ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? : How to find your true passion? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? : How to find your true passion? in Kannada

ನೆಗೆಟಿವ್ ಆಲೋಚನೆಗಳಿಂದ ಹೊರ ಬರುವುದು ಹೇಗೆ? How to over come Negative Thoughts in Kannada

           ಗುರು, Passion ಎಂದರೆ ಆ Fashion ಅಲ್ಲ. ನಾನು ಹೇಳ್ತಿರೋದು ಈ Passion ಬಗ್ಗೆ, ಅಂದರೆ ಅಭಿರುಚಿಯ ಬಗ್ಗೆ. ಮೀಸೆ ತೆಗೆಸಿ, ಕಿವಿಯಲ್ಲಿ ಓಲೆ, ಕೈಯಲ್ಲಿ ಚೈನ್ ಹಾಕಿಕೊಂಡು ಬೇರೆಯವರ ಬೈಕಲ್ಲಿ ಬಿಟ್ಟಿ ಊರ ತಿರಗೋ ಶೋಕಿ ಫ್ಯಾಷನ್ ಬಗ್ಗೆ ನಾನು ಹೇಳ್ತಿಲ್ಲ. ನಾನು ನಿಮ್ಮಲ್ಲಿ ಅಡಗಿರುವ Hidden Talent, true passion ಬಗ್ಗೆ ಹೇಳ್ತಿದೀನಿ. ನಾನು ಕಳೆದ ಸೆಷನನಲ್ಲಿ ನಿಮ್ಮಲ್ಲಿರುವ ಫ್ಯಾಷನನ್ನು ಪ್ರೊಪೆಷನ್ನಾಗಿ ಪರಿವರ್ತಿಸಿಕೊಂಡು ಬೇಗನೇ ಶ್ರೀಮಂತರಾಗಿ ಎಂಬ ಸಲಹೆಯನ್ನು ಕೊಟ್ಟಿದ್ದೆ. ಅದನ್ನು ನೋಡಿ ತುಂಬಾ ಜನ "ನಮ್ಮ passionನ್ನು ಪತ್ತೆ ಹಚ್ಚೋದು ಹೇಗೆ? ನಮ್ಮಲ್ಲಿನ ಕಲೆ ನಮ್ಮ ಬದುಕಿಗೆ ಆರ್ಥಿಕವಾಗಿ ಆಸರೆಯಾಗುತ್ತಾ ಎಂಬುದನ್ನು ತಿಳಿಯೋದು ಹೇಗೆ?" ಎಂಬ ಪ್ರಶ್ನೆಗಳನ್ನು ಇನಸ್ಟಾಗ್ರಾಮಲ್ಲಿ ಕೇಳಿದ್ದಾರೆ. So ನಿಮ್ಮಲ್ಲಿರುವ Passionನ್ನು ಪತ್ತೆ ಹಚ್ಚುವ ವಿಧಾನ ಇಲ್ಲಿದೆ ;

ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? How to find your true passion?

ಸ್ಟೆಪ್ - 1 : ಮೊದಲು ನಿಮ್ಮ Passionನ್ನು ಪತ್ತೆ ಹಚ್ಚಿ (First find your Passion

ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ರೀತಿಯ ವಿಶೇಷ ಕಲೆ ಇದ್ದೇ ಇರುತ್ತದೆ. ಮನುಷ್ಯನಲ್ಲಿರುವ ವಿಶೇಷ ಗುಣವನ್ನೇ ನಾವು ಕಲೆಯನ್ನಬಹುದು. ಬರೀ ಹಾಡೋದು, ಕುಣಿಯೋದು, ಬರೆಯೋದು, ಫೋಟೋಗ್ರಾಫಿ, ಡ್ರಾಯಿಂಗ್, ಆಕ್ಟಿಂಗ್ ಮಾಡುವುದು ಮಾತ್ರ ಕಲೆಗಳಲ್ಲ. ಇವುಗಳನ್ನು ಬಿಟ್ಟು ಇನ್ನು ಹಲವಾರು ಕಲೆಗಳಿವೆ.

