ನೀವು ಬಡವರಾಗಿರಲು 7 ಕಾರಣಗಳು : 7 Reasons for your poverty in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೀವು ಬಡವರಾಗಿರಲು 7 ಕಾರಣಗಳು : 7 Reasons for your poverty in Kannada

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

               ಕಾಗೆ ಒಂದಗಳನ್ನು ಕಂಡರೆ ತನ್ನ ಕುಲವನ್ನೆಲ್ಲ ಕೂಗಿ ಕೂಗಿ ಕರೆಯುತ್ತದೆ. ಆದರೆ ಮನುಷ್ಯ ತನ್ನ ಕುಲವೆಲ್ಲ ತುತ್ತು ಅನ್ನಕ್ಕಾಗಿ ಕಾಯುತ್ತಾ ಕುಳಿತಿರುತ್ತಿರುವಾಗ ತನ್ನ ಒಣ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾನೆ. ದುಡ್ಡಿರುವವನನ್ನು ಜಗತ್ತು ತಲೆ ಮೇಲೆ ಕೂಡಿಸಿಕೊಂಡು ಮರೆಸುತ್ತದೆ. ಆದರೆ ದುಡ್ಡಿಲ್ಲದವನನ್ನು ಪ್ರತಿಕ್ಷಣ ತುಳಿಯಲು ಪ್ರಯತ್ನಿಸುತ್ತದೆ. ಕಪ್ಪು ಕಾಗೆಗಿರುವ ಕರುಣೆ ಬಿಳಿ ಮನುಷ್ಯರಿಗೆ ಇಲ್ಲ. ಅದಕ್ಕಾಗಿ ಬಿಳಿ ಮನುಷ್ಯರಾಗಿರುವುದಕ್ಕಿಂತ ಕಪ್ಪು ಕಾಗೆಯಾಗಿರುವುದು ಎಷ್ಟೋ ಪಟ್ಟು ವಾಸಿ ಎಂಬುದು ನಮ್ಮ ದೇಶದ ಕೋಟ್ಯಾಂತರ ಬಡವರ ಮನದಾಳದ ಮಾತಾಗಿದೆ. ಬಿಲಗೇಟ್ಸ ಹೇಳುವಂತೆ ನಾವು ಬಡವರಾಗಿ ಹುಟ್ಟಿರುವುದು ನಮ್ಮ ತಪ್ಪಲ್ಲ. ಅದರೆ ನಾವು ಬಡವರಾಗಿ ಸತ್ತರೆ ಖಂಡಿತ ಅದು ನಮ್ಮದೇ ತಪ್ಪು. 

