ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

Chanakya Niti in Kannada
ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                       ಮಾನಸಿ ಪಂಕಜನನ್ನು ಮದುವೆಯಾಗಿ ಎರಡು ವರ್ಷವಾಗಿತ್ತು. ಆಕೆ ಅವನೊಂದಿಗೆ ದೆಹಲಿಯಲ್ಲಿದ್ದಳು. ಇಬ್ಬರೂ ಬೇರೆಬೇರೆ  MNC ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಕೈತುಂಬ ಸಂಬಳವಿತ್ತು. ಆದರೂ ಅವರ ಮನಸ್ಸಿಗೆ ಸಮಾಧಾನವಿರಲಿಲ್ಲ. ಏಕೆಂದರೆ ಅವರ ಸಂಬಳ ಅವರ ಐಷಾರಾಮಿ ಕನಸುಗಳಿಗೆ ಸಾಲುತ್ತಿರಲಿಲ್ಲ. ಹೀಗಾಗಿ ಅವರಿಬ್ಬರು ಸ್ವಲ್ಪ ಡೈವರ್ಟ ಆಗಿದ್ದರು. ಫ್ಯಾಮಿಲಿ ಪ್ಲ್ಯಾನಿಂಗೋಸ್ಕರ ಮಗುವನ್ನು ಅವೈಡ್ ಮಾಡಿದ್ದರು. ಅವರ ಮುಂದೆ ಬೇರೆ ಯಾರಾದರೂ ಕಾಸ್ಟ್ಲಿ ಕಾರಲ್ಲಿ ಹೋದರೆ ಅವರ ಹೊಟ್ಟೆ ಉರಿಯುತ್ತಿತ್ತು. ಅವರು ತಮ್ಮ ಆಲ್ಟೋ ಕಾರನ್ನು ಅತಿಯಾಗಿ ದ್ವೇಷಿಸುತ್ತಿದ್ದರು. ಶ್ರೀಮಂತಿಕೆಯ ಹಸಿವಿನಲ್ಲಿ ಅವರಿಬ್ಬರೂ ಮದುವೆ ನಂತರದ ಸರಸ ಸಲ್ಲಾಪದ ಸುಖಗಳನ್ನು ಕಾಟಾಚಾರಕ್ಕೆ ಮಾಡಿದಂತೆ ಅನುಭವಿಸಿದ್ದರು. ಅದಕ್ಕಾಗಿ ಅವರಿಬ್ಬರ ಮಧ್ಯೆ ಹೇಳಿಕೊಳ್ಳುವಂಥ ಅನ್ಯೋನ್ಯ ಸಂಬಂಧವೇನು ರೂಪ ತಾಳಿರಲಿಲ್ಲ. ಅವರಿಬ್ಬರು ತೋರಿಕೆಯ ಗಂಡ ಹೆಂಡತಿ ಆಗಿದ್ದರಷ್ಟೇ. ಅಲ್ಲಿದ್ದ ಬಹುಪಾಲು ಯುವ ದಂಪತಿಗಳ ಪಾಡು ಅದೇ ಆಗಿತ್ತು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                    ಮಾನಸಿ ಹಾಗೂ ಪಂಕಜ ತಮ್ಮ ಐಷಾರಾಮಿ ಕನಸುಗಳಿಗಾಗಿ  ಕಂಪನಿಯಲ್ಲಿ ಕತ್ತೆಯಂತೆ ನಿಯತ್ತಾಗಿ ದುಡ್ಡಿಯುತ್ತಿದ್ದರು. ಆದರೆ ಅವರ ಕಂಪನಿಗಳು ಅವರಿಗೆ ಪ್ರೋಮೊಷನ ಕೊಡುವುದಿರಲಿ ಸಂಬಳವನ್ನು ಹೆಚ್ಚಿಸಲು ಸಹ ಹಿಂದುಮುಂದು ನೋಡುತ್ತಿದ್ದವು. ಅವರಿಬ್ಬರ ಕಂಪನಿಗಳಲ್ಲಿ ವಿದ್ಯಾವಂತ ಮೂರ್ಖರಿಗೇನು ಕೊರತೆಯಿರಲಿಲ್ಲ. ಅವಶ್ಯಕತೆಗಿಂತ ಅಧಿಕವಾಗಿ ವಿದ್ಯಾವಂತ ನೌಕರರು ಅಲ್ಲಿನ ಕಂಪನಿಗಳಿಗೆ ಸಿಗುತ್ತಿದ್ದರು. ಹೀಗಾಗಿ ಕಂಪನಿಗಳೆಲ್ಲ ಮಾತಾಡಿಕೊಂಡು ಕಡಿಮೆ ಸಂಬಳ ನೀಡಿ ಜಾಸ್ತಿ ದುಡಿಸಿಕೊಳ್ಳುತ್ತಿದ್ದವು. ವಿದ್ಯಾವಂತರ ಸಂಖ್ಯೆ ಹೆಚ್ಚಾಗಿರುವುದರಿಂದ ದೇಶದಾದ್ಯಂತ ಈ ಸಮಸ್ಯೆ ಇದೆ, ಏನು ಮಾಡೋಕ್ಕಾಗುತ್ತೆ ಅಂತ ಅವರಿಬ್ಬರು ಸುಮ್ಮನೆ ಕಂಪನಿಯ ಗುಲಾಮಗಿರಿ ಕೆಲಸ ಮಾಡುತ್ತಾ ಸಾಗಿದ್ದರು. ಕೆಲವು ಸಲ ಅವರಿಗೆ ನಾವು ಹೀಗೆಯೇ ಕೆಲಸ ಮಾಡುತ್ತಾ ಏನು ಸುಖ ಅನುಭವಿಸದೆ ಮುದುಕರಾಗಿ ಬಿಡುತ್ತೇವೆ ಎಂದೆನಿಸುತ್ತಿತ್ತು. ಮಾನಸಿಗೆ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ನಮಗಿಂತ ದಿನಕ್ಕೆ ಎರಡ್ಮೂರು ಸಾವಿರ ಸಂಪಾದಿಸುವ ಟೀ ಅಂಗಡಿಯವರೇ ಎಷ್ಟೋ ಮೇಲು ಎಂದೆನಿಸುತ್ತಿತ್ತು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                    ಬೇಜಾರುಗಳ ಮಧ್ಯೆಯೇ ಮಾನಸಿ ಹಾಗೂ ಪಂಕಜರ ಜೀವನ ಉದಾಸವಾಗಿ ಸಾಗಿತ್ತು. ಆದರೆ ಅವರಿದ್ದ ಅಪಾರ್ಟಮೆಂಟಿಗೆ ಆಗಮಿಸಿದ ನವ ಜೋಡಿ ಅವರ ಬಾಳಲ್ಲಿ ಬದಲಾವಣೆಯ ಗಾಳಿ ಬೀಸಿದರು. ಆ ನವ ಜೋಡಿ ಮಾನಸಿ ಪಂಕಜರ ರೂಮಿನ ಎದುರುಗಡೆ ರೂಮಿನಲ್ಲಿಯೇ ಬಂದು ತಂಗಿದರು. ಆ ಜೋಡಿ ಮಾನಸಿ ಹಾಗೂ ಪಂಕಜರ ಮನಸ್ಸಲ್ಲಿ ಜಲಸಿಯ ಜೊತೆಗೆ ಆಕರ್ಷಣೆಯನ್ನು ಸಹ ಹುಟ್ಟು ಹಾಕಿತು. ನಿಜಕ್ಕೂ ಆ ಜೋಡಿ ಪರಫೆಕ್ಟ ಜೋಡಿಯಾಗಿತ್ತು. ಅವರಿಬ್ಬರದ್ದು ಬಹುಶಃ ಲವ್ ಮ್ಯಾರೇಜ್ ಇರಬಹುದು ಎಂಬ ಗುಸುಗುಸು ಅಪಾರ್ಟಮೆಂಟಲ್ಲಿ ಶುರುವಾಗಿತ್ತು. ಆ ನವ ಜೋಡಿಯ ಹೆಸರು ಪೂಜಾ ಹಾಗೂ ಸಂಕೇತ ಆಗಿತ್ತು. ಎಲ್ಲರೂ ಅಂದುಕೊಂಡಂತೆ ಅವರದ್ದೇನು ಲವ್ ಮ್ಯಾರೇಜ್ ಆಗಿರಲಿಲ್ಲ. ಅವರದ್ದು 100% ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಪೂಜಾ ಹಾಗೂ ಸಂಕೇತರಿಬ್ಬರು ಮದುವೆಯಾಗಿ ಮೊದಲ ರಾತ್ರಿ, ಎರಡನೇ ರಾತ್ರಿ, ಮೂರ್ನಾಲ್ಕನೇಯ ರಾತ್ರಿಗಳೆಲ್ಲ ಆದ ನಂತರ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು. ಅವರಲ್ಲಿ ಒಂದು ರೀತಿಯ ಅನ್ಯೋನ್ಯತೆ ಇತ್ತು. ಅವರಿಬ್ಬರೂ ಸದಾ ಒಬ್ಬರಿಗೊಬ್ಬರು ಅಂಟಿಕೊಂಡೆ ಇರುತ್ತಿದ್ದರು. ಅವರಿಗೂ ತಮ್ಮ ಜೀವನದಲ್ಲಿ ಐಷಾರಾಮಿ ಕನಸುಗಳಿದ್ದವು. ಅದಕ್ಕಾಗಿ ಅವರು ಫ್ಯಾಮಿಲಿ ಪ್ಲ್ಯಾನಿಂಗ ಅಂತ ಮಗುವನ್ನು ಅವೈಡ್ ಮಾಡಿ ಏಕಾಂತದಲ್ಲಿ ಸಂಸಾರದ ಸರಸವನ್ನು ಸವಿಯುತ್ತಿದ್ದರು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                           ಕಾಕತಾಳೀಯ ಎಂಬಂತೆ ಪೂಜಾ ಮಾನಸಿಯ ಕಂಪನಿಗೆ ಹೊಸ ಸೂಪರವೈಸರ್ ಆಗಿ ಅಪಾಯಿಂಟ್ ಆಗಿ ನೋಯಿಡಾದಿಂದ ದೆಹಲಿಗೆ ಆಗಮಿಸಿದ್ದಳು. ಅದೇ ರೀತಿ ಸಂಕೇತ ಪಂಕಜನ ಕಂಪನಿಗೆ ಹೊಸ HR ಆಗಿ ಅಪಾಯಿಂಟ ಆಗಿದ್ದನು. ತಮ್ಮ ರೂಮಿನೆದುರುಗಿನ ನವ ಜೋಡಿ ನಮ್ಮ ಕಂಪನಿಗೇನೆ ಬಂದಿದ್ದಾರೆ ಎಂಬುದು ಗೊತ್ತಾದಾಗ ಮಾನಸಿ ಹಾಗೂ ಪಂಕಜಗೆ ಅವರಿಬ್ಬರ ಮೇಲಿನ ಜಲಸಿ ಮತ್ತಷ್ಟು ಹೆಚ್ಚಾಯಿತು. ಏಕೆಂದರೆ ತಾವು ಸೆಕೆಂಡ್ ಹ್ಯಾಂಡ್ ಆಲ್ಟೋ ಕಾರಲ್ಲಿ ಓಡಾಡುತ್ತಿರುವಾಗ ಇವರು ಹೊಸ ಸ್ವೀಫ್ಟ ಕಾರಲ್ಲಿ ಓಡುತ್ತಿದ್ದಾರಲ್ಲ ಎಂಬ ವ್ಯಥೆ ಅವರದ್ದಾಗಿತ್ತು. ಪೂಜಾ ಮತ್ತು ಸಂಕೇತ ಇಬ್ಬರು ಹಾರ್ಡ ವರ್ಕಿಂಗ್ ಮತ್ತು ಆಕರ್ಷಕ ವ್ಯಕ್ತಿತ್ವದರಾಗಿದ್ದರು. ಕಂಪನಿಗೆ ಬಂದ ಮೊದಲೇ ದಿನವೇ ಅವರು ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡು ಎಲ್ಲರಿಗೂ ಆತ್ಮೀಯರಾಗಿ ಬಿಟ್ಟಿದ್ದರು. ಅಪಾರ್ಟಮೆಂಟಿನಲ್ಲಿ ಪೂಜಾ ಹಾಗೂ ಸಂಕೇತರು ಯಾವಾಗಲೂ ಬಾಗಿಲಾಕಿಕೊಂಡೆ ರೂಮಲ್ಲಿರುತ್ತಿದ್ದರು. ಅವರು ತಪ್ಪಿಯೂ ಬಾಗಿಲು ತೆಗೆದು ಮಾನಸಿ ಹಾಗೂ ಪಂಕಜರ ಕಣ್ಣಿಗೆ ಬೀಳುತ್ತಿರಲಿಲ್ಲ. ಅದಕ್ಕೆ ಅವರಿಬ್ಬರು ಈ ನವಜೋಡಿ ಬಾಗಿಲಾಕಿಕೊಂಡು ಯಾವಾಗಲೂ ಸರಸ, ಸಲ್ಲಾಪದಲ್ಲಿಯೇ ಮುಳುಗಿರುತ್ತಾರೆಂದು ಮತ್ತಷ್ಟು ಉರಿದುಕೊಳ್ಳುತ್ತಿದ್ದರು. ಆದರೆ ಕೆಲವು ದಿನಗಳು ಕಳೆದ ನಂತರ ಪೂಜಾ ಹಾಗೂ ಸಂಕೇತ ಅವರಿಬ್ಬರಿಗೆ ಪರಿಚಿತರಾದಾಗ ಅವರಿಬ್ಬರ ಜಲಸಿ ಸ್ವಲ್ಪ ಕಡಿಮೆಯಾಯಿತು. ಅವರಿಬ್ಬರಿಗೆ ಅವರು ಒಳ್ಳೇ ಫ್ರೆಂಡ್ಸಾದರು.
ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                                  ಮಾನಸಿ ಹಾಗೂ ಪಂಕಜರಂತೆ ಪೂಜಾ ಹಾಗೂ ಸಂಕೇತರಿಗೂ ಐಷಾರಾಮಿ ಕನಸುಗಳಿದ್ದವು. ಆದರೆ ಅವರಿಬ್ಬರ ವಿಚಾರಧಾರೆಗಳು ಬೇರೆಬೇರೆಯಾಗಿದ್ದವು. ಮಾನಸಿ ಹಾಗೂ ಪಂಕಜರಂತೆ ಪೂಜಾ ಹಾಗೂ ಸಂಕೇತ ಸಂಸಾರದಲ್ಲಿನ ರಸಿಕತೆ ಕಳೆದುಕೊಂಡು ಕಂಪನಿಗೆ ಬೈಯ್ಯುತ್ತಾ ಕಾಟಾಚಾರಕ್ಕೆ ಕೆಲಸ ಮಾಡುತ್ತಿರಲಿಲ್ಲ. ಅವರು ಆಸಕ್ತಿಯಿಂದ ಕಂಪನಿ ಕೆಲಸ ಮಾಡುತ್ತಿದ್ದರು. ಒಂದಿನ ಮಾನಸಿ ಪೂಜಾಳಿಗೆ "ಪೂಜಾ, ಬಹಳಷ್ಟು ಓದಿದವರಿಗೆ ಈಗ ಬೆಲೆ ಇಲ್ಲ ಅಲ್ವಾ? ನಾನು MBA ಓದಿದರೂ 25 ಸಾವಿರ ಸಂಬಳಕ್ಕೆ ಕಂಪನಿಗೆ ಗುಲಾಮರಂತೆ ದುಡಿಯುತ್ತಿರುವೆ. ನೀನು 40 ಸಾವಿರ ಸಂಬಳಕ್ಕೆ ದುಡಿಯುತ್ತಿರುವೆ. ಆದರೆ ನಮ್ಮ ಆಫೀಸ ಪಕ್ಕದ ಟೀ ಸ್ಟಾಲನವ ತಿಂಗಳಿಗೆ 50 ಸಾವಿರಕ್ಕಿಂತಲೂ ಹೆಚ್ಚಿಗೆ ಗಳಿಸುತ್ತಿದ್ದಾನೆ. ಓದಿದವರಿಗೆ ಬೆಲೆ ಉಳಿದಿಲ್ಲ ಅಲ್ವಾ?" ಎಂದು ಕೇಳಿದಳು. ಅವಳ ಮಾತಿಗೆ ಪೂಜಾ ನಸುನಗುತ್ತಾ "ನೋಡು ಮಾನಸಿ ನಮ್ಮ ಓದಿನ ಮೇಲೆ ನಮ್ಮ ಸಂಪಾದನೆ ನಿಂತಿಲ್ಲ. ನಮ್ಮಲ್ಲಿರುವ ಕೌಶಲ್ಯಗಳ ಮೇಲೆ ನಮ್ಮ ಸಂಪಾದನೆ ನಿರ್ಧಾರಿತವಾಗುತ್ತದೆ. ಚಹಾ ಮಾಡುವುದು ಕೂಡ ಒಂದು ಕಲೆ. ಇಲ್ಲಿ ಸುತ್ತಮುತ್ತ ಅವನಷ್ಟು ಚೆನ್ನಾಗಿ ಯಾರು ಚಹಾ ಮಾಡುವುದಿಲ್ಲ. ಅದಕ್ಕಾಗಿ ಆತ ದಿನದಲ್ಲಿ 300ರಿಂದ 400 ಚಹಾ ಮಾರುತ್ತಾನೆ. ನಮ್ಮ ಕಂಪನಿಯನ್ನೇ ಉದಾಹರಣೆಯಾಗಿ ತೆಗೆದುಕೋ, ನಮ್ಮ ಕಂಪನಿಯಲ್ಲಿ ಸಾಮಾನ್ಯ ಕಾರ್ಮಿಕರು 10 ಸಾವಿರಕ್ಕೆ ದುಡಿಯುತ್ತಾರೆ. ಸೂಪರವೈಸರ ಆದ ನಾನು 40 ಸಾವಿರ ಸಂಪಾದಿಸುತ್ತೇನೆ. ನನಗಿಂತಲೂ ಮೇಲಿನ ಅಧಿಕಾರಿಗಳು ಲಕ್ಷಗಟ್ಟಲೆ ಸಂಪಾದಿಸುತ್ತಾರೆ. ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಈ ರೀತಿ ನಮ್ಮ ಸಂಪಾದನೆ ನಮ್ಮ ಕೌಶಲ್ಯಗಳ ಮೇಲೆ ಅವಲಂಬಿತವಾಗಿದೆ. ಜಾಸ್ತಿ ಕೈಶಲ್ಯಗಳಿದ್ದರೆ ಜಾಸ್ತಿ ಸಂಪಾದಿಸಬಹುದು. ಅದಕ್ಕೆ ನಾನು ಮತ್ತು ಸಂಕೇತ ದಿನಾ ರೂಮಲ್ಲಿ ತರತರಹದ ಸ್ಕೀಲಗಳನ್ನು ಕಲಿಯಲು ಪ್ರಯತ್ನಿಸುತ್ತೇವೆ. ಆತ 6 ಸಾವಿರಕ್ಕೆ ಅವನ ಕಂಪನಿ ಸೇರಿದ್ದ. ಆದರೆ ಈಗ ತಿಂಗಳಿಗೆ 2 ಲಕ್ಷ ಸಂಪಾದಿಸುತ್ತಿದ್ದಾನೆ. ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗುವುದು ಅವನ ಕನಸು. ನನಗೂ ಅವನಂತೆ ಉನ್ನತ ಸ್ಥಾನಕ್ಕೇರುವಾಸೆ. ಅದಕ್ಕೆ ನಾನು ದಿನಾಲು ಅವನ ಪಕ್ಕ ಕುಳಿತು ಅವನ ಪ್ರಾಜೆಕ್ಟಗಳನ್ನು ನೋಡಿ ಕಲಿಯುತ್ತಿರುವೆ" ಎಂದೇಳಿದಳು. ಪೂಜಾಳ ಮಾತುಗಳನ್ನು ಕೇಳಿ ಮಾನಸಿ ಆಶ್ಚರ್ಯ ಚಕಿತಳಾದಳು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                 ಮಾನಸಿ ಹಾಗೂ ಪೂಜಾ ಹಾಗೆಯೇ ಅರ್ಧ ಗಂಟೆ ಮಾತಾಡಿ ಆಫೀಸಿನಿಂದ ಮನೆಗೆ ಹೋಗುವ ತಯಾರಿ ನಡೆಸಿದರು. ಮಾನಸಿಯನ್ನು ಕರೆದೊಯ್ಯಲು ಪಂಕಜ ಆಗಲೇ ಬಂದು ನಿಂತಿದ್ದನು. ಮಾನಸಿ ಪೂಜಾಳನ್ನು ಅವನಿಗೆ ಪರಿಚಯಿಸುತ್ತಿದ್ದಳು. ಅಷ್ಟರಲ್ಲಿ ಸಂಕೇತ ಕೂಡ ಅಲ್ಲಿಗೆ ಬಂದನು. ಪೂಜಾ ಅವನನ್ನು ಮಾನಸಿಗೆ ಪರಿಚಯಿಸಿದಳು. ಎಲ್ಲರೂ ಒಬ್ಬರಿಗೊಬ್ಬರು ಕೈಕುಲುಕಿದರು. ಒಂದೇ ಅಪಾರ್ಟಮೆಂಟಿನವರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಥ ಕಾಕತಾಳೀಯ ಎಂದೆಲ್ಲ ಮಾತನಾಡಿಕೊಳ್ಳುತ್ತಾ ಕಾಫಿ ಶಾಪಿಗೆ ಹೋಗಿ ಕಾಫಿ ಹೀರಿದರು. ಪಂಕಜ ಹಾಗೂ ಸಂಕೇತರಿಬ್ಬರು ಬಿಲ್ ಕೊಡಲು ತಾ ಮುಂದು ಎಂದು ಕಿತ್ತಾಡುತ್ತಿದ್ದರು. ಅಷ್ಟರಲ್ಲಿ ಪೂಜಾ ಬಿಲ್ ಕೊಟ್ಟು