ಆಲಸಿತನವನ್ನು ಸಾಯಿಸುವುದು ಹೇಗೆ? : How to kill laziness? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಆಲಸಿತನವನ್ನು ಸಾಯಿಸುವುದು ಹೇಗೆ? : How to kill laziness? in Kannada

ಆಲಸಿತನವನ್ನು ಸಾಯಿಸುವುದು ಹೇಗೆ? How to kill laziness? Kannada Life Changing Article

                    ನಮ್ಮ ಕಾಲನ್ನು ನಮ್ಮಿಂದಲೇ ಎಳೆಸುವ ಸಂಗತಿಗಳಲ್ಲಿ ಆಲಸ್ಯವೂ ಕೂಡ ಒಂದು. ನಾವು ಈ ಆಲಸ್ಯವನ್ನು ಸಾಯಿಸದಿದ್ದರೆ ಅದು ನಮ್ಮ ಸಕ್ಸೆಸನ್ನು ಸಾಯಿಸುತ್ತದೆ. ಅಲ್ಲದೆ ನಮ್ಮ ಆಲಸಿತನ ನಮ್ಮಲ್ಲಿ ಅಹಂಕಾರವನ್ನು ಹುಟ್ಟಾಕುತ್ತದೆ. ಮುಂದಾಲೋಚನೆ ಮಂದ ಆಲೋಚನೆಯಾದರೆ, ಮಂದಹಾಸ ಮದದ ಹಾಸ್ಯವಾದರೆ ನಮ್ಮನ್ನು ನಮ್ಮ ಅವನತಿಯಿಂದ ಕಾಪಾಡಲು ಆ ದೇವರಿಗೂ ಸಾಧ್ಯವಿಲ್ಲ. ನಮ್ಮಲ್ಲಿನ ಆಲಸಿತನ ನಮ್ಮ ಅಂತಸ್ತನ್ನು ಹಂತಹಂತವಾಗಿ ನಾಶ ಮಾಡುತ್ತದೆ. ನಮ್ಮಲ್ಲಿನ ಆಲಸಿತನ ನಮ್ಮಲ್ಲಿ ನೆಗೆಟಿವ್ ಆಲೋಚನೆಗಳು ಹುಟ್ಟುವಂತೆ ಮಾಡುತ್ತದೆ. ಹುಳ ಹತ್ತಿದ ಕಟ್ಟಿಗೆಗೂ, ಆಲಸಿತನದಲ್ಲಿ ಬಿದ್ದಿರುವ ಮನುಷ್ಯನಿಗೂ ಯಾವುದೇ ವ್ಯತ್ಯಾಸವಿಲ್ಲ. ನಾವು ಬಯಸಿದ್ದು ನಮಗೆ ಸಿಗಬೇಕೆಂದರೆ ಮೊದಲು ನಾವು ನಮ್ಮಲ್ಲಿನ ಆಲಸಿತನವನ್ನು ಸಾಯಿಸಲೇಬೇಕು.

ಆಲಸಿತನವನ್ನು ಸಾಯಿಸುವುದು ಹೇಗೆ? How to kill laziness? Kannada Life Changing Article

                  "ಆಲಸಿತನವನ್ನು ಕೊಲ್ಲುವುದು ಹೇಗೆ?" ಎಂಬುದನ್ನು ನೋಡುವುದಕ್ಕಿಂತ ಮುಂಚೆ ಈ ಆಲಸಿತನಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ. ಶಕ್ತಿಯ ಕೊರತೆಯೇ ಆಲಸಿತನಕ್ಕೆ ಮುಖ್ಯ ಕಾರಣ. ನಮ್ಮ ದೇಹದಲ್ಲಿ ಶಕ್ತಿಯ ಕೊರತೆಯಾದಾಗ ನಮ್ಮಲ್ಲಿ ಆಲಸಿತನ ಹುಟ್ಟಿಕೊಳ್ಳುತ್ತದೆ. Yes, lack energy is the main reason for laziness. ಈ ಆಲಸಿತನಗಳಲ್ಲಿ ಎರಡು ವಿಧಗಳಿವೆ. ಒಂದು ಮಾನಸಿಕ ಆಲಸಿತನ (Mental Laziness). ಇನ್ನೊಂದು ದೈಹಿಕ ಆಲಸಿತನ (Physical Laziness). ನಾವು ನಮ್ಮ ದೇಹಕ್ಕೆ ಸಮರ್ಪಕವಾಗಿ ಶಕ್ತಿಯನ್ನು ಪೂರೈಸಿದರೆ ಸಾಕು ನಮ್ಮಲ್ಲಿನ ಆಲಸಿತನ ಸರ್ವನಾಶವಾಗುತ್ತದೆ. ಮಾನಸಿಕ ಆಲಸಿತನದಿಂದ ದೈಹಿಕ ಆಲಸಿತನ ಬರುತ್ತದೆ. ಹೀಗಾಗಿ ನಾವು ಆಲಸಿತನವನ್ನು ಕೊಲ್ಲಬೇಕೆಂದರೆ ಮೊದಲು ಮಾನಸಿಕ ಆಲಸಿತನವನ್ನು ಕೊಲ್ಲಬೇಕು.