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

             ನಾನೇನು ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿಲ್ಲ. ಬಡತನಕ್ಕಿಂತ ಕೆಟ್ಟ ಶಾಪ ಬೇರೊಂದಿಲ್ಲ. ಬಹುಶಃ ನೀವು ನನ್ನಷ್ಟು ಸನಿಹದಿಂದ ಬಡತನವನ್ನು ನೋಡದೇ ಇರಬಹುದು. ಆದರೆ ನಿಮ್ಮ ಕಣ್ಣಿಗೆ ಬಡತನ ಕಾಣಿಸದೇ ಇರಲಾರದು. ಪಿಯುಸಿ ಓದುವಾಗ ನಾನು ಒಂದು ಸ್ಥಳೀಯ ಪತ್ರಿಕೆಯಲ್ಲಿ ಅಂಕಣಕಾರನಾಗಿ ಕೆಲಸ ಮಾಡುತ್ತಿದ್ದೆ, ನಂತರ ಡಿಗ್ರಿಗೆ ಬಂದಾಗ ನನ್ನ ಓದಿಗೆ ಸಹಾಯಕವಾಗಲು ನಾನು ಒಂದು ಹೆಸರಾಂತ ನ್ಯೂಸಪೇಪರನಲ್ಲಿ ಸಬ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೆ. ಆ ಕೆಲಸ ಕೈತಪ್ಪಿ ಹೋದಾಗ ನಾನು ಕೆಲವು ದಿನಗಳ ಕಾಲ ಪಾರ್ಟಟೈಮ್ ಡ್ರೈವರ್ ಆಗಿ ಕೆಲಸ ಮಾಡಿದೆ. ಡಿಗ್ರಿ ಮುಗಿದ ನಂತರ ಪೋಟೋಗ್ರಾಫಿ ಮತ್ತು ಫಿಲ್ಮ್ ಮೇಕಿಂಗನ್ನು ಕಲಿಯಲು ನಾನು ಮುಂಬೈಗೆ ಬಂದಾಗ ನನ್ನೆಲ್ಲ ಖರ್ಚುಗಳನ್ನು ನಿಭಾಯಿಸಿದ್ದು ನಾನು ನನ್ನ ತಮ್ಮನೊಂದಿಗೆ ಸೇರಿ ಪ್ರಾರಂಭಿಸಿದ Skkannada.com and Roaringcreationsfilms.com ಎಂಬ ಬ್ಲಾಗಿಂಗ್ ಸೈಟಗಳು. ನನ್ನ ಓದು ಮುಗಿದರೂ ಆರ್ಥಿಕವಾಗಿ ನಾನು ಸ್ವತಂತ್ರನಾಗಿರಲಿಲ್ಲ. ಕೊನೆಗೆ ನಾನು ಮತ್ತು ನನ್ನ ತಮ್ಮ ಸೇರಿ ಪ್ರಾರಂಭಿಸಿದ ರೋರಿಂಗ್ ಕ್ರೀಯೇಷನ್ಸ ಮೀಡಿಯಾ ಕಂಪನಿ ನನ್ನನ್ನು ಆರ್ಥಿಕವಾಗಿ ಪ್ರಬಲವಾಗಿಸಿತು. ನಾನು ಕನಸ್ಸಲ್ಲು ಊಹಿಸಿರದಷ್ಟು ದುಡ್ಡು ಇವತ್ತು ನನ್ನ ಬ್ಯಾಂಕ ಅಂಕೌಂಟದಲ್ಲಿದೆ. 

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

                    ನಾನು ಬಡತನದಲ್ಲಿ ಬೆಂದು ಇವತ್ತು ಸಿರಿತನದ ಮುಖವನ್ನು ನೋಡುತ್ತಿರುವೆ. ಹೀಗಾಗಿ ನನಗೆ ಬಡತನಕ್ಕೆ ಕಾರಣಗಳೇನು ಎಂಬುದು ಚೆನ್ನಾಗಿ ಗೊತ್ತು. ಕಾರಣವಿಲ್ಲದೆ ಏನು ಸಂಭವಿಸಲ್ಲ. ಎಲ್ಲದಕ್ಕೂ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ನೀವು ಯಾವ ಕಾರಣಗಳಿಂದ ಇನ್ನು ಬಡವರಾಗಿದ್ದೀರಿ ಎಂಬುದು ನಿಮಗೆ ಅರ್ಥವಾದರೆ ನೀವು ಸಿರಿವಂತಿಕೆಯ ಕದವನ್ನು ತಟ್ಟಬಹುದು ಎಂಬ ಕಾರಣಕ್ಕೆ ನಾನೀ ಅಂಕಣವನ್ನು ಬರೆಯುತ್ತಿರುವೆ. ನಿಮ್ಮ ಬಡತನಕ್ಕೆ ಕಾರಣವಾಗುವ ಕೆಲವು ಸಂಗತಿಗಳು ಇಂತಿವೆ ;

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೧) ವಿಶೇಷ ಕೌಶಲ್ಯಗಳ ಕೊರತೆ : (Lack of Special Skills) 

