ಈ ಜಗತ್ತು ತುಂಬಾ ಸ್ವಾರ್ಥಿಯಾಗಿದೆ. ಇಲ್ಲಿ ಯಾರು ನಮ್ಮ ಆಸೆಗಳನ್ನು ಈಡೇರಿಸೋಕೆ ಕುಂತಿಲ್ಲ. ನಮ್ಮ ಆಸೆಗಳನ್ನು ನಾವೇ ಈಡೇರಿಸಿಕೊಳ್ಳಬೇಕು. ಅದಕ್ಕಾಗಿ ನಮಗೆ ಸಿಕಾಪಟ್ಟೆ ದುಡ್ಡು ಬೇಕೆ ಬೇಕು. ಅಲ್ಲದೆ ನಮ್ಮನ್ನು ಯಾರು ತುಳಿಬಾರದು ಅಂದರೆ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಟರಾಗಬೇಕು. ಅರ್ಥಾತ್ ನಾವು ಶ್ರೀಮಂತರಾಗಬೇಕು. ಈ ನಮ್ಮ ದೇಶದಲ್ಲಿ ಒಳ್ಳೆಯ ಶಿಕ್ಷಣ, ಒಳ್ಳೆಯ ವೈದ್ಯಕೀಯ ಸೌಲಭ್ಯ, ಒಳ್ಳೆಯ ಗೌರವ, ಮೊದಲ ಪ್ರಾಮುಖ್ಯತೆ, ಕಾನೂನಿನ ಶ್ರೀರಕ್ಷೆ, ನ್ಯಾಯ ಇತ್ಯಾದಿಗಳೆಲ್ಲ ಶ್ರೀಮಂತರಿಗೇನೆ ಸಿಗೋದು. ನಮಗೂ ಎಲ್ಲ ಹಾಯ್ ಕ್ಲಾಸ್ ಸ್ಪೆಸಿಲಿಟಿಗಳು ಸಿಗಬೇಕೆಂದರೆ ಒಂದು ನಮ್ಮ ದೇಶದ ರಾಜಕಾರಣಿಗಳನ್ನು ಬುಡ ಸಮೇತ ಬೆಂಕಿ ಹಚ್ಚಿ ಕಿತ್ತೊಗೆಯಬೇಕು. ಇಲ್ಲ ನಾವೇ ನಮ್ಮ ಸ್ವಂತ ಬಲದ ಮೇಲೆ ನಿಯತ್ತಾಗಿ ದುಡಿದು ಮುಂದೆ ಬರಬೇಕು. ಸೋ, ಶ್ರೀಮಂತರಾಗಲು ಕೆಲವು ಸಿಂಪಲ್ ಸೂತ್ರಗಳು ಇಲ್ಲಿವೆ ;
೧) ಸಾಧ್ಯವಾದಷ್ಟು ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಮಾಸ್ಟರ್ ಆಗಿ. ದಿನಾಲು ನಿಮ್ಮ ಕೆಲಸಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ವಿಷಯಗಳನ್ನು ಕಲಿಯಿರಿ. ನೀವು ಹೆಚ್ಚಿಗೆ ಕಲಿತಷ್ಟು ಹೆಚ್ಚಿಗೆ ಸಂಪಾದಿಸುತ್ತೀರಿ. ನಮ್ಮ ಬದುಕು ವಿದ್ಯೆಕ್ಕಿಂತ ಹೆಚ್ಚಾಗಿ ಬುದ್ಧಿಯ ಮೇಲೆ ಮೇಲೆ ನಿಂತಿದೆ. ನಮ್ಮ ಸಂಪಾದನೆ ನಮ್ಮಲ್ಲಿರುವ ಕೌಶಲ್ಯಗಳ ಮೇಲೆ ನಿರ್ಧಾರಿತವಾಗುತ್ತದೆ. ವಿದ್ಯೆಯಿಲ್ಲದಿದ್ದರೂ ಪರವಾಗಿಲ್ಲ, ಬುದ್ಧಿಯಿರಬೇಕು. ದಿನಾಲು ನೀವು ಏನಾದರೂ ಒಂದನ್ನು ಹೊಸದಾಗಿ ಕಲಿಯಬೇಕು. ಈ ಕೆಳಗಿನ ಎರಡು ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.
No Skills ----> No More Money.
