ಯಾವಾಗಲೂ ಫಿಟ್ ಆ್ಯಂಡ್ ಆ್ಯಕ್ಟಿವ ಆಗಿರುವುದು ಹೇಗೆ? : How to stay Fit and Active always in Kannada - Body Fitness tips in Kannada
ದಿನದಲ್ಲಿ ನೀವು ಎಷ್ಟು ಗಂಟೆಗಳ ಕಾಲ ಕತ್ತೆಯಂತೆ ದುಡಿದಿರುವಿರಿ ಎನ್ನುವುದಕ್ಕಿಂತ ನೀವು ಎಷ್ಟು ಗಂಟೆ fully active ಆಗಿ ಕೆಲಸ ಮಾಡುವಿರಿ ಎಂಬುದು ಮಾತ್ರ ಲೆಕ್ಕಕ್ಕೆ ಬರುತ್ತದೆ. ಮೈತುಂಬ ಆಲಸ್ಯವನ್ನು ತುಂಬಿಕೊಂಡು ದಿನವೆಲ್ಲ ಕೆಲಸ ಮಾಡಿದರೇನು ಫಲ? ನೀವು ಫಿಟ್ ಆ್ಯಂಡ್ ಆ್ಯಕ್ಟಿವ್ ಆಗಿ ಮಾಡಿದ ಕೆಲಸಗಳು ಮಾತ್ರ ನಿಮಗೆ ಫಲ ಕೊಡುತ್ತವೆ. ಆದ್ದರಿಂದ ದಿನದ 24 ಗಂಟೆಗಳ ಕಾಲ ನೀವು ಫಿಟ್ ಆ್ಯಂಡ್ ಆ್ಯಕ್ಟೀವ್ ಆಗಿರಲೇಬೇಕಾಗುತ್ತದೆ. ನೀವು ಮಾಡುವ ಕೆಲಸ ನಿಮಗೆ ಕಾಟಾಚಾರದಂತೆ ಕಂಡರೆ, ನಿಮ್ಮ ಮುಖದಲ್ಲಿ ಒಂದು ನ್ಯಾಚುರಲ್ ನಗು ಮೂಡದಿದ್ದರೆ, ನಿಮ್ಮ ದೇಹದಲ್ಲಿ ಒಂದು ಉತ್ಸಾಹ ತೇಜಸ್ಸು ತುಂಬಿ ತುಳುಕದಿದ್ದರೆ, ನಿಮ್ಮ ತೋಳಲ್ಲಿ ತಾಕತ್ತಿದ್ದರೂ ನಿಮ್ಮ ಮನಸ್ಸಲ್ಲಿ ನಿಯತ್ತಿರದಿದ್ದರೆ ನೀವು ಫಿಟ್ ಆ್ಯಂಡ್ ಆಕ್ಟೀವ್ ಆಗಿಲ್ಲವೆಂದರ್ಥ. So ಫಿಟ್ ಆ್ಯಂಡ್ ಆ್ಯಕ್ಟಿವ್ ಆಗಿರಲು ಕೆಲವು ಸುಲಭ ಉಪಾಯಗಳು ಇಲ್ಲಿವೆ.
೧) ನಿಮ್ಮ ದಿನವನ್ನು ಸಕ್ಸೆಸಫುಲ್ಲಾಗಿ ಪ್ರಾರಂಭಿಸಿ :
Well begun is half done ಎಂಬ ಮಾತಿದೆ. ಸೂರ್ಯ ನೆತ್ತಿ ಮೇಲೆ ಬಂದಾಗ ಹಾಸಿಗೆಗೆ ಬಾಯ್ ಹೇಳುವುದು ಉತ್ತಮ ರೂಢಿಯಲ್ಲ. So ಸುರ್ಯೋದಯಕ್ಕಿಂತ ಮುಂಚೆಯೇ ಮೈಚಳಿ ಬಿಟ್ಟು ಹಾಸಿಗೆಯಿಂದ ಎದ್ದೇಳಿ. ಖಾಲಿ ಹೊಟ್ಟೆಯಿಂದ 1 ಗ್ಲಾಸ್ ನೀರನ್ನು ಕುಡಿದು ಶೌಚಾಚಾರಗಳನ್ನು ಮುಗಿಸಿ. ನಂತರ 15 ನಿಮಿಷಗಳ ಕಾಲ ನಿಮಗಿಷ್ಟವಿರುವ ಇಲ್ಲವೇ ನಿಮ್ಮಿಂದ ಸಾಧ್ಯವಿರುವ ಸುಲಭ ಯೋಗಾಸನಗಳನ್ನು ಮಾಡಿ. ನಂತರ 10 ನಿಮಿಷಗಳ ಕಾಲ ಪ್ರಾಣಾಯಾಮ ಮಾಡಿ. ಆದಾದ ನಂತರ 5 ನಿಮಿಷ ಕಣ್ಮುಚ್ಚಿ ಶಾಂತಚಿತ್ತದಿಂದ ಧ್ಯಾನ ಮಾಡಿ. ದಿನಾಲು ತಪ್ಪದೆ ಇದೇ ರೀತಿ ಮಾಡಿ ನಿಮ್ಮ ದಿನವನ್ನು ಸಕ್ಸೆಸಫುಲ್ಲಾಗಿ ಪ್ರಾರಂಭಿಸಿ.