ಆಲಸಿತನವನ್ನು ಸಾಯಿಸುವುದು ಹೇಗೆ? How to kill laziness? Kannada Life Changing Article

                           ಇಚ್ಛಾಶಕ್ತಿಯ ಕೊರತೆಯಿಂದ ಮಾನಸಿಕ ಆಲಸಿತನ ಜನ್ಮ ತಾಳುತ್ತದೆ. ನಿಮ್ಮಲ್ಲಿ ಮೋಟಿವೇಷನ ಮತ್ತು  ಆತ್ಮವಿಶ್ವಾಸದ ಕೊರತೆಯಾದಾಗ ಮಾನಸಿಕ ಆಲಸಿತನ ನಿಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಅದಕ್ಕಾಗಿ ನಿಮ್ಮ ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಅದಕ್ಕಾಗಿ ಸ್ಪೂರ್ತಿದಾಯಕ ಅಂಕಣಗಳನ್ನು, ಕಥೆಗಳನ್ನು ಓದಿ. ಮೋಟಿವೇಷನಲ್ ವಿಡಿಯೋಗಳನ್ನು ನೋಡಿ. ನೀವು ನನ್ನ ಯ್ಯುಟ್ಯೂಬ ಚಾನೆಲನಲ್ಲಿ ಮೋಟಿವೇಷನಲ್ ವಿಡಿಯೋಗಳನ್ನು ನೋಡಬಹುದು. ನಿಮ್ಮ ಗುರಿಗಳನ್ನು ನಿರ್ಧರಿಸಿ. ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಟಾರ್ಗೆಟನ್ನು ಹಾಕಿಕೊಳ್ಳಿ. "ಈ ಕೆಲಸವನ್ನು ಇಷ್ಟೇ ದಿನದಲ್ಲಿ ಮುಗಿಸುತ್ತೇನೆ..." ಎಂಬಿತ್ಯಾದಿ ನಿಯಮಗಳನ್ನು ನಿಮಗೆ ನೀವೇ ಹಾಕಿಕೊಳ್ಳಿ. ನಿಮ್ಮ ದಿನನಿತ್ಯದ ಕಾರ್ಯಗಳನ್ನು ಪೂರ್ಣಗೊಳಿಸಲು ಒಂದು ಸರಿಯಾದ ಸರಿಯಾದ ಟೈಮ ಟೇಬಲ್ ಮಾಡಿಕೊಳ್ಳಿ. ನಿಮ್ಮ ಕೆಲಸದ ಬಗ್ಗೆ ನಿಮಗೆ ಅರಿವಿರುವಂತೆ ನೋಡಿಕೊಳ್ಳಿ. "ನೀವು ಯಾಕೆ ಕೆಲಸ ಮಾಡಬೇಕು?" ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ನೀವು ಆಲಸಿತನವನ್ನು ಬಿಟ್ಟು ಕೆಲಸ ಮಾಡುತ್ತೀರಿ. ನಿಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ. ನಿಮ್ಮ ಮೊಬೈಲನ್ನು ಸಾಧ್ಯವಾದಷ್ಟು ದೂರವಿಡಿ. ಈ ರೀತಿ ನೀವು ನಿಮ್ಮಲ್ಲಿನ ಮಾನಸಿಕ ಆಲಸಿತನವನ್ನು ಸಾಯಿಸಬಹುದು.