No Learning ----> No Earnings
2) ಪ್ರಬಲವಾದ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಿ. ನೀವು ಆಸೆ ಪಡದೇ ನಿಮಗೆ ಅಂತಸ್ತು ಸಿಗಲ್ಲ. ಇವತ್ತು ನೀವು ಶ್ರೀಮಂತರಾಗಲು ದೃಢ ಸಂಕಲ್ಪ ಮಾಡಿ ಇಷ್ಟಪಟ್ಟು ಕೆಲಸ ಮಾಡಿದರೆ ನಾಳೆ ಒಂದಲ್ಲ ಒಂದಿನ ನೀವು ಖಂಡಿತವಾಗಿಯೂ ಶ್ರೀಮಂತರಾಗುತ್ತೀರಿ. ಆದ್ದರಿಂದ ಇವತ್ತೇ ನಿಮ್ಮ ಗುರಿಗಳನ್ನು ಸ್ಪಷ್ಟಪಡಿಸಿಕೊಳ್ಳಿ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಿ. ನಿಮ್ಮ ಮೈಯಲ್ಲಿರುವ ಆಲಸ್ಯವನ್ನು ಮೊದಲು ಸಾಯಿಸಿ. ಪವರಫುಲ್ ಮೋಟಿವೇಷನಲ್ ಸೆಮಿನಾರ ಹಾಗೂ ವಿಡಿಯೋಗಳಿಂದ ನಿಮ್ಮ ಮಾನಸಿಕ ಆಲಸ್ಯವನ್ನು ಸಾಯಿಸಿ. ಅದಕ್ಕಾಗಿ ನೀವು ಯ್ಯುಟೂಬನಲ್ಲಿ ನನ್ನ ವಿಡಿಯೋಗಳನ್ನು ನೋಡಬಹುದು. ದಿನಾಲು ತಪ್ಪದೆ ಎಕ್ಸರಸೈಜ್ ಮಾಡಿ ನಿಮ್ಮಲ್ಲಿರುವ ದೈಹಿಕ ಆಲಸ್ಯವನ್ನು ಸಾಯಿಸಿ. ಆಲ್ ಟೈಮ್ ಆ್ಯಕ್ಟೀವ್ ಆಗಿದ್ದುಕೊಂಡು ಕೆಲಸ ಮಾಡಿ.
೩) ಉಳಿಸುವುದಕ್ಕಿಂತ ಹೆಚ್ಚಾಗಿ ಗಳಿಸುವುದರ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ. ಹಣವನ್ನು ಉಳಿಸುವುದರಿಂದ ನೀವು ಶ್ರೀಮಂತರಾಗಲ್ಲ. ಹೆಚ್ಚೆಚ್ಚು ಹಣವನ್ನು ಗಳಿಸುವುದರಿಂದ ನೀವು ಶ್ರೀಮಂತರಾಗುತ್ತೀರಿ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ. ಹೆಚ್ಚಿಗೆ ಹಣ ಸಂಪಾದಿಸಲು ಪ್ರಯತ್ನ ಪಡಿ.
೪) ನಿಮ್ಮ ಬಳಿ ಟ್ಯಾಲೆಂಟ್ ಇದ್ದರೆ ಬೇರೆಯವರ ಬಳಿ ಕೆಲಸ ಮಾಡುವುದನ್ನು ನಿಲ್ಲಿಸಿ. ನಿಮ್ಮದೇ ಆದ ಒಂದು ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಶ್ರೀಮಂತರಾಗಿ. ನೀವು ಮಾಲೀಕರಾದಾಗಲೇ ಬೇಗನೆ ಮೇಲೇರಲು ಸಾಧ್ಯ. ನೀವು ಕಾರ್ಮಿಕನಾಗಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ನೀವು ಕಾರ್ಮಿಕರೇ. ಅದಕ್ಕಾಗಿ ಸಾಧ್ಯವಾದರೆ ಮಾಲೀಕರಾಗಿ.
೫) ಅನಾವಶ್ಯಕವಾಗಿ ನೀವು ಗಳಿಸಿದ ಹಣವನ್ನು ಪೋಲು ಮಾಡಬೇಡಿ. ಪಕ್ಕದ ಮನೆಯವರ ಹೊಟ್ಟೆ ಉರಿಸಲು ಹೋಗಿ ಸಾಲ ಮಾಡಿಕೊಂಡು ಬೀದಿಗೆ ಬರಬೇಡಿ. ಅವಶ್ಯಕತೆ ಇರುವಾಗ ಮಾತ್ರ ಹಣವನ್ನು ಖರ್ಚು ಮಾಡಿ. ಅನಾವಶ್ಯಕ ಒಣ ಶೋಕಿಗಾಗಿ ದುಡ್ಡನ್ನು ಖರ್ಚು ಮಾಡಬೇಡಿ. ಅದರ ಬದಲಾಗಿ ಆ ದುಡ್ಡನ್ನು ದುಡಿಸಿ ಮತ್ತಷ್ಟು ದುಡ್ಡು ಮಾಡಿ.
