ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada

ನಿಮ್ಮ ಹಣೆ ಬರಹವನ್ನು ಬರೆಯುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ. ಅದು ನಮ್ಮ ಮೇಲೆಯೇ ಇದೆ. ಬ್ರಹ್ಮ ಬರೆದಿರೋ ಹಣೆ ಬರಹವನ್ನು ಅಮ್ಮ ಬರೆದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಕೊರಗುವ ಬದಲು ನಿಮ್ಮ ಹಣೆ ಬರಹವನ್ನು ನೀವೇ ಬರೆಯಿರಿ. ಹೌದು ನಿಮ್ಮ ಹಣೆ ಬರಹವನ್ನು ನೀವೇ ಬರೆಯಿರಿ. ಕೇಳಲು ಈ ಮಾತು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಇದು ಸತ್ಯ. ನಿಮ್ಮ ಹಣೆ ಬರಹವನ್ನು ನಿಮ್ಮಿಂದ ಬರೆಯಲು ಸಾಧ್ಯವಿದೆ. ಏಕೆಂದರೆ ನೀವು ಏನೆಂದುಕೊಳ್ಳುತ್ತಿರೋ ಅದೇ ಆಗುತ್ತೀರಿ.

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada

ಸ್ವಾಮಿ ವಿವೇಕಾನಂದರು ಹೇಳುವಂತೆ ನೀವು ನಿಮ್ಮನ್ನು ಋಷಿಗಳೆಂದುಕೊಂಡರೆ ನಾಳೆ ನೀವು ಋಷಿಗಳೇ ಆಗುತ್ತೀರಿ. ಅದರಲ್ಲೇನು ಸಂದೇಹವಿಲ್ಲ. ನೀವು ಕನಸ್ಸಲ್ಲಿ ಕಂಡಿರುವ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಬೆಕ್ಕು ಕನ್ನಡಿ ಮುಂದೆ ನಿಂತಾಗ ತನ್ನನ್ನು ತಾನು ಹುಲಿಯೆಂದುಕೊಳ್ಳುತ್ತದೆ. ಅದು ಅದರ ಮೂರ್ಖತನವಲ್ಲ, ಆತ್ಮವಿಶ್ವಾಸ.

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada

ಮೊದಲು ನೀವೇನಾಗಬೇಕು ಎಂಬುದನ್ನು ನೀವೇ ನಿರ್ಧರಿಸಿ. ನಿಮ್ಮ ಆಸೆಗಳ ಮೇಲೆ ನಿಮ್ಮ ಆಕಾಂಕ್ಷೆಗಳು ನಿರ್ಧಾರಿತವಾಗುತ್ತವೆ. ನಿಮ್ಮ ಯೋಚನೆಗಳ ಮೇಲೆ ನಿಮ್ಮ ಯೋಜನೆಗಳು ನಿರ್ಧಾರವಾಗುತ್ತವೆ. ನೀವು ಬಯಸಿದ್ದೆಲ್ಲವು ನಿಮಗೆ ಸಿಕ್ಕೇ ಸಿಗುತ್ತದೆ. ಆದರೆ ಬಯಸುವ ಗಟ್ಟಿ ಗುಂಡಿಗೆ ನಿಮ್ಮಲ್ಲಿಲ್ಲ. ತೋಳಲ್ಲಿ ತಾಕತ್ತಿದ್ದರೂ ದುಡಿದು ಸಂಪಾದಿಸುವೆ ಎಂಬ ಎದೆ ಕಿಚ್ಚಿಲ್ಲ. ಸಾಧಿಸುತ್ತೇನೆ ಎಂಬ ಹುಚ್ಚಿಲ್ಲ. ಅದಕ್ಕಾಗಿಯೇ ನೀವು ಸೋಮಾರಿ ಸಿದ್ಧರಾಗುತ್ತೀರಿ. ಏನನ್ನು ಸಾಧಿಸದೇ ಸಾಮಾನ್ಯವಾಗಿ ಬದುಕಿ ಹೆಸರಿಲ್ಲದಂತೆ ಸಾಯುತ್ತೀರಿ ಅಷ್ಟೇ.

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada

ನಿಮ್ಮ ಗುರಿಗಳಿಗೆ ತಕ್ಕಂತೆ ನಿಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಬೇರೆಯವರನ್ನು ದೂರುವ ಬದಲು ನಿಮ್ಮ ತಪ್ಪುಗಳನ್ನು ಬೇಗನೆ ಸರಿಪಡಿಸಿಕೊಂಡು ಬದಲಾಗಿ ಮತ್ತು ಮುಂದೆ ಸಾಗಿ. ನಿಮ್ಮನ್ನು ಬೇರೆ ಯಾರೊಂದಿಗೂ ಕಂಪೇರ್ ಮಾಡಿಕೊಳ್ಳಬೇಡಿ. ನಿಮ್ಮನ್ನು ನಿಮ್ಮೊಂದಿಗೆ ಮಾತ್ರ ಕಂಪೇರ್ ಮಾಡಿಕೊಳ್ಳಿ. ನಿನ್ನೆಗಿಂತ ಇವತ್ತು ನೀವು ಎಷ್ಟು ಡೆವಲೆಪ ಆಗಿರುವಿರಿ ಎಂಬುದನ್ನು ಅನಲೈಜ್ ಮಾಡಿ. ಬೇರೆಯವರೊಂದಿಗೆ ಸ್ಪರ್ಧಿಸಬೇಡಿ. ನಿಮ್ಮೊಂದಿಗೆ ನೀವೇ ಸ್ಪರ್ಧಿಸಿ. Be self comparative and self competitive.

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada

ಸತ್ತ ಮೇಲು ನೀವು ಬದುಕಿರಬೇಕೆಂದರೆ ನೀವು ಏನಾದರೂ ಒಂದನ್ನು ಸಾಧಿಸಲೇ ಬೇಕು. ಏನನ್ನು ಸಾಧಿಸದಿದ್ದರೆ ನೀವು ಇದ್ದು ಸತ್ತಂತೆ. ನಿಮಗೂ ಕಲ್ಲುಗಳಿಗೂ ಯಾವುದೇ ವ್ಯತ್ಯಾಸವಿರಲ್ಲ. ಆದ್ದರಿಂದ ಸಾಧಿಸದೇ ಸಾಯದಿರಿ. ನಿಮ್ಮ ಹಣೆ ಬರಹವನ್ನು ನೀವೇ ಬರೆಯಿರಿ. All the very best...

ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada
ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada ನಿಮ್ಮ ಹಣೆಬರಹವನ್ನು ನೀವೇ ಬರೆಯಿರಿ : Write your own Destiny - Motivational Article in Kannada Reviewed by Director Satishkumar on March 09, 2019 Rating: 4.5
Powered by Blogger.
close
skkkannada.com