ಕಾರಿನ ಬಳಿ ಬಂದಳು. ನಂತರ ಅವರು ಪರಸ್ಪರ ಬಾಯ್ ಹೇಳಿ ತಮ್ಮ ತಮ್ಮ ಕಾರಲ್ಲಿ ತಮ್ಮ ಅಪಾರ್ಟಮೆಂಟಿಗೆ ತೆರಳಿದರು. ಕಾರಲ್ಲಿ ಹೋಗುವಾಗ ಪೂಜಾ ಸಂಕೇತನಿಗೆ ಮಾನಸಿಯ ಬಗ್ಗೆ ವಿವರಿಸುತ್ತಿದ್ದಳು. ಆದರೆ ಆತ ಅವಳ ಮಾತುಗಳ ಕಡೆಗೆ ಗಮನ ಹರಿಸದೆ ಮಾನಸಿಯ ಸೌಂದರ್ಯದ ನೆನಪಲ್ಲಿ ತಲ್ಲೀನನಾಗಿದ್ದನು. ಅದೇ ರೀತಿ ಮಾನಸಿ ಪಂಕಜನಿಗೆ ಪೂಜಾಳ ಬಗ್ಗೆ ವಿವರಿಸುತ್ತಿದ್ದಳು. ಆದರೆ ಆತ ಪೂಜಾಳ ಸೌಂದರ್ಯವನ್ನು ನೆನೆಸಿಕೊಳ್ಳುತ್ತಿದ್ದನು. ಅಷ್ಟರಲ್ಲಿ ಅವರ ಅಪಾರ್ಟಮೆಂಟ ಬಂದಿತು. ಅವರು ಆತುರದಿಂದ ತಮ್ಮ ರೂಮಿಗೋಗಿ ಬಾಗಿಲಾಗಿಕೊಂಡರು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                    ರಾತ್ರಿ ಊಟ ಇತ್ಯಾದಿಯೆಲ್ಲ ಆದ ನಂತರ ಬೆಡ್ರೂಮಲ್ಲಿ ಮಾನಸಿ ಪಂಕಜನ ಎದೆ ಮೇಲೆ ತಲೆಯಿಟ್ಟು ಅವನ ಪಕ್ಕ ಮಲಗಿ ಅವನೊಂದಿಗೆ ಮಾತಿನ ಮಲ್ಲಯುದ್ಧ ಪ್ರಾರಂಭಿಸಿದಳು. ಆಗ ಆಕೆ "ಪಂಕಜ ನಾವು ಎದುರುಗಡೆ ರೂಮಿನ ನವ ಜೋಡಿಯ ಬಗ್ಗೆ ತಪ್ಪಾಗಿ ಭಾವಿಸಿದ್ದೇವೆ. ಅವರು ಬಾಗಿಲಾಕಿಕೊಂಡು ಯಾವಾಗಲೂ ಸರಸವಾಡಲ್ಲ" ಎಂದಳು. ಆಗಾತ "ನೀನೆಗೆ ಅವರ ಬಗ್ಗೆ ಅಷ್ಟೊಂದು ಕರೆಕ್ಟಾಗಿ ಹೇಳುವೆ?" ಎಂದು ಕೇಳಿದನು. ಆಗಾಕೆ "ಇವತ್ತು ಆಫೀಸಿನಲ್ಲಿ ಪೂಜಾಳೊಂದಿಗೆ ಮಾತಾಡಿದೆ. ಅವಳು ತುಂಬಾ ಒಳ್ಳೆಯವಳು. ಜೊತೆಗೆ ಜಾಣೆ ಕೂಡ. ಅವಳು ತನ್ನ ಗಂಡನ ಜೊತೆ ಸೇರಿ ದಿನಾಲು ಹೊಸ ಹೊಸ ಸ್ಕೀಲಗಳನ್ನು ಕಲಿತು ಕಂಪನಿಯಲ್ಲಿ ಉನ್ನತ ಸ್ಥಾನಕ್ಕೇರುವ ಕನಸನ್ನು ಕಟ್ಟಿಕೊಂಡಿದ್ದಾಳೆ..." ಎಂದೆಲ್ಲ ಹೇಳಿ ಆಕೆ ಪೂಜಾಳ ಗುಣಗಾನ ಮಾಡುತ್ತಿದ್ದಳು. ಆದರೆ ಆತ ಪೂಜಾಳ ಕಲ್ಪನೆಯಲ್ಲಿ ಕಳೆದು ಹೋಗಿದ್ದನು. ಆತ ತನ್ನ ಮನಸ್ಸಲ್ಲಿ "ಈ ನಮ್ಮ HR ಭಲೇ ವ್ಯಕ್ತಿ. ಆಫೀಸಿಗೆ ಬಂದ ಮೊದಲ ದಿನವೇ ಎಲ್ಲರ ಗಮನ ಸೆಳೆದ. ಸಾಲದಕ್ಕೆ ಇಂಥ ಸುಂದರವಾದ ಹೆಂಡತಿಯನ್ನು ಸೆಳೆದಿದ್ದಾನಲ್ಲ, ನಿಜಕ್ಕೂ ಕಿಲಾಡಿ ಈತ. ಏನೇ ಅಂದ್ರೂ ಪೂಜಾಳ ಸೌಂದರ್ಯದ ಎದುರು ಈ ನನ್ನ ಮಾನಸಿ ಏನು ಅಲ್ಲವೇ ಅಲ್ಲ. ಅವಳ ಆ ಹಾರಾಡುವ ಕೇಶರಾಶಿ, ಡ್ರೆಸ್ಸಿಂಗ್ ಸೆನ್ಸ್, ತಿದ್ದಿ ತಿಡಿ ಮಾಡಿದಂಥ ಮಾದಕ ಮೈಮಾಟ, ತಂಗಾಳಿಗೂ ಓಲಾಡುವ ಸಪೂರ ಸೊಂಟ... ಹಾಯ್ ಹಾಯ್ ಅವಳು ಬೇರೆನೆ. ಅವಳಿಗೆ ಯಾರು ಸಾಟಿಯಿಲ್ಲ. ಸಾಲದಕ್ಕೆ ಅವಳು ಬ್ಯುಟಿ ಜೊತೆಗೆ ಬ್ರಿಲಿಯಂಟ್ ಕೂಡ..." ಎಂದೆಲ್ಲ ನಾನಸೆನ್ಸಾಗಿ ಮಾತಾಡಿಕೊಳ್ಳುತ್ತಾ ಅವಳನ್ನು ಕಲ್ಪಿಸಿಕೊಳ್ಳುತ್ತಿದ್ದನು. ಅಷ್ಟರಲ್ಲಿ ಮಾನಸಿ ಅವನೆದೆ ಮೇಲೆ ಹೊಡೆದು ಅವನನ್ನು ಭ್ರಮಾಲೋಕದಿಂದ ಹೊರಗೆಳೆದಳು. ಆತ ಪೂಜಾಳನ್ನು ಕಲ್ಪಿಸಿಕೊಳ್ಳುತ್ತಾ ಮಾನಸಿಯನ್ನು ಜೋರಾಗಿ ಅಪ್ಪಿಕೊಂಡು ಮಲಗಿದನು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                ಅತ್ತ ಕಡೆ ಎದುರುಗಡೆಯ ರೂಮಲ್ಲಿ ಸಂಕೇತ ಬೆಡ್ರೂಮಲ್ಲಿ ಪೂಜಾಳಿಗಾಗಿ ಕಾಯುತ್ತಿದ್ದನು. ಆದರೆ ಅವಳಿಗೆ ಅವತ್ತಿನ ಕೆಲಸವನ್ನು ಅವತ್ತೇ ಮಾಡಿ ಮುಗಿಸುವ ಅಭ್ಯಾಸವಿತ್ತು. ಆಕೆ ಪಾತ್ರೆ ಉಜ್ಜಿಟ್ಟು ಬರುವಲ್ಲಿ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಆತ ಅವಳಿಗಾಗಿ ಕಾದು ಹಸಿದ ಹುಲಿಯಂತಾಗಿದ್ದನು. ಅವಳು ಬೆಡ್ರೂಮಿಗೆ ಕಾಲಿಡುತ್ತಲೇ ಆತ ಅವಳನ್ನು ಅಪ್ಪಿಕೊಂಡು ಅವಳ ಸೊಂಟಕ್ಕೆ ಕೈ ಹಾಕಿದನು. ಆಕೆ ಅವನ ಕೈಗೆ ಹೊಡೆಯುತ್ತಾ "ನೀನು ಬರ್ತಾಬರ್ತಾ ತುಂಬಾ ಪೋಲಿಯಾಗುತ್ತಿರುವೆ. ಇಷ್ಟೊಂದು ಆತುರ ಒಳ್ಳೆಯದಲ್ಲ" ಎಂದಳು. ಅದಕ್ಕಾತ ಅವಳನ್ನು ಮತ್ತಷ್ಟು ಗಟ್ಟಿಯಾಗಿ ಅಪ್ಪಿಕೊಂಡು "ನಿನ್ನಂಥ ಹೆಂಡತಿ ಸಿಕ್ಕಿರುವಾಗ ಪೋಲಿಯಾಗದೆ ಸಂನ್ಯಾಸಿ ಆಗೋಕ್ಕಾಗುತ್ತಾ..." ಎಂದು ಹೇಳಿ ಅವಳ ಸೌಂದರ್ಯದ ಶಿಖಾರಿಗೆ ಮುಂದಾದನು. ಆದರೆ ಆಕೆ ಅವನನ್ನು ತಡೆದು ಅವನೆದುರು ಮೆಲ್ಲನೆ ಮಾನಸಿಯ ಮಾತೆತ್ತಿದಳು. ಆಕೆ ಅವನಿಗೆ "ಮಾನಸಿ ತುಂಬಾ ಒಳ್ಳೆಯವಳು. ಆದರೆ ಸ್ವಲ್ಪ ಪೆದ್ದಿ. ಅವಳಿಗೆ ಸಮಾಜ ಜ್ಞಾನ ಸ್ವಲ್ಪ ಕಮ್ಮಿ. ಅವಳು ಜಾಸ್ತಿ ಓದಿ ದೊಡ್ಡ ದೊಡ್ಡ ಡಿಗ್ರಿಗಳನ್ನು ಪಡೆದರೆ ಮಾತ್ರ ಜಾಸ್ತಿ ಹಣ ಸಂಪಾದಿಸಬಹುದು ಎಂದುಕೊಂಡಿದಾಳೆ..." ಎಂದೆಲ್ಲ ಹೇಳುತ್ತಿದ್ದಳು. ಆದರೆ ಆತ ಮಾನಸಿಯ ನೆನಪುಗಳಲ್ಲಿ ಮಗ್ನನಾಗಿದ್ದನು. ಆತ ತನ್ನ ಮನಸ್ಸಿನಲ್ಲಿ  "ಮಾನಸಿ ಪೆದ್ದಿಯಾದರೂ ಎಷ್ಟೊಂದು ಮುದ್ದಾಗಿದ್ದಾಳಲ್ಲ. ಅವಳ ಮುಖದ ಮೇಲಿನ ಆ ನ್ಯಾಚುರಲ್ ನಗು, ಗುಳಿ ಕೆನ್ನೆ, ಗಾಳಿಯೊಡನೆ ಗುದ್ದಾಡುತ್ತಾ ಅವಳ ಮೈಸಿರಿಯ ಕಾವಲು ಕಾಯುವ ಆ ಸೀರೆ ಎಲ್ಲ ನೋಡೋಕೂ ಅದೃಷ್ಟ ಮಾಡಿರಬೇಕು. ನನ್ನವಳು ಇದ್ದಾಳೆ, ಬೆದುರು ಗೊಂಬೆಗೆ ಬಟ್ಟೆ ಹೊದಿಸಿದಂತೆ ಸೀರೆಯುಟ್ಟುಕೊಳ್ಳುತ್ತಾಳೆ..." ಎಂದೆಲ್ಲ ಯೋಚಿಸುತ್ತಿದ್ದನು. ಅಷ್ಟರಲ್ಲಿ ಆಕೆ ಅವನನ್ನು ಎಬ್ಬಿಸಿ "ಯಾವ ಲೋಕದಲ್ಲಿ ಕಳೆದೋಗಿದಿಯಾ?" ಎಂದಳು. ಆಗಾತ ತಡಕಾಡುತ್ತಾ ಅವಳನ್ನು ಅಪ್ಪಿಕೊಂಡು ಬೆಡಶೀಟೊಳಗೆ ಸೇರಿದನು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

          ಪರಸ್ಪರ ಪರಿಚಿತರಾದ ಮೊದಲ ದಿನವೇ ಪಂಕಜ ಹಾಗೂ ಸಂಕೇತರ ಮನಸ್ಸುಗಳು ಸ್ವಾಧೀನ ಕಳೆದುಕೊಂಡವು. ಅವರ ಸ್ನೇಹ ದಿನೇದಿನೇ ಘಾಡವಾಗುತ್ತಾ ಸಾಗಿತು. ಮಾನಸಿ ಹಾಗೂ ಪೂಜಾ ಆಪ್ತ ಸ್ನೇಹಿತೆಯರಾದರು. ಆದರೆ ಸಂಕೇತ ಹಾಗೂ ಪಂಕಜ ಸಮೀಪದಲ್ಲಿದ್ದರೂ ಶತ್ರುಗಳಂತೆ ಕಾಣುತ್ತಿದ್ದರು. ಸಂಕೇತನನ್ನು ನೋಡಿದಾಗೆಲ್ಲ ಮಾನಸಿ ತನ್ನ ಮನಸ್ಸಲ್ಲಿ "ಈ ಪೂಜಾಳ ಗಂಡ ತುಂಬಾ ಸಾಫ್ಟ. ಲಕ್ಷಗಟ್ಟಲೆ ಸಂಬಳ ಬರುತ್ತಿದ್ದರೂ ಒಣ ಶೋಕಿ ಮಾಡದೇ ಲಕ್ಷಣವಾಗಿದ್ದಾನೆ. ಸ್ವಲ್ಪವೂ ಸೊಕ್ಕಿಲ್ಲದೆ ಶಾಂತವಾಗಿದ್ದಾನೆ. ನೋಡೋಕೂ ಸುಂದರವಾಗಿದ್ದಾನೆ. ಗಂಡ ಅಂದ್ರೆ ಹೀಗಿರಬೇಕು..." ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದಳು. ಆದರೆ ಪೂಜಾ ಪಂಕಜನನ್ನು ಕಂಡಾಗಲೆಲ್ಲ "ಈ ಮಾನಸಿಯ ಗಂಡ ಅವಳಂತೆಯೇ ಪೆದ್ದನಾಗಿದ್ದಾನೆ. ತಿಂಗಳಿಗೆ 20 ಸಾವಿರ ಸಂಪಾದಿಸುವ ಯೋಗ್ಯತೆ ಇಲ್ಲದಿದ್ದರೂ ಮಾಡೋ ಶೋಕಿಗೇನು ಕಮ್ಮಿಯಿಲ್ಲ. ಏನ ಇಡೀ  ಅಪಾರ್ಟಮೆಂಟಲ್ಲಿ ಇವನೊಬ್ನೆ ಜೀಮ್ಮಿಗೋಗಿ ಫಿಟ್ಟಾಗಿರುವಂತೆ ಬಿಲ್ಡಪ್ ಕೊಡ್ತಾನೆ. ಆದರೂ ತುಂಬಾ ಸ್ಮಾರ್ಟಾಗಿದಾನೆ..." ಎಂದು ಬೈದುಕೊಳ್ಳುತ್ತಿದ್ದಳು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                  ದಿನಗಳು ಕಳೆದಂತೆ ಮಾನಸಿ ಹಾಗೂ ಪೂಜಾ ಪರಮಾಪ್ತ ಸ್ನೇಹಿತೆಯರಾದರು. ಪಂಕಜ ಹಾಗೂ ಸಂಕೇತ ಜಸ್ಟ ಫ್ರೆಂಡ್ಸಾದರು. ಮನಸ್ಸಲ್ಲಿ ಮೂರ್ಖ ಆಸೆಗಳನ್ನಿಟ್ಟುಕೊಂಡು ಅವರಿಬ್ಬರೂ ಬೆಸ್ಟ ಫ್ರೆಂಡ್ಸಾಗಲು ಸಾಧ್ಯವೇ ಇರಲಿಲ್ಲ. ಆದರೂ ಈ ನಾಲ್ಕು ಜನ ಸಮಯ ಸಿಕ್ಕಾಗ ಜೊತೆಯಾಗಿ ಸಿನಿಮಾಗೆ ಹೋಗುವುದು, ವಿಕೆಂಡ್ ಶಾಂಪಿಂಗಿಗೆ ಹೋಗುವುದು, ಮಂಥ ಎಂಡ್ ಪಿಕನಿಕ್ಕಿಗೆ ಹೋಗುವುದನ್ನೆಲ್ಲ ಮಾಡುತ್ತಿದ್ದರು. ಅದೇ ರೀತಿ ಒಂದಿನ ಅವರು ನಾಲ್ಕು ಜನ ಸೇರಿ ಸಮೀಪದ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋದರು. ಎಲ್ಲರೂ ಪಿಕನಿಕ್ಕಲ್ಲಿ ತುಂಬಾ ಎಂಜಾಯ ಮಾಡಿ ತಮ್ಮ ಮನೆಗೆ ಬಂದರು. ಮನೆಗೆ ಬರುತ್ತಿದ್ದಂತೆ ಸಂಕೇತ ಸುಸ್ತಂತ ಹಾಸಿಗೆಯ ಮೇಲೆ ದೈತ್ಯನಂತೆ ಬಿದ್ದು ಕೊಂಡನು. ಆದರೆ ಪೂಜಾ ಸ್ವಲ್ಪ ಅಪಸೆಟ್ಟಾಗಿದ್ದಳು. ಅವಳು ಯಾಕಾದರೂ ಇವತ್ತು ಇವರ ಜೊತೆ ಪಿಕನಿಕ್ಕಿಗೆ ಹೋದೆ ಎಂದು ಪರಿತಪಿಸುತ್ತಿದ್ದಳು. ಏಕೆಂದರೆ ಅವಳಿಗೆ ಸಂಕೇತ ಮಾನಸಿಯನ್ನು ಕದ್ದು ಮುಚ್ಚಿ ನೋಡುತ್ತಾನೆ, ಅದೇ ತರ ಪಂಕಜ ನನ್ನನ್ನು ಕೆಟ್ಟ ದೃಷ್ಟಿಯಿಂದ ಗುರಾಯಿಸುತ್ತಾನೆ, ಪೂಜಾ ಸಂಕೇತನಿಗೆ ಸಮೀಪವಾಗೋಕೆ ಸಮಯ ಕಾಯ್ತಾಳೆ ಎಂಬ ಸತ್ಯ ಗೊತ್ತಾಗಿತ್ತು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                ಪಿಕನಿಕ್ಕಿಗೆ ಹೋದ ತಕ್ಷಣವೇ ಸಂಕೇತ ಮಾನಸಿಯನ್ನು ಸಿಕ್ಕಾಪಟ್ಟೆ ಹೊಗಳಲು ಶುರು ಮಾಡಿದ್ದನು. ಅವಳ ಸೀರೆಯ ಕಲರ ಚೆನ್ನಾಗಿದೆ ಎಂದು ಕಾಗೆ ಹಾರಿಸುತ್ತಾ ಅವಳಂದವನ್ನು ಕದ್ದು ಮುಚ್ಚಿ ಕಣ್ತುಂಬಿಕೊಳ್ಳುವುದನ್ನು ಪೂಜಾ ಗಮನಿಸಿದ್ದಳು. ಅದೇ ರೀತಿ ಪಂಕಜ ಯಾವುದೇ ಕಾಂಪ್ಲಿಮೆಂಟಗಳನ್ನು ಕೊಡದೆ ಸುಮ್ಮನೆ ನಗುತ್ತಾ ತನ್ನ ದೇಹವನ್ನೆಲ್ಲ ದುರುಗುಟ್ಟಿಕೊಂಡು ನೋಡುತ್ತಿರುವುದನ್ನು ಖಂಡಿಸಲಾಗದೆ ಆಕೆ ಒಳಗೊಳಗೇ ಕೊರಗುತ್ತಿದ್ದಳು. ಸಾಲದಕ್ಕೆ ಪೂಜಾ ಎಲ್ಲರ ಊಟ ಮುಗಿಯುವ ಮುಂಚೆಯೇ ಊಟ ಮುಗಿಸಿ ಪಾರ್ಕಿಗೆ ಹೋಗಿ ನೆಪ ಮಾಡಿ ಸಂಕೇತನನ್ನು ಕರೆದು ಅವನೊಂದಿಗೆ ಮಾತನಾಡುತ್ತಾ ಮಾಯವಾದಳು. ಇದೇ ಅವಕಾಶವನ್ನು ಬಳಸಿಕೊಂಡು ಪಂಕಜ ಪೂಜಾಳ ಶರೀರವನ್ನು ಚೆಕ್ ಔಟ ಮಾಡುತ್ತಿದ್ದನು. ಪೂಜಾ ಅವನ ಹುಚ್ಚಾಟವನ್ನು ಸಹಿಸಿಕೊಂಡು ಸುಮ್ನೆ ಹುಸಿ ನಗುತ್ತಾ ಊಟ ಮಾಡುತ್ತಿದ್ದಳು. ಆತ ಮೊಬೈಲನಲ್ಲಿ ಏನೋ ಟೈಪ್ ಮಾಡುತ್ತಿರುವಂತೆ ನಾಟಕವಾಡುತ್ತಾ ಫ್ರಂಟ ಕ್ಯಾಮೆರಾ ಆನ್ ಮಾಡಿ ಅದರಿಂದ ಅವಳ ಫೋಟೋ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದನು. ಆಗ ಅವನ ಅಂಗಿ ಜೇಬಲ್ಲಿನ ಪೆನ ಜಾರಿ ಟೇಬಲ್ ಕೆಳಗೆ ಬಿದ್ದಿತು. ಆತ ಅದನ್ನೆತ್ತಿಕೊಳ್ಳುವ ನೆಪದಲ್ಲಿ ಟೇಬಲ್ ಕೆಳಗೆ ತೂರಿಕೊಂಡವನು ಎರಡು ನಿಮಿಷ ದಾಟಿದರೂ ಹೊರ ಬರದಿರುವುದನ್ನು ಗಮನಿಸಿದಾಗ ಅವಳಿಗೆ "ಛೇ ನಾನಿವತ್ತು ಈ ಬಟ್ಟೆ ಬದಲಾಗಿ ಲಕ್ಷಣವಾಗಿ ಸೀರೆಯುಟ್ಟುಕೊಂಡು ಬಂದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು..." ಎಂದೆನಿಸಿತು. ಅವಳ ಸಹನೆಯ ಕಟ್ಟೆ ಒಡೆದು ಹೋಗಿದ್ದರೂ ಆಕೆ ಸಹಿಸಿಕೊಂಡು ಸುಮ್ಮನಿದ್ದಳು. ಆದರೆ ಆತ ಅವಳನ್ನು ಬಲವಂತವಾಗಿ ಮಾತನಾಡಿಸುತ್ತಾ ಅವಳಂದವನ್ನು ಗುರಾಯಿಸುತ್ತಿದ್ದನು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                   ಇವತ್ತು ಪಿಕನಿಕ್ಕಿನಲ್ಲಾದ ಘಟನೆಗಳಿಂದ ಪೂಜಾಳಿಗೆ ಸಂಕೇತ, ಪಂಕಜರ ಜೊತೆಗೆ ಮಾನಸಿಯೂ ದಾರಿ ತಪ್ಪುತ್ತಿದ್ದಾಳೆ ಎಂಬುದು ಮನದಟ್ಟಾಗಿತ್ತು. ಅವಳಿಗೆ ಈ ಮೂವರನ್ನು ಹೇಗೆ ತಿದ್ದುವುದು? ಎಂಬ ಚಿಂತೆ ಕಾಡಲು ಶುರುವಾಗಿತ್ತು. ಆಕೆಗೆ ಏನು ಮಾಡಬೇಕೆಂದು ತೋಚದೆ ಆಕೆ ತನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಸಲಹೆ ಕೇಳಿದಳು. ಅವಳ ಗೆಳತಿ ಅವಳಿಗೆ ಸರಿಯಾದ ಸಲಹೆಯನ್ನೇ ಕೊಟ್ಟಳು. ತನ್ನ ಗೆಳತಿ ಕೊಟ್ಟ ಸಲಹೆಯಂತೆ ಪೂಜಾ www.skkannada.comಗೆ ವಿಸಿಟ್ ಮಾಡಿ ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳಲ್ಲಿನ "ಪರರ ಹೆಂಡತಿ ಪರಮ ಸುಂದರಿ..." ಎಂಬ ಕಥೆಯನ್ನು ಓದಿದಳು. ನಂತರ ಆ ನೀತಿ ಕಥೆಯನ್ನು ನಿಯತ್ತು ಮೀರಿ ಹೋಗುತ್ತಿರುವ ಸಂಕೇತ, ಪಂಕಜ ಹಾಗೂ ಮಾನಸಿಗೆ "ಪರರ ಹೆಂಡತಿ ಪರಮ ಸುಂದರಿ ; ಪರರ ಗಂಡ ಪರಮಾಪ್ತ?" ಎಂಬ ಕ್ಯಾಪ್ಷನ್ ಹಾಕಿ ವಾಟ್ಸಾಪ್ ಮುಖಾಂತರ ಕಳುಹಿಸಿ ತಲೆದಿಂಬನ್ನು ತಬ್ಬಿಕೊಂಡು ಕಣ್ಣೀರಾಕುತ್ತಾ ಮಲಗಿಕೊಂಡಳು. ಈ ಮೂವರ ಹುಚ್ಚಾಟಗಳು ಅವಳಿಗೆ ಬಹಳಷ್ಟು ಹರ್ಟ್ ಮಾಡಿದ್ದವು. ತನ್ನ ಜೀವನದಲ್ಲಿ ಇಂಥದ್ದೊಂದು ಸಂದರ್ಭ ಬರುತ್ತೆ ಅಂತವಳು ಕನಸ್ಸಲ್ಲಿಯೂ ಊಹಿಸಿರಲಿಲ್ಲ. ಈ ಕಥೆ ಯಾವ ಹಂತಕ್ಕೆ ತಲುಪಿ ಏನು ಅನಾಹುತವಾಗುತ್ತೋ ಎಂಬ ಆತಂಕದಲ್ಲಿ ಅವಳಿದ್ದಳು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