೨) ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ :
ನೀವು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢರಾಗಲು ಸಾಧ್ಯ. So ದಿನಾಲು ಎಕ್ಸರಸೈಜ ಮಾಡಿ. ಯೋಗ ಪ್ರಾಣಾಯಾಣಗಳನ್ನು ಮಾಡಿ. ಅವು ಸಾಧ್ಯವಾಗದಿದ್ದರೆ ದಿನಾಲು ಅರ್ಧ ಗಂಟೆ ಫ್ರಿಯಾಗಿ ವಾಕಿಂಗ್ ಆದರೂ ಮಾಡಿ. ನಿಮ್ಮ ದೇಹ ಸದೃಢವಾಗಿದ್ದರೆ ಮನಸ್ಸು ತಾನಾಗಿಯೇ ಸದೃಢವಾಗುತ್ತದೆ. ಮೊದಲು ದೇಹವನ್ನು ದಂಡಿಸಿ ಆಮೇಲೆ ಮನಸ್ಸು ನಿಮ್ಮ ಸ್ವಾಧೀನಕ್ಕೆ ಬರುತ್ತದೆ.
೩) ಆರೋಗ್ಯಕರವಾದ ಡೈಟ್ ಪ್ಲ್ಯಾನ್ ಮಾಡಿಕೊಳ್ಳಿ :
ಶುದ್ಧವಾದ ನೀರು, ಶುದ್ಧವಾದ ಆಹಾರ ಹಾಗೂ ಶುದ್ಧವಾದ ಗಾಳಿಯನ್ನು ಸೇವಿಸಿ. ಅವಶ್ಯಕತೆಯಿದ್ದಷ್ಟೇ ತಿನ್ನಿ ಮತ್ತು ಹಸಿವಾದಾಗ ಮಾತ್ರ ತಿನ್ನಿ. ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನು ಆಲಿಸಿ, ಒಳ್ಳೆಯದನ್ನು ಮಾತಾಡಿ ಮತ್ತು ಒಳ್ಳೆಯದನ್ನು ಮಾಡಿ.
ಸದ್ಯಕ್ಕೆ ನಾನು ಹೇಳಿದ ಈ ಟಿಪ್ಸಗಳು ನನ್ನ ವೈಯುಕ್ತಿಕ ಅನುಭವದ ಮೇಲೆ ಆಧಾರಿತವಾಗಿವೆ. ನಾನಂತೂ ಫಿಟ್ ಆ್ಯಂಡ್ ಆ್ಯಕ್ಟೀವ್ ಆಗಿರುವೆ. ಹೀಗಾಗಿಯೇ ನಾನು ನನ್ನ ಕಂಪನಿಯನ್ನು ಸಕ್ಸೆಸಿನ ದಾರಿಯಲ್ಲಿ ಮುನ್ನಡೆಸುವುದರ ಜೊತೆಗೆ ದಿನಾಲು ನಾಲ್ಕು ಭಾಷೆಗಳಲ್ಲಿ ನಾಲ್ಕೈದು ಅಂಕಣಗಳನ್ನು ಬರೆಯುವಷ್ಟು, ವಿಡಿಯೋಗಳನ್ನು ಮಾಡುವಷ್ಟು ಸಮರ್ಥನಾಗಿದ್ದೇನೆ. ಈಗ ನೀವು ಫ್ರಿಯಾಗಿ ಫಿಟ್ ಆ್ಯಂಡ್ ಆಕ್ಟೀವ್ ಆಗದಿದ್ದರೆ ಮುಂದೊಂದು ದಿನ ಸುಮ್ಮನೆ ಡಾಕ್ಟರಗಳಿಗೆ ದುಡ್ಡು ಸುರಿಯಬೇಕಾಗುತ್ತದೆ. So ಇವತ್ತಿನಿಂದಲೇ ಫಿಟ್ ಆ್ಯಂಡ್ ಆ್ಯಕ್ಟಿವ್ ಆಗಿ. ಆಲ್ ದ ಬೆಸ್ಟ. Thanks you....