೬) ದುಡ್ಡನ್ನು ದುಡಿಸುವ ಕಲೆಯನ್ನು ಕಲಿತುಕೊಳ್ಳಿ. ನಿಮ್ಮ ಹಣವನ್ನು ಬ್ಯಾಂಕಲ್ಲಿಟ್ಟು ಕೊಳೆಯಿಸುವುದರ ಬದಲು, ಆ ದುಡ್ಡನ್ನು ಸರಿಯಾದ ಕಡೆಗಳಲ್ಲಿ ಇನವೇಸ್ಟ ಮಾಡಿ. ನಿಮ್ಮ ದುಡ್ಡನ್ನು ದುಡಿಸಿ. ದುಡ್ಡಿಗಾಗಿ ಒಂದೇ ಮೂಲದ ಮೇಲೆ ಅವಲಂಬಿತರಾಗಬೇಡಿ. ಮಲ್ಟಿಪಲ್ ಮೂಲಗಳಿಂದ ನಿಮಗೆ ಹಣ ಬರುವಂತೆ ನೋಡಿಕೊಳ್ಳಿ. ಉದಾಹರಣೆಗಾಗಿ ನಿಮ್ಮ ಖಾಲಿ ಪ್ಲಾಟಗಳಲ್ಲಿ ಮನೆಗಳನ್ನು, ವ್ಯಾಪಾರ ಮಳಿಗೆಗಳನ್ನು ಕಟ್ಟಿಸಿ ಅವುಗಳನ್ನು ಬಾಡಿಗೆ ಕೊಡಿ. ವಾಹನಗಳನ್ನು ಖರೀದಿಸಿ ಬಾಡಿಗೆಗೆ ಬಿಡಿ. ನಿಮ್ಮ ಹಣವನ್ನು ಲಾಭದಾಯಕ ಉದ್ದಿಮೆಗಳಲ್ಲಿ ಹೂಡಿಕೆ ಮಾಡಿ. ಶೇರ್ ಮಾರ್ಕೆಟ್, ಮ್ಯೂಚುಯಲ್ ಫಂಡ್ಸ್ ಇತ್ಯಾದಿಗಳಲ್ಲಿ ತಲೆ ಉಪಯೋಗಿಸಿ ಹಣ ಹೂಡಿಕೆ ಮಾಡಿ ಇತ್ಯಾದಿ...
ಈ ಸಲಹೆಗಳನ್ನು ನಾನು ಹಾಗೆ ಸುಮ್ಮನೆ ಗಾಳಿಯಲ್ಲಿ ಹೇಳುತ್ತಿಲ್ಲ. ಲಕ್ಷಗಳಲ್ಲಿ ಪ್ರಾರಂಭವಾದ ನನ್ನ ಬ್ಯುಸಿನೆಸ್ ಕೋಟಿಯ ಗಡಿಯನ್ನು ದಾಟುವಷ್ಟರಲ್ಲಿ ನನಗಾದ ಅನುಭವಗಳ ಆಧಾರದ ಮೇಲೆ ನಾನೀ ಅಂಕಣವನ್ನು ಬರೆದಿರುವೆ. ನನ್ನ ಪ್ರಯೋಜನಕ್ಕೆ ಬಂದ ಟ್ರಿಕ್ಸಗಳು ನಿಮ್ಮ ಪ್ರಯೋಜನಕ್ಕೆ ಬರದೇ ಇರಬಹುದು. ಅದಕ್ಕಾಗಿ ಶಾಂತಚಿತ್ತದಿಂದ ನಿಮ್ಮ ತಲೆ ಉಪಯೋಗಿಸಿ ಯೋಚಿಸಿ ಆನಂತರ ನಿರ್ಧಾರಗಳನ್ನು ತೆಗೆದುಕೊಳ್ಳಿ. ನೀವು ಸಿಕ್ಕಾಪಟ್ಟೆ ಶ್ರೀಮಂತರಾದಾಗ ನನಗೊಂದು ಈಮೇಲ್ ಮಾಡಿ. All the Best and Thanks you...