            ಮರುದಿನ ಪೂಜಾ ಬೇಗನೆದ್ದು ತಯಾರಾಗಿ ಆಫೀಸಿನ ಕೆಲಸ ಅಂತೇಳಿ ಆತುರದಲ್ಲಿ ಹೋದಳು. ಅವಳು ಹೋದ ನಂತರ ತನ್ನ ಮೊಬೈಲನ್ನು ತೆರೆದು ನೋಡಿದ ಸಂಕೇತನ ಎದೆ ಜಲ್ಲೆಂದಿತು. ಅವಳು ಕಳಿಸಿದ ಕಥೆಯನ್ನು ಓದಿದ ನಂತರ ಅವನಿಗೆ ತನ್ನ ಅಪ್ಪಿನ ಅರಿವಾಯಿತು. ಅವನಿಗೆ ತನ್ನ ಮೇಲೆ ನಾಚಿಕೆಯಾಗತೊಡಗಿತು. ಅದೇ  ರೀತಿ ಪಂಕಜ ಹಾಗೂ ಮಾನಸಿಗೆ ತಮ್ಮ ಮೂರ್ಖ ತಪ್ಪಿನ ಅರಿವಾಯಿತು. ಆ ಮೂವರಿಗೆ ಪೂಜಾ ಯಾಕೆ ಈ ಮೆಸೇಜನ್ನು ತಮಗೆ ಕಳುಹಿಸಿದ್ದಾಳೆ ಎಂಬುದು ಸಹ ಅರ್ಥವಾಯಿತು. ಅವರಿಗೆ ಅಪರಾಧಿ ಭಾವನೆ ಕಾಡಲು ಪ್ರಾರಂಭಿಸಿತು. ತಕ್ಷಣವೇ ಸಂಕೇತ ಅವಳಿಗೆ ಕರೆ ಮಾಡಿದನು. ಆದರೆ ಆಕೆ ಕರೆಯನ್ನು ಸ್ವೀಕರಿಸಲು ನಿರಾಕರಿಸಿದಳು. ಅದಕ್ಕಾಗಿ ಆತ ಬೇಜಾರಾಗಿ ಆಫೀಸಿಗೆ ಹೋಗದೆ ಮನೆಯಲ್ಲಿಯೇ ಕುಳಿತನು. ಮಾನಸಿ ಅವಳಿಗೆ ಖುದ್ದಾಗಿ ಭೇಟಿಯಾಗಿ ಕ್ಷಮೆ ಕೇಳಲು ಆಫೀಸಿಗೆ ಹೋದಳು. ಆದರೆ ಆಕೆ ನಿಜವಾಗಿಯೂ ಆಫೀಸಿನ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದಳು. ಕಂಪನಿಯ ಮೇಲೆ ಇನಕಮ್ ಟ್ಯಾಕ್ಸ್ ರೈಡ್ ಆಗಿತ್ತು. ಆಕೆ ಇನಕಮ್ ಟ್ಯಾಕ್ಸ ಅಧಿಕಾರಿಗಳ ಹುಚ್ಚು ಪ್ರಶ್ನೆಗಳಿಗೆ ಉತ್ತರಿಸುತ್ತಾ ಸುಸ್ತಾಗಿದ್ದಳು. ಆದರೆ ಕೊನೆಗೂ ಆಕೆ ಅವರ ಬಾಯ್ಮುಚ್ಚಿಸಿ ಹೊರ ಹಾಕುವಲ್ಲಿ ಯಶಸ್ವಿಯಾದಳು. ನಂತರ ಆಕೆ ಟೀ ಕುಡಿದು ರಿಫ್ರೆಶ ಆಗುವುದಕ್ಕಾಗಿ ಕ್ಯಾಂಟೀನ ಕಡೆ ಹೊರಟಳು, ಮಾನಸಿ ಅವಳನ್ನು ಹಿಂಬಾಲಿಸಿದಳು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                ಮಾನಸಿ ಯಾವುದೇ ಮುಜುಗುರವಿಲ್ಲದೇ ಪೂಜಾಳಿಗೆ ಕ್ಷಮೆ ಕೇಳಿ "ಇನ್ಮುಂದೆ ಯಾವತ್ತು ಹೀಗಾಗಲ್ಲ, ಪ್ಲೀಸ್ ನನ್ನ ನಂಬು" ಎಂದು ಕೇಳಿಕೊಂಡಳು. ಅವಳನ್ನು ಆಕೆ ಕ್ಷಮಿಸಿ ಬಿಳ್ಕೊಟ್ಟಳು. ಮಾನಸಿ ಹೋಗುತ್ತಿದ್ದಂತೆಯೇ ಅವಳನ್ನು ಹುಡುಕಿಕೊಂಡು ಪಂಕಜ ಬಂದನು. ಅವನು ಸಹ ತನ್ನ ತಪ್ಪನ್ನು ಒಪ್ಪಿಕೊಂಡು "ಸಿಸ್ಟರ್ ಇನ್ಮುಂದೆ ನಾನು ನಿಮ್ಮನ್ನಷ್ಟೇ ಅಲ್ಲ, ಯಾವ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಲ್ಲ, ಪ್ಲೀಸ್ ನನ್ನನ್ನು ಕ್ಷಮಿಸಿ..." ಎಂದೆಲ್ಲ ಕಾಡಿಬೇಡಿ ಅವಳ ಮನವೊಲಿಸಿ ಮಾಯವಾದನು. ಮತ್ತೆ ಆಫೀಸಿಗೆ ಹೋಗಲು ಮನಸ್ಸಿಲ್ಲದೇ ಆಕೆ ನೇರವಾಗಿ ಆಟೋ ಹಿಡಿದು ಮನೆಗೆ ಬಂದಳು. ಅವಳ ದಾರಿ ಕಾಯುತ್ತಾ ಸಂಕೇತ ಮನೆಯಲ್ಲೇ ಇದ್ದನು. ಅವನನ್ನು ಮಾತಾಡಿಸದೇ ಆಕೆ ನೇರವಾಗಿ ಬೆಡ್ರೂಮಿಗೆ ಹೋದಳು. ಅವತ್ತಾಕೆ ಅಪರೂಪಕ್ಕೆ ಸೀರೆಯುಟ್ಟುಕೊಂಡಿದ್ದಳು. ಆಕೆ ಮುಂಜಾನೆ ಆಫೀಸಿನಿಂದ ಫೋನ್ ಕರೆ ಬಂದಾಗ ಏನನ್ನು ತಿನ್ನದೆ ಆತುರವಾಗಿ ಹೋಗಿದ್ದಳು. ಹೊಟ್ಟೆ ಹಸಿವು, ಇನಕಮ ಟ್ಯಾಕ್ಸನವರ ವಿಚಿತ್ರ ಪ್ರಶ್ನೆಗಳು, ಮಾನಸಿ ಪಂಕಜರ ಕ್ಷಮಾಪಣೆಗಳು, ಜೊತೆಗೆ ಮೊದಲ ಸಲ ಮಾಡಿದ ಆಟೋ ಸವಾರಿ ಅವಳ ಶಕ್ತಿಯನ್ನೆಲ್ಲ ಕುಂದಿಸಿದ್ದವು. ಅವಳು ಬಹಳಷ್ಟು ಸುಸ್ತಾಗಿದ್ದಳು. ಅವಳಿಗೆ ತನ್ನ ಮೈಮೇಲೆ ಹಿಡಿತವಿರಲಿಲ್ಲ. ಅವಳು ತನಗರಿವಿಲ್ಲದಂತೆಯೇ ನಿದ್ರೆಗೆ ಜಾರಿದಳು.