               ನಮ್ಮ ಬದುಕು ವಿದ್ಯೆಕ್ಕಿಂತ ಹೆಚ್ಚಾಗಿ ಬುದ್ಧಿಯ ಮೇಲೆ ನಿಂತಿದೆ. ಹೀಗಿರುವಾಗ ನಮ್ಮ ಸಂಪಾದನೆ ವಿದ್ಯೆಗಿಂತ ಹೆಚ್ಚಾಗಿ ಬುದ್ಧಿಯ ಮೇಲೆ ನಿರ್ಧಾರಿತವಾಗುತ್ತದೆ. ನಿಮ್ಮ ಜ್ಞಾನದ ಮೇಲೆ ನಿಮ್ಮ ಸಂಪತ್ತು ಅವಲಂಬಿತವಾಗಿದೆ. ನಿಮ್ಮಲ್ಲಿ ವಿಶೇಷ ಕೌಶಲ್ಯಗಳಿದ್ದರೆ ಮಾತ್ರ ದುಡ್ಡು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಬಳಿ ಸರಸ್ವತಿ ಇದ್ದರೆ ಮಾತ್ರ ಲಕ್ಷ್ಮೀ ನಿಮ್ಮ ಬಳಿ ಸುಳಿಯುತ್ತಾಳೆ.  ನಿಮ್ಮ ಕೆಲಸದಲ್ಲಿ ನಿಮಗೆ ವಿಶೇಷ ಕೌಶಲ್ಯ ಹಾಗೂ ಪರಿಣಿತಿ ಇಲ್ಲದಿರುವುದರಿಂದ ನಿಮ್ಮ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಸ್ಟಮರ್ಸ ಬರುವುದಿಲ್ಲ. ಅವರು ಬರದಿದ್ದರೆ ನೀವು ಮುಂದೆ ಬರಲ್ಲ. ಹೀಗಾಗಿ ನಿಮ್ಮ ಬಡತನಕ್ಕೆ ನಿಮ್ಮಲ್ಲಿ ಕಲೆ ಹಾಗೂ ವಿಶೇಷ ಕೌಶಲ್ಯಗಳ ಕೊರತೆಯೂ ಒಂದು ಕಾರಣವಾಗಿದೆ. If you have no skills, then you have No Money.

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೨) ನಿರಂತರ ಕಲಿಕೆಯ ಕೊರತೆ : (Lack of Continuous Learning) 

               ನಾವು ಕಲಿಯುವಲ್ಲಿ, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಅಷ್ಟೊಂದು ಆಸಕ್ತಿ ತೋರಿಸಲ್ಲ. ಹೀಗಾಗಿ ನಮ್ಮಲ್ಲಿ ಯಾವುದೇ ತರಹದ ಕಮ್ಯುನಿಕೇಷನ ಸ್ಕಿಲಗಳು ಬೆಳೆಯುವುದಿಲ್ಲ. ನೀವು ಎಲ್ಲಿ ತನಕ ನಿಮ್ಮ ಕೆಲಸವನ್ನು ಪರಫೆಕ್ಟಾಗಿ ಕಲಿಯುವುದಿಲ್ಲವೋ ಅಲ್ಲಿ ತನಕ ನೀವು ಶ್ರೀಮಂತರಾಗುವುದಿಲ್ಲ. If No Learning, then NO Earning.

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೩) ಮೋಟಿವೇಷನ ಹಾಗೂ ಇಚ್ಛಾಶಕ್ತಿಯ ಕೊರತೆ : (Lack of Motivation and Interest)

                         ನಿಮ್ಮಲ್ಲಿ ನಿಯತ್ತಾಗಿ ದುಡಿದು ಮುಂದೆ ಬರುವ ಇಚ್ಛಾಶಕ್ತಿಯಿಲ್ಲದಿದ್ದರೆ ನೀವು ಖಂಡಿತ ಶ್ರೀಮಂತರಾಗಲ್ಲ. ಬಯಸದೇ ಈ ಜಗತ್ತಲ್ಲಿ ನಿಮಗೇನು ಸಿಗಲ್ಲ. ಮೈತುಂಬ ಒಣಜಂಭ, ಆಲಸ್ಯವನ್ನು ತುಂಬಿಕೊಂಡು ಒಣ ಹರಟೆ ಹೊಡೆಯುವುದರಿಂದ ನಿಮಗೇನು ಸಿಗಲ್ಲ. ನಿಮ್ಮಲ್ಲಿ ದುಡಿಯುವೆ, ಶ್ರೀಮಂತನಾಗುವೆ ಎಂಬ ಛಲ ಹುಟ್ಟಬೇಕು. ಆಮೇಲೆ ನಿಮ್ಮ ಮೈಯಲ್ಲಿ ಬಲ ತಾನಾಗಿಯೇ ಬರುತ್ತದೆ. ಅದಕ್ಕೆ ನಿಮ್ಮ ಬಡತನಕ್ಕೆ ಇಚ್ಛಾಶಕ್ತಿಯ ಕೊರತೆಯು ಒಂದು ಕಾರಣ.

