ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge in Kannada - Motivational article in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge in Kannada - Motivational article in Kannada

ನೆಗೆಟಿವ್ ಆಲೋಚನೆಗಳಿಂದ ಹೊರ ಬರುವುದು ಹೇಗೆ? How to over come Negative Thoughts in Kannada

                 ನಿಮಗೆ ಗೊತ್ತಿರುವಂತೆ ನಾನು ಇನಸ್ಟಾಗ್ರಾಮ ಮುಖಾಂತರ ನಿಮ್ಮಿಂದ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ಪಡೆದುಕೊಂಡು ಸಾಧ್ಯವಾದಷ್ಟು ಅವುಗಳಿಗೆ ಸಾಂತ್ವನ ಹೇಳುವ, ಸಲಹೆ ಕೊಡುವ ಕೆಲಸವನ್ನು ಮಾಡುತ್ತಿರುವೆ. ನಿನ್ನೆ ನನಗೊಬ್ಬ ಹುಡುಗ "ಸರ್ ನಾನೊಂದು ಪ್ರಮುಖವಾದ ಕೆಲಸ ಮಾಡುತ್ತಿದ್ದೆ. ನನ್ನ ಗೆಳೆಯರು ನನಗೆ ಮೋಸ ಮಾಡಿದ್ದರಿಂದ ನನ್ನ ಆ ಕೆಲಸ ಹಾಳಾಗೋಯ್ತು. ನಾನು ಅವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಲಿ...?" ಎಂದೆಲ್ಲ ಬರೆದಿದ್ದ. ಅವನ ಕಥೆ ಇನ್ನು ದೊಡ್ಡದಾಗಿತ್ತು. ನಾನದನ್ನ ಶಾರ್ಟ ಮಾಡಿರುವೆ. ಅವನ ಪ್ರಶ್ನೆಗೆ ಉತ್ತರವೇ ಈ "ಸಾಧನೆಗಿಂತ ಸೂಕ್ತವಾದ ಸೇಡಿಲ್ಲ..." ಎಂಬ ಅಂಕಣ.

ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge - Motivational article in Kannaada

                  ನೋಡು ಗೆಳೆಯ, ನಮ್ಮ ಜೊತೆಗಿರೋ ಎಲ್ಲ ಗೆಳೆಯರು ಒಳ್ಳೆಯವರಲ್ಲ. ಗೆಳೆಯರೆಲ್ಲ ಒಳ್ಳೆಯವರಲ್ಲ. ನಿನ್ನ ಗೆಳೆಯರು ನಿನಗೆ ಮೋಸ ಮಾಡಿದರಂತ ನೀನು ಅವರ ಮೇಲೆ ಸೇಡು ತೀರಿಸಿಕೊಳ್ತೀನಿ ಅಂತ ಅವರಂತೆ ಕೀಳು ಮಟ್ಟಕ್ಕೆ ಇಳಿಯಬೇಡ. ಗೆಳೆಯ ಯಾರೊಂದಿಗೂ ಕೈಯಿಂದಾಗಲಿ, ಬಾಯಿಂದಾಗಲಿ ಹೊಡೆದಾಡಬೇಡ. ಅದು ಜಾಣರ ಲಕ್ಷಣವಲ್ಲ. ನಿನಗೆ ಮೋಸವಾದಾಗ ಖಂಡಿತ ನಿನಗೆ ನೋವಾಗಿರುತ್ತೆ. ಅದು ನಂಗೊತ್ತು, ನಾನದನ್ನ ಅರ್ಥ ಮಾಡಿಕೊಳ್ತೀನಿ. ಸೇಡು ತೀರಿಸಿಕೋಳ್ತೀನಿ ಅಂತಾ ಹಾರಾಡಿ ಕೂಗಾಡಿ ನಮ್ಮ ಕಾಲ್ಮೇಲೆ ನಾವೇ ಕಲ್ಲಾಕಿಕೊಳ್ಳುವುದು ಸರಿಯಲ್ಲ. ಸೇಡಿಗಾಗಿ ಹೊರಟವರು ಒಂದಲ್ಲ ಒಂದಿನ ಸುಡುಗಾಡು ಸೇರ್ತಾರೆ. ಅಂಥವರಲ್ಲಿ ನೀನು ಕೂಡ ಒಬ್ಬನಾಗಬೇಡ.
ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge - Motivational article in Kannaada