ಆಲಸಿತನವನ್ನು ಸಾಯಿಸುವುದು ಹೇಗೆ? How to kill laziness? Kannada Life Changing Article

         ಜೈವಿಕ ಶಕ್ತಿಯ ಕೊರತೆಯಿಂದ ನಿಮ್ಮಲ್ಲಿ ದೈಹಿಕ ಆಲಸಿತನ ಕಾಣಿಸಿಕೊಳ್ಳುತ್ತದೆ. ಜೈವಿಕ ಶಕ್ತಿಯ ಕೊರತೆಯಿಂದಾಗಿ ನಿಮ್ಮ ದೇಹದಲ್ಲಿ ಸ್ನಾಯು ಸೆಳೆತ ಉಂಟಾಗಿ ಪದೇಪದೇ ನೀವು ವಿಶ್ರಾಂತಿ ತೆಗೆದುಕೊಳ್ಳಲು ಒದ್ದಾಡುತ್ತೀರಿ. ಹೀಗಾಗಿ ನೀವು ದೈಹಿಕ ಆಲಸಿತನಕ್ಕೆ ತುತ್ತಾಗುತ್ತೀರಿ. ನೀವು ದೈಹಿಕ ಆಲಸಿತನದಿಂದ ಹೊರಬರಬೇಕೆಂದರೆ ನೀವು ಪ್ರತಿದಿನ ತಪ್ಪದೆ ಎಕ್ಸರಸೈಜ್ ಮಾಡಬೇಕು. ಸರಿಯಾಗಿ ನಿದ್ರೆ ಮಾಡಬೇಕು. ದಿನಾಲು ಸುರ್ಯೋದಯಕ್ಕಿಂತ ಮುಂಚೆ ಎದ್ದು ಯೋಗಾಸನ ಪ್ರಾಣಾಯಾಮ ಇತ್ಯಾದಿಗಳನ್ನು ಮಾಡಬೇಕು. ಆವಾಗಾವಾಗ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು. ಸಾಧ್ಯವಾದರೆ ಹೆಚ್ಚು ಹಣ್ಣುಗಳನ್ನು ಸೇವಿಸಿ. ಸಕ್ಕರೆ ಅಂಶವಿರುವ ಕಾಫಿ, ಟೀಗಳನ್ನು ಕಡಿಮೆ ಸೇವಿಸಿ. ನಿಮ್ಮ ಮನೆ, ಮನ ಮತ್ತು ತನಗಳನ್ನು ಯಾವಾಗಲೂ ಸ್ವಚ್ಛವಾಗಿಡಿ. ನಿಮ್ಮ ಮನೆ, ಮನಗಳು ಸ್ವಚ್ಛವಾಗಿದ್ದರೆ ಚಿಟ್ಟೆಗಳು ಬರಬಹುದು, ಇಲ್ಲವಾದರೆ ಸೊಳ್ಳೆಗಳು ಬರುತ್ತವೆ. ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಜೈವಿಕ ಶಕ್ತಿ ಅಧಿಕವಾಗುತ್ತದೆ. ಇದರಿಂದ ನಿಮ್ಮಲ್ಲಿನ ದೈಹಿಕ ಆಲಸಿತನ ದೂರಾಗುತ್ತದೆ.

ಆಲಸಿತನವನ್ನು ಸಾಯಿಸುವುದು ಹೇಗೆ? How to kill laziness? Kannada Life Changing Article

                ಈ ರೀತಿ ನೀವು ನಿಮ್ಮಲ್ಲಿನ ಆಲಸಿತನವನ್ನು ಸುಲಭವಾಗಿ ಮತ್ತು ಉಚಿತವಾಗಿ ಸಾಯಿಸಬಹುದು. ಇವತ್ತೇ ನಿಮ್ಮ ಆಲಸಿತನವನ್ನು ಸಾಯಿಸಿ, ಇಲ್ಲವಾದರೆ ಅದು ನಿಮ್ಮ ಸಕ್ಸೆಸನ್ನು, ಅಂತಸ್ತನ್ನು, ನೆಮ್ಮದಿಯನ್ನು ಎಲ್ಲವನ್ನು ಸಾಯಿಸುತ್ತದೆ. All the Best and Thanks you...Blogger ನಿಂದ ಸಾಮರ್ಥ್ಯಹೊಂದಿದೆ.