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೪) ಗಳಿಸುವುದಕ್ಕಿಂತ ಹೆಚ್ಚಾಗಿ ಉಳಿಸುವುದಕ್ಕೆ ಬಹಳಷ್ಟು ಹೆಣಗುವುದು : (Giving More importance to Savings rather than Earnings)

                      ನೀವು ಗಳಿಸುವುದಕ್ಕಿಂತ ಹೆಚ್ಚಾಗಿ ಉಳಿಸುವುದಕ್ಕೆ ಹೆಣಗುತ್ತಿದ್ದರೆ ಖಂಡಿತ ನೀವು ಬಡವರಾಗಿರುತ್ತೀರಿ. ಬರೀ ಚಿಲ್ಲರೆ ಹಣವನ್ನು ಕೂಡಿಡುವುದರಿಂದ ಯಾರು ಶ್ರೀಮಂತರಾಗಲ್ಲ. ಹೆಚ್ಚೆಚ್ಚು ಹಣವನ್ನು ಗಳಿಸುವುದರಿಂದ ಎಲ್ಲರೂ ಶ್ರೀಮಂತರಾಗುತ್ತಾರೆಯೆ ಹೊರತು ಚಿಲ್ಲರೆ ಹಣವನ್ನು ಉಳಿಸುವುದರಿಂದ ಅಲ್ಲ. ಹೆಚ್ಚಿಗೆ ಉಳಿಸುವುದರಿಂದ ನೀವು ಶ್ರೀಮಂತರಾಗಲ್ಲ. ಹೆಚ್ಚಿಗೆ ಗಳಿಸುವುದರಿಂದ ನೀವು ಶ್ರೀಮಂತರಾಗುತ್ತೀರಿ.

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೫) ಟ್ಯಾಲೆಂಟ್ ಇದ್ದರೂ ಬೇರೆಯವರಿಗಾಗಿ ಕೆಲಸ ಮಾಡುವುದು : (Working for others even though having Talent) 

             ನಿಮ್ಮಲ್ಲಿ ಟ್ಯಾಲೆಂಟ ಇದ್ದರೂ ನೀವು ಬೇರೆಯವರಿಗಾಗಿ ಕೆಲಸ ಮಾಡುತ್ತಿದ್ದರೆ ನೀವು ಬಡವರಾಗಿ ಉಳಿಯುತ್ತಿರಿ. ನಿಮ್ಮ ಟ್ಯಾಲೆಂಟನ್ನು ಚೆನ್ನಾಗಿ ಬಳಸಿಕೊಂಡು ನಿಮ್ಮ ಬಾಸ್ ಮುಂದೆ ಹೋಗುತ್ತಾನೆ, ನೀವು ಹಿಂದೆ ಉಳಿಯುತ್ತೀರಿ ಅಷ್ಟೇ. ಬೇರೊಬ್ಬರ ಕೈಕೆಳಗೆ ಕೆಲಸ ಮಾಡಿ ಸಂಬಳ ಪಡೆಯುವುದರಿಂದ ನೀವು ಶ್ರೀಮಂತರಾಗಲ್ಲ. ಸ್ವಂತ ಉದ್ದಿಮೆ ಪ್ರಾರಂಭಿಸಿ ಆಳಿನಂತೆ ದುಡಿದು ರಾಜನಂತೆ ವ್ಯವಹಾರ ಮಾಡಿದಾಗಲೇ ನೀವು ಬೇಗನೆ ಶ್ರೀಮಂತರಾಗೋದು.
ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೬) ದುಡ್ಡಿಗಾಗಿ ಒಂದೇ ಮೂಲದ ಅವಲಂಬಿತರಾಗುವುದು : (Depending on Single Money Source) 