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                   ಪೂಜಾ ಯಾವತ್ತು ಸಹ ಇಷ್ಟೊಂದು ಟೆನ್ಸ್ ಆಗಿರುವುದನ್ನು ಸಂಕೇತ ನೋಡಿರಲಿಲ್ಲ. ಅವನಿಗೆ ಅವಳ್ಯಾಕೆ ಹಾಗೆ ಬಂದು ಏನನ್ನು ಮಾತಾಡದೆ, ಮೈಮೇಲಿನ ಬಟ್ಟೆಯ ಪರಿವಿಲ್ಲದೆ ಮಲಗಿಕೊಂಡಿದ್ದಾಳೆ ಎಂಬುದು ಗೊತ್ತಿರಲಿಲ್ಲ. ಅದಕ್ಕಾಗಿ ಆತ ಎಲ್ಲದಕ್ಕೂ ತಾನೇ ಕಾರಣವೆಂದು ಅವಳ ಕಾಲ ಬಳಿ ಕುಳಿತುಕೊಂಡು ಕ್ಷಮೆ ಕೇಳುತ್ತಾ ಅವಳ ಕಾಲೊತ್ತಲು ಪ್ರಾರಂಭಿಸಿದನು. ಸಂಜೆ ಅವಳಿಗೆ ಎಚ್ಚರವಾಯಿತು. ಈಗಲೂ ಆತ ಅವಳ ಕಾಲೊತ್ತುತ್ತಾ ಅವಳ ಕಾಲಡಿ ಕುಳಿತ್ತಿದ್ದನು. ಆಕೆ ಸಡನ್ನಾಗಿ ಅವನನ್ನು ನೋಡಿ "ಏನೋ ಇದು? ಏನ ಮಾಡ್ತಿದೀಯಾ?" ಎಂದಳು. ಅದಕ್ಕಾತ ಭಾವುಕನಾಗಿ "ನನ್ನನ್ನು ಕ್ಷಮಿಸಿ ಬಿಡು ಪೂಜಾ. ನಾನು ಕ್ಷಮಿಸಲಾಗದ ದೊಡ್ಡ ತಪ್ಪು ಮಾಡಿರುವೆ. ನಾನು ಸಪ್ತಪದಿಯ ಶಪಥವನ್ನು ಮರೆತು ತಪ್ಪು ಮಾಡಲು ಹೊರಟಿದ್ದೆ. ನಾನು ಮಾನಸಿ ಕಡೆಗೆ ಆಕರ್ಷಿತನಾಗಿದ್ದೆ. ಆದರೆ ಅವಳ ಮೇಲೆ ನನಗೀಗ ಯಾವ ಫೀಲಿಂಗ್ಸು ಇಲ್ಲ. ನೀನು ಯಾವ ಶಿಕ್ಷೆ ಕೊಟ್ರು ನಾನು ಅನುಭವಿಸ್ತೀನಿ. ಆದರೆ ಮಾತಾಡದೆ ಈ ರೀತಿ ಮೌನಯುದ್ಧ ಮಾಡಿ ನನ್ನನ್ನು ಸಾಯಿಸಬೇಡ, ಪ್ಲೀಸ್..." ಎಂದು ಬೇಡಿಕೊಂಡನು. ಆಗಾಕೆ "ಯಾಕೋ ಇಷ್ಟೊಂದು ಎಮೊಷನಲ್ ಆಗ್ತಿದೀಯಾ? ನಾನು ನಿನಗೆ ಏನಾದರೂ ಅಂದ್ನಾ? ಇಲ್ಲ ತಾನೇ? ನನಗೆ ನಿನ್ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದನ್ನೆಲ್ಲ ಮರೆತು ಫ್ರೆಶ್ಶಾಗು ಇವತ್ತು ಡಿನ್ನರಗೆ ಹೊರಗಡೆ ಹೋಗೋಣಾ" ಎಂದಳು. ತನ್ನ ಮಡದಿಯ ಮಹಾನ್ ಗುಣವನ್ನು ಮೆಚ್ಚಿ ಸಂಕೇತ ತನ್ನ ತಪ್ಪನ್ನು ತಿದ್ದಿಕೊಂಡು ಅವಳೊಂದಿಗೆ ಒಂದಾದನು. ಅದೇ ರೀತಿ ಮಾನಸಿ ಹಾಗೂ ಪಂಕಜ ಕೂಡ ಎಲ್ಲ ಮರೆತು ಆತ್ಮೀಯರಾದರು. 

ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

                                        ಒಂದು ಕೆಟ್ಟ  ಮಾತನ್ನು ಆಡದೇ ತನ್ನ ಸಂಸಾರವನ್ನು ಸರದಾರಿಗೆ ತರಲು ನೇರವಾದ www.skkannada.comಗೆ ಪೂಜಾ ಧಾರಾಳ ಮನಸ್ಸಿನಿಂದ ದುಡ್ಡನ್ನು ಡೊನೆಟ್ ಮಾಡಿದಳು. ಈಗ ಅವಳು, ಮಾನಸಿ, ಸಂಕೇತ, ಪಂಕಜ ಎಲ್ಲರೂ ಎಲ್ಲ ಮರೆತು ಒಳ್ಳೇ ಫ್ರೆಂಡ್ಸಾಗಿದ್ದಾರೆ. ಅಲ್ಲದೆ ತಮ್ಮ ಐಷಾರಾಮಿ ಕನಸುಗಳ ನನಸಿಗೆ ಹಗಲು ರಾತ್ರಿಯೆನ್ನದೆ ನಿಯತ್ತಾಗಿ ದುಡಿಯುತ್ತಿದ್ದಾರೆ...


ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada

  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada ಪರರ ಹೆಂಡತಿ ಪರಮ ಸುಂದರಿ : ಪರರ ಗಂಡ ಪರಮಾಪ್ತ? Romantic Life Story of Cute Couples in Kannada Reviewed by Director Satishkumar on March 11, 2019 Rating: 4.5
Powered by Blogger.