಾಸ್ಟ್ ಬೆಂಚಲ್ಲಿದೆ ಎಂಬುದು ಗೊತ್ತಾಗೋದೆ ಇಲ್ಲ. ಹೆಚ್ಚಿಗೆ ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ ಎಂಬ ಒಂದೇ ಕಾರಣಕ್ಕೆ ಅವರು ಟಾಪರಗಳ ಸರ್ಕಸಗಳಿಗೆ ಸೊಪ್ಪಾಕುತ್ತಾರೆ. ಹೀಗಾಗಿ ಟಾಪರಗಳು ಅಹಂಕಾರದ ಹಜಾಮನಾಗುತ್ತಾರೆ. ಅವರ ಅಹಂಕಾರದಿಂದಲೇ ಅವರು ಅಜ್ಞಾನಿಗಳಾಗುತ್ತಾರೆ. ತಾವು ಗಳಿಸಿದ ಮಾರ್ಕ್ಸಗಳಿಂದ, ಡಿಗ್ರಿಗಳಿಂದ ಹೊಟ್ಟೆ ತುಂಬಲ್ಲ ಎಂಬ ಸತ್ಯ ಅವರಿಗೆ ಕೆಲಸ ಹುಡುಕುವಾಗ ಗೊತ್ತಾಗುತ್ತೆ. ವಿದ್ಯೆಯ ಜೊತೆಗೆ ಬುದ್ಧಿಯೂ ಬೇಕೆಂಬುದು ಅವರಿಗೆ ಫೇಲಾದವರ ಕೈಕೆಳಗೆ ಕೆಲಸ ಮಾಡುವಾಗ ಅರಿವಿಗೆ ಬರುತ್ತದೆ. ಕಾಲೇಜನಲ್ಲಿರುವಾಗ ಇಂಟರನಲ್ ಮಾರ್ಕ್ಸಗಳಿಗಾಗಿ ಶಿಕ್ಷಕರ ಚಮಚಾಗಿರಿ ಮಾಡಿದ ಈ ಟಾಪರಗಳೇ ಮುಂದೆ ಕೆಲಸಕ್ಕಾಗಿ, ಪ್ರೋಮೊಷನಗಾಗಿ ಬಾಸನ ಚಮಚಾಗಿರಿ ಮಾಡುತ್ತಾರೆ. ಅದಕ್ಕೆ ಹೇಳೋದು "Toppers are real Loafers" ಅಂತಾ.
ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

೪) ಜ್ಞಾನ ಮತ್ತು ಕೌಶಲ್ಯಗಳ ಕೊರತೆ (Lack of Knowledge and Skills)

                      ಟಾಪರಗಳು ಕಣ್ಣಿಗೆ ಮಾರ್ಕ್ಸಗಳ ಬಟ್ಟೆ ಕಟ್ಟಿಕೊಂಡು ಓದುವುದರಿಂದ ಅವರಲ್ಲಿ ಹೆಚ್ಚಿನ ಜ್ಞಾನವಾಗಲಿ, ಕೌಶಲ್ಯಗಳಾಗಲಿ ಇರುವುದಿಲ್ಲ. ಅವರ ಅಂಧ ಓದು (Blind Raeding) ಅವರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತದೆ. ಈ ಟಾಪರಗಳಿಗೆ ಸರಿಯಾಗಿ ಬ್ಯಾಂಕ್ ಚಲನ ತುಂಬಲು ಬರಲ್ಲ. ಇಂಥ ಸಮಯದಲ್ಲಿ ಆ್ಯವರೇಜ್ ಅಥವಾ ಫೇಲಾದ ವಿದ್ಯಾರ್ಥಿಗಳು ಬೇರೆಯವರಿಗೆ ಚೆಕ್ ಮೂಲಕ ಸಂಬಳ ಕೊಡುತ್ತಿರುತ್ತಾರೆ. ಈ ಟಾಪರಗಳು ಯಾವಾಗಲೂ Communication Skills, Financial Skills, General Knowledge, Self Confidence, Creativity ಇತ್ಯಾದಿಗಳ ಕೊರತೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಅವರಿಗೆ ಸಕ್ಸೆಸ್ ಒಂದು ಕನಸ್ಸಾಗುತ್ತದೆ.

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

೫) ಸೋಲಿನ ಭಯ (Fear of Failures)

                    ಈ ಟಾಪರಗಳು ಪಾಲಕರ ಹಾಗೂ ಶಿಕ್ಷಕರ ಭಯದಿಂದ ಮೂರವೊತ್ತು ಮಾರ್ಕ್ಸು ಮಾರ್ಕ್ಸು ಅಂತಾ ಓದಿ ಮೂರ್ಖರಾಗಿರುತ್ತಾರೆ. ಅವರು ಶಾಲಾ ಕಾಲೇಜುಗಳಲ್ಲಿ ಸೋತಿರುವುದಿಲ್ಲ. ಹೀಗಾಗಿ ಅವರು ಸಮಾಜದಲ್ಲಿ ಸುಲಭವಾಗಿ ಸೋಲುತ್ತಾರೆ. ಪರೀಕ್ಷೆಯಲ್ಲಿ ಪಾಸಾದ ಅವರು ಲೈಫಲ್ಲಿ ಹೀನಾಯವಾಗಿ ಫೇಲಾಗುತ್ತಾರೆ. ಫೇಲಾಗುತ್ತೇವೆ ಎಂಬ ಭಯದಿಂದ ಅವರು ಹೊಸದನ್ನೇನು ಮಾಡಲು ಪ್ರಯತ್ನಿಸುವುದಿಲ್ಲ. ಹೀಗಾಗಿ ಅವರು ಸಿಕ್ಕ ಆರ್ಡಿನರಿ ಜಾಬ್ ಮಾಡುತ್ತಾ, ಅವರಿವರ ಚಮಚಾಗಿರಿ ಮಾಡುತ್ತಾ ಆರ್ಡಿನರಿ ಲೈಫನ್ನು ಅನುಭವಿಸುತ್ತಾರೆ. ಎಲ್ಲೊ ಕೋಟಿಗೊಬ್ಬರಲ್ಲಿ ಸುಂದರ ಪಿಚೈರಂಥವರು ನಿಯತ್ತಾಗಿ ಸ್ವಂತ ಬಲದ ಗೂಗಲ್ CEO ಆಗುವ ಮಟ್ಟಿಗೆ ಮೇಲೆರುತ್ತಾರೆ. ಆದರೂ ಅವರಲ್ಲಿ ಒಬ್ಬ ಕೆಲಸಗಾರರೇ ತಾನೇ? 

ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

             ನೋಡಿ ಗೆಳೆಯರೇ, ಬರೀ ಮಾರ್ಕ್ಸಗಳಿಂದ, ಕಾಲೇಜು ಡಿಗ್ರಿಗಳಿಂದ ನಿಮ್ಮ ಲೈಫ್ ಸಕ್ಸೆಸಫುಲ್ ಆಗಲ್ಲ, ಆದರೆ ಖಂಡಿತ ಸೆಟ್ಲಾಗುತ್ತದೆ. ಮಾರ್ಕ್ಸಗಳಿಂದ, ಡಿಗ್ರಿಗಳಿಂದ ಬ್ಯುಸಿನೆಸ್ಸಲ್ಲಿ ಏನು ಪ್ರಯೋಜನವಿಲ್ಲ. ಆದ್ದರಿಂದಲೇ ನಾನು ನನ್ನ ಕಾಲೇಜು ಡಿಗ್ರಿ ಸರ್ಟಿಫಿಕೇಟುಗಳನ್ನು ತೆಗೆದುಕೊಳ್ಳಲು ಇನ್ನೂ ಹೋಗಿಲ್ಲ, ಹೋಗೋದು ಇಲ್ಲ. ಟಾಪರಗಳು ಬರೀ ಕಾಲೇಜಿನ ಆಸ್ತಿಯಷ್ಟೇ. ಆದರೆ ಲಾಸ್ಟ್ ಬೆಂಚರಗಳು ಇಡೀ ದೇಶದ ಆಸ್ತಿ. ಅದಕ್ಕಾಗಿಯೇ ಅಬ್ದುಲ್ ಕಲಾಂರು "ದೇಶದ ಬೆಸ್ಟ ಬ್ರೇನಗಳು ಕ್ಲಾಸರೂಮಿನ ಕೊನೆಯ ಬೆಂಚಿನ ಮೇಲೆ ಕಾಣ ಸಿಗುತ್ತವೆ" ಎಂದೇಳಿದ್ದಾರೆ. ಆ ಮಾತನ್ನು ಈಗಾಗಲೇ ಎಷ್ಟೋ ಬ್ಯುಸಿನೆಸಮ್ಯಾನಗಳು ಸಾಬೀತು ಮಾಡಿ ತೋರಿಸಿದ್ದಾರೆ. ಬಿಲಗೇಟ್ಸ್, ಸ್ಟೀವ್ ಜಾಬ್ಸ್, ಮಾರ್ಕ ಜುಗರಬರ್ಗನಂಥ ಎಷ್ಟೋ ಜನ ಕಾಲೇಜ ಡಿಗ್ರಿಗಳಿಲ್ಲದಿದ್ದರೂ ಬಿಲೆನಿಯರಗಳಾಗಿದ್ದಾರೆ. ಈಗ ಬುದ್ಧಿವಂತರಿಗೆ ಕಾಲೇಜ ಡಿಗ್ರಿಗಳ ಅವಶ್ಯಕತೆ ಇಲ್ಲ. ಏಕೆಂದರೆ ಗೂಗಲ್, ಫೇಸ್ಬುಕನಂಥ ದೈತ್ಯ ಕಂಪನಿಗಳು ಕಾಲೇಜ ಡಿಗ್ರಿ ಇರದವರಿಗೇನೆ ಹೆಚ್ಚಾಗಿ ಕೆಲಸ ಕೊಡುತ್ತಿವೆ. ಇದಿಷ್ಟು ಕಾರಣಗಳಿಂದ ಟಾಪರಗಳು ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ. ನನಗೆ ನಾನೊಬ್ಬ ಲಾಸ್ಟ್ ಬೆಂಚರ್, ಆರ್ಡಿನರಿ ಆ್ಯವರೇಜ ಸ್ಟೂಡೆಂಟ್ ಎಂಬ ಹೆಮ್ಮೆ ನನಗಿದೆ. ನಿಮಗೆ ಈ ಅಂಕಣ ಇಷ್ಟವಾಗಿದ್ದರೆ ಇದನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ. ಜೈ ಲಾಸ್ಟ್ ಬೆಂಚರ್ಸ...
ಕ್ಲಾಸ್ ಟಾಪರಗಳ್ಯಾಕೆ ಸಕ್ಸೆಸಫುಲ್ ವ್ಯಕ್ತಿಗಳಾಗಲ್ಲ? Why Class Toppers fail in Their Future Life

Blogger ನಿಂದ ಸಾಮರ್ಥ್ಯಹೊಂದಿದೆ.