          ನೀವು ದುಡ್ಡಿಗಾಗಿ ಒಂದೇ ಮೂಲದ ಮೇಲೆ ಅವಲಂಬಿತರಾಗಿದ್ದರೆ ಖಂಡಿತ ನೀವು ಬಡವರಾಗುತ್ತೀರಿ. ನಿಮಗೆ ಬರೀ ಒಂದೇ ಮೂಲದಿಂದ ದುಡ್ಡು ಬರುತ್ತಿದ್ದರೆ, ಬಂದ ದುಡ್ಡೆಲ್ಲ ನಿಮ್ಮ ಮನೆ ಖರ್ಚಿನಲ್ಲಿ ಕರಗಿ ಹೋಗುತ್ತದೆ. ನಿಮ್ಮ ದುಡ್ಡನ್ನು ನೀವು ಬ್ಯಾಂಕಲ್ಲಿಟ್ಟು ಕೊಳೆಯಿಸುವುದರಿಂದಲೂ ನೀವು ಬಡವರಾಗಿ ಉಳಿಯುವ ಸಾಧ್ಯತೆ ಇದೆ. ಏಕೆಂದರೆ ನಿಮಗೆ ದುಡ್ಡನ್ನು ದುಡಿಸುವ ಕಲೆ ಗೊತ್ತಿಲ್ಲ ಎಂದರ್ಥ. ನಿಮ್ಮ ದುಡ್ಡು ದುಡಿಯಲು ಪ್ರಾರಂಭಿಸಿದಾಗ ನೀವು ಬೇಗನೆ ಶ್ರೀಮಂತರಾಗುತ್ತಿರಿ. ನಿಮ್ಮ ದುಡ್ಡನ್ನು ಎಲ್ಲಿಯೂ ಸರಿಯಾಗಿ ಹೂಡಿಕೆ ಮಾಡದೇ ಬಚ್ಚಿಟ್ಟೇನು ಪ್ರಯೋಜನವಿಲ್ಲ.

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

೭) ಸಂಪಾದಿಸುವುದಕ್ಕಿಂತ ಅಧಿಕವಾಗಿ ಖರ್ಚು ಮಾಡುವುದು. (Spending more than Earning)

                      ನೀವು ಸಂಪಾದಿಸುವುದಕ್ಕಿಂತ ಹೆಚ್ಚಿಗೆ ಖರ್ಚು ಮಾಡುತ್ತಿದ್ದರೆ ಖಂಡಿತ ನೀವು ಬಡವರಾಗಿ ಉಳಿಯುತ್ತೀರಿ. ಅನಾವಶ್ಯಕವಾಗಿ ದುಡ್ಡನ್ನು ಪೋಲು ಮಾಡುವುದರಿಂದ ನೀವು ಬೇಗನೆ ದಿವಾಳಿಯಾಗುತ್ತೀರಿ. ಪಕ್ಕದ ಮನೆಯವರ ಮೇಲಿನ ಹೊಟ್ಟೆಕಿಚ್ಚಿಗೆ ಒಣ ಶೋಕಿ ಮಾಡಲು ಹೋಗಿ ನೀವು ಸಾಲದ ಶೂಲದಲ್ಲಿ ಸಿಕ್ಕು ಒದ್ದಾಡಿ ಬಡವರಾಗುತ್ತೀರಿ ಅಷ್ಟೇ.

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips

                        ಬಡತನಕ್ಕೆ ಕಾರಣವಾಗಿರುವ ಈ ಸಂಗತಿಗಳನ್ನು ತಿಳಿದುಕೊಂಡು ಬದಲಾಗಿರುವುದರಿಂದ ನಾನು ಸಿರಿತನವನ್ನು ಚುಂಬಿಸಿರುವೆ. ನೀವು ಸಹ ಸ್ವಲ್ಪ ಬದಲಾದರೆ ನಿಮ್ಮ ಬಡತನವನ್ನು ಸಾಯಿಸಿ ಶ್ರೀಮಂತರಾಗಬಹುದು. ಬಡವರಾಗಿ ಹುಟ್ಟಿದ್ದರೂ ಪರವಾಗಿಲ್ಲ, ಆದರೆ ಯಾವುದೇ ಕಾರಣಕ್ಕೂ ಬಡವರಾಗಿ ಸಾಯಬೇಡಿ. ಕಡೆ ಪಕ್ಷ ಸರ್ಕಾರ ಕೋಡೋ ಮನೆಯನ್ನಾದರೂ ಕಡು ಬಡವರಿಗಾಗಿ ಬಿಟ್ಟು ಕೊಡುವಷ್ಟಾದರೂ ಶ್ರೀಮಂತರಾಗಿ. All the Best...

ನೀವು ಬಡವರಾಗಿರಲು 7 ಕಾರಣಗಳು : Reasons for your poverty in Kannada - Life Changing Tips




Blogger ನಿಂದ ಸಾಮರ್ಥ್ಯಹೊಂದಿದೆ.