ಉದಾ : ಸುಳ್ಳೆಳೋದು ಒಂದು ಕಲೆ, ಈ ಕಲೆ ನಿಮ್ಮಲ್ಲಿದ್ದರೆ ನೀವು ರಾಜಕಾರಣಿಗಳಾಗಬಹುದು. ಜನರನ್ನು ನಗಿಸುವುದು ಒಂದು ಕಲೆ, ಈ ಕಲೆ ನಿಮ್ಮಲ್ಲಿದ್ದರೆ ನೀವು ಕಾಮಿಡಿಯನ ಆಗಬಹುದು. ಜನರೊಂದಿಗೆ ಚೆನ್ನಾಗಿ ಮಾತನಾಡಿ ಅವರ ಮನಸ್ಸನ್ನು ಗೆಲ್ಲೋದು ಒಂದು ಕಲೆ, ಈ ಕಲೆ ನಿಮ್ಮಲ್ಲಿದ್ದರೆ ನೀವು PR agent ಅಥವಾ ಸೇಲ್ಸ್ ಮ್ಯಾನೇಜರ ಆಗಬಹುದು. ಇದೇ ರೀತಿ ನಿಮ್ಮಲ್ಲಿ ಕಲೆಯಿದ್ದರೆ ನೀವು ಆ್ಯಕ್ಟರ್, ಡ್ಯಾನ್ಸರ್, ಟೀಚರ್, ಫಿಲ್ಮಮೇಕರ್, ಕ್ರಿಕೆಟರ್, ಪೋಲಿಟಿಷಿಯನ್, ಬ್ಯುಸಿನೆಸಮ್ಯಾನ್, ಏನು ಬೇಕಾದರೂ ಆಗಬಹುದು. ಈಗ ನಿಮಗೆ ನಿಮ್ಮಲ್ಲಿರುವ ಕಲೆ ಅಥವಾ Passion ಯಾವುದೆಂದು ನಿಮಗರ್ಥವಾಗಿದೆ ಎಂದುಕೊಳ್ಳುತ್ತೇನೆ.

ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? How to find your true passion?

ಸ್ಟೆಪ್ - 2 : ನಿಮ್ಮ Passionನ್ನು ಸ್ವಲ್ಪ ಆಳವಾಗಿ ಪರೀಕ್ಷಿಸಿ : (Check your Passion Deeply)

ನನಗೂ ಬರೆಯೋಕೆ ಬರುತ್ತಂತಾ ಫೇಸ್ಬುಕ್, ವಾಟ್ಸಾಪ್ ಸ್ಟೆಟಸಗಳಲ್ಲಿ ಬರೆದೇನು ಪ್ರಯೋಜನವಿಲ್ಲ. ನನಗೂ ಹಾಡೋಕೆ ಬರುತ್ತಂತಾ ಬಾಥರೂಮಲ್ಲಿ ಹಾಡೇನು ಪ್ರಯೋಜನವಿಲ್ಲ. ಅದಕ್ಕಾಗಿ ಈಗ ನಿಮ್ಮ ಪ್ಯಾಷನನ್ನು ಸ್ವಲ್ಪ ಆಳವಾಗಿ ಪರೀಕ್ಷಿಸಿ. ನಿಮ್ಮಲ್ಲಿ ನಿಜವಾಗಿಯೂ ಕಲೆ ಇದೆಯಾ ಎಂಬುದನ್ನು ಓರೆ ಹಚ್ಚಿ ನೋಡಿಕೊಳ್ಳಿ. ಪಾಪುಲ್ಯಾರಿಟಿಯ ಆಸೆಗೋ ಇಲ್ಲವೇ ಹಣದ ಆಸೆಗೋ ಸುಮ್ಮನೆ ಇಲ್ಲದ ಕಲೆ ನನ್ನಲ್ಲಿದೆ ಎಂದುಕೊಂಡು ನಾನು ಫೇಮಸ್ ಆಗ್ತೀನಿ, Rich ಆಗ್ತೀನಿ ಅಂತಾ ಹಾರಾಡಬೇಡಿ.

ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? How to find your true passion?

ನೀವು ಬೇರೆಯವರನ್ನು ನೋಡಿ, ಅವರ ಬಳಿಯಿರುವ ದುಡ್ಡನ್ನು, ಅವರ ಆಸ್ತಿ ಅಂತಸ್ತನ್ನು ನೋಡಿ ಅವರು ಮಾಡುತ್ತಿರುವ ಕೆಲಸವನ್ನು ನೀವು ಮಾಡಲು ಹೊರಟರೇ ನೀವು 100% ಫೇಲಾಗುತ್ತಿರಿ. No doubt, you are going fail in it. ಬರೀ ದುಡ್ಡಿಗಾಗಿ ನೀವು ಮಾಡುವ ಕೆಲಸ ನಿಮ್ಮನ್ನು ದಡ ಸೇರಿಸಲ್ಲ.

ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? How to find your true passion?

ನೀವು ಯಾವ ಕೆಲಸವನ್ನು ಆಯಾಸವಿಲ್ಲದೆ, ಯಾರಿಂದಲೂ ಹೇಳಿಸಿಕೊಳ್ಳದೆ, ಯಾವುದೇ ಒತ್ತಡವಿಲ್ಲದೆ, ಯಾವುದೇ ದುಡ್ಡು, ಅಂತಸ್ತಿಗೆ ಆಸೆಪಡದೆ, ಇಷ್ಟಪಟ್ಟು ನಗುನಗುತ್ತಾ ಖುಷಿಯಿಂದ ಮಾಡುತ್ತಿರೋ ಅದೇ ನಿಮ್ಮ ನಿಜವಾದ Passion ಆಗಿರುತ್ತದೆ.

ಉದಾ : ನನಗೆ ಮಾತಾಡುವುದೆಂದರೆ, ಬರೆಯುವುದೆಂದರೆ ತುಂಬಾ ಇಷ್ಟ. ನಾನು ಜಸ್ಟ್ ಬರೆಯುವುದಕ್ಕಾಗಿ, ಓದುಗರ ಮನಗೆಲ್ಲುವುದಕ್ಕಾಗಿ ದಿನ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿದೆ. ನಂತರ ನನ್ನ ಆಫೀಸಿಯಲ್ ವೆಬಸೈಟಗಳಾದ www.Roaringcreationsfilms.com ಮತ್ತು www.Skkannada.comಗಳಲ್ಲಿ ಬರೆಯಲು ಪ್ರಾರಂಭಿಸಿದೆ. ನನ್ನ ಬರವಣಿಗೆಯನ್ನು ನೋಡಿ ಹಲವಾರು ಬ್ರ್ಯಾಂಡಗಳು ನನ್ನ ಜೊತೆ ಕೈ ಜೋಡಿಸಿದವು. ನಾನೀಗ Roaring Creations Private Limited ಕಂಪನಿಯ ಸಹ ಮಾಲೀಕನಾಗಿರುವೆ. ಸರಸ್ವತಿ ಹಾಗೂ ಲಕ್ಷ್ಮೀ ಇಬ್ಬರು ನನ್ನೊಂದಿಗಿದ್ದಾರೆ. ಇದಕ್ಕಿಂತ ಹೆಚ್ಚಿಗೆ ನನಗಿನ್ನೇನು ಬೇಕು? So ದುಡ್ಡು, ಪ್ರಖ್ಯಾತಿ, ಪ್ರಶಸ್ತಿಗಳ ಆಸೆಯಿಲ್ಲದೆ ನೀವು ಮಾಡುವ ಕೆಲಸವೇ ನಿಮ್ಮ ನಿಜವಾದ Passion. All the Best and Thanks you....

ನಿಮ್ಮ ನಿಜವಾದ ಪ್ಯಾಷನನ್ನು ಪತ್ತೆ ಹಚ್ಚೋದು ಹೇಗೆ? How to find your true passion?



Blogger ನಿಂದ ಸಾಮರ್ಥ್ಯಹೊಂದಿದೆ.