ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada

ಮಾಡುವ ಮನಸ್ಸಿದ್ದವನು 'I am possible' ಅಂತಾನೆ. ಕೈಲಾಗದ ಹೇಡಿ ಮಾತ್ರ 'Impossible' ಅಂತಾನೆ. ನೀನು ಪ್ರೀತಿಸಿದವರು ನಿನಗೆ ಸಿಗಲಿಲ್ಲ ಅಂತಾ ನಿನ್ನನ್ನು ನೀನು ದ್ವೇಷಿಸಬೇಡ. ಮೊದಲು ನಿನ್ನನ್ನು ನೀನು ಪ್ರೀತಿಸು.

ಕಷ್ಟ-ನಷ್ಟಗಳಿಗೆ ಕಲ್ಲಾಗು
ಚುಚ್ಚು ಮಾತುಗಳಿಗೆ ಮುಳ್ಳಾಗು
ಏನಾದರೂ ಮುಖದ ಮೇಲಿರಲಿ ಒಂದು ನಗು
ಏನಾದರೂ ನೀ ಹೆದರದೆ ಮುಂದೆ ಸಾಗು

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada

ನಿನ್ನ ಬೆನ್ನ ಹಿಂದೆ ಮಾತಾಡುವವರ ಬಗ್ಗೆ ನೀ ತಲೆ ಕೆಡಿಸಿಕೊಳ್ಳಬೇಡ. ಏಕೆಂದರೆ ನಿನ್ನ ಮುಂದೆ ಮಾತಾಡುವ ಧೈರ್ಯವಿಲ್ಲದವರ ಬಗ್ಗೆ ತಲೆ ಚಿಂತಿಸುವಷ್ಟು ದುರ್ಬಲನೇ ನೀನು? ತಮ್ಮ ನಿಜವಾದ ಹೆಸರಿಟ್ಟುಕೊಳ್ಳುವ ಧೈರ್ಯವಿಲ್ಲದ ಟ್ರೋಲರ್ಸಗಳಿಗೆ, ರೋಸ್ಟರಗಳಿಗೆ ಹೆದರುವಷ್ಟು ಹೇಡಿಯೇ ನೀನು?

ಟೈಮ ವೇಸ್ಟ ಮಾಡದೆ ನಿನ್ನಲ್ಲಿರುವ ಟ್ಯಾಲೆಂಟನ್ನು ನೀನು ಎಲ್ಲೆಡೆಗೆ ಪ್ರಸೆಂಟ್ ಮಾಡು. ನಿನ್ನಲ್ಲಿರುವ ಕಲೆಯನ್ನು ನೀನೇ ಕೊಲೆ ಮಾಡದಿರು. ನಿನ್ನಲ್ಲಿರುವ ಹೀರೊನನ್ನು ಬಡಿದೆಬ್ಬಿಸು. ಗೆಳೆಯ ನಿನ್ನಲ್ಲಿರುವ ಹೀರೊನನ್ನು ಬಡಿದೆಬ್ಬಿಸು.

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada

ಕಾಲೆಳೆದು ಕೀಟಲೆ ಮಾಡುವವರಿಗೆ ಹೆದರಿ ಹಿಂದೆ ಸರಿಯದಿರು. ಕಂಡಕಂಡಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವ ಜನರಿಗೂ, ಕಂಡಕಂಡಲ್ಲಿ ಕಾಲೆತ್ತುವ ನಾಯಿಗೂ ಯಾವುದೇ ವ್ಯತ್ಯಾಸವಿಲ್ಲ. ನೀನು ನಿನ್ನ ಕೆಲಸ ಮಾಡು, ಬೊಗಳುವ ನಾಯಿಗಳು ಬೊಗಳುತ್ತಿರಲಿ. ನೀನು ಮುಂದೆ ಸಾಗು. ನಿನಗೆ ಯಶಸ್ಸು ಸಿಕ್ಕೆ ಸಿಗುತ್ತದೆ.

ಭೂಮಿಗಿರುವ ತಾಳ್ಮೆ,
ಸೂರ್ಯನಿಗಿರುವ ಟೈಮ್ ಸೆನ್ಸ್,
ಚಂದ್ರನಲ್ಲಿರುವ ನಗು ಸದಾ ನಿನ್ನೊಂದಿಗಿರಲಿ...

ಇವತ್ತಿಗೆ ಇಷ್ಟು ಸಾಕು. ನಾಳೆ ಮುಂಜಾನೆ ಶಾರ್ಪಾಗಿ 5 ಗಂಟೆಗೆ ಮತ್ತೆ ಸಿಗೋಣಾ. ಪ್ರತಿದಿನ ಮುಂಜಾನೆ ಇದೇ ರೀತಿ ಪವರಫುಲ್ ಮೊಟಿವೆಷನಲ್ ಅಂಕಣಗಳು, ವಿಡಿಯೊಗಳು ತಪ್ಪದೆ ಬರುತ್ತವೆ. ಮತ್ತೆ ನಾಳೆಯ ಮಾರ್ನಿಂಗ್ ಮೊಟಿವೆಷನ ಅಂಕಣದಲ್ಲಿ ಅಥವಾ ವಿಡಿಯೋದಲ್ಲಿ ಸಿಗೋಣಾ. ಅಲ್ಲಿ ತನಕ Take care, work like a beast and then you will be the Best. Be Best. Thanks you...

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada
Blogger ನಿಂದ ಸಾಮರ್ಥ್ಯಹೊಂದಿದೆ.