            ನೀನು ನಿಜವಾಗಿಯೂ ನಿನಗೆ ಮೋಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ನೀನು ಅವರಿಗಿಂತ ಜಾಸ್ತಿ ಸಕ್ಸೆಸಫುಲ್ ವ್ಯಕ್ತಿಯಾಗಿ ಸಾಕು. ಹಣ, ಅಂತಸ್ತು, ಕಾರು, ಬೈಕು, ಒಳ್ಳೆಯ ಹೆಸರು ಹೀಗೆ ಎಲ್ಲದರಲ್ಲಿಯೂ ಅವರಿಗಿಂತ ಒಂದು ಕೈ ಮೇಲಾಗು ಸಾಕು. ನೋಡು ಗೆಳೆಯ, ಸಾಧನೆಗಿಂತ ಸೂಕ್ತವಾದ ಸೇಡಿಲ್ಲ. ನಮ್ಮ ಜೊತೆಯಲ್ಲಿರೋ ಕೆಲವರಿಗೆ ಅಂದರೆ ನಮ್ಮ ಹಿತ ಶತ್ರುಗಳಿಗೆ ನಮ್ಮ ಸಕ್ಸೆಸ್ ಇಷ್ಟವಿರಲ್ಲ. ಅದಕ್ಕವರು ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡ್ತಾರೆ, ನಂಬಿಸಿ ಕತ್ತು ಕೊಯ್ತಾರೆ. ಅವರು ನಾವು ಅವರಿಗಿಂತ ಒಂದು ಹೆಜ್ಜೆ ಹಿಂದೇನೇ ಇರಬೇಕು ಎಂದವರು ಆಸೆ ಪಡ್ತಾರೆ. ನಾವು ಅವರಿಗಿಂತ ಒಂದು ಪಟ್ಟು ಕೆಳಗೇನೆ ಬಿದ್ದಿರಬೇಕು ಅಂತವರು ಬಯಸುತ್ತಾರೆ. ನಿನ್ನನ್ನು ಕೆಳಮಟ್ಟದಲ್ಲಿ ನೋಡೋಕೆ ಅವರು ಇಷ್ಟಪಡ್ತಾರೆ. They indirectly hate your growth and success. ಅದಕ್ಕೆ ನೀನು ಅವರಿಗಿಂತ ಸ್ವಲ್ಪ ಸಕ್ಸೆಸಫುಲ್ಲಾದರೂ ಸಾಕು ಅವರು ಹೊಟ್ಟೆ ಉರಿದುಕೊಂಡು ಸರ್ವನಾಶವಾಗುತ್ತಾರೆ. ನಿನಗೆ ಇದಕ್ಕಿಂತಲೂ ದೊಡ್ಡ ರಿವೆಂಜ್ ಬೇಕಾ?
ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge - Motivational article in Kannaada

          ಗೆಳೆಯ, ಈಗಿನಿಂದಲೇ ನಿನ್ನ ಶಕ್ತಿ ಮೀರಿ ಕೆಲಸ ಮಾಡು. ಒಂದ್ಸಲ ಕೆಲಸ ಹಾಳಾಗೋದ್ರೆ ಏನಂತೆ? ಮತ್ತೆ ಅದನ್ನು ಪೂರ್ತಿ ಮಾಡು. ಆರ್ಡಿನರಿ ಮನೆ ಕಟ್ಟೋಕೆ ಒಂದು ತಿಂಗಳು ಸಾಕು. ಆದರೆ ಅರಮನೆ ಕಟ್ಟೋಕೆ ಸ್ವಲ್ಪ ಜಾಸ್ತಿ ಟೈಮ್ ಬೇಕು. ನೀನು ಕೆಲ್ಸ ಮಾಡಲು ಸ್ಟಾರ್ಟ ಮಾಡು, ನಿನ್ನ ಟೈಮ್ ಬೇಗನೆ ಬಂದೇ ಬರುತ್ತೆ. All the Best...

ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge - Motivational article in Kannaada

ನಿಮಗೂ ನನಗೆ ಏನಾದರೂ ಪ್ರಶ್ನೆಗಳನ್ನು ಕೇಳಬೇಕು ಅಂತಾ ಅನ್ನಿಸಿದ್ರೆ ಇನಸ್ಟಾಗ್ರಾಮಲ್ಲಿ ನನ್ನನ್ನು ಫಾಲೋ ಮಾಡಿ ಮತ್ತು ನಿಮ್ಮ ಪ್ರಶ್ನೆಗಳನ್ನು ಡೈರೆಕ್ಟ್ ಮೆಸೇಜ್ ಮಾಡಿ. (Search as Director Satishkumar). Thanks You...


ಸಾಧನೆಗಿಂತ ಸೂಕ್ತವಾದ ಸೇಡಿಲ್ಲ : Success is the Best Revenge - Motivational article in Kannaada

Blogger ನಿಂದ ಸಾಮರ್ಥ್ಯಹೊಂದಿದೆ.